BASH/C3/Basics-of-Redirection-(error-handling)/Kannada

From Script | Spoken-Tutorial
Jump to: navigation, search
Time Narration
00:01 ಬ್ಯಾಶ್ ನಲ್ಲಿ Basics of redirection ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು
00:10 ಬ್ಯಾಶ್ ನಲ್ಲಿ input ಮತ್ತು output
00:12 Redirection ಮತ್ತು file descriptors
00:15 standard input, standard output
00:18 standard error, ಗಳ ಕುರಿತು ಉದಾಹರಣೆ ಗಳೊಂದಿಗೆ ಕಲಿಯುತ್ತೇವೆ.
00:22 ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ಕಲಿತಿರಬೇಕು.
00:28 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. www.spoken-tutorial.org
00:34 ಈ ಟ್ಯುಟೋರಿಯಲ್ ಗಾಗಿ ನಾನು
00:36 'Ubuntu Linux 12.04 OS ಮತ್ತು
00:40 GNU BASH ಆವೃತ್ತಿ 4.2 ಗಳನ್ನು ಉಪಯೋಗಿಸುತ್ತೇನೆ.
00:43 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:50 GNU/Linux ನಲ್ಲಿ ನಾವು ಒಂದು ಫೈಲ್ ಗೆ outputಅನ್ನು ಕಳುಹಿಸಬಹುದು ಅಥವಾ ಒಂದು ಫೈಲ್ ನಿಂದ input ಅನ್ನು ಓದ ಬಹುದು.
00:58 ಪ್ರತಿಯೊಂದೂ ಶೆಲ್ ಕಮಾಂಡ್ ಕೂಡ ಅದರದೇ ಆದ ಇನ್ ಪುಟ್ ಔಟ್ ಪುಟ್ ಅನ್ನು ಹೊಂದಿರುತ್ತದೆ.
01:03 ಶೆಲ್ ಸ್ಕ್ರಿಪ್ಟ್ ನಲ್ಲಿ ಇನ್ ಪುಟ್ ಮತ್ತು ಔಟ್ ಪುಟ್ ಗಳು ವಿಶೇಷ ಸಂಕೇತಗಳನ್ನು ಉಪಯೋಗಿಸಿ ರಿಡೈರೆಕ್ಟ್ ಮಾಡಲ್ಪಡುತ್ತವೆ.
01:11 ಇನ್ ಪುಟ್ ಔಟ್ ಪುಟ್ ಗಳ ಡಿಫಾಲ್ಟ್ ಪಥವನ್ನು ಬದಲಿಸುವುದನ್ನು redirection ಎನ್ನುತ್ತಾರೆ.
01:18 GNU/Linux ನಲ್ಲಿ hardware ಅನ್ನು ಒಳಗೊಂಡು ಎಲ್ಲವೂ ಫೈಲ್ ಎಂದೇ ಪರಿಗಣಿಸಲ್ಪಡುತ್ತದೆ.
01:24 ಸಾಮಾನ್ಯ ರಿಟರ್ನ್ ಬೆಲೆಗಳು :
01:27 input ಗಾಗಿ '0' ಅಂದರೆ keyboard
01:31 output ಗಾಗಿ '1' ಅಂದರೆ screen
01:34 error ಗೆ '2' ಅಂದರೆ screen'
01:38 0, 1, 2 ಗಳು POSIX ಸಂಖ್ಯೆಗಳು ಅವನ್ನು file descriptor (FD) ಗಳು ಎಂದೂ ಕರೆಯುತ್ತಾರೆ.
01:46 ಒಂದು re-director POSIX ಸಂಖ್ಯೆಯನ್ನು ಬಳಕೆದಾರ ಅಥವಾ ಇನ್ನೊಂದು ಪ್ರೋಗ್ರಾಂ ನ ಜೊತೆಗೆ ಸಂಪರ್ಕಿಸಲು ಉಪಯೋಗಿಸುತ್ತದೆ.
01:54 Standard input: ಸ್ಟ್ಯಾಂಡರ್ಡ್ ಇನ್ ಪುಟ್ ಇದು ಡಿಫಾಲ್ಟ್ ಆದ ಇನ್ ಪುಟ್ ವಿಧಾನ.
02:00 ಇದು ಇನ್ ಪುಟ್ ಅನ್ನು ಓದಲು ಎಲ್ಲಾ ಕಮಾಂಡ್ ಗಳಿಂದ ಉಪಯೋಗಿಸಲ್ಪಡುತ್ತದೆ.
02:04 ಇದು ಸೊನ್ನೆ ಯಿಂದ ಸೂಚಿಸಲ್ಪಡುತ್ತದೆ.
02:07 ಇದನ್ನು stdin (Standard input) ಎಂದೂ ಕರೆಯುತ್ತಾರೆ.
02:13 ಕೀ ಬೋರ್ಡ್ ಇದು ಡಿಫಾಲ್ಟ್ standard input ಆಗಿದೆ.
02:17 Less than ಚಿಹ್ನೆಯು input redirection ಚಿಹ್ನೆಯಾಗಿದೆ.
02:22 ಸಿಂಟ್ಯಾಕ್ಸ್ - command ಸ್ಪೇಸ್ ಚಿಕ್ಕದು ಚಿಹ್ನೆ ಸ್ಪೇಸ್ filename.
02:30 ಈಗ ನಾನು redirection ಡಾಟ್ sh ಎಂಬ ಫೈಲ್ ಅನ್ನು ತೆರೆಯುತ್ತೇನೆ.
02:34 ನಾನು ಈ ಫೈಲ್ ನಲ್ಲಿ ಕೋಡ್ ಅನ್ನು ಟೈಪ್ ಮಾಡಿದ್ದೇನೆ.
02:37 ಇದು shebang line.
02:41 sort ಸ್ಪೇಸ್ ಚಿಕ್ಕದು ಚಿಹ್ನೆ ಸ್ಪೇಸ್ file ಡಾಟ್ txt ಎಂದು ಟೈಪ್ ಮಾಡಿ.
02:48 ಇದೊಂದು input redirection ಗೆ ಉದಾಹರಣೆ.
02:52 file ಡಾಟ್ txt ಫೈಲ್ ನಿಂದ ಇನ್ ಪುಟ್ ಅನ್ನು ಪಡೆದುಕೊಳ್ಳಲಾಗಿದೆ.
02:57 sort ಕಮಾಂಡ್ ಇದು file ಡಾಟ್ txt ಫೈಲ್ ನಲ್ಲಿರುವ ಸಂಖ್ಯೆಗಳನ್ನು ಕ್ರಮಾನುಸಾರವಾಗಿ ಜೋಡಿಸುತ್ತದೆ.
03:04 Save ಮೇಲೆ ಕ್ಲಿಕ್ ಮಾಡಿ.
03:06 redirection ಡಾಟ್sh ಫೈಲ್ ಅನ್ನು ರನ್ ಮಾಡೋಣ.
03:10 ಕೀ ಬೋರ್ಡ್ ನಲ್ಲಿ Ctrl, Alt ಮತ್ತು T ಕೀಲಿಗಳನ್ನು ಒಟ್ಟಿಗೆ ಒತ್ತಿ terminal ಅನ್ನು ತೆರೆಯಿರಿ.
03:18 ಅದಕ್ಕೂ ಮೊದಲು file ಡಾಟ್ txt ಫೈಲ್ ನಲ್ಲಿ ಏನಿದೆ ಎಂದು ನೋಡೋಣ.
03:23 cat ಸ್ಪೇಸ್ file ಡಾಟ್ txt ಎಂದು ಟೈಪ್ ಮಾಡಿ.
03:27 Enter ಅನ್ನು ಒತ್ತಿರಿ.
03:30 ಫೈಲ್ ನಲ್ಲಿ ಒಂದಷ್ಟು ಸಂಖ್ಯೆಗಳಿರುವುದನ್ನು ನೋಡಬಹುದು.
03:35 chmod ಸ್ಪೇಸ್ ಪ್ಲಸ್ x ಸ್ಪೇಸ್ redirection ಡಾಟ್ sh ಎಂದು ಟೈಪ್ ಮಾಡಿ.
03:43 Enter ಅನ್ನು ಒತ್ತಿರಿ.
03:45 ಡಾಟ್ ಸ್ಲ್ಯಾಶ್ redirection ಡಾಟ್ sh ಎಂದು ಟೈಪ್ ಮಾಡಿ.
03:48 Enter ಅನ್ನು ಒತ್ತಿರಿ.
03:51 ನಾವು ಟರ್ಮಿನಲ್ ನಲ್ಲಿ ಅನುಕ್ರಮವಾಗಿ ಜೋಡಿಸಿದ ನಂತರದ ಫಲಿತಾಂಶವನ್ನು ನೋಡಬಹುದು.
03:56 ಸಂಖ್ಯೆಗಳನ್ನು ಏರಿಕೆ ಕ್ರಮದಲ್ಲಿ ಜೋಡಿಸಲಾಗಿದೆ.
04:00 slides ಗೆ ಹಿಂದಿರುಗಿ.
04:03 Standard output: ಎಲ್ಲಾ ಕಮಾಂಡ್ ಗಳೂ ಔಟ್ ಪುಟ್ ಅನ್ನು ಡಿಸ್ಪ್ಲೇ ಮಾಡಲು ಸ್ಟ್ಯಾಂಡರ್ಡ್ ಔಟ್ ಪುಟ್ ಅನ್ನು ಬಳಸುತ್ತವೆ.
04:10 default output ಪರದೆಯ ಮೇಲೆ ಡಿಸ್ಪ್ಲೇ ಆಗುತ್ತದೆ.
04:14 ಇದು ಸಂಖ್ಯೆ ಒಂದರಿಂದ (1) ಸೂಚಿಸಲ್ಪಡುತ್ತದೆ.
04:17 ಇದನ್ನು stdout (Standard output) ಎಂದೂ ಕರೆಯುತ್ತಾರೆ.
04:23 ( > )ದೊಡ್ಡದು ಚಿಹ್ನೆಯುoutput redirection ಚಿಹ್ನೆಯಾಗಿದೆ.
04:28 ಸಿಂಟ್ಯಾಕ್ಸ್ command ಸ್ಪೇಸ್ ದೊಡ್ಡದು ಚಿಹ್ನೆ ಸ್ಪೇಸ್ filename.
04:35 ನಾವು ಈಗ redirection ಡಾಟ್ sh ಫೈಲ್ ಗೆ ಹಿಂದಿರುಗೋಣ.
04:41 ಹಿಂದಿನ ಸಾಲು sort ಅನ್ನು Comment ಮಾಡಿ.
04:45 ಅದರ ಕೆಳಗೆ ls ಸ್ಪೇಸ್ ದೊಡ್ಡದು ಚಿಹ್ನೆ ಸ್ಪೇಸ್ ls ಅಂಡರ್ ಸ್ಕೋರ್ file.txt ಎಂದು ಟೈಪ್ ಮಾಡಿ.
04:55 ಇದೊಂದು output redirection ನ ಉದಾಹರಣೆ.
04:59 'ls' ಕಮಾಂಡ್ ನ ಫಲಿತವು ls_file ಡಾಟ್ txt ಫೈಲ್ ನಲ್ಲಿ ಸ್ಟೋರ್ ಆಗಿರುತ್ತದೆ.
05:06 'ls' ಕಮಾಂಡ್ ಇದು ಆ ಡೈರಕ್ಟರಿಯಲ್ಲಿರುವ ಫೈಲ್ ಗಳ ಕುರಿತು ಮಾಹಿತಿಯನ್ನು ಪಟ್ಟಿ ಮಾಡುತ್ತದೆ.
05:14 ಫೈಲ್ ಅನ್ನು save ಮಾಡಿ terminal ಗೆ ಹಿಂದಿರುಗಿ.
05:19 prompt ಅನ್ನು ಖಾಲಿ ಮಾಡೋಣ. ಮೊದಲು 'ls' ಎಂದು ಟೈಪ್ ಮಾಡಿ ಫಲಿತವನ್ನು ನೋಡೋಣ.
05:28 ಮೂರು ಸಲ up-arrow ಕೀಲಿಯನ್ನು ಒತ್ತಿ.
05:33 ಡಾಟ್ ಸ್ಲ್ಯಾಶ್ redirection ಡಾಟ್ sh ಕಮಾಂಡ್ ಅನ್ನು ಪುನರಾವರ್ತಿಸಿ.
05:38 ಮತ್ತು Enter ಅನ್ನು ಒತ್ತಿರಿ.
05:41 ಈಗ ಫಲಿತವು ಸರಿಯಾಗಿ ರಿಡೈರೆಕ್ಟ್ ಆಗಿದೆಯೇ ಎಂದು ಪರೀಕ್ಷಿಸೋಣ.
05:46 gedit ಸ್ಪೇಸ್ ls ಅಂಡರ್ ಸ್ಕೋರ್ file ಡಾಟ್ txt ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿರಿ.
05:56 ಈ ಫೈಲ್ ನಲ್ಲಿ ಫಲಿತವನ್ನು ನೋಡಬಹುದು. ಹಾಗಾಗಿ redirect ಯಶಸ್ವಿಯಾಗಿದೆ.
06:03 ಸ್ಲೈಡ್ಸ್ ಗೆ ಹಿಂದಿರುಗೋಣ.
06:06 Standard error: ಸ್ಟ್ಯಾಂಡರ್ಡ್ ಎರರ್ ಇದು ಡಿಫಾಲ್ಟ್ output error.
06:12 ಇದು ಎಲ್ಲಾ ಸಿಸ್ಟಮ್ ನ ದೋಷವನ್ನು ಬರೆಯಲು ಬಳಸಲ್ಪಡುತ್ತದೆ.
06:16 ಸಂಖ್ಯೆ ಎರಡರಿಂದ(2) ಇದು ಸೂಚಿಸಲ್ಪಡುತ್ತದೆ.
06:20 ಇದನ್ನು stderr (Standard error) ಎಂದೂ ಕರೆಯುತ್ತಾರೆ.
06:25 ಡಿಫಾಲ್ಟ್ standard error ಅನ್ನು ಪರದೆಯ ಮೇಲೆ ಕಾಣಬಹುದು.
06:32 ಎರಡು ಮತ್ತು ದೊಡ್ಡದು ಚಿಹ್ನೆ(2>) ಇದು error redirection ನ ಚಿಹ್ನೆಯಾಗಿದೆ.
06:36 ಸಿಂಟ್ಯಾಕ್ಸ್ command ಸ್ಪೇಸ್ 2 ದೊಡ್ಡದು ಚಿಹ್ನೆ ಸ್ಪೇಸ್ error ಡಾಟ್ txt.
06:44 redirection ಡಾಟ್ sh ಫೈಲ್ ಗೆ ಹಿಂದಿರುಗೋಣ.
06:49 ಹಿಂದಿನ ಸಾಲು ಅಂದರೆ 'ls' ಅನ್ನು ಕಾಮೆಂಟ್ ಮಾಡಿ.
06:54 ಅದರ ಕೆಳಗೆ : rm ಸ್ಪೇಸ್ ಬ್ಯಾಕ್ ಸ್ಲ್ಯಾಶ್ tmp ಬ್ಯಾಕ್ ಸ್ಲ್ಯಾಶ್ 4815 ಡಾಟ್ txt ಸ್ಪೇಸ್ 2 ದೊಡ್ಡದು ಚಿಹ್ನೆಸ್ಪೇಸ್ error ಡಾಟ್ txt. ಎಂದು ಟೈಪ್ ಮಾಡಿ.
07:11 ದೋಷವು error ಡಾಟ್ txt ಫೈಲ್ ಗೆ ರಿಡೈರೆಕ್ಟ್ ಆಗುತ್ತದೆ.
07:17 ಈಗ Save ಮೇಲೆ ಕ್ಲಿಕ್ ಮಾಡಿ terminal ಗೆ ಹೋಗಿ.
07:22 ಮೊದಲು ದೋಶವನ್ನು ನೋಡಲು ಒಂದು ಕಮಾಂಡ್ ಅನ್ನು ಟೈಪ್ ಮಾಡೋಣ.
07:26 rm ಸ್ಪೇಸ್ ಸ್ಲ್ಯಾಶ್ tmp ಸ್ಲ್ಯಾಶ್ 4815 ಡಾಟ್ txt ಎಂದು ಟೈಪ್ ಮಾಡಿ.
07:36 Enter ಅನ್ನು ಒತ್ತಿರಿ.
07:38 ದೋಶವು-
07:40 rm: cannot remove slash tmp slash 4815 dot txt: No such file or directory ಎಂದು ಡಿಸ್ಪ್ಲೇ ಆಗುತ್ತದೆ..
07:49 ಈಗ ಫೈಲ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
07:53 up-arrow ಕೀಲಿಯನ್ನುಒತ್ತಿ.
07:55 ಮತ್ತು ಹಳೆಯ ಕಮಾಂಡ್ ಡಾಟ್ ಸ್ಲ್ಯಾಶ್ redirection ಡಾಟ್sh ಪುನರಾವರ್ತಿಸಿ.
08:01 Enter ಅನ್ನು ಒತ್ತಿರಿ.
08:03 ಈಗ ದೋಶವು ರಿಡೈರೆಕ್ಟ್ ಆಗಿದೆಯೇ ನೋಡೋಣ.
08:07 gedit ಸ್ಪೇಸ್ error ಡಾಟ್ txt ಎಂದು ಟೈಪ್ ಮಾಡಿ. ಮತ್ತು Enter ಅನ್ನು ಒತ್ತಿರಿ.
08:15 ನಾವು ದೋಶವು error ಡಾಟ್ txt ಫೈಲ್ ಗೆ ರಿಡೈರೆಕ್ಟ್ ಆಗಿರುವುದನ್ನು ನೋಡಬಹುದು.
08:22 ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
08:26 ಸಾರಾಂಶವನ್ನು ನೋಡೋಣ.
08:28 ಈ ಟ್ಯುಟೋರಿಯಲ್ ನಲ್ಲಿ ನಾವು
08:31 ಬ್ಯಾಶ್ ನಲ್ಲಿ Input ಮತ್ತು output
08:35 Redirection ಮತ್ತು file descriptors
08:38 '<' (ಚಿಕ್ಕದು) ಚಿಹ್ನೆ ಯನ್ನು ಉಪಯೋಗಿಸಿ standard input
08:42 '>' (ದೊಡ್ಡದು) ಚಿಹ್ನೆ ಯನ್ನು ಉಪಯೋಗಿಸಿ standard output
08:47 '2>' (2 ದೊಡ್ಡದು) ಚಿಹ್ನೆ ಯನ್ನು ಉಪಯೋಗಿಸಿ standard error ಇವುಗಳ ಕುರಿತು ಕಲಿತಿದ್ದೇವೆ.
08:52 ಸ್ವಂತ ಅಭ್ಯಾಸಕ್ಕಾಗಿ -
08:54 C, C++, Java ಇವುಗಳಲ್ಲಿ ಯಾವುದಾದರು ಭಾಷೆಯನ್ನು ಉಪಯೋಗಿಸಿ ಪ್ರೋಗ್ರಾಂ ಬರೆದು,
08:59 output ಅಥವಾ error ಅನ್ನು ಹೊಸ ಫೈಲ್ ಗೆ ರಿಡೈರೆಕ್ಟ್ ಮಾಡಿ.
09:04 ಅಥವಾ ನಿಮ್ಮ ಹೆಸರು ವಿಳಾಸ ಗಳನ್ನೊಳಗೊಂಡ ಹೊಸ text file ಅನ್ನು ರಚನೆ ಮಾಡಿ
09:11 ಅದರಲ್ಲಿರುವುದನ್ನು ಇನ್ನೊಂದು ಹೊಸ ಫೈಲ್ ಗೆ Redirect ಮಾಡಿ.
09:15 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ spoken-tutorial.org/What_is_a_Spoken_Tutorial
09:19 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
09:23 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
09:28 Spoken Tutorial Project Team ಇದು
09:30 spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
09:34 online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ
09:38 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆ ಬರೆಯಿರಿ
09:46 Spoken Tutorial Project ಇದು Talk to a Teacher ಯೋಜನೆಯ ಭಾಗವಾಗಿದೆ.
09:50 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ
09:58 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken-tutorial.org\NMEICT-Intro
10:04 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
10:10 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು.

Contributors and Content Editors

NaveenBhat, PoojaMoolya