Linux-AWK/C2/Built-in-Functions-in-awk/Kannada

From Script | Spoken-Tutorial
Revision as of 13:31, 31 July 2019 by Sandhya.np14 (Talk | contribs)

Jump to: navigation, search
Time
Narration
00:01 Built-in functions in awk ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, ವಿವಿಧ ರೀತಿಯ ‘ಬಿಲ್ಟ್-ಇನ್ ಫಂಕ್ಷನ್’ ಗಳಾದ -

ಅಂಕಗಣಿತದ (arithmetic) ಫಂಕ್ಷನ್ ಗಳು,

00:15 ಸ್ಟ್ರಿಂಗ್ (string) ಫಂಕ್ಷನ್ ಗಳು,
00:17 ಇನ್ಪುಟ್/ ಔಟ್ಪುಟ್ ಫಂಕ್ಷನ್ ಗಳು ಹಾಗೂ

ಟೈಮ್ ಸ್ಟ್ಯಾಂಪ್ (Time-stamp) ಫಂಕ್ಷನ್ ಗಳ ಬಗ್ಗೆ ಕಲಿಯುವೆವು.

00:23 ಇದನ್ನು ಕೆಲವು ಉದಾಹರಣೆಗಳ ಮೂಲಕ ಮಾಡುವೆವು.
00:26 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux 16.04 ಆಪರೇಟಿಂಗ್ ಸಿಸ್ಟಂ ಹಾಗೂ

gedit ಟೆಕ್ಸ್ಟ್-ಎಡಿಟರ್ 3.20.1 ಇವುಗಳನ್ನು ಬಳಸುತ್ತಿದ್ದೇನೆ.

00:38 ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ನೀವು ಬಳಸಬಹುದು.
00:42 ನೀವು ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಮ್ಮ ವೆಬ್‌ಸೈಟ್‌ನಲ್ಲಿಯ ಹಿಂದಿನ awk ಟ್ಯುಟೋರಿಯಲ್ ಗಳನ್ನು ನೋಡಿರಬೇಕು.
00:49 ನಿಮಗೆ C ಅಥವಾ C++ ನಂತಹ ಯಾವುದೇ ಪ್ರೋಗ್ರಾಮಿಂಗ್ ಭಾಷೆಯ ಪರಿಚಯವಿರಬೇಕು.
00:56 ಇಲ್ಲದಿದ್ದರೆ, ನಮ್ಮ ವೆಬ್‌ಸೈಟ್‌ನಲ್ಲಿಯ ಸಂಬಂಧಿತ ಟ್ಯುಟೋರಿಯಲ್ ಗಳನ್ನು ದಯವಿಟ್ಟು ನೋಡಿ.
01:02 ಇಲ್ಲಿ ಬಳಸಲಾದ ಫೈಲ್‌ಗಳು, ಇದೇ ಪೇಜ್ ನಲ್ಲಿನ Code Files ಲಿಂಕ್‌ನಲ್ಲಿ ಲಭ್ಯವಿರುತ್ತವೆ.

ದಯವಿಟ್ಟು ಅವುಗಳನ್ನು ಡೌನ್‌ಲೋಡ್ ಮಾಡಿ extract ಮಾಡಿಕೊಳ್ಳಿ.

01:12 awk ಗೆ, ಕಾಲ್ ಮಾಡಲು 'ಬಿಲ್ಟ್-ಇನ್ ಫಂಕ್ಷನ್ ಗಳು' (Built-in functions), ಯಾವಾಗಲೂ ಲಭ್ಯವಿರುತ್ತವೆ.
01:17 ಮೊದಲು ನಾವು ಅಂಕಗಣಿತದ ಫಂಕ್ಷನ್ ಗಳ ಬಗ್ಗೆ ಕಲಿಯುವೆವು.

‘ಸ್ಕ್ವೇರ್ ರೂಟ್’ ಫಂಕ್ಷನ್ (sqrt (x)) - ಸಂಖ್ಯೆ x ನ ಧನಾತ್ಮಕ ವರ್ಗಮೂಲವನ್ನು ಹಿಂದಿರುಗಿಸುತ್ತದೆ.

01:27 int(x) ಫಂಕ್ಷನ್- x ಅನ್ನು ಪೂರ್ಣಾಂಕ ವ್ಯಾಲ್ಯೂಗೆ ಮೊಟಕುಗೊಳಿಸುತ್ತದೆ (truncate).
01:32 exponential ಫಂಕ್ಷನ್ (exp(x)) - x ಘಾತಾಂಕವನ್ನು ಕೊಡುತ್ತದೆ.
01:37 log(x) ಫಂಕ್ಷನ್- x ನ ನ್ಯಾಚುರಲ್ ಲೊಗ್ಯಾರಿದಮ್ ವ್ಯಾಲ್ಯೂಅನ್ನು ಹಿಂದಿರುಗಿಸುತ್ತದೆ.
01:43 sin(x) ಹಾಗೂ cos(x), ಕ್ರಮವಾಗಿ sine(x) ಹಾಗೂ cosine(x) ಗಳನ್ನು ಕೊಡುತ್ತವೆ.
01:49 ದಯವಿಟ್ಟು ಗಮನಿಸಿ: ಇಲ್ಲಿ ಆರ್ಗ್ಯುಮೆಂಟ್ 'x' ಅನ್ನು ರೇಡಿಯನ್‌ ಗಳಲ್ಲಿ ಹೇಳಬೇಕು.
01:55 ಈ ಫಂಕ್ಷನ್ ಗಳನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆಯನ್ನು ನೋಡೋಣ.
02:00 ನಾನು ಈಗಾಗಲೇ ಕೋಡ್ ಅನ್ನು arithmetic underscore function dot awk ಫೈಲ್ ನಲ್ಲಿ ಬರೆದಿದ್ದೇನೆ.

ಇದು Code Files ಲಿಂಕ್‌ನಲ್ಲಿ ಲಭ್ಯವಿದೆ.

02:10 ಇಲ್ಲಿ, ನಾವು ಕ್ರಮವಾಗಿ ಒಂದು ಧನಾತ್ಮಕ ಮತ್ತು ಋಣಾತ್ಮಕ ಸಂಖ್ಯೆಯ ವರ್ಗಮೂಲವನ್ನು ಪ್ರಿಂಟ್ ಮಾಡುತ್ತಿದ್ದೇವೆ.
02:17 ನಂತರ, ಕ್ರಮವಾಗಿ ಧನಾತ್ಮಕ ಮತ್ತು ಋಣಾತ್ಮಕ ಸಂಖ್ಯೆಗಾಗಿ ಪೂರ್ಣಾಂಕ ಮೌಲ್ಯವನ್ನು ಪ್ರಿಂಟ್ ಮಾಡುತ್ತೇವೆ.
02:24 ಆಮೇಲೆ, ಒಂದು ಸಣ್ಣ ಸಂಖ್ಯೆಯ ಮತ್ತು ಬಹಳ ದೊಡ್ಡ ಸಂಖ್ಯೆಯ ಘಾತಾಂಕವನ್ನು ಪ್ರಿಂಟ್ ಮಾಡುತ್ತೇವೆ.
02:31 ಆನಂತರ, ಧನಾತ್ಮಕ ಮತ್ತು ಋಣಾತ್ಮಕ ಸಂಖ್ಯೆಗಳ ನ್ಯಾಚುರಲ್ ಲೊಗ್ಯಾರಿದಮ್ ಅನ್ನು ಪ್ರಿಂಟ್ ಮಾಡಲಾಗುತ್ತದೆ.
02:38 ನಾವು 0.52 ರೇಡಿಯನ್ ಗಾಗಿ, ಎಂದರೆ 30 ಡಿಗ್ರಿ ಗಾಗಿ, sine ಮತ್ತು cosine ವ್ಯಾಲ್ಯೂಗಳನ್ನು ಪ್ರಿಂಟ್ ಮಾಡುತ್ತಿದ್ದೇವೆ.

ಟರ್ಮಿನಲ್ ನಲ್ಲಿ ನಾವು ಈ ಫೈಲ್ ಅನ್ನು ಎಕ್ಸೀಕ್ಯೂಟ್ ಮಾಡೋಣ.

02:50 CTRL, ALT ಮತ್ತು T ಕೀಗಳನ್ನು ಒತ್ತುವ ಮೂಲಕ ಟರ್ಮಿನಲ್ ಅನ್ನು ತೆರೆಯಿರಿ.
02:55 ನಂತರ cd ಕಮಾಂಡ್ ಅನ್ನು ಬಳಸಿ, ನೀವು Code Files ಅನ್ನು ಡೌನ್‌ಲೋಡ್ ಹಾಗೂ extract ಮಾಡಿರುವ ಫೋಲ್ಡರ್‌ಗೆ ಹೋಗಿ.
03:03 ಈಗ ಹೀಗೆ ಟೈಪ್ ಮಾಡಿ:

awk space -f space arithmetic_function.awk ಮತ್ತು ಔಟ್ಪುಟ್ ಅನ್ನು ನೋಡಲು Enter ಅನ್ನು ಒತ್ತಿ.

03:14 ಈ ಔಟ್‌ಪುಟ್‌ನಿಂದ ಕೆಲವು ವಿಷಯಗಳು ಸ್ಪಷ್ಟವಾಗಿವೆ.
03:18 sqrt() ಫಂಕ್ಷನ್, ಧನಾತ್ಮಕ ಸಂಖ್ಯೆಯ ವರ್ಗಮೂಲವನ್ನು ಕೊಡುತ್ತದೆ.
03:23 ಸಂಖ್ಯೆಯು ಋಣಾತ್ಮಕ ಆಗಿದ್ದರೆ, ಅದು nan (ನ್ಯಾನ್) ಅಥವಾ not a number ಅನ್ನು ಹಿಂದಿರುಗಿಸುತ್ತದೆ.
03:29 int(), ಯಾವುದೇ ಧನಾತ್ಮಕ ಅಥವಾ ಋಣಾತ್ಮಕ ಸಂಖ್ಯೆಯ ಮೊಟಕುಗೊಳಿಸಿದ ಪೂರ್ಣಾಂಕವನ್ನು ಕೊಡುತ್ತದೆ.
03:36 exp() ಸಂಖ್ಯೆಯ ಘಾತಾಂಕವನ್ನು ನೀಡುತ್ತದೆ.

ಸಂಖ್ಯೆಯು ತುಂಬಾ ದೊಡ್ಡದಾಗಿದ್ದರೆ, ಫಂಕ್ಷನ್, inf ಅನ್ನು ( ಐ ಎನ್ ಎಫ್) ಹಿಂತಿರುಗಿಸುತ್ತದೆ (return).

03:47 log() ಫಂಕ್ಷನ್, ಧನಾತ್ಮಕ ಸಂಖ್ಯೆಯ ನ್ಯಾಚುರಲ್ ಲೊಗ್ಯಾರಿದಮ್ ಅನ್ನು ಕೊಡುತ್ತದೆ.
03:53 ಸಂಖ್ಯೆಯು ಋಣಾತ್ಮಕವಾಗಿದ್ದರೆ, ಫಂಕ್ಷನ್ ‘nan’ ಅನ್ನು ರಿಟರ್ನ್ ಮಾಡುತ್ತದೆ.
03:58 Sine ಮತ್ತು cosine ಫಂಕ್ಷನ್ ಗಳು, ಸಂಬಂಧಿತ ವ್ಯಾಲ್ಯೂಗಳನ್ನು ರಿಟರ್ನ್ ಮಾಡುತ್ತವೆ.

ನಿಮ್ಮ ಕ್ಯಾಲ್ಕುಲೇಟರ್ ಅನ್ನು ಬಳಸಿ, ನೀವು ವ್ಯಾಲ್ಯೂವನ್ನು ಪರೀಕ್ಷಿಸಬಹುದು.

04:07 ಈಗ, ನಾವು random ಫಂಕ್ಷನ್ ಗಳನ್ನು ನೋಡೋಣ.
04:11 rand() ಫಂಕ್ಷನ್, 0 ಮತ್ತು 1 ರ ನಡುವಿನ ಯಾವುದೇ random ಸಂಖ್ಯೆಯನ್ನು ರಿಟರ್ನ್ ಮಾಡುತ್ತದೆ. ಆದರೆ ಎಂದಿಗೂ 0 ಅಥವಾ 1 ಅನ್ನು ರಿಟರ್ನ್ ಮಾಡುವುದಿಲ್ಲ.
04:21 ಒಂದು awk ಎಕ್ಸೀಕ್ಯೂಶನ್ ಒಳಗೆ, ರಚಿಸಲಾದ ಸಂಖ್ಯೆಗಳು random ಆಗಿರುತ್ತವೆ.
04:27 ಆದರೆ, awk ಪ್ರೊಗ್ರಾಂನ ವಿವಿಧ ಎಕ್ಸೀಕ್ಯೂಶನ್ ಗಳಲ್ಲಿ, ಸಂಖ್ಯೆಗಳನ್ನು ಊಹಿಸಬಹುದು.
04:33 random ಫಂಕ್ಷನ್ ಗಾಗಿ, ಸೀಡ್ ವ್ಯಾಲ್ಯೂ x ಅನ್ನು ಒದಗಿಸಲು, srand(x) ಫಂಕ್ಷನ್ ಅನ್ನು ಬಳಸಲಾಗುತ್ತದೆ.
04:39 'x' ಇರದಿದ್ದಾಗ, ದಿನಾಂಕ ಮತ್ತು ಸಮಯವನ್ನು ‘ಸೀಡ್ ವ್ಯಾಲ್ಯೂ’ ಎಂದು ಬಳಸಲಾಗುತ್ತದೆ.

ಒಂದು ಉದಾಹರಣೆಯೊಂದಿಗೆ ಇವುಗಳನ್ನು ತಿಳಿದುಕೊಳ್ಳೋಣ.

04:49 ನಾನು random ಫಂಕ್ಷನ್ ಗಾಗಿ ಕೋಡ್ ಅನ್ನು ಬರೆದಿದ್ದೇನೆ ಮತ್ತು ಅದನ್ನು random.awk ಎಂದು ಸೇವ್ ಮಾಡಿದ್ದೇನೆ.
04:56 ಇಲ್ಲಿ, for ಲೂಪ್‌ ನ ಒಳಗೆ, rand() ಫಂಕ್ಷನ್, 0 ಮತ್ತು 1 ರ ನಡುವಿನ ಒಂದು random ಸಂಖ್ಯೆಯನ್ನು ರಚಿಸುವುದು.
05:04 ಈ ಸಂಖ್ಯೆಯನ್ನು 50 ರಿಂದ ಗುಣಿಸಿ, ನಂತರ ಪ್ರಿಂಟ್ ಮಾಡಲಾಗುತ್ತದೆ.
05:10 ಹೀಗಾಗಿ, ಈ ಕೋಡ್, 50 ರೊಳಗಿನ 5 random ಸಂಖ್ಯೆಗಳನ್ನು ತಯಾರಿಸುತ್ತದೆ.
05:16 'ಟರ್ಮಿನಲ್' ಗೆ ಬದಲಾಯಿಸಿ ಮತ್ತು ಫೈಲ್ ಅನ್ನು ಎಕ್ಸೀಕ್ಯೂಟ್ ಮಾಡಿ.

'ಟರ್ಮಿನಲ್' ಅನ್ನು ಖಾಲಿ ಮಾಡುತ್ತೇನೆ.

05:23 ಹೀಗೆ ಟೈಪ್ ಮಾಡಿ: awk space hyphen f space random dot awk ಮತ್ತು Enter ಅನ್ನು ಒತ್ತಿ.
05:31 ನೋಡಿ, ಇದು 5 random ಸಂಖ್ಯೆಗಳನ್ನು ಕೊಡುತ್ತಿದೆ.
05:35 ನಾನು ಮತ್ತೆ ಕೋಡ್ ಅನ್ನು ಎಕ್ಸೀಕ್ಯೂಟ್ ಮಾಡಿದರೆ ಏನಾಗುತ್ತದೆ?
05:39 ಎಕ್ಸೀಕ್ಯೂಟ್ ಮಾಡಿದ ಹಿಂದಿನ ಕಮಾಂಡ್ ಅನ್ನು ಪಡೆಯಲು, 'ಅಪ್-ಆರೋ' ಕೀಯನ್ನು ಒತ್ತಿ. ಮತ್ತು Enter ಅನ್ನು ಒತ್ತಿ.
05:47 ನಾವು ಅದೇ ಔಟ್ಪುಟ್ ಅನ್ನು ಪಡೆಯುತ್ತೇವೆ.

ಇದರರ್ಥ, ಸ್ಕ್ರಿಪ್ಟ್ ನ ಪ್ರತಿಯೊಂದು ಎಕ್ಸೀಕ್ಯೂಶನ್ ನಲ್ಲಿ, awk, random ಸಂಖ್ಯೆಗಳ ಅದೇ ಸೆಟ್ ಅನ್ನು ಉತ್ಪಾದಿಸುತ್ತಿದೆ.

05:57 ಹಾಗಾದರೆ, ಪ್ರತಿಯೊಂದು ಎಕ್ಸೀಕ್ಯೂಶನ್ ನಲ್ಲಿ, ನಾವು random ಸಂಖ್ಯೆಗಳ ಹೊಸ ಸೆಟ್ ಅನ್ನು ಹೇಗೆ ಪಡೆಯಬಹುದು?

ಮತ್ತೊಮ್ಮೆ ಕೋಡ್‌ಗೆ ಬದಲಾಯಿಸಿ.

06:06 for ಲೂಪ್ ನ ಮೊದಲು, srand() ಫಂಕ್ಷನ್ ಅನ್ನು ಟೈಪ್ ಮಾಡಿ.
06:11 ಫೈಲ್ ಅನ್ನು ಸೇವ್ ಮಾಡಲು, Ctrl ಮತ್ತು S ಕೀಗಳನ್ನು ಒತ್ತಿ.
06:16 ಈಗ 'ಟರ್ಮಿನಲ್' ಗೆ ಬದಲಾಯಿಸಿ.
06:19 ಎಕ್ಸೀಕ್ಯೂಟ್ ಮಾಡಿದ ಹಿಂದಿನ ಕಮಾಂಡ್ ಅನ್ನು ಪಡೆಯಲು, 'ಅಪ್-ಆರೋ' ಕೀಯನ್ನು ಒತ್ತಿ. ಮತ್ತು Enter ಅನ್ನು ಒತ್ತಿ.
06:27 ಇದು random (ಯಾವುದೋ) ಸಂಖ್ಯೆಗಳ ವಿಭಿನ್ನ ಸೆಟ್ ಅನ್ನು ಕೊಡುತ್ತಿದೆ.
06:31 ಆದ್ದರಿಂದ, srand() ಫಂಕ್ಷನ್ ಅನ್ನು ಆರ್ಗ್ಯುಮೆಂಟ್ ಇಲ್ಲದೆ ಬಳಸಿದಾಗ, ನಾವು random ಸಂಖ್ಯೆಗಳ ಹೊಸ ಸೆಟ್ ಅನ್ನು ರಚಿಸಬಹುದು.
06:40 ನಂತರ, ಕೆಲವು 'ಸ್ಟ್ರಿಂಗ್' ಫಂಕ್ಷನ್ ಗಳನ್ನು ನೋಡುವೆವು.

length ಫಂಕ್ಷನ್, ಒಂದು ನಿರ್ದಿಷ್ಟ ಸ್ಟ್ರಿಂಗ್‌ 's' ನ ಉದ್ದವನ್ನು ಕೊಡುತ್ತದೆ.

06:49 index() ಫಂಕ್ಷನ್, ದೊಡ್ಡ ಸ್ಟ್ರಿಂಗ್ 's1' ನ ಒಳಗೆ, ಸ್ಟ್ರಿಂಗ್ 's2' ದ ಸ್ಥಾನವನ್ನು

ನಿರ್ಧರಿಸುತ್ತದೆ.

06:57 ಉದಾಹರಣೆಗೆ, index within parentheses within double quotes linux comma within double quotes n. ಇದು 3 ಅನ್ನು ಹಿಂದಿರುಗಿಸುತ್ತದೆ.

ಒಂದು ಉದಾಹರಣೆಯನ್ನು ನೋಡೋಣ.

07:10 awkdemo.txt ಫೈಲ್ ಅನ್ನು ತೆರೆಯಿರಿ.
07:14 Awkdemo.txt ಫೈಲ್‌ನಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯು, 4 ಅಂಕಿಗಳ roll number ಅನ್ನು ಹೊಂದಿದ್ದಾನೆ ಎಂದು ನಮಗೆ ತಿಳಿದಿದೆ.
07:21 ಟೈಪಿಂಗ್ ದೋಷದಿಂದಾಗಿ, ರೋಲ್ ನಂಬರ್ ಗಳು ತಪ್ಪು ಸಂಖ್ಯೆಯ ಅಂಕೆಗಳನ್ನು ಹೊಂದಿರಬಹುದು.

awk ಕಮಾಂಡ್ ಗಳನ್ನು ಬಳಸಿ, ಇವುಗಳನ್ನು ಸುಲಭವಾಗಿ ಕಂಡುಹಿಡಿಯಬಹುದು.

07:30 'ಟರ್ಮಿನಲ್' ಗೆ ಬದಲಾಯಿಸಿ ಅದನ್ನು ಖಾಲಿ ಮಾಡುತ್ತೇನೆ.
07:36 ಈಗ ಇಲ್ಲಿ ತೋರಿಸಿರುವಂತೆ ಕಮಾಂಡ್ ಅನ್ನು ಟೈಪ್ ಮಾಡಿ.

ಇಲ್ಲಿ, ನಾವು 1 ನೇ ಫೀಲ್ಡ್ ನ ಉದ್ದವು 4 ಕ್ಕೆ ಸಮ ಇದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸುತ್ತಿದ್ದೇವೆ.

07:46 ಇಲ್ಲದಿದ್ದರೆ, ಆ ನಿರ್ದಿಷ್ಟ ರೆಕಾರ್ಡ್ ಅನ್ನು ಪ್ರಿಂಟ್ ಮಾಡಲಾಗುತ್ತದೆ. Enter ಅನ್ನು ಒತ್ತಿ.
07:53 ನೋಡಿ, ಇಲ್ಲಿ ರೋಲ್-ನಂಬರ್ S02 ಅನ್ನು ತಪ್ಪಾಗಿ ಟೈಪ್ ಮಾಡಲಾಗಿದೆ.
08:00 ಇದು ಮೂರು ಅಂಕಿಗಳನ್ನು ಹೊಂದಿದೆ, ಆದರೆ ಉಳಿದವು ನಾಲ್ಕು ಅಂಕಿಗಳನ್ನು ಹೊಂದಿವೆ.
08:07 substr(s,a,b) ಫಂಕ್ಷನ್, ದೊಡ್ಡ ಸ್ಟ್ರಿಂಗ್‌ 's' ನಿಂದ, ಸಬ್‌ಸ್ಟ್ರಿಂಗ್ ಅನ್ನು extract ಮಾಡುತ್ತದೆ.
08:14 ನಾನು ಪ್ಯಾರಾಮೀಟರ್ ಗಳನ್ನುವಿವರಿಸುತ್ತೇನೆ.
08:17 ಇಲ್ಲಿ, 's' ಸ್ಟ್ರಿಂಗ್ ಆಗಿದೆ.
08:20 'a' - 's' ನಲ್ಲಿ extraction ಆರಂಭವಾಗುವ ಸ್ಥಾನವನ್ನು ಸೂಚಿಸುತ್ತದೆ.
08:26 'b' - extract ಆಗಬೇಕಾದ ಅಕ್ಷರಗಳ ಸಂಖ್ಯೆಯನ್ನು ಸೂಚಿಸುತ್ತದೆ.

ಒಂದು ಉದಾಹರಣೆಯನ್ನು ನೋಡೋಣ.

08:33 awkdemo.txt ಫೈಲ್ ಗೆ ಬದಲಾಯಿಸಿ.
08:37 ‘ರೋಲ್ ನಂಬರ್’ ನ ಮೊದಲನೆಯ ಅಕ್ಷರವು, ಆ ನಿರ್ದಿಷ್ಟ ವಿದ್ಯಾರ್ಥಿಯು ವಾಸಿಸುವ ಹಾಸ್ಟೆಲ್ ಕೋಡ್ ಅನ್ನು ಪ್ರತಿನಿಧಿಸುತ್ತದೆ.
08:46 ಹಾಸ್ಟೆಲ್ A ನಲ್ಲಿ ಇರುವ ವಿದ್ಯಾರ್ಥಿಗಳ ಪಟ್ಟಿಯನ್ನು ನಮಗೆ ಕಂಡುಹಿಡಿಯಬೇಕಾಗಿದೆ ಎನ್ನೋಣ.
08:52 ಅದನ್ನು ಪಡೆಯಲು, ನಾವು 'ಟರ್ಮಿನಲ್' ಗೆ ಬದಲಾಯಿಸೋಣ.
08:56 ಇಲ್ಲಿ ತೋರಿಸಿದಂತೆ ಕಮಾಂಡ್ ಅನ್ನು ಟೈಪ್ ಮಾಡಿ.
09:00 ಇಲ್ಲಿ ನಾವು $1 ನಿಂದ ಸೂಚಿಸಲಾದ ಸ್ಟ್ರಿಂಗ್ ಅನ್ನು ತೆಗೆದುಕೊಳ್ಳುತ್ತೇವೆ.
09:05 ನಮಗೆ ತಿಳಿದಿರುವಂತೆ $1 ಮೊದಲ ಫೀಲ್ಡ್ ಅನ್ನು ಪ್ರತಿನಿಧಿಸುತ್ತದೆ. ಈ ಸಂದರ್ಭದಲ್ಲಿ ಅದು ‘ರೋಲ್ ನಂಬರ್’ ಆಗಿದೆ.
09:12 ನಂತರ, ನಾವು ಸ್ಥಾನ one ರಿಂದ ಆರಂಭವಾಗುವ ಹಾಗೂ character length one ಇರುವ ಸಬ್‌ಸ್ಟ್ರಿಂಗ್ ಅನ್ನು extract ಮಾಡುತ್ತೇವೆ.
09:19 ಅದು ಕ್ಯಾಪಿಟಲ್ 'A' ಗೆ ಸಮನಾಗಿದ್ದರೆ, ಫೈಲ್‌ ನಲ್ಲಿಯ ಆ ಸಾಲನ್ನು ಪ್ರಿಂಟ್ ಮಾಡಲಾಗುತ್ತದೆ.

ಔಟ್ಪುಟ್ ಅನ್ನು ನೋಡಲು, Enter ಅನ್ನು ಒತ್ತಿ.

09:29 ಇಲ್ಲಿ, ಹಾಸ್ಟೆಲ್‌ A ನಲ್ಲಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ನಾವು ಪಡೆದಿದ್ದೇವೆ.
09:34 ನಾವು ಈ ಮೊದಲು ಫಂಕ್ಷನ್ split() ಅನ್ನು ನೋಡಿದ್ದೇವೆ. ಆದ್ದರಿಂದ, ನಾನು ಇಲ್ಲಿ ಅದರ ಬಗ್ಗೆ ವಿವರಿಸುತ್ತಿಲ್ಲ.
09:40 ನಿಮಗೆ ಯಾವುದೇ ಸಂದೇಹವಿದ್ದರೆ, ದಯವಿಟ್ಟು ಹಿಂದಿನ awk ಟ್ಯುಟೋರಿಯಲ್ ಗಳನ್ನು ನೋಡಿ.
09:45 ಇಲ್ಲಿ, ಇನ್ಪುಟ್ / ಔಟ್ಪುಟ್ ಗೆ ಸಂಬಂಧಿಸಿದ ಬೇರೆ ಕೆಲವು ಫಂಕ್ಷನ್ ಗಳಿವೆ.

system() ಫಂಕ್ಷನ್ - awk ನ ಒಳಗೆ, ಯಾವುದೇ unix ಕಮಾಂಡ್ ಅನ್ನು ರನ್ ಮಾಡಲು ಇದು ನಮಗೆ ಸಹಾಯ ಮಾಡುತ್ತದೆ.

09:56 ಈಗ ನಾವು unix ಕಮಾಂಡ್ date ಅನ್ನು, awk ಕಮಾಂಡ್ ನ ಮೂಲಕ ರನ್ ಮಾಡುವೆವು.
10:01 'ಟರ್ಮಿನಲ್' ನಲ್ಲಿ, ಇಲ್ಲಿ ತೋರಿಸಿದಂತೆ ಕಮಾಂಡ್ ಅನ್ನು ಟೈಪ್ ಮಾಡಿ. ಮತ್ತು Enter ಅನ್ನು ಒತ್ತಿ.
10:09 'ಟರ್ಮಿನಲ್' ನಲ್ಲಿ, ಇಂದಿನ ದಿನಾಂಕ ಮತ್ತು ಸಮಯವನ್ನು ಔಟ್‌ಪುಟ್‌ ಆಗಿ ತೋರಿಸಲಾಗಿದೆ.
10:15 ಈಗ, ನಮಗೆ ಇದು ಏಕೆ ಬೇಕು? ನಾವು awk ಕಮಾಂಡ್ ನ BEGIN ವಿಭಾಗವನ್ನು ಮಾತ್ರ ಇರಿಸಿದ್ದೇವೆ.
10:21 ನಿಜವಾದ ಸನ್ನಿವೇಶಗಳಲ್ಲಿ, ಅಗತ್ಯವಾದ ಔಟ್‌ಪುಟ್ ಅನ್ನು ತೋರಿಸುವ ಮೊದಲು ನಾವು 'ಸಿಸ್ಟಮ್ ದಿನಾಂಕ' ಅನ್ನು ಪ್ರಿಂಟ್ ಮಾಡಲು ಬಯಸಬಹುದು.
10:28 ಅಂತಹ ಸಂದರ್ಭದಲ್ಲಿ, ನಾವು ಸಿಸ್ಟಮ್-ಕಮಾಂಡ್ ಗಳನ್ನು awk ಕಮಾಂಡ್ ನಿಂದ ಎಕ್ಸೀಕ್ಯೂಟ್ ಮಾಡಬೇಕಾಗುತ್ತದೆ.
10:34 ಇಲ್ಲಿ, ಟೈಮ್ ಸ್ಟ್ಯಾಂಪ್ ಗಳೊಂದಿಗೆ ವ್ಯವಹರಿಸುವ systime(), strftime() ಗಳಂತಹ ಕೆಲವು ಫಂಕ್ಷನ್ ಗಳಿವೆ.
10:43 ಈ ಫಂಕ್ಷನ್ ಗಳ ಬಗ್ಗೆ ತಿಳಿಯಲು, ಇಂಟರ್ನೆಟ್ ಅನ್ನುಬ್ರೌಸ್ ಮಾಡಿ.
10:48 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಸಂಕ್ಷಿಪ್ತವಾಗಿ,

10:53 ಈ ಟ್ಯುಟೋರಿಯಲ್ ನಲ್ಲಿ ನಾವು, ವಿವಿಧ ಪ್ರಕಾರದ ಬಿಲ್ಟ್-ಇನ್ ಫಂಕ್ಷನ್ ಗಳಾದ-

Arithmetic ಫಂಕ್ಷನ್ ಗಳು,

ಸ್ಟ್ರಿಂಗ್ ಫಂಕ್ಷನ್ ಗಳು,

ಇನ್ಪುಟ್/ ಔಟ್ಪುಟ್ ಫಂಕ್ಷನ್ ಗಳು ಹಾಗೂ

ಟೈಮ್ ಸ್ಟ್ಯಾಂಪ್ ಫಂಕ್ಷನ್ ಗಳ ಬಗ್ಗೆ ಕಲಿತಿದ್ದೇವೆ.

11:06 ಇಲ್ಲಿ ಒಂದು ಅಸೈನ್ಮೆಂಟ್ ಇದೆ -

awkdemo.txt ಫೈಲ್ ಅನ್ನು ಬಳಸಿ, ವಿದ್ಯಾರ್ಥಿಯ ಹೆಸರಿನಲ್ಲಿ ಸಣ್ಣ u ಅನ್ನು ೩ ನೇ ಅಕ್ಷರವಾಗಿ ಹೊಂದಿರುವ,

11:13 ಪ್ರತಿಯೊಂದು ರೆಕಾರ್ಡ್ ನ ಕೊನೆಯ ಫೀಲ್ಡ್ ಅನ್ನು ಪ್ರಿಂಟ್ ಮಾಡಲು, ಒಂದು awk ಪ್ರೊಗ್ರಾಂಅನ್ನು ಬರೆಯಿರಿ.
11:22 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
11:30 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು, “ಸ್ಪೋಕನ್ ಟ್ಯುಟೋರಿಯಲ್” ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

11:43 ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಂಗೆ ಬರೆಯಿರಿ.
11:47 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.

ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.

11:59 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14