Linux-AWK/C2/Built-in-Functions-in-awk/Kannada
|
|
00:01 | Built-in functions in awk ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, ವಿವಿಧ ರೀತಿಯ ‘ಬಿಲ್ಟ್-ಇನ್ ಫಂಕ್ಷನ್’ ಗಳಾದ -
ಅಂಕಗಣಿತದ (arithmetic) ಫಂಕ್ಷನ್ ಗಳು, |
00:15 | ಸ್ಟ್ರಿಂಗ್ (string) ಫಂಕ್ಷನ್ ಗಳು, |
00:17 | ಇನ್ಪುಟ್/ ಔಟ್ಪುಟ್ ಫಂಕ್ಷನ್ ಗಳು ಹಾಗೂ
ಟೈಮ್ ಸ್ಟ್ಯಾಂಪ್ (Time-stamp) ಫಂಕ್ಷನ್ ಗಳ ಬಗ್ಗೆ ಕಲಿಯುವೆವು. |
00:23 | ಇದನ್ನು ಕೆಲವು ಉದಾಹರಣೆಗಳ ಮೂಲಕ ಮಾಡುವೆವು. |
00:26 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux 16.04 ಆಪರೇಟಿಂಗ್ ಸಿಸ್ಟಂ ಹಾಗೂ gedit ಟೆಕ್ಸ್ಟ್-ಎಡಿಟರ್ 3.20.1 ಇವುಗಳನ್ನು ಬಳಸುತ್ತಿದ್ದೇನೆ. |
00:38 | ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ನೀವು ಬಳಸಬಹುದು. |
00:42 | ನೀವು ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಮ್ಮ ವೆಬ್‌ಸೈಟ್‌ನಲ್ಲಿಯ ಹಿಂದಿನ awk ಟ್ಯುಟೋರಿಯಲ್ ಗಳನ್ನು ನೋಡಿರಬೇಕು. |
00:49 | ನಿಮಗೆ C ಅಥವಾ C++ ನಂತಹ ಯಾವುದೇ ಪ್ರೋಗ್ರಾಮಿಂಗ್ ಭಾಷೆಯ ಪರಿಚಯವಿರಬೇಕು. |
00:56 | ಇಲ್ಲದಿದ್ದರೆ, ನಮ್ಮ ವೆಬ್‌ಸೈಟ್‌ನಲ್ಲಿಯ ಸಂಬಂಧಿತ ಟ್ಯುಟೋರಿಯಲ್ ಗಳನ್ನು ದಯವಿಟ್ಟು ನೋಡಿ. |
01:02 | ಇಲ್ಲಿ ಬಳಸಲಾದ ಫೈಲ್‌ಗಳು, ಇದೇ ಪೇಜ್ ನಲ್ಲಿನ Code Files ಲಿಂಕ್‌ನಲ್ಲಿ ಲಭ್ಯವಿರುತ್ತವೆ.
ದಯವಿಟ್ಟು ಅವುಗಳನ್ನು ಡೌನ್‌ಲೋಡ್ ಮಾಡಿ extract ಮಾಡಿಕೊಳ್ಳಿ. |
01:12 | awk ಗೆ, ಕಾಲ್ ಮಾಡಲು 'ಬಿಲ್ಟ್-ಇನ್ ಫಂಕ್ಷನ್ ಗಳು' (Built-in functions), ಯಾವಾಗಲೂ ಲಭ್ಯವಿರುತ್ತವೆ. |
01:17 | ಮೊದಲು ನಾವು ಅಂಕಗಣಿತದ ಫಂಕ್ಷನ್ ಗಳ ಬಗ್ಗೆ ಕಲಿಯುವೆವು.
‘ಸ್ಕ್ವೇರ್ ರೂಟ್’ ಫಂಕ್ಷನ್ (sqrt (x)) - ಸಂಖ್ಯೆ x ನ ಧನಾತ್ಮಕ ವರ್ಗಮೂಲವನ್ನು ಹಿಂದಿರುಗಿಸುತ್ತದೆ. |
01:27 | int(x) ಫಂಕ್ಷನ್- x ಅನ್ನು ಪೂರ್ಣಾಂಕ ವ್ಯಾಲ್ಯೂಗೆ ಮೊಟಕುಗೊಳಿಸುತ್ತದೆ (truncate). |
01:32 | exponential ಫಂಕ್ಷನ್ (exp(x)) - x ಘಾತಾಂಕವನ್ನು ಕೊಡುತ್ತದೆ. |
01:37 | log(x) ಫಂಕ್ಷನ್- x ನ ನ್ಯಾಚುರಲ್ ಲೊಗ್ಯಾರಿದಮ್ ವ್ಯಾಲ್ಯೂಅನ್ನು ಹಿಂದಿರುಗಿಸುತ್ತದೆ. |
01:43 | sin(x) ಹಾಗೂ cos(x), ಕ್ರಮವಾಗಿ sine(x) ಹಾಗೂ cosine(x) ಗಳನ್ನು ಕೊಡುತ್ತವೆ. |
01:49 | ದಯವಿಟ್ಟು ಗಮನಿಸಿ: ಇಲ್ಲಿ ಆರ್ಗ್ಯುಮೆಂಟ್ 'x' ಅನ್ನು ರೇಡಿಯನ್ ಗಳಲ್ಲಿ ಹೇಳಬೇಕು. |
01:55 | ಈ ಫಂಕ್ಷನ್ ಗಳನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆಯನ್ನು ನೋಡೋಣ. |
02:00 | ನಾನು ಈಗಾಗಲೇ ಕೋಡ್ ಅನ್ನು arithmetic underscore function dot awk ಫೈಲ್ ನಲ್ಲಿ ಬರೆದಿದ್ದೇನೆ.
ಇದು Code Files ಲಿಂಕ್‌ನಲ್ಲಿ ಲಭ್ಯವಿದೆ. |
02:10 | ಇಲ್ಲಿ, ನಾವು ಕ್ರಮವಾಗಿ ಒಂದು ಧನಾತ್ಮಕ ಮತ್ತು ಋಣಾತ್ಮಕ ಸಂಖ್ಯೆಯ ವರ್ಗಮೂಲವನ್ನು ಪ್ರಿಂಟ್ ಮಾಡುತ್ತಿದ್ದೇವೆ. |
02:17 | ನಂತರ, ಕ್ರಮವಾಗಿ ಧನಾತ್ಮಕ ಮತ್ತು ಋಣಾತ್ಮಕ ಸಂಖ್ಯೆಗಾಗಿ ಪೂರ್ಣಾಂಕ ಮೌಲ್ಯವನ್ನು ಪ್ರಿಂಟ್ ಮಾಡುತ್ತೇವೆ. |
02:24 | ಆಮೇಲೆ, ಒಂದು ಸಣ್ಣ ಸಂಖ್ಯೆಯ ಮತ್ತು ಬಹಳ ದೊಡ್ಡ ಸಂಖ್ಯೆಯ ಘಾತಾಂಕವನ್ನು ಪ್ರಿಂಟ್ ಮಾಡುತ್ತೇವೆ. |
02:31 | ಆನಂತರ, ಧನಾತ್ಮಕ ಮತ್ತು ಋಣಾತ್ಮಕ ಸಂಖ್ಯೆಗಳ ನ್ಯಾಚುರಲ್ ಲೊಗ್ಯಾರಿದಮ್ ಅನ್ನು ಪ್ರಿಂಟ್ ಮಾಡಲಾಗುತ್ತದೆ. |
02:38 | ನಾವು 0.52 ರೇಡಿಯನ್ ಗಾಗಿ, ಎಂದರೆ 30 ಡಿಗ್ರಿ ಗಾಗಿ, sine ಮತ್ತು cosine ವ್ಯಾಲ್ಯೂಗಳನ್ನು ಪ್ರಿಂಟ್ ಮಾಡುತ್ತಿದ್ದೇವೆ.
ಟರ್ಮಿನಲ್ ನಲ್ಲಿ ನಾವು ಈ ಫೈಲ್ ಅನ್ನು ಎಕ್ಸೀಕ್ಯೂಟ್ ಮಾಡೋಣ. |
02:50 | CTRL, ALT ಮತ್ತು T ಕೀಗಳನ್ನು ಒತ್ತುವ ಮೂಲಕ ಟರ್ಮಿನಲ್ ಅನ್ನು ತೆರೆಯಿರಿ. |
02:55 | ನಂತರ cd ಕಮಾಂಡ್ ಅನ್ನು ಬಳಸಿ, ನೀವು Code Files ಅನ್ನು ಡೌನ್‌ಲೋಡ್ ಹಾಗೂ extract ಮಾಡಿರುವ ಫೋಲ್ಡರ್‌ಗೆ ಹೋಗಿ. |
03:03 | ಈಗ ಹೀಗೆ ಟೈಪ್ ಮಾಡಿ:
awk space -f space arithmetic_function.awk ಮತ್ತು ಔಟ್ಪುಟ್ ಅನ್ನು ನೋಡಲು Enter ಅನ್ನು ಒತ್ತಿ. |
03:14 | ಈ ಔಟ್‌ಪುಟ್‌ನಿಂದ ಕೆಲವು ವಿಷಯಗಳು ಸ್ಪಷ್ಟವಾಗಿವೆ. |
03:18 | sqrt() ಫಂಕ್ಷನ್, ಧನಾತ್ಮಕ ಸಂಖ್ಯೆಯ ವರ್ಗಮೂಲವನ್ನು ಕೊಡುತ್ತದೆ. |
03:23 | ಸಂಖ್ಯೆಯು ಋಣಾತ್ಮಕ ಆಗಿದ್ದರೆ, ಅದು nan (ನ್ಯಾನ್) ಅಥವಾ not a number ಅನ್ನು ಹಿಂದಿರುಗಿಸುತ್ತದೆ. |
03:29 | int(), ಯಾವುದೇ ಧನಾತ್ಮಕ ಅಥವಾ ಋಣಾತ್ಮಕ ಸಂಖ್ಯೆಯ ಮೊಟಕುಗೊಳಿಸಿದ ಪೂರ್ಣಾಂಕವನ್ನು ಕೊಡುತ್ತದೆ. |
03:36 | exp() ಸಂಖ್ಯೆಯ ಘಾತಾಂಕವನ್ನು ನೀಡುತ್ತದೆ.
ಸಂಖ್ಯೆಯು ತುಂಬಾ ದೊಡ್ಡದಾಗಿದ್ದರೆ, ಫಂಕ್ಷನ್, inf ಅನ್ನು ( ಐ ಎನ್ ಎಫ್) ಹಿಂತಿರುಗಿಸುತ್ತದೆ (return). |
03:47 | log() ಫಂಕ್ಷನ್, ಧನಾತ್ಮಕ ಸಂಖ್ಯೆಯ ನ್ಯಾಚುರಲ್ ಲೊಗ್ಯಾರಿದಮ್ ಅನ್ನು ಕೊಡುತ್ತದೆ. |
03:53 | ಸಂಖ್ಯೆಯು ಋಣಾತ್ಮಕವಾಗಿದ್ದರೆ, ಫಂಕ್ಷನ್ ‘nan’ ಅನ್ನು ರಿಟರ್ನ್ ಮಾಡುತ್ತದೆ. |
03:58 | Sine ಮತ್ತು cosine ಫಂಕ್ಷನ್ ಗಳು, ಸಂಬಂಧಿತ ವ್ಯಾಲ್ಯೂಗಳನ್ನು ರಿಟರ್ನ್ ಮಾಡುತ್ತವೆ.
ನಿಮ್ಮ ಕ್ಯಾಲ್ಕುಲೇಟರ್ ಅನ್ನು ಬಳಸಿ, ನೀವು ವ್ಯಾಲ್ಯೂವನ್ನು ಪರೀಕ್ಷಿಸಬಹುದು. |
04:07 | ಈಗ, ನಾವು random ಫಂಕ್ಷನ್ ಗಳನ್ನು ನೋಡೋಣ. |
04:11 | rand() ಫಂಕ್ಷನ್, 0 ಮತ್ತು 1 ರ ನಡುವಿನ ಯಾವುದೇ random ಸಂಖ್ಯೆಯನ್ನು ರಿಟರ್ನ್ ಮಾಡುತ್ತದೆ. ಆದರೆ ಎಂದಿಗೂ 0 ಅಥವಾ 1 ಅನ್ನು ರಿಟರ್ನ್ ಮಾಡುವುದಿಲ್ಲ. |
04:21 | ಒಂದು awk ಎಕ್ಸೀಕ್ಯೂಶನ್ ಒಳಗೆ, ರಚಿಸಲಾದ ಸಂಖ್ಯೆಗಳು random ಆಗಿರುತ್ತವೆ. |
04:27 | ಆದರೆ, awk ಪ್ರೊಗ್ರಾಂನ ವಿವಿಧ ಎಕ್ಸೀಕ್ಯೂಶನ್ ಗಳಲ್ಲಿ, ಸಂಖ್ಯೆಗಳನ್ನು ಊಹಿಸಬಹುದು. |
04:33 | random ಫಂಕ್ಷನ್ ಗಾಗಿ, ಸೀಡ್ ವ್ಯಾಲ್ಯೂ x ಅನ್ನು ಒದಗಿಸಲು, srand(x) ಫಂಕ್ಷನ್ ಅನ್ನು ಬಳಸಲಾಗುತ್ತದೆ. |
04:39 | 'x' ಇರದಿದ್ದಾಗ, ದಿನಾಂಕ ಮತ್ತು ಸಮಯವನ್ನು ‘ಸೀಡ್ ವ್ಯಾಲ್ಯೂ’ ಎಂದು ಬಳಸಲಾಗುತ್ತದೆ.
ಒಂದು ಉದಾಹರಣೆಯೊಂದಿಗೆ ಇವುಗಳನ್ನು ತಿಳಿದುಕೊಳ್ಳೋಣ. |
04:49 | ನಾನು random ಫಂಕ್ಷನ್ ಗಾಗಿ ಕೋಡ್ ಅನ್ನು ಬರೆದಿದ್ದೇನೆ ಮತ್ತು ಅದನ್ನು random.awk ಎಂದು ಸೇವ್ ಮಾಡಿದ್ದೇನೆ. |
04:56 | ಇಲ್ಲಿ, for ಲೂಪ್ ನ ಒಳಗೆ, rand() ಫಂಕ್ಷನ್, 0 ಮತ್ತು 1 ರ ನಡುವಿನ ಒಂದು random ಸಂಖ್ಯೆಯನ್ನು ರಚಿಸುವುದು. |
05:04 | ಈ ಸಂಖ್ಯೆಯನ್ನು 50 ರಿಂದ ಗುಣಿಸಿ, ನಂತರ ಪ್ರಿಂಟ್ ಮಾಡಲಾಗುತ್ತದೆ. |
05:10 | ಹೀಗಾಗಿ, ಈ ಕೋಡ್, 50 ರೊಳಗಿನ 5 random ಸಂಖ್ಯೆಗಳನ್ನು ತಯಾರಿಸುತ್ತದೆ. |
05:16 | 'ಟರ್ಮಿನಲ್' ಗೆ ಬದಲಾಯಿಸಿ ಮತ್ತು ಫೈಲ್ ಅನ್ನು ಎಕ್ಸೀಕ್ಯೂಟ್ ಮಾಡಿ.
'ಟರ್ಮಿನಲ್' ಅನ್ನು ಖಾಲಿ ಮಾಡುತ್ತೇನೆ. |
05:23 | ಹೀಗೆ ಟೈಪ್ ಮಾಡಿ: awk space hyphen f space random dot awk ಮತ್ತು Enter ಅನ್ನು ಒತ್ತಿ. |
05:31 | ನೋಡಿ, ಇದು 5 random ಸಂಖ್ಯೆಗಳನ್ನು ಕೊಡುತ್ತಿದೆ. |
05:35 | ನಾನು ಮತ್ತೆ ಕೋಡ್ ಅನ್ನು ಎಕ್ಸೀಕ್ಯೂಟ್ ಮಾಡಿದರೆ ಏನಾಗುತ್ತದೆ? |
05:39 | ಎಕ್ಸೀಕ್ಯೂಟ್ ಮಾಡಿದ ಹಿಂದಿನ ಕಮಾಂಡ್ ಅನ್ನು ಪಡೆಯಲು, 'ಅಪ್-ಆರೋ' ಕೀಯನ್ನು ಒತ್ತಿ. ಮತ್ತು Enter ಅನ್ನು ಒತ್ತಿ. |
05:47 | ನಾವು ಅದೇ ಔಟ್ಪುಟ್ ಅನ್ನು ಪಡೆಯುತ್ತೇವೆ.
ಇದರರ್ಥ, ಸ್ಕ್ರಿಪ್ಟ್ ನ ಪ್ರತಿಯೊಂದು ಎಕ್ಸೀಕ್ಯೂಶನ್ ನಲ್ಲಿ, awk, random ಸಂಖ್ಯೆಗಳ ಅದೇ ಸೆಟ್ ಅನ್ನು ಉತ್ಪಾದಿಸುತ್ತಿದೆ. |
05:57 | ಹಾಗಾದರೆ, ಪ್ರತಿಯೊಂದು ಎಕ್ಸೀಕ್ಯೂಶನ್ ನಲ್ಲಿ, ನಾವು random ಸಂಖ್ಯೆಗಳ ಹೊಸ ಸೆಟ್ ಅನ್ನು ಹೇಗೆ ಪಡೆಯಬಹುದು?
ಮತ್ತೊಮ್ಮೆ ಕೋಡ್‌ಗೆ ಬದಲಾಯಿಸಿ. |
06:06 | for ಲೂಪ್ ನ ಮೊದಲು, srand() ಫಂಕ್ಷನ್ ಅನ್ನು ಟೈಪ್ ಮಾಡಿ. |
06:11 | ಫೈಲ್ ಅನ್ನು ಸೇವ್ ಮಾಡಲು, Ctrl ಮತ್ತು S ಕೀಗಳನ್ನು ಒತ್ತಿ. |
06:16 | ಈಗ 'ಟರ್ಮಿನಲ್' ಗೆ ಬದಲಾಯಿಸಿ. |
06:19 | ಎಕ್ಸೀಕ್ಯೂಟ್ ಮಾಡಿದ ಹಿಂದಿನ ಕಮಾಂಡ್ ಅನ್ನು ಪಡೆಯಲು, 'ಅಪ್-ಆರೋ' ಕೀಯನ್ನು ಒತ್ತಿ. ಮತ್ತು Enter ಅನ್ನು ಒತ್ತಿ. |
06:27 | ಇದು random (ಯಾವುದೋ) ಸಂಖ್ಯೆಗಳ ವಿಭಿನ್ನ ಸೆಟ್ ಅನ್ನು ಕೊಡುತ್ತಿದೆ. |
06:31 | ಆದ್ದರಿಂದ, srand() ಫಂಕ್ಷನ್ ಅನ್ನು ಆರ್ಗ್ಯುಮೆಂಟ್ ಇಲ್ಲದೆ ಬಳಸಿದಾಗ, ನಾವು random ಸಂಖ್ಯೆಗಳ ಹೊಸ ಸೆಟ್ ಅನ್ನು ರಚಿಸಬಹುದು. |
06:40 | ನಂತರ, ಕೆಲವು 'ಸ್ಟ್ರಿಂಗ್' ಫಂಕ್ಷನ್ ಗಳನ್ನು ನೋಡುವೆವು.
length ಫಂಕ್ಷನ್, ಒಂದು ನಿರ್ದಿಷ್ಟ ಸ್ಟ್ರಿಂಗ್ 's' ನ ಉದ್ದವನ್ನು ಕೊಡುತ್ತದೆ. |
06:49 | index() ಫಂಕ್ಷನ್, ದೊಡ್ಡ ಸ್ಟ್ರಿಂಗ್ 's1' ನ ಒಳಗೆ, ಸ್ಟ್ರಿಂಗ್ 's2' ದ ಸ್ಥಾನವನ್ನು ನಿರ್ಧರಿಸುತ್ತದೆ. |
06:57 | ಉದಾಹರಣೆಗೆ, index within parentheses within double quotes linux comma within double quotes n. ಇದು 3 ಅನ್ನು ಹಿಂದಿರುಗಿಸುತ್ತದೆ.
ಒಂದು ಉದಾಹರಣೆಯನ್ನು ನೋಡೋಣ. |
07:10 | awkdemo.txt ಫೈಲ್ ಅನ್ನು ತೆರೆಯಿರಿ. |
07:14 | Awkdemo.txt ಫೈಲ್‌ನಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯು, 4 ಅಂಕಿಗಳ roll number ಅನ್ನು ಹೊಂದಿದ್ದಾನೆ ಎಂದು ನಮಗೆ ತಿಳಿದಿದೆ. |
07:21 | ಟೈಪಿಂಗ್ ದೋಷದಿಂದಾಗಿ, ರೋಲ್ ನಂಬರ್ ಗಳು ತಪ್ಪು ಸಂಖ್ಯೆಯ ಅಂಕೆಗಳನ್ನು ಹೊಂದಿರಬಹುದು.
awk ಕಮಾಂಡ್ ಗಳನ್ನು ಬಳಸಿ, ಇವುಗಳನ್ನು ಸುಲಭವಾಗಿ ಕಂಡುಹಿಡಿಯಬಹುದು. |
07:30 | 'ಟರ್ಮಿನಲ್' ಗೆ ಬದಲಾಯಿಸಿ ಅದನ್ನು ಖಾಲಿ ಮಾಡುತ್ತೇನೆ. |
07:36 | ಈಗ ಇಲ್ಲಿ ತೋರಿಸಿರುವಂತೆ ಕಮಾಂಡ್ ಅನ್ನು ಟೈಪ್ ಮಾಡಿ.
ಇಲ್ಲಿ, ನಾವು 1 ನೇ ಫೀಲ್ಡ್ ನ ಉದ್ದವು 4 ಕ್ಕೆ ಸಮ ಇದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸುತ್ತಿದ್ದೇವೆ. |
07:46 | ಇಲ್ಲದಿದ್ದರೆ, ಆ ನಿರ್ದಿಷ್ಟ ರೆಕಾರ್ಡ್ ಅನ್ನು ಪ್ರಿಂಟ್ ಮಾಡಲಾಗುತ್ತದೆ. Enter ಅನ್ನು ಒತ್ತಿ. |
07:53 | ನೋಡಿ, ಇಲ್ಲಿ ರೋಲ್-ನಂಬರ್ S02 ಅನ್ನು ತಪ್ಪಾಗಿ ಟೈಪ್ ಮಾಡಲಾಗಿದೆ. |
08:00 | ಇದು ಮೂರು ಅಂಕಿಗಳನ್ನು ಹೊಂದಿದೆ, ಆದರೆ ಉಳಿದವು ನಾಲ್ಕು ಅಂಕಿಗಳನ್ನು ಹೊಂದಿವೆ. |
08:07 | substr(s,a,b) ಫಂಕ್ಷನ್, ದೊಡ್ಡ ಸ್ಟ್ರಿಂಗ್ 's' ನಿಂದ, ಸಬ್‌ಸ್ಟ್ರಿಂಗ್ ಅನ್ನು extract ಮಾಡುತ್ತದೆ. |
08:14 | ನಾನು ಪ್ಯಾರಾಮೀಟರ್ ಗಳನ್ನುವಿವರಿಸುತ್ತೇನೆ. |
08:17 | ಇಲ್ಲಿ, 's' ಸ್ಟ್ರಿಂಗ್ ಆಗಿದೆ. |
08:20 | 'a' - 's' ನಲ್ಲಿ extraction ಆರಂಭವಾಗುವ ಸ್ಥಾನವನ್ನು ಸೂಚಿಸುತ್ತದೆ. |
08:26 | 'b' - extract ಆಗಬೇಕಾದ ಅಕ್ಷರಗಳ ಸಂಖ್ಯೆಯನ್ನು ಸೂಚಿಸುತ್ತದೆ.
ಒಂದು ಉದಾಹರಣೆಯನ್ನು ನೋಡೋಣ. |
08:33 | awkdemo.txt ಫೈಲ್ ಗೆ ಬದಲಾಯಿಸಿ. |
08:37 | ‘ರೋಲ್ ನಂಬರ್’ ನ ಮೊದಲನೆಯ ಅಕ್ಷರವು, ಆ ನಿರ್ದಿಷ್ಟ ವಿದ್ಯಾರ್ಥಿಯು ವಾಸಿಸುವ ಹಾಸ್ಟೆಲ್ ಕೋಡ್ ಅನ್ನು ಪ್ರತಿನಿಧಿಸುತ್ತದೆ. |
08:46 | ಹಾಸ್ಟೆಲ್ A ನಲ್ಲಿ ಇರುವ ವಿದ್ಯಾರ್ಥಿಗಳ ಪಟ್ಟಿಯನ್ನು ನಮಗೆ ಕಂಡುಹಿಡಿಯಬೇಕಾಗಿದೆ ಎನ್ನೋಣ. |
08:52 | ಅದನ್ನು ಪಡೆಯಲು, ನಾವು 'ಟರ್ಮಿನಲ್' ಗೆ ಬದಲಾಯಿಸೋಣ. |
08:56 | ಇಲ್ಲಿ ತೋರಿಸಿದಂತೆ ಕಮಾಂಡ್ ಅನ್ನು ಟೈಪ್ ಮಾಡಿ. |
09:00 | ಇಲ್ಲಿ ನಾವು $1 ನಿಂದ ಸೂಚಿಸಲಾದ ಸ್ಟ್ರಿಂಗ್ ಅನ್ನು ತೆಗೆದುಕೊಳ್ಳುತ್ತೇವೆ. |
09:05 | ನಮಗೆ ತಿಳಿದಿರುವಂತೆ $1 ಮೊದಲ ಫೀಲ್ಡ್ ಅನ್ನು ಪ್ರತಿನಿಧಿಸುತ್ತದೆ. ಈ ಸಂದರ್ಭದಲ್ಲಿ ಅದು ‘ರೋಲ್ ನಂಬರ್’ ಆಗಿದೆ. |
09:12 | ನಂತರ, ನಾವು ಸ್ಥಾನ one ರಿಂದ ಆರಂಭವಾಗುವ ಹಾಗೂ character length one ಇರುವ ಸಬ್‌ಸ್ಟ್ರಿಂಗ್ ಅನ್ನು extract ಮಾಡುತ್ತೇವೆ. |
09:19 | ಅದು ಕ್ಯಾಪಿಟಲ್ 'A' ಗೆ ಸಮನಾಗಿದ್ದರೆ, ಫೈಲ್ ನಲ್ಲಿಯ ಆ ಸಾಲನ್ನು ಪ್ರಿಂಟ್ ಮಾಡಲಾಗುತ್ತದೆ.
ಔಟ್ಪುಟ್ ಅನ್ನು ನೋಡಲು, Enter ಅನ್ನು ಒತ್ತಿ. |
09:29 | ಇಲ್ಲಿ, ಹಾಸ್ಟೆಲ್ A ನಲ್ಲಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ನಾವು ಪಡೆದಿದ್ದೇವೆ. |
09:34 | ನಾವು ಈ ಮೊದಲು ಫಂಕ್ಷನ್ split() ಅನ್ನು ನೋಡಿದ್ದೇವೆ. ಆದ್ದರಿಂದ, ನಾನು ಇಲ್ಲಿ ಅದರ ಬಗ್ಗೆ ವಿವರಿಸುತ್ತಿಲ್ಲ. |
09:40 | ನಿಮಗೆ ಯಾವುದೇ ಸಂದೇಹವಿದ್ದರೆ, ದಯವಿಟ್ಟು ಹಿಂದಿನ awk ಟ್ಯುಟೋರಿಯಲ್ ಗಳನ್ನು ನೋಡಿ. |
09:45 | ಇಲ್ಲಿ, ಇನ್ಪುಟ್ / ಔಟ್ಪುಟ್ ಗೆ ಸಂಬಂಧಿಸಿದ ಬೇರೆ ಕೆಲವು ಫಂಕ್ಷನ್ ಗಳಿವೆ.
system() ಫಂಕ್ಷನ್ - awk ನ ಒಳಗೆ, ಯಾವುದೇ unix ಕಮಾಂಡ್ ಅನ್ನು ರನ್ ಮಾಡಲು ಇದು ನಮಗೆ ಸಹಾಯ ಮಾಡುತ್ತದೆ. |
09:56 | ಈಗ ನಾವು unix ಕಮಾಂಡ್ date ಅನ್ನು, awk ಕಮಾಂಡ್ ನ ಮೂಲಕ ರನ್ ಮಾಡುವೆವು. |
10:01 | 'ಟರ್ಮಿನಲ್' ನಲ್ಲಿ, ಇಲ್ಲಿ ತೋರಿಸಿದಂತೆ ಕಮಾಂಡ್ ಅನ್ನು ಟೈಪ್ ಮಾಡಿ. ಮತ್ತು Enter ಅನ್ನು ಒತ್ತಿ. |
10:09 | 'ಟರ್ಮಿನಲ್' ನಲ್ಲಿ, ಇಂದಿನ ದಿನಾಂಕ ಮತ್ತು ಸಮಯವನ್ನು ಔಟ್‌ಪುಟ್ ಆಗಿ ತೋರಿಸಲಾಗಿದೆ. |
10:15 | ಈಗ, ನಮಗೆ ಇದು ಏಕೆ ಬೇಕು? ನಾವು awk ಕಮಾಂಡ್ ನ BEGIN ವಿಭಾಗವನ್ನು ಮಾತ್ರ ಇರಿಸಿದ್ದೇವೆ. |
10:21 | ನಿಜವಾದ ಸನ್ನಿವೇಶಗಳಲ್ಲಿ, ಅಗತ್ಯವಾದ ಔಟ್‌ಪುಟ್ ಅನ್ನು ತೋರಿಸುವ ಮೊದಲು ನಾವು 'ಸಿಸ್ಟಮ್ ದಿನಾಂಕ' ಅನ್ನು ಪ್ರಿಂಟ್ ಮಾಡಲು ಬಯಸಬಹುದು. |
10:28 | ಅಂತಹ ಸಂದರ್ಭದಲ್ಲಿ, ನಾವು ಸಿಸ್ಟಮ್-ಕಮಾಂಡ್ ಗಳನ್ನು awk ಕಮಾಂಡ್ ನಿಂದ ಎಕ್ಸೀಕ್ಯೂಟ್ ಮಾಡಬೇಕಾಗುತ್ತದೆ. |
10:34 | ಇಲ್ಲಿ, ಟೈಮ್ ಸ್ಟ್ಯಾಂಪ್ ಗಳೊಂದಿಗೆ ವ್ಯವಹರಿಸುವ systime(), strftime() ಗಳಂತಹ ಕೆಲವು ಫಂಕ್ಷನ್ ಗಳಿವೆ. |
10:43 | ಈ ಫಂಕ್ಷನ್ ಗಳ ಬಗ್ಗೆ ತಿಳಿಯಲು, ಇಂಟರ್ನೆಟ್ ಅನ್ನುಬ್ರೌಸ್ ಮಾಡಿ. |
10:48 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಸಂಕ್ಷಿಪ್ತವಾಗಿ, |
10:53 | ಈ ಟ್ಯುಟೋರಿಯಲ್ ನಲ್ಲಿ ನಾವು, ವಿವಿಧ ಪ್ರಕಾರದ ಬಿಲ್ಟ್-ಇನ್ ಫಂಕ್ಷನ್ ಗಳಾದ-
Arithmetic ಫಂಕ್ಷನ್ ಗಳು, ಸ್ಟ್ರಿಂಗ್ ಫಂಕ್ಷನ್ ಗಳು, ಇನ್ಪುಟ್/ ಔಟ್ಪುಟ್ ಫಂಕ್ಷನ್ ಗಳು ಹಾಗೂ ಟೈಮ್ ಸ್ಟ್ಯಾಂಪ್ ಫಂಕ್ಷನ್ ಗಳ ಬಗ್ಗೆ ಕಲಿತಿದ್ದೇವೆ. |
11:06 | ಇಲ್ಲಿ ಒಂದು ಅಸೈನ್ಮೆಂಟ್ ಇದೆ -
awkdemo.txt ಫೈಲ್ ಅನ್ನು ಬಳಸಿ, ವಿದ್ಯಾರ್ಥಿಯ ಹೆಸರಿನಲ್ಲಿ ಸಣ್ಣ u ಅನ್ನು ೩ ನೇ ಅಕ್ಷರವಾಗಿ ಹೊಂದಿರುವ, |
11:13 | ಪ್ರತಿಯೊಂದು ರೆಕಾರ್ಡ್ ನ ಕೊನೆಯ ಫೀಲ್ಡ್ ಅನ್ನು ಪ್ರಿಂಟ್ ಮಾಡಲು, ಒಂದು awk ಪ್ರೊಗ್ರಾಂಅನ್ನು ಬರೆಯಿರಿ. |
11:22 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
11:30 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು, “ಸ್ಪೋಕನ್ ಟ್ಯುಟೋರಿಯಲ್” ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
11:43 | ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಂಗೆ ಬರೆಯಿರಿ. |
11:47 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |
11:59 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |