Difference between revisions of "Java/C3/Static-Methods/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
{| border=1
 
||'''Time'''
 
|| '''Narration'''
 
  
|-
 
||00:01
 
|| ಸ್ಟಾಟಿಕ್ ಮೆಥಡ್ ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 
 
|-
 
||00:05
 
|| ಈ ಟ್ಯುಟೋರಿಯಲ್ ನಲ್ಲಿ ನಾವು, ಸ್ಟಾಟಿಕ್ ಮೆಥಡ್ ಗಳು ಎಂದರೇನು, ಸ್ಟಾಟಿಕ್ ಮೆಥಡ್ ಗಳನ್ನು ನಿರೂಪಿಸುವುದು,
 
 
|-
 
||00:12
 
|| ಇನ್ಸ್ಟೆನ್ಸ್ ಮೆಥಡ್ ಗಳು ಮತ್ತು ಸ್ಟಾಟಿಕ್ ಮೆಥಡ್ ಗಳ ನಡುವಿನ ವ್ಯತ್ಯಾಸ ಮತ್ತು ಸ್ಟಾಟಿಕ್ ಮೆಥಡ್ ಗಳನ್ನು ಹೇಗೆ ಬಳಸುವುದು ಎಂಬುದನ್ನು ಕಲಿಯಲಿದ್ದೇವೆ.
 
 
|-
 
||00:20
 
|| ಇಲ್ಲಿ ನಾವು ಉಬಂಟು 14.04, ಜೆ.ಡಿ.ಕೆ 1.7 ಮತ್ತು ಎಕ್ಲಿಪ್ಸ್ 4.3.1 ಬಳಸಲಿದ್ದೇವೆ.
 
 
|-
 
||00:31
 
|| ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು ಎಕ್ಲಿಪ್ಸ್ ಐ.ಡಿ.ಇ ಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು.
 
 
|-
 
||00:38
 
|| ನೀವು ಜಾವಾದಲ್ಲಿ ಇನ್ಸ್ಟೆನ್ಸ್ ವೇರಿಯೇಬಲ್ ಗಳು, ಮೆಥಡ್ ಗಳು ಮತ್ತು ಸ್ಟಾಟಿಕ್ ವೇರಿಯೇಬಲ್ ಗಳ ಜ್ಞಾನವನ್ನು ಹೊಂದಿರಬೇಕು.
 
 
|-
 
||00:45
 
|| ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ ಗೆ ಭೇಟಿ ನೀಡಿ.
 
 
|-
 
||00:50
 
|| ಸ್ಟಾಟಿಕ್ ಮೆಥಡ್ ಎನ್ನುವುದು ಇಡೀ ಕ್ಲಾಸ್ ಗೆ ಸಂಬಂಧಿಸಿದ ಮೆಥಡ್ ಆಗಿದೆ.
 
 
|-
 
||00:56
 
|| ಇದನ್ನು ಕ್ಲಾಸ್ ಮೆಥಡ್ ಎಂದು ಸಹ ಕರೆಯಲಾಗುತ್ತದೆ ಮತ್ತು ಸ್ಟಾಟಿಕ್ ಕೀವರ್ಡ್ ಬಳಸಿ ಘೋಷಿಸಲಾಗುತ್ತದೆ.
 
 
|-
 
||01:02
 
|| ಸ್ಟಾಟಿಕ್ ಮೆಥಡ್ ಗಳನ್ನು ಸಾಮಾನ್ಯವಾಗಿ ಸ್ಟಾಟಿಕ್ ವೇರಿಯೇಬಲ್ ಗಳನ್ನು ನಿರ್ವಹಿಸಲು ಬಳಸಲಾಗುತ್ತದೆ.
 
 
|-
 
||01:07
 
|| ನಾವೀಗ ಎಕ್ಲಿಪ್ಸ್ ನತ್ತ ಸಾಗೋಣ ಮತ್ತು StaticMethodDemo ಎನ್ನುವ ಹೊಸ ಪ್ರಾಜೆಕ್ಟ್ ರಚಿಸೋಣ.
 
 
|-
 
||01:14
 
|| ಈ ಪ್ರಾಜೆಕ್ಟ್ ಒಳಗೆ, ಸ್ಟಾಟಿಕ್ ಮೆಥಡ್ ಗಳ ಬಳಕೆಯನ್ನು ತೋರಿಸಲು ಅಗತ್ಯ ಕ್ಲಾಸುಗಳನ್ನು ರಚಿಸೋಣ.
 
 
|-
 
||01:21
 
|| ನಾವು StudentEnroll ಎನ್ನುವ ಹೊಸ ಕ್ಲಾಸನ್ನು ರಚಿಸಲಿದ್ದೇವೆ.
 
 
|-
 
||01:25
 
|| ಸ್ಟಾಟಿಕ್ ಮೆಥಡ್ ಗಳನ್ನು ಹೇಗೆ ಬಳಸಬಹುದು ಎಂಬುದನ್ನು ಉದಾಹರಣೆಯೊಂದಿಗೆ ನೋಡೋಣ.
 
 
|-
 
||01:30
 
|| ಈ ಉದಾಹರಣೆಯು, ಸ್ಟಾಟಿಕ್ ವೇರಿಯೇಬಲ್ ಟ್ಯುಟೋರಿಯಲ್ ನಲ್ಲಿ ಬಳಸಿದ ಉದಾಹರಣೆಯನ್ನು ಹೋಲುತ್ತದೆ.
 
 
|-
 
||01:37
 
|| ಇಲ್ಲಿ ಮತ್ತೊಮ್ಮೆ ನಾವು StudentEnroll ಕ್ಲಾಸನ್ನು ಪ್ರತಿನಿಧಿಸುತ್ತೇವೆ.
 
 
|-
 
||01:42
 
|| ನೇಮ್ ತ್ತು ಐ.ಡಿ ವೇರಿಯೇಬಲ್ ಗಳನ್ನು ಇನ್ಸ್ಟೆನ್ಸ್ ವೇರಿಯೇಬಲ್ ಗಳಾಗಿ ನಿರ್ವಹಿಸಲಾಗುತ್ತದೆ ಎಂಬುದನ್ನು ನೆನಪಿಸಿ.
 
 
|-
 
||01:48
 
|| ಇಲ್ಲಿ, ಆರ್ಗನೈಸೇಷನ್ ಮತ್ತು ಟೋಟಲ್ ಕೌಂಟ್ ವೇರಿಯೇಬಲ್ ಗಳು ಇಡೀ ಕ್ಲಾಸಿಗೆ ಸಾಮಾನ್ಯವೆನಿಸಿವೆ.
 
 
|-
 
||01:54
 
|| ಹೀಗಾಗಿ ಇವುಗಳನ್ನು ಸ್ಟಾಟಿಕ್ ವೇರಿಯೇಬಲ್ ಗಳಾಗಿ ನೋಡಿಕೊಳ್ಳಲಾಗುತ್ತದೆ.
 
 
|-
 
||01:58
 
|| ಈಗ StudentEnroll class ಅನ್ನು ಪ್ರತಿನಿಧಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
 
 
|-
 
||02:03
 
|| count ಮತ್ತು orgname ಎಂಬ ಎರಡು ಸ್ಟಾಟಿಕ್ ವೇರಿಯೇಬಲ್ ಗಳಿವೆ ಎಂಬುದನ್ನು ಗಮನಿಸಿ.
 
 
|-
 
||02:08
 
|| orgname ಎನ್ನುವುದು ಸ್ಟಾಟಿಕ್ ಕಾನ್ಸ್ಟಂಟ್ ಅಲ್ಲ, ಬದಲಾಗಿ ಸಾಮಾನ್ಯ ಸ್ಟಾಟಿಕ್ ವೇರಿಯೇಬಲ್ ಆಗಿದೆ ಎಂಬುದನ್ನು ಗಮನಿಸಿ.
 
 
|-
 
||02:15
 
|| ಸ್ಟಾಟಿಕ್ ವೇರಿಯೇಬಲ್ orgname ಅನ್ನು “IIT Bombay” ಎಂದು ಇನಿಶಿಯಲೈಸ್ (ಅನುಸ್ಥಾಪನೆ) ಮಾಡಲಾಗುತ್ತದೆ.
 
 
|-
 
||02:21
 
|| ಈಗ Source -> ಮೇಲೆ ಕ್ಲಿಕ್ ಮಾಡಿ ಮತ್ತು Generate Constructor using Fields ಆರಿಸಿ.
 
 
|-
 
||02:27
 
|| ರಚಿಸಿದ ಕೋಡ್ ನಿಂದ super ಕೀವರ್ಡ್ ಅನ್ನು ಡಿಲೀಟ್ ಮಾಡಿ.
 
 
|-
 
||02:32
 
|| ಕನ್ಸ್ಟ್ರಕ್ಟರ್ ಒಳಗೆ, count ++ semicolon ಟೈಪ್ ಮಾಡಿ, ಹೀಗೆ ಅಬ್ಜೆಕ್ಟ್ ಒಂದನ್ನು ರಚಿಸಿದ ಪ್ರತಿ ಸಂದರ್ಭದಲ್ಲಿ ಕೌಂಟ್ ಮೌಲ್ಯವು ಹೆಚ್ಚುತ್ತದೆ.
 
 
|-
 
||02:42
 
|| ಈಗ ನಾವು ವೇರಿಯೇಬಲ್ ಗಳ ಮೌಲ್ಯಗಳನ್ನು ಪ್ರಿಂಟ್ (ಮುದ್ರಣ) ಮಾಡುವುದಕ್ಕಾಗಿ ಈ ಕ್ಲಾಸ್ ಗೆ showData( ) ವಿಧಾನವನ್ನು ಸೇರಿಸಲಿದ್ದೇವೆ.
 
 
|-
 
||02:48
 
|| ಇದಕ್ಕಾಗಿ public void showData( ) ಟೈಪ್ ಮಾಡಿ.
 
 
|-
 
||02:51
 
|| ಐ.ಡಿ, ನೇಮ್ ಮತ್ತು ಆರ್ಗನೈಸೇಶನ್ ನೇಮ್ ಗಳ ಮೌಲ್ಯಗಳನ್ನು ಪ್ರಿಂಟ್ ಮಾಡುವುದ್ಕಕಾಗಿ ಈ ಕೋಡ್ ಅನ್ನು ಆವರಣ ಚಿಹ್ನೆಗಳ ಒಳಗೆ ಟೈಪ್ ಮಾಡಿ.
 
 
|-
 
||02:58
 
|| ನಾವೀಗ ಸ್ಟಾಟಿಕ್ ಮೆಥಡ್ setOrgName ಅನ್ನು ಸೇರಿಸಲಿದ್ದೇವೆ.
 
 
|-
 
||03:03
 
|| ಈ ಕೋಡ್ ಅನ್ನು ಟೈಪ್ ಮಾಡಿ.
 
 
|-
 
||03:05
 
|| ಇಲ್ಲಿ ಪ್ರತಿನಿಧಿಸಿರುವ setOrgName ಮೆಥಡ್, ಸ್ಟಾಟಿಕ್ ವಿಧಾನವಾಗಿದ್ದು ಇದು orgnameನ ಮೌಲ್ಯವನ್ನು ಮಾರ್ಪಡಿಸಬಲ್ಲದು.
 
 
|-
 
||03:13
 
|| ಸ್ಟಾಟಿಕ್ ವೇರಿಯೇಬಲ್ ಗಳನ್ನು ನಿರ್ವಹಿಸಲು ಬಳಸುವ ಯಾವುದೇ ಮೆಥಡ್ ಅನ್ನು ಸ್ಟಾಟಿಕ್ ಮೆಥಡ್ ಆಗಿ ನಿರೂಪಿಸಬಹುದು.
 
 
|-
 
||03:19
 
|| ನಾವೀಗ ಇನ್ಸ್ಟೆನ್ಸ್ ಮೆಥಡ್ ಮತ್ತು ಸ್ಟಾಟಿಕ್ ಮೆಥಡ್ ನಡುವಿನ ವ್ಯತ್ಯಾಸಗಳನ್ನು ನೋಡೋಣ.
 
 
|-
 
||03:25
 
|| ಇನ್ಸ್ಟೆನ್ಸ್ ಮೆಥಡ್ ಗಳು ಸ್ಟಾಟಿಕ್ ವೇರಿಯೇಬಲ್ ಗಳನ್ನು ಆಕ್ಸೆಸ್ ಮಾಡಬಹುದು.
 
 
|-
 
||03:29
 
|| ಆದರೆ ಸ್ಟಾಟಿಕ್ ಮೆಥಡ್ ಗಳು ನೇರವಾಗಿ ಸ್ಟಾಟಿಕ್ ವೇರಿಯೇಬಲ್ ಗಳನ್ನು ಆಕ್ಸೆಸ್ ಮತ್ತು ಮಾರ್ಪಾಡು ಮಾಡಬಹುದು.
 
 
|-
 
||03:35
 
|| ಇನ್ಸ್ಟೆನ್ಸ್ ಮೆಥಡ್ ಗಳನ್ನು ಅಬ್ಜೆಕ್ಟ್ ಮೂಲಕ ಮಾತ್ರ ಇನ್ವೋಕ್ (ಜಾರಿ) ಮಾಡಬಹುದು.
 
 
|-
 
||03:39
 
|| ಆದರೆ ಸ್ಟಾಟಿಕ್ ಮೆಥಡ್ ಅನ್ನು ಅಬ್ಜೆಕ್ಟ್ ರಚಿಸದೆಯೇ ನೇರವಾಗಿ ಇನ್ವೋಕ್ ಮಾಡಬಹುದು.
 
 
|-
 
||03:45
 
|| ಸ್ಟಾಟಿಕ್ ಮೆಥಡ್ ಒಳಗೆ ನಾವು ‘this’ ಮತ್ತು ‘super’ ಕೀವರ್ಡ್ ಬಳಸಲು ಆಗುವುದಿಲ್ಲ.
 
 
|-
 
||03:50
 
|| ಏಕೆಂದರೆ ಈ ಕೀವರ್ಡ್ ಗಳು ನಿರ್ದಿಷ್ಟ ಕ್ಲಾಸ್ ನ ಉದಾಹರಣೆಯನ್ನು ಉಲ್ಲೇಖಿಸುತ್ತವೆ.
 
 
|-
 
||03:56
 
|| ಸ್ಟಾಟಿಕ್ ವಿಚಾರದಲ್ಲಿ ನಾವು ಒಂದು ಕ್ಲಾಸ್ ನ ಉದಾಹರಣೆಯನ್ನು ಉಲ್ಲೇಖಿಸಲಾಗದು.
 
 
|-
 
||04:01
 
|| ನೇರವಾಗಿ ಸ್ಟಾಟಿಕ್ ಮೆಥಡ್ ಒಳಗೆ ಇನ್ಸ್ಟೆನ್ಸ್ ವೇರಿಯೇಬಲ್ ಒಂದನ್ನು ಆಕ್ಸೆಸ್ ಮಾಡಲು ನಾವು ಪ್ರಯತ್ನಿಸಿದರೆ ಏನಾಗುತ್ತದೆ ಎಂಬುದನ್ನು ನಾವೀಗ ನೋಡೋಣ.
 
 
|-
 
||04:09
 
|| id= “newid” semicolon ಎಂದು ಟೈಪ್ ಮಾಡಿ.
 
 
|-
 
||04:13
 
|| ಈಗ ಎಕ್ಲಿಪ್ಸ್ ನಲ್ಲಿ ಎರರ್ (ದೋಷ) ಕಂಡುಬರುತ್ತದೆ.
 
 
|-
 
||04:17
 
|| ಇನ್ಸ್ಟೆನ್ಸ್ ವೇರಿಯೇಬಲ್ ಅನ್ನು ನೇರವಾಗಿ ಸ್ಟಾಟಿಕ್ ಮೆಥಡ್ ಒಳಗೆ ಆಕ್ಸೆಸ್ ಮಾಡಲಾಗದು ಎಂಬುದನ್ನು ಇದು ಸೂಚಿಸುತ್ತದೆ.
 
 
|-
 
||04:23
 
|| ಹೀಗಾಗಿ ಈ ಸಾಲಿನಲ್ಲಿ ಪ್ರತಿಕ್ರಿಯಿಸೋಣ ಮತ್ತು ಮುಂದುವರಿಯೋಣ.
 
 
|-
 
||04:27
 
|| ಈಗ ಇನ್ನೊಂದು ಸ್ಟಾಟಿಕ್ ಮೆಥಡ್ showOrgData ಅನ್ನು ಸೇರಿಸೋಣ.
 
 
|-
 
||04:31
 
|| ಈ ಹೇಳಿಕೆಗಳು orgname ಮತ್ತು count ನ ಮೌಲ್ಯಗಳನ್ನು ಪ್ರಿಂಟ್ ಮಾಡುತ್ತವೆ.
 
 
|-
 
||04:36
 
|| ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ, New-> Class ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ.
 
 
|-
 
||04:44
 
|| ಈ ಕ್ಲಾಸ್ ನ ಒಳಗೆ ನಾವು ಮೇನ್ ಮೆಥಡ್ ಹೊಂದಲಿದ್ದೇವೆ.
 
 
|-
 
||04:48
 
|| ಇದಕ್ಕಾಗಿ main ಎಂದು ಟೈಪ್ ಮಾಡಿ ಮತ್ತು ಮೇನ್ ಮೆಥಡ್ ರಚಿಸಲು Ctrl+space ಒತ್ತಿ.
 
 
|-
 
||04:54
 
|| ವಿದ್ಯಾರ್ಥಿಗಳ ದಾಖಲಾತಿಯನ್ನು ಪ್ರತಿನಿಧಿಸುವುದಕ್ಕಾಗಿ ನಾವು StudentEnroll ಕ್ಲಾಸ್ ನ ಕೆಲವು ಅಬ್ಜೆಕ್ಟ್ ಗಳನ್ನು ನಾವು ರಚಿಸಲಿದ್ದೇವೆ.
 
 
|-
 
||05:01
 
|| ಇದಕ್ಕಾಗಿ s1, s2 ಮತ್ತು s3 ಯ 3 ಅಬ್ಜೆಕ್ಟ್ ಗಳನ್ನು ರಚಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
 
 
|-
 
||05:08
 
|| ಈಗ ದಾಖಲಾತಿ ವಿವರಗಳನ್ನು ಪ್ರಿಂಟ್ ಮಾಡುವುದಕ್ಕಾಗಿ showData ವಿಧಾನವನ್ನು ನಾವು ಇನ್ವೋಕ್ ಮಾಡೋಣ.
 
 
|-
 
||05:12
 
|| s1, s2 ಮತ್ತು s3 ಯಲ್ಲಿ showData ವಿಧಾನವನ್ನು ಇನ್ವೋಕ್ ಮಾಡಲು ಈ ಕೋಡ್ ಅನ್ನು ಟೈಪ್ ಮಾಡಿ.
 
 
|-
 
||05:19
 
|| orgname ಮತ್ತು count ನ ಮೌಲ್ಯಗಳನ್ನು ಪ್ರಿಂಟ್ ಮಾಡುವುದಕ್ಕಾಗಿ showOrgData ಮೆಥಡ್ ಅನ್ನು ನಾವು ಇನ್ವೋಕ್ ಮಾಡೋಣ.
 
 
|-
 
||05:27
 
|| ಇದು ಸ್ಟಾಟಿಕ್ ಮೆಥಡ್ ಆಗಿರುವುದರಿಂದ ಇದರ ಕ್ಲಾಸ್ ಹೆಸರು ಬಳಸಿ ನೇರವಾಗಿ ಇದನ್ನು ನಾವು ಇನ್ವೋಕ್ ಮಾಡಬಹುದು.
 
 
|-
 
||05:31
 
|| ಹೀಗೆ ಮಾಡಲು ಇಲ್ಲಿರುವ ಕೋಡ್ ಅನ್ನು ಟೈಪ್ ಮಾಡಿ.
 
 
|-
 
||05:34
 
|| ನಾವೀಗ Demo ಪ್ರೋಗ್ರಾಂ ಅನ್ನು ರನ್ ಮಾಡೋಣ.
 
 
|-
 
||05:37
 
|| s1 ಗೆ ಅನುರೂಪವಾದ, ಅಂದರೆ IT101, ADIL ಮತ್ತು IIT BOMBAY ಮುಂತಾದ ವೇರಿಯೇಬಲ್ ಗಳ ಮೌಲ್ಯಗಳನ್ನು ಪ್ರಿಂಟ್ ಆಗುತ್ತಿರುವುದನ್ನು ನಾವು ನೋಡಬಹುದು.
 
 
 
|-
 
||05:47
 
|| ಇದೇ ರೀತಿ s2 ಮತ್ತು s3 ಗೆ ಅನುರೂಪವಾದ ಮೌಲ್ಯಗಳು ಸಹ ಪ್ರಿಂಟ್ ಆಗುತ್ತಿವೆ.
 
 
|-
 
||05:53
 
|| orgname ಅಂದರೆ IIT BOMBAY ಯ ಮೌಲ್ಯಗಳು s1, s2 ಮತ್ತು s3 ಗೆ ಸಾಮಾನ್ಯವಾಗಿವೆ ಎಂಬುದನ್ನು ಗಮನಿಸಿ.
 
 
|-
 
||06:02
 
|| orgname ಮತ್ತು count ಗಳನ್ನು ಪ್ರತ್ಯೇಕವಾಗಿ ಸ್ಟಾಟಿಕ್ ಮೆಥಡ್ static method showOrgData ನಿಂದ ಪ್ರಿಂಟ್ ಮಾಡಲಾಗುತ್ತದೆ.
 
 
|-
 
||06:08
 
|| ಸಂಸ್ಥೆಯ ಹೆಸರನ್ನು IIT Bombay ಎಂದು ಪ್ರಿಂಟ್ ಮಾಡಲಾಗುತ್ತದೆ ಎಂಬುದನ್ನು ಗಮನಿಸಿ.
 
 
|-
 
||06:13
 
|| ನಾವು ಈಗಾಗಲೇ 3 ಅಬ್ಜೆಕ್ಟ್ ಗಳನ್ನು ರಚಿಸಿರುವುದರಿಂದ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯ ಮೌಲ್ಯವನ್ನು 3 ಆಗಿ ಪ್ರಿಂಟ್ ಮಾಡಲಾಗುತ್ತದೆ.
 
 
|-
 
||06:21
 
|| ಸ್ಟಾಟಿಕ್ ಮೆಥಡ್ ಅನ್ನು ನೇರವಾಗಿ ಕ್ಲಾಸ್ ಹೆಸರಿನಿಂದಲೇ ಇನ್ವೋಕ್ ಮಾಡಬಹುದು.
 
 
 
|-
 
||06:26
 
|| ನಾವೀಗ ಸ್ಟಾಟಿಕ್ ಮೆಥಡ್ setOrgName ಅನ್ನು ಇನ್ವೋಕ್ ಮಾಡೋಣ.
 
 
|-
 
||06:30
 
|| ನಾವು ಸಂಸ್ಥೆಯ ಹೆಸರನ್ನು  “IIT Bombay” ಯಿಂದ “IIT Mumbai” ಆಗಿ ಬದಲಾಯಿಸಲಿದ್ದೇವೆ.
 
 
|-
 
||06:36
 
|| ಇದಕ್ಕಾಗಿ ಈ ಕೋಡ್ ಅನ್ನು ಟೈಪ್ ಮಾಡಿ.
 
 
|-
 
||06:38
 
|| ನಾವೀಗ ದಾಖಲಾತಿ ವಿವರಗಳನ್ನು ಪ್ರಿಂಟ್ ಮಾಡುವುದಕ್ಕಾಗಿ  s1, s2 ಮತ್ತು s3 ಮೇಲೆ showData ವಿಧಾನವನ್ನು ಇನ್ನೊಮ್ಮೆ ಇನ್ವೋಕ್ ಮಾಡೋಣ.
 
 
|-
 
||06:47
 
|| ಇದಕ್ಕಾಗಿ ಇಲ್ಲಿರುವ ಕೋಡ್ ಅನ್ನು ಇನ್ನೊಮ್ಮೆ ಟೈಪ್ ಮಾಡಿ.
 
 
|-
 
||06:50
 
|| ಮತ್ತೊಮ್ಮೆ, orgname ಮತ್ತು count ಮೌಲ್ಯಗಳನ್ನು ಪ್ರಿಂಟ್ ಮಾಡುವುದಕ್ಕಾಗಿ showOrgData ವಿಧಾನವನ್ನು ಇನ್ವೋಕ್ ಮಾಡಿ.
 
 
 
|-
 
||06:58
 
|| ಹೀಗೆ ಮಾಡಲು ಈ ಕೋಡ್ ಟೈಪ್ ಮಾಡಿ.
 
 
|-
 
||07:00
 
|| ಈಗ ಇನ್ನೊಮ್ಮೆ Demo ಪ್ರೋಗ್ರಾಂ ರನ್ ಮಾಡಿ.
 
 
|-
 
||07:03
 
|| ಸಂಸ್ಥೆಯ ಹೆಸರು  “IIT Mumbai” ಗೆ ಬದಲಾಗಿರುವುದನ್ನು ನಾವು ನೋಡಬಹುದು.
 
 
|-
 
||07:08
 
|| ಈಗ ಸ್ಲೈಡ್ ಗಳತ್ತ ಸಾಗೋಣ.
 
 
|-
 
||07:11
 
|| ಅಬ್ಜೆಕ್ಟ್ ರೆಫೆರೆನ್ಸ್ ಗಳನ್ನು ಸ್ಟಾಟಿಕ್ ಮೆಥಡ್ ಗೆ ಪಾಸ್ ಮಾಡಬಹುದು.
 
 
|-
 
||07:15
 
|| ಈ ರೀತಿ ಸ್ಟಾಟಿಕ್ ಮೆಥಡ್ ಒಂದು ಆ ನಿರ್ದಿಷ್ಟ ಅಬ್ಜೆಕ್ಟ್ನ ಇನ್ಸ್ಟೆನ್ಸ್ ವೇರಿಯೇಬಲ್ಗಳನ್ನು ಆಕ್ಸೆಸ್ ಮಾಡಬಹುದು.
 
 
 
|-
 
||07:22
 
|| ನಾವಿದನ್ನು ನಮ್ಮ ಕೋಡ್ನಲ್ಲಿ ಪ್ರಯತ್ನಿಸೋಣ. ಎಕ್ಲಿಪ್ಸ್ಗೆ ಸ್ವಿಚ್ ಮಾಡಿ ಮತ್ತು StudentEnroll ಕ್ಲಾಸಿಗೆ ಹೋಗಿ.
 
 
|-
 
||07:30
 
|| ಈಗ setOrgName ಮೆಥಡ್ ನಲ್ಲಿ, ಇನ್ನೊಂದು ಆರ್ಗ್ಯುಮೆಂಟ್ ಅನ್ನು StudentEnroll ಕ್ಲಾಸಿನ ಅಬ್ಜೆಕ್ಟ್ ಆಗಿ ಪಾಸ್ ಮಾಡಿ.
 
 
|-
 
||07:38
 
|| ಹೀಗೆ, String org ನಂತರ ಕೊಮಾ StudentEnroll s ಎಂದು ಟೈಪ್ ಮಾಡಿ.
 
 
|-
 
||07:45
 
|| ಈಗ, ಈ ಮೆಥಡ್ ಒಳಗೆ, id = "newid" ಅನ್ಕಮೆಂಟ್ ಮಾಡಿ.
 
 
|-
 
||07:50
 
|| ಮತ್ತು, id ಬದಲಿಗೆ s.id ಎಂದು ಟೈಪ್ ಮಾಡಿ.
 
 
|-
 
||07:54
 
|| ಈಗ Demo ಕ್ಲಾಸಿಗೆ ಹೋಗಿ.
 
 
 
|-
 
||07:56
 
|| ಜೊತೆಗೆ ಅನ್ನು StudentEnroll object s1 ಪಾಸ್ ಮಾಡುವ ಮೂಲಕ setOrgName ಮೆಥಡ್ ಗೆ ಫಂಕ್ಷನ್ ಕಾಲ್ ಅನ್ನು ಮಾರ್ಪಾಡು ಮಾಡೋಣ.
 
 
|-
 
||08:05
 
|| ಇಲ್ಲಿ, “IIT Mumbai” ನಂತರ ಕೊಮಾ s1 ಎಂದು ಟೈಪ್ ಮಾಡಿ.
 
 
|-
 
||08:10
 
|| ಈಗ Demo ಪ್ರೋಗ್ರಾಂ ಅನ್ನು ಮತ್ತೊಮ್ಮೆ ರನ್ ಮಾಡಿ.
 
 
|-
 
||08:12
 
|| ಇಲ್ಲಿ s1ಗೆ idಯ ಮೌಲ್ಯ ಗೆ ಬದಲಾಗಿರುವುದನ್ನು ನಾವು ನೋಡಬಹುದು.
 
 
|-
 
||08:19
 
||ಈಗ ಸಂಕ್ಷೇಪಿಸೋಣ. ಈ ಟ್ಯುಟೋರಿಯಲ್ನಲ್ಲಿ ನಾವು,
 
 
|-
 
||08:24
 
|| ಸ್ಟಾಟಿಕ್ ಮೆಥಡ್ ಅಂದರೇನು ಮತ್ತು ಯಾವಾಗ ಇದನ್ನು ಬಳಸಲಾಗುತ್ತದೆ,
 
 
 
|-
 
||08:28
 
|| ಇನ್ಸ್ಟೆನ್ಸ್ ಮೆಥಡ್ ಗಳು ಮತ್ತು ಸ್ಟಾಟಿಕ್ ಮೆಥಡ್ ಗಳ ನಡುವಿನ ವ್ಯತ್ಯಾಸ ಹೇಗೆ ಗುರುತಿಸುವುದು ಮತ್ತು,
 
 
|-
 
||08:33
 
|| ಸ್ಟಾಟಿಕ್ ಮೆಥಡ್ ಗಳನ್ನು ಹೇಗೆ ರಚಿಸುವುದು ಮತ್ತು ಇನ್ವೋಕ್ ಮಾಡುವುದು ಎಂಬುದನ್ನು ಕಲಿತೆವು.
 
 
|-
 
||08:37
 
|| ಈ ಅಸೈನ್ಮೆಂಟ್, ಸ್ಟಾಟಿಕ್ ವೇರಿಯೇಬಲ್ ಅಸೈನ್ಮೆಂಟ್ನ ಮುಂದುವರಿಕೆಯಾಗಿದೆ.
 
 
|-
 
||08:42
 
|| ನೀವು ಸ್ಟಾಟಿಕ್ ವೇರಿಯೇಬಲ್ ಅಸೈನ್ಮೆಂಟ್ ಅನ್ನು ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿ.
 
 
|-
 
||08:47
 
|| ನಾವು ಮಾರ್ಪಾಡುಗಳನ್ನು ಮಾತ್ರ ಇಲ್ಲಿ ಎತ್ತಿ ತೋರಿಸಲಿದ್ದೇವೆ.
 
 
|-
 
||08:50
 
|| ಇಲ್ಲಿ ನಾವು “status” ಅನ್ನು ಪ್ರತಿನಿಧಿಸಲು ಮಾರ್ಪಾಡನ್ನು ಹೊಂದಿದ್ದೇವೆ.
 
 
 
|-
 
||08:55
 
|| ಕಾರು ಸರ್ವಿಸ್ಗಾಗಿ “in” ಆಗಿದೆಯೇ ಅಥವಾ ಸರ್ವಿಸ್ನ ನಂತರ “out” ಆಗಿದೆಯೇ ಎಂಬುದನ್ನು ಸೂಚಿಸಲು ಇದನ್ನು ಬಳಸಲಾಗುತ್ತದೆ.
 
 
|-
 
||09:01
 
|| ಅಲ್ಲದೆ No of cars out after Service ಪ್ರತಿನಿಧಿಸಲು ನಾವು ಇನ್ನೊಂದು ಮಾರ್ಪಾಡನ್ನು ಸಹ ಹೊಂದಿದ್ದೇವೆ.
 
 
|-
 
||09:08
 
|| ಸ್ಟೇಟಸ್ ಅನ್ನು ”out” ಗೆ ಪರಿಷ್ಕರಿಸುವ ಮೆಥಡ್ ಸರ್ವಿಸ್( Car c) ಅನ್ನು ನಿರೂಪಿಸಿ.
 
 
|-
 
||09:13
 
|| ಇದೇ ರೀತಿ ಇದು ಸರ್ವಿಸ್ಗಾಗಿ
 
 
|-
 
||09:17
 
|| No of Cars in ಮತ್ತು ಸರ್ವಿಸ್ನ ನಂತರ No of Cars out ನ ಮೌಲ್ಯಗಳನ್ನು ಮಾರ್ಪಾಡು ಮಾಡುತ್ತದೆ.
 
 
|-
 
||09:21
 
|| ಅಲ್ಲದೆ ಕಾರಿನ ಎಲ್ಲಾ ವಿವರಗಳನ್ನು ಪ್ರಿಂಟ್ ಮಾಡಲು show( ) ವಿಧಾನವನ್ನು ನಿರೂಪಿಸಿ.
 
 
 
|-
 
||09:26
 
|| ಮೊದಲಿನಂತೆಯೇ, ನಾವು ಇದನ್ನು ಪಟ್ಟಿ ಮಾಡಿರುವಂತೆಯೇ ನಿರ್ವಹಿಸಬೇಕು.
 
 
|-
 
||09:30
 
|| ಅಗತ್ಯ ಬಿದ್ದಂತೆ, ಸ್ಟಾಟಿಕ್ ಮೆಥಡ್ ಅನ್ನು ನಾವು ಗುರುತಿಸಬೇಕು ಮತ್ತು ನಿರೂಪಿಸಬೇಕು ಎಂಬುದನ್ನು ಗಮನಿಸಿ.
 
 
|-
 
||09:35
 
|| ಇದರೊಂದಿಗೆ ಡೆಮೋ ಕ್ಲಾಸ್ ಒಂದನ್ನು ರಚಿಸಿ.
 
 
|-
 
||09:38
 
|| ಮೇನ್ ಮೆಥಡ್ ಒಳಗೆ, CarService ನ ಕೆಲವು ಅಬ್ಜೆಕ್ಟ್ಗಳನ್ನು ರಚಿಸಿ.
 
 
|-
 
||09:43
 
|| ಇವುಗಳಲ್ಲಿ ಕೆಲವುಗಳ ಮೇಲೆ service( ) ಮೆಥಡ್ ಅನ್ನು ಇನ್ವೋಕ್ ಮಾಡಿ.
 
 
|-
 
||09:47
 
|| ಎಲ್ಲಾ ಅಬ್ಜೆಕ್ಟ್ಗಳನ್ನು ಬಳಸಿ show( ) ಮೆಥಡ್ಅನ್ನು ಇನ್ವೋಕ್ ಮಾಡಿ ಮತ್ತು ಫಲಿತಾಂಶವನ್ನು ದೃಢೀಕರಿಸಿ.
 
 
|-
 
||09:52
 
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ.
 
 
|-
 
||09:57
 
|| ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
 
 
|-
 
||09:59
 
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
 
 
|-
 
||10:08
 
|| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
 
 
|-
 
||10:11
 
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
 
 
|-
 
||10:18
 
|| ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
 
 
|-
 
||10:22
 
|| ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.
 
|-
 
||10:30
 
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
ಧನ್ಯವಾದಗಳು.
 
|-
 

Revision as of 12:08, 18 May 2020

Contributors and Content Editors

Sandhya.np14