Java/C3/Static-Methods/Kannada

From Script | Spoken-Tutorial
Jump to: navigation, search
Time Narration
00:01 Static method ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು:

static ಮೆಥಡ್ ಗಳು ಎಂದರೇನು, static ಮೆಥಡ್ ಗಳನ್ನು ನಿರೂಪಿಸುವುದು,

00:12 instance ಮೆಥಡ್ ಗಳು ಹಾಗೂ static ಮೆಥಡ್ ಗಳ ನಡುವಿನ ವ್ಯತ್ಯಾಸ ಮತ್ತು static ಮೆಥಡ್ ಗಳನ್ನು ಹೇಗೆ ಬಳಸುವುದು ಇವುಗಳನ್ನು ಕಲಿಯಲಿದ್ದೇವೆ.
00:20 ಇಲ್ಲಿ ನಾವು ಉಬಂಟು 14.04, JDK 1 .7 ಮತ್ತು Eclipse 4.3.1 ಇವುಗಳನ್ನು ಬಳಸುತ್ತೇವೆ.
00:31 ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು Eclipse IDE ಯ ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು.
00:38 ಜಾವಾದಲ್ಲಿ instance ವೇರಿಯೇಬಲ್ ಗಳು, ಮೆಥಡ್ ಗಳು ಮತ್ತು static ವೇರಿಯೇಬಲ್ ಗಳ ಬಗ್ಗೆ ಸಹ ತಿಳಿದಿರಬೇಕು.
00:45 ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ ಗೆ ಭೇಟಿ ನೀಡಿ.
00:50 static ಮೆಥಡ್, ಇಡೀ ಕ್ಲಾಸ್ ಗೆ ಸಂಬಂಧಿಸಿದ ಮೆಥಡ್ ಆಗಿದೆ.
00:56 ಇದನ್ನು class ಮೆಥಡ್ ಎಂದು ಸಹ ಕರೆಯಲಾಗುತ್ತದೆ ಮತ್ತು static ಕೀವರ್ಡ್ ಬಳಸಿ ಡಿಕ್ಲೇರ್ ಮಾಡಲಾಗುತ್ತದೆ.
01:02 static ಮೆಥಡ್ ಗಳನ್ನು ಸಾಮಾನ್ಯವಾಗಿ static ವೇರಿಯೇಬಲ್ ಗಳನ್ನು ನಿರ್ವಹಿಸಲು ಬಳಸಲಾಗುತ್ತದೆ.
01:07 ನಾವೀಗ Eclipse ಗೆ ಬದಲಾಯಿಸೋಣ ಮತ್ತು StaticMethodDemo ಎನ್ನುವ ಹೊಸ ಪ್ರಾಜೆಕ್ಟ್ ರಚಿಸೋಣ.
01:14 ಈ ಪ್ರಾಜೆಕ್ಟ್ ನ ಒಳಗೆ, Static ಮೆಥಡ್ ಗಳ ಬಳಕೆಯನ್ನು ತೋರಿಸಲು ಅಗತ್ಯವಿರುವ ಕ್ಲಾಸುಗಳನ್ನು ರಚಿಸೋಣ.
01:21 ನಾವು StudentEnroll ಎನ್ನುವ ಹೊಸ ಕ್ಲಾಸನ್ನು ರಚಿಸಲಿದ್ದೇವೆ.
01:25 static ಮೆಥಡ್ ಗಳನ್ನು ಬಳಸುವ ಬಗೆಯನ್ನು ಒಂದು ಉದಾಹರಣೆಯೊಂದಿಗೆ ನೋಡೋಣ.
01:30 ಈ ಉದಾಹರಣೆಯು, Static Variable ಎಂಬ ಟ್ಯುಟೋರಿಯಲ್ ನಲ್ಲಿ ಬಳಸಿದ ಉದಾಹರಣೆಯ ಹಾಗೇ ಇದೆ.
01:37 ಇಲ್ಲಿ ಮತ್ತೊಮ್ಮೆ ನಾವು StudentEnroll ಕ್ಲಾಸನ್ನು ಪ್ರತಿನಿಧಿಸುತ್ತೇವೆ.
01:42 ನೆನಪಿಸಿಕೊಳ್ಳಿ, ಇಲ್ಲಿ name ಮತ್ತು id ಗಳನ್ನು ಇನ್ಸ್ಟನ್ಸ್ (instance) ವೇರಿಯೇಬಲ್ ಗಳಾಗಿ ನಿರ್ವಹಿಸಲಾಗುತ್ತದೆ.
01:48 ಇಲ್ಲಿ, organization ಮತ್ತು total count ವೇರಿಯೇಬಲ್ ಗಳು ಇಡೀ ಕ್ಲಾಸಿಗೆ ಸಂಬಂಧಿಸಿವೆ.
01:54 ಹೀಗಾಗಿ ಇವು static ವೇರಿಯೇಬಲ್ ಗಳಾಗುತ್ತವೆ.
01:58 ಈಗ StudentEnroll ಕ್ಲಾಸ್ ಅನ್ನು ಪ್ರತಿನಿಧಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
02:03 ಇಲ್ಲಿ count ಮತ್ತು orgname ಈ ಎರಡೂ static ವೇರಿಯೇಬಲ್ ಗಳಾಗಿವೆ.
02:08 ಮತ್ತು orgname, static ಕಾನ್ಸ್ಟಂಟ್ ಅಲ್ಲ. ಇದೊಂದು ಸಾಮಾನ್ಯ static ವೇರಿಯೇಬಲ್ ಆಗಿದೆ ಎಂದು ಗಮನಿಸಿ.
02:15 static ವೇರಿಯೇಬಲ್ orgname ಅನ್ನು “IIT Bombay” ಎಂದು ಇನಿಶಿಯಲೈಸ್ ಮಾಡಲಾಗುತ್ತದೆ.
02:21 ಈಗ Source ಮೇಲೆ ಕ್ಲಿಕ್ ಮಾಡಿ ಮತ್ತು Generate Constructor using Fields ಆರಿಸಿಕೊಳ್ಳಿ.
02:27 ಇಲ್ಲಿ ತಯಾರಾದ ಕೋಡ್ ನಿಂದ super ಕೀವರ್ಡ್ ಅನ್ನು ಡಿಲೀಟ್ ಮಾಡಿ.
02:32 constructor ಒಳಗೆ, count ++ semicolon ಟೈಪ್ ಮಾಡಿ. ಇಲ್ಲಿ, ಪ್ರತಿಸಲ ಅಬ್ಜೆಕ್ಟ್ ಒಂದನ್ನು ರಚಿಸಿದಾಗ ಕೌಂಟ್ ವ್ಯಾಲ್ಯೂ ಹೆಚ್ಚುತ್ತದೆ.
02:42 ಈಗ ನಾವು ವೇರಿಯೇಬಲ್ ಗಳ ವ್ಯಾಲ್ಯೂ ಗಳನ್ನು ಪ್ರಿಂಟ್ ಮಾಡಲು ಈ ಕ್ಲಾಸ್ ಗೆ showData( ) ಮೆಥಡ್ ಅನ್ನು ಸೇರಿಸುವೆವು.
02:48 ಇದಕ್ಕಾಗಿ public void showData( ) ಎಂದು ಟೈಪ್ ಮಾಡಿ.
02:51 ID, name ಮತ್ತು organisation name ಗಳ ವ್ಯಾಲ್ಯೂ ಗಳನ್ನು ಪ್ರಿಂಟ್ ಮಾಡಲು, ಈಕೆಳಗೆ ತೋರಿಸಿದ ಕೋಡ್ ಅನ್ನು ಬ್ರ್ಯಾಕೆಟ್ಸ್ ಒಳಗೆ ಟೈಪ್ ಮಾಡಿ.
02:58 ನಾವೀಗ setOrgName ಎಂಬ static ಮೆಥಡ್ ಅನ್ನು ಸೇರಿಸುವೆವು.
03:03 ಈಕೆಳಗಿನ ಕೋಡ್ ಅನ್ನು ಟೈಪ್ ಮಾಡಿ.
03:05 ಇಲ್ಲಿ, setOrgName() ಮೆಥಡ್, static ಮೆಥಡ್ ಆಗಿದ್ದು, orgname ನ ವ್ಯಾಲ್ಯೂವನ್ನು ಇದು ಬದಲಾಯಿಸಬಲ್ಲದು.
03:13 static ವೇರಿಯೇಬಲ್ ಗಳನ್ನು ನಿರ್ವಹಿಸಲು ಬಳಸುವ ಯಾವುದೇ ಮೆಥಡ್ ಅನ್ನು static ಮೆಥಡ್ ಎನ್ನಬಹುದು.
03:19 ನಾವೀಗ instance ಮೆಥಡ್ ಮತ್ತು static ಮೆಥಡ್ ನಡುವಿನ ವ್ಯತ್ಯಾಸಗಳನ್ನು ನೋಡೋಣ.
03:25 instance ಮೆಥಡ್ ಗಳು static ವೇರಿಯೇಬಲ್ ಗಳನ್ನು ಆಕ್ಸೆಸ್ ಮಾಡಬಹುದು.
03:29 ಆದರೆ static ಮೆಥಡ್ ಗಳು static ವೇರಿಯೇಬಲ್ ಗಳನ್ನು ಮಾತ್ರ ನೇರವಾಗಿ ಆಕ್ಸೆಸ್ ಮತ್ತು ಮಾರ್ಪಾಡು ಮಾಡಬಹುದು.
03:35 instance ಮೆಥಡ್ ಗಳನ್ನು ಅಬ್ಜೆಕ್ಟ್ ಮೂಲಕ ಮಾತ್ರ ಇನ್ವೋಕ್ ಮಾಡಬಹುದು.
03:39 ಆದರೆ static ಮೆಥಡ್ ಅನ್ನು ಅಬ್ಜೆಕ್ಟ್ ರಚಿಸದೆಯೇ ನೇರವಾಗಿ ಇನ್ವೋಕ್ ಮಾಡಬಹುದು.
03:45 static ಮೆಥಡ್ ಒಳಗೆ ನಾವು ‘this’ ಮತ್ತು ‘super’ ಕೀವರ್ಡ್ ಬಳಸಲು ಆಗುವುದಿಲ್ಲ.
03:50 ಏಕೆಂದರೆ ಈ ಕೀವರ್ಡ್ ಗಳು ನಿರ್ದಿಷ್ಟ ಕ್ಲಾಸ್ ನ ಉದಾಹರಣೆಯನ್ನು ಸೂಚಿಸುತ್ತವೆ.
03:56 static ನಲ್ಲಿ, ನಾವು ಒಂದು ಕ್ಲಾಸ್ ನ ಇನ್ಸ್ಟೆನ್ಸ್ ಗಳನ್ನು ಸೂಚಿಸಲು ಸಾಧ್ಯವಿಲ್ಲ.
04:01 static ಮೆಥಡ್ ನಲ್ಲಿ, ನೇರವಾಗಿ ನಾವು instance ವೇರಿಯೇಬಲ್ ಒಂದನ್ನು ಆಕ್ಸೆಸ್ ಮಾಡಲು ಪ್ರಯತ್ನಿಸಿದರೆ ಏನಾಗುತ್ತದೆ ಎಂದು ನೋಡೋಣ.
04:09 id= “newid” semicolon ಎಂದು ಟೈಪ್ ಮಾಡಿ.
04:13 ಈಗ Eclipse ನಲ್ಲಿ ಎರರ್ ಕಂಡುಬರುತ್ತದೆ.
04:17 instance ವೇರಿಯೇಬಲ್ ಅನ್ನು ನೇರವಾಗಿ static ಮೆಥಡ್ ಒಳಗೆ ಆಕ್ಸೆಸ್ ಮಾಡಲಾಗದು ಎಂದು ಇದು ಹೇಳುತ್ತದೆ.
04:23 ಆದ್ದರಿಂದ, ಈ ಸಾಲನ್ನು ಕಾಮೆಂಟ್ ಮಾಡಿ ಮುಂದುವರಿಯೋಣ.
04:27 ಈಗ ಇನ್ನೊಂದು static ಮೆಥಡ್, showOrgData ಅನ್ನು ಸೇರಿಸೋಣ.
04:31 ಈ ಸ್ಟೇಟ್ಮೆಂಟ್ ಗಳು orgname ಮತ್ತು count ನ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡುತ್ತವೆ.
04:36 ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ, New-> Class ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ.
04:44 ಈ ಕ್ಲಾಸ್ ನ ಒಳಗೆ main() ಮೆಥಡ್ ಇರುವುದು.
04:48 ಇದಕ್ಕಾಗಿ main ಎಂದು ಟೈಪ್ ಮಾಡಿ ಮತ್ತು main ಮೆಥಡ್ ರಚಿಸಲು Ctrl+space ಒತ್ತಿ.
04:54 ವಿದ್ಯಾರ್ಥಿಗಳ ದಾಖಲಾತಿಯನ್ನು ತೋರಿಸಲು, StudentEnroll ಕ್ಲಾಸ್ ನ ಕೆಲವು ಅಬ್ಜೆಕ್ಟ್ ಗಳನ್ನು ನಾವು ರಚಿಸಲಿದ್ದೇವೆ.
05:01 ಇದಕ್ಕಾಗಿ s1, s2 ಮತ್ತು s3 ಎಂಬ 3 ಅಬ್ಜೆಕ್ಟ್ ಗಳನ್ನು ರಚಿಸಲು, ಈ ಕೋಡ್ ಅನ್ನು ಟೈಪ್ ಮಾಡಿ.
05:08 ಈಗ ದಾಖಲಾತಿ ವಿವರಗಳನ್ನು ಪ್ರಿಂಟ್ ಮಾಡಲು showData() ಮೆಥಡ್ ಅನ್ನು ನಾವು ಇನ್ವೋಕ್ ಮಾಡೋಣ.
05:12 s1, s2 ಮತ್ತು s3 ಗಳಲ್ಲಿ showData() ಮೆಥಡ್ ಅನ್ನು ಇನ್ವೋಕ್ ಮಾಡಲು, ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ.
05:19 orgname ಮತ್ತು count ನ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು, showOrgData() ಮೆಥಡ್ ಅನ್ನು ಇನ್ವೋಕ್ ಮಾಡೋಣ.
05:27 ಇದು static ಮೆಥಡ್ ಆಗಿರುವುದರಿಂದ, ಇದರ ಕ್ಲಾಸ್ ಹೆಸರನ್ನು ಬಳಸಿ ನೇರವಾಗಿ ಇದನ್ನು ಇನ್ವೋಕ್ ಮಾಡಬಹುದು.
05:31 ಹೀಗೆ ಮಾಡಲು ಇಲ್ಲಿರುವ ಕೋಡ್ ಅನ್ನು ಟೈಪ್ ಮಾಡಿ.
05:34 ನಾವೀಗ Demo ಪ್ರೋಗ್ರಾಂ ಅನ್ನು ರನ್ ಮಾಡೋಣ.
05:37 s1 ಗೆ ಸಂಬಂಧಿತ ವೇರಿಯೇಬಲ್ ಗಳ ವ್ಯಾಲ್ಯೂಗಳು, ಅಂದರೆ IT101, ADIL ಮತ್ತು IIT BOMBAY ಎಂದು ಪ್ರಿಂಟ್ ಆಗಿವೆ.
05:47 ಇದೇ ರೀತಿ s2 ಮತ್ತು s3 ಗೆ ಸಂಬಂಧಿತ ವ್ಯಾಲ್ಯೂಗಳು ಸಹ ಪ್ರಿಂಟ್ ಆಗಿವೆ.
05:53 orgname ನ ವ್ಯಾಲ್ಯೂ IIT BOMBAY, s1, s2 ಮತ್ತು s3 ಗೆ ಒಂದೇ ಆಗಿರುವುದನ್ನು ಗಮನಿಸಿ.
06:02 orgname ಮತ್ತು count ಗಳನ್ನು ಪ್ರತ್ಯೇಕವಾಗಿ static ಮೆಥಡ್ showOrgData() ನಿಂದ ಪ್ರಿಂಟ್ ಮಾಡಲಾಗುತ್ತದೆ.
06:08 ಸಂಸ್ಥೆಯ ಹೆಸರನ್ನು IIT Bombay ಎಂದು ಪ್ರಿಂಟ್ ಮಾಡಲಾಗುತ್ತದೆ.
06:13 ನಾವು 3 ಅಬ್ಜೆಕ್ಟ್ ಗಳನ್ನು ರಚಿಸಿದ್ದರಿಂದ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯು 3 ಎಂದು ಪ್ರಿಂಟ್ ಮಾಡಲಾಗುತ್ತದೆ.
06:21 static ಮೆಥಡ್ ಅನ್ನು ನೇರವಾಗಿ ಕ್ಲಾಸ್ ಹೆಸರಿನಿಂದಲೇ ಇನ್ವೋಕ್ ಮಾಡಬಹುದು.
06:26 ನಾವೀಗ static ಮೆಥಡ್ setOrgName() ಅನ್ನು ಇನ್ವೋಕ್ ಮಾಡೋಣ.
06:30 ನಾವು ಸಂಸ್ಥೆಯ ಹೆಸರನ್ನು “IIT Bombay” ಯಿಂದ “IIT Mumbai” ಆಗಿ ಬದಲಾಯಿಸಲಿದ್ದೇವೆ.
06:36 ಇದಕ್ಕಾಗಿ ಈ ಕೋಡ್ ಅನ್ನು ಟೈಪ್ ಮಾಡಿ.
06:38 ನಾವೀಗ ದಾಖಲಾತಿ ವಿವರಗಳನ್ನು ಪ್ರಿಂಟ್ ಮಾಡಲು, s1, s2 ಮತ್ತು s3 ಗಳಿಗೆ showData() ಮೆಥಡ್ ಅನ್ನು ಇನ್ನೊಮ್ಮೆ ಇನ್ವೋಕ್ ಮಾಡೋಣ.
06:47 ಇದಕ್ಕಾಗಿ ಇಲ್ಲಿರುವ ಕೋಡ್ ಅನ್ನು ಇನ್ನೊಮ್ಮೆ ಟೈಪ್ ಮಾಡಿ.
06:50 ಮತ್ತೊಮ್ಮೆ, orgname ಮತ್ತು count ಮೌಲ್ಯಗಳನ್ನು ಪ್ರಿಂಟ್ ಮಾಡಲು, showOrgData ಮೆಥಡ್ ಅನ್ನು ಇನ್ವೋಕ್ ಮಾಡಿ.
06:58 ಹೀಗೆ ಮಾಡಲು ಈ ಕೋಡ್ ಟೈಪ್ ಮಾಡಿ.
07:00 ಈಗ ಇನ್ನೊಮ್ಮೆ Demo ಪ್ರೋಗ್ರಾಂ ರನ್ ಮಾಡಿ.
07:03 ನೋಡಿ, ಈಗ ಸಂಸ್ಥೆಯ ಹೆಸರು “IIT Mumbai” ಆಗಿ ಬದಲಾಗಿದೆ.
07:08 ಈಗ ಸ್ಲೈಡ್ ಗಳತ್ತ ಸಾಗೋಣ.
07:11 ಅಬ್ಜೆಕ್ಟ್ ರೆಫೆರೆನ್ಸ್ ಗಳನ್ನು static ಮೆಥಡ್ ಗೆ ಪಾಸ್ ಮಾಡಬಹುದು.
07:15 ಈ ರೀತಿ static ಮೆಥಡ್, ಆ ನಿರ್ದಿಷ್ಟ ಅಬ್ಜೆಕ್ಟ್ನ instance ವೇರಿಯೇಬಲ್ಗಳನ್ನು ಆಕ್ಸೆಸ್ ಮಾಡಬಹುದು.
07:22 ನಾವಿದನ್ನು ನಮ್ಮ ಕೋಡ್ನಲ್ಲಿ ಪ್ರಯತ್ನಿಸೋಣ. Eclipse ಗೆ ಬದಲಾಯಿಸಿ, StudentEnroll ಕ್ಲಾಸ್ ಗೆ ಹೋಗಿ.
07:30 ಈಗ setOrgName() ಮೆಥಡ್ ನಲ್ಲಿ, ಇನ್ನೊಂದು ಆರ್ಗ್ಯುಮೆಂಟ್ ಅನ್ನು StudentEnroll ಕ್ಲಾಸ್ ನ ಅಬ್ಜೆಕ್ಟ್ ಎಂದು ಪಾಸ್ ಮಾಡಿ.
07:38 ಹೀಗೆ, String org ನಂತರ comma StudentEnroll s ಎಂದು ಟೈಪ್ ಮಾಡಿ.
07:45 ಈಗ, ಈ ಮೆಥಡ್ ಒಳಗೆ, id = "newid" ಯನ್ನು ಅನ್-ಕಮೆಂಟ್ ಮಾಡಿ.
07:50 ಮತ್ತು, id ಬದಲಿಗೆ s.id ಎಂದು ಟೈಪ್ ಮಾಡಿ.
07:54 ಈಗ Demo ಕ್ಲಾಸಿಗೆ ಹೋಗಿ.
07:56 StudentEnroll object s1 ಅನ್ನು ಪಾಸ್ ಮಾಡುವ ಮೂಲಕ, ಫಂಕ್ಷನ್ ಕಾಲ್ ಅನ್ನು setOrgName() ಮೆಥಡ್ ಗೆ ಮಾರ್ಪಡಿಸೋಣ.
08:05 ಇಲ್ಲಿ, “IIT Mumbai” ನಂತರ comma s1 ಎಂದು ಟೈಪ್ ಮಾಡಿ.
08:10 ಈಗ Demo ಪ್ರೋಗ್ರಾಂ ಅನ್ನು ಮತ್ತೊಮ್ಮೆ ರನ್ ಮಾಡಿ.
08:12 ಇಲ್ಲಿ s1 ಗಾಗಿ id ಯ ವ್ಯಾಲ್ಯೂ “newid” ಎಂದು ಬದಲಾಗಿರುವುದನ್ನು ನೋಡಬಹುದು.
08:19 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ನಲ್ಲಿ ನಾವು:
08:24 static ಮೆಥಡ್ ಅಂದರೇನು, ಯಾವಾಗ ಇದನ್ನು ಬಳಸಲಾಗುತ್ತದೆ,
08:28 instance ಮೆಥಡ್ ಹಾಗೂ static ಮೆಥಡ್ ನಡುವಿನ ವ್ಯತ್ಯಾಸ ಮತ್ತು
08:33 static ಮೆಥಡ್ ಗಳನ್ನು ರಚಿಸುವುದು ಮತ್ತು ಇನ್ವೋಕ್ ಮಾಡುವುದು ಇವುಗಳ ಬಗ್ಗೆ ಕಲಿತೆವು.
08:37 ಈ ಅಸೈನ್ಮೆಂಟ್, static ವೇರಿಯೇಬಲ್ ಅಸೈನ್ಮೆಂಟ್ನ ಮುಂದುವರಿಕೆಯಾಗಿದೆ.
08:42 ನೀವು static ವೇರಿಯೇಬಲ್ ಅಸೈನ್ಮೆಂಟ್ ಅನ್ನು ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳಿ.
08:47 ನಾವು ಮಾರ್ಪಾಡುಗಳನ್ನು ಮಾತ್ರ ಇಲ್ಲಿ ಎತ್ತಿ ತೋರಿಸಲಿದ್ದೇವೆ.
08:50 ಇಲ್ಲಿ “status” ಅನ್ನು ತೋರಿಸಲು ನಾವು ಒಂದು ವೇರಿಯೇಬಲ್ ಅನ್ನು ಹೊಂದಿದ್ದೇವೆ.
08:55 ಕಾರು ಸರ್ವಿಸ್ಗಾಗಿ “in” ಆಗಿದೆಯೇ ಅಥವಾ ಸರ್ವಿಸ್ನ ನಂತರ “out” ಆಗಿದೆಯೇ ಎಂದು ಇದು ಹೇಳುತ್ತದೆ.
09:01 ಅಲ್ಲದೆ No. of cars out after Service ಅನ್ನು ತೋರಿಸಲು ನಾವು ಇನ್ನೊಂದು ವೇರಿಯೇಬಲ್ ಅನ್ನು ಸಹ ಹೊಂದಿದ್ದೇವೆ.
09:08 ಸ್ಟೇಟಸ್ ಅನ್ನು ”out” ಎಂದು ಅಪ್ಡೇಟ್ ಮಾಡುವ service(Car c) ಎಂಬ ಮೆಥಡ್ಅನ್ನು ಡಿಫೈನ್ ಮಾಡಿ.
09:13 ಇದೇ ರೀತಿ ಇದು ಸರ್ವಿಸ್ಗಾಗಿ,
09:17 No. of Cars in ಮತ್ತು ಸರ್ವಿಸ್ನ ನಂತರ No. of Cars out ನ ವ್ಯಾಲ್ಯೂಗಳನ್ನು ಮಾರ್ಪಾಡು ಮಾಡುತ್ತದೆ.
09:21 ಅಲ್ಲದೆ, ಕಾರಿನ ಎಲ್ಲಾ ವಿವರಗಳನ್ನು ಪ್ರಿಂಟ್ ಮಾಡಲು show( ) ಮೆಥಡ್ ಅನ್ನು ಡಿಫೈನ್ ಮಾಡಿ.
09:26 ಮೊದಲಿನಂತೆಯೇ, ನಾವು ಇದನ್ನು ಪಟ್ಟಿ ಮಾಡಿರುವಂತೆಯೇ ನಿರ್ವಹಿಸಬೇಕು.
09:30 ಗಮನಿಸಿ: ಅಗತ್ಯಕ್ಕೆ ತಕ್ಕಂತೆ, static ಮೆಥಡ್ ಅನ್ನು ನಾವು ಗುರುತಿಸಿ, ಅದನ್ನು ಡಿಫೈನ್ ಮಾಡಬೇಕು.
09:35 ಇದರೊಂದಿಗೆ Demo ಕ್ಲಾಸ್ ಒಂದನ್ನು ರಚಿಸಿ.
09:38 main() ಮೆಥಡ್ ಒಳಗೆ, CarService ನ ಕೆಲವು ಅಬ್ಜೆಕ್ಟ್ಗಳನ್ನು ರಚಿಸಿ.
09:43 ಇವುಗಳಲ್ಲಿ ಕೆಲವುಗಳ ಮೇಲೆ service( ) ಮೆಥಡ್ ಅನ್ನು ಇನ್ವೋಕ್ ಮಾಡಿ.
09:47 ಎಲ್ಲಾ ಅಬ್ಜೆಕ್ಟ್ಗಳನ್ನು ಬಳಸಿ, show( ) ಮೆಥಡ್ಅನ್ನು ಇನ್ವೋಕ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ.
09:52 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ.
09:57 ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
09:59 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
10:08 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
10:11 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
10:18 ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
10:22 ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.
10:30 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14