Difference between revisions of "Java/C3/Abstract-Classes/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
{| border=1
 
||'''Time'''
 
|| '''Narration'''
 
  
|-
 
||00:00
 
|| ಅಬ್ಸ್ಟ್ರಾಕ್ಟ್ ಕ್ಲಾಸುಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 
 
|-
 
||00:05
 
|| ಈ ಟ್ಯುಟೋರಿಯಲ್ ನಲ್ಲಿ ನಾವು, ಅಬ್ಸ್ಟ್ರಾಕ್ಟ್ ಮೆಥಡ್ ಗಳು ಮತ್ತು ಕಾಂಕ್ರೀಟ್ ಮೆಥಡ್ ಗಳು
 
 
|-
 
||00:12
 
|| ಅಬ್ಸ್ಟ್ರಾಕ್ಟ್ ಕ್ಲಾಸುಗಳು ಮತ್ತು ಕಾಂಕ್ರೀಟ್ ಕ್ಲಾಸುಗಳು ಮತ್ತು
 
 
|-
 
||00:16
 
|| ಅಬ್ಸ್ಟ್ರಾಕ್ಟ್ ಕ್ಲಾಸುಗಳನ್ನು ಹೇಗೆ ಬಳಸುವುದು ಎಂಬುದಾಗಿ ಕಲಿಯಲಿದ್ದೇವೆ.
 
 
|-
 
||00:18
 
|| ಈ ಟ್ಯುಟೋರಿಯಲ್ ಗಾಗಿ ನಾನು:
 
ಉಬಂಟು 12.04
 
ಜೆ.ಡಿ.ಕೆ 1.7 ಮತ್ತು
 
ಎಕ್ಲಿಪ್ಸ್ 4.3.1 ಬಳಸಲಿದ್ದೇನೆ.
 
 
|-
 
||00:28
 
|| ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು ಎಕ್ಲಿಪ್ಸ್ ಐ.ಡಿ.ಇ ಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು.
 
 
|-
 
||00:36
 
|| ನೀವು ಜಾವಾದಲ್ಲಿ ಸಬ್ ಕ್ಲಾಸಿಂಗ್ ನ ಜ್ಞಾನವನ್ನು ಸಹ ಹೊಂದಿರಬೇಕು.
 
 
|-
 
||00:40
 
|| ಇಲ್ಲದಿದ್ದಲ್ಲಿ ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗೆ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್‌ಗೆ ಭೇಟಿ ನೀಡಿ.
 
 
|-
 
||00:46
 
|| ಮೊದಲಿಗೆ ನಾವು ಅಬ್ಸ್ಟ್ರಾಕ್ಟ್ ಮೆಥಡ್ ಅನ್ನು ನೋಡೋಣ.
 
 
|-
 
||00:50
 
|| ಅಬ್ಸ್ಟ್ರಾಕ್ಟ್ ಮೆಥಡ್ ಎಂದರೆ ಇಂಪ್ಲೆಮೆಂಟೇಶನ್ ಇಲ್ಲದೆ ಘೋಷಿಸಿದ ಮೆಥಡ್ ಆಗಿದೆ.
 
 
|-
 
||00:55
 
|| ಅಬ್ಸ್ಟ್ರಾಕ್ಟ್ ಕೀವರ್ಡ್ ಗಳನ್ನು ಬಳಸಿ ಇದನ್ನು ಘೋಷಿಸಲಾಗುತ್ತದೆ.
 
 
|-
 
||00:59
 
|| ಈ ಮೆಥಡ್‌ಗೆ ತೆರೆಯುವ ಮತ್ತು ಮುಚ್ಚುವ ಪ್ರಕ್ಷೇಪ ಚಿಹ್ನೆ ಇರಬಾರದು.
 
 
|-
 
||01:04
 
|| ಅಬ್ಸ್ಟ್ರಾಕ್ಟ್ ಕ್ಲಾಸ್ ನ ಬಳಕೆಯನ್ನು ನಾವು ಮಾದರಿ ಪ್ರೋಗ್ರಾಂ ಮೂಲಕ ಕಲಿಯೋಣ.
 
 
|-
 
||01:09
 
|| ನಾವೀಗ ಎಕ್ಲಿಪ್ಸ್ ನತ್ತ ಸಾಗೋಣ ಮತ್ತು AbstractDemo ಎನ್ನುವ ಹೊಸ ಪ್ರಾಜೆಕ್ಟ್ ರಚಿಸೋಣ.
 
 
|-
 
||01:16
 
|| ಈ ಪ್ರಾಜೆಕ್ಟ್ ಒಳಗೆ, ಅಬ್ಸ್ಟ್ರಾಕ್ಟ್ ಕ್ಲಾಸಿನ ಬಳಕೆಯನ್ನು ತೋರಿಸಲು ಅಗತ್ಯ ಕ್ಲಾಸುಗಳನ್ನು ರಚಿಸೋಣ.
 
 
|-
 
||01:24
 
|| ಈಗ src ಫೋಲ್ಡ್ ಮೇಲೆ ರೈಟ್ ಕ್ಲಿಕ್ ಮಾಡೊ ಮತ್ತು New > Class ಮೇಲೆ ಕ್ಲಿಕ್ ಮಾಡಿ.
 
 
|-
 
||01:30
 
|| ಕ್ಲಾಸಿನ ಹೆಸರನ್ನು Person ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
 
 
|-
 
||01:35
 
|| ನಾವೀಗ ಪರ್ಸನ್ ನ ಹೆಸರು ಮತ್ತು ಪ್ರಾಯವನ್ನು ಪ್ರತಿನಿಧಿಸಲು ಫೀಲ್ಡ್ ಗಳನ್ನು ಸೇರಿಸಲಿದ್ದೇವೆ.
 
ಟೈಪ್ ಮಾಡಿ: String name ಅರ್ಧವಿರಾಮ ಚಿಹ್ನೆ
 
 
|-
 
||01:44
 
|| ಅಲ್ಲದೆ ಈ ರೀತಿಯೂ ಟೈಪ್ ಮಾಡಿ: int age ಅಲ್ಪವಿರಾಮ ಚಿಹ್ನೆ.
 
 
|-
 
||01:48
 
|| ಈಗ Source ಮೇಲೆ ಕ್ಲಿಕ್ ಮಾಡಿ ಮತ್ತು Generate constructor using fields ಆರಿಸಿ.
 
 
|-
 
||01:55
 
|| ರಚಿಸಿದ ಕೋಡ್ ನಿಂದ super ಕೀವರ್ಡ್ ಅನ್ನು ಅಳಿಸಿ.
 
 
|-
 
||01:59
 
|| ನೇಮ್ ಮತ್ತು ಏಜ್ ಫೀಲ್ಡ್ ಗಳ ಮೌಲ್ಯಗಳನ್ನು ಕನ್ಸ್ಟ್ರಕ್ಟರ್ ಇನಿಶಿಯಲೈಸ್ (ಅನುಸ್ಥಾಪನೆ) ಮಾಡಬಹುದು.
 
 
|-
 
||02:05
 
|| ನಂತರ ನಾವು ಕಾಂಕ್ರೀಟ್ ಮೆಥಡ್ ಅನ್ನು ನೋಡಬಹುದು.
 
 
|-
 
||02:08
 
|| ಕಾಂಕ್ರೀಟ್ ಮೆಥಡ್ ಅನ್ನು ನಾವು ಸಂಪೂರ್ಣವಾಗಿ ಸುರುಳಿಯಾಕಾರದ ಆವರಣ ಚಿಹ್ನೆಗಳೊಳಗೆ ಕಾರ್ಯಗತಗೊಳಿಸಬಹುದು.
 
 
|-
 
||02:14
 
|| ಹೆಸರು ಮತ್ತು ಪ್ರಾಯವನ್ನು ಪ್ರಿಂಟ್ (ಮುದ್ರಿಸು) ಮಾಡುವುದಕ್ಕಾಗಿ ಈ ಕ್ಲಾಸ್ ಗೆ ನಾವು ಕಾಂಕ್ರೀಟ್ ಮೆಥಡ್ ಸೇರಿಸಲಿದ್ದೇವೆ.
 
 
|-
 
||02:21
 
|| ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಈ ಕೋಡ್ ಅನ್ನು ಟೈಪ್ ಮಾಡಿ.
 
 
|-
 
||02:25
 
|| ಇಲ್ಲಿ ವಿವರಿಸಿರುವ showBasicDetails() ವಿಧಾನವು ಕಾಂಕ್ರೀಟ್ ಮೆಥಡ್‌ ಗೆ ಉದಾಹರಣೆಯಾಗಿದೆ. 
 
 
|-
 
||02:32
 
|| ಈ ಮೆಥಡ್ ಅನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲಾಗಿದೆ ಎಂಬುದನ್ನು ಗಮನಿಸಿ.
 
 
|-
 
||02:36
 
|| ನಾವೀಗ ಈ ಕ್ಲಾಸ್‌ ಗೆ ಅಬ್ಸ್ಟ್ರಾಕ್ಟ್ ಮೆಥಡ್ ಅನ್ನು ಸೇರಿಸಲಿದ್ದೇವೆ.
 
 
|-
 
||02:41
 
|| ಹೀಗಾಗಿ ಈ ರೀತಿ ಟೈಪ್ ಮಾಡಿ: public void showDetails( ) ಅರ್ಧವಿರಾಮ ಚಿಹ್ನೆ.
 
 
|-
 
||02:46
 
|| ನಾವು ಇನ್ನೂ abstract ಕೀವರ್ಡ್ ಅನ್ನು ಇನ್ನೂ ಸೇರಿಸದೆ ಇರುವುದರಿಂದ ಇಲ್ಲಿ ಎರರ್ (ದೋಷ) ಕಂಡುಬರುತ್ತದೆ.
 
 
|-
 
||02:51
 
|| ಹೀಗಾಗಿ ಈಗ abstract ಕೀವರ್ಡ್ ಅನ್ನು ಸೇರಿಸಿ.
 
 
|-
 
||02:55
 
|| ನಾವೀಗ ಇನ್ನೊಂದು ದೋಷವನ್ನು ಕಾಣಬಹುದು.
 
 
|-
 
||02:58
 
|| ಇದು ಏಕೆಂದರೆ ಅಬ್ಸ್ಟ್ರಾಕ್ಟ್ ಮೆಥಡ್ ಗಳನ್ನು ಅಬ್ಸ್ಟ್ರಾಕ್ಟ್ ಕ್ಲಾಸುಗಳಿಗೆ ಮಾತ್ರ ಸೇರಿಸಬಹುದು.
 
 
|-
 
||03:03
 
|| ಹೀಗಾಗಿ ಅಬ್ಸ್ಟ್ರಾಕ್ಟ್ ಕ್ಲಾಸ್ ಮಾಡುವುದಕ್ಕಾಗಿ ಪರ್ಸನ್ ಕ್ಲಾಸ್ ಗೆ abstract ಕೀವರ್ಡ್ ಅನ್ನು ಸೇರಿಸಿ.
 
 
|-
 
||03:10
 
|| ಇಲ್ಲಿ ತೋರಿಸಲಾಗಿರುವ ಕ್ಲಾಸ್ ಪರ್ಸನ್, ಅಬ್ಸ್ಟ್ರಾಕ್ಟ್ ಕ್ಲಾಸ್ ಆಗಿದೆ.
 
 
|-
 
||03:15
 
|| ಇದು showDetails() ಎನ್ನುವ ಅಬ್ಸ್ಟ್ರಾಕ್ಟ್ ಮೆಥಡ್ ಹೊಂದಿರುತ್ತದೆ.
 
 
|-
 
||03:15
 
|| ಇಲ್ಲಿರುವ ಚಿತ್ರವು ಇನ್ ಹೆರಿಟೆನ್ಸ್ ರಿಲೇಶನ್ ಅನ್ನು ಪ್ರತಿನಿಧಿಸುತ್ತದೆ.
 
 
|-
 
||03:20
 
|| ಇಲ್ಲಿರುವ ಚಿತ್ರವು ಇನ್ಹೆರಿಟೆನ್ಸ್ ರಿಲೇಶನ್ ಅನ್ನು ಪ್ರತಿನಿಧಿಸುತ್ತದೆ.
 
 
|-
 
||03:24
 
|| ಇಲ್ಲಿ ಪರ್ಸನ್ ಕ್ಲಾಸ್, ಒಂದು ಅಬ್ಸ್ಟ್ರಾಕ್ಟ್ ಕ್ಲಾಸ್ ಆಗಿದೆ.
 
 
|-
 
||03:29
 
||ಎಂಪ್ಲೋಯೀ ಕ್ಲಾಸ್ ಮತ್ತು ಸ್ಟೂಡೆಂಟ್ ಕ್ಲಾಸ್ ಗಳು ಇಲ್ಲಿ ಪರ್ಸನ್ ಕ್ಲಾಸ್ ನ ಸ್ಟೂಡೆಂಟ್ ಕ್ಲಾಸ್ ಮತ್ತು ಸಬ್ ಕ್ಲಾಸ್ ಗಳು ಆಗಿವೆ.
 
 
|-
 
||03:35
 
|| ಈ ಸಬ್ ಕ್ಲಾಸ್ ಗಳು ತಮ್ಮದೇ ಆದ ವಿಭಿನ್ನ ಅಳವಡಿಕೆಗಳನ್ನು ಒದಗಿಸುತ್ತವೆ.
 
 
|-
 
||03:40
 
|| ಇವುಗಳನ್ನು ಪರ್ಸನ್ ಕ್ಲಾಸ್ ನಲ್ಲಿ ಇರುವ showDetails( ) ವಿಧಾನದ ಮೂಲಕ ಮಾಡಬಹುದು.
 
 
|-
 
||03:45
 
|| ಉದಾಹರಣೆಗೆ: ಎಂಪ್ಲೋಯೀ ಕ್ಲಾಸ್ ನ ShowDetails() ಮೆಥಡ್, ಎಂಪ್ಲೋಯೀ ಐ.ಡಿ ಮತ್ತು ಸ್ಯಾಲರಿಯನ್ನು ಪ್ರಿಂಟ್ ಮಾಡುತ್ತದೆ. ಇದೇ ವೇಳೆ ಸ್ಟೂಡೆಂಟ್ ಕ್ಲಾಸ್ ನ ShowDetails() ಮೆಥಡ್, ಸ್ಟೂಡೆಂಡ್ ರಿಜಿಸ್ಟರ್ ನಂಬರ್ ಮತ್ತು ಗ್ರೇಡ್ ಅನ್ನು ಪ್ರಿಂಟ್ ಮಾಡುತ್ತದೆ.
 
 
|-
 
||04:01
 
|| ನಂತರ default package ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು ಎಂಪ್ಲೋಯೀ ಎನ್ನುವ ಇನ್ನೊಂದು ಕ್ಲಾಸ್ ಅನ್ನು ರಚಿಸಿ.
 
 
|-
 
||04:07
 
|| ಈಗ, ಪರ್ಸನ್ ಕ್ಲಾಸ್ ನ ಸಬ್ ಕ್ಲಾಸ್ ಮಾಡಲು ಈ ರೀತಿ ಟೈಪ್ ಮಾಡಿ: extends Person.
 
 
|-
 
||04:14
 
|| ಈಗ ಎಕ್ಲಿಪ್ಸ್ ಐ.ಡಿ.ಇ ಯಲ್ಲಿ ಎರರ್ ಬಂದಿರುವುದನ್ನು ನಾವು ಕಾಣಬಹುದು.
 
 
|-
 
||04:19
 
|| ನಾವು ಅಬ್ಸ್ಟ್ರಾಕ್ಟ್ ಮೆಥಡ್ showDetails( ) ಗೆ ಇಂಪ್ಲೆಮೆಂಟೇಷನ್ ಒದಗಿಸಬೇಕು ಎಂಬುದನ್ನು ಇದು ಸೂಚಿಸುತ್ತದೆ.
 
 
|-
 
||04:26
 
|| ನಾವಿದನ್ನು ಸ್ವಲ್ಪ ನಂತರ ಮಾಡಲಿದ್ದೇವೆ.
 
 
|-
 
||04:28
 
|| ಈಗ ಎಂಪ್ಲೋಯೀ ಐ.ಡಿ ಮತ್ತು ಎಂಪ್ಲೋಯೀ ಸ್ಯಾಲರಿಯನ್ನು ಪ್ರತಿನಿಧಿಸಲು ಎರಡು ಫೀಲ್ಡ್ ಗಳನ್ನು ರಚಿಸಿ.
 
 
|-
 
||04:34
 
|| ಹೀಗೆ ಟೈಪ್ ಮಾಡಿ: String empid ಅರ್ಧವಿರಾಮ ಮತ್ತು int salary ಅರ್ಧವಿರಾಮ.
 
 
|-
 
||04:42
 
|| ಈಗ Source ಮೇಲೆ ಕ್ಲಿಕ್ ಮಾಡಿ ಮತ್ತು Generate constructor using fields ಅನ್ನು ಆರಿಸಿ.
 
 
|-
 
||04:49
 
|| ಈ ಕಂನ್ಸ್ಟ್ರಕ್ಟರ್ ಇಲ್ಲಿ ನೇಮ್, ಏಜ್, empid ಮತ್ತು ಸ್ಯಾಲರಿ ಯ ಮೌಲ್ಯಗಳನ್ನು ಇನಿಶಿಯಲೈಸ್ ಮಾಡಲಿದೆ.
 
 
|-
 
||04:56
 
|| ನಾವೀಗ showDetails ಮೆಥಡ್ ಅನ್ನು ನಿರೂಪಿಸೋಣ. ಇದಕ್ಕಾಗಿ ಈ ರೀತಿ ಟೈಪ್ ಮಾಡಿ: public void showDetails( )
 
 
|-
 
||05:04
 
|| ಈ ಮೆಥಡ್ ಒಳಗೆ ನಾವು ಉದ್ಯೋಗಿಯ ವಿವರಗಳನ್ನು ಪ್ರಿಂಟ್ ಮಾಡಬೇಕಿದೆ.
 
 
|-
 
||05:09
 
|| ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಇಲ್ಲಿ ನೀಡಿರುವ ಕೋಡ್ ಅನ್ನು ಟೈಪ್ ಮಾಡಿ.
 
 
|-
 
||05:13
 
|| ಗಮನಿಸಿ, showDetails() ಮೆಥಡ್ ಅನ್ನು ಕಾರ್ಯಗತಗೊಳಿಸಿದ ನಂತರ ಎರರ್ ಕಾಣೆಯಾಗುತ್ತದೆ.
 
 
|-
 
||05:19
 
|| ನಂತರ ನಾವು ಪ್ರಾಜೆಕ್ಟ್ ನ ಸ್ಟೂಡೆಂಟ್ ಕ್ಲಾಸ್ ಅನ್ನು ನೋಡಲಿದ್ದೇವೆ.
 
 
|-
 
||05:23
 
|| ನಾನು ಈಗಲೇ ಸ್ಟೂಡೆಂಟ್ ಎನ್ನುವ ಸಬ್ ಕ್ಲಾಸ್ ಅನ್ನು ರಚಿಸಿದ್ದೇನೆ.
 
 
|-
 
||05:28
 
|| ಸ್ಟೂಡೆಂಟ್ ಕ್ಲಾಸ್ ನಲ್ಲಿ ಎರಡು ಫೀಲ್ಡ್ ಗಳಿವೆ, ಅವೆಂದರೆ ರಿಜಿಸ್ಟರ್ ನಂಬರ್ ಮತ್ತು ಗ್ರೇಡ್. ಇವು ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮತ್ತು ಗ್ರೇಡ್ ಅನ್ನು ಪ್ರತಿನಿಧಿಸುತ್ತದೆ.
 
 
|-
 
||05:37
 
|| ಈ ಕ್ಲಾಸ್ ನ ಒಳಗೆ ಕನ್ಸ್ಟ್ರಕ್ಟರ್ ಒಂದನ್ನು ಸಹ ರಚಿಸಲಾಗಿದೆ.
 
 
|-
 
||05:42
 
|| ನೇಮ್, ಏಜ್, ರಿಜಿಸ್ಟರ್ ನಂಬರ್ ಮತ್ತು ಗ್ರೇಡ್ ನ ಮೌಲ್ಯಗಳನ್ನು ಇನಿಶಿಯಲೈಸ್ ಮಾಡಲು ಈ ಕನ್ಸ್ಟ್ರಕ್ಟರ್ ಅನ್ನು ಸಹ ಬಳಸಬಹುದು.
 
 
|-
 
||05:50
 
|| showDetails ಮೆಥಡ್ ಅನ್ನು ಈ ಕ್ಲಾಸ್ ನಲ್ಲಿ ಸಹ ಕಾರ್ಯಗತಗೊಳಿಸಬಹುದು.
 
 
|-
 
||05:56
 
|| ಇದು ಸ್ಟೂಡೆಂಟ್ ರಿಜಿಸ್ಟರ್ ನಂಬರ್ ಮತ್ತು ಗ್ರೇಡ್ ನ ಮೌಲ್ಯಗಳನ್ನು ಪ್ರಿಂಟ್ ಮಾಡುತ್ತದೆ.
 
 
|-
 
||06:00
 
|| ಎಂಪ್ಲೋಯೀ ಕ್ಲಾಸ್, showDetails() ನ ತನ್ನದೇ ಆದ ಕಾರ್ಯಗತಗೊಳಿಸುವಿಕೆಯನ್ನು ಹೊಂದಿದೆ ಮತ್ತು,
 
 
|-
 
||06:08
 
|| ಸ್ಟೂಡೆಂಟ್ ಕ್ಲಾಸ್, showDetails() ನ ತನ್ನದೇ ಆದ ಕಾರ್ಯಗತಗೊಳಿಸುವಿಕೆಯನ್ನು ಹೊಂದಿದೆ ಎಂಬುದನ್ನು ಗಮನಿಸಿ.
 
 
|-
 
||06:14
 
|| ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ.
 
 
|-
 
||06:17
 
|| New > Class ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ.
 
 
|-
 
||06:23
 
|| ಈ ಕ್ಲಾಸ್ ಒಳಗೆ, ನಾವು ಮೇನ್ ಮೆಥಡ್ ಅನ್ನು ಹೊಂದಲಿದ್ದೇವೆ.
 
 
|-
 
||06:27
 
|| ಈಗ main ಎಂದು ಟೈಪ್ ಮಾಡಿ ಮತ್ತು ಮೇನ್ ಮೆಥಡ್ ಅನ್ನು ರಚಿಸಲು ctrl+space ಒತ್ತಿ.
 
 
|-
 
||06:33
 
|| ಈ ಮೂಲಕ  Person p equals new Person ಎಂದು ಟೈಪ್ ಮಾಡಿ ಪರ್ಸನ್ ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ (ದೃಷ್ಟಾಂತೀಕರಣ) ಮಾಡಲು ಪ್ರಯತ್ನಿಸೋಣ.
 
 
|-
 
||06:42
 
|| ಆವರಣ ಚಿಹ್ನೆ ಮತ್ತು ಡಬಲ್ ಕೋಟ್ ಗಳ ಒಳಗಡೆ John ಎಂದು ಟೈಪ್ ಮಾಡಿ ಮತ್ತು ಅರ್ಧವಿರಾಮ ಚಿಹ್ನೆಯನ್ನು ಹಾಕಿ.
 
 
|-
 
||06:48
 
|| ನಾವೀಗ ಇಲ್ಲಿ ಎರರ್ ಒಂದನ್ನು ಕಾಣಬಹುದು. ಏಕೆಂದರೆ ಇಲ್ಲಿ ಪರ್ಸನ್ ಕ್ಲಾಸ್ ಎನ್ನುವುದು ಅಬ್ಸ್ಟ್ರಾಕ್ಟ್ ಆಗಿದೆ ಹಾಗೂ ಇದನ್ನು ಇನ್ಸ್ಟಾಂಶಿಯೇಟ್ ಮಾಡಲಾಗದು.
 
 
|-
 
||06:58
 
|| ಈ ಸಾಲನ್ನು ನಾವೀಗ ತೆಗೆಯೋಣ.
 
 
|-
 
||07:00
 
|| ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಈ ಕೋಡ್ ಅನ್ನು ನಾವು ಟೈಪ್ ಮಾಡೋಣ.
 
 
|-
 
||07:04
 
|| ಈಗ, ಎಂಪ್ಲೋಯೀ ಕ್ಲಾಸ್ ಅನ್ನು Person p1 equals new Employee ಎಂಬುದಾಗಿ ಬಳಸಿ ಪರ್ಸನ್ ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡೋಣ.
 
 
|-
 
||07:14
 
|| ಮೊದಲ ಸಾಲಿನಲ್ಲಿ ನಾವು ವಿವಿಧ ಆರ್ಗ್ಯುಮೆಂಟ್ ಗಳ ಮೌಲ್ಯಗಳನ್ನು ತೆಗೆದುಕೊಳ್ಳುತ್ತೇವೆ.
 
 
|-
 
||07:19
 
|| ಜಾನ್ ಅನ್ನು ಎಂಪ್ಲೋಯೀ ನೇಮ್ ಆಗಿ ಮತ್ತು,
 
 
|-
 
||07:22
 
|| 40 ಅನ್ನು ಏಜ್ ನ ಮೌಲ್ಯವಾಗಿ,
 
 
|-
 
||07:25
 
|| E267 ಅನ್ನು ಎಂಪ್ಲೋಯೀ ಐ.ಡಿ ಯ ಮೌಲ್ಯವಾಗಿ ಮತ್ತು 10000 ವನ್ನು ಎಂಪ್ಲೋಯೀ ಸ್ಯಾಲರಿಯ ಮೌಲ್ಯವಾಗಿ ತೆಗೆದುಕೊಳ್ಳಲಾಗುತ್ತದೆ.
 
 
|-
 
||07:33
 
|| ನಾವೀಗ ಪರ್ಸನ್ ಕ್ಲಾಸ್ ನಲ್ಲಿ ಕಾಂಕ್ರೀಟ್ ಮೆಥಡ್ ಅನ್ನು p1.showBasicDetails() ಎಂದು ಇನ್ವೋಕ್ (ಜಾರಿ) ಮಾಡಬಹುದು.
 
 
|-
 
||07:41
 
|| ಅಲ್ಲದೆ, bject p1 ಅನ್ನು p1.showDetails() ಎಂದು ಬಳಸಿ ನಾವು showDetails() ಮೆಥಡ್ ಅನ್ನು ಸಹ ಆಮಂತ್ರಿಸಬಹುದು.
 
 
|-
 
||07:50
 
|| ಇದೇ ರೀತಿ, ಸ್ಟೂಡೆಂಟ್ ಕ್ಲಾಸ್ ಅನ್ನು ಬಳಸಿ, ಪರ್ಸನ್ ಕ್ಲಾಸ್ ಅನ್ನು ದೃಷ್ಟಾಂತೀಕರಿಸಿ.
 
 
|-
 
||08:01
 
|| ಇದನ್ನು, Person p2 equals new Student ಎಂಬುದಾಗಿ ಪ್ರತಿನಿಧಿಸಬಹುದು.
 
 
|-
 
||08:06
 
|| ಇದೇ ರೀತಿ, ಇಲ್ಲಿ ತೋರಿಸಿರುವಂತೆ ಅಬ್ಜೆಕ್ಟ್ ಅನ್ನು ಬಳಸಿ ನಾವು showBasicDetails() method ಮತ್ತು showDetails() ಮೆಥಡ್ ಅನ್ನು ಇನ್ವೋಕ್ ಮಾಡಬಹುದು.
 
 
|-
 
||08:15
 
|| ನಾವೀಗ ಈ ಡೆಮೋ ಪ್ರೋಗ್ರಾಂ ಅನ್ನು ರನ್ ಮಾಡೋಣ.
 
 
|-
 
||08:18
 
|| ಇದಕ್ಕಾಗಿ class Demo ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Run as > Java Application ಆರಿಸಿ.
 
 
|-
 
||08:25
 
|| ನಾವೀಗ ನೇಮ್ ಮತ್ತು ಏಜ್ ಮುಂತಾದ, ಉದ್ಯೋಗಿಯ ಅಗತ್ಯ ವಿವರಗಳೊಂದಿಗೆ ಔಟ್ಪುಟ್ ಅನ್ನು ನೋಡಬಹುದು.
 
 
|-
 
||08:31
 
|| ಇವುಗಳನ್ನು showBasicDetails() ವಿಧಾನದ ಮೂಲಕ ಪ್ರಿಂಟ್ ಮಾಡಬಹುದು.
 
 
|-
 
||08:35
 
|| ಎಂಪ್ಲೋಯಿ ಐ.ಡಿ ಮತ್ತು ಸ್ಯಾಲರಿಯಂತಹ ಉದ್ಯೋಗಿಯ ಇತರ ವಿವರಗಳನ್ನು showDetails() ವಿಧಾನದ ಮೂಲಕ ಪ್ರಿಂಟ್ ಮಾಡಬಹುದು.
 
 
|-
 
||08:43
 
|| ಇದೇ ರೀತಿ, ನೇಮ್ ಮತ್ತು ಏಜ್ ನಂತಹ ವಿದ್ಯಾರ್ಥಿಯ ಅಗತ್ಯ ವಿವರಗಳನ್ನು showBasicDetails() ವಿಧಾನದ ಮೂಲಕ ಪ್ರಿಂಟ್ ಮಾಡಬಹುದು.
 
 
|-
 
||08:52
 
|| ಸ್ಟೂಡೆಂಟ್ ರಿಜಿಸ್ಟರ್ ನಂಬರ್ ಮತ್ತು ಗ್ರೇಡ್ ನಂತಹ ವಿದ್ಯಾರ್ಥಿಯ ಇತರ ವಿವರಗಳನ್ನು  showDetails() ವಿಧಾನದ ಮೂಲಕ ಪ್ರಿಂಟ್ ಮಾಡಬಹುದು.
 
 
|-
 
||09:01
 
|| ಈ ಮೂಲಕ ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ತಲುಪಿದ್ದೇವೆ. ಈಗ ನಾವು ಸಂಕ್ಷೇಪಿಸೋಣ.
 
 
|-
 
||09:07
 
|| ಈ ಟ್ಯುಟೋರಿಯಲ್ ನಲ್ಲಿ ನಾವು ಅಬ್ಸ್ಟ್ರಾಕ್ಟ್ ಮೆಥಡ್ ಗಳು ಮತ್ತು ಕಾಂಕ್ರೀಟ್ ಮೆಥಡ್ ಗಳು,
 
 
|-
 
||09:14
 
|| ಅಬ್ಸ್ಟ್ರಾಕ್ಟ್ ಕ್ಲಾಸುಗಳು ಮತ್ತು ಕಾಂಕ್ರೀಟ್ ಕ್ಲಾಸುಗಳು ಮತ್ತು ಅಬ್ಸ್ಟ್ರಾಕ್ಟ್ ಕ್ಲಾಸುಗಳನ್ನು ರಚಿಸುವುದು ಮತ್ತು ಬಳಸುವುದನ್ನು ಕಲಿತೆವು.
 
 
|-
 
||09:21
 
|| ಅಸೈನ್ ಮೆಂಟ್ ಆಗಿ, ಒಂದು abstract method run() ಹೊಂದಿರುವ ಅಬ್ಸ್ಟ್ರಾಕ್ಟ್ ಕ್ಲಾಸ್ ವೆಹಿಕಲ್ ಅನ್ನು ರಚಿಸಿ.
 
 
|-
 
||09:29
 
|| ವೆಹಿಕಲ್ ಕ್ಲಾಸ್ ಅನ್ನು ವಿಸ್ತರಿಸುವ ಮತ್ತು ʻʻCar is running on 4 wheels’’ ಅನ್ನು ಪ್ರಿಂಟ್ ಮಾಡುವ ರನ್ ಮೆಥಡ್ ಅನ್ನು ಕಾರ್ಯಗತಗೊಳಿಸುವ ಸಬ್ ಕ್ಲಾಸ್ ಕಾರ್ ಒಂದನ್ನು ರಚಿಸಿ.
 
 
|-
 
||09:39
 
|| ಅಲ್ಲದೆ ವೆಹಿಕಲ್ ಕ್ಲಾಸ್ ಅನ್ನು ಇನ್ನೊಮ್ಮೆ ವಿಸ್ತರಿಸುವ ಮತ್ತು “Bike is running on 2 wheels” ಎಂದು ಪ್ರಿಂಟ್ ಮಾಡುವ ರನ್ ಮೆಥಡ್ ಅನ್ನು ಕಾರ್ಯಗತಗೊಳಿಸುವ ಸಬ್ ಕ್ಲಾಸ್ ಒಂದನ್ನು ರಚಿಸಿ.
 
 
|-
 
||09:50
 
|| ಇದರ ಜೊತೆಗೆ, ಫಲಿತಾಂಶಗಳನ್ನು ದೃಢೀಕರಿಸಲು, ಮೇನ್ ಮೆಥಡ್ ಹೊಂದಿರುವ ಡೆಮೋ ಕ್ಲಾಸ್ ಅನ್ನು ಸಹ ರಚಿಸಿ.
 
 
|-
 
||09:56
 
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
 
 
|-
 
||10:03
 
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು,
 
 
|-
 
||10:09
 
|| ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
 
 
|-
 
||10:13
 
|| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
 
 
|-
 
||10:16
 
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
 
 
|-
 
||10:23
 
|| ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
 
 
|-
 
||10:28
 
|| ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.
 
 
|-
 
||10:35
 
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
ಧನ್ಯವಾದಗಳು.
 
 
|-
 

Revision as of 12:39, 13 May 2020

Contributors and Content Editors

Sandhya.np14