Java/C3/Abstract-Classes/Kannada

From Script | Spoken-Tutorial
Jump to: navigation, search
Time Narration
00:00 ಅಬ್ಸ್ಟ್ರಾಕ್ಟ್ ಕ್ಲಾಸುಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು: ಅಬ್ಸ್ಟ್ರಾಕ್ಟ್ ಮೆಥಡ್ ಗಳು ಮತ್ತು ಕಾಂಕ್ರೀಟ್ ಮೆಥಡ್ ಗಳು,
00:12 ಅಬ್ಸ್ಟ್ರಾಕ್ಟ್ ಕ್ಲಾಸುಗಳು ಮತ್ತು ಕಾಂಕ್ರೀಟ್ ಕ್ಲಾಸುಗಳು ಹಾಗೂ
00:16 ಅಬ್ಸ್ಟ್ರಾಕ್ಟ್ ಕ್ಲಾಸುಗಳನ್ನು ಹೇಗೆ ಬಳಸುವುದು ಎಂದು ಕಲಿಯಲಿದ್ದೇವೆ.
00:18 ಈ ಟ್ಯುಟೋರಿಯಲ್ ಗಾಗಿ ನಾನು:

ಉಬಂಟು 12.04, ಜೆ.ಡಿ.ಕೆ 1.7 ಮತ್ತು ಎಕ್ಲಿಪ್ಸ್ 4.3.1 ಇವುಗಳನ್ನು ಬಳಸುತ್ತಿದ್ದೇನೆ.

00:28 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಜಾವಾ ಮತ್ತು ಎಕ್ಲಿಪ್ಸ್ ಐ.ಡಿ.ಇ ಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು.
00:36 ನೀವು ಜಾವಾದಲ್ಲಿ ಸಬ್ ಕ್ಲಾಸಿಂಗ್ ನ ಜ್ಞಾನವನ್ನು ಸಹ ಹೊಂದಿರಬೇಕು.
00:40 ಇಲ್ಲದಿದ್ದಲ್ಲಿ ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗೆ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್‌ಗೆ ಭೇಟಿ ನೀಡಿ.
00:46 ಮೊದಲಿಗೆ ನಾವು ಅಬ್ಸ್ಟ್ರಾಕ್ಟ್ ಮೆಥಡ್ ಅನ್ನು ನೋಡೋಣ.
00:50 ಅಬ್ಸ್ಟ್ರಾಕ್ಟ್ ಮೆಥಡ್ ಎಂದರೆ ಇಂಪ್ಲಿಮೆಂಟೇಶನ್ ಇಲ್ಲದೆ ಡಿಕ್ಲೇರ್ ಮಾಡಲಾದ ಮೆಥಡ್ ಆಗಿದೆ.
00:55 ಅಬ್ಸ್ಟ್ರಾಕ್ಟ್ ಕೀವರ್ಡ್ ಗಳನ್ನು ಬಳಸಿ ಇದನ್ನು ಡಿಕ್ಲೇರ್ ಮಾಡಲಾಗುತ್ತದೆ.
00:59 ಈ ಮೆಥಡ್‌ಗೆ ತೆರೆಯುವ ಮತ್ತು ಮುಚ್ಚುವ ಬ್ರ್ಯಾಕೆಟ್ಸ್ ಇರಬಾರದು.
01:04 ಅಬ್ಸ್ಟ್ರಾಕ್ಟ್ ಕ್ಲಾಸ್ ನ ಬಳಕೆಯನ್ನು ಒಂದು ಮಾದರಿ ಪ್ರೋಗ್ರಾಂ ಮೂಲಕ ಕಲಿಯೋಣ.
01:09 ನಾವೀಗ ಎಕ್ಲಿಪ್ಸ್ ನತ್ತ ಸಾಗೋಣ ಮತ್ತು AbstractDemo ಎನ್ನುವ ಹೊಸ ಪ್ರಾಜೆಕ್ಟ್ ರಚಿಸೋಣ.
01:16 ಈ ಪ್ರಾಜೆಕ್ಟ್ ನ ಒಳಗೆ, ಅಬ್ಸ್ಟ್ರಾಕ್ಟ್ ಕ್ಲಾಸಿನ ಬಳಕೆಯನ್ನು ತೋರಿಸಲು ಅಗತ್ಯವಿರುವ ಕ್ಲಾಸುಗಳನ್ನು ರಚಿಸೋಣ.
01:24 ಈಗ src ಫೋಲ್ಡರ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು New > Class ಮೇಲೆ ಕ್ಲಿಕ್ ಮಾಡಿ.
01:30 ಕ್ಲಾಸಿನ ಹೆಸರನ್ನು Person ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
01:35 ನಾವೀಗ Person ನ name ಮತ್ತು age ಅನ್ನು ಪ್ರತಿನಿಧಿಸಲು ಫೀಲ್ಡ್ ಗಳನ್ನು ಸೇರಿಸಲಿದ್ದೇವೆ.

ಹೀಗೆ ಟೈಪ್ ಮಾಡಿ: String name Semilocon.

01:44 ಅಲ್ಲದೆ ಇದನ್ನೂ ಟೈಪ್ ಮಾಡಿ: int age Semicolon.
01:48 ಈಗ Source ಮೇಲೆ ಕ್ಲಿಕ್ ಮಾಡಿ ಮತ್ತು Generate constructor using fields ಆರಿಸಿ.
01:55 ರಚಿಸಿದ ಕೋಡ್ ನಿಂದ super ಕೀವರ್ಡ್ ಅನ್ನು ಡಿಲೀಟ್ ಮಾಡಿ.
01:59 name ಮತ್ತು age ಫೀಲ್ಡ್ ಗಳ ವ್ಯಾಲ್ಯೂಗಳನ್ನು ಕನ್ಸ್ಟ್ರಕ್ಟರ್ ಇನಿಶಿಯಲೈಸ್ ಮಾಡಬಹುದು.
02:05 ನಂತರ ನಾವು ಕಾಂಕ್ರೀಟ್ ಮೆಥಡ್ ಅನ್ನು ನೋಡಬಹುದು.
02:08 ಕಾಂಕ್ರೀಟ್ ಮೆಥಡ್ ಅನ್ನು ನಾವು ಸಂಪೂರ್ಣವಾಗಿ ಕರ್ಲಿ ಬ್ರ್ಯಾಕೆಟ್ಸ್ ಒಳಗೆ ಕಾರ್ಯಗತಗೊಳಿಸಬಹುದು.
02:14 name ಮತ್ತು age ಅನ್ನು ಪ್ರಿಂಟ್ ಮಾಡಲು ಈ ಕ್ಲಾಸ್ ಗೆ ನಾವು ಕಾಂಕ್ರೀಟ್ ಮೆಥಡ್ ಸೇರಿಸಲಿದ್ದೇವೆ.
02:21 ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಈ ಕೋಡ್ ಅನ್ನು ಟೈಪ್ ಮಾಡಿ.
02:25 ಇಲ್ಲಿ ವಿವರಿಸಿರುವ showBasicDetails() ಮೆಥಡ್, ಕಾಂಕ್ರೀಟ್ ಮೆಥಡ್‌ ಗೆ ಉದಾಹರಣೆಯಾಗಿದೆ.
02:32 ಈ ಮೆಥಡ್ ಅನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲಾಗಿದೆ ಎಂಬುದನ್ನು ಗಮನಿಸಿ.
02:36 ನಾವೀಗ ಈ ಕ್ಲಾಸ್‌ ಗೆ ಅಬ್ಸ್ಟ್ರಾಕ್ಟ್ ಮೆಥಡ್ ಅನ್ನು ಸೇರಿಸಲಿದ್ದೇವೆ.
02:41 ಇದಕ್ಕಾಗಿ, ಹೀಗೆ ಟೈಪ್ ಮಾಡಿ: public void showDetails( ) Semicolon
02:46 ನಾವು abstract ಕೀವರ್ಡ್ ಅನ್ನು ಇನ್ನೂ ಸೇರಿಸದೆ ಇರುವುದರಿಂದ ಇಲ್ಲಿ ಎರರ್ ಕಂಡುಬರುತ್ತದೆ.
02:51 ಹೀಗಾಗಿ ಈಗ abstract ಕೀವರ್ಡ್ ಅನ್ನು ಸೇರಿಸಿ.
02:55 ನಾವೀಗ ಇನ್ನೊಂದು ಎರರ್ ಅನ್ನು ಕಾಣಬಹುದು.
02:58 ಇದು ಏಕೆಂದರೆ ಅಬ್ಸ್ಟ್ರಾಕ್ಟ್ ಮೆಥಡ್ ಗಳನ್ನು ಅಬ್ಸ್ಟ್ರಾಕ್ಟ್ ಕ್ಲಾಸುಗಳಿಗೆ ಮಾತ್ರ ಸೇರಿಸಬಹುದು.
03:03 ಹೀಗಾಗಿ Person ಕ್ಲಾಸ್ ಅನ್ನು ಅಬ್ಸ್ಟ್ರಾಕ್ಟ್ ಕ್ಲಾಸ್ ಮಾಡಲು, ಇದಕ್ಕೆ abstract ಕೀವರ್ಡ್ ಅನ್ನು ಸೇರಿಸಿ.
03:10 ಇಲ್ಲಿ ತೋರಿಸಲಾದ ಕ್ಲಾಸ್ Person, ಅಬ್ಸ್ಟ್ರಾಕ್ಟ್ ಕ್ಲಾಸ್ ಆಗಿದೆ.
03:15 ಇದು showDetails() ಎನ್ನುವ ಅಬ್ಸ್ಟ್ರಾಕ್ಟ್ ಮೆಥಡ್ ಹೊಂದಿರುತ್ತದೆ.
03:20 ಇಲ್ಲಿರುವ ಚಿತ್ರವು ಇನ್ಹೆರಿಟೆನ್ಸ್ ರಿಲೇಶನ್ ಅನ್ನು ಪ್ರತಿನಿಧಿಸುತ್ತದೆ.
03:24 ಇಲ್ಲಿ Person ಕ್ಲಾಸ್, ಒಂದು ಅಬ್ಸ್ಟ್ರಾಕ್ಟ್ ಕ್ಲಾಸ್ ಆಗಿದೆ.
03:29 Employee ಕ್ಲಾಸ್ ಮತ್ತು Student ಕ್ಲಾಸ್ ಗಳು ಇಲ್ಲಿ Person ಕ್ಲಾಸ್ ನ ಸಬ್ ಕ್ಲಾಸ್ ಗಳು ಆಗಿವೆ.
03:35 ಈ ಸಬ್ ಕ್ಲಾಸ್ ಗಳು ತಮ್ಮದೇ ಆದ ವಿಭಿನ್ನ ಅಳವಡಿಕೆಗಳನ್ನು ಒದಗಿಸುತ್ತವೆ.
03:40 ಇವುಗಳನ್ನು Person ಕ್ಲಾಸ್ ನಲ್ಲಿ ಇರುವ showDetails( ) ಮೆಥಡ್ ಮೂಲಕ ಮಾಡಬಹುದು.
03:45 ಉದಾಹರಣೆಗೆ: Employee ಕ್ಲಾಸ್ ನ ShowDetails() ಮೆಥಡ್, Employee ID ಮತ್ತು Salary ಯನ್ನು ಪ್ರಿಂಟ್ ಮಾಡುತ್ತದೆ. ಇದೇ ವೇಳೆ Student ಕ್ಲಾಸ್ ನ ShowDetails() ಮೆಥಡ್, ಸ್ಟೂಡೆಂಡ್ ರಿಜಿಸ್ಟರ್ ನಂಬರ್ ಮತ್ತು ಗ್ರೇಡ್ ಅನ್ನು ಪ್ರಿಂಟ್ ಮಾಡುತ್ತದೆ.
04:01 ನಂತರ default package ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Employee ಎನ್ನುವ ಇನ್ನೊಂದು ಕ್ಲಾಸ್ ಅನ್ನು ರಚಿಸಿ.
04:07 ಈಗ, ಇದನ್ನು Person ಕ್ಲಾಸ್ ನ ಸಬ್ ಕ್ಲಾಸ್ ಮಾಡಲು ಈ ರೀತಿ ಟೈಪ್ ಮಾಡಿ: extends Person.
04:14 ಈಗ ಎಕ್ಲಿಪ್ಸ್ ಐ.ಡಿ.ಇ ಯಲ್ಲಿ ಎರರ್ ಬಂದಿರುವುದನ್ನು ನಾವು ಕಾಣಬಹುದು.
04:19 ನಾವು ಅಬ್ಸ್ಟ್ರಾಕ್ಟ್ ಮೆಥಡ್ showDetails( ) ಗೆ ಇಂಪ್ಲೆಮೆಂಟೇಷನ್ ಒದಗಿಸಬೇಕು ಎಂದು ಇದು ಸೂಚಿಸುತ್ತದೆ.
04:26 ನಾವಿದನ್ನು ನಂತರ ಮಾಡಲಿದ್ದೇವೆ.
04:28 ಈಗ Employee ID ಮತ್ತು Emloyee Salary ಯನ್ನು ಪ್ರತಿನಿಧಿಸಲು ಎರಡು ಫೀಲ್ಡ್ ಗಳನ್ನು ರಚಿಸಿ.
04:34 ಹೀಗೆ ಟೈಪ್ ಮಾಡಿ: String empid Semicolon ಮತ್ತು int salary Semicolon.
04:42 ಈಗ Source ಮೇಲೆ ಕ್ಲಿಕ್ ಮಾಡಿ ಮತ್ತು Generate constructor using fields ಅನ್ನು ಆರಿಸಿ.
04:49 ಈ ಕನ್ಸ್ಟ್ರಕ್ಟರ್ ಇಲ್ಲಿ Name, Age, empid ಮತ್ತು Salary ಯ ವ್ಯಾಲ್ಯೂಗಳನ್ನು ಇನಿಶಿಯಲೈಸ್ ಮಾಡಲಿದೆ.
04:56 ನಾವೀಗ showDetails() ಮೆಥಡ್ ಅನ್ನು ಡಿಫೈನ್ ಮಾಡೋಣ. ಇದಕ್ಕಾಗಿ ಹೀಗೆ ಟೈಪ್ ಮಾಡಿ: public void showDetails( )
05:04 ಈ ಮೆಥಡ್ ಒಳಗೆ, ನಾವು employee ವಿವರಗಳನ್ನು ಪ್ರಿಂಟ್ ಮಾಡಬೇಕಿದೆ.
05:09 ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ.
05:13 ಗಮನಿಸಿ, showDetails() ಮೆಥಡ್ ಅನ್ನು ಕಾರ್ಯಗತಗೊಳಿಸಿದ ನಂತರ ಎರರ್ ಕಾಣೆಯಾಗುತ್ತದೆ.
05:19 ನಂತರ ನಾವು ಪ್ರಾಜೆಕ್ಟ್ ನ Student ಕ್ಲಾಸ್ ಅನ್ನು ನೋಡುವೆವು.
05:23 ನಾನು ಈಗಲೇ Student ಎನ್ನುವ ಸಬ್ ಕ್ಲಾಸ್ ಅನ್ನು ರಚಿಸಿದ್ದೇನೆ.
05:28 Student ಕ್ಲಾಸ್ ನಲ್ಲಿ Register Number ಮತ್ತು Grade ಎಂಬ ಎರಡು ಫೀಲ್ಡ್ ಗಳಿವೆ. ಇವು ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮತ್ತು ಗ್ರೇಡ್ ಅನ್ನು ಪ್ರತಿನಿಧಿಸುತ್ತದೆ.
05:37 ಈ ಕ್ಲಾಸ್ ನ ಒಳಗೆ ಕನ್ಸ್ಟ್ರಕ್ಟರ್ ಒಂದನ್ನು ಸಹ ರಚಿಸಲಾಗಿದೆ.
05:42 Name, Age, Register Number ಮತ್ತು Grade ನ ವ್ಯಾಲ್ಯೂಗಳನ್ನು ಇನಿಶಿಯಲೈಸ್ ಮಾಡಲು ಈ ಕನ್ಸ್ಟ್ರಕ್ಟರ್ ಅನ್ನು ಬಳಸಬಹುದು.
05:50 showDetails() ಮೆಥಡ್ ಅನ್ನು ಈ ಕ್ಲಾಸ್ ನಲ್ಲಿ ಸಹ ಕಾರ್ಯಗತ ಮಾಡಲಾಗಿದೆ.
05:56 ಇದು Student Register Number ಮತ್ತು Grade ನ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡುತ್ತದೆ.
06:00 showDetails() ಅನ್ನು Employee ಕ್ಲಾಸ್, ತನ್ನದೇ ಆದ ರೀತಿಯಲ್ಲಿ ಕಾರ್ಯಗತ ಮಾಡುತ್ತದೆ ಮತ್ತು
06:08 Student ಕ್ಲಾಸ್, ತನ್ನದೇ ರೀತಿಯಲ್ಲಿ ಕಾರ್ಯಗತ ಮಾಡುತ್ತದೆ ಎಂಬುದನ್ನು ಗಮನಿಸಿ.
06:14 ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ.
06:17 New > Class ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ.
06:23 ಈ ಕ್ಲಾಸ್ ಒಳಗೆ, ನಾವು main() ಮೆಥಡ್ ಅನ್ನು ಹೊಂದಿದ್ದೇವೆ.
06:27 ಈಗ main ಎಂದು ಟೈಪ್ ಮಾಡಿ ಮತ್ತು ಮೇನ್ ಮೆಥಡ್ ಅನ್ನು ರಚಿಸಲು ctrl+space ಒತ್ತಿ.
06:33 ಈಗ Person p equals new Person ಎಂದು ಟೈಪ್ ಮಾಡಿ Person ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡಲು ಪ್ರಯತ್ನಿಸೋಣ.
06:42 ಆವರಣ ಚಿಹ್ನೆ ಮತ್ತು ಡಬಲ್ ಕೋಟ್ ಗಳ ಒಳಗಡೆ, John ಎಂದು ಟೈಪ್ ಮಾಡಿ Semicolon ಹಾಕಿ.
06:48 ನಾವೀಗ ಇಲ್ಲಿ ಎರರ್ ಒಂದನ್ನು ಕಾಣಬಹುದು. ಏಕೆಂದರೆ ಇಲ್ಲಿ, Person ಕ್ಲಾಸ್ ಅಬ್ಸ್ಟ್ರಾಕ್ಟ್ ಆಗಿದೆ. ಇದನ್ನು ಇನ್ಸ್ಟಾಂಶಿಯೇಟ್ ಮಾಡಲು ಸಾಧ್ಯವಿಲ್ಲ.
06:58 ಈ ಸಾಲನ್ನು ತೆಗೆದುಬಿಡೋಣ.
07:00 ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಈ ಕೋಡ್ ಅನ್ನು ಟೈಪ್ ಮಾಡೋಣ.
07:04 ಈಗ, Employee ಕ್ಲಾಸ್ ಅನ್ನು ಬಳಸಿ, Person p1 equals new Employee ಎಂದು Person ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡೋಣ.
07:14 ಮೊದಲ ಸಾಲಿನಲ್ಲಿ, ನಾವು ವಿವಿಧ ಆರ್ಗ್ಯುಮೆಂಟ್ ಗಳ ವ್ಯಾಲ್ಯೂಗಳನ್ನು ದಾಟಿಸುತ್ತೇವೆ (passing).
07:19 John ಅನ್ನು Employee Name ಆಗಿ,
07:22 40 ಅನ್ನು Age ಎಂದು,
07:25 E267 ಅನ್ನು Employee ID ಮತ್ತು 10,000 ಅನ್ನು Employee Salary ಎಂದು ವ್ಯಾಲ್ಯೂಗಳನ್ನು ಕೊಡುತ್ತೇವೆ.
07:33 ನಾವೀಗ Person ಕ್ಲಾಸ್ ನಲ್ಲಿ ಕಾಂಕ್ರೀಟ್ ಮೆಥಡ್ ಅನ್ನು p1.showBasicDetails() ಎಂದು ಇನ್ವೋಕ್ ಮಾಡಬಹುದು.
07:41 ಅಲ್ಲದೆ, ಆಬ್ಜೆಕ್ಟ್ p1 ಅನ್ನು p1.showDetails() ಎಂದು ಬಳಸಿ, ನಾವು showDetails() ಮೆಥಡ್ ಅನ್ನು ಕಾಲ್ ಮಾಡಬಹುದು.
07:50 ಇದೇ ರೀತಿ, Student ಕ್ಲಾಸ್ ಅನ್ನು ಬಳಸಿ, Person ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡಿ.
08:01 ಇದನ್ನು, Person p2 equals new Student ಎಂದು ಬರೆಯಬಹುದು.
08:06 ಇಲ್ಲಿ ತೋರಿಸಿರುವಂತೆ, ಅಬ್ಜೆಕ್ಟ್ ಅನ್ನು ಬಳಸಿ ನಾವು showBasicDetails() ಮೆಥಡ್ ಮತ್ತು showDetails() ಮೆಥಡ್ ಅನ್ನು ಇನ್ವೋಕ್ ಮಾಡಬಹುದು.
08:15 ನಾವೀಗ ಈ Demo ಪ್ರೋಗ್ರಾಂ ಅನ್ನು ರನ್ ಮಾಡೋಣ.
08:18 ಇದಕ್ಕಾಗಿ class Demo ಮೇಲೆ ರೈಟ್ ಕ್ಲಿಕ್ ಮಾಡಿ. ನಂತರ Run as > Java Application ನ್ನು ಆಯ್ಕೆಮಾಡಿ.
08:25 ನಾವು Name ಮತ್ತು Age ನಂತಹ employee ವಿವರಗಳೊಂದಿಗೆ ಔಟ್ಪುಟ್ ಅನ್ನು ನೋಡಬಹುದು.
08:31 ಇವುಗಳನ್ನು showBasicDetails()ಮೆಥಡ್ ನಿಂದ ಪ್ರಿಂಟ್ ಮಾಡಲಾಗುತ್ತದೆ.
08:35 Employee ID ಮತ್ತು Salary ಯಂತಹ ಇತರ employee ವಿವರಗಳನ್ನು showDetails() ಮೆಥಡ್ ನಿಂದ ಪ್ರಿಂಟ್ ಮಾಡಲಾಗುತ್ತದೆ.
08:43 ಇದೇ ರೀತಿ, Name ಮತ್ತು Age ನಂತಹ student ನ ವಿವರಗಳನ್ನು showBasicDetails() ಮೆಥಡ್ ನಿಂದ ಪ್ರಿಂಟ್ ಮಾಡಬಹುದು.
08:52 Student Register Number ಮತ್ತು Grade ನಂತಹ student ನ ಇತರ ವಿವರಗಳನ್ನು showDetails() ಮೆಥಡ್ ನ ಮೂಲಕ ಪ್ರಿಂಟ್ ಮಾಡಬಹುದು.
09:01 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ,
09:07 ಈ ಟ್ಯುಟೋರಿಯಲ್ ನಲ್ಲಿ, ನಾವು ಅಬ್ಸ್ಟ್ರಾಕ್ಟ್ ಮೆಥಡ್ ಗಳು ಮತ್ತು ಕಾಂಕ್ರೀಟ್ ಮೆಥಡ್ ಗಳು,
09:14 ಅಬ್ಸ್ಟ್ರಾಕ್ಟ್ ಕ್ಲಾಸುಗಳು ಮತ್ತು ಕಾಂಕ್ರೀಟ್ ಕ್ಲಾಸುಗಳು ಮತ್ತು ಅಬ್ಸ್ಟ್ರಾಕ್ಟ್ ಕ್ಲಾಸುಗಳನ್ನು ರಚಿಸುವುದು ಮತ್ತು ಬಳಸುವುದನ್ನು ಕಲಿತೆವು.
09:21 ಅಸೈನ್ಮೆಂಟ್ ಗಾಗಿ, ಅಬ್ಸ್ಟ್ರಾಕ್ಟ್ ಮೆಥಡ್ run() ಅನ್ನು ಹೊಂದಿರುವ ಒಂದು ಅಬ್ಸ್ಟ್ರಾಕ್ಟ್ ಕ್ಲಾಸ್ Vehicle ಅನ್ನು ರಚಿಸಿ.
09:29 Vehicle ಕ್ಲಾಸ್ ಅನ್ನು extend ಮಾಡುವ ಮತ್ತು ʻʻCar is running on 4 wheels’’ ಎಂದು ಪ್ರಿಂಟ್ ಮಾಡುವ run() ಮೆಥಡ್ ಅನ್ನು ಕಾರ್ಯಗತಗೊಳಿಸುವ ಸಬ್ ಕ್ಲಾಸ್ Car ಒಂದನ್ನು ರಚಿಸಿ.
09:39 ಅಲ್ಲದೆ Vehicle ಕ್ಲಾಸ್ ಅನ್ನು ಮತ್ತೊಮ್ಮೆ extend ಮಾಡುವ ಮತ್ತು “Bike is running on 2 wheels” ಎಂದು ಪ್ರಿಂಟ್ ಮಾಡುವ run() ಮೆಥಡ್ ಅನ್ನು ಕಾರ್ಯಗತಗೊಳಿಸುವ ಸಬ್ ಕ್ಲಾಸ್ Bike ಅನ್ನು ರಚಿಸಿ.
09:50 ಫಲಿತಾಂಶಗಳನ್ನು ದೃಢೀಕರಿಸಲು, main() ಮೆಥಡ್ ಹೊಂದಿರುವ Demo ಕ್ಲಾಸ್ ಅನ್ನು ಸಹ ರಚಿಸಿ.
09:56 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
10:03 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು
10:09 ಆನ್ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ.
10:13 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
10:16 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
10:23 ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
10:28 ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.
10:35 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14