Java/C2/if-else/Kannada

From Script | Spoken-Tutorial
Revision as of 16:31, 18 August 2015 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:02 ಜಾವಾದಲ್ಲಿನ “ ಇಫ್ ಎಲ್ಸ್ ಕನ್ಸ್ಟ್ರಕ್ಟ್ಸ್” ಬಗೆಗಿನ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು :
00:09 *ಕಂಡೀಷನಲ್ ಸ್ಟೇಟ್ಮೆಂಟ್ಸ್
00:11 * ಕಂಡೀಷನಲ್ ಸ್ಟೇಟ್ಮೆಂಟ್ಸ್ ನ ವಿಧಗಳು ಮತ್ತು
00:13 * ಕಂಡೀಷನಲ್ ಸ್ಟೇಟ್ಮೆಂಟ್ಸ್ಗಳನ್ನು ಜಾವ ಪ್ರೋಗ್ರಾಮಿನಲ್ಲಿ ಹೇಗೆ ಉಪಯೋಗಿಸುವುದು ಎಂದು ಕಲಿಯಲಿದ್ದೇವೆ.
00:18 ಈ ಟ್ಯುಟೋರಿಯಲ್ ನಲ್ಲಿ ನಾವು

ಉಬುಂಟು ವರ್ಷನ್ 11.10 (ಹನ್ನೊಂದು ಬಿಂದು ಹತ್ತು), ಜೆಡಿಕೆ 1.6 (ಒಂದು ಬಿಂದು ಆರು) ಮತ್ತು ಎಕ್ಲಿಪ್ಸ್ 3.7.೦ (ಮೂರು ಬಿಂದು ಏಳು ಬಿಂದು ಸೊನ್ನೆ) ಅನ್ನು ಉಪಯೋಗಿಸುತ್ತಿದ್ದೇವೆ.

00:27 ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನೀವು
00:31 * ಜಾವದಲ್ಲಿನ “ಅರಿತ್ಮೆಟಿಕ್”, “ರಿಲೇಶನಲ್” ಮತ್ತು “ಲಾಜಿಕಲ್ ಆಪರೇಷನ್ಸ್” ಗಳ ಬಳಕೆಯನ್ನು ತಿಳಿದಿರಬೇಕು .
00:35 ತಿಳಿಯದಿದ್ದಲ್ಲಿ, ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಈ ಕೆಳಗಿನ ವೆಬ್ಸೈಟ್ ಗೆ ಭೇಟಿ ಕೊಡಿ.
00:42 “ಕಂಡೀಷನಲ್ ಸ್ಟೇಟ್ಮೆಂಟ್ಸ್” ನೀವು ವಿಭಿನ್ನ ಕ್ರಿಯೆಗಳನ್ನು ವಿಭಿನ್ನ ನಿರ್ಣಯಗಳಿಗಾಗಿ ನಿಮ್ಮ ’ಕೋಡ್’ನಲ್ಲಿ ಮಾಡಬಹುದು.
00:48 ಈ ರೀತಿಯ ಸಂದರ್ಭಗಳಲ್ಲಿ ನೀವು “ಕಂಡೀಷನಲ್ ಸ್ಟೇಟ್ಮೆಂಟ್ಸ್” ಗಳನ್ನು ಉಪಯೋಗಿಸಬಹುದು.
00:52 ಪ್ರೋಗಾಮಿನ ನಿರ್ವಹಣೆಯನ್ನು ಹಿಡಿತದಲ್ಲಿಡಲು ಕಂಡೀಷನಲ್ ಸ್ಟೇಟ್ಮೆಂಟ್ ಸಹಕರಿಸುತ್ತದೆ.
00:57 ಜಾವಾದಲ್ಲಿ ಈ ಕೆಳಗಿನ ಕಂಡೀಷನಲ್ ಸ್ಟೇಟ್ಮೆಂಟ್ ಗಳನ್ನು ಹೊಂದಿದ್ದೇವೆ.
01:01 * If (ಇಫ್) ಸ್ಟೇಟ್ಮೆಂಟ್ ;
01:02 * If...Else (ಇಫ್ …. ಎಲ್ಸ್) ಸ್ಟೇಟ್ಮೆಂಟ್ ;
01:03 * If...Else if (ಇಫ್ …. ಎಲ್ಸ್ ಇಫ್) ಸ್ಟೇಟ್ಮೆಂಟ್ ;
01:05 * Nested If (ನೆಸ್ಟೆಡ್ ಇಫ್) ಸ್ಟೇಟ್ಮೆಂಟ್ ;
01:06 * Switch (ಸ್ವಿಚ್) ಸ್ಟೇಟ್ಮೆಂಟ್ ;
01:08 ಈ ಟ್ಯುಟೋರಿಯಲ್ ನಲ್ಲಿ ನಾವು, ಇಫ್, ಇಫ್ …ಎಲ್ಸ್ ಮತ್ತು ಇಫ್ ….. ಎಲ್ಸ್ ಇಫ್ ಸ್ಟೇಟ್ಮೆಂಟ್ ಗಳ ಬಗ್ಗೆ ವಿಸ್ತಾರವಾಗಿ ತಿಳಿಯಲಿದ್ದೇವೆ.
01:15 “ಇಫ್ ಸ್ಟೇಟ್ಮೆಂಟ್;” ಅನ್ನು ಕಂಡೀಷನ್ನಿನ ಆಧಾರದ ಮೇಲೆ ಸ್ಟೇಟ್ಮೆಂಟ್ ಗಳ ಬ್ಲಾಕ್ ಗಳನ್ನು ನಿರ್ವಹಿಸಲು ಉಪಯೋಗಿಸುತ್ತೇವೆ.
01:22 ಇದನ್ನು “ಸಿಂಗಲ್ ಕಂಡೀಷನಲ್ ಸ್ಟೇಟ್ಮೆಂಟ್” ಎಂದು ಕರೆಯುತ್ತಾರೆ.
01:26 “ಇಫ್ ಸ್ಟೇಟ್ಮೆಂಟ್” ನ ನಿಯಮ;
01:28 ಇಫ್ ಸ್ಟೇಟ್ಮೆಂಟ್ ನಲ್ಲಿ, ಕಂಡೀಷನ್ ಟ್ರೂ, ಆಗಿದ್ದರೆ ಬ್ಲಾಕ್ ಕಾರ್ಯನಿರ್ವಹಿಸುತ್ತದೆ.
01:34 ಕಂಡೀಷನ್ “ತಪ್ಪು” ಆಗಿದ್ದರೆ, ಬ್ಲಾಕ್ ಸ್ಕಿಪ್ ಆಗಿ ಕಾರ್ಯನಿರ್ವಹಿಸುವುದಿಲ್ಲ.
01:40 “ಇಫ್” ಸ್ಟೇಟ್ಮೆಂಟ್ ಅನ್ನು ಉಪಯೋಗಿಸುವುದು ಹೇಗೆ ಎಂದು ತಿಳಿಯಲು ಒಂದು ಉದಾಹರಣೆಯನ್ನು ನೋಡೋಣ.
01:45 ನಾವೀಗ ಎಕ್ಲಿಪ್ಸನ್ನು ಆರಂಭಿಸೋಣ.
01:48 ನಾವೀಗ ಒಬ್ಬ ವ್ಯಕ್ತಿಯು “ಮೈನರ್” ಆಗಿದ್ದಾನೆಯೇ ಎಂದು ಕಂಡುಹಿಡಿಯಲು ಪ್ರೋಗ್ರಾಮ್ ಬರೆಯೋಣ.
01:53 ನಾನು ಈಗಾಗಲೇ “ಪರ್ಸನ್” ಎಂಬ ಕ್ಲಾಸನ್ನು ತಯಾರಿಸಿದ್ದೇನೆ.
01:56 ಈಗ, ಮೈನ್ ಮೆಥಡ್ ನ ಒಳಗೆ “ಇಂಟ್” ಟೈಪ್ ನ “ಏಜ್” ವೇರಿಯೇಬಲ್ ಅನ್ನು ಹಾಕೋಣ.
02:02 ಮೈನ್ ಮೆಥಡ್ ನ ಒಳಗೆ int space age is equal to 20. (“ಇಂಟ್ ಸ್ಪೇಸ್ ಏಜ್” ಸಮ ೨೦ ಸೆಮಿ ಕೋಲನ್) ಎಂದು ಟೈಪ್ ಮಾಡಿ.
02:14 ನಾವೀಗ, ಇಫ್ ಸ್ಟೇಟ್ಮೆಂಟನ್ನು ಈ ರೀತಿಯಾಗಿ ಬರೆಯೋಣ:
02:18 ಮುಂದಿನ ಸಾಲಿನಲ್ಲಿ “if” (ಇಫ್) ಆವರಣದ ಒಳಗೆ age < 21 (ಏಜ್ ಲೆಸ್ ದೆನ್ ಇಪ್ಪತ್ತೊಂದು) ಪುಷ್ಪಾವರಣವನ್ನು ತೆರೆದು, ಎಂಟರನ್ನು ಒತ್ತಿ.
02:30 ಇಲ್ಲಿ, ನಾವು “ಏಜ್” ೨೧ ಕ್ಕಿಂತ ಕಡಿಮೆ ಇದೆಯಾ ಎಂದು ಪರಿಶೀಲಿಸುತ್ತಿದ್ದೇವೆ.
02:34 ಹಾಗಾಗಿ ಆವರಣದ ಒಳಗೆ ಏನೆಲ್ಲಾ ಇದೆಯೋ ಅದು ಇಫ್ ಬ್ಲಾಕ್ ಗೆ ಸೇರುತ್ತದೆ.
02:38 ಆದ್ದರಿಂದ ಆವರಣದ ಒಳಗೆ
02:41 ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ಎಲ್ಎನ್, ಆವರಣ ಮತ್ತು ಡಬಲ್ ಇನ್ವರ್ಟಡ್ ಕಾಮದ ಒಳಗೆ ದಿ ಪರ್ಸನ್ ಈಸ್ ಮೈನರ್, ಸೆಮಿ ಕೋಲನ್ ಎಂದು ಟೈಪ್ ಮಾಡಿ.
02:56 ಇಲ್ಲಿ, ಏಜ್ ೨೧ ಕ್ಕಿಂತ ಕಡಿಮೆಯಾಗಿದ್ದರೆ “ದಿ ಪರ್ಸನ್ ಈಸ್ ಮೈನರ್” ಎಂದು ತೋರಿಸಲ್ಪಡುತ್ತದೆ.
03:03 ಈಗ ಪೈಲನ್ನು ಸೇವ್ ಮತ್ತು ರನ್ ಮಾಡಿ.
03:08 ನಾವೀಗ “ದಿ ಪರ್ಸನ್ ಈಸ್ ಮೈನರ್” ಎಂದು ಫಲಿತಾಂಶವನ್ನು ಪಡೆಯುತ್ತೇವೆ.
03:14 ಈ ಉದಾಹರಣೆಯಲ್ಲಿ ವ್ಯಕ್ತಿಯ ವಯಸ್ಸು ೨೦, ಅದು ೨೧ ಕ್ಕಿಂತ ಕಡಿಮೆ.
03:20 ಹಾಗಾಗಿ “ದಿ ಪರ್ಸನ್ ಈಸ್ ಮೈನರ್” ಎಂಬ ಫಲಿತಾಂಶವನ್ನು ಪಡೆದೆವು.
03:24 ನಾವೀಗ, if...else “(ಇಫ್…ಎಲ್ಸ್)” ಸ್ಟೇಟ್ಮೆಂಟ್ ನ ಬಗ್ಗೆ ತಿಳಿಯೋಣ.
03:27 ಇಫ್ …… ಎಲ್ಸ್ ಸ್ಟೇಟ್ಮೆಂಟನ್ನು ಬದಲು ಸ್ಟೇಟ್ಮೆಂಟ್ಸ್ ಗಳ ನಿರ್ವಹಣೆಗೆ ಬಳಸುತ್ತಾರೆ.
03:31 ಇವುಗಳು ಸಿಂಗಲ್ ಕಂಡೀಷನ್ನನ್ನು ಆಧರಿಸಿವೆ
03:34 ನಾವೀಗ “ಇಫ್ …. ಎಲ್ಸ್” ಸ್ಟೇಟ್ಮೆಂಟನ್ನು ಬರೆಯುವ ವಿಧಾನವನ್ನು ನೋಡೋಣ.
03:38 ಕಂಡೀಷನ್ ಟ್ರೂ ಆಗಿದ್ದರೆ, ಸ್ಟೇಟ್ಮೆಂಟ್ ಅಥವಾ ಕೋಡ್ ನ ಬ್ಲಾಕ್ ಎಕ್ಸೆಕ್ಯೂಟ್ ಆಗುತ್ತದೆ.
03:44 ಇಲ್ಲದಿದ್ದರೆ ಇದು ಮತ್ತೊಂದು ಸ್ಟೇಟ್ಮೆಂಟ್ ಅಥವಾ ಕೋಡ್ ನ ಬ್ಲಾಕನ್ನು ಎಕ್ಸೆಕ್ಯೂಟ್ ಮಾಡುತ್ತದೆ.
03:49 ನಾವೀಗ “ಇಫ್……. ಎಲ್ಸ್” ಸ್ಟೇಟ್ಮೆಂಟನ್ನು ಪ್ರೋಗ್ರಾಮಿನಲ್ಲಿ ಹೇಗೆ ಬಳಸುವುದೆಂದು ನೋಡೋಣ.
03:54 ನಾವೀಗ ಎಕ್ಲಿಪ್ಸನ್ನು ಪ್ರಾರಂಭಿಸೋಣ.
03:57 ನಾವೀಗ ವ್ಯಕ್ತಿಯು “ಮೈನರ್ ಅಥವಾ ಮೇಜರ್” ಆಗಿದ್ದಾನೆಯೇ ಎಂದು ಕಂಡುಹಿಡಿಯಲು ಪ್ರೋಗ್ರಾಮನ್ನು ಬರೆಯೋಣ.
04:03 ಮೈನ್ ಮೆಥಡ್ ನ ಒಳಗೆ int age is equal to 25 (ಇಂಟ್ ಏಜ್ ಈಸ್ ಈಕ್ವಲ್ ಟು ೨೫).
04:12 ನಂತರ “ಇಫ್” ಆವರಣದ ಒಳಗೆ “ಏಜ್ ಗ್ರೇಟರ್ ದೇನ್ ೨೧”,
04:19 ಪುಷ್ಪಾವರಣದಲ್ಲಿ ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ಎಲ್ಎನ್, ಆವರಣ ಮತ್ತು ಡಬಲ್ ಇನ್ವರ್ಟಡ್ ಕಾಮದ ಒಳಗೆ ದಿ ಪರ್ಸನ್ ಈಸ್ ಮೇಜರ್ ಸೆಮಿ ಕೊಲನ್ ಎಂದು ಟೈಪ್ ಮಾಡಿ.
04:28 ಮುಂದಿನ ಸಾಲಿನಲ್ಲಿ
04:32 “ಎಲ್ಸ್” ಪುಷ್ಪಾವರಣದಲ್ಲಿ
04:38 ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ಎಲ್ಎನ್, ಆವರಣ ಮತ್ತು ಡಬಲ್ ಇನ್ವರ್ಟಡ್ ಕಾಮದ ಒಳಗೆ ದಿ ಪರ್ಸನ್ ಈಸ್ ಮೈನರ್ ಸೆಮಿ ಕೊಲನ್ ಎಂದು ಟೈಪ್ ಮಾಡಿ.
04:51 ಇಲ್ಲಿ, ವಯಸ್ಸು ೨೧ಕ್ಕಿಂತ ಕಡಿಮೆ ಇದ್ದರೆ “ದಿ ಪರ್ಸನ್ ಈಸ್ ಮೈನರ್” ಎಂದು ತೋರಿಸಲ್ಪಡುತ್ತದೆ.
04:58 ಇಲ್ಲದಿದ್ದರೆ “ದಿ ಪರ್ಸನ್ ಈಸ್ ಮೆಜರ್” ಎಂದು ತೋರಿಸಲ್ಪಡುತ್ತದೆ.
05:02 ಪ್ರೋಗ್ರಾಮನ್ನು ಸೇವ್ ಮತ್ತು ರನ್ ಮಾಡಿ ನೋಡೋಣ.
05:07 ನಾವು “ದಿ ಪರ್ಸನ್ ಈಸ್ ಮೇಜರ್” ಎಂಬ ಫಲಿತಾಂಶವನ್ನು ಪಡೆಯುತ್ತೇವೆ.
05:11 ಇಲ್ಲಿ, ವ್ಯಕ್ತಿಯ ವಯಸ್ಸು ೨೫ ಅದು ೨೧ ಕ್ಕಿಂತ ಹೆಚ್ಚಿದೆ.
05:17 ಆದ್ದರಿಂದ ಪ್ರೋಗ್ರಾಮ್ “ದಿ ಪರ್ಸನ್ ಈಸ್ ಮೇಜರ್” ಎಂಬ ಫಲಿತಾಂಶವನ್ನು ತೋರಿಸುತ್ತದೆ.
05:22 ( ಇಫ್…. ಎಲ್ಸ್ ಇಫ್) ಸ್ಟೇಟ್ಮೆಂಟ್ ವಿಭಿನ್ನ ರೀತಿಯ ಸ್ಟೇಟ್ಮೆಂಟ್ ಗಳನ್ನು ನಿರ್ವಹಿಸಲು ಉಪಯೋಗಿಸಲ್ಪಡುತ್ತದೆ
05:29 ಇವುಗಳು ಕೊಟ್ಟಿರುವ ಎರಡು ಕಂಡೀಷನ್ ಗಳನ್ನು ಆಧರಿಸಿರುತ್ತವೆ.
05:33 ನಿಮ್ಮ ಅವಶ್ಯಕತೆಯನ್ನು ಆಧರಿಸಿ ಇನ್ನು ಹೆಚ್ಚು ಕಂಡೀಷನ್ ಗಳನ್ನು ಸೇರಿಸಬಹುದು.
05:38 ಇದನ್ನು branching or decision making statement. (ಬ್ರಾಂಚಿಂಗ್ ಅಥವಾ ಡಿಸಿಷನ್ ಮೇಕಿಂಗ್ ಸ್ಟೇಟ್ಮೆಂಟ್) ಎಂದೂ ಕರೆಯುತ್ತಾರೆ.
05:43 ನಾವೀಗ “ಇಫ್……… ಎಲ್ಸ್ ಇಫ್” ಸ್ಟೇಟ್ಮೆಂಟನ್ನು ಬರೆಯುಲು ನಿಯಮವನ್ನು ನೋಡೋಣ.
05:48 ಇಫ್ ಸ್ಟೇಟ್ಮೆಂಟ್ ಆರಂಭಿಕವಾಗಿ “ಕಂಡೀಷನ್ ೧.ನ್ನು” ಪರಿಶೀಲಿಸುತ್ತದೆ
05:53 ಕಂಡೀಷನ್ ೧ ಸರಿಯಾಗಿದ್ದರೆ, ಅದು ಸ್ಟೇಟ್ಮೆಂಟ್ ಅಥವಾ ಬ್ಲಾಕ್ ಕೋಡನ್ನು ಎಕ್ಸೆಕ್ಯೂಟ್ ಮಾಡುತ್ತದೆ.
05:59 ಇಲ್ಲದಿದ್ದರೆ ಅದು ಪುನಃ ಕಂಡೀಷನ್ ೨ನ್ನು ಪರಿಶೀಲಿಸುತ್ತದೆ.
06:02 ಕಂಡೀಷನ್ ೨ ಸರಿಯಾಗಿದ್ದರೆ, ಅದು ಸ್ಟೇಟ್ಮೆಂಟ್ ಅಥವಾ ಬ್ಲಾಕ್ ಕೋಡ್ ೨ನ್ನು ಎಕ್ಸೆಕ್ಯೂಟ್ ಮಾಡುತ್ತದೆ.
06:09 ಇಲ್ಲದ್ದಿದ್ದರೆ ಸ್ಟೇಟ್ಮೆಂಟ್ ೩ ಅಥವಾ ಬ್ಲಾಕ್ ಕೋಡ್ ೩ ಅನ್ನು ಎಕ್ಸೆಕ್ಯೂಟ್ ಮಾಡುತ್ತದೆ.
06:13 ಈ ರೀತಿಯಾಗಿ ನಾವು “ಇಫ್…ಎಲ್ಸ್” ಬ್ಲಾಕ್ ಗಳಾಗಿ ಕೋಡನ್ನು ಹೆಚ್ಚಿಸಬಹುದು.
06:17 ಈ ಬ್ಲಾಕ್ ಗಳು ಹೆಚ್ಚು ಕಂಡೀಷನ್ ಗಳನ್ನು ಹೊಂದಿರಬಹುದು.
06:20 ಟ್ರೂ ಕಂಡೀಷನ್ ಸಿಗುವವರೆಗೂ, ಸಂಬಂಧಿಸಿದ ಕೋಡ್ ಎಕ್ಸೆಕ್ಯೂಟ್ ಮಾಡಲ್ಪಡುತ್ತದೆ.
06:25 ಎಲ್ಲಾ ಕಂಡೀಷನ್ ಗಳು ತಪ್ಪಾಗಿದ್ದರೆ, ಇದು ಅಂತಿಮ ಎಲ್ಸ್ ಸೆಕ್ಷನ್ನನ್ನು ಎಕ್ಸೆಕ್ಯೂಟ್ ಮಾಡುತ್ತದೆ.
06:30 (ಇಫ್….. ಎಲ್ಸ್ ಇಫ್) ಸ್ಟೇಟ್ಮೆಂಟನ್ನು ಪ್ರೋಗ್ರಾಮಿನಲ್ಲಿ ಹೇಗೆ ಬಳಸುವುದೆಂದು ನೋಡೋಣ.
06:35 ಹಾಗಾಗಿ ಎಕ್ಲಿಪ್ಸನ್ನು ಪ್ರಾರಂಭಿಸೋಣ.
06:37 ನಾನು ಈಗಾಗಲೇ ಸ್ಟೂಡೆಂಟ್ ಎಂಬ ಹೆಸರಿನ ಕ್ಲಾಸನ್ನು ತಯಾರಿಸಿದ್ದೇನೆ.
06:40 ನಾವು ವಿದ್ಯಾರ್ಥಿಯ ಸ್ತರವನ್ನು ಕಂಡುಹಿಡಿಯುವ ಪ್ರೋಗ್ರಾಮನ್ನು ಬರೆಯೋಣ.
06:44 ಸ್ಕೋರ್ ಪರ್ಸೆಂಟೇಜನ್ನು ಆಧರಿಸಿ ಇದನ್ನು ಮಾಡಲಾಗುತ್ತದೆ.
06:47 ಹಾಗಾಗಿ ಮೈನ್ ಮೆಥಡ್ ನ ಒಳಗೆ “ಇಂಟ್” ಸ್ಪೇಸ್ “ಟೇಸ್ಟ್ ಸ್ಕೋರ್” “ಈಕ್ವಲ್ ಟು ೭೦” ಸೆಮಿಕೊಲನ್” ಎಂದು ಟೈಪ್ ಮಾಡಿ.
06:58 “ಟೆಸ್ಟ್ ಸ್ಕೋರ್” ಹೆಸರಿನ ಇನ್ಪುಟ್ ವೇರಿಯೇಬಲನ್ನು ಸ್ಕೋರ್ ಪರ್ಸೆಂಟೇಜನ್ನು ಪಡೆಯಲು ಉಪಯೋಗಿಸುತ್ತಾರೆ.
07:05 ಮುಂದಿನ ಸಾಲಿನಲ್ಲಿ “ಇಫ್” ಆವರಣದ ಒಳಗೆ “ಟೆಸ್ಟ್ ಸ್ಕೋರ್ ಲೆಸ್ ದೆನ್ ೩೫,” ಪುಷ್ಪಾವರಣದಲ್ಲಿ “ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ಎಲ್ಎನ್ ಆವರಣ ಮತ್ತು ಡಬಲ್ ಕೋಟ್ಸ್ ನ ಒಳಗೆ “ಸಿ ಗ್ರೇಡ್”, ಸೆಮಿಕೊಲನ್” ಎಂದು ಟೈಪ್ ಮಾಡಿ.
07:28 ಟೆಸ್ಟ್ ಸ್ಕೋರ್ ೩೫ ಕ್ಕಿಂತ ಕಡಿಮೆ ಇದ್ದರೆ ಪ್ರೋಗ್ರಾಮ್ “ಸಿ ಗ್ರೇಡ್” ಎಂದು ತೋರಿಸುತ್ತದೆ.
07:34 ಮುಂದಿನ ಸಾಲಿನಲ್ಲಿ “ಎಲ್ಸ್” ಎಂದು ಟೈಪ್ ಮಾಡಿ.
07:37 ಮುಂದಿನ ಸಾಲಿನಲ್ಲಿ “ಇಫ್” ಆವರಣದ ಒಳಗೆ “ಟೆಸ್ಟ್ ಸ್ಕೋರ್” ಗ್ರೇಟರ್ ದೆನ್ ಅಥವಾ ಸಮ ೩೫” ಮತ್ತು “ಟೆಸ್ಟ್ ಸ್ಕೋರ್ ಲೆಸ್ ದೆನ್ ಅಥವಾ ಸಮ ೬೦” ಎಂದು ಟೈಪ್ ಮಾಡಿ, ಎಲ್ಲಾ ಕಂಡೀಷನ್ ಗಳನ್ನು ಆವರಣದ ಒಳಗೆ ಇಟ್ಟು ಪುಷ್ಪಾವರಣವನ್ನು ತೆರೆದು ಎಂಟರನ್ನು ಒತ್ತಿ.
08:03 ಆವರಣದ ಒಳಗೆ “ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ಎಲ್ಎನ್” “ಬಿ ಗ್ರೇಡ್” ಸೆಮಿಕೊಲನ್ ಎಂದು ಟೈಪ್ ಮಾಡಿ.
08:13 ಇಲ್ಲಿ, ಪ್ರೋಗ್ರಾಮ್ “ಎಲ್ಸ್ ಇಫ್” ಸೆಕ್ಷೆನ್ನಿನಲ್ಲಿರುವ ಎರಡನೇ ಕಂಡೀಷನ್ನನ್ನು ಪರಿಶೀಲಿಸುತ್ತದೆ.
08:18 “ಟೆಸ್ಟ್ ಸ್ಕೋರ್” ೩೫ ಮತ್ತು ೬೦ ರ ಮಧ್ಯದಲ್ಲಿದ್ದರೆ ಪ್ರೋಗ್ರಾಮ್ “ಬಿ ಗ್ರೇಡ”ನ್ನು ತೋರಿಸುತ್ತದೆ.
08:24 ಮುಂದಿನ ಸಾಲಿನಲ್ಲಿ “ಎಲ್ಸ್” ಆವರಣದ ಒಳಗೆ “ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ ಎಲ್ ಎನ್”, ಎಂದು ಆವರಣ ಮತ್ತು ಡಬಲ್ ಕೋಟ್ಸ್ ನ ಒಳಗೆ “ಎ ಗ್ರೇಡ್”, ಸೆಮಿಕೊಲನ್ ಎಂದು ಟೈಪ್ ಮಾಡಿ.
08:42 ಅಂದರೆ ಅಂತಿಮವಾಗಿ, ಎರಡೂ ಕಂಡೀಷನ್ ಗಳು ತಪ್ಪಾಗಿದ್ದರೆ, ಪ್ರೋಗ್ರಾಮ್ “ಎ ಗ್ರೇಡ”ನ್ನು ತೋರಿಸುತ್ತದೆ.
08:48 ನಾವೀಗ ಈ ಕೋಡನ್ನು ಸೇವ್ ಮತ್ತು ರನ್ ಮಾಡೋಣ.
08:51 “ಎ ಗ್ರೇಡ್” ಎಂಬ ಫಲಿತಾಂಶವನ್ನು ಪಡೆಯುತ್ತೇವೆ.
08:55 ಈ ಪ್ರೋಗ್ರಾಮಿನಲ್ಲಿ, ವಿದ್ಯಾರ್ಥಿಯ “ಟೆಸ್ಟ್ ಸ್ಕೋರ್” ೭೦ ಆಗಿದೆ.
09:00 ಆದ್ದರಿಂದ ಫಲಿತಾಂಶವನ್ನು “ಎ ಗ್ರೇಡ್” ಎಂದು ತೋರಿಸುತ್ತದೆ.
09:02 ನಾವೀಗ “ಟೆಸ್ಟ್ ಸ್ಕೋರ”ನ್ನು ೫೫ ಕ್ಕೆ ಬದಲಿಸೋಣ.
09:07 ಈಗ ಪ್ರೋಗ್ರಾಮನ್ನು ಸೇವ್ ಮತ್ತು ರನ್ ಮಾಡಿ.
09:10 ಈ ಉದಾಹರಣೆಯಲ್ಲಿ, ಫಲಿತಾಂಶವು “ಬಿ ಗ್ರೇಡ್” ಎಂದು ತೋರಿಸಲ್ಪಡುತ್ತದೆ.
09:16 ನಾವು ಕಂಡೀಷನ್ ಗಳ ಸಂಖ್ಯೆಯನ್ನು ಸಹ ಹೆಚ್ಚಿಸಬಹುದು.
09:19 “ಬಿ ಗ್ರೇಡ್” ಔಟ್ಪುಟ್ ಸೆಕ್ಷನ್ನಿನ ನಂತರ ಮತ್ತೊಂದು ಕಂಡೀಷನ್ನನ್ನು ಸೇರಿಸೋಣ.
09:23 ಈಗ ಟೈಪ್ ಮಾಡಿ, ಎಲ್ಸ್.

ಮುಂದಿನ ಸಾಲಿನಲ್ಲಿ “ಇಫ್” “ಟೆಸ್ಟ್ ಸ್ಕೋರ್ ಗ್ರೇಟರ್ ದೆನ್ ಅಥವಾ ಸಮ ೬೦” ಮತ್ತು “ಟೆಸ್ಟ್ ಸ್ಕೋರ್ ಲೆಸರ್ ದೆನ್ ಅಥವಾ ಸಮ ೭೦.”

09:47 ಪುಷ್ಪಾವರಣವನ್ನು ತೆರೆದು “ ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ ಎಲ್ ಎನ್” ಆವರಣ ಮತ್ತು ಡಬಲ್ ಕೋಟ್ಸ್ ನ ಓಳಗೆ “ ಓ ಗ್ರೇಡ್” ಸೆಮಿಕೊಲನ್.”
10:01 ಇಲ್ಲಿ “ಟೆಸ್ಟ್ ಸ್ಕೋರ್” ೬೦ ಮತ್ತು ೭೦ ರ ಮಧ್ಯದಲ್ಲಿದ್ದರೆ ಪ್ರೋಗ್ರಾಮ್ “ಓ ಗ್ರೇಡ್” ಎಂದು ತೋರಿಸುತ್ತದೆ.
10:07 ಈಗ ವಿದ್ಯಾರ್ಥಿಯ “ಟೆಸ್ಟ್ ಸ್ಕೋರ್”ಅನ್ನು ೭೦ ಕ್ಕೆ ಬದಲಿಸಿ.
10:12 ಈಗ ಫೈಲನ್ನು ಸೇವ್ ಮತ್ತು ರನ್ ಮಾಡಿ.
10:15 ನಾವು ಈಗ ಪಡೆಯುವ ಫಲಿತಾಂಶ ಹೀಗಿರುತ್ತದೆ.
10:17 ಪ್ರೋಗ್ರಮ್ “ಓ ಗ್ರೇಡ್”ಅನ್ನು ಫಲಿತಾಂಶವಾಗಿ ತೋರಿಸುತ್ತದೆ.
10:20 ಮುಂಚೆ ತೋರಿಸಿದ ಹಾಗೆ ಅದು “ಎ ಗ್ರೇಡ್” ಆಗಿರುವುದಿಲ್ಲ.
10:23 “ಟೆಸ್ಟ್ ಸ್ಕೋರ್” ೭೦ ಕ್ಕಿಂತ ಹೆಚ್ಚಿರುವಾಗ, ಪ್ರೋಗ್ರಾಮ್ “ಎ ಗ್ರೇಡನ್ನು” ತೋರಿಸುತ್ತದೆ.
10:28 ಕಂಡೀಷನಲ್ ಸ್ಟ್ರಕ್ಚರ್ಸ್ ಗಳನ್ನು ಕೋಡಿಂಗ್ ಮಾಡುವಾಗ :
10:30 * ಸ್ಟೇಟ್ಮೆಂಟನ್ನು ಮುಗಿಸುವಾಗ ಸೆಮಿಕೊಲನ್ ಸೇರಿಸುವುದನ್ನು ಸದಾ ನೆನಪಿನಲ್ಲಿಡಿ.
10:35 * ಆದರೆ ಕಂಡೀಷನ್ನಿನ ನಂತರ ಸೆಮಿಕೊಲನ್ನನ್ನು ಸೇರಿಸಬೇಡಿ.
10:40 * ಕೋಡ್ ನ ಬ್ಲಾಕನ್ನು ಪುಷ್ಪಾವರಣದ ಒಳಗೆ ಸೇರಿಸಿ.
10:43 * ಬ್ಲಾಕ್ ಒಂದೇ ಸ್ಟೇಟ್ಮೆಂಟನ್ನು ಹೊಂದಿದ್ದರೆ ಪುಷ್ಪಾವರಣ ಐಚ್ಛಿಕ.
10:49 ನೀವೀಗ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದಿರಿ.
10:51 ಈ ಟ್ಯುಟೋರಿಯಲ್ ನಲ್ಲಿ
10:53 ನಾವು ಕಂಡೀಷನಲ್ ಸ್ಟೇಟ್ಮೆಂಟನ್ನು ವಿವರಿಸಿದೆವು.
10:56 * ಕಂಡೀಷನಲ್ ಸ್ಟೇಟ್ಮೆಂಟ್ಸ್ ಗಳ ವಿಧಾನಗಳನ್ನು ಪಟ್ಟಿ ಮಾಡಿದೆವು.
10:59 * ಜಾವಾ ಪ್ರೋಗ್ರಾಮಿನಲ್ಲಿ ಕಂಡೀಷನಲ್ ಸ್ಟೇಟ್ಮೆಂಟ್ಸ್ ಗಳಾದ “ಇಫ್, ಇಫ್…. ಎಲ್ಸ್ ಮತ್ತು ಇಫ್…… ಎಲ್ಸ್ ಇಫ್” ಗಳನ್ನು ಉಪಯೋಗಿಸಿದೆವು.
11:04 ಈಗ ಅಸೈನ್ಮೆಂಟ್ ನ ರೂಪದಲ್ಲಿ ಕಂಡೀಷನಲ್ ಸ್ಟೇಟ್ಮೆಂಟ್ ಗಳಾದ : “ಇಫ್, ಇಫ್…ಎಲ್ಸ್ ಮತ್ತು ಇಫ್…..ಎಲ್ಸ್ ಇಫ್” ಸ್ಟೇಟ್ಮೆಂಟ್ ಗಳನ್ನು ಉಪಯೋಗಿಸಿ ಜಾವಾಪ್ರೋಗ್ರಾಮನ್ನು ಬರೆಯಿರಿ.
11:12 * “ಇಫ್” ಸ್ಟೇಟ್ಮೆಂಟನ್ನು ಉಪಯೋಗಿಸಿ ಎರಡು ಮೌಲ್ಯಗಳನ್ನು ಹೋಲಿಸುವ ಜಾವಾ ಪ್ರೋಗ್ರಮನ್ನು ಬರೆಯಿರಿ.
11:17 * ಕೊಟ್ಟಿರುವ ಸಂಖ್ಯೆಯು ಸಮ ಅಥವಾ ಬೆಸ ಸಂಖ್ಯೆಯೇ ಎಂದು ಕಂಡುಹಿಡಿಯುವ ಜಾವಾ ಪ್ರೋಗ್ರಾಮನ್ನು ಬರೆಯಿರಿ.

ಸೂಚನೆ: “ಇಫ್ …. ಎಲ್ಸ್” ಸ್ಟೇಟ್ಮೆಂಟನ್ನು ಉಪಯೋಗಿಸಿ.

11:23 * ಮೂರು ಸಂಖ್ಯೆಗಳಲ್ಲಿ ಅತ್ಯಂತ ದೊಡ್ಡ ಸಂಖ್ಯೆಯನ್ನು ಕಂಡುಹಿಡಿಯಲು ಜಾವಾ ಪ್ರೋಗ್ರಾಮನ್ನು ಬರೆಯಿರಿ.

ಸೂಚನೆ : “ಇಫ್…ಎಲ್ಸ್ ಇಫ್” ಸ್ಟೇಟ್ಮೆಂಟನ್ನು ಉಪಯೋಗಿಸಿ.

11:29 “ಸ್ಪೋಕನ್ ಟ್ಯುಟೋರಿಯಲ್” ಪ್ರೋಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು.
11:32 ಈ ಕೆಳಗಿನ ಲಿಂಕ್ ನಲ್ಲಿ ಸಿಗುವ ವೀಡಿಯೋವನ್ನು ನೋಡಿ.
11:35 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
11:38 ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
11:42 ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಗಣವು
11:44 * ಈ ಪಾಠವನ್ನಾಧರಿಸಿ ಕಾರ್ಯಶಾಲೆಗಳನ್ನು ಆಯೋಜಿಸುತ್ತವೆ.
11:47 * ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.

ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.

11:56 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
12:00 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
12:06 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
12:15 ಈ ಪಾಠದ ಅನುವಾದಕ ಬೆಂಗಳೂರಿನಿಂದ ರುಕ್ಮಾಂಗದ ಆರ್ಯ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.

. ಧನ್ಯವಾದಗಳು.

Contributors and Content Editors

NaveenBhat, Vasudeva ahitanal