Java/C2/Programming-features-Eclipse/Kannada

From Script | Spoken-Tutorial
Revision as of 10:23, 13 June 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:02 ಎಲಿಪ್ಸ್ ನಲ್ಲಿ ಪ್ರೊಗ್ರಾಮ್ ನ ವೈಶಿಷ್ಟ್ಯಗಳನ್ನು ತಿಳಿಸಿಕೊಡುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು,
00:10 ಎಕ್ಲಿಪ್ಸ್ ನ ಸುಲಭವಾದ ಪ್ರೊಗ್ರಾಮ್ ವೈಶಿಷ್ಟ್ಯಗಳ ಬಗ್ಗೆ ತಿಳಿಯಲಿದ್ದೇವೆ.
00:15 ಈ ಟ್ಯುಟೋರಿಯಲ್ ಗಾಗಿ ನಾವು Ubuntu 11.0, JDK 1.6 ಮತ್ತು Eclipse 3.7.0 ಯನ್ನು ಉಪಯೋಗಿಸುತ್ತಿದ್ದೇವೆ.
00:23 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಮ್ಮ ಸಿಸ್ಟಮ್ ನಲ್ಲಿ,
00:26 ಎಕ್ಲಿಪ್ಸ್ ಇನ್ಸ್ಟಾಲ್ ಆಗಿರುವುದು ಅತ್ಯಗತ್ಯವಾಗಿದೆ ಹಾಗೂ,
00:28 ನಿಮಗೆ ಎಕ್ಲಿಪ್ಸ್ ನಲ್ಲಿ ಸರಳವಾದ ಜಾವಾ ಪ್ರೊಗ್ರಾಮ್ ಅನ್ನು ಹೇಗೆ ಬರೆಯುವುದೆಂದೂ ಗೊತ್ತಿರಬೇಕು.
00:32 ಇಲ್ಲದಿದ್ದಲ್ಲಿ, ಇದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ದಯವಿಟ್ಟು ಕೆಳಗೆ ತೋರಿಸಿರುವ ನಮ್ಮ ವೆಬ್ಸೈಟ್ ಗೆ ಭೇಟಿಕೊಡಿ.
00:40 ಎಕ್ಲಿಪ್ಸ್ IDE ಎಂಬುದು ತುಂಬಾ ಸುಲಭವಾದ ವೈಶಿಷ್ಟ್ಯಗಳನ್ನು ಹೊಂದಿದೆ, ಉದಾಹರಣೆಗೆ,
00:44 Auto completion,
00:45 Syntax highlighting,
00:46 Error dialog box ಮತ್ತು
00:48 Shortcut keys.
00:49 ನಾವು ಪ್ರತಿಯೊಂದು ವೈಶಿಷ್ಟ್ಯಗಳನ್ನೂ ವಿಸ್ತೃತವಾಗಿ ನೋಡೋಣ.
00:59 ನಾನು Features ಎಂಬ ಹೆಸರಿನ ಕ್ಲಾಸ್ ಅನ್ನು ರಚಿಸಿದ್ದೇನೆ ಹಾಗೂ ಮೈನ್ ಮೆಥಡ್ ಅನ್ನು ಸೇರಿಸಿದ್ದೇನೆ.
01:05 ನಾವು ಮೊದಲು ಎಕ್ಲಿಪ್ಸ್ ನಲ್ಲಿ Auto completion ಎಂಬ ವೈಶಿಷ್ಟ್ಯದ ಬಗ್ಗೆ ನೋಡೋಣ.
01:10 ಮೈನ್ ಮೆಥೆಡ್ ನ ಒಳಗೆ ಓಪನಿಂಗ್ ಬ್ರೇಸ್ ಅನ್ನು ಟೈಪ್ ಮಾಡಿ Enter ಒತ್ತಿ.
01:17 ನೋಡಿ, ಇದು ತಂತಾನೇ ಇದಕ್ಕೆ ಸಂಬಂಧಿಸಿದ ಕ್ಲೋಸಿಂಗ್ ಬ್ರೇಸ್ ಅನ್ನು ಹಾಗೂ ಕರ್ಸರ್ ನ ಸ್ಥಾನವನ್ನು ಸೆಟ್ ಮಾಡುತ್ತದೆ.
01:25 ಇದು ಜೋಡಿಯಲ್ಲಿ ಕೆಲಸ ಮಾಡುವ ಎಲ್ಲಾ ಕೋಡ್ ಗಳನ್ನೂ ಪೂರ್ಣಗೊಳಿಸುತ್ತದೆ.
01:29 ಉದಾಹರಣೆಗಾಗಿ, ಪೆರಾಂಥಿಸಿಸ್, ಓಪನ್ ಪೆರಾಂಥಿಸಿಸ್ ಅನ್ನು ಟೈಪ್ ಮಾಡಿ,
01:35 ಇಲ್ಲಿ ನಾವು ನೋಡುವುದೇನೆಂದರೆ, ನಾವು ಕೇವಲ ಓಪನ್ ಪೆರಾಂಥಿಸಿಸ್ ಅನ್ನು ಟೈಪ್ ಮಾಡಿದ್ದೇವೆ ಹಾಗೂ ಎಕ್ಲಿಪ್ಸ್ ತಂತಾನೇ ಕ್ಲೋಸಿಂಗ್ ಪೆರಾಂಥಿಸಿಸ್ ಅನ್ನು ಸೇರಿಸುತ್ತದೆ.
01:42 ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಒಂದೊಂಮ್ಮೆ ನಾವು ಕ್ಲೋಸಿಂಗ್ ಪೆರಾಂಥಿಸಿಸ್ ಅನ್ನೂ ಟೈಪ್ ಮಾಡಿದಲ್ಲಿ ಅದು ಎರಡು ಕ್ಲೋಸಿಂಗ್ ಪೆರಾಂಥಿಸಿಸ್ ಬರದಂತೆ ನೋಡಿಕೊಳ್ಳುತ್ತದೆ.
01:52 ನಾನೀಗ ಕ್ಲೋಸಿಂಗ್ ಪೆರಾಂಥಿಸಿಸ್ ಅನ್ನು ಟೈಪ್ ಮಾಡುತ್ತೇನೆ, ಈಗ ಗಮನಿಸಿ, ಕೇವಲ ಕರ್ಸರ್ ಎಡಬದಿಗೆ ಹೋಗುತ್ತದೆ ಹಾಗೂ ಮತ್ತೊಂದು ಪೆರಾಂಥಿಸಿಸ್ ಸೇರುವುದಿಲ್ಲ.
02:02 ಹೀಗೆಯೇ ಡಬಲ್ ಕೋಟ್ ನಲ್ಲೂ ಕೂಡಾ ಆಗುತ್ತದೆ.
02:06 ಓಪನಿಂಗ್ ಕೋಟ್ಗಳನ್ನು ಟೈಪ್ ಮಾಡಿದಲ್ಲಿ ಅದು ತಂತಾನೇ ಕೋಟ್ಗಳನ್ನು ಕ್ಲೋಸ್ ಮಾಡುತ್ತದೆ.
02:12 ಒಂದೊಂಮ್ಮೆ ನಾವು ಕ್ಲೋಸಿಂಗ್ ಕೋಟ್ಗಳನ್ನು ಅನ್ನೂ ಟೈಪ್ ಮಾಡಿದಲ್ಲಿ ಅದು ಮತ್ತೊಂದು ಕ್ಲೋಸಿಂಗ್ ಕೋಟ್ ಬರದಂತೆ ನೋಡಿಕೊಳ್ಳುತ್ತದೆ.
02:19 ಈಗ ನಾನು ಕೋಟ್ಗಳನ್ನು ಟೈಪ್ ಮಾಡುತ್ತೇನೆ. ಆಗ ಕರ್ಸರ್ ಎಡಬದಿಗೆ ಸರಿಯುತ್ತದೆ ಮತ್ತು ಮತ್ತೊಂದು ಕೋಟ್ ಸೇರುವುದಿಲ್ಲ.
02:27 Auto-completion ಎಂಬುದು ಒಂದು ಬಹುಮುಖ ವೈಶಿಷ್ಟ್ಯವಾಗಿದ್ದು ಇದು ಕೋಡ್ ನ ರಚನೆಯನ್ನು ನಿರ್ವಹಿಸುವುದರಲ್ಲಿ ಬಹಳ ಸಹಾಯವನ್ನು ಮಾಡುತ್ತದೆ,
02:32 ಹಾಗೂ ಪೆರಾಂಥಿಸಿಸ್, ಬ್ರೇಸ್ ಹಾಗೂ ಕ್ಲೋಸಿಂಗ್ ಕೋಟ್ ಗಳ ಮರೆಯಾಗುವಿಕೆಯಿಂದಾಗುವ ದೋಷಗಳನ್ನು ತಡೆಯುತ್ತದೆ.
02:44 ಮುಂದಿನ ಪ್ರೊಗ್ರಾಮ್ ವೈಶಿಷ್ಟ್ಯವು suggestion ಎಂಬುದಾಗಿದೆ.
02:48 ಇಷ್ಟರವರೆಗೆ ಟೈಪ್ ಮಾಡಿದ ಎಲ್ಲವನ್ನೂ ಅಳಿಸೋಣ.
02:54 ನಾವು hello ಎಂಬುದನ್ನು ಪ್ರಿಂಟ್ ಮಾಡಲು ಔಟ್ಪುಟ್ ಸ್ಟೇಟ್ಮೆಂಟ್ ಅನ್ನು ಬರೆಯೋಣ. System dot ….
03:07 ಗಮನಿಸಿ, ಎಕ್ಲಿಪ್ಸ್ ಎಂಬುದು ಡ್ರಾಪ್ ಡೌನ್ ಸೂಚಿಯನ್ನು ತೋರಿಸುತ್ತದೆ.
03:11 ಆ ಸೂಚಿಯು ಸ್ಟೆಟ್ಮೆಂಟ್ ಅನ್ನು ಪೂರ್ಣಗೊಳಿಸಲು ಬೇಕಾದ err, in, out, console ಎಂಬೀ ಮುಂತಾದ ಎಲ್ಲಾ ಸಾಧ್ಯತೆಗಳನ್ನೂ ಸೂಚಿಸುತ್ತದೆ.
03:19 ಕೆಳಗೆ out ಎಂಬಲ್ಲಿ ಹೋಗಿ Enter ಒತ್ತಿ. ಪುನಃ dot ಎಂದು ಟೈಪ್ ಮಾಡಿ.
03:28 ಈಗ ಎಕ್ಲಿಪ್ಸ್ ಔತ್ ಮೊಡ್ಯುಲ್ ನಿಂದ ಸಲಹೆಗಳನ್ನು ಕೊಡುತ್ತದೆ.
03:33 ಕೆಳಗೆ println() ಎಂಬಲ್ಲಿ ಹೋಗಿ Enter ಒತ್ತಿ. ಈಗ ಪೆರಾಂಥಿಸಿಸ್ ನ ಒಳಗೆ ಕೋಟ್ ನ ಮಧ್ಯದಲ್ಲಿ Hello ಎಂದು ಟೈಪ್ ಮಾಡಿ.
03:57 ಮುಂದಿನದು Syntax highlighting ಎಂಬ ವಿಶೇಷತೆ.
04:02 ಇಲ್ಲಿ ಗಮನಿಸಿ, public class, public static void ಎಂಬ ಕೀವರ್ಡ್ ಗಳು ಬೇರೆ ಬಣ್ಣದಲ್ಲಿವೆ.
04:09 ಹಾಗೂ Hello ಎಂಬುದು ನೀಲಿ ಬಣ್ಣದಲ್ಲಿದೆ, ಇದರಿಂದ ಇದು ಸ್ಟ್ರಿಂಗ್ ಎಂಬುದು ತಿಳಿಯುತ್ತದೆ.
04:16 ಈ Syntax highlighting ಎಂಬ ವಿಶೇಷತೆಯು ಕೀವರ್ಡ್ ಮತ್ತು ಕೋಡ್ ನ ಉಳಿದ ಬೇರೆ ಭಾಗಗಳನ್ನು ಪ್ರತ್ಯೆಕಿಸುತ್ತದೆ.
04:27 ಎಕ್ಲಿಪ್ಸ್, ಪ್ರೊಗ್ರಾಮರ್ ಗೆ ದೋಷಗಳನ್ನು ಹುಡುಕುವಲ್ಲಿ ಕೂಡಾ ಸಹಾಯ ಮಾಡುತ್ತದೆ.
04:31 ಪ್ರೋಗ್ರಾಮ್ ನಲ್ಲಿ ದೋಷವು ಎಡ ಭಾಗದಲ್ಲಿ ರೆಡ್ ಕ್ರಾಸ್ ಸಿಂಬಲ್ ರೂಪದಲ್ಲಿ ಸೂಚಿಸಲಾಗುತ್ತದೆ.
04:36 ನಾವು ಈ ಪ್ರೊಗ್ರಾಮ್ ನಲ್ಲಿ ದೋಷವಿದೆಯೆಂದು ನೋಡಬಹುದು, ದೋಷದ ಮೇಲೆ ಮೌಸ್ ಅನ್ನು ಒಯ್ಯಿರಿ,
04:46 ಅಲ್ಲಿ ನಾವು ಸೆಮಿಕೊಲನ್ ಮರೆಯಾಗಿದೆ ಎಂಬ ಎರರ್ ಅನ್ನು ಕಾಣಬಹುದು ಹಾಗೂ ಇದಕ್ಕೆ ಪರಿಹಾರವನ್ನೂ ನಾವು ನೋಡಬಹುದು.
04:57 ನಾವು ಒಂದೊಮ್ಮೆ ದೋಷವನ್ನು ಪರಿಹರಿಸದೇ ರನ್ ಮಾಡಲು ಮುಂದುವರಿದಲ್ಲಿ, ರೈಟ್ ಕ್ಲಿಕ್ ಮಾಡಿ, run as ಎಂಬುದನ್ನು ಆಯ್ಕೆಮಾಡಿ ಅಲ್ಲಿ application
05:12 ಆಗ ನಾವು Error ಎಂಬ ಡಯಲಾಗ್ ಬಾಕ್ಸ್ ಅನ್ನು ಕಾಣುತ್ತೇವೆ. ಅಲ್ಲಿ, ಇಲ್ಲೊಂದು ದೋಷವಿದೆ ಹಾಗೂ ಮುಂದುವರಿಯುವುದೇ ಅಥವಾ ಇಲ್ಲವೇ ಎಂದು ಕೇಳುತ್ತದೆ.
05:13 ಈಗ ನಾವು ಮುಂದುವರೆಯೋಣ. ನಾವಿಲ್ಲಿ ದೋಷವನ್ನು ತೋರಿಸುವ ಔಟ್ಪುಟ್ ಅನ್ನು ಕಾಣುತ್ತೇವೆ ಮತ್ತು,
05:35 ನಾವು ಪ್ರೊಬ್ಲಮ್ ಕನ್ಸೋಲ್ ಗೆ ಹೋದಲ್ಲಿ ಅಲ್ಲಿ ನಾವು ಸೂಚಿಯಲ್ಲಿ ಎಲ್ಲಾ ದೋಷಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ಪರಿಹಾರಗಳನ್ನು ನೋಡುತ್ತೇವೆ.
05:43 ನಾವೀಗ ಸೆಮಿಕೊಲನ್ ಅನ್ನು ಸೇರಿಸುವ ಮೂಲಕ ದೋಷವನ್ನು ಪರಿಹರಿಸೋಣ. ಸೇವ್ ಮಾಡಲು Ctrl S ಒತ್ತಿ.
05:53 ಎಕ್ಲಿಪ್ಸ್ ನಲ್ಲಿರುವ ಪ್ರೊಗ್ರಾಮರ್ ಗೆ ಸಹಾಯವಾಗುವ ಇನ್ನೊಂದು ವೈಶಿಷ್ಟ್ಯವೆಂದರೆ shortcut-keys.
06:01 ಎಲ್ಲಾ ಪ್ರೊಗ್ರಾಮ್ ಗಳಲ್ಲಿ ಇರುವ ಸಾಮಾನ್ಯವಾದ shortcut-key ಗಳೆಂದರೆ ಸೇವ್ ಮಾಡಲು Ctrl+S ಹಾಗೂ ಓಪನ್ ಮಾಡಲು Ctrl+O.
06:07 ಎಕ್ಲಿಪ್ಸ್ ನಲ್ಲೂ ಕೂಡಾ ಸಾಮಾನ್ಯವಾಗಿ ಉಪಯೋಗಿಸುವ ಕ್ರಿಯೆಗಳಿಗೆ shortcut key ಗಳಿವೆ.
06:12 Control F11. ಇದು ಕೋಡ್ ಅನ್ನು ರನ್ ಮಾಡಲು ಇರುವ ಶಾರ್ಟ್ಕಟ್ ಆಗಿದೆ.
06:16 ಇದನ್ನು ಈಗ ಪ್ರಯತ್ನಿಸೋಣ. Ctrl ಅನ್ನು ಒತ್ತಿ ಹಿಡಿದು F11 ಅನ್ನು ಒತ್ತಿ, ನೋಡಿ ಈಗ ಕೋಡ್ ಎಂಬುದು ರನ್ ಆಗಿ ಔಟ್ಪುಟ್ ನಲ್ಲಿ Hello ಎಂದು ಪ್ರಿಂಟ್ ಆಗಿದೆ.
06:27 ಬೇರೆ ಬೇರೆ ವಿಕಲ್ಪಗಳಿಗಿರುವ ಶಾರ್ಟ್ಕಟ್ ಗಳು ಮೆನ್ಯುವಿನಲ್ಲಿ ಕಾಣಸಿಗುತ್ತದೆ. Run ಅನ್ನು ಕ್ಲಿಕ್ ಮಾಡಿ.
06:33 ಇಲ್ಲಿ ಗಮನಿಸಿ, ವಿಕಲ್ಪಗಳ ಎಡಭಾಗದಲ್ಲಿ ಅವುಗಳ ಶಾರ್ಟ್ಕಟ್ ಗಳು ಇವೆ.
06:40 ಇಲ್ಲಿ Debug ಗೆ ಇರುವ ಶಾರ್ಟ್ಕಟ್ ಎಂದರೆ F11.
06:45 ಇವುಗಳು ತುಂಬಾ ಸಣ್ಣ ಆದರೆ ಎಕ್ಲಿಪ್ಸ್ ನಲ್ಲಿ ಅತ್ಯಂತ ಸಾಮಾನ್ಯವಾಗಿ ಉಪಯೋಗಿಸುವ ಪ್ರೊಗ್ರಾಮಿಂಗ್ ವೈಶಿಷ್ಟ್ಯಗಳ ಸೂಚಿಯಾಗಿದೆ. ನಾವು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ಮುಂದಿನ ಟ್ಯುಟೋರಿಯಲ್ ಗಳಲ್ಲಿ ನೋಡೋಣ.
06:56 ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ. ಈ ಟ್ಯುಟೋರಿಯಲ್ ನಲ್ಲಿ ನಾವು ಎಕ್ಲಿಪ್ಸ್ ನಲ್ಲಿನ ಪ್ರೊಗ್ರಾಮಿಂಗ್ ವೈಶಿಷ್ಟ್ಯಗಳಾದ
07:04 Auto completion,
07:05 Syntax highlighting,
07:06 Error dialog box, ಮತ್ತು
07:07 Shortcut keys ಮುಂತಾದವುಗಳನ್ನು ಹೇಗೆ ಉಪಯೋಗಿಸುವುದೆಂದು ಕಲಿತೆವು.
07:10 ಈ ಟ್ಯುಟೋರಿಯಲ್ ನ ಅಭ್ಯಾಸಕ್ಕಾಗಿ,
07:12 ಕ್ಲಾಸ್ ನಲ್ಲಿ Hello ಎಂದು ಪ್ರಿಂಟ್ ಮಾಡಲು ಒಂದು ಪ್ರೊಗ್ರಾಮ್ ಅನ್ನು ಬರೆಯಿರಿ.
07:17 ಈ ಪ್ರಕ್ರಿಯೆಯಲ್ಲಿ ಎಕ್ಲಿಪ್ಸ್ ನ ಎಲ್ಲಾ ಪ್ರೊಗ್ರಾಮಿಂಗ್ ವೈಶಿಷ್ಟ್ಯಗಳನ್ನೂ ಅನ್ವಯಿಸಿ.
07:22 ಇದರ ಕ್ರಿಯೆಗಳನ್ನು ಗಮನಿಸಿ.
07:25 ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ.
07:30 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
07:33 ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
07:37 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
07:42 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
07:45 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
07:52 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
07:56 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
08:02 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
08:07 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

PoojaMoolya, Vasudeva ahitanal