Java/C2/Programming-features-Eclipse/Kannada
From Script | Spoken-Tutorial
Time | Narration |
00:02 | ಎಲಿಪ್ಸ್ ನಲ್ಲಿ ಪ್ರೊಗ್ರಾಮ್ ನ ವೈಶಿಷ್ಟ್ಯಗಳನ್ನು ತಿಳಿಸಿಕೊಡುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:10 | ಎಕ್ಲಿಪ್ಸ್ ನ ಸುಲಭವಾದ ಪ್ರೊಗ್ರಾಮ್ ವೈಶಿಷ್ಟ್ಯಗಳ ಬಗ್ಗೆ ತಿಳಿಯಲಿದ್ದೇವೆ. |
00:15 | ಈ ಟ್ಯುಟೋರಿಯಲ್ ಗಾಗಿ ನಾವು Ubuntu 11.0, JDK 1.6 ಮತ್ತು Eclipse 3.7.0 ಯನ್ನು ಉಪಯೋಗಿಸುತ್ತಿದ್ದೇವೆ. |
00:23 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಮ್ಮ ಸಿಸ್ಟಮ್ ನಲ್ಲಿ, |
00:26 | ಎಕ್ಲಿಪ್ಸ್ ಇನ್ಸ್ಟಾಲ್ ಆಗಿರುವುದು ಅತ್ಯಗತ್ಯವಾಗಿದೆ ಹಾಗೂ, |
00:28 | ನಿಮಗೆ ಎಕ್ಲಿಪ್ಸ್ ನಲ್ಲಿ ಸರಳವಾದ ಜಾವಾ ಪ್ರೊಗ್ರಾಮ್ ಅನ್ನು ಹೇಗೆ ಬರೆಯುವುದೆಂದೂ ಗೊತ್ತಿರಬೇಕು. |
00:32 | ಇಲ್ಲದಿದ್ದಲ್ಲಿ, ಇದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ದಯವಿಟ್ಟು ಕೆಳಗೆ ತೋರಿಸಿರುವ ನಮ್ಮ ವೆಬ್ಸೈಟ್ ಗೆ ಭೇಟಿಕೊಡಿ. |
00:40 | ಎಕ್ಲಿಪ್ಸ್ IDE ಎಂಬುದು ತುಂಬಾ ಸುಲಭವಾದ ವೈಶಿಷ್ಟ್ಯಗಳನ್ನು ಹೊಂದಿದೆ, ಉದಾಹರಣೆಗೆ, |
00:44 | Auto completion, Syntax highlighting, |
00:46 | Error dialog box ಮತ್ತು |
00:48 | Shortcut keys.ನಾವು ಪ್ರತಿಯೊಂದು ವೈಶಿಷ್ಟ್ಯಗಳನ್ನೂ ವಿಸ್ತೃತವಾಗಿ ನೋಡೋಣ. |
00:59 | ನಾನು Features ಎಂಬ ಹೆಸರಿನ ಕ್ಲಾಸ್ ಅನ್ನು ರಚಿಸಿದ್ದೇನೆ ಹಾಗೂ ಮೈನ್ ಮೆಥಡ್ ಅನ್ನು ಸೇರಿಸಿದ್ದೇನೆ. |
01:05 | ನಾವು ಮೊದಲು ಎಕ್ಲಿಪ್ಸ್ ನಲ್ಲಿ Auto completion ಎಂಬ ವೈಶಿಷ್ಟ್ಯದ ಬಗ್ಗೆ ನೋಡೋಣ. |
01:10 | ಮೈನ್ ಮೆಥೆಡ್ ನ ಒಳಗೆ ಓಪನಿಂಗ್ ಬ್ರೇಸ್ ಅನ್ನು ಟೈಪ್ ಮಾಡಿ Enter ಒತ್ತಿ. |
01:17 | ನೋಡಿ, ಇದು ತಂತಾನೇ ಇದಕ್ಕೆ ಸಂಬಂಧಿಸಿದ ಕ್ಲೋಸಿಂಗ್ ಬ್ರೇಸ್ ಅನ್ನು ಹಾಗೂ ಕರ್ಸರ್ ನ ಸ್ಥಾನವನ್ನು ಸೆಟ್ ಮಾಡುತ್ತದೆ. |
01:25 | ಇದು ಜೋಡಿಯಲ್ಲಿ ಕೆಲಸ ಮಾಡುವ ಎಲ್ಲಾ ಕೋಡ್ ಗಳನ್ನೂ ಪೂರ್ಣಗೊಳಿಸುತ್ತದೆ. |
01:29 | ಉದಾಹರಣೆಗಾಗಿ, ಪೆರಾಂಥಿಸಿಸ್, ಓಪನ್ ಪೆರಾಂಥಿಸಿಸ್ ಅನ್ನು ಟೈಪ್ ಮಾಡಿ, |
01:35 | ಇಲ್ಲಿ ನಾವು ನೋಡುವುದೇನೆಂದರೆ, ನಾವು ಕೇವಲ ಓಪನ್ ಪೆರಾಂಥಿಸಿಸ್ ಅನ್ನು ಟೈಪ್ ಮಾಡಿದ್ದೇವೆ ಹಾಗೂ ಎಕ್ಲಿಪ್ಸ್ ತಂತಾನೇ ಕ್ಲೋಸಿಂಗ್ ಪೆರಾಂಥಿಸಿಸ್ ಅನ್ನು ಸೇರಿಸುತ್ತದೆ. |
01:42 | ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಒಂದೊಂಮ್ಮೆ ನಾವು ಕ್ಲೋಸಿಂಗ್ ಪೆರಾಂಥಿಸಿಸ್ ಅನ್ನೂ ಟೈಪ್ ಮಾಡಿದಲ್ಲಿ ಅದು ಎರಡು ಕ್ಲೋಸಿಂಗ್ ಪೆರಾಂಥಿಸಿಸ್ ಬರದಂತೆ ನೋಡಿಕೊಳ್ಳುತ್ತದೆ. |
01:52 | ನಾನೀಗ ಕ್ಲೋಸಿಂಗ್ ಪೆರಾಂಥಿಸಿಸ್ ಅನ್ನು ಟೈಪ್ ಮಾಡುತ್ತೇನೆ, ಈಗ ಗಮನಿಸಿ, ಕೇವಲ ಕರ್ಸರ್ ಎಡಬದಿಗೆ ಹೋಗುತ್ತದೆ ಹಾಗೂ ಮತ್ತೊಂದು ಪೆರಾಂಥಿಸಿಸ್ ಸೇರುವುದಿಲ್ಲ. |
02:02 | ಹೀಗೆಯೇ ಡಬಲ್ ಕೋಟ್ ನಲ್ಲೂ ಕೂಡಾ ಆಗುತ್ತದೆ. |
02:06 | ಓಪನಿಂಗ್ ಕೋಟ್ಗಳನ್ನು ಟೈಪ್ ಮಾಡಿದಲ್ಲಿ ಅದು ತಂತಾನೇ ಕೋಟ್ಗಳನ್ನು ಕ್ಲೋಸ್ ಮಾಡುತ್ತದೆ. |
02:12 | ಒಂದೊಂಮ್ಮೆ ನಾವು ಕ್ಲೋಸಿಂಗ್ ಕೋಟ್ಗಳನ್ನು ಅನ್ನೂ ಟೈಪ್ ಮಾಡಿದಲ್ಲಿ ಅದು ಮತ್ತೊಂದು ಕ್ಲೋಸಿಂಗ್ ಕೋಟ್ ಬರದಂತೆ ನೋಡಿಕೊಳ್ಳುತ್ತದೆ. |
02:19 | ಈಗ ನಾನು ಕೋಟ್ಗಳನ್ನು ಟೈಪ್ ಮಾಡುತ್ತೇನೆ. ಆಗ ಕರ್ಸರ್ ಎಡಬದಿಗೆ ಸರಿಯುತ್ತದೆ ಮತ್ತು ಮತ್ತೊಂದು ಕೋಟ್ ಸೇರುವುದಿಲ್ಲ. |
02:27 | Auto-completion ಎಂಬುದು ಒಂದು ಬಹುಮುಖ ವೈಶಿಷ್ಟ್ಯವಾಗಿದ್ದು ಇದು ಕೋಡ್ ನ ರಚನೆಯನ್ನು ನಿರ್ವಹಿಸುವುದರಲ್ಲಿ ಬಹಳ ಸಹಾಯವನ್ನು ಮಾಡುತ್ತದೆ, |
02:32 | ಹಾಗೂ ಪೆರಾಂಥಿಸಿಸ್, ಬ್ರೇಸ್ ಹಾಗೂ ಕ್ಲೋಸಿಂಗ್ ಕೋಟ್ ಗಳ ಮರೆಯಾಗುವಿಕೆಯಿಂದಾಗುವ ದೋಷಗಳನ್ನು ತಡೆಯುತ್ತದೆ. |
02:44 | ಮುಂದಿನ ಪ್ರೊಗ್ರಾಮ್ ವೈಶಿಷ್ಟ್ಯವು suggestion ಎಂಬುದಾಗಿದೆ. |
02:48 | ಇಷ್ಟರವರೆಗೆ ಟೈಪ್ ಮಾಡಿದ ಎಲ್ಲವನ್ನೂ ಅಳಿಸೋಣ. |
02:54 | ನಾವು hello ಎಂಬುದನ್ನು ಪ್ರಿಂಟ್ ಮಾಡಲು ಔಟ್ಪುಟ್ ಸ್ಟೇಟ್ಮೆಂಟ್ ಅನ್ನು ಬರೆಯೋಣ. System dot …. |
03:07 | ಗಮನಿಸಿ, ಎಕ್ಲಿಪ್ಸ್ ಎಂಬುದು ಡ್ರಾಪ್ ಡೌನ್ ಸೂಚಿಯನ್ನು ತೋರಿಸುತ್ತದೆ. |
03:11 | ಆ ಸೂಚಿಯು ಸ್ಟೆಟ್ಮೆಂಟ್ ಅನ್ನು ಪೂರ್ಣಗೊಳಿಸಲು ಬೇಕಾದ err, in, out, console ಎಂಬೀ ಮುಂತಾದ ಎಲ್ಲಾ ಸಾಧ್ಯತೆಗಳನ್ನೂ ಸೂಚಿಸುತ್ತದೆ. |
03:19 | ಕೆಳಗೆ out ಎಂಬಲ್ಲಿ ಹೋಗಿ Enter ಒತ್ತಿ. ಪುನಃ dot ಎಂದು ಟೈಪ್ ಮಾಡಿ. |
03:28 | ಈಗ ಎಕ್ಲಿಪ್ಸ್ ಔತ್ ಮೊಡ್ಯುಲ್ ನಿಂದ ಸಲಹೆಗಳನ್ನು ಕೊಡುತ್ತದೆ. |
03:33 | ಕೆಳಗೆ println() ಎಂಬಲ್ಲಿ ಹೋಗಿ Enter ಒತ್ತಿ. ಈಗ ಪೆರಾಂಥಿಸಿಸ್ ನ ಒಳಗೆ ಕೋಟ್ ನ ಮಧ್ಯದಲ್ಲಿ Hello ಎಂದು ಟೈಪ್ ಮಾಡಿ. |
03:57 | ಮುಂದಿನದು Syntax highlighting ಎಂಬ ವಿಶೇಷತೆ. |
04:02 | ಇಲ್ಲಿ ಗಮನಿಸಿ, public class, public static void ಎಂಬ ಕೀವರ್ಡ್ ಗಳು ಬೇರೆ ಬಣ್ಣದಲ್ಲಿವೆ. |
04:09 | ಹಾಗೂ Hello ಎಂಬುದು ನೀಲಿ ಬಣ್ಣದಲ್ಲಿದೆ, ಇದರಿಂದ ಇದು ಸ್ಟ್ರಿಂಗ್ ಎಂಬುದು ತಿಳಿಯುತ್ತದೆ. |
04:16 | ಈ Syntax highlighting ಎಂಬ ವಿಶೇಷತೆಯು ಕೀವರ್ಡ್ ಮತ್ತು ಕೋಡ್ ನ ಉಳಿದ ಬೇರೆ ಭಾಗಗಳನ್ನು ಪ್ರತ್ಯೆಕಿಸುತ್ತದೆ. |
04:27 | ಎಕ್ಲಿಪ್ಸ್, ಪ್ರೊಗ್ರಾಮರ್ ಗೆ ದೋಷಗಳನ್ನು ಹುಡುಕುವಲ್ಲಿ ಕೂಡಾ ಸಹಾಯ ಮಾಡುತ್ತದೆ. |
04:31 | ಪ್ರೋಗ್ರಾಮ್ ನಲ್ಲಿ ದೋಷವು ಎಡ ಭಾಗದಲ್ಲಿ ರೆಡ್ ಕ್ರಾಸ್ ಸಿಂಬಲ್ ರೂಪದಲ್ಲಿ ಸೂಚಿಸಲಾಗುತ್ತದೆ. |
04:36 | ನಾವು ಈ ಪ್ರೊಗ್ರಾಮ್ ನಲ್ಲಿ ದೋಷವಿದೆಯೆಂದು ನೋಡಬಹುದು, ದೋಷದ ಮೇಲೆ ಮೌಸ್ ಅನ್ನು ಒಯ್ಯಿರಿ, |
04:46 | ಅಲ್ಲಿ ನಾವು ಸೆಮಿಕೊಲನ್ ಮರೆಯಾಗಿದೆ ಎಂಬ ಎರರ್ ಅನ್ನು ಕಾಣಬಹುದು ಹಾಗೂ ಇದಕ್ಕೆ ಪರಿಹಾರವನ್ನೂ ನಾವು ನೋಡಬಹುದು. |
04:57 | ನಾವು ಒಂದೊಮ್ಮೆ ದೋಷವನ್ನು ಪರಿಹರಿಸದೇ ರನ್ ಮಾಡಲು ಮುಂದುವರಿದಲ್ಲಿ, ರೈಟ್ ಕ್ಲಿಕ್ ಮಾಡಿ, run as ಎಂಬುದನ್ನು ಆಯ್ಕೆಮಾಡಿ ಅಲ್ಲಿ application |
05:12 | ಆಗ ನಾವು Error ಎಂಬ ಡಯಲಾಗ್ ಬಾಕ್ಸ್ ಅನ್ನು ಕಾಣುತ್ತೇವೆ. ಅಲ್ಲಿ, ಇಲ್ಲೊಂದು ದೋಷವಿದೆ ಹಾಗೂ ಮುಂದುವರಿಯುವುದೇ ಅಥವಾ ಇಲ್ಲವೇ ಎಂದು ಕೇಳುತ್ತದೆ. |
05:16 | ಈಗ ನಾವು ಮುಂದುವರೆಯೋಣ. ನಾವಿಲ್ಲಿ ದೋಷವನ್ನು ತೋರಿಸುವ ಔಟ್ಪುಟ್ ಅನ್ನು ಕಾಣುತ್ತೇವೆ ಮತ್ತು, |
05:35 | ನಾವು ಪ್ರೊಬ್ಲಮ್ ಕನ್ಸೋಲ್ ಗೆ ಹೋದಲ್ಲಿ ಅಲ್ಲಿ ನಾವು ಸೂಚಿಯಲ್ಲಿ ಎಲ್ಲಾ ದೋಷಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ಪರಿಹಾರಗಳನ್ನು ನೋಡುತ್ತೇವೆ. |
05:43 | ನಾವೀಗ ಸೆಮಿಕೊಲನ್ ಅನ್ನು ಸೇರಿಸುವ ಮೂಲಕ ದೋಷವನ್ನು ಪರಿಹರಿಸೋಣ. ಸೇವ್ ಮಾಡಲು Ctrl S ಒತ್ತಿ. |
05:53 | ಎಕ್ಲಿಪ್ಸ್ ನಲ್ಲಿರುವ ಪ್ರೊಗ್ರಾಮರ್ ಗೆ ಸಹಾಯವಾಗುವ ಇನ್ನೊಂದು ವೈಶಿಷ್ಟ್ಯವೆಂದರೆ shortcut-keys. |
06:01 | ಎಲ್ಲಾ ಪ್ರೊಗ್ರಾಮ್ ಗಳಲ್ಲಿ ಇರುವ ಸಾಮಾನ್ಯವಾದ shortcut-key ಗಳೆಂದರೆ ಸೇವ್ ಮಾಡಲು Ctrl+S ಹಾಗೂ ಓಪನ್ ಮಾಡಲು Ctrl+O. |
06:07 | ಎಕ್ಲಿಪ್ಸ್ ನಲ್ಲೂ ಕೂಡಾ ಸಾಮಾನ್ಯವಾಗಿ ಉಪಯೋಗಿಸುವ ಕ್ರಿಯೆಗಳಿಗೆ shortcut key ಗಳಿವೆ. |
06:12 | Control F11. ಇದು ಕೋಡ್ ಅನ್ನು ರನ್ ಮಾಡಲು ಇರುವ ಶಾರ್ಟ್ಕಟ್ ಆಗಿದೆ. |
06:16 | ಇದನ್ನು ಈಗ ಪ್ರಯತ್ನಿಸೋಣ. Ctrl ಅನ್ನು ಒತ್ತಿ ಹಿಡಿದು F11 ಅನ್ನು ಒತ್ತಿ, ನೋಡಿ ಈಗ ಕೋಡ್ ಎಂಬುದು ರನ್ ಆಗಿ ಔಟ್ಪುಟ್ ನಲ್ಲಿ Hello ಎಂದು ಪ್ರಿಂಟ್ ಆಗಿದೆ. |
06:27 | ಬೇರೆ ಬೇರೆ ವಿಕಲ್ಪಗಳಿಗಿರುವ ಶಾರ್ಟ್ಕಟ್ ಗಳು ಮೆನ್ಯುವಿನಲ್ಲಿ ಕಾಣಸಿಗುತ್ತದೆ. Run ಅನ್ನು ಕ್ಲಿಕ್ ಮಾಡಿ. |
06:33 | ಇಲ್ಲಿ ಗಮನಿಸಿ, ವಿಕಲ್ಪಗಳ ಎಡಭಾಗದಲ್ಲಿ ಅವುಗಳ ಶಾರ್ಟ್ಕಟ್ ಗಳು ಇವೆ. |
06:40 | ಇಲ್ಲಿ Debug ಗೆ ಇರುವ ಶಾರ್ಟ್ಕಟ್ ಎಂದರೆ F11. |
06:45 | ಇವುಗಳು ತುಂಬಾ ಸಣ್ಣ ಆದರೆ ಎಕ್ಲಿಪ್ಸ್ ನಲ್ಲಿ ಅತ್ಯಂತ ಸಾಮಾನ್ಯವಾಗಿ ಉಪಯೋಗಿಸುವ ಪ್ರೊಗ್ರಾಮಿಂಗ್ ವೈಶಿಷ್ಟ್ಯಗಳ ಸೂಚಿಯಾಗಿದೆ. ನಾವು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ಮುಂದಿನ ಟ್ಯುಟೋರಿಯಲ್ ಗಳಲ್ಲಿ ನೋಡೋಣ. |
06:56 | ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ. ಈ ಟ್ಯುಟೋರಿಯಲ್ ನಲ್ಲಿ ನಾವು ಎಕ್ಲಿಪ್ಸ್ ನಲ್ಲಿನ ಪ್ರೊಗ್ರಾಮಿಂಗ್ ವೈಶಿಷ್ಟ್ಯಗಳಾದ |
07:04 | Auto completion, Syntax highlighting |
07:06 | Error dialog box, ಮತ್ತು Shortcut keys ಮುಂತಾದವುಗಳನ್ನು ಹೇಗೆ ಉಪಯೋಗಿಸುವುದೆಂದು ಕಲಿತೆವು. |
07:10 | ಈ ಟ್ಯುಟೋರಿಯಲ್ ನ ಅಭ್ಯಾಸಕ್ಕಾಗಿ, |
07:12 | ಕ್ಲಾಸ್ ನಲ್ಲಿ Hello ಎಂದು ಪ್ರಿಂಟ್ ಮಾಡಲು ಒಂದು ಪ್ರೊಗ್ರಾಮ್ ಅನ್ನು ಬರೆಯಿರಿ. |
07:17 | ಈ ಪ್ರಕ್ರಿಯೆಯಲ್ಲಿ ಎಕ್ಲಿಪ್ಸ್ ನ ಎಲ್ಲಾ ಪ್ರೊಗ್ರಾಮಿಂಗ್ ವೈಶಿಷ್ಟ್ಯಗಳನ್ನೂ ಅನ್ವಯಿಸಿ. |
07:22 | ಇದರ ಕ್ರಿಯೆಗಳನ್ನು ಗಮನಿಸಿ. |
07:25 | ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ. |
07:30 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. |
07:33 | ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. |
07:37 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
07:42 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
07:45 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
07:52 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
07:56 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
08:02 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
08:07 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.
ಧನ್ಯವಾದಗಳು. |