Java/C2/Creating-object/Kannada

From Script | Spoken-Tutorial
Revision as of 10:55, 13 February 2015 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಒಬ್ಜೆಕ್ಟ್ ಗಳ ರಚನೆಯ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು
  • ರೆಫರೆನ್ಸ್ ವೇರಿಯೇಬಲ್
  • ಒಬ್ಜೆಕ್ಟ್ ಗಳ ರಚನೆ ಮತ್ತು
  • ಒಬ್ಜೆಕ್ಟ್ ಗಳಿಗೆ ಮೆಮೋರಿಯ ಹಂಚಿಕೆಯ ಕುರಿತು ಕಲಿಯುತ್ತೇವೆ.
00:13 ಇಲ್ಲಿ ನಾವು
  • Ubuntu version 11.10 OS ( ಉಬಂಟು ಓಪರೇಟಿಂಗ್ ಸಿಸ್ಟಮ್ ನ ಆವೃತ್ತಿ ೧೧.೧೦)
  • Java Development kit 1.6 (ಜಾವಾ ಡೆವೆಲೊಪ್‍ಮೆಂಟ್ ಕಿಟ್ ೧.೬) ಹಾಗೂ
  • Eclipse 3.7.0 ಮತ್ತು (ಎಕ್ಲಿಪ್ಸ್ ೩.೭.೦)

ಗಳನ್ನು ಉಪಯೋಗಿಸುತ್ತೇವೆ.

00:23 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಎಕ್ಲಿಪ್ಸ್ ಅನ್ನು ಉಪಯೋಗಿಸಿ ಕ್ಲಾಸ್ ಅನ್ನು ರಚನೆ ಮಾಡಲು ತಿಳಿದಿರಬೇಕು.
00:29 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಈ ಜಾಲತಾಣವನ್ನು ಭೇಟಿ ಮಾಡಿ.

spoken-tutorial.org.

00:38 ವೇರಿಯೇಬಲ್ ಮತ್ತು ಮೆಥಡ್ ಗಳು ಸೇರಿ ಕ್ಲಾಸ್ ನ ಮೆಂಬರ್ ಆಗುತ್ತವೆ ಎಂದು ನಾವು ತಿಳಿದಿದ್ದೇವೆ.
00:43 ಕ್ಲಾಸ್ ನ ಮೆಂಬರ್ ಗಳನ್ನು ಆಕ್ಸೆಸ್ಸ್ ಮಾಡಲು ನಾವು ಒಬ್ಜೆಕ್ಟ್ ಗಳನ್ನು ರಚನೆಮಾಡಿಕೊಳ್ಳಬೇಕು.
00:48 ಈಗ ನಾವು ಒಬ್ಜೆಕ್ಟ್ ಎಂದರೇನು ಎಂದು ನೋಡೋಣ.
00:52 ಒಬ್ಜೆಕ್ಟ್ ಕ್ಲಾಸ್ ನ ಇನ್ಸ್-ಟೆನ್ಸ್ ಆಗಿರುತ್ತದೆ.
00:55 ಪ್ರತಿಯೊಂದು ಒಬ್ಜೆಕ್ಟ್ ಗಳೂ ತಮ್ಮದೇ ಆದ ಸ್ಥಿತಿ ಮತ್ತು ನಡವಳಿಕೆ ಗಳನ್ನು ಹೊಂದಿರುತ್ತವೆ.
00:58 ಮೊದಲ ಟ್ಯುಟೋರಿಯಲ್ ನಲ್ಲಿ ಮನುಷ್ಯ ರ ಕ್ಲಾಸ್ ನ ಉದಾಹರಣೆಯನ್ನು ನೆನಪಿಸಿಕೊಳ್ಳಿ.
01:04 ಒಬ್ಜೆಕ್ಟ್ ಗಳು ಅದರ ಸ್ಥಿತಿಯನ್ನು ಫೀಲ್ಡ್ಸ್ ಅಥವಾ ವೇರಿಯೇಬಲ್ ಗಳಲ್ಲಿ ಸಂಗ್ರಹಿಸುತ್ತವೆ.
01:08 ಅವುಗಳು ಮೆಥಡ್ ಗಳ ಮೂಲಕ ಅವುಗಳ ನಡವಳಿಕೆಯನ್ನು ತೋರ್ಪಡಿಸುತ್ತವೆ.
01:11 ಈಗ ನಾವು ರೆಫರೆನ್ಸ್ ವೇರಿಯೇಬಲ್ ಗಳ ಕುರಿತು ಕಲಿಯೋಣ.
01:15 ನಾವು ಜಾವಾದಲ್ಲಿ 8 ಪ್ರಿಮಿಟಿವ್ ಡಾಟಾ ಟೈಪ್ ಗಳ ಕುರಿತು ತಿಳಿದಿದ್ದೇವೆ.
01:19 ಉಳಿದೆಲ್ಲ ಬಗೆಗಳನ್ನು ಒಬ್ಜೆಕ್ಟ್ ಎಂದು ಕರೆಯುತ್ತಾರೆ.
01:23 ಯಾವ ವೇರಿಯೇಬಲ್ ಒಬ್ಜೆಕ್ಟ್ ಅನ್ನು ಸೂಚಿಸುತ್ತದೆಯೋ ಅದನ್ನು ರೆಫರೆನ್ಸ್ ವೇರಿಯೇಬಲ್ ಎನ್ನುವರು.
01:28 ಈಗ ನಾವು ಹಿಂದಿನ ಟ್ಯುಟೋರಿಯಲ್ ನಲ್ಲಿ ರಚನೆ ಮಾಡಿದ Student ಕ್ಲಾಸ್ ಗೆ ಹೋಗೋಣ.
01:37 ಈಗ ಮೊದಲು ಈ ಕ್ಲಾಸ್ ನಿಂದ main ಮೆಥಡ್ ಅನ್ನು ಅಳಿಸೋಣ.
01:49 ಫೈಲ್ ಅನ್ನು ಸೇವ್ ಮಾಡಲು Control ಮತ್ತು S ಕೀ ಗಳನ್ನು ಒಟ್ಟಿಗೇ ಒತ್ತಿರಿ.
01:55 ಈಗ ಅದೇ ಪ್ರಕಲ್ಪ ದಲ್ಲಿ TestStudent ಎಂಬ ಇನ್ನೊಂದು ಕ್ಲಾಸ್ ಅನ್ನು ರಚನೆ ಮಾಡಿ.
02:00 ನಾನು ಅದನ್ನು ಮೊದಲೇ ರಚನೆ ಮಾಡಿಟ್ಟಿರುತ್ತೇನೆ.
02:03 ಈ ಕ್ಲಾಸ್ ನಲ್ಲಿ ನಾನು main ಮೆಥಡ್ ಅನ್ನು ಹೊಂದಿದ್ದೇನೆ.
02:06 ಈಗ main ಮೆಥಡ್ ನಲ್ಲಿ Student ಕ್ಲಾಸ್ ನ ಒಂದು ಒಬ್ಜೆಕ್ಟ್ ಅನ್ನು ರಚನೆ ಮಾಡೋಣ.
02:11 ಅದಕ್ಕಾಗಿ main ಮೆಥಡ್ ನಲ್ಲಿ
02:17 Student ಸ್ಪೇಸ್ stud1 ಸಮ new ಸ್ಪೇಸ್ Student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ತೆರೆದು ಮುಚ್ಚಿ ಸೆಮಿಕೋಲನ್ ಹಾಕಿ.
02:34 ಹೀಗೆ ನಾವು Student ಕ್ಲಾಸ್ ನ ಒಂದು ಒಬ್ಜೆಕ್ಟ್ ಅನ್ನು ರಚಿಸಿದ್ದೇವೆ.
02:37 ಇಲ್ಲಿ Student ಯಾವ ಕ್ಲಾಸ್ ಗೆ ಒಬ್ಜೆಕ್ಟ್ ಅನ್ನು ರಚಿಸುತ್ತೇವೋ ಆ ಕ್ಲಾಸ್ ನ ಹೆಸರು.
02:47 stud1 ಎನ್ನುವುದು Student ಕ್ಲಾಸ್ ನ ಒಬ್ಜೆಕ್ಟ್ ಅನ್ನು ಸೂಚಿಸುವ ಒಂದು ರೆಫರೆನ್ಸ್ ವೇರಿಯೇಬಲ್.
02:53 ಮತ್ತು new ಎನ್ನುವ ಕೀ ವರ್ಡ್ ಹೊಸದಾಗಿ ರಚನೆಯಾಗುವ ಒಬ್ಜೆಕ್ಟ್ ಗೆ ಮೆಮರಿ ಯಲ್ಲಿ ಜಾಗವನ್ನು ಒದಗಿಸಿಕೊಡುತ್ತದೆ.
02:59 stud1 ಎನ್ನುವುದು Student ಕ್ಲಾಸ್ ನ ಒಬ್ಜೆಕ್ಟ್ ಅಲ್ಲ ಎನ್ನುವುದನ್ನು ನೆನಪಿನಲ್ಲಿಡಿ.
03:03 ಇದು ಕೇವಲ ಹೊಸದಾಗಿ ರಚನೆಯಾದ ಒಬ್ಜೆಕ್ಟ್ ನ ರೆಫರೆನ್ಸ್ ಅನ್ನು ಹೊಂದಿರುತ್ತದೆ.
03:09 ಈಗ stud1 ಏನನ್ನು ಹೊಂದಿದೆ ಎಂದು ನೋಡೋಣ.
03:13 ಹಾಗಾಗಿ ಮುಂದಿನ ಸಾಲಿನಲ್ಲಿ System ಡಾಟ್ out ಡಾಟ್println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ stud1 contains ಸ್ಪೇಸ್ ಪ್ಲಸ್ stud1 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
03:44 ಈಗ ಫೈಲ್ ಅನ್ನು TestStudent ಡಾಟ್ java ಎಂದು ಸೇವ್ ಮಾಡಿ ರನ್ ಮಾಡಿ.
03:53 ಕೆಳಗಿನ ಫಲಿತವನ್ನು ಪಡೆಯುತ್ತೇವೆ.
03:56 ಹಾಗಾಗಿ ಇಲ್ಲಿStudent ಎನ್ನುವುದು ಹೊಸ ಒಬ್ಜೆಕ್ಟ್ ಅನ್ನು ಒಳಗೊಂಡಿರುವ ಕ್ಲಾಸ್ ನ ಹೆಸರು.
04:03 ಎರಡನೇ ಭಾಗದಲ್ಲಿರುವುದು ರಚನೆಯಾದ ಹೊಸ ಒಬ್ಜೆಕ್ಟ್ ನ ಮೆಮೋರಿ ಅಡ್ರೆಸ್..
04:08 stud1 ಅನ್ನು ಉಪಯೋಗಿಸಿ Student ಕ್ಲಾಸ್ ನ ಫೀಲ್ಡ್ಸ್ ಮತ್ತು ಮೆಥಡ್ ಗಳನ್ನು ಆಕ್ಸೆಸ್ ಮಾಡಬಹುದು.
04:15 ಮುಂದಿನ ಟ್ಯುಟೋರಿಯಲ್ ಗಳಲ್ಲಿ ಇದರ ಕುರಿತು ಕಲಿಯೋಣ.
04:18 ಈಗ ನಾನು Student ಕ್ಲಾಸ್ ನ ಇನ್ನೊಂದು ಒಬ್ಜೆಕ್ಟ್ ಅನ್ನು ರಚನೆ ಮಾಡುತ್ತೇನೆ.
04:24 ಹಾಗಾಗಿ Student ಸ್ಪೇಸ್ stud2 ಸಮ new ಸ್ಪೇಸ್ Student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ತೆರೆದು ಮುಚ್ಚಿ ಸೆಮಿಕೋಲನ್ ಹಾಕಿ.
04:47 System ಡಾಟ್ out ಡಾಟ್println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ stud2 contains ಸ್ಪೇಸ್ ಪ್ಲಸ್ stud2 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
05:19 ಸೇವ್ ಮಾಡಿ ರನ್ ಮಾಡಿರಿ.
05:25 ಇಲ್ಲಿ ನಾವು stud1 ಮತ್ತು stud2 ಬೇರೆ ಬೇರೆ ಒಬ್ಜೆಕ್ಟ್ ಗಳನ್ನು ರೆಫರ್ ಮಾಡುವುದನ್ನು ನೋಡಬಹುದು.
05:31 ಅಂದರೆ stud1 ಮತ್ತು stud2 ಗಳು ಎರಡು ಬೇರೆ ಬೇರೆ ವಿದ್ಯಾರ್ಥಿಗಳನ್ನು ರೆಫರ್ ಮಾಡುತ್ತವೆ.
05:37 ಅವೆರಡೂ ಬೇರೆ ಬೇರೆ roll number ಮತ್ತು name ಗಳನ್ನುಹೊಂದಿರುತ್ತವೆ.
05:44 ಇಲ್ಲಿ ಸಣ್ಣ ಬದಲಾವಣೆಯನ್ನು ಮಾಡೋಣ.
05:51 Student stud2 ಸಮ stud1 ಎಂದು ಟೈಪ್ ಮಾಡಿ.
06:01 ಸೇವ್ ಮಾಡಿ ರನ್ ಮಾಡಿರಿ.
06:06 ಈಗ stud1 ಮತ್ತು stud2 ಗಳು ಒಂದೇ ಒಬ್ಜೆಕ್ಟ್ ಅನ್ನು ರೆಫರ್ ಮಾಡುವುದನ್ನು ನೋಡಬಹುದು.
06:12 ಅಂದರೆ stud1 ಮತ್ತು stud2 ಎರಡೂ ಒಂದೇ ವಿದ್ಯಾರ್ಥಿಯನ್ನು ರೆಫರ್ ಮಾಡುತ್ತಿದ್ದು ಒಂದೇ roll number ಮತ್ತು name ಅನ್ನು ಹೊಂದಿರುತ್ತವೆ.
06:31 ಈ ಟ್ಯುಟೋರಿಯಲ್ ನಲ್ಲಿ ನಾವು,
06:34 ರೆಫರೆನ್ಸ್ ವೇರಿಯೇಬಲ್ ನ ಕುರಿತು,
06:35 new ಓಪರೇಟರ್ ಅನ್ನು ಉಪಯೋಗಿಸುವ ಕುರಿತು
06:38 ಮತ್ತು ರೆಫರೆನ್ಸ್ ಗಳನ್ನು ಅಸೈನ್ ಮಾಡಲು ಕಲಿತಿದ್ದೇವೆ.
06:41 ಸ್ವಂತ ಅಭ್ಯಾಸಕ್ಕಾಗಿ,
06:43 TestEmployee ಎನ್ನುವ ಇನ್ನೊಂದು ಕ್ಲಾಸ್ ಅನ್ನು ರಚನೆ ಮಾಡಿ,
06:46 TestEmployee ಕ್ಲಾಸ್ ಗೆ emp1 ರೆಫರೆನ್ಸ್ ವೇರಿಯೇಬಲ್ ಆಗಿರುವ ಒಂದು ಒಬ್ಜೆಕ್ಟ್ ಅನ್ನು ರಚನೆ ಮಾಡಿ.
06:52 ಸ್ಪೋಕನ್ ಟ್ಯುಟೋರಿಯಲ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,
06:55 ಮತ್ತು ವೀಡಿಯೋಗಾಗಿ [1] ಅಂತರ್ಜಾಲ ತಾಣವನ್ನು ಭೇಟಿಕೊಡಿ.
06:58 ಇದು ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ತಿಳಿಸಿಕೊಡುತ್ತದೆ.
07:01 ನೀವು ಒಳ್ಳೆಯ ಬ್ಯಾಂಡ್‍ವಿಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್‍ಲೋಡ್ ಮಾಡಿ ನೋಡಬಹುದು.
07:05 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು
07:07 ಸ್ಪೋಕನ್ ಟ್ಯುಟೋರಿಯಲ್ ಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ.
07:10 ಅಂತರ್ಜಾಲಾಧಾರಿತ ಪರೀಕ್ಷೆಯಲ್ಲಿ ಉತೀರ್ಣರಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
07:14 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ
07:20 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ.
07:24 ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ.
07:31 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.
07:40 ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
07:43 . ಅನುವಾದಕ ಮತ್ತು ವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ.
07:46 ಧನ್ಯವಾದಗಳು..

Contributors and Content Editors

NaveenBhat, PoojaMoolya, Pratik kamble