Introduction-to-Computers/C2/Printer-Connection/Kannada

From Script | Spoken-Tutorial
Revision as of 19:21, 28 November 2015 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search

Digital Divide - Printer Connection

Time Narration
00:01 ನಮಸ್ಕಾರ. Printer Connection ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ (Spoken Tutorial) ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು, ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಜೋಡಿಸುವುದನ್ನು (connect) ಕಲಿಯುವೆವು.
00:11 ಈ ಟ್ಯುಟೋರಿಯಲ್ ಗಾಗಿ, ನಾನು
00:13 * Ubuntu Linux 12.10 OS ಮತ್ತು
00:17 * Cannon printer ಇವುಗಳನ್ನು ಬಳಸುತ್ತಿದ್ದೇನೆ.
00:20 ನಾನು ಬೇಗನೆ ಕಂಪ್ಯೂಟರ್ ನ ವಿವಿಧ ಘಟಕಗಳನ್ನು ನಿಮಗೆ ಪರಿಚಯ ಮಾಡಿ ಕೊಡುತ್ತೇನೆ.
00:25 ಇದು CPU (ಸಿ-ಪಿ-ಯು),
00:27 ಮಾನಿಟರ್,
00:29 ಕೀಬೋರ್ಡ್,
00:30 ಮೌಸ್,
00:32 ಮತ್ತು ಪ್ರಿಂಟರ್.
00:34 ನಾವು CPU ನತ್ತ ನೋಡೋಣ.
00:41 ಬಹಳಷ್ಟು CPU ಗಳಲ್ಲಿ, ಕೆಲವು USB ಪೋರ್ಟ್ ಗಳು ಮುಂಭಾಗದಲ್ಲಿ
00:46 ಮತ್ತು ಕೆಲವು ಹಿಂಭಾಗದಲ್ಲಿ ಇರುತ್ತವೆ.
00:49 ಈಗ, ನಾವು ಪ್ರಿಂಟರ್ ನತ್ತ ನೋಡೋಣ.
00:53 ಸಾಮಾನ್ಯವಾಗಿ, ಪ್ರಿಂಟರ್ ನ ಮುಂಭಾಗದಲ್ಲಿ ಅಥವಾ ಮೇಲ್ಭಾಗದಲ್ಲಿ ಒಂದು ‘ಪವರ್ ಸ್ವಿಚ್’ ಇರುತ್ತದೆ.
01:00 ಮತ್ತು ಪ್ರಿಂಟರ್ ನ ಹಿಂಭಾಗದಲ್ಲಿ ಒಂದು ‘ಪವರ್ ಸ್ಲಾಟ್’ ಹಾಗೂ ಒಂದು USB ಪೋರ್ಟ್ ಇರುತ್ತವೆ.
01:11 ಒಂದು ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಕನೆಕ್ಟ್ ಮಾಡಲು, ನಾವು 'USB ಕೇಬಲ್' ಅನ್ನು ಉಪಯೋಗಿಸಬೇಕು.
01:16 ನಾವು 'USB ಕೇಬಲ್' ಅನ್ನು ‘ಪ್ರಿಂಟರ್’ಗೆ ಕನೆಕ್ಟ್ ಮಾಡೋಣ.
01:22 ಈಗ, ಕೇಬಲ್ ನ ಇನ್ನೊಂದು ಕೊನೆಯನ್ನು 'CPU' ನ 'USB ಪೋರ್ಟ್'ಗೆ ಸೇರಿಸೋಣ.
01:30 ಈಗ, ನಮ್ಮ ‘ಪ್ರಿಂಟರ್’, ಕಂಪ್ಯೂಟರ್ ಗೆ ಜೋಡಿಸಲ್ಪಟ್ಟಿದೆ.
01:33 ‘ಪ್ರಿಂಟರ್’ನ ಮೇಲಿರುವ ‘ಪವರ್ ಬಟನ್’ಅನ್ನು ಸ್ವಿಚ್-ಆನ್ ಮಾಡಿ.
01:37 ಈಗ, ನಮ್ಮ ಕಂಪ್ಯೂಟರ್ ಅನ್ನು ಬಳಸಿ, ನಾವು ಪ್ರಿಂಟರ್ ಅನ್ನು ಕಾನ್ಫಿಗರ್ ಮಾಡೋಣ.
01:43 ನಾವು ಡೆಸ್ಕ್ಟಾಪ್ ಗೆ ಹೋಗೋಣ.
01:46 ‘ಲಾಂಚರ್ ಬಾರ್’ನ ಮೇಲ್ಗಡೆ ಎಡಭಾಗದಲ್ಲಿ ಇರುವ 'Dash Home' (ಡ್ಯಾಶ್ ಹೋಮ್) ಐಕಾನ್ ಮೇಲೆ ಕ್ಲಿಕ್ ಮಾಡಿ.
01:53 ‘ಸರ್ಚ್ ಬಾರ್’ನಲ್ಲಿ, “Printing” ಎಂದು ಟೈಪ್ ಮಾಡಿ.
01:58 ಪ್ರಿಂಟರ್ ಐಕಾನ್ ಕಾಣಿಸಿಕೊಳ್ಳುವುದು.
02:02 ಅದರ ಮೇಲೆ ಕ್ಲಿಕ್ ಮಾಡಿ.
02:04 Ubuntu ನ ಹಳೆಯ ಆವೃತ್ತಿಗಳಲ್ಲಿ, ಇವುಗಳ ಮೇಲೆ ಕ್ಲಿಕ್ ಮಾಡಿ-
02:07 'System' (ಸಿಸ್ಟಂ),
02:08 'Administration' (ಅಡ್ಮಿನಿಸ್ಟ್ರೇಶನ್),
02:09 ಮತ್ತು 'Printing' (ಪ್ರಿಂಟಿಂಗ್).
02:12 ಈಗ, 'Printing' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
02:16 ಇದು - 'There are no printers configured yet' ಎಂದು ಹೇಳುತ್ತದೆ.
02:21 ಮೇಲ್ಗಡೆ ಎಡಭಾಗದಲ್ಲಿ, ಹಸಿರು ಬಣ್ಣದ ‘Plus’ ಚಿಹ್ನೆಯನ್ನು ಹೊಂದಿದ 'Add' ಎಂಬ ಹೆಸರಿನ ಒಂದು ಬಟನ್ ಇದೆ. ಅದರ ಮೇಲೆ ಕ್ಲಿಕ್ ಮಾಡಿ.
02:30 ಇದು, ‘New Printer’ ಎಂಬ ಡೈಲಾಗ್-ಬಾಕ್ಸ್ ಅನ್ನು ಓಪನ್ ಮಾಡುವುದು.
02:34 ಎಡಭಾಗದಲ್ಲಿ, ಕಂಪ್ಯೂಟರ್ ಗೆ ಕನೆಕ್ಟ್ ಮಾಡಲಾದ ಪ್ರಿಂಟರ್ ಸಾಧನಗಳ ಒಂದು ಪಟ್ಟಿಯನ್ನು ತೋರಿಸಲಾಗುವುದು.
02:42 ಇಲ್ಲಿ, ನಾವು ನಮ್ಮ ಪ್ರಿಂಟರ್ ಅನ್ನು, ಎಂದರೆ, 'Cannon Printer' ಅನ್ನು ಆಯ್ಕೆಮಾಡಿ ನಂತರ 'Forward'ನ ಮೇಲೆ ಕ್ಲಿಕ್ ಮಾಡೋಣ.
02:51 ಆಗ, ಅದು ತನ್ನಷ್ಟಕ್ಕೆ ತಾನೇ ‘ಡ್ರೈವರ್’ಗಳಿಗಾಗಿ ಹುಡುಕಲು ಆರಂಭಿಸುವುದು. ನಾನು 'Cancel' ನ ಮೇಲೆ ಕ್ಲಿಕ್ ಮಾಡುವೆನು.
02:59 ಈಗ, ಡೈಲಾಗ್-ಬಾಕ್ಸ್, 'Choose Driver' ಎಂಬ ಆಯ್ಕೆಗೆ ಬದಲಾಯಿಸುವುದು.
03:04 ಬಹಳಷ್ಟು ಸಂದರ್ಭಗಳಲ್ಲಿ 'Default' ಆಯ್ಕೆಯು ಕೆಲಸ ಮಾಡುವುದು.
03:08 ನನ್ನ ಹತ್ತಿರ 'Canon Printer' ಇರುವುದರಿಂದ, ಇಲ್ಲಿ ಈ ಲಿಸ್ಟ್ ನಲ್ಲಿ, ಇದು ಡೀಫಾಲ್ಟ್ ಆಗಿ ಆಯ್ಕೆಯಾಗಿದೆ.
03:16 ಈಗ 'Forward' ನ ಮೇಲೆ ಕ್ಲಿಕ್ ಮಾಡಿ.
03:19 'Model' ಪೇಜ್ ನಲ್ಲಿ, ನನ್ನ ಪ್ರಿಂಟರ್ ನ ಮಾಡೆಲ್ ತನ್ನಷ್ಟಕ್ಕೆ ತಾನೇ ಪತ್ತೆಯಾಗುವುದು.
03:26 ಇದನ್ನು ಬ್ರಾಕೆಟ್ಸ್ ನಲ್ಲಿ 'Recommended' ಎಂದು ತೋರಿಸಲಾಗಿದೆ.
03:31 ಅಲ್ಲದೇ, 'Drivers ' ವಿಭಾಗದಲ್ಲಿ, ಇದು ನನ್ನ ಪ್ರಿಂಟರ್ ಗೆ ಯೋಗ್ಯವಾದ ‘ಡ್ರೈವರ್’ಅನ್ನು ತೋರಿಸುತ್ತದೆ.
03:38 ಈಗ, 'Forward ' ನ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ.
03:42 ಈಗ, ನಮ್ಮ ಪ್ರಿಂಟರ್ ಅನ್ನು ವಿವರಿಸಲು ನಮಗೆ ಸೂಚಿಸಲಾಗಿದೆ - 'printer name' ಮತ್ತು ಅದರ 'location'.
03:49 ನಾನು ಇದನ್ನು 'Default' ಗೆ ಇಟ್ಟು 'Apply' ದ ಮೇಲೆ ಕ್ಲಿಕ್ ಮಾಡುವೆನು.
03:53 ನಮ್ಮ ಪ್ರಿಂಟರ್, ಯಶಸ್ವಿಯಾಗಿ ನಮ್ಮ ಕಂಪ್ಯೂಟರ್ ಗೆ ಸೇರಿಸಲ್ಪಟ್ಟಿದೆ.
04:00 “Would you like to print a test page? ” ಎಂಬ ಒಂದು ಮೆಸೇಜ್ (ಸಂದೇಶ) ಕಾಣಿಸಿಕೊಳ್ಳುತ್ತದೆ.
04:04 'Print Test Page ' ಎಂಬ ಆಯ್ಕೆಯ ಮೇಲೆ ನಾವು ಕ್ಲಿಕ್ ಮಾಡೋಣ.
04:08 ಈ ಕೆಳಗಿನ ಮೆಸೇಜ್ ನೊಂದಿಗೆ ಒಂದು ಪಾಪ್-ಅಪ್ ಕಾಣಿಸಿಕೊಳ್ಳುವುದು:
04:12 “Submitted – Test Page submitted as job ...” ಮತ್ತು ಅದರ ನಂಬರ್.
04:18 'OK' ಯ ಮೇಲೆ ಕ್ಲಿಕ್ ಮಾಡಿ.
04:20 'Printer Properties' ಎಂಬ ಡೈಲಾಗ್-ಬಾಕ್ಸ್ ನಲ್ಲಿ, 'OK' ಯ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ.
04:24 ಇದು, ನಮ್ಮ ಪ್ರಿಂಟರ್ ನಿಂದ ನಮ್ಮ ಟೆಸ್ಟ್ ಪ್ರಿಂಟ್ ಆಗಿದೆ.
04:29 ನಮ್ಮ ಪ್ರಿಂಟರ್, ಈಗ ಡಾಕ್ಯೂಮೆಂಟ್ ಗಳನ್ನು ಪ್ರಿಂಟ್ ಮಾಡಲು ಸಿದ್ಧವಾಗಿದೆ.
04:34 ನಾವು 'Printer' ಡೈಲಾಗ್-ಬಾಕ್ಸ್ ಅನ್ನು ಕ್ಲೋಸ್ ಮಾಡೋಣ.
04:37 ನಾನು ಬೇಗನೆ ಡಾಕ್ಯೂಮೆಂಟ್ ಅನ್ನು ಹೇಗೆ ಪ್ರಿಂಟ್ ಮಾಡುವುದೆಂದು ಮಾಡಿ ತೋರಿಸುತ್ತೇನೆ.
04:42 ನಾವು ಒಂದು ಡಾಕ್ಯೂಮೆಂಟ್ ಅನ್ನು ಓಪನ್ ಮಾಡೋಣ.
04:45 ಆಮೇಲೆ, 'Ctrl' ಮತ್ತು 'P' ಕೀಗಳನ್ನು ಒಟ್ಟಿಗೇ ಒತ್ತಿ.
04:49 'Print ' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
04:53 ಕನೆಕ್ಟ್ ಮಾಡಲಾದ ಪ್ರಿಂಟರ್, ಡೀಫಾಲ್ಟ್ ಆಗಿ ಆಯ್ಕೆಯಾಗಿದೆ ಎಂಬುದನ್ನು ಗಮನಿಸಿ.
04:58 ಈ ಡೈಲಾಗ್-ಬಾಕ್ಸ್ ನಲ್ಲಿ, ನಮಗೆ ಹಲವಾರು ಆಯ್ಕೆಗಳಿವೆ.
05:03 'Range', ಪ್ರಿಂಟ್ ಮಾಡಬೇಕಾಗಿರುವ ಪುಟಗಳ ಶ್ರೇಣಿಯನ್ನು (range) ಆಯ್ಕೆಮಾಡಲು ನಮಗೆ ಅನುಮತಿಸುತ್ತದೆ.
05:08 'Range' ನ ಅಡಿಯಲ್ಲಿ ಕೆಲವು ಆಯ್ಕೆಗಳು ಲಭ್ಯವಾಗಿರುತ್ತವೆ:
05:12 * 'All pages' ಎಂಬ ಆಯ್ಕೆಯು, ಡಾಕ್ಯೂಮೆಂಟ್ ನಲ್ಲಿಯ ಎಲ್ಲ ಪುಟಗಳನ್ನು ಪ್ರಿಂಟ್ ಮಾಡುತ್ತದೆ.
05:16 * 'Current page' ಎಂಬ ಆಯ್ಕೆಯು, ಈಗ ಆಯ್ಕೆ ಮಾಡಿದ ಪುಟವನ್ನು ಮಾತ್ರ ಪ್ರಿಂಟ್ ಮಾಡುತ್ತದೆ.
05:22 * 'Pages' ಎಂಬ ಆಯ್ಕೆಯು, ನಮ್ಮ ಸೂಚನೆಯಂತೆ ಪುಟಗಳನ್ನು ಪ್ರಿಂಟ್ ಮಾಡುತ್ತದೆ.

ಉದಾಹರಣೆಗೆ, 3-4.

05:31 ನಂತರ, 'Copies'ನ ಅಡಿಯಲ್ಲಿ ಲಭ್ಯವಿರುವ ಆಯ್ಕೆಗಳನ್ನು ನೋಡೋಣ.
05:36 'Copies' ಎಂಬ ಆಯ್ಕೆಯಲ್ಲಿ, ನಮಗೆ ಪ್ರಿಂಟ್ ಮಾಡಬೇಕಾಗಿರುವ ಪ್ರತಿಗಳ ಸಂಖ್ಯೆಯನ್ನು ನಾವು ಆರಿಸಿಕೊಳ್ಳುತ್ತೇವೆ.
05:42 ಒಂದುವೇಳೆ, 'Copies' ಅನ್ನು ನಾವು '2' ಕ್ಕೆ ಬದಲಾಯಿಸಿದರೆ, ಆಗ ಆಯ್ಕೆಯಾದ ಪುಟಗಳ '2' ಪ್ರತಿಗಳು ಪ್ರಿಂಟ್ ಆಗುತ್ತವೆ.
05:49 ಮತ್ತು 'Print' ಬಟನ್ ನ ಮೇಲೆ ಕ್ಲಿಕ್ ಮಾಡಿ.
05:52 ನೀವು ನಿಮ್ಮ ಪ್ರಿಂಟರ್ ಅನ್ನು ಸರಿಯಾಗಿ ಕಾನ್ಫಿಗರ್ ಮಾಡಿದ್ದರೆ, ನಿಮ್ಮ ಡಾಕ್ಯೂಮೆಂಟ್ ಪ್ರಿಂಟ್ ಆಗಲು ಆರಂಭಿಸುವುದು.
05:58 ಇಲ್ಲಿಗೆ, ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ . ಈ ಟ್ಯುಟೋರಿಯಲ್ ನಲ್ಲಿ,
06:05 * ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಹೇಗೆ ಜೋಡಿಸುವುದು
06:07 * ‘ಪ್ರಿಂಟರ್’ನ ‘ಸೆಟ್ಟಿಂಗ್’ಗಳನ್ನು ಕಾನ್ಫಿಗರ್ ಮಾಡುವುದು ಮತ್ತು
06:10 * ‘ಡಾಕ್ಯೂಮೆಂಟ್’ಅನ್ನು ಪ್ರಿಂಟ್ ಮಾಡುವುದು, ಇವುಗಳನ್ನು ನಾವು ಕಲಿತಿದ್ದೇವೆ
06:12 ಮತ್ತು ಲಭ್ಯವಿರುವ ವಿವಿಧ ‘ಪ್ರಿಂಟ್’ ಆಯ್ಕೆಗಳನ್ನು ಸಹ ನಾವು ಕಲಿತಿದ್ದೇವೆ.
06:17 ಈ ಮಾಹಿತಿಯು ನಿಮಗೆ ಉಪಯುಕ್ತವಾಗಿತ್ತು ಎಂದು ನಾವು ಆಶಿಸುತ್ತೇವೆ.
06:20 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
06:24 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
06:27 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
06:32 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
  • ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
  • ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org

06:49 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.

ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: spoken hyphen tutorial dot org slash NMEICT hyphen Intro.

07:10 ವಂದನೆಗಳು.
07:12 ಈ ಟ್ಯುಟೋರಿಯಲ್ ನ ಸ್ಕ್ರಿಪ್ಟ್, ಪ್ರವೀಣ್ ಅವರ ಕೊಡುಗೆಯಾಗಿದೆ.
07:16 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .

Contributors and Content Editors

Pratik kamble, Sandhya.np14, Vasudeva ahitanal