Introduction-to-Computers/C2/Printer-Connection/Kannada
From Script | Spoken-Tutorial
Time | Narration |
00:01 | ನಮಸ್ಕಾರ. Printer Connection ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ (Spoken Tutorial) ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಜೋಡಿಸುವುದನ್ನು (connect) ಕಲಿಯುವೆವು. |
00:11 | ಈ ಟ್ಯುಟೋರಿಯಲ್ ಗಾಗಿ, ನಾನು |
00:13 | * Ubuntu Linux 12.10 OS ಮತ್ತು |
00:17 | * Cannon printer ಇವುಗಳನ್ನು ಬಳಸುತ್ತಿದ್ದೇನೆ. |
00:20 | ನಾನು ಸಂಕ್ಷಿಪ್ತವಾಗಿ ಕಂಪ್ಯೂಟರ್ ನ ವಿವಿಧ ಘಟಕಗಳನ್ನು ನಿಮಗೆ ಪರಿಚಯ ಮಾಡಿ ಕೊಡುತ್ತೇನೆ. |
00:25 | ಇದು CPU (ಸಿ-ಪಿ-ಯು), |
00:27 | ಮಾನಿಟರ್, |
00:29 | ಕೀಬೋರ್ಡ್, |
00:30 | ಮೌಸ್, |
00:32 | ಮತ್ತು ಪ್ರಿಂಟರ್. |
00:34 | ನಾವು CPU ನತ್ತ ನೋಡೋಣ. |
00:41 | ಬಹಳಷ್ಟು CPU ಗಳಲ್ಲಿ, ಕೆಲವು USB ಪೋರ್ಟ್ ಗಳು ಮುಂಭಾಗದಲ್ಲಿ |
00:46 | ಮತ್ತು ಕೆಲವು ಹಿಂಭಾಗದಲ್ಲಿ ಇರುತ್ತವೆ. |
00:49 | ಈಗ, ನಾವು ಪ್ರಿಂಟರ್ ನತ್ತ ನೋಡೋಣ. |
00:53 | ಸಾಮಾನ್ಯವಾಗಿ, ಪ್ರಿಂಟರ್ ನ ಮುಂಭಾಗದಲ್ಲಿ ಅಥವಾ ಮೇಲ್ಭಾಗದಲ್ಲಿ ಒಂದು ‘ಪವರ್ ಸ್ವಿಚ್’ ಇರುತ್ತದೆ. |
01:00 | ಮತ್ತು ಪ್ರಿಂಟರ್ ನ ಹಿಂಭಾಗದಲ್ಲಿ ಒಂದು ‘ಪವರ್ ಸ್ಲಾಟ್’ ಹಾಗೂ ಒಂದು USB ಪೋರ್ಟ್ ಇರುತ್ತವೆ. |
01:11 | ಒಂದು ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಕನೆಕ್ಟ್ ಮಾಡಲು, ನಾವು 'USB ಕೇಬಲ್' ಅನ್ನು ಉಪಯೋಗಿಸಬೇಕು. |
01:16 | ನಾವು 'USB ಕೇಬಲ್' ಅನ್ನು ‘ಪ್ರಿಂಟರ್’ಗೆ ಕನೆಕ್ಟ್ ಮಾಡೋಣ. |
01:22 | ಈಗ, ಕೇಬಲ್ ನ ಇನ್ನೊಂದು ಕೊನೆಯನ್ನು 'CPU' ನ 'USB ಪೋರ್ಟ್'ಗೆ ಸೇರಿಸೋಣ. |
01:30 | ಈಗ, ನಮ್ಮ ‘ಪ್ರಿಂಟರ್’, ಕಂಪ್ಯೂಟರ್ ಗೆ ಜೋಡಿಸಲ್ಪಟ್ಟಿದೆ. |
01:33 | ‘ಪ್ರಿಂಟರ್’ನ ಮೇಲಿರುವ ‘ಪವರ್ ಬಟನ್’ಅನ್ನು ಸ್ವಿಚ್-ಆನ್ ಮಾಡಿ. |
01:37 | ಈಗ, ನಮ್ಮ ಕಂಪ್ಯೂಟರ್ ಅನ್ನು ಬಳಸಿ, ನಾವು ಪ್ರಿಂಟರ್ ಅನ್ನು ಕಾನ್ಫಿಗರ್ ಮಾಡೋಣ. |
01:43 | ನಾವು ಡೆಸ್ಕ್ಟಾಪ್ ಗೆ ಹೋಗೋಣ. |
01:46 | ‘ಲಾಂಚರ್ ಬಾರ್’ನ ಮೇಲ್ಗಡೆ ಎಡಭಾಗದಲ್ಲಿ ಇರುವ 'Dash Home' (ಡ್ಯಾಶ್ ಹೋಮ್) ಐಕಾನ್ ಮೇಲೆ ಕ್ಲಿಕ್ ಮಾಡಿ. |
01:53 | ‘ಸರ್ಚ್ ಬಾರ್’ನಲ್ಲಿ, “Printing” ಎಂದು ಟೈಪ್ ಮಾಡಿ. |
01:58 | ಪ್ರಿಂಟರ್ ಐಕಾನ್ ಕಾಣಿಸಿಕೊಳ್ಳುವುದು. |
02:02 | ಅದರ ಮೇಲೆ ಕ್ಲಿಕ್ ಮಾಡಿ. |
02:04 | Ubuntu ನ ಹಳೆಯ ಆವೃತ್ತಿಗಳಲ್ಲಿ, ಇವುಗಳ ಮೇಲೆ ಕ್ಲಿಕ್ ಮಾಡಿ- |
02:07 | 'System' (ಸಿಸ್ಟಂ), |
02:08 | 'Administration' (ಅಡ್ಮಿನಿಸ್ಟ್ರೇಶನ್), |
02:09 | ಮತ್ತು 'Printing' (ಪ್ರಿಂಟಿಂಗ್). |
02:12 | ಈಗ, 'Printing' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
02:16 | ಇದು - 'There are no printers configured yet' ಎಂದು ಹೇಳುತ್ತದೆ. |
02:21 | ಮೇಲ್ಗಡೆ ಎಡಭಾಗದಲ್ಲಿ, ಹಸಿರು ಬಣ್ಣದ ‘Plus’ ಚಿಹ್ನೆಯನ್ನು ಹೊಂದಿದ 'Add' ಎಂಬ ಹೆಸರಿನ ಒಂದು ಬಟನ್ ಇದೆ. ಅದರ ಮೇಲೆ ಕ್ಲಿಕ್ ಮಾಡಿ. |
02:30 | ಇದು, ‘New Printer’ ಎಂಬ ಡೈಲಾಗ್-ಬಾಕ್ಸ್ ಅನ್ನು ಓಪನ್ ಮಾಡುವುದು. |
02:34 | ಎಡಭಾಗದಲ್ಲಿ, ಕಂಪ್ಯೂಟರ್ ಗೆ ಕನೆಕ್ಟ್ ಮಾಡಲಾದ ಪ್ರಿಂಟರ್ ಸಾಧನಗಳ ಒಂದು ಪಟ್ಟಿಯನ್ನು ತೋರಿಸಲಾಗುವುದು. |
02:42 | ಇಲ್ಲಿ, ನಾವು ನಮ್ಮ ಪ್ರಿಂಟರ್ ಅನ್ನು, ಎಂದರೆ, 'Cannon Printer' ಅನ್ನು ಆಯ್ಕೆಮಾಡಿ ನಂತರ 'Forward'ನ ಮೇಲೆ ಕ್ಲಿಕ್ ಮಾಡೋಣ. |
02:51 | ಆಗ, ಅದು ತನ್ನಷ್ಟಕ್ಕೆ ತಾನೇ ‘ಡ್ರೈವರ್’ಗಳಿಗಾಗಿ ಹುಡುಕಲು ಆರಂಭಿಸುವುದು. ನಾನು 'Cancel' ನ ಮೇಲೆ ಕ್ಲಿಕ್ ಮಾಡುವೆನು. |
02:59 | ಈಗ, 'Choose Driver' ಎಂಬ ಡೈಲಾಗ್-ಬಾಕ್ಸ್ ಕಾಣಿಸುವುದು. |
03:04 | ಬಹಳಷ್ಟು ಸಂದರ್ಭಗಳಲ್ಲಿ 'Default' ಆಯ್ಕೆಯು ಕೆಲಸ ಮಾಡುವುದು. |
03:08 | ನನ್ನ ಹತ್ತಿರ 'Canon Printer' ಇರುವುದರಿಂದ, ಇಲ್ಲಿ ಈ ಲಿಸ್ಟ್ ನಲ್ಲಿ, ಇದು ಡೀಫಾಲ್ಟ್ ಆಗಿ ಆಯ್ಕೆಯಾಗಿದೆ. |
03:16 | ಈಗ 'Forward' ನ ಮೇಲೆ ಕ್ಲಿಕ್ ಮಾಡಿ. |
03:19 | 'Model' ಪೇಜ್ ನಲ್ಲಿ, ನನ್ನ ಪ್ರಿಂಟರ್ ನ ಮಾಡೆಲ್ ತನ್ನಷ್ಟಕ್ಕೆ ತಾನೇ ಪತ್ತೆಯಾಗುವುದು. |
03:26 | ಇದನ್ನು ಬ್ರಾಕೆಟ್ಸ್ ನಲ್ಲಿ 'Recommended' ಎಂದು ತೋರಿಸಲಾಗಿದೆ. |
03:31 | ಅಲ್ಲದೇ, 'Drivers ' ವಿಭಾಗದಲ್ಲಿ, ಇದು ನನ್ನ ಪ್ರಿಂಟರ್ ಗೆ ಯೋಗ್ಯವಾದ ‘ಡ್ರೈವರ್’ಅನ್ನು ತೋರಿಸುತ್ತದೆ. |
03:38 | ಈಗ, 'Forward ' ನ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ. |
03:42 | ಈಗ, ನಮ್ಮ ಪ್ರಿಂಟರ್ ಅನ್ನು ವಿವರಿಸಲು ನಮಗೆ ಸೂಚಿಸಲಾಗಿದೆ - 'printer name' ಮತ್ತು ಅದರ 'location'. |
03:49 | ನಾನು ಇದನ್ನು 'Default' ಗೆ ಇಟ್ಟು 'Apply' ದ ಮೇಲೆ ಕ್ಲಿಕ್ ಮಾಡುವೆನು. |
03:53 | ನಮ್ಮ ಪ್ರಿಂಟರ್, ಯಶಸ್ವಿಯಾಗಿ ನಮ್ಮ ಕಂಪ್ಯೂಟರ್ ಗೆ ಸೇರಿಸಲ್ಪಟ್ಟಿದೆ. |
04:00 | “Would you like to print a test page? ” ಎಂಬ ಒಂದು ಮೆಸೇಜ್ (ಸಂದೇಶ) ಕಾಣಿಸಿಕೊಳ್ಳುತ್ತದೆ. |
04:04 | 'Print Test Page ' ಎಂಬ ಆಯ್ಕೆಯ ಮೇಲೆ ನಾವು ಕ್ಲಿಕ್ ಮಾಡೋಣ. |
04:08 | ಈ ಕೆಳಗಿನ ಮೆಸೇಜ್ ನೊಂದಿಗೆ ಒಂದು ಪಾಪ್-ಅಪ್ ಕಾಣಿಸಿಕೊಳ್ಳುವುದು: |
04:12 | “Submitted – Test Page submitted as job ...” ಮತ್ತು ಅದರ ನಂಬರ್. |
04:18 | 'OK' ಯ ಮೇಲೆ ಕ್ಲಿಕ್ ಮಾಡಿ. |
04:20 | 'Printer Properties' ಎಂಬ ಡೈಲಾಗ್-ಬಾಕ್ಸ್ ನಲ್ಲಿ, 'OK' ಯ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ. |
04:24 | ಇದು, ನಮ್ಮ ಪ್ರಿಂಟರ್ ನಿಂದ ನಮ್ಮ ಟೆಸ್ಟ್ ಪ್ರಿಂಟ್ ಆಗಿದೆ. |
04:29 | ನಮ್ಮ ಪ್ರಿಂಟರ್, ಈಗ ಡಾಕ್ಯೂಮೆಂಟ್ ಗಳನ್ನು ಪ್ರಿಂಟ್ ಮಾಡಲು ಸಿದ್ಧವಾಗಿದೆ. |
04:34 | ನಾವು 'Printer' ಡೈಲಾಗ್-ಬಾಕ್ಸ್ ಅನ್ನು ಕ್ಲೋಸ್ ಮಾಡೋಣ. |
04:37 | ನಾನೀಗ ಡಾಕ್ಯೂಮೆಂಟ್ ಅನ್ನು ಹೇಗೆ ಪ್ರಿಂಟ್ ಮಾಡುವುದೆಂದು ತೋರಿಸುತ್ತೇನೆ. |
04:42 | ನಾವು ಒಂದು ಡಾಕ್ಯೂಮೆಂಟ್ ಅನ್ನು ಓಪನ್ ಮಾಡೋಣ. |
04:45 | ಆಮೇಲೆ, 'Ctrl' ಮತ್ತು 'P' ಕೀಗಳನ್ನು ಒಟ್ಟಿಗೇ ಒತ್ತಿ. |
04:49 | 'Print ' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
04:53 | ಕನೆಕ್ಟ್ ಮಾಡಲಾದ ಪ್ರಿಂಟರ್, ಡೀಫಾಲ್ಟ್ ಆಗಿ ಆಯ್ಕೆಯಾಗಿದೆ ಎಂಬುದನ್ನು ಗಮನಿಸಿ. |
04:58 | ಈ ಡೈಲಾಗ್-ಬಾಕ್ಸ್ ನಲ್ಲಿ, ನಮಗೆ ಹಲವಾರು ಆಯ್ಕೆಗಳಿವೆ. |
05:03 | 'Range', ಪ್ರಿಂಟ್ ಮಾಡಬೇಕಾಗಿರುವ ಪುಟಗಳ ಶ್ರೇಣಿಯನ್ನು (range) ಆಯ್ಕೆಮಾಡಲು ನಮಗೆ ಅನುಮತಿಸುತ್ತದೆ. |
05:08 | 'Range' ನ ಅಡಿಯಲ್ಲಿ ಕೆಲವು ಆಯ್ಕೆಗಳು ಲಭ್ಯವಾಗಿರುತ್ತವೆ: |
05:12 | * 'All pages' ಎಂಬ ಆಯ್ಕೆಯು, ಡಾಕ್ಯೂಮೆಂಟ್ ನಲ್ಲಿಯ ಎಲ್ಲ ಪುಟಗಳನ್ನು ಪ್ರಿಂಟ್ ಮಾಡುತ್ತದೆ. |
05:16 | * 'Current page' ಎಂಬ ಆಯ್ಕೆಯು, ಈಗ ಆಯ್ಕೆ ಮಾಡಿದ ಪುಟವನ್ನು ಮಾತ್ರ ಪ್ರಿಂಟ್ ಮಾಡುತ್ತದೆ. |
05:22 | * 'Pages' ಎಂಬ ಆಯ್ಕೆಯು, ನಮ್ಮ ಸೂಚನೆಯಂತೆ ಪುಟಗಳನ್ನು ಪ್ರಿಂಟ್ ಮಾಡುತ್ತದೆ.
ಉದಾಹರಣೆಗೆ, 3-4. |
05:31 | ನಂತರ, 'Copies'ನ ಅಡಿಯಲ್ಲಿ ಲಭ್ಯವಿರುವ ಆಯ್ಕೆಗಳನ್ನು ನೋಡೋಣ. |
05:36 | 'Copies' ಎಂಬ ಆಯ್ಕೆಯಲ್ಲಿ, ನಮಗೆ ಪ್ರಿಂಟ್ ಮಾಡಬೇಕಾಗಿರುವ ಪ್ರತಿಗಳ ಸಂಖ್ಯೆಯನ್ನು ನಾವು ಆರಿಸಿಕೊಳ್ಳುತ್ತೇವೆ. |
05:42 | ಒಂದುವೇಳೆ, 'Copies' ಅನ್ನು ನಾವು '2' ಕ್ಕೆ ಬದಲಾಯಿಸಿದರೆ, ಆಗ ಆಯ್ಕೆಯಾದ ಪುಟಗಳ '2' ಪ್ರತಿಗಳು ಪ್ರಿಂಟ್ ಆಗುತ್ತವೆ. |
05:49 | ಈಗ, 'Print' ಬಟನ್ ನ ಮೇಲೆ ಕ್ಲಿಕ್ ಮಾಡಿ. |
05:52 | ನೀವು ನಿಮ್ಮ ಪ್ರಿಂಟರ್ ಅನ್ನು ಸರಿಯಾಗಿ ಕಾನ್ಫಿಗರ್ ಮಾಡಿದ್ದರೆ, ನಿಮ್ಮ ಡಾಕ್ಯೂಮೆಂಟ್ ಪ್ರಿಂಟ್ ಆಗಲು ಆರಂಭಿಸುವುದು. |
05:58 | ಇಲ್ಲಿಗೆ, ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ . ಈ ಟ್ಯುಟೋರಿಯಲ್ ನಲ್ಲಿ, |
06:05 | * ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಹೇಗೆ ಜೋಡಿಸುವುದು |
06:07 | * ‘ಪ್ರಿಂಟರ್’ನ ‘ಸೆಟ್ಟಿಂಗ್’ಗಳನ್ನು ಕಾನ್ಫಿಗರ್ ಮಾಡುವುದು ಮತ್ತು |
06:10 | * ‘ಡಾಕ್ಯೂಮೆಂಟ್’ಅನ್ನು ಪ್ರಿಂಟ್ ಮಾಡುವುದು, ಇವುಗಳನ್ನು ನಾವು ಕಲಿತಿದ್ದೇವೆ, |
06:12 | ಮತ್ತು ಲಭ್ಯವಿರುವ ವಿವಿಧ ‘ಪ್ರಿಂಟ್’ ಆಯ್ಕೆಗಳನ್ನು ಸಹ ನಾವು ಕಲಿತಿದ್ದೇವೆ. |
06:17 | ಈ ಮಾಹಿತಿಯು ನಿಮಗೆ ಉಪಯುಕ್ತವಾಗಿತ್ತು ಎಂದು ನಾವು ಆಶಿಸುತ್ತೇವೆ. |
06:20 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
06:24 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
06:27 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
06:32 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:contact@spoken-tutorial.org |
06:49 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: spoken hyphen tutorial dot org slash NMEICT hyphen Intro. |
07:10 | ವಂದನೆಗಳು. |
07:12 | ಈ ಟ್ಯುಟೋರಿಯಲ್ ನ ಸ್ಕ್ರಿಪ್ಟ್, ಪ್ರವೀಣ್ ಅವರ ಕೊಡುಗೆಯಾಗಿದೆ. |
07:16 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ . |