Inkscape/C3/Create-patterns-in-Inkscape/Kannada

From Script | Spoken-Tutorial
Revision as of 08:25, 6 December 2015 by NaveenBhat (Talk | contribs)

Jump to: navigation, search
Time Narration
00:01 Inkscape ನಲ್ಲಿ Create patterns ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು
  • Cloning
  • Pattern along path
  • Spray tool ಮತ್ತು
  • Path effect editor ಇವುಗಳನ್ನು ಉಪಯೋಗಿಸಿ ವಿವಿಧ ಮಾದರಿಗಳನ್ನು ರಚಿಸಲು ಕಲಿಯುತ್ತೇವೆ.
00:17 ಈ ಟ್ಯುಟೋರಿಯಲ್ ಗಾಗಿ ನಾನು
  • Ubuntu Linux 12.04 ಆಪರೇಟಿಂಗ್ ಸಿಸ್ಟಮ್
  • Inkscape ಆವೃತ್ತಿ 0.48.4 ಗಳನ್ನು ಉಪಯೋಗಿಸುತ್ತೇನೆ.
00:27 Inkscape ಅನ್ನು ತೆರೆಯಿರಿ
00:29 Star ಟೂಲ್ ಮೇಲೆ ಕ್ಲಿಕ್ ಮಾಡಿ canvas ನ ಮೇಲೆ ಒಂದು ನಕ್ಷತ್ರವನ್ನು ಚಿತ್ರಿಸಿ.
00:33 Selector tool ನ ಮೇಲೆ ಕ್ಲಿಕ್ ಮಾಡಿ.
00:36 Tool controls bar ನಲ್ಲಿ Width ಮತ್ತು Height ಅನ್ನು 40 ಕ್ಕೆ ಬದಲಿಸಿ
00:42 ಜೂಮ್ ಮಾಡಿ ಮತ್ತು ನಕ್ಷತ್ರವನ್ನು ಒಮ್ಮೆ ಕ್ಲಿಕ್ ಮಾಡಿ.
00:46 pivot point ಗೋಚರಿಸುವುದನ್ನು ಗಮನಿಸಿ.ಇದು ನಕ್ಷತ್ರದ ಮಧ್ಯ ಕಾಣಿಸುವ plus ಆಕೃತಿ.
00:53 ಇಲ್ಲಿ ತೋರಿಸಿರುವಂತೆ pivot point ಅನ್ನು ಕ್ಲಿಕ್ ಮಾಡಿ ಅದನ್ನು ನಕ್ಷತ್ರದಿಂದ ದೂರ ಸರಿಸಿ.
00:59 ಈಗ Edit ಮೆನ್ಯುಗೆ ಹೋಗಿ Clone ಮೇಲೆ ಕ್ಲಿಕ್ ಮಾಡಿ ನಂತರ Create Tiled clones ಮೇಲೆ ಕ್ಲಿಕ್ ಮಾಡಿ.
01:06 ಒಂದು ಡೈಲಾಗ್ ಬಾಕ್ಸ್ ತೆರೆದು ಕೊಳ್ಳುತ್ತದೆ. ನೀವು ಇಲ್ಲಿ ಅನೇಕ ಟ್ಯಾಬ್ಸ್ ಗಳನ್ನು ಮತ್ತು ಪ್ರತಿ ಟ್ಯಾಬ್ ನಡಿಯಲ್ಲಿ ಅನೇಕ ಆಯ್ಕೆಗಳನ್ನೂ ನೋಡಬಹುದು.
01:15 Symmetry ಟ್ಯಾಬ್ ನಡಿಯಲ್ಲಿ ಅನೇಕ ಮೆಥಡ್ ಗಳಿರುವ ಡ್ರಾಪ್ ಡೌನ್ ಮೆನ್ಯುಗಳಿರುವುದನ್ನು ನೋಡಬಹುದು. ಈ 'demo' ದಲ್ಲಿ simple translation ಆಯ್ಕೆಯನ್ನು ತೆಗೆದುಕೊಳ್ಳೋಣ.
01:25 ರಾ ಮತ್ತು ಕಾಲಮ್ಸ್ ಪ್ಯಾರಾಮೀಟರ್ ಗಳನ್ನು ಕ್ರಮಾನುಕ್ರಮವಾಗಿ 1 ಮತ್ತು 40 ಕ್ಕೆ ಬದಲಿಸಿ.
01:32 ನಂತರ Shift ಟ್ಯಾಬ್ ಗೆ ಹೋಗಿ , Shift XPer column ನಡಿಯಲ್ಲಿ -100ಗೆ ಬದಲಿಸಿ.
01:41 ನಂತರ Rotation ಟ್ಯಾಬ್ ಗೆ ಹೋಗಿ, Per column ನಡಿಯಲ್ಲಿ Angle ಅನ್ನು 10 ಕ್ಕೆ ಬದಲಿಸಿ.
01:48 ಈಗ Create ಬಟ್ಟನ್ ಕ್ಲಿಕ್ ಮಾಡಿ, ನಕ್ಷತ್ರದಲ್ಲಿ ವೃತ್ತದ ವಿನ್ಯಾಸ ರೂಪುಗೊಂಡಿರುವುದನ್ನು ಗಮನಿಸಿ.
01:55 ಇದೇ ರೀತಿಯಲ್ಲಿ, Create Tiled clones ಆಯ್ಕೆಯನ್ನು ಇತರ ಸುಂದರ ವಿನ್ಯಾಸಗಳನ್ನು ರೂಪಿಸಲು ಉಪಯೋಗಿಸಬಹುದು.
02:01 ಈ ನಕ್ಷತ್ರದ ವೃತ್ತವನ್ನು ಒಂದು ಕಡೆ ಸರಿಸಿ.
02:04 ಈಗ ಒಂದು ಪಥದ ಉದ್ದಕ್ಕೂ ವಿನ್ಯಾಸಗಳನ್ನು ರಚಿಸುವುದನ್ನು ಕಲಿಯೋಣ.
02:09 Rectangle ಟೂಲ್ ಅನ್ನು ಆಯ್ಕೆ ಮಾಡಿಕೊಳ್ಳಿ ಮತ್ತು rounded rectangle ಅನ್ನು ಚಿತ್ರಿಸಿ. ಹಸಿರು ಬಣ್ಣವನ್ನು ಹಾಕಿ. ನಂತರ Selector tool ಅನ್ನು ಆಯ್ಕೆ ಮಾಡಿಕೊಳ್ಳಿ.
02:20 Tool controls bar ನಲ್ಲಿ Width ಅನ್ನು 540 ಗೆ ಮತ್ತು Height ಅನ್ನು 250 ಗೆ ಬದಲಿಸಿ.
02:28 ನಂತರ Star tool ಅನ್ನು ಆಯ್ಕೆ ಮಾಡಿಕೊಂಡು ನಕ್ಷತ್ರದ ವಿನ್ಯಾಸವನ್ನು ಚಿತ್ರಿಸಿ.
02:32 Selector tool ಮೇಲೆ ಕ್ಲಿಕ್ ಮಾಡಿ, Tool controls bar ನಲ್ಲಿ Width ಮತ್ತು Height ಗಳನ್ನು 50 ಕ್ಕೆ ಬದಲಿಸಿ.
02:40 ಇದನ್ನು ಆಯತಾಕಾರದ ಮೇಲ್ಭಾಗದ ಎಡ ಅಂಚಿನಲ್ಲಿಡಿ.
02:45 ಎರಡೂ ಆಕೃತಿಗಳನ್ನು ಆಯ್ಕೆ ಮಾಡಿಕೊಳ್ಳಿ, Extensions ಮೆನ್ಯುಗೆ ಹೋಗಿ.
02:48 Generate from path ಮೇಲೆ ಕ್ಲಿಕ್ ಮಾಡಿ ನಂತರ Pattern along Path ಮೇಲೆ ಕ್ಲಿಕ್ ಮಾಡಿ.
02:55 Copies of the patterns ಆಯ್ಕೆಯನ್ನುRepeated ಗೆ ಬದಲಿಸಿ, ಮತ್ತು Deformation type ಆಯ್ಕೆಯನ್ನು Ribbon ಗೆ ಬದಲಿಸಿ.
03:03 Apply ಬಟ್ಟನ್ ಮೇಲೆ ಕ್ಲಿಕ್ ಮಾಡಿ ನಂತರ Close ಬಟ್ಟನ್ ಮೇಲೆ ಕ್ಲಿಕ್ ಮಾಡಿ. ಆಯತಾಕಾರದ ಅಂಚಿನ ಸುತ್ತ ಸುಂದರವಾದ ವಿನ್ಯಾಸ ರೂಪುಗೊಂಡಿರುವುದನ್ನು ಗಮನಿಸಿ.
03:11 ಈಗ ನಾವು Path effects ಆಯ್ಕೆಯನ್ನುಉಪಯೋಗಿಸಿ ಇನ್ನೊಂದು ವಿನ್ಯಾಸವನ್ನು ರಚಿಸೋಣ.
03:16 Bezier tool ಅನ್ನು ಉಪಯೋಗಿಸಿ ಅಲೆಯ ರೀತಿಯ ಪಥವನ್ನು ಚಿತ್ರಿಸಿ.
03:20 Path ಮೆನ್ಯುಗೆ ಹೋಗಿ Path Effects Editor ಮೇಲೆ ಕ್ಲಿಕ್ ಮಾಡಿ. ಒಂದು ಡೈಲಾಗ್ ಬಾಕ್ಸ್ ತೆರೆದು ಕೊಳ್ಳುತ್ತದೆ.
03:27 Apply new effect ಡ್ರಾಪ್ ಡೌನ್ ಮೆನ್ಯು ಮೇಲೆ ಕ್ಲಿಕ್ ಮಾಡಿ, ಇಲ್ಲಿ ಅನೇಕ ಎಫೆಕ್ಟ್ ಗಳನ್ನು ಪಟ್ಟಿ ಮಾಡಲಾಗಿದೆ.
03:33 Gears ಮೇಲೆ ಕ್ಲಿಕ್ ಮಾಡಿ ನಂತರ Add ಮೇಲೆ ಕ್ಲಿಕ್ ಮಾಡಿ. ಆಕೃತಿಯಲ್ಲಿ ಬದಲಾವಣೆಯನ್ನು ಗಮನಿಸಿ.
03:41 ನಂತರ Sketch ಆಯ್ಕೆ ಮಾಡಿಕೊಂಡು Add ಬಟ್ಟನ್ ಮೇಲೆ ಕ್ಲಿಕ್ ಮಾಡಿ. ಪರಿಣಾಮವನ್ನು ಗಮನಿಸಿ.
03:48 ಇಲ್ಲಿ Path Effect Editor ನಲ್ಲಿ ಪ್ರಸ್ತುತ ಕೊಟ್ಟಿರುವ ಪರಿಣಾಮಕ್ಕೆ ಸಂಬಂಧಪಟ್ಟ ಅನೇಕ ಪ್ಯಾರಾಮೀಟರ್ ಗಳನ್ನು ಕಾಣಬಹುದು.
03:54 ಅವುಗಳಲ್ಲಿ ಒಂದನ್ನು ಬದಲಿಸಿ ಉದಾಹರಣೆಗೆ Strokes ಅನ್ನು ತೆಗೆದುಕೊಳ್ಳೋಣ. ಇದನ್ನು10 ಕ್ಕೆ ಬದಲಿಸಿ Enter ಅನ್ನು ಒತ್ತಿ. ಒಬ್ಜೆಕ್ಟ್ ನಲ್ಲಿ ಬದಲಾವಣೆಯನ್ನು ಗಮನಿಸಿ.
04:03 ಈಗ Path Effect Editor ಡೈಲಾಗ್ ಬಾಕ್ಸ್ ಅನ್ನು ಮುಚ್ಚಿ.
04:08 ಎಲ್ಲಾಆಕೃತಿಗಳನ್ನು ಆಯ್ಕೆ ಮಾಡಿಕೊಂಡು ಒಂದು ಕಡೆ ಸರಿಸಿ.
04:12 ನಂತರ Spray tool ಅನ್ನು ಉಪಯೋಗಿಸಿ ಒಂದು ಮರದ ವಿನ್ಯಾಸವನ್ನು ಚಿತ್ರಿಸೋಣ.
04:18 Bezier tool ಅನ್ನು ಆಯ್ಕೆ ಮಾಡಿಕೊಂಡು ಇಲ್ಲಿ ತೋರಿಸಿದಂತೆ ಮರದ ಕಾಂಡವನ್ನು ಚಿತ್ರಿಸಿ ಮತ್ತು ಕಂದು ಬಣ್ಣವನ್ನು ಕೊಡಿ. ಈಗ ಒಂದು ಎಲೆಯನ್ನು ಬಿಡಿಸಿ ಅದಕ್ಕೆ ಹಸಿರು ಬಣ್ಣವನ್ನು ಕೊಡಿ.
04:38 Spray tool ಅನ್ನು ಆಯ್ಕೆ ಮಾಡಿಕೊಂಡು ಎಲೆಯ ಆಕಾರದ ಮೇಲೆ ಕ್ಲಿಕ್ ಮಾಡಿ.
04:43 ಈಗ mouse ಅನ್ನು ಬಿಡದೇ ಕಾಂಡದ ಸುತ್ತಲೂ ಎಳೆದು ಮರವನ್ನು ಚಿತ್ರಿಸಿ.
04:51 ಮರದ ಚಿತ್ರವು ರೂಪುಗೊಂಡಿರುವುದನ್ನು ಗಮನಿಸಿ.
04:55 ಈ ಟ್ಯುಟೋರಿಯಲ್ ಇಲ್ಲಿಗೆ ಮುಗಿಯುತ್ತದೆ. ಸಾರಾಂಶವನ್ನು ನೋಡೋಣ.
04:58 ಈ ಟ್ಯುಟೋರಿಯಲ್ ನಲ್ಲಿ ನಾವು
  • Cloning
  • Pattern along path
  • Spray tool ಮತ್ತು
  • Path effect editor ಇವುಗಳನ್ನು ಉಪಯೋಗಿಸಿ ವಿವಿಧ ಮಾದರಿಗಳನ್ನು ರಚಿಸಲು ಕಲಿತಿದ್ದೇವೆ.
05:08 ಸ್ವಂತ ಅಭ್ಯಾಸಕ್ಕಾಗಿ ವೃತ್ತಾಕಾರದ ವರ್ಣಮಯವಾದ ವಿನ್ಯಾಸವನ್ನು ರಚಿಸಿ.
05:12 ಮುಗಿಸಿದ ನಂತರ ನಿಮ್ಮ ಅಸೈನ್ ಮೆಂಟ್ ಈ ರೀತಿಯಾಗಿರಬೇಕು.
05:16 ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಕುರಿತು ತಿಳಿಸುತ್ತದೆ. ದಯವಿಟ್ಟು ನೋಡಿ.
05:23 Spoken Tutorial Project Team ಇದು
  • spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
  • online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ
05:32 Spoken Tutorial Project ಇದು ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ದೊರೆಯುತ್ತದೆ
05:41 ನಾವು ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು.

Contributors and Content Editors

NaveenBhat, Pratik kamble