GIMP/C2/Sketching/Kannada

From Script | Spoken-Tutorial
Revision as of 11:55, 12 December 2014 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:23 Meet The GIMP (ಮೀಟ್ ದ್ ಗಿಂಪ್) ಗೆ ನಿಮಗೆ ಸ್ವಾಗತ. ಇದನ್ನು ರೋಲ್ಫ್ ಸ್ಟೇನೋರ್ಟ್ ಅವರು, ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ.
00:41 ಈದಿನ, ನಿಮಗೆ ತೋರಿಸಲು ನನ್ನ ಹತ್ತಿರ ಹೊಸದು ಏನೋ ಇದೆ.
00:44 ಇಲ್ಲಿ ಜೊಸೆಫ್ ಅವರ ಒಂದು ಹೊಸ ವೀಡಿಯೋ ಇದೆ ಮತ್ತು ‘ಸ್ಕೆಚ್ ಇಫೆಕ್ಟ್ಸ್’ ಬಳಸಿ ಇಮೇಜ್ಅನ್ನು ಹೇಗೆ ಮಾಡುವುದೆಂದು ಈದಿನ ಅವರು ನಿಮಗೆ ತೋರಿಸುವವರಿದ್ದಾರೆ.
00:55 ಹಲೋ !! ನನ್ನ ಹೆಸರು ಜೋಸೆಫ್. ಇವತ್ತು ನಾನು ನಿಮಗೆ ಗಿಂಪ್ 2.4 ನ್ನು ಬಳಸಿ, ‘ಸ್ಕೆಚ್ ಇಫೆಕ್ಟ್’ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ತೋರಿಸುವವನಿದ್ದೇನೆ.
01:06 ‘ಸ್ಕೆಚ್ ಇಫೆಕ್ಟ್’ ಅನ್ನು ನಿಮಗೆ ತೋರಿಸಲು ನಾನು ಲೇಯರ್ಸ್ ನೊಂದಿಗೆ ಕೆಲಸ ಮಾಡುವವನಿದ್ದೇನೆ.
01:14 ನಾನು ಮಾಡುವ ಮುಂದಿನ ಕೆಲಸ, ಈ ಲೇಯರ್ಗಳಿಗೆ ಪುನಃ ಹೆಸರಿಡುವುದು. ಇದರಿಂದ, ಯಾವ ಲೇಯರ್ನ ಮೇಲೆ ನಾನು ಕೆಲಸ ಮಾಡುತ್ತಿದ್ದೇನೆ ಎನ್ನುವುದರ ಕಲ್ಪನೆ ನನಗೆ ಸಿಗುತ್ತದೆ.
01:23 ನಾನು ಮೇಲಿನ ಲೇಯರನ್ನು ಆಯ್ಕೆಮಾಡಿ ಆಮೇಲೆ ಕ್ರಮವಾಗಿ Filters (ಫಿಲ್ಟರ್ಸ್), Blur (ಬ್ಲರ್), Gaussian blur (ಗಾಸಿಯನ್ ಬ್ಲರ್), ಇವುಗಳಿಗೆ ಹೋಗುತ್ತೇನೆ.
01:36 ಕೆಲವು ಗೆರೆಗಳನ್ನು ಕಾಣಲು ಸಾಧ್ಯವಿರುವ ಜಾಗವನ್ನು ಪಡೆಯಲು, ನಾನು ‘ಪ್ರಿವ್ಯೂ’ ಎನ್ನುವುದರ ಸಹಾಯದಿಂದ ಇಮೇಜ್ನಲ್ಲಿ ಸುತ್ತಾಡುತ್ತೇನೆ.
01:45 Blur Radius (ಬ್ಲರ್ ರೇಡಿಯಸ್) ಎನ್ನುವುದು ಇಲ್ಲಿ ಬಹಳ ಮುಖ್ಯವಾಗಿದೆ.
01:48 30 ‘ಬ್ಲರ್ ರೇಡಿಯಸ್‘ ಮತ್ತು 5 ‘ಬ್ಲರ್ ರೇಡಿಯಸ್‘ ಗಳನ್ನು ಬಳಸುವುದರಿಂದ, ನೀವು ಪಡೆಯುವ ವ್ಯತ್ಯಾಸಗಳನ್ನು ನಿಮಗೆ ತೋರಿಸಲು ನಾನು ಇಲ್ಲಿ ಎರಡು ‘ಪ್ರಿವ್ಯೂ’ ಗಳನ್ನು ಕ್ರಿಯೇಟ್ ಮಾಡಿದ್ದೇನೆ.
01:59 ಈ ಇಮೇಜ್ ಗಾಗಿ ನಾನು ‘ಬ್ಲರ್ ರೇಡಿಯಸ್‘ ಅನ್ನು 15 ಎಂದು ಇಟ್ಟು ‘OK’ ಯ ಮೇಲೆ ಕ್ಲಿಕ್ ಮಾಡುವೆನು.
02:08 ಈಗ ಮೇಲಿನ ಲೇಯರ್ನ ಮೇಲೆ ನಮಗೆ ಒಳ್ಳೆಯ ‘ಬ್ಲರ್‘, ಸಿಕ್ಕಿದೆ.
02:12 ನಾವು ಮಾಡಬೇಕಾದ ಮುಂದಿನ ಕೆಲಸ, ‘ಕಲರ್ಸ್’ ಅನ್ನು ಇನ್ವರ್ಟ್ ಮಾಡುವುದು ಆಗಿದೆ.
02:18 ಆದ್ದರಿಂದ Colors, ಆನಂತರ Invert, ಎನ್ನುವಲ್ಲಿಗೆ ಹೋಗಿರಿ.
02:21 ಈಗ ನಮ್ಮ ಟೂಲ್ ಬಾಕ್ಸ್ ಗೆ ಮರಳಿ ಹೋಗಿ, ಮೇಲಿನ ಲೇಯರನ್ನು ಆಯ್ಕೆಮಾಡಿ, ಅದರ ‘ಒಪ್ಯಾಸಿಟೀ’ಯನ್ನು 50% ಕ್ಕೆ ಸೆಟ್ ಮಾಡೋಣ.
02:28 ನಮಗೆ ಸೊಗಸಾದ ಬೂದುಬಣ್ಣದ ಇಮೇಜ್, ಸಿಗುತ್ತದೆ.
02:31 ಈಗ ಮೇಲಿನ ಲೇಯರ್ನ ಮೇಲೆ ರೈಟ್ ಕ್ಲಿಕ್ ಮಾಡಿ, ‘Merge Visible Layer’ ಅನ್ನು ಆಯ್ಕೆಮಾಡಿ ಹಾಗೂ Merge ಎನ್ನುವುದರ ಮೇಲೆ ಕ್ಲಿಕ್ ಮಾಡಿ ನಾವು, ಈ ಎರಡು ಲೇಯರ್ಗಳನ್ನು ಒಟ್ಟಿಗೆ ಮರ್ಜ್ ಮಾಡುವೆವು.
02:40 ಇದಾದ ಮೇಲೆ, ನನಗೆ ಇಮೇಜ್ನಲ್ಲಿಯ ಕಾಂಟ್ರಾಸ್ಟನ್ನು ಹೆಚ್ಚಿಸಬೇಕಾಗಿದೆ. ಇದನ್ನು ಮಾಡಲು ನಾನು Levels Tool (ಲೆವೆಲ್ಸ್ ಟೂಲ್) ಎನ್ನುವುದನ್ನು ಆಯ್ಕೆಮಾಡುತ್ತೇನೆ.
02:48 ನೀವು ನೋಡುವಂತೆ ಈ ಇಮೇಜ್ನಲ್ಲಿಯ ಅತಿ ಹೆಚ್ಚು ಮಾಹಿತಿಯು ಮಧ್ಯಭಾಗದಲ್ಲಿದೆ.
02:54 ನಾನು ಸ್ಲೈಡರ್ಗಳನ್ನು ಆ ವ್ಯಾಲ್ಯೂಗೆ ಜರುಗಿಸಬೇಕು.
03:01 ಈಗ, ನಾನು ಮಧ್ಯದ ಸ್ಲೈಡರನ್ನು ಎಡಕ್ಕೆ ಜರುಗಿಸುತ್ತೇನೆ. ಇದರಿಂದ ನನಗೆ ಸ್ವಲ್ಪ ಹೆಚ್ಚು ಬಿಳಿಬಣ್ಣದ ಇಮೇಜ್, ಸಿಗುತ್ತದೆ.
03:13 OK ಎನ್ನುವುದರ ಮೇಲೆ ಕ್ಲಿಕ್ ಮಾಡುತ್ತೇನೆ.
03:16 ಮತ್ತು ಈಗ ಗೆರೆಗಳು ಹೊರಗೆ ಬರಲು ಆರಂಭಿಸಿವೆ, ಆದರೆ ಇಮೇಜ್ನಲ್ಲಿ ಇನ್ನೂ ಕೆಲವು ಬಣ್ಣಗಳಿವೆ ಎಂದು ನೀವು ನೋಡಬಹುದು.
03:23 ನಾನು ಕ್ರಮವಾಗಿ Colour, Desaturate ಎನ್ನುವಲ್ಲಿಗೆ ಹೋಗಿ Luminosity ಎನ್ನುವ ಆಯ್ಕೆಯನ್ನು ಆಯ್ದುಕೊಳ್ಳುತ್ತೇನೆ. ಈಗ ನಮಗೆ ಕಪ್ಪು ಮತ್ತು ಬಿಳಿ ಬಣ್ಣದ ಇಮೇಜ್, ಸಿಕ್ಕಿದೆ.
03:32 ಈಗ ಮತ್ತೊಮ್ಮೆ ‘Levels Tool’ ಅನ್ನು ಆಯ್ದುಕೊಳ್ಳುತ್ತೇನೆ ಮತ್ತು ಇಮೇಜ್ನಲ್ಲಿ ಹೆಚ್ಚು ಕಾಂಟ್ರಾಸ್ಟನ್ನು ಪಡೆಯಲು ಸ್ಲೈಡರನ್ನು ಹೊಂದಿಸುತ್ತೇನೆ.
03:47 ಇಮೇಜ್ನಲ್ಲಿ ನಿಮಗೆ ಒಳ್ಳೆಯ ಕಾಂಟ್ರಾಸ್ಟ, ಸಿಗುವಂತೆ ಸ್ಲೈಡರನ್ನು ಹೊಂದಿಸಿರಿ.
03:56 ಇದು ಚೆನ್ನಾಗಿದೆ ಎಂದು ನನ್ನ ಎಣಿಕೆ.
04:00 ಹೀಗೆ, ಈಗ ನಮಗೆ ಒಳ್ಳೆಯ ‘ಸ್ಕೆಚ್ ಇಫೆಕ್ಟ್’ ಇರುವ ಇಮೇಜ್ ಸಿಕ್ಕಿದೆ.
04:07 ನಾವು ಈ ಇಮೇಜ್ ಗೆ ಒಂದು ಅಂಚನ್ನು ಮಾಡಬೇಕು.
04:11 ನಾನು ಹೊಸ ಲೇಯರನ್ನು ಕ್ರಿಯೇಟ್ ಮಾಡುತ್ತೇನೆ, ಅದಕ್ಕೆ white ಎಂದು ಹೆಸರಿಡುತ್ತೇನೆ. Layer Fill Type ನಲ್ಲಿ White ಅನ್ನು ಆಯ್ಕೆಮಾಡುತ್ತೇನೆ. ತಾತ್ಕಾಲಿಕವಾಗಿ ನಾನು ಒಪ್ಯಾಸಿಟೀಯ ವ್ಯಾಲ್ಯೂವನ್ನು ಕಡಿಮೆ ಮಾಡುತ್ತೇನೆ. ಇದರಿಂದ ನಾವು ಇಮೇಜ್ನ ಮೂಲಕ ನೋಡಬಹುದು.
04:27 ಈಗ ನಾನು ಟೂಲ್ ಬಾಕ್ಸ್ ನಿಂದ Rectangle Selection Tools ಎನ್ನುವುದನ್ನು ಆಯ್ಕೆಮಾಡುತ್ತೇನೆ ಮತ್ತು ಇಮೇಜ್ನಲ್ಲಿ ಒಂದು ಕಚ್ಚಾ ಆಯತವನ್ನು ಡ್ರಾ ಮಾಡುತ್ತೇನೆ.
04:38 ಈ ಆಯತವನ್ನು ಸರಿಹೊಂದಿಸುತ್ತೇನೆ.
04:42 ನಾವು ಈ ಆಯತವನ್ನು ಹೊಂದಿಸಿದ ಮೇಲೆ ಕೆಳಗಿನ ಎಡ ಮೂಲೆಗೆ ಹೋಗಿ, Toggle Quick Mask ಎನ್ನುವುದರ ಮೇಲೆ ಕ್ಲಿಕ್ ಮಾಡುತ್ತೇವೆ. ನಮಗೆ ಎಡಿಟ್ ಮಾಡಲು ಸಾಧ್ಯವಿರುವ, ಕಪ್ಪು ಹಾಗೂ ಬಿಳಿ ಬಣ್ಣದ ಅಂಚು ಸಿಗುತ್ತದೆ.
04:55 ಕೆಲವು ಆಸಕ್ತಿದಾಯಕ ಪರಿಣಾಮಗಳನ್ನು ಕ್ರಿಯೇಟ್ ಮಾಡಲು ನಾವು ‘ಫಿಲ್ಟರ್’ಗಳನ್ನು ಬಳಸಬಹುದು. ಆದ್ದರಿಂದ ನಾನು ಕ್ರಮವಾಗಿ Filters (ಫಿಲ್ಟರ್ಸ್), Distorts (ಡಿಸ್ಟೊರ್ಟ್ಸ್), Waves (ವೇವ್ಸ್), ಇವುಗಳಿಗೆ ಹೋಗುತ್ತೇನೆ.
05:06 ಈ ಬಾಕ್ಸ್ ನಲ್ಲಿ, ಆಕರ್ಷಕ ಬಾರ್ಡರ್ಗಳನ್ನು ತಯಾರಿಸಲು ಅನೇಕ ಆಯ್ಕೆಗಳಿರುವುದನ್ನು ನೀವು ನೋಡಬಹುದು.
05:18 ನಾನು ನನಗೆ ಪುಟ್ಟ ‘ವೇವ್’ ಸಿಗುವಂತೆ ಸ್ಲೈಡರ್ಗಳನ್ನು ಹೊಂದಿಸುತ್ತೇನೆ.
05:30 ಅದು ಚೆನ್ನಾಗಿ ಕಾಣುತ್ತಿದೆ.
05:32 ಈಗ ನನಗೆ ಸ್ವಲ್ಪ ‘ಬ್ಲರ್’ ಅನ್ನು ಸೇರಿಸಬೇಕಾಗಿದೆ.
05:34 ಹೀಗಾಗಿ, Filters ಎನ್ನುವಲ್ಲಿಗೆ ಹೋಗಬೇಕು. ಆದರೆ ನಾನು ಬೇರೆ ಯಾವುದೋ ‘ಇಫೆಕ್ಟ್’ ಅನ್ನು ಬಳಸಬೇಕೆಂದಿದ್ದೇನೆ.
05:41 ನಾನು Noise ಎನ್ನುವಲ್ಲಿ ಗೆ ಹೋಗುತ್ತೇನೆ ಮತ್ತು Spread ಎನ್ನುವುದನ್ನು ಆರಿಸಿಕೊಳ್ಳುತ್ತೇನೆ. Horizontal ಎನ್ನುವಲ್ಲಿ 22 ಕ್ಕೆ ಸೆಟ್ ಮಾಡುತ್ತೇನೆ.
06:02 ಈಗ Toggle Quick Mask ಎನ್ನುವ ಬಟನ್ ಗೆ ಹೋಗಿ ಅದರ ಮೇಲೆ ಕ್ಲಿಕ್ ಮಾಡುತ್ತೇನೆ.
06:09 ಇಲ್ಲಿ ಬದಿಗಳಲ್ಲಿ ಜಾಗವಿರುವದನ್ನು ನೀವು ನೋಡಬಹುದು. ನಮಗೆ ಒಂದು ಆಯ್ಕೆ ಸಿಕ್ಕಿದೆ ಎಂದು ಇದರ ಅರ್ಥ.
06:17 ಈಗ ನಾನು ಆ ಲೇಯರ್ ಗೆ, ಲೇಯರ್ ಮಾಸ್ಕನ್ನು ಸೇರಿಸುವವನಿದ್ದೇನೆ. ಅದನ್ನು ‘White ಫಾರ್ full opacity’ ಎನ್ನುವುದರಿಂದ ತುಂಬುತ್ತೇನೆ. ಅಲ್ಲಿ ಇಮೇಜ್ನಲ್ಲಿ ಒಂದು ಆಯ್ಕೆಯಿದೆ. ನಾವು ಕಪ್ಪು ಬಣ್ಣವನ್ನು ಆ ಆಯ್ಕೆಯಲ್ಲಿ ಎಳೆದು ತಂದು ಅಲ್ಲಿರುವ ನಮ್ಮ ಏರಿಯಾವನ್ನು ಪೂರ್ತಿಯಾಗಿ ಪಾರದರ್ಶಕವನ್ನಾಗಿ ಮಾಡಬಹುದು.
06:39 ನಾನು ಕ್ರಮವಾಗಿ Select, None, ಎನ್ನುವಲ್ಲಿಗೆ ಹೋಗಿ ನಂತರ ನಾವು ತಾತ್ಕಾಲಿಕವಾಗಿ ‘ಟ್ರಾನ್ಸ್ಪರೆಂಟ್’ ಎಂದು ಸೆಟ್ ಮಾಡಿದ ಲೇಯರ್ ಗೆ ಮರಳಿ ಹೋಗುತ್ತೇನೆ ಮತ್ತು ಒಪ್ಯಾಸಿಟೀಯನ್ನು 100% ಕ್ಕೆ ಹೆಚ್ಚಿಸುವೆವು.
06:53 ಒಂದುವೇಳೆ, ಆಮೇಲೆ ನಿಮಗೆ ನಿಮ್ಮ ಬಾರ್ಡರ್ ನ ಬಣ್ಣವನ್ನು ಬದಲಾಯಿಸಬೇಕಾದರೆ ನೀವು ಮಾಡಬೇಕಾದದ್ದು ಇಷ್ಟೇ, ಕಲರ್ ಡೈಲಾಗ್ ಗೆ ಹೋಗಿ, ಒಂದು ಬಣ್ಣವನ್ನು ಆಯ್ಕೆಮಾಡಿ ಅದನ್ನು ಲೇಯರ್ನಲ್ಲಿ ಎಳೆದು ತಂದರೆ ನಿಮಗೆ ಬೇರೆ ಬಣ್ಣದ ಲೇಯರ್ ಸಿಗುತ್ತದೆ.
07:10 ಅದು ಉತ್ತಮವಾದ ‘ಸ್ಕೆಚ್ ಇಫೆಕ್ಟ್’ ಎನ್ನುವದಾಗಿತ್ತು. ಜೋಸೆಫ್, ನಿಮಗೆ ಈ ವೀಡಿಯೋಗಾಗಿ ಧನ್ಯವಾದಗಳು.
07:17 ಈಗ ಅಲ್ಲಿ ಏನಾಗಿದೆ ಎಂದು ನೋಡೋಣ.
07:22 ಇಲ್ಲಿ ನಾನು ಒಂದು ಇಮೇಜನ್ನು ತಯಾರಿಸಿದ್ದೇನೆ. ಅಲ್ಲದೆ, ಕಪ್ಪಿನಿಂದ ಬಿಳಿಯವರೆಗಿನ ಬೂದುಬಣ್ಣದ ‘ಗ್ರೇಡಿಯಂಟ್’ಅನ್ನು, ಮತ್ತು ಬಿಳಿ ಹಾಗೂ ಕಪ್ಪುಬಣ್ಣಗಳಿಂದ ತುಂಬಿದ ಒಂದು ಜಾಗವನ್ನು ಪಡೆದಿದ್ದೇನೆ.
07:37 ನಾನು ಈಗಾಗಲೇ ಲೇಯರನ್ನು ಎರಡು ಸಲ ಮಾಡಿದ್ದೇನೆ. ಇದು ಮೊದಲನೆಯ ಹಂತವಾಗಿದೆ.
07:45 ಈಗ ನನಗೆ ಈ ಇಮೇಜನ್ನು ಇನ್ವರ್ಟ್ ಮಾಡಬೇಕಾಗಿದೆ. ಕ್ರಮವಾಗಿ Colors, Invert ಇವುಗಳಿಗೆ ಹೋಗಿರಿ.
07:53 ಈ ಇಮೇಜ್ ಈಗ ತದ್ವಿರುದ್ಧವಾಗಿದೆ ಎಂದು ನೀವು ನೋಡುತ್ತೀರಿ. ನಾನು ಒಪ್ಯಾಸಿಟೀಯನ್ನು 50% ಕ್ಕೆ ಇಳಿಸುತ್ತೇನೆ.
08:06 ಪೂರ್ತಿ ಇಮೇಜ್, ಬೂದುಬಣ್ಣದ್ದು ಆಗಿದೆ ಏಕೆಂದರೆ ಅರ್ಧ ಕಪ್ಪುಬಣ್ಣಕ್ಕೆ ಅರ್ಧ ಬಿಳಿಬಣ್ಣವು ಸೇರಿದಾಗ ಬೂದುಬಣ್ಣವನ್ನು ಕೊಡುತ್ತದೆ.
08:19 ಮತ್ತು ಇಲ್ಲಿ ಅರ್ಧ ಬಿಳಿಗೆ ಅರ್ಧ ಕಪ್ಪುಬಣ್ಣವು ಸೇರಿದಾಗ ಬೂದುಬಣ್ಣವನ್ನು ಕೊಡುತ್ತದೆ.
08:28 ಮುಂದಿನ ಹಂತ, ಈ ಲೇಯರನ್ನು ‘ಬ್ಲರ್’ ಮಾಡುವುದು ಆಗಿದೆ.
08:33 ಆದ್ದರಿಂದ, ಕ್ರಮವಾಗಿ Filters, Blur, Gaussian Blur ಇವುಗಳಿಗೆ ಹೋಗಿರಿ.
08:40 ನಾನು ಈ ಸರಣಿಯನ್ನು ಇಲ್ಲಿ ‘ಅನ್-ಬ್ಲಾಕ್’ ಮಾಡಿದ್ದೇನೆ. ಇದರಿಂದ ನಾನು ‘Vertical ಬ್ಲರ್’ ಅನ್ನು ಮಾತ್ರ ಬದಲಾಯಿಸಬಹುದು, ‘Horizontal ಬ್ಲರ್’ ಅನ್ನು ಅಲ್ಲ, ಇಲ್ಲದಿದ್ದರೆ ಈ ಇಮೇಜ್ ತುಂಬಾ ಗೊಂದಲಮಯವಾಗುವುದು.
08:55 ಇದು ನಾನು ಆಶಿಸಿದ ಪರಿಣಾಮವಾಗಿದೆ. OK ಎನ್ನುವುದರ ಮೇಲೆ ಕ್ಲಿಕ್ ಮಾಡುತ್ತೇನೆ.
09:01 ಈಗ ನೀವು ಇಲ್ಲಿ ಗಾಢ ಬೂದುಬಣ್ಣ ಹಾಗೂ ತಿಳಿ ಬೂದುಬಣ್ಣದ ಗೆರೆಗಳನ್ನು ನೋಡುತ್ತೀರಿ.
09:06 ಇಲ್ಲಿಯ ಈ ಗೆರೆಗಳು, ಫೋರ್‌ಗ್ರೌಂಡ್ಅನ್ನು ಬ್ಲರ್ ಮಾಡಿದ್ದರ ಪರಿಣಾಮವಾಗಿವೆ.
09:18 ನಾನು ಇಲ್ಲಿ ಝೂಮ್ ಇನ್ ಮಾಡಿದಾಗ ಹಾಗೂ ಒಪ್ಯಾಸಿಟೀಯನ್ನು ವರ್ಧಿಸಿದಾಗ ನೀವು ಇಲ್ಲಿ ಕಪ್ಪು, ಬಿಳಿ ಹಾಗೂ ಮಧ್ಯದಲ್ಲಿ ಗ್ರೇಡಿಯಂಟ್ ಇರುವುದನ್ನು ನೋಡುತ್ತೀರಿ.
09:32 ಬೇರೆ ಲೇಯರ್ನ ಮೇಲೆ ನಾವು ಬಿಳಿ ಮತ್ತು ಕಪ್ಪು ಬಣ್ಣಗಳನ್ನು ಪಡೆದಿದ್ದೇವೆ. ಈಗ ಅದು ತದ್ವಿರುದ್ಧವಾಗಿಲ್ಲ.
09:44 ಆದ್ದರಿಂದ ಒಪ್ಯಾಸಿಟೀಯನ್ನು ಕಡಿಮೆಮಾಡಿರಿ. ಈಗ ಒಂದು ಬದಿಯಲ್ಲಿ ಅದು ಗಾಢ ಬೂದುಬಣ್ಣವಿದ್ದು ಮತ್ತೊಂದು ಬದಿಯಲ್ಲಿ ಮಧ್ಯಮ ಬೂದುಬಣ್ಣವಿರುವುದನ್ನು ನೀವು ನೋಡಬಹುದು.
10:00 ಇಲ್ಲಿ ಇದು ಮಧ್ಯಮ ಬೂದುಬಣ್ಣವಿದೆ, ಇಲ್ಲಿಯೂ ಸಹ.
10:05 ಆದರೆ ಮೊದಲು ನಾವು ಕಣ್ಣಿನ ಯುಕ್ತಿಯನ್ನು ನೋಡೋಣ.
10:10 ಇಲ್ಲಿ, ಖಂಡಿತವಾಗಿ ಇಲ್ಲಿಯದಕ್ಕಿಂತ ಹೆಚ್ಚು ಗಾಢವಾಗಿದೆ.ಆದ್ದರಿಂದ ನಾನು Colour Picker ಎನ್ನುವುದನ್ನು ಆಯ್ಕೆಮಾಡುತ್ತೇನೆ. ಇಲ್ಲಿ ಅದು Red, Green ಮತ್ತು Blue ಗಳಿಗಾಗಿ 128, 128, 128 ಆಗಿದೆ ಮತ್ತು 50% ಬೂದುಬಣ್ಣವಿದ್ದು ಇದು ಮಧ್ಯಮ ಬೂದುಬಣ್ಣವಾಗಿದೆ ಮತ್ತು ಇಲ್ಲಿ, ಅದು 127,127,127 ಆಗಿದ್ದು ಇಲ್ಲಿಯೂ ಸಹ 50% ಬೂದುಬಣ್ಣ ಆಗಿದೆ ಎಂದು ನಾವು ನೋಡಬಹುದು.
10:43 ಇಲ್ಲಿ, ಮೂಲತಃ ಅದೇ ಬಣ್ಣವಾಗಿದ್ದು ಕಡಿಮೆ ಛಾಯೆಗಳಿವೆ ಮತ್ತು ಈ ಬದಿಯಲ್ಲಿ 127 ಹಾಗೂ ಆ ಬದಿಯಲ್ಲಿ 128 ಇರುತ್ತವೆ.
10:57 255 ನ್ನು 2 ರಿಂದ ಭಾಗಿಸಿದಾಗ, ನಾವು ಫ್ಲೋಟಿಂಗ್ ಪಾಯಂಟ್ ಅನ್ನು ಪಡೆದಿರದಿದ್ದರೆ, ನಮಗೆ 127 ಅಥವಾ 128 ಸಿಗುತ್ತದೆ.
11:15 ಈಗ ನಾನು ಈ ಲೇಯರ್ಗಳನ್ನು ಮರ್ಜ್ ಮಾಡಬೇಕು.
11:19 ಆದ್ದರಿಂದ ಕ್ರಮವಾಗಿ Layer, Merge Down (ಮರ್ಜ್ ಡೌನ್) ಎನ್ನುವಲ್ಲಿಗೆ ಹೋಗಿ,
11:29 ಜೋಸೆಫ್ ಅವರ ಇಮೇಜ್ನಲ್ಲಿದ್ದ ‘ಕಲರ್ ಲೆವೆಲ್’ಅನ್ನು ಇಲ್ಲಿ ಪಡೆಯುತ್ತೇನೆ. ಈಗ ನಾನು ಈ ಸ್ಲೈಡರ್ಗಳನ್ನು ಸುಮ್ಮನೆ ಎಳೆದು ಕಪ್ಪು ಬಣ್ಣವನ್ನು ಗಾಢವಾಗಿಸಿ, ಬೂದುಬಣ್ಣವನ್ನು ಬಿಳಿಯಾಗಿಸಬಹುದು.
11:56 ಬದಲಾಗುವ (ವೇರಿಯೇಬಲ್) ದಪ್ಪಳತೆಯನ್ನು ಹೊಂದಿದ ಒಂದು ಗೆರೆಯನ್ನು ನೀವು ನೋಡಬಹುದು. ನಾನು ಈ ಸ್ಲೈಡರ್ಗಳನ್ನು ಎಡಕ್ಕೆ ಎಳೆದರೆ ಗೆರೆಯು ತೆಳುವಾಗುತ್ತ ಹೋಗುತ್ತದೆ.
12:12 ನಾವು ಇಡೀ ಇಮೇಜನ್ನು ನೋಡೋಣ, Shift + Ctrl + E ಒತ್ತಿರಿ, ಮೊದಲು ಇದ್ದ ಗ್ರೇಡಿಯಂಟ್ ಮತ್ತು ‘ಕಲರ್ ಫಿಲ್’ ಗಳ ಬದಲಿಗೆ ಇಲ್ಲಿ ನಾನು ಗೆರೆಗಳನ್ನು ಪಡೆದಿರುವುದನ್ನು ನೀವು ನೋಡುತ್ತೀರಿ.
12:25 ನಿಮಗೆ ಇದು ತಿಳಿಯುತ್ತದೆ ಎಂದು ನಾನು ಆಶಿಸುತ್ತೇನೆ. ಇದನ್ನು ಮಾಡಲು ನೀವು ಪ್ರಯತ್ನಿಸಬಹುದು.
12:31 ಈ ‘ಇಫೆಕ್ಟ್’ನಿಂದ ಕೆಲವು ಇಮೇಜ್ಗಳು ತುಂಬಾ ಚೆನ್ನಾಗಿ ಕಾಣುತ್ತವೆ.
12:37 ಮತ್ತು ಜೋಸೆಫ್ ಅವರ ಇಮೇಜ್ ತುಂಬ ಮಜವಾಗಿತ್ತು. ನಾನು ಅದನ್ನು ಇಷ್ಟಪಡುತ್ತೇನೆ.
12:44 ಈ ವಾರ Meet The GIMP ನಲ್ಲಿ ನಾನು ಹೊಸ ಭಾಗವನ್ನು ಆರಂಭಿಸುತ್ತೇನೆ.
12:48 ನೀವು ‘ಹೋಮ್ ಪೇಜ್’ ಗೆ ಹೋದರೆ, ಅಲ್ಲಿ ಕೆಳಗೆ, ಬಲಗಡೆಗೆ, 23hq.com ನಲ್ಲಿಯ photo group ಎನ್ನುವಲ್ಲಿಗೆ ಹೋಗುವ ರೀತಿ ನಿಮಗೆ ಸಿಗುತ್ತದೆ.
13:00 ಅಲ್ಲಿ ನಿಮಗೆ ತೋರಿಸಲು ಬಹಳಷ್ಟು ಇಮೇಜ್ಗಳಿವೆ. ವಾರದಿಂದ ವಾರಕ್ಕೆ ಅವುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಬಗ್ಗೆ ಏನಾದರೂ ಹೇಳುತ್ತೇನೆ.ಇವತ್ತು ಇಲ್ಲಿ, ಇದನ್ನು ತೆಗೆದುಕೊಳ್ಳುತ್ತೇನೆ.
13:13 ಇದು ಫೈರ್ ವರ್ಕ್ಸ್ನ ಮೇಲೆ Mainzelmann (ಮ್ಯಾಂಝಿಲಮ್ಯಾನ್) ಅವರಿಂದ ತಯಾರಿಸಲ್ಪಟ್ಟಿದೆ. ಬಿಳಿ ಬಣ್ಣದ ಸಮತೋಲನ ಹಾಗೂ ಈ ಇಮೇಜ್ನಲ್ಲಿಯ ಬಣ್ಣಗಳ ಬಗ್ಗೆ ಅವರು ಕಾಮೆಂಟ್ ಗಾಗಿ ಕೇಳುತ್ತಾರೆ. ಇದು ನೋಡಲು ಯೋಗ್ಯವಾಗಿದೆ ಎಂದು ನನ್ನ ಭಾವನೆ.
13:28 ನಾನು ಟೀಕೆಮಾಡಿದ್ದೇನೆ, ಆದರೆ ಅದು ಜರ್ಮನ್ ಭಾಷೆಯಲ್ಲಿ ಮಾತ್ರ ಇತ್ತು.
13:32 ಸರಿ, ನಾವು ಒಮ್ಮೆ ನೋಡೋಣ.
13:35 ಇದು, ಅವರ ಇಮೇಜ್ ಆಗಿದ್ದು ವೆಬ್ ಸೈಟ್ಟ್ನಿಂದ ಸುಮ್ಮನೆ ಎಳೆದುತಂದು ಟೂಲ್ ಬಾಕ್ಸ್ನ ಮೇಲೆ ಇಡಲಾಗಿದೆ. ಆನಂತರ ಗಿಂಪ್,ವೆಬ್ ನಿಂದ ಇಮೇಜನ್ನು ಓಪನ್ ಮಾಡುತ್ತದೆ.
13:48 ಆಕಾಶವು ಸ್ವಲ್ಪ ಹೆಚ್ಚು ಗಾಢವಾಗಬೇಕೆಂದು ನಾನು ಎಣಿಸುತ್ತೇನೆ.
13:53 ಇಲ್ಲಿ ಕೆಳಗಿರುವ ಕಟ್ಟಡ ಉತ್ತಮವಾಗಿದೆ. ಇದು ಇಮೇಜ್ನಲ್ಲಿ ಇರಬೇಕು. ಆದರೆ ಇಲ್ಲಿಯ ಮುಗಿಲು ಸುಮಾರು ಕಪ್ಪಾಗಿರಬೇಕು, ಇಂತಹ ನಿಜವಾದ ಕಪ್ಪು ಅಲ್ಲ. ಮತ್ತು ಇಲ್ಲಿಯ ಕೆಲವು ಹೊಗೆಯ ಮೋಡಗಳನ್ನು ಉಳಿಸಬಹುದು.
14:13 ಆದ್ದರಿಂದ ನಾನು Curves Tool ಎನ್ನುವುದನ್ನು ಆಯ್ಕೆಮಾಡುತ್ತೇನೆ, ನಾವು ಏನು ಮಾಡಬಹುದೆಂದು ನೋಡೋಣ.
14:24 ಈ ಇಮೇಜ್ನಲ್ಲಿ, ಇಲ್ಲಿ, ಬಹಳಷ್ಟು ಬಿಳಿ ಬಣ್ಣವಿರುವುದನ್ನು ನೀವು ನೋಡಬಹುದು.
14:31 ಈ ಇಮೇಜ್ನಲ್ಲಿ ‘ಎಕ್ಸ್ಪೋಜರ್’ ತುಂಬಾ ಚೆನ್ನಾಗಿದೆ ಮತ್ತು ವ್ಯಾಲ್ಯೂಗಳು ಹಿಸ್ಟೋಗ್ರಾಮ್ ನಲ್ಲಿ ಸರಿಯಾಗಿ ಹಂಚಲ್ಪಟ್ಟಿವೆ. ಇಲ್ಲಿ ನಾವು ಕಪ್ಪು ಬಣ್ಣವನ್ನು ಹೊಂದಿದ್ದೇವೆ,ಅದು ನಿಜವಾಗಿ ಕಪ್ಪು ಅಲ್ಲವೆಂದು ನೀವು ನೋಡುತ್ತೀರಿ.
14:48 ನಾವು ಇದನ್ನು ಇನ್ನೂ ಸ್ವಲ್ಪ ಗಾಢವಾಗಿಸಬಹುದು.
14:56 ಆದ್ದರಿಂದ ಈ ಕಪ್ಪು ಬಿಂದುವನ್ನು ಮೇಲೆ, ಇಲ್ಲಿಯವರೆಗೆ ನಾನು ಎಳೆಯಬಹುದು.
15:01 ಈ ಕಪ್ಪು ಬಿಂದು, ಕಪ್ಪು ಬಣ್ಣದ ವ್ಯಾಖ್ಯಾನವಾಗಿದೆ ಮತ್ತು ಇದು ಕಪ್ಪು ಎಂದು ಈಗ ನಾನು ಹೇಳಬಹುದು.
15:12 ಹೀಗೆ, ಪಟಾಕಿಗಳು ಸ್ವಲ್ಪ ಹೆಚ್ಚು ಎದ್ದುಕಾಣುತ್ತಿವೆ ಎಂದು ನೀವು ನೋಡಬಹುದು ಮತ್ತು ನನಗೆ ಹಿಸ್ಟೋಗ್ರಾಮ್ ನ ಈ ಭಾಗವನ್ನು ಸ್ವಲ್ಪ ಗಾಢಗೊಳಿಸಬೇಕಾಗಿದೆ.
15:26 ಆದ್ದರಿಂದ ನಾನು ಇಲ್ಲಿ ಒಂದು ಪಾಯಿಂಟನ್ನು ಇಟ್ಟು, ಕೇವಲ ‘ಕರ್ವ್’ಅನ್ನು ಕೆಳಗೆ ಎಳೆಯುತ್ತೇನೆ.
15:33 ಕಟ್ಟಡಕ್ಕಾಗಿ ನಾನು ಇಲ್ಲಿ ಸ್ವಲ್ಪ ಸ್ಥಳವನ್ನು ಬಿಡಬೇಕು.
15:41 ಇದು ಕಟ್ಟಡದ ಮುಖ್ಯ ಭಾಗವಾಗಿದೆ ಎಂದು ನನ್ನ ಭಾವನೆ.
15:52 ಹೀಗಾಗಿ ನಾನು ಈ ‘ಕರ್ವ್’ಅನ್ನು ಕೆಳಗೆ ಇಲ್ಲಿ ಎಳೆಯುತ್ತೇನೆ ಮತ್ತು ಕಟ್ಟಡವು ಇನ್ನೂ ಅಲ್ಲಿಯೇ ಇರುವದನ್ನು ನಾನು ನೋಡಬಹುದು.
16:07 ಈಗ ಈ ಭಾಗವು ಗಾಢವಾಗಿದೆ ಮತ್ತು ಈ ಬಿಳಿ ಬಣ್ಣವು ಬಹುಶಃ ಸ್ವಲ್ಪ ಹೆಚ್ಚು ಬಿಳಿಯಾಗಿದೆ. ಆದ್ದರಿಂದ ಇದನ್ನು ಕೆಳಗೆ ಎಳೆಯುತ್ತೇನೆ.
16:25 ನಾವು ಬೇರೆ ಏನನ್ನಾದರೂ ಪ್ರಯತ್ನಿಸೋಣ.
16:32 ಇಲ್ಲ, ಅದು ಕೆಲಸ ಮಾಡುವದಿಲ್ಲ.
16:35 ಪಾಯಿಂಟ್ಗಳನ್ನು ಸುಮ್ಮನೆ ಹೊರಗೆ ಎಳೆಯಿರಿ.
16:39 ನಾನು ಇದನ್ನು ಮೊದಲು ಪ್ರಯತ್ನಿಸಿಲ್ಲ, ಹೀಗಾಗಿ ಸ್ವಲ್ಪ ಪ್ರಯೋಗ ಮಾಡುತ್ತಿದ್ದೇನೆ.
16:51 ಇದು ಆಗುತ್ತದೆ ಎಂದು ನನ್ನ ಎಣಿಕೆ.
16:54 ಮೊದಲು ಇಮೇಜನ್ನು ನೋಡಿದಾಗ ಅದನ್ನು ಸ್ವಲ್ಪ ‘ವಾರ್ಮ್’ ಮಾಡಬೇಕೆಂದಿದ್ದೆ. ಆದರೆ ಈಗ ಬಣ್ಣಗಳು ತುಂಬಾ ಚೆನ್ನಾಗಿ ಬಂದಿವೆ.
17:03 ಈ ಇಮೇಜ್ ಗಾಗಿ ಇಷ್ಟು ಸಾಕು ಎಂದುಕೊಳ್ಳುತ್ತೇನೆ.
17:07 ಹೆಚ್ಚಿನ ಮಾಹಿತಿಗಾಗಿ ಇಲ್ಲಿ ತೋರಿಸಿದ ಲಿಂಕ್ ಗೆ ಹೋಗಿರಿ. http://meetthegimp dot org ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ಕೆಳಗೆ ತೋರಿಸಿದ ‘ಲಿಂಕ್’ಗೆ ಬರೆದು ತಿಳಿಸಿರಿ. info @ meetthegimp dot org

ಧನ್ಯವಾದಗಳು.

17:22 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ……………………….

Contributors and Content Editors

NaveenBhat, Sandhya.np14