GIMP/C2/Selecting-Sections-Part-1/Kannada

From Script | Spoken-Tutorial
Revision as of 20:06, 12 December 2014 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:23 Meet The GIMP (ಮೀಟ್ ದ ಗಿಂಪ್) ನ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:25 ಇದನ್ನು ರೋಲ್ಫ್ ಸ್ಟೇನೋರ್ಟ್ ಅವರು, ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ.
00:31 ಈ ‘ಇಮೇಜ್’ನೊಂದಿಗೆ ನಾವು ಇಂದಿನ ಟ್ಯುಟೋರಿಯಲ್ ಅನ್ನು ಆರಂಭಿಸೋಣ.
00:34 ಇವತ್ತು , ಒಂದು ಉದಾಹರಣೆಯೆಂದು ಬಳಸಲು ಮಾತ್ರ ಈ ‘ಇಮೇಜ್’ನೊಂದಿಗೆ ನಾನು ಕೆಲಸ ಮಾಡುತ್ತೇನೆ.
00:44 ‘ಸೆಲೆಕ್ಶನ್’ನೊಂದಿಗೆ ಕೆಲಸ ಮಾಡಲು ಆರಂಭಿಸುವ ಮೊದಲು, ‘ಸೆಲೆಕ್ಶನ್ಸ್’ ಎಂದರೆ ನಿಜವಾಗಿಯೂ ಏನಿರುತ್ತದೆ ಎನ್ನುವುದರ ಬಗ್ಗೆ ನೀವು ಸ್ವಲ್ಪ ತಿಳಿದುಕೊಳ್ಳಬೇಕು.
00:57 ಈ ಚೌಕೋನವು ಒಂದು ‘ಸೆಲೆಕ್ಶನ್’ ಆಗಿದೆ ಮತ್ತು ಈ ಭಾಗವು ‘ಸೆಲೆಕ್ಶನ್’ನ ಹೊರಗೆ ಇದೆ.
01:06 ಇಲ್ಲಿ, ಚಲಿಸುತ್ತಿರುವ ಈ ಗೆರೆಗಳು ‘ಸೆಲೆಕ್ಶನ್’ನ ಅಂಚುಗಳಾಗಿವೆ.
01:15 ಗಿಂಪ್ ಜನರು ‘ಸೆಲೆಕ್ಶನ್’ಅನ್ನು ‘ಚಾನೆಲ್’ ಎಂದು ಕರೆಯುತ್ತಾರೆ.
01:19 ರೆಡ್, ಗ್ರೀನ್ ಅಥವಾ ಬ್ಲೂ ಅಥವಾ ‘ಟ್ರಾನ್ಸ್ಪರೆನ್ಸಿ’ಯನ್ನು ನಿಯಂತ್ರಿಸುವ ‘ಅಲ್ಫಾ ಚಾನೆಲ್’ ಗಳಂತಹ ‘ಚಾನೆಲ್’.
01:28 ‘ಸೆಲೆಕ್ಶನ್’ನ ಹೊರಗೆ ಈ ಚಾನೆಲ್’ನ ವ್ಯಾಲ್ಯೂ, ಸೊನ್ನೆಯಾಗಿರುತ್ತದೆ.
01:33 ಮತ್ತು ಒಳಗಡೆ 255 ಆಗಿದೆ. ಇವುಗಳ ಮಧ್ಯದಲ್ಲಿ ಅಂಚು ಇರುತ್ತದೆ, 255 ಕ್ಕಿಂತ ಕಡಿಮೆ ಹಾಗೂ ಸೊನ್ನೆಗಿಂತ ಹೆಚ್ಚು ಆಗಿರುವ ವ್ಯಾಲ್ಯೂಗಳು ಇವುಗಳ ಮಧ್ಯದಲ್ಲಿ ಇರಲು ಸಾಧ್ಯವಿದೆ.
01:48 ಹೀಗಾಗಿ, ‘ಸೆಲೆಕ್ಶನ್’ಅನ್ನು ಬದಲಾಯಿಸುವುದು ಅಥವಾ ‘ಸೆಲೆಕ್ಶನ್’ ಮಾಡುವುದು ಎಂದರೆ ಕೆಲವು ಸಂಖ್ಯೆಗಳನ್ನು ಬದಲಾಯಿಸುವುದಾಗಿದೆ.
01:55 ಈಗ, ‘ಸೆಲೆಕ್ಶನ್’ಅನ್ನು ಮಾಡುವುದು ಹೇಗೆ, ಎನ್ನುವುದನ್ನು ನಾವು ನೋಡೋಣ.
02:01 ‘ಸೆಲೆಕ್ಶನ್’ಅನ್ನು ಡೀ-ಸೆಲೆಕ್ಟ್ ಮಾಡಲು ಎರಡು ವಿಧಗಳಿವೆ.
02:05 ಮೊದಲನೆಯ ರೀತಿ, ಕ್ರಮವಾಗಿ Select ಮತ್ತು None ಎನ್ನುವಲ್ಲಿಗೆ ಹೋಗುವುದು.
02:11 ನೀವು Shift + Ctr l+ A ಕೀಗಳನ್ನು ಒಟ್ಟಿಗೇ ಬಳಸಿ ‘ಸೆಲೆಕ್ಶನ್’ಅನ್ನು ತೆಗೆದುಹಾಕಬಹುದು.
02:22 ಈಗ Rectangle Select Tool ಎನ್ನುವುದನ್ನು ಆಯ್ಕೆಮಾಡಿ, ಆಯ್ಕೆಗಳ ಡೈಲಾಗ್ ನಲ್ಲಿ ನೋಡಿರಿ.
02:33 ಮೇಲ್ಗಡೆ ನಾಲ್ಕು ಆಯ್ಕೆಗಳಿವೆ.
02:36 ಮೊದಲನೆಯದು Replace the current selection ಎನ್ನುವುದಾಗಿದೆ.
02:40 ನಾನು ಇಲ್ಲಿ ವಿಭಿನ್ನ ಜಾಗಗಳನ್ನು ಆಯ್ಕೆಮಾಡುತ್ತೇನೆ. ನಾನು ಹೊಸ ಜಾಗವನ್ನು ಆಯ್ಕೆಮಾಡಿದಾಗ ಹಳೆಯ ‘ಸೆಲೆಕ್ಶನ್’ ಅಳಿಸಿಹೋಗುವುದನ್ನು ನೀವು ನೋಡಬಹುದು.
02:52 Add to the current selection ಎನ್ನುವುದು ಎರಡನೆಯ ಆಯ್ಕೆಯಾಗಿದೆ.
02:58 ಇದನ್ನು ಆಯ್ಕೆಮಾಡುವುದರಿಂದ, ಇಮೇಜ್ನಲ್ಲಿ ವಿಭಿನ್ನ ಜಾಗಗಳನ್ನು ನಾನು ಆಯ್ಕೆಮಾಡಬಹುದು ಮತ್ತು ಸಾಕಷ್ಟು ಜಟಿಲವಾದ ‘ಸೆಲೆಕ್ಶನ್’ಅನ್ನು ಪಡೆಯಬಹುದು.
03:17 ನಾನು, ನನ್ನ ‘ಕಲರ್ ಟ್ಯಾಬ್’ಗಳಿಗೆ ಹೋಗಿ, ಬಣ್ಣವನ್ನು ‘ಸೆಲೆಕ್ಶನ್’ನ ಮೇಲೆ ಎಳೆದರೆ, ಆಯ್ಕೆಮಾಡಿದ ಎಲ್ಲ ಜಾಗಗಳು ಆ ಬಣ್ಣದಿಂದ ತುಂಬಲ್ಪಡುತ್ತವೆ ಮತ್ತು ಆಯ್ಕೆಮಾಡಿದ ಆದರೆ ಜೋಡಿಸದಿದ್ದ ಜಾಗ ಸಹ ತುಂಬಲ್ಪಟ್ಟಿದೆ ಎಂದು ನೀವು ನೋಡಬಹುದು.
03:44 ಆದ್ದರಿಂದ, ‘ಸೆಲೆಕ್ಶನ್’ಗೆ ಏನಾದರೂ ಸೇರಿಸಿದಾಗ, ಅಲ್ಲಿಯ ‘ಸೆಲೆಕ್ಶನ್’ನ ಭಾಗಗಳ ನಡುವೆ ಸಂಪರ್ಕವಿರದಿದ್ದರೂ ಸಹ, ಎಲ್ಲ ‘ಸೆಲೆಕ್ಶನ್’ಗಳನ್ನು ಒಂದೇ ಎನ್ನುವಂತೆ ಹಿಡಿದಿಡುತ್ತದೆ.
03:57 ಇದು ಸ್ವಲ್ಪ ಜಟಿಲವಾಗಿದೆ.
03:59 ತುಂಬಿರುವುದನ್ನು ‘ಅನ್-ಡು’ ಮಾಡಲು Ctrl + Z ಒತ್ತಿ, ಎಲ್ಲವನ್ನೂ ಡೀ-ಸೆಲೆಕ್ಟ್ ಮಾಡಲು shift + Ctrl + A ಒತ್ತಿ. ನನ್ನ ಆಯ್ಕೆಗಳ ‘ಡೈಲಾಗ್’ಗೆ ಮರಳಿ ಬರೋಣ.
04:11 ಈಗ. ಇಲ್ಲಿ ಒಂದು ‘ಸ್ಕ್ವೇರ್’ಅನ್ನು ಆಯ್ಕೆಮಾಡಿ, Substract from the current selection ಎನ್ನುವುದನ್ನು ಆಯ್ಕೆಮಾಡಿರಿ.
04:21 ನಾನು ಈ ಜಾಗವನ್ನು ಆಯ್ಕೆಮಾಡುತ್ತೇನೆ. ಆದರೆ ಏನೂ ಆಗುವದಿಲ್ಲ.
04:27 ಆದರೆ ನಾನು ಈ ಜಾಗಗಳನ್ನು ಆಯ್ಕೆಮಾಡಿದಾಗ ತುದಿ ಕತ್ತರಿಸಿಹೋಗಿದೆ ಎಂದು ನೀವು ನೋಡಬಹುದು.
04:36 ‘ಸೆಲೆಕ್ಶನ್’ನ ಫ್ರೇಮ್ ಅಲ್ಲಿಯೇ ಉಳಿಯುತ್ತದೆ ಮತ್ತು ನಾನು ಅದನ್ನು ಸರಿಸಿದಾಗ ಬದಲಾವಣೆಗಳನ್ನು ಮಾಡಬಹುದು ಎಂದು ನೀವು ನೋಡಬಹುದು.
04:47 ಹೊಸ ‘ಸೆಲೆಕ್ಶನ್’ಅನ್ನು ಪಡೆಯಲು, ಇನ್ನೊಂದು ಜಾಗದಲ್ಲಿ ನೀವು ಕ್ಲಿಕ್ ಮಾಡುವವರೆಗೆ, ನೀವು ಮಾಡಿದ ಕೊನೆಯ ‘ಸೆಲೆಕ್ಶನ್’ಅನ್ನು ಬದಲಾಯಿಸಬಹುದು. ನೀವು ನಿಮ್ಮ ಕೆಲಸವನ್ನು ಯಾವಾಗಲೂ ಬದಲಾಯಿಸಬಹುದು.
05:07 ಈಗ ಕೊನೆಯ ಆಯ್ಕೆ, Intersect with the current selection ಎನ್ನುವುದು ಆಗಿದೆ.
05:14 ನಾವು ಅದನ್ನು ಪ್ರಯತ್ನಿಸೋಣ.
05:17 ನಾನು ಇಲ್ಲಿ ಒಂದು ಆಯತವನ್ನು ಆಯ್ಕೆಮಾಡುತ್ತೇನೆ, ಅದರ ಹೊರಗಿನ ಜಾಗ ಆಯ್ಕೆಯಾಗಿಲ್ಲ ಮತ್ತು ಮೊದಲು ಆಯ್ಕೆಯಾಗಿದ್ದ ‘ಸೆಲೆಕ್ಶನ್’ಗಳನ್ನು ತೆಗೆದುಹಾಕಲಾಗಿದೆ.
05:32 ಈ ಆಯತದಲ್ಲಿನ ‘ಸೆಲೆಕ್ಶನ್’ಅನ್ನು ಮಾತ್ರ ಇಡಲಾಗಿದೆ.
05:38 ನನಗೆ ಬೇಕಾಗಿರುವ ಜಾಗವು ಆಯ್ಕೆಯಾಗುವವರೆಗೆ, ನಾನು ಈ ಆಯತವನ್ನು ಸಹ ಮಾರ್ಪಡಿಸಬಹುದು.
05:49 ಈಗ, ‘ರಿಪ್ಲೇಸ್’, ‘ಆಡ್’, ‘ಸಬ್ಸ್ಟ್ರ್ಯಾಕ್ಟ್’ ಮತ್ತು ‘ಇಂಟರ್ಸೆಕ್ಟ್’ ಎನ್ನುವ ನಾಲ್ಕು ಮೋಡ್ ಗಳನ್ನು ನಾವು ಮುಗಿಸಿದ್ದೇವೆ.
06:06 ನೀವು ಕೇವಲ ಕ್ಲಿಕ್ ಮಾಡುವದರಿಂದ ‘ಸೆಲೆಕ್ಶನ್’ಅನ್ನು ಬದಲಾಯಿಸಬಹುದು.
06:11 Click ಮತ್ತು Shift ಗಳಿಂದ ‘ಆಡ್’ ಎನ್ನುವುದನ್ನು ಮಾಡಬಹುದು.
06:17 ನಾವು ಅದನ್ನು ಪ್ರಯತ್ನಿಸೋಣ. ನಾನು Shift ಕೀಯನ್ನು ಒತ್ತುತ್ತೇನೆ. ನಂತರ ಕ್ಲಿಕ್ ಮಾಡುವುದರಿಂದ ನಾನು ಹೊಸ ‘ಸೆಲೆಕ್ಶನ್’ಗಳನ್ನು ಸೇರಿಸಲು ಆರಂಭಿಸುತ್ತೇನೆ.
06:29 ನಾನು Shift ಕೀ ಮತ್ತು ಮೌಸ್ ಕೀಯನ್ನು ಒತ್ತಿದಾಗ ಒಂದು ಅಧಿಕ ಚಿನ್ಹೆ (+) ಕಾಣಿಸುತ್ತದೆ.
06:39 ಈಗ ನನಗೆ ‘ಸೆಲೆಕ್ಶನ್’ಅನ್ನು ‘ಸಬ್ಸ್ಟ್ರ್ಯಾಕ್ಟ್’ ಮಾಡಬೇಕಾಗಿದ್ದರೆ, ನಾನು Ctrl ಕೀಯನ್ನು ಮತ್ತು ಈಗ ಮೌಸ್ ಕೀಯನ್ನು ಒತ್ತಿ, ಕದಲಿಸಲು ಆರಂಭಿಸುತ್ತೇನೆ. ನೀವು ಒಂದು ‘ಮೈನಸ್’ ಚಿನ್ಹೆ (-) ಯನ್ನು ನೋಡಬಹುದು.
06:57 ಈಗ ನಾನು ‘ಸೆಲೆಕ್ಶನ್’ಅನ್ನು ‘ಸಬ್ಸ್ಟ್ರ್ಯಾಕ್ಟ್’ ಮಾಡಬಹುದು.
07:02 ‘ಇಂಟರ್‌ಸೆಕ್ಶನ್’ಗಾಗಿ, Shift, Ctrl ಗಳನ್ನು ಒಟ್ಟಿಗೆ ಒತ್ತಿ ಆಮೇಲೆ ‘ಇಂಟರ್‌ಸೆಕ್ಟ್’ ಮಾಡಲು ಜಾಗವನ್ನು ಆಯ್ಕೆಮಾಡುವುದು.
07:26 ಈ ಕೀಲಿಯ ಕೂಡಿಕೆಗಳನ್ನು ನೆನಪಿಟ್ಟುಕೊಂಡರೆ, ನೀವು ಜಾಗವನ್ನು ಶೀಘ್ರವಾಗಿ ಆಯ್ಕೆಮಾಡಬಹುದು.
07:33 ಇದೇ ಕೀಗಳು ಬೇರೆ ‘ಸೆಲೆಕ್ಶನ್’ ಟೂಲ್ ನಿಂದ ಉಪಯೋಗಿಸಲ್ಪಡುತ್ತವೆ.
07:38 ಹೀಗಾಗಿ, ನೀವು ಅವುಗಳನ್ನು ಕೇವಲ ಒಂದು ಸಲ ಮಾತ್ರ ಕಲಿಯಬೇಕಾಗುವುದು.
07:44 Shift, Ctrl, A, ಎಲ್ಲ ‘ಸೆಲೆಕ್ಶನ್’ಗಳನ್ನು ನಿಷ್ಕ್ರಿಯಗೊಳಿಸುವುದು ಹಾಗೂ ನನ್ನ ‘ನಾರ್ಮಲ್ ಮೋಡ್’ಗೆ ಮರಳಿ ತರುತ್ತದೆ. ಈಗ ನಾವು ಇಲ್ಲಿಯ ಬೇರೆ ವಿಷಯಗಳನ್ನು ಆರಂಭಿಸೋಣ.
07:56 Feather Edges (ಫೆದರ್ ಎಡ್ಜಸ್) ಎನ್ನುವುದು ಮುಂದಿನ ಆಯ್ಕೆಯಾಗಿದೆ. ನಾನು ಇದನ್ನು ಆಯ್ಕೆಮಾಡಿದಾಗ Radius Count (ರೇಡಿಯಸ್ ಕೌಂಟ್) ಎನ್ನುವ ಇನ್ನೊಂದು ಆಯ್ಕೆಯು ನಿಮಗೆ ಸಿಗುತ್ತದೆ.
08:09 ನಾನು ಇದನ್ನು ಸ್ವಲ್ಪ ಹೆಚ್ಚಿಸುತ್ತೇನೆ ಮತ್ತು ಒಂದು ಜಾಗವನ್ನು ಆಯ್ಕೆಮಾಡುತ್ತೇನೆ.
08:15 ಇಲ್ಲಿ ದುಂಡಾದ ಮೂಲೆಯಿರುವುದನ್ನು ಈಗ ನೀವು ನೋಡಬಹುದು.
08:21 ನನಗೆ ಇಲ್ಲಿ ದುಂಡಾದ ಮೂಲೆಗಳು ಬೇಕಾಗಿಲ್ಲ.
08:25 ಏನಾಗಿದೆ ಎಂದು ನಿಮಗೆ ತೋರಿಸಲು ನಾನು ಇದನ್ನು ಕಪ್ಪುಬಣ್ಣದಿಂದ ತುಂಬುತ್ತೇನೆ ಮತ್ತು ಇಮೇಜ್ನಲ್ಲಿ ‘ಝೂಮ್ ಇನ್’ ಮಾಡುತ್ತೇನೆ.
08:37 ಇಲ್ಲಿ ಮಧ್ಯದಲ್ಲಿ ಕಪ್ಪುಬಣ್ಣವಿದೆ, ಇದು ‘ಬಾರ್ಡರ್’ನ ಹತ್ತಿರ ಮಸುಕಾಗುತ್ತದೆ, ಈ ‘ಮಾರ್ಜಿನ್’ನ ಕೊನೆಗಳು ನಿಜವಾದ ಕಪ್ಪು ಹಾಗೂ ಮೂಲ ಇಮೇಜ್ ನ ಮಧ್ಯದಲ್ಲಿ ಹೋಗುತ್ತಿವೆ ಹಾಗೂ ಇಲ್ಲಿ ‘ಸೆಲೆಕ್ಶನ್’ನ ವ್ಯಾಲ್ಯೂ, 128 ಆಗಿದೆ ಎನ್ನುವುದನ್ನು ನೀವು ನೋಡಬಹುದು.
09:09 ಅರ್ಧ ಕಪ್ಪುಬಣ್ಣ ‘ಸೆಲೆಕ್ಶನ್’ನ ಒಳಗಡೆ ಮತ್ತು ಅರ್ಧ ಹೊರಗಡೆ, ಮಸುಕಾಗುತ್ತದೆ.
09:19 ನಿಮ್ಮ ಹತ್ತಿರ ‘ಹಾರ್ಡ್ ಸೆಲೆಕ್ಶನ್’ ಇರುವಾಗ, ‘ಮಾರ್ಜಿನ್’ನ ಕೊನೆಯು ಮಾತ್ರ ನಿಮ್ಮ ‘ಸೆಲೆಕ್ಶನ್’ನ ನಿಜವಾದ ಬಾರ್ಡರ್ ಆಗಿದೆ.
09:29 ‘ಫೆದರ್ ಎಡ್ಜಸ್’ ಎನ್ನುವುದು ನಯವಾದ ‘ಸೆಲೆಕ್ಶನ್’ಗಳನ್ನು ಪಡೆಯಲು ಒಂದು ಒಳ್ಳೆಯ ಆಯ್ಕೆಯಾಗಿದೆ.
09:35 ‘ಫೆದರ್ ಸೆಲೆಕ್ಶನ್’ ನೊಂದಿಗೆ ನೀವು ಕಡಿಮೆ ಶಾರ್ಪ್ ಇರುವ ದೃಶ್ಯವನ್ನು ಪಡೆಯಬಹುದು, ಹಾಗೆ ಇದು ಸುಲಭವಾಗಿದೆ.
09:45 ತಾಂತ್ರಿಕ ಮನೋಭಾವದ ಜನರು ‘ಫೆದರ್ ಸೆಲೆಕ್ಶನ್’ಅನ್ನು ‘ಗಾಸಿಯನ್ ಬ್ಲರ್’ ಎಂದು ಕರೆಯುತ್ತಾರೆ ಮತ್ತು ಇಲ್ಲಿ ನಾನು ಆಯ್ಕೆಮಾಡಿದ ರೇಡಿಯಸ್, ‘ಗಾಸಿಯನ್ ಬ್ಲರ್’ನ ರೇಡಿಯಸ್ ಆಗಿದೆ.
10:04 ಮುಂದಿನ ಆಯ್ಕೆ Rounded Corners (ರೌಂಡೆಡ್ ಕಾರ್ನರ್ಸ್) ಎನ್ನುವುದು ಆಗಿದೆ.
10:09 ಇದು ದುಂಡಾದ ಮೂಲೆಗಳನ್ನು ಹೊಂದಿರುವ ಆಯತವಾಗಿದೆ. ನೀವು ರೌಂಡೆಡ್ ಕಾರ್ನರ್ ಗಳ ‘ರೇಡಿಯಸ್’ಅನ್ನು ಸೆಟ್ ಮಾಡಬಹುದು.
10:20 ಇಲ್ಲಿರುವುದು ದುಂಡಾದ ಭಾಗ ಹಾಗೂ ಈ ಅಂಚುಗಳು ನೇರವಾದ ಭಾಗಗಳಾಗಿವೆ.
10:28 ಇಲ್ಲಿ, Antialiasing (ಆಂಟಿಅಲಿಯಾಸಿಂಗ್) ಎನ್ನುವುದು ಮುಂದಿನ ಆಯ್ಕೆಯಾಗಿದೆ.
10:34 ಈ ಆಯ್ಕೆಯು, ಮೂಲೆಯ ಪೇಂಟಿಂಗ್ ಅನ್ನು ಸೆಟ್ ಮಾಡುತ್ತದೆ.
10:40 ನಾನು ಈ ‘ಸೆಲೆಕ್ಶನ್’ಅನ್ನು ಕಪ್ಪುಬಣ್ಣದಿಂದ ತುಂಬುತ್ತೇನೆ, ಈಗ ನನ್ನ ‘ಸೆಲೆಕ್ಶನ್ ಟೂಲ್’ಗೆ ಹೋಗಿ Antialiasing ಎನ್ನುವುದನ್ನು ಡೀ-ಸೆಲೆಕ್ಟ್ ಮಾಡುತ್ತೇನೆ. ಇನ್ನೊಂದು ‘ಸೆಲೆಕ್ಶನ್’ಅನ್ನು ಮಾಡಿ ಇದನ್ನು ಸಹ ಕಪ್ಪುಬಣ್ಣದಿಂದ ತುಂಬುತ್ತೇನೆ.
11:09 Zoom ಟೂಲನ್ನು ಆಯ್ಕೆಮಾಡಿ, Shift + Ctrl + A ನೊಂದಿಗೆ ಎಲ್ಲ ‘ಸೆಲೆಕ್ಶನ್’ಗಳನ್ನು ಡೀ-ಸೆಲೆಕ್ಟ್ ಮಾಡಿರಿ. ಈ ಜಾಗದಲ್ಲಿ ‘ಝೂಮ್ ಇನ್’ ಮಾಡಿರಿ.
11:24 ಇಲ್ಲಿ ಅಂಚು ‘ಆಂಟಿಅಲಿಯಾಸಿಂಗ್’ಅನ್ನು ಹೊಂದಿಲ್ಲ ಮತ್ತು ಇದು ಕಪ್ಪುಬಣ್ಣದಿಂದ ತುಂಬಲ್ಪಟ್ಟಿದೆ ಅಥವಾ ತುಂಬಲ್ಪಟ್ಟಿಲ್ಲ.
11:37 ಇಲ್ಲಿ, ನೀವು ಬೂದುಬಣ್ಣದ ಮೆಟ್ಟಿಲುಗಳನ್ನು ನೋಡಬಹುದು.
11:42 ಇಲ್ಲಿ, ನೀವು ‘ಜಗ್ಗಿಸ್’ ಇಲ್ಲದ ನಯವಾದ ಮೂಲೆಯನ್ನು ನೋಡಬಹುದು. ಇದು ‘ಆಂಟಿಅಲಿಯಾಸಿಂಗ್’ ಎಂದು ಕರೆಯಲ್ಪಡುತ್ತದೆ.
11:53 ಈ ‘ಸೆಲೆಕ್ಶನ್’, ‘ರೌಂಡೆಡ್ ಕಾರ್ನರ್’ಅನ್ನು ಹೊಂದಿಲ್ಲ. ಆದರೆ ಇದು ಮೆಟ್ಟಿಲುಗಳ ಸಾಲು ಆಗಿದೆ.
12:04 ನಾನು ಮರಳಿ 100% ಝೂಮ್ ಗೆ ಹೋದಾಗ, ಇಲ್ಲಿ ‘ಜಗ್ಗಿಸ್’ ಗಳಿವೆ, ಇದು ನಯವಾಗಿಲ್ಲ ಆದರೆ ಇಲ್ಲಿ ನಯವಾದ ಮೂಲೆಗಳಿವೆ ಎನ್ನುವುದನ್ನು ನೋಡಬಹುದು. ನಿಮ್ಮಷ್ಟಕ್ಕೆ ನೀವೇ ಸುಲಭವಾಗಿ ಇದನ್ನು ಪ್ರಯತ್ನಿಸಬಹುದು.
12:32 ಆದ್ದರಿಂದ, ನಿಮಗೆ ನಯವಾದ ಮೂಲೆಗಳು ಬೇಕಾಗಿದ್ದರೆ ಆಗ Antialiasing (ಆಂಟಿಅಲಿಯಾಸಿಂಗ್) ಎನ್ನುವುದನ್ನು ಆಯ್ಕೆಮಾಡಿರಿ.
12:42 ನಿಮಗೆ ಇದರಲ್ಲಿ, ಈ ಬೂದುಬಣ್ಣದ ಛಾಯೆಗಳು ಬೇಕಾಗಿದ್ದರೆ, ಆಗ ಆ ಆಯ್ಕೆಯನ್ನು ಡೀ-ಸೆಲೆಕ್ಟ್ ಮಾಡಿರಿ.
12:55 ನಾನು ಆ ಆಯ್ಕೆಯನ್ನು ಆಯ್ಕೆಮಾಡುತ್ತೇನೆ. ಅಲ್ಲಿ Expand From Centre ಎನ್ನುವ ಉಪ-ಆಯ್ಕೆಯಿದೆ
13:04 ನಾನು ಅದನ್ನು ಆಯ್ಕೆಮಾಡಿ ಅದರೊಂದಿಗೆ ಕೆಲಸ ಮಾಡಲು ಆರಂಭಿಸುತ್ತೇನೆ.
13:13 ನಾನು ಇಲ್ಲಿ ಒಂದು ಪಾಯಿಂಟ್ ಅನ್ನು ಇಡುತ್ತೇನೆ ಹಾಗೂ ನನ್ನ ‘ಸೆಲೆಕ್ಶನ್’ಅನ್ನು ಇಲ್ಲಿಂದ ಎಳೆಯಲು ಆರಂಭಿಸುತ್ತೇನೆ.
13:21 ಅದು, ಆ ಪಾಯಿಂಟ್ ನಿಂದ ಬೆಳೆಯುವುದನ್ನು ನೀವು ನೋಡಬಹುದು ಹಾಗೂ ಈ ಪಾಯಿಂಟ್, ಯಾವಾಗಲೂ ‘ಸೆಲೆಕ್ಶನ್’ನ ಮಧ್ಯದಲ್ಲಿ ಇರುತ್ತದೆ.
13:31 ಆ ಆಯ್ಕೆಯನ್ನು ಡೀ-ಸೆಲೆಕ್ಟ್ ಮಾಡಿದಾಗ, ನಾನು ‘ಸೆಲೆಕ್ಶನ್’ಅನ್ನು ಇಲ್ಲಿಗೆ ಎಳೆಯಬಹುದು. ಮೂಲೆಯ ಸ್ಥಾನವು ನನ್ನ ‘ಸೆಲೆಕ್ಶನ್’ಗೆ ಅನುಸಾರವಾಗಿ ಬದಲಾಗುತ್ತದೆ.
13:46 ಇದಕ್ಕಾಗಿ ಇಲ್ಲಿ ಒಂದು ‘ಕೀ ಕೋಡ್’ ಇದೆ.
13:51 ಈ ಪಾಯಿಂಟ್ ನಲ್ಲಿ ನಾನು ಕ್ಲಿಕ್ ಮಾಡಿ, Ctrl ಅನ್ನು ಒತ್ತಿದಾಗ ನನಗೆ ಮಧ್ಯಭಾಗದಿಂದ ಒಂದು ‘ಸೆಲೆಕ್ಶನ್’ ಸಿಗುತ್ತದೆ.ಮತ್ತು ಈ ‘ಸೆಲೆಕ್ಶನ್’, ಕೇಂದ್ರದಿಂದ ವಿಸ್ತರಿಸುತ್ತದೆ.
14:06 ನಾನು Ctrl ಕೀಯನ್ನು ಬಿಟ್ಟಾಗ ‘ಸೆಲೆಕ್ಶನ್’ ಮಾಯವಾಗುತ್ತದೆ.
14:16 ನಾನು ಮೌಸ್ ಬಟನ್ ಒತ್ತುವ ಮೊದಲು Ctrl ಕೀಯನ್ನು ಒತ್ತಿದಾಗ, ‘ಸೆಲೆಕ್ಶನ್’ಅನ್ನು ‘ಸಬ್ಸ್ಟ್ರ್ಯಾಕ್ಟ್’ ಮಾಡಬಹುದು ಆದರೆ ನಾನು ಮೊದಲು ಮೌಸ್ ಕೀಯನ್ನು ಒತ್ತಿ ಆಮೇಲೆ Ctrl ಕೀಯನ್ನು ಒತ್ತಿದಾಗ, ನಾನು ‘ಸೆಲೆಕ್ಶನ್’ಅನ್ನು ಮಧ್ಯಭಾಗದಿಂದ ಪಡೆಯುತ್ತೇನೆ.
14:42 ಇಲ್ಲಿ ಮುಂದಿನ ಆಯ್ಕೆ, Fixed Aspect Ratio (ಫಿಕ್ಸ್ಡ್ ಆಸ್ಪೆಕ್ಟ್ ರೇಶಿಯೋ) ಎನ್ನುವುದಾಗಿದೆ. ನಾನು ಇಲ್ಲಿ ಪೂರ್ವ ನಿಯೋಜಿತ ಆಸ್ಪೆಕ್ಟ್ ರೇಶಿಯೋ, ‘1 by 1’ ಅನ್ನು ಪಡೆಯಬಹುದು ಮತ್ತು ನಾನು ಡ್ರಾ ಮಾಡಿದಾಗ ಅದು ಯಾವಾಗಲೂ ಚೌಕೋನವಾಗಿರುವದು.
15:08 ಇಲ್ಲಿ ನಾನು ‘2 by 3’ ಆಯ್ಕೆಮಾಡಬಹುದು ಮತ್ತು ನನಗೆ ‘ಸೆಲೆಕ್ಶನ್’, ಯಾವಾಗಲೂ ‘2 by 3’ ರೇಶಿಯೋನಲ್ಲಿ ಸಿಗುತ್ತದೆ. ಇದನ್ನು ‘3 by 2’ ಗೆ ಬದಲಾಯಿಸಿದಾಗ ‘ಸೆಲೆಕ್ಶನ್’ಅನ್ನು ‘ಲ್ಯಾಂಡ್‌ಸ್ಕೇಪ್’ ಮೋಡ್ ನಲ್ಲಿ ಕೊಡುತ್ತದೆ.
15:31 ಪರಿಪೂರ್ಣ ಚೌಕವನ್ನು ರಚಿಸಲು ಇನ್ನೊಂದು ವಿಧಾನವಿದೆ.
15:36 ನಾನು ‘ಸೆಲೆಕ್ಶನ್’ಅನ್ನು ಈ ಪಾಯಿಂಟ್ ನಲ್ಲಿ ಆರಂಭಿಸಿ, ಎಳೆದು ಆಮೇಲೆ Shift ಅನ್ನು ಒತ್ತುತ್ತೇನೆ.
15:46 ಇಲ್ಲಿ, ಮೊದಲೇ ನಿರ್ಧರಿತ ವ್ಯಾಲ್ಯೂನೊಂದಿಗೆ ಈಗ ‘ಫಿಕ್ಸ್ಡ್ ಆಸ್ಪೆಕ್ಟ್ ರೇಶಿಯೋ’ ಆಯ್ಕೆಯಾಗಿದೆ.
15:54 ಇದು ಶೀಘ್ರವಾದ ರೀತಿಯಾಗಿದೆ. ಹೀಗಾಗಿ, ನನಗೆ ಬೇಕಾದ ಆಸ್ಪೆಕ್ಟ್ ರೇಶಿಯೋನೊಂದಿಗೆ, ಕೇವಲ Shift ಅನ್ನು ಒತ್ತುವದರಿಂದ, ನಾನು ಜಾಗಗಳನ್ನು ಆಯ್ಕೆಮಾಡಬಹುದು
16:08 ಮುಂದಿನ ಆಯ್ಕೆ, Highlight (ಹೈಲೈಟ್) ಎನ್ನುವುದು ಆಗಿದೆ. ಅದನ್ನು ನಾನು ಬಳಸಿದಾಗ, ಆಯ್ಕೆಯಾಗಿರದ ಜಾಗವು ಬೂದುಬಣ್ಣವಾಗಿದ್ದು ಆಯ್ಕೆಯಾದ ಎಲ್ಲ ಜಾಗವು ಬಿಳಿಬಣ್ಣದ್ದಾಗಿದೆ.
16:24 ಇದು ಸಧ್ಯದ ‘ಸೆಲೆಕ್ಶನ್’ಗೆ ಮಾತ್ರ ಸಂಬಂಧಿಸಿದೆ. ಆದ್ದರಿಂದ ನಾವು ಇದನ್ನು ಡೀ-ಸೆಲೆಕ್ಟ್ ಮಾಡಿ ಉಳಿದ ಆಯ್ಕೆಗಳತ್ತ ನೋಡೋಣ.
16:35 ಇಲ್ಲಿ, ಈ ವ್ಯಾಲ್ಯೂಗಳನ್ನು ನೀವು ಕೈಇಂದ ಸೆಟ್ ಮಾಡಬಹುದು. ಇಲ್ಲಿ, Fix ಎನ್ನುವುದರ ಮೇಲೆ ಕ್ಲಿಕ್ ಮಾಡಿದರೆ ನಾನು ‘ಸೆಲೆಕ್ಶನ್’ನ ಸೈಜ್ ಅನ್ನು ಬದಲಾಯಿಸಲು ಸಾಧ್ಯವಿಲ್ಲ.
16:47 ಆದರೆ ನನಗೆ Width ಅನ್ನು ಎರಡು ಪಿಕ್ಸೆಲ್ ಕಡಿಮೆ ಹಾಗೂ Height ಅನ್ನು ಒಂದು ಪಿಕ್ಸೆಲ್ ಹೆಚ್ಚು ಮಾಡಿ ಸೆಟ್ ಮಾಡಿದ್ದು ಬೇಕಾಗಿದ್ದರೆ, ಅದು ‘ಸೆಲೆಕ್ಶನ್’ಅನ್ನು ಚೆನ್ನಾಗಿ ಟ್ಯೂನ್ ಮಾಡುತ್ತದೆ.
16:59 ‘ಓರಿಜಿನ್’ದ ಪಾಯಿಂಟ್ ಆಗಿರುವ ‘X’ ನ ವ್ಯಾಲ್ಯೂವನ್ನು ಹೆಚ್ಚಿಸುವದರಿಂದ ನಾನು ‘ಸೆಲೆಕ್ಶನ್’ಅನ್ನು ಸ್ವಲ್ಪ ಬಲಗಡೆಗೆ ಜರುಗಿಸಬಹುದು.
17:10 ನಾನು Fix ಎನ್ನುವುದರ ಮೇಲೆ ಕ್ಲಿಕ್ ಮಾಡಿದಾಗ ಇಡೀ ‘ಸೆಲೆಕ್ಶನ್’ಅನ್ನು ಕದಲಿಸಬಹುದು.
17:17 ‘X’ ಮತ್ತು ‘Y’ ವ್ಯಾಲ್ಯೂಗಳು, ಎಡಗಡೆಯ ಮೇಲಿನ ‘ಪಾಯಿಂಟ್’ನ, ‘ಓರಿಜಿನ್’ ಪಾಯಿಂಟ್ ಆಗಿದೆ. Fix ಬಟನ್ ನೊಂದಿಗೆ ನಾನು ಚಲನೆಯನ್ನು ತಡೆಹಿಡಿಯಬಹುದು.
17:30 ಮುಂದಿನ ಆಯ್ಕೆ, Guides ಎನ್ನುವುದಾಗಿದೆ.
17:34 ‘ಸೆಲೆಕ್ಶನ್’ನ ಮಧ್ಯಬಿಂದು ಎಲ್ಲಿದೆ ಎಂದು ತೋರಿಸುವ ಒಂದು Centre Line (ಸೆಂಟರ್ ಲೈನ್) ಅನ್ನು ನಾನು ಆಯ್ಕೆಮಾಡಬಹುದು.
17:44 ಗ್ರಾಫಿಕ್ ಕೆಲಸಕ್ಕಾಗಿ ಬಳಸುವ Rule Of Thirds (ರೂಲ್ ಆಫ್ ಥರ್ಡ್ಸ್) ಅಥವಾ ಅದರಂತೆಯೇ ಇರುವ Golden Sections (ಗೋಲ್ಡನ್ ಸೆಕ್ಶನ್ಸ್) ಎನ್ನುವುದನ್ನು ನಾನು ಪಡೆಯಬಹುದು.
18:00 ತಳಭಾಗದಲ್ಲಿ ಇರುವುದು Auto Shrink Selection (ಆಟೋ ಶ್ರಿಂಕ್ ಸೆಲೆಕ್ಶನ್) ಮತ್ತು Shrink Merged (ಶ್ರಿಂಕ್ ಮರ್ಜ್ಡ್) ಎನ್ನುವುದಾಗಿವೆ.
18:08 ‘ಆಟೋ ಶ್ರಿಂಕ್ ಸೆಲೆಕ್ಶನ್’ ಎನ್ನುವುದು ಬಹಳ ಉಪಯುಕ್ತವಾಗಿಲ್ಲ.
18:14 ಆದರೆ, ‘ಶ್ರಿಂಕ್ ಮರ್ಜ್ಡ್’ ಎನ್ನುವುದನ್ನು ಆಯ್ಕೆಮಾಡಿದರೆ, ಅಲ್ಗೊರಿದಮ್, ಎಲ್ಲ ಲೇಯರ್ ಗಳಲ್ಲಿ ನೋಡುತ್ತದೆ ಹಾಗೂ ಡೀ-ಸೆಲೆಕ್ಟ್ ಮಾಡಿದರೆ, ನೀವು ಕೆಲಸ ಮಾಡುತ್ತಿರುವ ಲೇಯರ್ ಮಾತ್ರ ಪರಿಗಣಿಸಲ್ಪಡುತ್ತದೆ.
18:34 ಈ ಆಯ್ಕೆಗಳ ಪುನರಾವಲೋಕನ ಮಾಡುವ ಮೊದಲು ನಾವು Ellipse Selection (ಎಲಿಪ್ಸ್ ಸೆಲೆಕ್ಶನ್) ಎನ್ನುವುದರ ಬಗೆಗೆ ಮಾತನಾಡೋಣ.
18:42 Shift+ctrl+A ಒತ್ತಿ ಎಲ್ಲ ‘ಸೆಲೆಕ್ಶನ್’ಗಳನ್ನು ಡೀ-ಸೆಲೆಕ್ಟ್ ಮಾಡಿ.
18:49 ಮೇಲ್ಗಡೆ, ನಿಮಗೆ Replace current selection (ರಿಪ್ಲೇಸ್ ಕರೆಂಟ್ ಸೆಲೆಕ್ಶನ್), Add to the selection with Shift key before clicking, Substract with Ctrl key before clicking, Intersect with Shift and Ctrl key before clicking ಗಳಂತಹ ಅದೇ ಆಯ್ಕೆಗಳು ಸಿಗುತ್ತವೆ.
19:12 ಮತ್ತೆ, ಆಂಟಿಅಲಿಯಾಸಿಂಗ್, ನಯವಾದ ಅಂಚುಗಳಿಗಾಗಿ ಇರುತ್ತದೆ.
19:17 ಆಯತಾಕಾರಕ್ಕಿಂತ ‘ಎಲಿಪ್ಸ್’ನೊಂದಿಗೆ ಇದು ಹೆಚ್ಚು ಮುಖ್ಯವಾಗಿದೆ ಏಕೆಂದರೆ ‘ಎಲಿಪ್ಸ್’ ಯಾವಾಗಲೂ ವೃತ್ತಾಕಾರವಾಗಿರುತ್ತವೆ.
19:26 ‘ಫೆದರ್ ಎಡ್ಜಸ್’, ಆಯತದಲ್ಲಿರುವ ಆಯ್ಕೆಗಳನ್ನೇ ಪಡೆದಿರುತ್ತದೆ.
19:32 ಇದನ್ನು ನಾನು ಕಪ್ಪು ಬಣ್ಣದಿಂದ ತುಂಬಿದಾಗ, ಕಪ್ಪು ಹಾಗೂ ಬಿಳಿಯ ನಡುವೆ ಸುಗಮವಾದ ‘ಗ್ರೇಡಿಯಂಟ್’ಅನ್ನು ನೀವು ನೋಡಬಹುದು. ಈ ಅಂಚಿನ ಕೊನೆಗಳು, ಕಪ್ಪು ಹಾಗೂ ಬಿಳಿಯ ನಡುವೆ ಇರುತ್ತವೆ.
19:54 ‘ಮೌಸ್ ಬಟನ್’ಅನ್ನು ಕ್ಲಿಕ್ ಮಾಡಿದ ಮೇಲೆ, Ctrl ಕೀಯೊಂದಿಗೆ, Expand from centre (ಎಕ್ಸ್ಪಾಂಡ್ ಫ್ರಾಮ್ ಸೆಂಟರ್), ಕೂಡ ಹೀಗೆಯೇ ಕೆಲಸ ಮಾಡುತ್ತದೆ.
20:05 Fixed aspect ratio (ಫಿಕ್ಸ್ದ್ ಆಸ್ಪೆಕ್ಟ್ ರೇಶಿಯೋ) ಸಹ ಹೀಗೆಯೇ ಇರುತ್ತದೆ. ಮೌಸ್ ‘ಬಟನ್’ಅನ್ನು ಕ್ಲಿಕ್ ಮಾಡಿದ ನಂತರ, ಆಸ್ಪೆಕ್ಟ್ ರೇಶಿಯೋ ‘1 by 1’ ಹೊಂದಿರುವ, ಪರಿಪೂರ್ಣ ವರ್ತುಲ ನಿಮಗೆ ಸಿಗುತ್ತದೆ.
20:19 ನಿಮಗೆ ಇವತ್ತು ತೋರಿಸಬೇಕಾದ ಕೊನೆಯ ‘ಟೂಲ್’ಗೆ ಈಗ ನಾವು ಬರೋಣ. ಅದು Free Select Tool (ಫ್ರೀ ಸೆಲೆಕ್ಟ್ ಟೂಲ್) ಎನ್ನುವುದಾಗಿದೆ.
20:29 ನಾನು ಆ ಟೂಲನ್ನು ಆಯ್ಕೆಮಾಡಿದಾಗ, ಅದೇ ಆಯ್ಕೆಗಳನ್ನು ಇಲ್ಲಿ ನೋಡುತ್ತೇನೆ. ಅಲ್ಲದೇ ‘ಆಡ್’, ರಿಪ್ಲೇಸ್, ಸಬ್ಸ್ಟ್ರ್ಯಾಕ್ಟ್ ಮತ್ತು ಇಂಟರ್ಸೆಕ್ಟ್ ಮಾಡುವದಕ್ಕಾಗಿ ಕೀಗಳು ಸಹ ಹಾಗೆಯೇ ಕೆಲಸ ಮಾಡುತ್ತವೆ.
20:44 ಅದೇ ‘ಫಂಕ್ಷನ್’ ಗಳೊಂದಿಗೆ, ‘ಆಂಟಿಅಲಿಯಾಸಿಂಗ್’ ಮತ್ತು ‘ಫೆದರ್ ಎಡ್ಜಸ್’ ಎನ್ನುವ ಇನ್ನೆರಡು ಆಯ್ಕೆಗಳನ್ನು ಮಾತ್ರ ಇದು ಹೊಂದಿದೆ.
20:54 ಇಲ್ಲಿ ನನಗೆ ವರ್ತುಲದ ‘ರೇಡಿಯಸ್’ ಸಿಗುತ್ತದೆ ಮತ್ತು ನಾನು ಅದನ್ನು ಡೀ-ಸೆಲೆಕ್ಟ್ ಮಾಡುತ್ತೇನೆ.
21:00 ಒಂದು ಉದಾಹರಣೆ ಎಂದು ನಿಮಗೆ ತೋರಿಸಲು, ನಾನು ಈ ಎಲೆಯ ಕೆಳಗಿನ ಭಾಗವನ್ನು ಆಯ್ಕೆಮಾಡುತ್ತೇನೆ.
21:08 ಇಮೇಜ್ನಲ್ಲಿ, ನನಗೆ ‘ಸೆಲೆಕ್ಶನ್’ಅನ್ನು ಆರಂಭಿಸಬೇಕಾಗಿರುವಲ್ಲಿ, ನಾನು ಕ್ಲಿಕ್ ಮಾಡುತ್ತೇನೆ.ಒಂದು ಗೆರೆಯನ್ನು ಎಳೆದು, ಎಲೆಯ ಅಂಚನ್ನು ಅನುಸರಿಸುತ್ತೇನೆ.
21:33 ಈಗ, ನಾನು ಈ ಜಾಗವನ್ನು ಆಯ್ಕೆಮಾಡಿದ್ದೇನೆ.
21:38 ಒಳ್ಳೆಯ ಟ್ಯೂನಿಂಗ್ ಮಾಡಲು ನಾನು ಇಮೇಜ್ನಲ್ಲಿ ‘ಝೂಮ್ ಇನ್’ ಮಾಡುತ್ತೇನೆ.
21:43 ನನ್ನ ‘ಸೆಲೆಕ್ಶನ್’ನ ಡೈಲಾಗ್ ನಲ್ಲಿ, ನಾನು, Add To The Current Selection ಎನ್ನುವುದನ್ನು ಆಯ್ಕೆ ಮಾಡಿ, ‘ಸೆಲೆಕ್ಶನ್’ಅನ್ನು ಸರಿಹೊಂದಿಸಲು ಆರಂಭಿಸುತ್ತೇನೆ.
22:10 ‘ಅಲ್ಗೊರಿದಮ್’, ನೀವು ‘ಸೆಲೆಕ್ಶನ್’ಅನ್ನು ಆರಂಭಿಸಿದ ‘ಪಾಯಿಂಟ್’ ಗೆ, ಅತೀ ಕಡಿಮೆ ಉದ್ದದ ಹಾದಿಯನ್ನು ಹುಡುಕುತ್ತದೆ.
22:19 ‘ಸೆಲೆಕ್ಶನ್’ಅನ್ನು ಸುಲಭಗೊಳಿಸಲು ನಾನು ‘ಕ್ವಿಕ್ ಮಾಸ್ಕ್‘ಅನ್ನು ಬಳಸಬಹುದು.
22:26 ತಳಭಾಗದ ಎಡಮೂಲೆಯಲ್ಲಿ, Toggle Quick Mask (ಟಾಗಲ್ ಕ್ವಿಕ್ ಮಾಸ್ಕ್) ಎನ್ನುವ ಆಯ್ಕೆಯಿದೆ. ನಾನು ಅದನ್ನು ಟಾಗಲ್ ಮಾಡಿದಾಗ ನನ್ನ ಪೂರ್ತಿ ಇಮೇಜ್, ಕೆಂಪಾಗಿರುವುದನ್ನು ನೀವು ನೋಡಬಹುದು.
22:38 ಇದು ಸ್ವಲ್ಪ ಗೊಂದಲಕ್ಕೀಡುಮಾಡುವ ಆಯ್ಕೆಯಾಗಿದೆ. ಏಕೆಂದರೆ, ನಾನು ಆಯ್ಕೆಮಾಡಿದ ಮತ್ತು ಆಯ್ಕೆಯಾಗಿರದ ಜಾಗಗಳು ಕೆಂಪು ಬಣ್ಣದಲ್ಲಿ ತೋರಿಸಲ್ಪಟ್ಟಿವೆ.
22:51 ಆದ್ದರಿಂದ ನಾನು Toggle ಗೆ ಹೋಗುತ್ತೇನೆ, ಅದರ ಮೇಲೆ ರೈಟ್ ಕ್ಲಿಕ್ ಮಾಡಿದಾಗ, ನನಗೆ Configure Colour and Opacity (ಕಾನ್ಫಿಗರ್ ಕಲರ್ ಆಂಡ್ ಓಪ್ಯಾಸಿಟೀ) ಎನ್ನುವುದು ಸಿಗುತ್ತದೆ. ಇಲ್ಲಿ ನಾನು ಬಣ್ಣವನ್ನು ಸೆಟ್ ಮಾಡಬಹುದು, ನಾನು ನೀಲಿಬಣ್ಣಕ್ಕೆ ಸೆಟ್ ಮಾಡುತ್ತೇನೆ.
23:07 ಈಗ, ಆಯ್ಕೆಯಾದ ಭಾಗವು ಕೆಂಪುಬಣ್ಣ ಹಾಗೂ ಉಳಿದೆಲ್ಲ ಜಾಗವು ನೀಲಿಬಣ್ಣದ್ದು ಆಗಿದೆ.
23:19 ಈಗ Pen ಅನ್ನು ಆಯ್ಕೆಮಾಡಿ, ನಾನು, ಆಯ್ಕೆಮಾಡಿದ ಜಾಗವನ್ನು ಪೇಂಟ್ ಮಾಡಲು ಆರಂಭಿಸುತ್ತೇನೆ. ಆದರೆ ಅದಕ್ಕೆ ಮೊದಲು ನಾನು, ಫೋರ್ಗ್ರೌಂಡ್ ಮತ್ತು ಬ್ಯಾಕ್‌ಗ್ರೌಂಡ್ ಗಳ ಬಣ್ಣವನ್ನು ’X’ ಕೀಯಿಂದ ಬದಲಾಯಿಸುತ್ತೇನೆ.
23:38 ಈಗ, ನಾನು ಪೇಂಟ್ ಮಾಡಲು ಆರಂಭಿಸುತ್ತೇನೆ.
23:48 ಬಾರ್ಡರನ್ನು ‘ಓವರ್ ಪೇಂಟ್’ ಮಾಡಿದಾಗ, ನಾನು ‘ಬ್ಯಾಕ್‌ಗ್ರೌಂಡ್ ಕಲರ್’ ನಿಂದ ಪೇಂಟ್ ಮಾಡಬಹುದು.
24:00 ಪೇಂಟಿಂಗ್ ಗಾಗಿ ನಾನು ಸರಿಯಾದ ‘ಸೈಜ್’ನ ಬ್ರಶ್ ಅನ್ನು ಆಯ್ಕೆಮಾಡಬೇಕು.
24:23 ನಾನು ಮಾಸ್ಕ್ ಅನ್ನು ‘ಅನ್-ಟಾಗಲ್’ ಮಾಡಿದಾಗ, ‘ಸೆಲೆಕ್ಶನ್’ನಲ್ಲಿ ಇಲ್ಲಿ ಮತ್ತು ಇಲ್ಲಿ ಸಹ ತಪ್ಪಿದೆ ಎಂದು ನೀವು ನೋಡಬಹುದು.
24:35 ನಾನು Toggle ಅನ್ನು ಆಯ್ಕೆಮಾಡಿ, ತಪ್ಪುಗಳನ್ನು ಸರಿಪಡಿಸುತ್ತೇನೆ.
24:44 ಸರಿಮಾಡಿದೆ.
24:50 ಜಟಿಲವಾದ ‘ಸೆಲೆಕ್ಶನ್’ಅನ್ನು ಸರಿಯಾಗಿ ಪಡೆಯಲು, ‘ಕ್ವಿಕ್ ಮಾಸ್ಕ್’ ಎನ್ನುವುದು ಸುಲಭವಾದ ವಿಧಾನವಾಗಿದೆ.
24:59 ‘ಕ್ವಿಕ್ ಮಾಸ್ಕ್ ಸೆಲೆಕ್ಶನ್’ಅನ್ನು ನೀವು ಒಂದು ಟೂಲ್ ನ ಹಾಗೆ ಬಳಸಬಹುದು.
25:05 ನೀವು ಮಾಸ್ಕ್ ನ ‘ಒಪ್ಯಾಸಿಟೀ’ಯನ್ನು ಬದಲಾಯಿಸಬಹುದು. ಆಯ್ಕೆಯಾಗಿರದ ಭಾಗಗಳು ನಿಮಗೆ ಈಗ ಅಷ್ಟೇನೂ ಕಾಣುವದಿಲ್ಲ.
25:19 ಬಹಳಷ್ಟು ಸಂದರ್ಭಗಳಲ್ಲಿ 50% ಓಪ್ಯಾಸಿಟೀ, ಸರಿಯಾದ ಪ್ರಮಾಣವಾಗಿದೆ.
25:28 ಆಯ್ಕೆಯಾಗಿರದ ಜಾಗಗಳಿಗಾಗಿ ನಿಮಗೆ ಇಷ್ಟವಾದ ಬಣ್ಣವನ್ನು ಆರಿಸಬಹುದು.
25:36 ಇಲ್ಲಿ Mask Selected Areas (ಮಾಸ್ಕ್ ಸೆಲೆಕ್ಟೆಡ್ ಏರಿಯಾಸ್) ಎನ್ನುವ ಇನ್ನೊಂದು ಆಯ್ಕೆಯಿದೆ.
25:43 ಇದು ‘ಕ್ವಿಕ್ ಮಾಸ್ಕ್’ನ ತದ್ವಿರುದ್ಧವಾದ ಪರಿಣಾಮವನ್ನು ಹೊಂದಿದೆ.
25:48 ಈಗ ಆಯ್ಕೆಮಾಡಿದ ಜಾಗವು ನೀಲಿ ಬಣ್ಣದಿಂದ ಪೇಂಟ್ ಆಗಿದೆ. ಇಲ್ಲಿ, ಈ ಸಂದರ್ಭದಲ್ಲಿ, ಇದು ಚೆನ್ನಾಗಿ ಕಾಣುತ್ತಿದೆ.
25:59 ನೀವು ‘ಕ್ವಿಕ್ ಮಾಸ್ಕ್’ಅನ್ನು ಡೀ-ಸೆಲೆಕ್ಟ್ ಮಾಡಿದಾಗ, ನಿಮ್ಮ ‘ಸೆಲೆಕ್ಶನ್’ಅನ್ನು ನೋಡಬಹುದು.
26:08 ಈಗ, ನಾನು ಇಲ್ಲಿ ಪರಿಪೂರ್ಣ ‘ಸೆಲೆಕ್ಶನ್’ಅನ್ನು ಮಾಡಿದ್ದೇನೆ, ಮುಂದಿನ ಸಲ ಕೆಲಸ ಮಾಡಲು ಅದನ್ನು ಉಳಿಸಬೇಕಾಗಿದೆ, ನನಗೆ ಅದನ್ನು ಕಳೆದುಕೊಳ್ಳಲು ಇಷ್ಟವಿಲ್ಲ, ಎಂದು ನಾವು ನಟಿಸೋಣ.
26:29 ಕ್ರಮವಾಗಿ Select ಮತ್ತು Save to Channel ಎನ್ನುವಲ್ಲಿಗೆ ಹೋಗಿ. ಏಕೆಂದರೆ ‘ಸೆಲೆಕ್ಶನ್’ಗಳು ಮೂಲತಃ ಚಾನೆಲ್ ಗಳಾಗಿವೆ.
26:45 ಇದನ್ನು ನಾನು Mask 1 (ಮಾಸ್ಕ್ ಒಂದು) ಎಂದು ಸೇವ್ ಮಾಡುತ್ತೇನೆ ಮತ್ತು ಇದನ್ನು ’XCF’ (ಎಕ್ಸ್ ಸಿ ಎಫ್) ಫೈಲ್ ನೊಂದಿಗೆ ಸಂಗ್ರಹಿಸಲಾಗುವದು.
26:55 ಈಗ Shift + Ctrl + A ಒತ್ತಿ, ನಾನು ಎಲ್ಲವನ್ನೂ ಡೀ-ಸೆಲೆಕ್ಟ್ ಮಾಡಬಹುದು.
27:02 ಇನ್ನೊಂದು ಭಾಗವನ್ನು ಆಯ್ಕೆಮಾಡಿ, ನನ್ನ ‘ಸೆಲೆಕ್ಶನ್’ಗೆ ಮರಳಿ ಹೋದಾಗ, ನಾನು ಇಲ್ಲಿ ‘ಸೆಲೆಕ್ಶನ್’ಗೆ ಸೇರಿಸಬಹುದು, ‘ಸೆಲೆಕ್ಶನ್’ನಿಂದ ತೆಗೆದುಹಾಕಬಹುದು ಅಥವಾ ‘ಸೆಲೆಕ್ಶನ್’ಅನ್ನು ಛೇದಿಸಬಹುದು. ನನ್ನ ‘ಸೆಲೆಕ್ಶನ್’,ಮತ್ತೆ ಇಲ್ಲಿಗೆ ಮರಳಿದೆ.
27:23 ಆದ್ದರಿಂದ, ನಿಮಗೆ ಅದನ್ನು ಸೇವ್ ಮಾಡುವದಿದ್ದರೆ, Select ಮತ್ತು Save to Channel ಎನ್ನುವಲ್ಲಿಗೆ ಹೋಗಿರಿ.

ಧನ್ಯವಾದಗಳು.

27:34 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಮತ್ತು ಪ್ರವಾಚಕ........

Contributors and Content Editors

NaveenBhat, Sandhya.np14