GIMP/C2/Comics/Kannada

From Script | Spoken-Tutorial
Revision as of 06:51, 26 December 2014 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:18 Meet The GIMP (ಮೀಟ್ ದ ಗಿಂಪ್) ನ ‘ಸ್ಪೋಕನ್ ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:21 ಇದನ್ನು ರೋಲ್ಫ್ ಸ್ಟೇನೋರ್ಟ್ ಅವರು, ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ.
00:27 ಯಾವಾಗಲೂ ಪ್ರಸ್ತಾಪಿಸಲು ಮರೆಯುವುದನ್ನು ನಾನು ಮೊದಲು ಮಾಡುವೆನು.
00:34 ‘ಇಮೇಜ್’ಗೆ ಏನನ್ನಾದರೂ ಮಾಡುವ ಮೊದಲು, ಅದನ್ನು ಸೇವ್ ಮಾಡಲು ನಾನು ಯಾವಾಗಲೂ ಮರೆಯುತ್ತೇನೆ.
00:45 ಆದ್ದರಿಂದ ನಾನು ಕ್ರಮವಾಗಿ File, Save as ಎನ್ನುವಲ್ಲಿಗೆ ಹೋಗಿ, ಇದನ್ನು
01:05 comic.xcf ಎಂದು ‘ಸೇವ್’ ಮಾಡುತ್ತೇನೆ.
01:12 ‘xcf’ ಎನ್ನುವುದು ‘ಗಿಂಪ್’ನ ನೇಟಿವ್ ಫೈಲ್ ಫಾರ್ಮ್ಯಾಟ್ ಆಗಿದೆ. ಅದು ‘ಲೇಯರ್ಸ್’ನ ಎಲ್ಲ ಮಾಹಿತಿಯನ್ನು ‘ಫೈಲ್’ನಲ್ಲಿ ಇಡುತ್ತದೆ.
01:22 ನಿಮಗೆ ಅದರೊಂದಿಗೆ ಇನ್ನೂ ಕೆಲಸ ಮಾಡುವುದಿದ್ದರೆ, ‘ಗಿಂಪ್’ನಲ್ಲಿ, ಯಾವಾಗಲೂ ಏನನ್ನೂ JPEG (ಜೇಪೆಗ್) ಅಥವಾ tif (ಟಿಫ್) ಇತ್ಯಾದಿಗಳ ಹಾಗೆ ‘ಸೇವ್’ ಮಾಡಬೇಡಿ.
01:30 ನಿಮಗೆ ಬೇಕಾದ ಪ್ರತಿಯೊಂದು ‘ಫಾರ್ಮ್ಯಾಟ್’ಗೆ ನೀವು ಅಲ್ಲಿಂದ ‘ಎಕ್ಸ್ಪೋರ್ಟ್’ ಮಾಡಬಹುದು. ಆದರೆ, ಮುಂದೆ ಅದರೊಂದಿಗೆ ಏನಾದರೂ ಕೆಲಸ ಮಾಡಬೇಕಾದಲ್ಲಿ XCF ಅನ್ನು ಬಳಸಿ.
01:45 ಹಾಗಾದರೆ ಏನು ಮಾಡುವುದು? ಮೊದಲನೆಯದಾಗಿ, ನಾನು ಈ ಇಮೇಜನ್ನು ಸ್ವಲ್ಪ ಸ್ಪಷ್ಟಗೊಳಿಸಬೇಕು.
01:59 ಇಲ್ಲಿ ಎರಡು ಸಮಸ್ಯೆಗಳಿವೆ. ಮೊದಲನೆಯದು, ನನ್ನ ಹಿಂದಿರುವ ವ್ಯಕ್ತಿ.
02:15 ಎರಡನೆಯದು ಇಲ್ಲಿ ಕೆಳಗಿರುವ ಗಲಿಬಿಲಿ.
02:21 ಇಲ್ಲಿ,ಈ ವಿಗ್ರಹವು ಸರಿಯಾದ ಸ್ಥಾನದಲ್ಲಿದೆ. ನನಗೆನಿಸುವಂತೆ ಇದು ‘ಇಮೇಜ್’ನ ಮೂಲೆಗಳಲ್ಲಿ ಒಂದಾಗಿದೆ.
02:31 ಆದ್ದರಿಂದ, ಮೊದಲು ಇದನ್ನು ಇಲ್ಲಿಂದ ಸರಿಸುತ್ತೇನೆ.
02:36 ಇಮೇಜ್ನಲ್ಲಿ ಝೂಮ್ ಮಾಡುತ್ತೇನೆ ಹಾಗೂ Pen Tool ಅನ್ನು ಆಯ್ಕೆಮಾಡುತ್ತೇನೆ.
02:50 Cloning Tool ನಿಂದ ಇದನ್ನು ಮಾಡಿದರೆ ಒಳ್ಳೆಯದು. ಇಲ್ಲಿ ನಾನು ಬಹಳ ನಿಖರವಾಗಿ ಕೆಲಸ ಮಾಡಬೇಕಾಗಿಲ್ಲ. ಏಕೆಂದರೆ ಈ ಚಿಕ್ಕ ಪುಟ್ಟ ವಿಷಯಗಳೆಲ್ಲ ಕಟ್ಟಕಡೆಯ ‘ಇಮೇಜ್’ನಿಂದ ಮಾಯವಾಗುವುದು.
03:05 ಆದ್ದರಿಂದ, ನಾನು Clone Tool ಅನ್ನು ಆಯ್ಕೆಮಾಡಿ, ‘ಪೆನ್’ನ ಸೈಜನ್ನು ಬದಲಾಯಿಸುತ್ತೇನೆ.
03:13 ಆರಂಭದ ಪಾಯಿಂಟನ್ನು ಪಡೆಯಲು ಈಗ ನಾನು Ctrl ಒತ್ತಿ ಕ್ಲಿಕ್ ಮಾಡುತ್ತೇನೆ. ಈಗ ಸುಮ್ಮನೆ ಪೇಂಟ್ ಮಾಡಲು ಆರಂಭಿಸುತ್ತೇನೆ.
03:24 ಆದರೆ ಅದನ್ನು ಆರಂಭಿಸುವ ಮೊದಲು ನಾನು Overlay Mode ಅನ್ನು Normal Mode ಗೆ, ಓಪ್ಯಾಸಿಟೀಯನ್ನು 100 (ನೂರು) ಕ್ಕೆ ಬದಲಾಯಿಸುತ್ತೇನೆ. ಈಗ ನಾವು ಪೇಂಟ್ ಮಾಡಲು ಆರಂಭಿಸೋಣ.
03:42 ಇಮೇಜ್, ಸ್ವಲ್ಪ ಮೋಡಕವಿದಂತಾಗುತ್ತದೆ. ಹೀಗಾಗಿ, ಪೇಂಟ್ ಮಾಡಲು ನಾನು ಬೇರೆ ‘ಬ್ರಶ್’ಅನ್ನು ಆಯ್ಕೆಮಾಡುತ್ತೇನೆ.
03:57 ಈಗ ನಾನು ಇಲ್ಲಿ, ಅಂಚಿಗೆ ಹೋಗಿ ಪೇಂಟ್ ಮಾಡುತ್ತೇನೆ.
04:37 ಹೀಗಾಗಿ ಈ ವ್ಯಕ್ತಿ ಹೋಗಿದ್ದಾನೆ.
04:41 ಅದು ಇಲ್ಲಿ ಗಲಿಬಿಲಿಯನ್ನುಂಟುಮಾಡುತ್ತದೆ.
04:44 ನನಗೆ ಈ ಹೂದಾನಿಯನ್ನು ಇಲ್ಲಿ ಇಡಬೇಕಾಗಿದೆ. ಆದರೆ ಇಲ್ಲಿಯ ಈ ವಸ್ತುಗಳು ಹೋಗಬೇಕು.
05:03 ಒಂದು ಕ್ಷಣದಲ್ಲಿ ನಾನು ಹೂದಾನಿಯ ಈ ಅಂಚಿನ ಕಾಳಜಿ ತೆಗೆದುಕೊಳ್ಳುತ್ತೇನೆ.
05:24 ನಾನು ಈ ಇಮೇಜನ್ನು ಈ ರೀತಿ ಇಟ್ಟರೆ, ನೀವು ‘ಕ್ಲೋನಿಂಗ್’ನ ಕುರುಹುಗಳನ್ನು ನೋಡುತ್ತೀರಿ. ಆದರೆ, ನಾನು ಕಾಮಿಕ್ ಮೋಡನ್ನು ‘ಸ್ವಿಚ್ ಆನ್’ ಮಾಡಿದಾಗ ಅವುಗಳು ಮಾಯವಾಗುತ್ತವೆ.
05:43 ಆದ್ದರಿಂದ ಇಲ್ಲಿ, ಈಗ ನಾವು ಈ ಹೂದಾನಿಯ ಬಗ್ಗೆ ಸ್ವಲ್ಪ ಕೆಲಸ ಮಾಡೋಣ.
06:06 ನಾನು ಈ ‘ಪಾಯಿಂಟ್’ನಿಂದ ಕ್ಲೋನ್ ಮಾಡಬೇಕು ಎಂದು ಯೋಚಿಸುತ್ತೇನೆ.
06:26 ಈ ‘ಝೂಮ್ ಸ್ಟೆಪ್’ ನಲ್ಲಿ ಇದು ಮನವರಿಕೆಯಾಗುವಂತೆ ಇಲ್ಲ, ಆದರೆ ಇದು ಕೆಲಸ ಮಾಡುತ್ತದೆ.
06:34 ಈ ಕಾಮಿಕ್ ಇಮೇಜ್, ಮೂಲತಃ ಮೂರು ಭಾಗಗಳನ್ನು ಒಳಗೊಂಡಿದೆ.
06:39 ಮೊದಲನೆಯದಾಗಿ, ಇಲ್ಲಿ ‘ಇಮೇಜ್’ಗೆ ವಿನ್ಯಾಸವನ್ನು ಕೊಡುವ, ಬಣ್ಣಗಳನ್ನು ಹೂಂದಿರದ ಕಪ್ಪು ಅಥವಾ ಗಾಢವಾದ ತೇಪೆಗಳಿರುತ್ತವೆ.
06:50 ನಂತರ, ಅಲ್ಲಿ ಇಮೇಜ್ನಲ್ಲಿಯ ರೂಪಗಳನ್ನು ಹಾಗೂ ವಸ್ತುಗಳನ್ನು ವ್ಯಾಖ್ಯಾನಿಸುವ ಗೆರೆಗಳಿವೆ.
06:57 ಆಮೇಲೆ ಅಲ್ಲಿ ಬಣ್ಣವಿದೆ. ನಾವು ‘ಟ್ಯುಟೋರಿಯಲ್’ನಲ್ಲಿ ಇರುವಂತೆ ‘ಪ್ಯಾಚಸ್’ಗಳೊಂದಿಗೆ ಆರಂಭಿಸುವೆವು.
07:04 ಮತ್ತು ಅದಕ್ಕಾಗಿ,
07:15 ನಾನು ಈ ಲೇಯರನ್ನು ಎರಡು ಸಲ ಮಾಡಿ ಅದನ್ನು ink ಎಂದು ಕರೆಯುತ್ತೇನೆ.
07:25 Threshold Tool (ಥ್ರೆಶೋಲ್ಡ್ ಟೂಲ್) ಅನ್ನು ಆಯ್ಕೆಮಾಡಿ, ಇಮೇಜ್ನಲ್ಲಿ ಕ್ಲಿಕ್ ಮಾಡುತ್ತೇನೆ. ‘ಇನ್ಫೋ ವಿಂಡೋ’ವನ್ನು ಇಮೇಜ್ನಲ್ಲಿ ಎಳೆಯುತ್ತೇನೆ.
07:37 ಇಲ್ಲಿ ಇಮೇಜ್, ಕಪ್ಪು ಮತ್ತು ಬಿಳಿ ಆಗಿರುವುದನ್ನು ನೀವು ನೋಡುತ್ತೀರಿ.
07:43 ಈ ಟೂಲ್. ಇಮೇಜನ್ನು ಕಪ್ಪು ಮತ್ತು ಬಿಳಿಗಳಲ್ಲಿ ವಿಭಾಗಿಸುತ್ತದೆ.
07:48 ಪಿಕ್ಸೆಲ್, ಈಗ 82 (ಎಂಭತ್ತೆರಡು) ಕ್ಕಿಂತ ತಿಳಿಬಣ್ಣದ್ದಾಗಿದ್ದರೆ, ಆಗ ರೆಡ್, ಗ್ರೀನ್ ಮತ್ತು ಬ್ಲೂ ಗಳ ಸರಾಸರಿ ವ್ಯಾಲ್ಯೂಗಳನ್ನು ಒಟ್ಟುಗೂಡಿಸಿದಾಗ ಅದು ಬಿಳಿಯಾಗಿರುತ್ತದೆ.
08:02 ಮತ್ತು ಲೆವೆಲ್ 82 (ಎಂಭತ್ತೆರಡು) ರ ಕೆಳಗೆ ಇದ್ದರೆ ಅದು ಕಪ್ಪಾಗುತ್ತದೆ.
08:14 ಈಗ ಇಲ್ಲಿ ಮೊದಲನೆಯ ಸಮಸ್ಯೆಯನ್ನು ಎದುರಿಸುತ್ತೇವೆ.
08:19 ನಾನು ಈ ಸ್ಲೈಡರನ್ನು ಅತ್ತಿತ್ತ ಎಳೆದಾಗ ಪರಿಣಾಮವು ಬಹಳ ಗಾಢವಾಗಿರುತ್ತದೆ.
08:26 ಇಲ್ಲಿ, ಈ ವ್ಯಾಲ್ಯೂ129 (ನೂರ ಇಪ್ಪತ್ತೊಂಭತ್ತು), ನನ್ನ ಮುಖದ ಎಡಭಾಗಕ್ಕೆ, ಭುಜಕ್ಕೆ ಹಾಗೂ ವಿಗ್ರಹಕ್ಕೆ ಸರಿಯಾಗಿದೆ.
08:40 ಇದು ಇಲ್ಲಿ, ಕಣ್ಣುಗಳಿಗಾಗಿ ಚೆನ್ನಾಗಿರುತ್ತದೆ.
08:48 ಹಾಗೂ ಇದು ಇನ್ನೊಂದು ಕಣ್ಣಿಗಾಗಿ.
08:53 ಈಗ ನಾನು ಈ ಇಮೇಜ್’ಗಾಗಿ ಬೇರೆ ‘ಇಂಕ್ ಲೇಯರ್’ಅನ್ನು ಉಪಯೋಗಿಸಬೇಕು.
09:01 ಆದ್ದರಿಂದ, ಇಲ್ಲಿ, ಇದರಂತಹ.ತಿಳಿಯಾದ ಭಾಗದಿಂದ ನಾವು ಆರಂಭಿಸೋಣ ಹಾಗೂ ಇಮೇಜ್ನಲ್ಲಿ 100% (ನೂರು ಪ್ರತಿಶತ) ಕ್ಕೆ ಮರಳಿ ಹೋಗೋಣ.
09:14 ಇಲ್ಲಿ ಇದನ್ನು ಎರಡು ಸಲ ಮಾಡುತ್ತೇನೆ. Threshold Tool (ಥ್ರೆಶೋಲ್ಡ್ ಟೂಲ್) ಅನ್ನು ಆಯ್ಕೆಮಾಡುತ್ತೇನೆ ಹಾಗೂ ಈ ಸ್ಲೈಡರನ್ನು ಕೆಳಗೆ ಎಳೆಯುತ್ತೇನೆ.
09:29 ಆದರೆ ಅದಕ್ಕೂ ಮೊದಲು ನಾನು ಮೇಲಿನ ಲೇಯರನ್ನು ಅದೃಶ್ಯಗೊಳಿಸಬೇಕು.
09:46 ಮುಖದ ಈ ಭಾಗಕ್ಕಾಗಿ ಈ ವ್ಯಾಲ್ಯೂ ಉತ್ತಮವಾಗಿದೆ ಎಂದು ಭಾವಿಸುತ್ತೇನೆ.
09:56 ಈ ‘ಲೇಯರ್’ನ ಒಂದು ‘ಕಾಪಿ’ಯನ್ನು ಮಾಡಿ, ಅದನ್ನು ಕಾಣಿಸುವಂತೆ ಮಾಡಿ ಈಗ ಅದರ ಮೇಲೆ ಕೆಲಸವನ್ನು ಮಾಡುತ್ತಿದ್ದೇನೆ.
10:08 ನಾನು ಇಲ್ಲಿ ಮಧ್ಯದಲ್ಲಿಯ ಟರ್ಮ್ಸ್ ಗಳಿಗಾಗಿ ನೋಡಬೇಕು.
10:13 ಮುಖದ ಈ ಭಾಗ, ನನಗೆನಿಸುವಂತೆ ಚೆನ್ನಾಗಿ ಕೆಲಸ ಮಾಡುತ್ತದೆ. ಹೀಗಾಗಿ ನಾನು ಇಮೇಜ್ನಲ್ಲಿ ಸುತ್ತಲೂ ನೋಡುತ್ತೇನೆ.
10:23 ಈ ವಿಗ್ರಹ ಕೂಡ ಚೆನ್ನಾಗಿದೆ.
10:26 ಇಲ್ಲಿ ಈ ಇಮೇಜ್’ನ ಲಕ್ಷಣ ಉತ್ತಮವಾಗಿದೆ. ನನ್ನ ಕೈ ಹತ್ತಿರ, ಗೆರೆಯು ಅದೃಶ್ಯವಾಗಿದೆ. ಇದನ್ನು ‘ಆಪ್ಟಿಕಲ್ ಇಲ್ಲೂಷನ್’ ಎಂದು ಕರೆಯುತ್ತಾರೆ.
10:41 ನನಗೆನಿಸುವಂತೆ ಇದು ಚೆನ್ನಾಗಿದೆ ಹಾಗೂ ಇದು ಇಮೇಜ್ನಲ್ಲಿ ಇರಬೇಕು.
10:49 ಈಗ ನಾನು Threshold Tool (ಥ್ರೆಶೋಲ್ಡ್ ಟೂಲ್) ಅನ್ನು ಆಯ್ಕೆಮಾಡಿ ಇಲ್ಲಿಯ ಗೆರೆಯನ್ನು ಕಾಣುವಂತೆ ಮಾಡುತ್ತೇನೆ. ಸ್ವಲ್ಪ ಲಕ್ಷಣಗಳನ್ನು ಪಡೆಯಲು ಹೊಳೆಯುವ ಭಾಗಗಳತ್ತ ನೋಡುತ್ತೇನೆ. ಆದ್ದರಿಂದ ಇದನ್ನು ಮೇಲಕ್ಕೆ ಜರುಗಿಸುತ್ತೇನೆ.
11:08 ಇದು ಉತ್ತಮವಾಗಿ ಕಾಣುತ್ತದೆ.
11:12 ಈಗ ನನ್ನ ಹತ್ತಿರ ink ‘ಲೇಯರ್’ನ ಮೂರು ‘ಕಾಪಿ’ಗಳಿವೆ.
11:17 ಮೊದಲನೆಯದು ink light (ಇಂಕ್ ಲೈಟ್) ಎಂದು ಆಗಿದೆ.
11:28 ಮೇಲಿನ ಲೇಯರ್, ink dark (ಇಂಕ್ ಡಾರ್ಕ್) ಆಗಿದೆ.
11:34 ಮಧ್ಯದ ಲೇಯರನ್ನು ink ಎಂದು ಹೆಸರಿಸೋಣ.
11:40 ಈಗ ಮೂರು ‘ಲೇಯರ್’ಗಳತ್ತ ನೋಡೋಣ ಹಾಗೂ ಯಾವುದನ್ನು ಹೆಚ್ಚು ಬಳಸುವುದೆಂದು ನಿರ್ಧರಿಸೋಣ.
11:49 ‘ಇಂಕ್ ಲೇಯರ್’ ಉತ್ತಮವಾದ ಆಧಾರವಾಗಿದೆ ಏಕೆಂದರೆ ಇದು ತುಂಬಾ ತಿಳಿಯಾಗಿದೆ ಮತ್ತು ಇದು ತುಂಬಾ ಗಾಢವಾಗಿದೆ.
12:01 ಆದ್ದರಿಂದ ನಾನು ಈ ಲೇಯರನ್ನು ಕೆಳಭಾಗದಲ್ಲಿ ಇಡುತ್ತೇನೆ. ‘ಡಾರ್ಕ್ ಲೇಯರ್’ ಮತ್ತು ‘ಲೈಟ್ ಲೇಯರ್’ಗಳಿಗೆ ಲೇಯರ್ ಮಾಸ್ಕನ್ನು ಸೇರಿಸುತ್ತೇನೆ.
12:12 ನಾನು Layer Mask / Black (full transparency) ಯನ್ನು ಸೇರಿಸುತ್ತೇನೆ.
12:18 ಹೀಗಾಗಿ, ಇಲ್ಲಿರುವ ಎಲ್ಲವೂ ಅದೃಶ್ಯವಾಗುತ್ತದೆ.
12:26 light ‘ಲೇಯರ್’ನ ಲೇಯರ್ ಮಾಸ್ಕ್’ನ ಮೇಲೆ ನಾನು white ಅನ್ನು ಎಳೆದಾಗ, ಇಮೇಜ್, ಅದರಲ್ಲಿ ಪ್ರಕಟವಾಗುವುದು.
12:45 ಆದ್ದರಿಂದ , ಇಲ್ಲಿ ನಾನು Normal Mode ಮತ್ತು ಓಪ್ಯಾಸಿಟೀ 100% (ನೂರು ಪ್ರತಿಶತ) ದೊಂದಿಗೆ Brush Tool ಅನ್ನು ಆಯ್ಕೆಮಾಡುತ್ತೇನೆ.
12:55 ನಾನು ಗಡುಸಾದ ‘ಬ್ರಶ್’ಅನ್ನು ಬಳಸುವೆನು. ‘ಪ್ರೆಷರ್ ಸೆನ್ಸಿಟಿವಿಟೀ’, Size ಆಗಬೇಕು. ಹೀಗಾಗಿ, ನಾನು ಮೇಲ್ಮೈ ಮೇಲೆ ‘ಪೆನ್’ಅನ್ನು ಒತ್ತಿದಾಗ, ಚುಕ್ಕೆಯು ದೊಡ್ಡದಾಗುತ್ತದೆ.
13:20 ನನ್ನ ‘ಫೋರ್‌ಗ್ರೌಂಡ್’ನ ಬಣ್ಣವು ಬಿಳಿಯಾಗಿದೆ.
13:24 ನಾವು ಆರಂಭಿಸೋಣ.
13:28 ಮುಖದ ಎಡಭಾಗವನ್ನು ಹೊಳೆಯುವಂತೆ ಮಾಡಬೇಕು.
13:34 ಇಮೇಜ್ನಲ್ಲಿ ಝೂಮ್ ಮಾಡಲು ನಾನು 1 (ಒಂದು) ಅನ್ನು ಒತ್ತುತ್ತೇನೆ.
13:39 ಈ ಬ್ರಶ್, ತುಂಬಾ ಚಿಕ್ಕದು, ಆದ್ದರಿಂದ ಇದನ್ನು ಸ್ವಲ್ಪ ದೊಡ್ಡದು ಮಾಡುತ್ತೇನೆ.
13:53 ಅದು ಚೆನ್ನಾಗಿ ಕಾಣುತ್ತದೆ.
14:00 ಆದರೆ, ಬಹುಶಃ ಅದು ತುಂಬಾ ಹೊಳಪಾಗಿದೆ.
14:05 ಇದು ಕಪ್ಪು ಅಥವಾ ಬಿಳಿ ಬಣ್ಣದ್ದಾಗಿರಬೇಕು.
14:47 ’X’ ಕೀಯಿಂದ ಬಣ್ಣಗಳನ್ನು ಬದಲಾಯಿಸುತ್ತೇನೆ ಹಾಗೂ ಇಲ್ಲಿ ಮತ್ತೊಮ್ಮೆ ಪೇಂಟ್ ಮಾಡುತ್ತೇನೆ.
14:57 ಆದರೆ ನಾನು ಇದನ್ನು ಇಲ್ಲಿಯೇ ಬಿಟ್ಟು ಅದರ ಮೇಲೆ ಮುಂದಿನ ಲೇಯರನ್ನು ಇಡಬಹುದು.
15:14 ಈಗ ನಮಗೆ ಜಾಗ ಹಾಗೂ ರಚನೆಗಳ ಬಗ್ಗೆ ಹೆಚ್ಚು ಕಾಳಜಿಯಾಗಿದೆ. ಆದ್ದರಿಂದ ನಾನು ಈ ಗೆರೆಗಳನ್ನು ಮರೆತು ಇಲ್ಲಿ ಕೇವಲ ಈ ರಚನೆಯನ್ನು ನೋಡಬೇಕು.
15:30 ಸುಮ್ಮನೆ ಅದನ್ನು ಇದ್ದ ಹಾಗೆಯೇ ಬಿಟ್ಟುಬಿಡಿ.
15:34 ನಾನು ಸುಲಭವಾಗಿ ಇನ್ನೊಂದು ಲೇಯರನ್ನು ಸೇರಿಸಬಹುದು. ಈಗ ಗಾಢವಾದ ಭಾಗಗಳನ್ನು ಬಿಳಿಬಣ್ಣದಿಂದ ಪೇಂಟ್ ಮಾಡುತ್ತೇನೆ.
15:44 ನಾನು ಇಲ್ಲಿ ಸ್ವಲ್ಪ ತೋರಿಸಬಹುದೇನೋ ಎಂದು ನೋಡೋಣ.
15:51 ಇದು ಬಹಳ ಹೆಚ್ಚಾಯಿತು ಎಂದೆನಿಸುತ್ತದೆ.
15:56 ನನಗೆ ಮುಖವನ್ನು ಸ್ವಲ್ಪ ಗಾಢಗೊಳಿಸಬೇಕಾಗಿದೆ.
16:08 ಮತ್ತು ಇಲ್ಲಿಯೂ ಸಹ.
16:19 ನನಗೆನಿಸುವಂತೆ ಅದು ತುಂಬಾ ಗಾಢವಾಗಿದೆ.
16:31 ಇಲ್ಲಿ ಇನ್ನೂ ಮಾಡಬೇಕಾದ ಸ್ವಲ್ಪ ಕೆಲಸವಿದೆ. ಆದರೆ ಇದನ್ನು ಇಲ್ಲಿಗೇ ಬಿಡುತ್ತೇನೆ. ಗೆರೆಗಳೊಂದಿಗೆ ಮುಂದಿನ ಸ್ಟೆಪ್ ಮಾಡಿದ ಮೇಲೆ ಇದನ್ನು ನೋಡುತ್ತೇನೆ. ಆವಾಗ ನಾನು ಇಲ್ಲಿ ಹೊಂದಿಸಬಹುದು.
16:46 ಇದನ್ನು ಹೊಳಪಾಗಿಸಬೇಕು.
16:49 ಆದ್ದರಿಂದ ನಾವು ಅಲ್ಲಿ ‘ಎಡಿಟ್’ನೆಡೆಗೆ ನೋಡೋಣ.
16:53 ಈ ‘ಸ್ಟೆಪ್’ನಲ್ಲಿ ನಾನು ಕೆಲವು ಗೆರೆಗಳನ್ನು ಸೇರಿಸಬೇಕು. Background ಲೇಯರನ್ನು ಎರಡುಸಲ ಮಾಡಿ, ಅದನ್ನು ಎಲ್ಲಕ್ಕಿಂತ ಮೇಲೆ ಇಟ್ಟು, lines ಎಂದು ಹೆಸರಿಸುವದರಿಂದ ಇದನ್ನು ಮಾಡಬಹುದು.
17:08 ಈ ಗೆರೆಗಳು ವಿವಿಧ ಬಣ್ಣಗಳ ನಡುವಿನ ಅಂಚುಗಳಾಗಿವೆ.
17:15 ನಾನು Filters ಗೆ ಹೋಗುತ್ತೇನೆ, ಆಮೇಲೆ Edge-Detect ಗೆ. ಇಲ್ಲಿ Difference of Gaussians Edge-Detect ಇದೆ.
17:33 Radius, ಸಂಬಂಧಿತ ಸ್ಲೈಡರ್ ಆಗಿದೆ. ನೀವು ಸಂಖ್ಯೆಯನ್ನು ಕಡಿಮೆ ಮಾಡಿದರೆ ಗೆರೆಗಳು ತೆಳುವಾಗುತ್ತವೆ.
17:45 ನೀವು ಸಂಖ್ಯೆಯನ್ನು ಹೆಚ್ಚು ಮಾಡಿದರೆ ಗೆರೆಗಳು ಅಗಲವಾಗುತ್ತವೆ ಹಾಗೂ ನಿಮಗೆ ಇಮೇಜ್ನಲ್ಲಿ ಹೆಚ್ಚು ವಿವರಗಳು ಸಿಗುತ್ತವೆ.
17:56 ನಾನು ಸುಮಾರು 10 ಕ್ಕೆ ಆದ್ಯತೆ ನೀಡುತ್ತೇನೆ. ಆದರೆ ನಾನು 30 ಕ್ಕೆ ಹೋಗಿ ಆಮೇಲೆ ನಾನು ಎಲ್ಲಿ ನಿಲ್ಲಿಸಬೇಕು ಎಂದು ನಿರ್ಧರಿಸಬಹುದು.
18:10 ನಾನು 30 ಕ್ಕೆ ಹೋದಾಗ ನನಗೆ ಅಂಚುಗಳು ಸಿಗುವದಿಲ್ಲ. ಆದರೆ ಜಾಗಗಳು ಸಿಗುತ್ತವೆ. ಮತ್ತು 12 ಇದನ್ನು ಇಲ್ಲಿ ಕೊಡುತ್ತದೆ.
18:27 ನನಗೆನಿಸುವಂತೆ ನಾನು 10 ಕ್ಕೆ ನಿಲ್ಲುತ್ತೇನೆ.
18:37 ಈ ಲೇಯರ್’ನ Layer Mode ಅನ್ನು, Multiply ಎನ್ನುವುದಕ್ಕೆ ಸೆಟ್ ಮಾಡುತ್ತೇನೆ. ಹೆಚ್ಚಾಗುತ್ತಿರುವ ಬಣ್ಣಕ್ಕಾಗಿ ಇಮೇಜ್ನಲ್ಲಿಯ ಬಿಳಿ ಬಣ್ಣವನ್ನು ಆಮೇಲೆ ನಾನು ಕಡಿಮೆಮಾಡಬೇಕಾಗುವುದು.
18:50 ಈಗ, ಇಲ್ಲಿಯವರೆಗೆ ನಮಗೆ ಇದು ಸರಿಯಾಗಿ ಸಿಕ್ಕಿದೆಯೇ ಎಂದು ನಾವು ಪರಿಶೀಲಿಸೋಣ.
18:56 ಆದ್ದರಿಂದ ನಾನು lines ಲೇಯರನ್ನು ‘ಆನ್-ಆಫ್’ ಮಾಡುತ್ತೇನೆ. lines ಲೇಯರ್ ‘ಆನ್’ ಆಗಿರುವಾಗ ಇಲ್ಲಿ ಕೆಲವು ಲಕ್ಷಣಗಳಿರುವುದನ್ನು ನೀವು ನೋಡುತ್ತೀರಿ.
19:08 ಈಗ ನಾನು dark ink ‘ಲೇಯರ್’ಅನ್ನು ಡೀ-ಸೆಲೆಕ್ಟ್ ಮಾಡಿ, light ink ಲೇಯರನ್ನು ಇಡುತ್ತೇನೆ.
19:20 dark ink ‘ಲೇಯರ್’ನಲ್ಲಿ ನನಗೆ ಬೇಕಾದ ರಚನೆಯು lines ‘ಲೇಯರ್’ನಲ್ಲಿ ಕಾಣುತ್ತದೆ.
19:30 ಆದ್ದರಿಂದ, dark ink ಲೇಯರನ್ನು ಸ್ವಿಚ್-ಆಫ್ ಮಾಡಿ ಇಡುವೆನು.
19:42 ಇಲ್ಲಿ ಈ ‘ಲೇಯರ್’ಗಳನ್ನು ಸೇರಿಸುವುದು ಅಗತ್ಯವಿದೆ ಎಂದು ನನಗೆನಿಸುವುದಿಲ್ಲ.
19:50 ಅದನ್ನು ಇದ್ದ ಹಾಗೇ ಇಡುತ್ತೇನೆ, ಹಾಗಾಗಿ ನಾನು ಏನಾದರೂ ಬದಲಾಯಿಸಬಹುದು ಮತ್ತು ಅದು ಕಟ್ಟಕಡೆಯ ಇಮೇಜ್ನಲ್ಲಿ ಇರುವುದು.
20:09 ನಾನು ಹೇಳಿದಂತೆ ಮುಂದಿನ ಸ್ಟೆಪ್, ಇಲ್ಲಿ white ‘ಚಾನೆಲ್’ಅನ್ನು ಕಡಿಮೆ ಮಾಡುವುದು ಆಗಿದೆ. ಇದನ್ನು ‘ಲೆವೆಲ್ಸ್ ಟೂಲ್’ನಿಂದ ಮಾಡಬಹುದು. ನಾನು ‘ಲೆವೆಲ್’ಅನ್ನು 240 ವರೆಗೆ ಇಳಿಸುತ್ತೆನೆ.
20:28 ನಾನು ಈ ಲೇಯರನ್ನು ಸ್ವಿಚ್-ಆಫ್ ಮಾಡಿದಾಗ, ನನಗೆ ಬೂದುಬಣ್ಣದ ಬ್ಯಾಕ್‌ಗ್ರೌಂಡ್ ಮತ್ತು ಇದರಲ್ಲಿ ಸ್ವಲ್ಪ ಬಣ್ಣಗಳ ಮಾಹಿತಿಯು ಸಿಕ್ಕಿದೆ ಎಂದು ನೀವು ನೋಡಬಹುದು.
20:40 ಇಮೇಜ್ನಲ್ಲಿ ಬಣ್ಣವನ್ನು ಪಡೆಯಲು, ನಾನು Background ಲೇಯರನ್ನು ‘ಕಾಪಿ’ ಮಾಡಿ, ಅದನ್ನು colour ಎಂದು ಹೆಸರಿಸಿ, ಎಲ್ಲಕ್ಕಿಂತ ಮೇಲೆ ಇಡುತ್ತೇನೆ ಹಾಗೂ Layer Mode ಅನ್ನು Colour ಗೆ ಸೆಟ್ ಮಾಡುತ್ತೆನೆ.
21:00 ಆದರೆ ಇದು ಚೆನ್ನಾಗಿ ಕಾಣಿಸುವದಿಲ್ಲ. ಹೀಗಾಗಿ ನಾನು ‘ಮೋಡ್’ಅನ್ನು ಬದಲಾಯಿಸಬೇಕು.
21:07 ಇಮೇಜ್, ಇಲ್ಲಿ ಸ್ವಲ್ಪ ಬಣ್ಣವನ್ನು ಹೊಂದಿದೆ.
21:12 ಆದರೆ ನನಗೆ ಹೆಚ್ಚು ‘ಸ್ಯಾಚುರೇಶನ್’ ಬೇಕಾಗಿದೆ. ಹೀಗಾಗಿ ಮತ್ತೊಮ್ಮೆ Background ಲೇಯರ್’ನ ‘ಕಾಪಿ’ ಮಾಡಿ ಅದನ್ನು saturation ಎಂದು ಹೆಸರಿಸುತ್ತೇನೆ.
21:24 Layer Mode ಅನ್ನು Saturation ಗೆ ಸೆಟ್ ಮಾಡುತ್ತೇನೆ.
21:29 ಈ ‘ಸ್ಯಾಚುರೇಶನ್ ಮೋಡ್’ ಈಗಾಗಲೇ ಕೆಲಸ ಮಾಡುತ್ತಿದೆ ಹಾಗೂ ಪರಿಣಾಮಗಳು ಬಹಳ ಉತ್ತಮವಾಗಿವೆ.
21:38 ಬಣ್ಣಗಳು ಹೆಚ್ಚು ನೀರಸವಾಗಿರಬೇಕಿತ್ತು ಮತ್ತು ಕೈ ‘ಕಾಮಿಕ್’ಆಗಿ ಕಾಣುತ್ತಿಲ್ಲ.
21:47 ಇದು ಎಲ್ಲಿಂದ ಬರುತ್ತದೆ ಎಂದು ನಾನು ನೋಡುವೆನು.
21:51 ಈಗ ನಾನು ಈ ಸ್ಲೈಡರ್’ಗಳನ್ನು ಬಳಸಿ ನೋಡಬಹುದು.
21:58 ‘ಸ್ಯಾಚುರೇಶನ್’ ಅನ್ನು ಕಡಿಮೆ ಮಾಡಿದಾಗ, ಸ್ವಲ್ಪ ನೀರಸವಾಗುತ್ತದೆ ಮತ್ತು ‘ವಾಟರ್ ಕಲರ್’ನಂತೆ ಕಾಣುತ್ತದೆ. ಹೀಗಾಗಿ ಇದು ವಿಚಿತ್ರವಾದ ಪರಿಣಾಮವಾಗಿದೆ.
22:19 ನಾನು ಈಗ ಇಲ್ಲಿಯ ಲೇಯರ್’ಗಳೊಂದಿಗೆ ಕೆಲಸಮಾಡಲು ಆರಂಭಿಸಬಹುದು.
22:26 lines ಲೇಯರನ್ನು ನಾನು ಸ್ವಿಚ್-ಆಫ್ ಮಾಡುತ್ತೇನೆ. ಇಲ್ಲಿ, ಇದು lines ನಿಂದಾದ ಪರಿಣಾಮವಲ್ಲ ಆದರೆ colours ಮತ್ತು saturation ಗಳಿಂದಾದದ್ದು ಎಂದು ನೀವು ನೋಡುತ್ತೀರಿ.
22:39 ಈಗ, ಇಲ್ಲಿ ಇನ್ನೂ ಲೇಯರ್’ಗಳಿರುವುದರಿಂದ ನಾನು ಕೆಲವು ಹೊಂದಾಣಿಕೆಗಳನ್ನು ಮಾಡಬಹುದು.
22:47 ನನಗೆ ಮುಖವನ್ನು ಬೆಳಗಿಸಬೇಕಾಗಿದೆ. ಆದ್ದರಿಂದ ನಾನು ink light ಲೇಯರನ್ನು ಮತ್ತು white foreground colour ಅನ್ನು ಹೊಂದಿರುವ ಬ್ರಶ್’ಅನ್ನು ಆಯ್ಕೆಮಾಡುತ್ತೇನೆ.
23:12 ಇಮೇಜ್ನಲ್ಲಿ ನಾನು ಝೂಮ್ ಮಾಡುತ್ತೇನೆ.
23:18 ‘ಬ್ರಶ್’ನ ಸೈಜನ್ನು ಕಡಿಮೆ ಮಾಡಿ, ಅದನ್ನು ಸ್ವಲ್ಪ ಸ್ಕೇಲ್ ಮಾಡಿ, ಈಗ ನಾನು ಇಲ್ಲಿ ಕಣ್ಣನ್ನು ಪೇಂಟ್ ಮಾಡಲು ಆರಂಭಿಸುತ್ತೇನೆ.
23:34 ಅದು ಅತಿ ಹೆಚ್ಚಾಗಿದೆ.
23:50 ಇದು ಉತ್ತಮವಾಗಿ ಕಾಣುತ್ತದೆ.
23:54 ಈಗ ನಾನು ಈ ಭಾಗದಲ್ಲಿ ಪೇಂಟ್ ಮಾಡುತ್ತೇನೆ.
24:00 ಇದು ಬಹಳ ಹೆಚ್ಚಾಯಿತು.
24:03 ಇಮೇಜ್ನಲ್ಲಿ, ಇಲ್ಲಿಯ ಈ ಜಾಗಗಳನ್ನು ಬದಲಾಯಿಸಿ ನೀವು ಬಹಳಷ್ಟು ಮಾರ್ಪಾಟುಗಳನ್ನು ಮಾಡಲು ಸಾಧ್ಯ ಎಂದು ನೀವು ಊಹಿಸಬಹುದು.
24:47 ಇದು ಸರಿಯಾಗಿದೆ.
24:51 ಇಲ್ಲಿ ನೀವು ಬಹಳಷ್ಟು ಬದಲಾವಣೆಗಳನ್ನು ಮಾಡಬಹುದು. ನಾನು ಸರಿಯಾದ ದಾರಿಯನ್ನು ಹಿಡಿದಿರುವೆನೋ ಎಂದು ನನಗೆ ಗೊತ್ತಿಲ್ಲ.
25:01 ಆದರೆ ಇದನ್ನು ಇಲ್ಲಿಯವರೆಗೆ ನಾನು ಇಷ್ಟಪಡುತ್ತೇನೆ.
25:06 ನಾವು ಬೇರೆ ಏನು ಮಾಡಲು ಸಾಧ್ಯವಿದೆ ಎಂದು ನೋಡೋಣ.
25:10 ಮೊದಲನೆಯದಾಗಿ, ನಾವು lines ಅನ್ನು ಬಿಟ್ಟು ಬೇರೆ ಲೇಯರನ್ನು ಬಳಸಬಹುದು.
25:18 ಆದ್ದರಿಂದ, ನಾನು lines ಅನ್ನು ಸ್ವಿಚ್-ಆಫ್ ಮಾಡುತ್ತೇನೆ. ನನಗೆ ಬಹಳ ಆಶ್ಚರ್ಯಕರ ಬಣ್ಣಗಳು ಸಿಗುತ್ತವೆ. ಏಕೆಂದರೆ ಈಗ ನನ್ನ ಹತ್ತಿರ ಮತ್ತೆ ಬಿಳಿಯ ಬ್ಯಾಕ್‌ಗ್ರೌಂಡ್ ಇದೆ.
25:31 ಆದ್ದರಿಂದ, ಇನ್ನೊಂದು ಲೇಯರನ್ನು ಇಲ್ಲಿ ಸೇರಿಸುತ್ತೇನೆ ಮತ್ತು ಅದನ್ನು White ಗೆ ಸೆಟ್ ಮಾಡುತ್ತೇನೆ. Multiply ‘ಮೋಡ್’ಅನ್ನು ಬಳಸುತ್ತೇನೆ. ಮತ್ತು ಅದನ್ನು 240 ಗ್ರೇ (ಬೂದುಬಣ್ಣ) ನಿಂದ ತುಂಬುತ್ತೇನೆ.
25:52 ಈಗ ನನಗೆ, ಹೆಚ್ಚೂಕಮ್ಮಿ lines ನೊಂದಿಗೆ ಇರುವಂತಹದೇ ಇಮೇಜ್ ಇಲ್ಲಿ ಸಿಕ್ಕಿದೆ.
25:59 ನಾನು ಅವುಗಳನ್ನು ಸ್ವಿಚ್-ಆನ್ ಮಾಡುತ್ತೇನೆ.
26:03 lines ನ ಮಾಹಿತಿಯು ಹೊರಗೆ ಬರುತ್ತಿದೆ ಆದರೆ ಈ ಕಾಮಿಕ್ ಪರಿಣಾಮವು ಇನ್ನೂ ಅಲ್ಲಿ ಇದೆ. ಯಾವುದು ಉತ್ತಮವಾಗಿದೆ ಎಂದು ನಾನು ನೋಡಲು ಸಾಧ್ಯವಿದೆ.
26:21 ನಾವು ಬೇರೆ ಕೆಲವು ಉಪಾಯಗಳನ್ನು ಪ್ರಯತ್ನಿಸೋಣ.
26:30 ನಾನು colour ಮತ್ತು saturation ‘ಲೇಯರ್’ಗಳನ್ನು ಎರಡು ಸಲ ಮಾಡಿ ಅವುಗಳೊಂದಿಗೆ ಏನಾದರೂ ಮಾಡುತ್ತೇನೆ.
26:39 ಇಲ್ಲಿ ನಾನು ‘ಇಮೇಜ್’ನಿಂದ ವಿವರಗಳನ್ನು ಪಡೆಯಲು ಪ್ರಯತ್ನಿಸುತ್ತೇನೆ.
26:45 ಆದ್ದರಿಂದ, ಕ್ರಮವಾಗಿ Filters, Blur and Gaussian blur ಗಳಿಗೆ ಹೋಗುತ್ತೇನೆ.
26:53 ಇಲ್ಲಿ ನನಗೆ ಸೊಗಸಾದ ಪರಿಣಾಮವನ್ನು ಕೊಡುವ ವ್ಯಾಲ್ಯೂವನ್ನು ನಾನು ಆರಿಸುತ್ತೇನೆ.
27:08 ಬಣ್ಣಗಳು ಸ್ವಲ್ಪ ಮೆದುವಾಗಿರುವುದನ್ನು ನಿವು ನೋಡುತ್ತೀರಿ.
27:18 ಆದ್ದರಿಂದ ನಾವು ಇದನ್ನು saturation copy ಯ ಮೇಲೆ ಸಹ ಮಾಡೋಣ.
27:24 ಕ್ರಮವಾಗಿ Filters, Repeat Guassian Blur ಗಳಿಗೆ ಹೋಗುತ್ತೇನೆ.
27:29 ಈಗ ನನಗೆ ನೀರಸವಾದ ಬಣ್ಣಗಳೊಂದಿಗೆ ನಿಜವಾಗಿಯೂ ಸ್ವಾರಸ್ಯವಿಲ್ಲದ ಇಮೇಜ್, ಸಿಕ್ಕಿದೆ.
27:36 ನಾನು ಮೂಲ colour ಅನ್ನು ಸ್ವಿಚ್-ಆನ್ ಮಾಡುತ್ತೇನೆ. ನನಗೆ ಇಲ್ಲಿ ವಿಚಿತ್ರವಾದ ಪರಿಣಾಮವು ಸಿಗುತ್ತದೆ.
27:44 ನಾವು ಈ ‘ಲೇಯರ್’ಗಳನ್ನು saturation blurred (ಸ್ಯಾಚುರೇಶನ್ ಬ್ಲರ್ಡ್) ಮತ್ತು colour blurred (ಕಲರ್ ಬ್ಲರ್ಡ್) ಎಂದು ‘ರೀ-ನೇಮ್’ ಮಾಡೋಣ.
28:04 ನಾನು blurred saturation ಹಾಗೂ unblurred colour ಅನ್ನು ಕೂಡಿಸಿದರೆ, ಸಾಕಷ್ಟು ವಿಚಿತ್ರವಾಗಿ ಕಾಣುವ ಕೆಲವು ಬಣ್ಣಗಳನ್ನು ಇಲ್ಲಿ ನಾನು ಪಡೆಯುತ್ತೇನೆ.
28:16 ಇದು ಇಲ್ಲಿ, ವಿಶೇಷತಃ ಮೂಗಿನ ಮೇಲಿರದಿದ್ದರೆ ನನಗೆ ಇಷ್ಟವಾಗುತ್ತಿತ್ತು.
28:22 ಇದನ್ನು ಮತ್ತೆ ಸ್ವಿಚ್-ಆನ್ ಮಾಡುತ್ತೇನೆ ಮತ್ತು ಇಲ್ಲಿ ಈ ಪರಿಣಾಮವಿದೆ.
28:29 ನೀವು ‘ಬ್ಲರಿಂಗ್’ಅನ್ನು ಕಡಿಮೆ ಮಾಡಿದರೆ ನಿಮಗೆ ಸ್ಪಷ್ಟವಾದ ವಿವರಗಳು ಸಿಗುತ್ತವೆ ಎಂದು ನೀವು ಊಹಿಸಬಹುದು.
28:37 ಇದು ನಿಜವಾದ ಮೈದಾನವಾಗಿದೆ.
28:40 ಇದನ್ನು ಹೇಗೆ ಮಾಡುವುದು, ಏನು ಮಾಡುವುದು, ಯಾವುದರಿಂದ ಸರಿಪಡಿಸುವುದು ಇಂತಹ ಬಹಳಷ್ಟು ಸಾಧ್ಯತೆಗಳು ನಿಮಗೆ ಇಲ್ಲಿ ಸಿಗುತ್ತವೆ.
28:50 ಇದನ್ನು ಮಾಡುವುದು ನಿಜವಾಗಿಯೂ ಮಜವಾಗಿದೆ.
29:09 ಮೂಲ ‘ಟ್ಯುಟೋರಿಯಲ್’ನ ಲೇಖಕರು ಮಹತ್ತರವಾದ ಕೆಲಸ ಮಾಡಿದ್ದಾರೆ.
29:24 ಈ ‘ಇಮೇಜ್’ನ ಎರಡೂ ಆವೃತ್ತಿಗಳಿಂದ ನಾನು ಅಷ್ಟೇನೂ ಸಂತುಷ್ಟನಾಗಿಲ್ಲ.
29:31 ನಾನು ಇಲ್ಲಿಯ ವಿನ್ಯಾಸ, ಈ ಹೂವು, ಈ ವಿಗ್ರಹ ಹಾಗೂ ಇಲ್ಲಿಯ ಪಾಟ್ ಗಳನ್ನು ಇಷ್ಟಪಡುತ್ತೇನೆ.
29:40 ಕೈ ಹತ್ತಿರ ಇರುವ ಎಲ್ಲ ವಿವರಗಳನ್ನು ನಾನು ಇಷ್ಟಪಡುವುದಿಲ್ಲ ಮತ್ತು ಮುಖದಲ್ಲಿ, ಇದು ಇನ್ನೂ ಸ್ವಲ್ಪ ಚಪ್ಪಟೆಯಾಗಿರಬಹುದಿತ್ತು.
29:49 ‘ಬ್ಲರ್ಡ್’ ಆನ್ ಆಗಿರುವಾಗ, ಮುಖದಲ್ಲಿಯ ಮತ್ತು ಕೈಯ ಹತ್ತಿರದ ವಿವರಗಳನ್ನು ನಾನು ಇಷ್ಟಪಡುತ್ತೇನೆ. ಆದರೆ ನಾನು ಪೂರ್ತಿ ಮಸುಕಾಗಿರುವ ಹೂವನ್ನು ಇಷ್ಟಪಡುವದಿಲ್ಲ.
30:04 ಈಗ ನಾನು ಈ ಎರಡು ‘ಇಮೇಜ್’ಗಳನ್ನು ಒಂದುಗೂಡಿಸಬಹುದು. ನಾನು colour blurred ನೊಂದಿಗೆ ಆರಂಭಿಸುತ್ತೇನೆ. ಕಾರಣ ನಾನು saturation blurred ದ ಒಟ್ಟಾರೆ ನೋಟಕ್ಕಿಂತ ಇದರದನ್ನು ಇಷ್ಟಪಡುತ್ತೇನೆ.
30:20 ಆದರೆ ನಾನು ಎಲ್ಲ ‘ಲೇಯರ್’ಗಳನ್ನು ಸ್ವಿಚ್-ಆನ್ ಮಾಡುತ್ತೇನೆ. saturation blurred (ಸ್ಯಾಚುರೇಶನ್ ಬ್ಲರ್ಡ್) ಮತ್ತು colour blurred (ಕಲರ್ ಬ್ಲರ್ಡ್) ಗಳಿಗೆ ಲೇಯರ್ ಮಾಸ್ಕನ್ನು ಸೇರಿಸುತ್ತೇನೆ. Black (fully transparent) ನೊಂದಿಗೆ ಒಂದು ಲೇಯರ್ ಮಾಸ್ಕನ್ನುಸೇರಿಸುತ್ತೇನೆ.
30:37 ಈಗ ನಾನು ‘saturation ಲೇಯರ್ ಮಾಸ್ಕ್’ನ ಮೇಲೆ ಕೆಲಸ ಮಾಡಲು ಆರಂಭಿಸುತ್ತೇನೆ. ಆದ್ದರಿಂದ ನಾನು White ಅನ್ನು ನನ್ನ ‘ಫೋರ್ಗ್ರೌಂಡ್ ಕಲರ್’ ಎಂದು ಆಯ್ಕೆಮಾಡಿ, ಇಲ್ಲಿ Paintbrush ಅನ್ನು ಆಯ್ಕೆಮಾಡುತ್ತೇನೆ.
30:51 ಈಗ ನಾನು ಪೇಂಟ್ ಮಾಡಲು ಆರಂಭಿಸುತ್ತೇನೆ.
30:55 ಇಮೇಜ್ನಲ್ಲಿ, ನನಗೆ ಇನ್ನೂ ಸ್ವಲ್ಪ ಹೆಚ್ಚು ಚಪ್ಪಟೆಯಾಗಿ ಬೇಕಾಗಿರುವ ಭಾಗಗಳ ಮೇಲೆ ನಾನು ಪೇಂಟ್ ಮಾಡುತ್ತೇನೆ.
31:04 ಇದು ಸ್ವಲ್ಪ ವಿಚಿತ್ರವಾಗಿ ಕಾಣುವುದು. ಏಕೆಂದರೆ ಈಗ Color ಲೇಯರ್ ಸ್ವಿಚ್-ಆನ್ ಆಗಿದೆ.
31:46 ಈಗ Shift+ctrl+A ಒತ್ತಿ ನಾನು ಎಲ್ಲವನ್ನೂ ಆಯ್ಕೆಮಾಡಿ, Ctrl + C ಯಿಂದ ‘ಕಾಪಿ’ಮಾಡುತ್ತೇನೆ. ಇಮೇಜ್ನಲ್ಲಿ ಹೋಗಿ, Ctrl + V ಒತ್ತುತ್ತೇನೆ. ಈ Floating Selection ಮೇಲೆ ಕ್ಲಿಕ್ ಮಾಡುತ್ತೇನೆ. Ctrl + H ಅಥವಾ anchor ‘ಲೇಯರ್’ ನೊಂದಿಗೆ, ನನಗೆ ನನ್ನ ‘ಕಾಪಿ’ ಸಿಗುತ್ತದೆ.
32:20 ನೀವು ಈ ‘ಲೇಯರ್ ಮಾಸ್ಕ್’ಗಳನ್ನು ಸಹ ‘ಕಾಪಿ’ ಮಾಡಬಹುದು. ನಾನು ಈ ಇಮೇಜನ್ನು ಇಲ್ಲಿಯೇ ಬಿಡುವೆನು.
32:32 ನನಗೆನಿಸುವಂತೆ ಇದು ತುಂಬಾ ಒಳ್ಳೆಯ ಉದಾಹರಣೆಯಾಗಿದೆ. ಕೊನೆಯಲ್ಲಿ ನಾನು ಈ ‘ಸ್ಲೈಡರ್’ಗಳೊಂದಿಗೆ ಸ್ವಲ್ಪ ಪ್ರಯೋಗ ಮಾಡುತ್ತೇನೆ.
32:54 ನಾವು ಇದರ ಪುನರಾವಲೋಕನ ಮಾಡೋಣ.
32:57 ನೀವು ಮೊದಲು ‘ಇಮೇಜ್ ಲೇಯರ್’ಅನ್ನು ‘ಕಾಪಿ’ ಮಾಡಿ ‘ಥ್ರೆಶೋಲ್ಡ್ ಟೂಲ್’ನಿಂದ ಒಂದು “ಇಂಕ್ಡ್” ಇಮೇಜ್ಅನ್ನು ತಯಾರಿಸಿ.
33:05 ನಿಮಗೆ ಕಪ್ಪು ಅಥವಾ ಬಹಳ ಗಾಢವಾಗಿ ಬೇಕಾಗಿರುವ ಜಾಗಗಳಿಗಾಗಿ ನೋಡಿ.
33:10 ನಂತರ ಬೇಸ್ ಇಮೇಜನ್ನು ಮತ್ತೊಮ್ಮೆ ಕಾಪಿ ಮಾಡಿ. Edge-Detect ‘ಫಿಲ್ಟರ್’ನೊಂದಿಗೆ lines ಲೇಯರನ್ನು ಮಾಡಿ. ಆನಂತರ Layer Mode ಅನ್ನು Multiplyಗೆ ಸೆಟ್ ಮಾಡಿ.
33:29 ಈ ಲೇಯರ್’ನಲ್ಲಿ Levels Tool ನಿಂದ ನೀವು ಬಿಳಿಯನ್ನು ಬೂದುಬಣ್ಣಕ್ಕೆ, ಸುಮಾರು 240 ಕ್ಕೆ (ಇನ್ನೂರ ನಲವತ್ತು) ಇಳಿಸಿ.
33:42 ಆಮೇಲೆ, ನೀವು ಬೇಸ್ ಇಮೇಜನ್ನು ಇನ್ನೊಮ್ಮೆ ಕಾಪಿ ಮಾಡಿ ಮತ್ತು colour ಲೇಯರನ್ನು ತಯಾರಿಸಿ.
33:49 Colour Mode ಅನ್ನು Colourಗೆ ಸೆಟ್ ಮಾಡಿ.
33:56 ಅಂತಿಮವಾಗಿ ನೀವು ‘ಬೇಸ್ ‘ಲೇಯರ್’ಅನ್ನು ಕೊನೆಯ ಸಲ ‘ಕಾಪಿ’ಮಾಡಿ, saturation ‘ಲೇಯರ್’ಅನ್ನು ತಯಾರಿಸಿ. ಇಲ್ಲಿ ನೀವು Layer Mode ಅನ್ನು Saturation ಗೆ ಸೆಟ್ ಮಾಡಿ. ಈಗ, ನೀವು ವಿವಿಧ ‘ಲೇಯರ್’ಗಳ ಅಥವಾ ಯಾವುದೋ ‘ಲೇಯರ್’ನ ಓಪ್ಯಾಸಿಟೀಯೊಂದಿಗೆ ಕೆಲಸಮಾಡಿ.
34:20 ಸುಮ್ಮನೆ ಪ್ರಯೋಗ ಮಾಡಿ. ಫಲಿತಾಂಶಗಳು ಸಮ್ಮಿಶ್ರವಾಗಿವೆ ಆದರೆ ಕೆಲವು, ಬೆರಗುಗೊಳಿಸುವಂತಿವೆ.
34:32 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ‘ಲಿಂಕ್’ಗೆ ಹೋಗಿ http://meetthegimp.org ಮತ್ತು ನಿಮ್ಮ ಅಭಿಪ್ರಾಯವನ್ನು ತಿಳಿಸಲು ದಯವಿಟ್ಟು ಕೆಳಗಿನ ‘ಲಿಂಕ್’ಗೆ ಬರೆಯಿರಿ. info@meetthegimp.org

ವಂದನೆಗಳು.

34:49 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ …………….

Contributors and Content Editors

NaveenBhat, Sandhya.np14