C-and-Cpp/C2/Logical-Operators/Kannada

From Script | Spoken-Tutorial
Revision as of 16:52, 10 November 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:02 c ಮತ್ತು c++ ನಲ್ಲಿ ಲಾಜಿಕಲ್ ಆಪರೇಟರ್ ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:08 ಈ ಟ್ಯುಟೊರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು : ಲಾಜಿಕಲ್ ಆಪರೇಟರ್ ಗಳಾದ ಲಾಜಿಕಲ್ ಅಂಡ್, ಉದಾಹರಣೆಗೆ: ಎಕ್ಸ್ಪ್ರೆಶನ್ ಒನ್ ಅಂಡ್ ಎಕ್ಸ್ಪ್ರೆಶನ್ ಟು.
00:16 ಲಾಜಿಕಲ್ ಆರ್, ಉದಾಹರಣೆಗೆ: ಎಕ್ಸ್ಪ್ರೆಶನ್ ಒನ್ ಆರ್ ಎಕ್ಸ್ಪ್ರೆಶನ್ ಟು
00:21 ಲಾಜಿಕಲ್ ನಾಟ್, ಉದಾಹರಣೆಗೆ: ನಾಟ್ ಎಕ್ಸ್ಪ್ರೆಶನ್ ಒನ್
00:25 ಇದನ್ನು ನಾವು ಉದಾಹರಣೆಯ ಸಹಾಯದೊಂದಿಗೆ ಮಾಡೋಣ.
00:28 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ನ11.10 ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ.
00:39 ಲಾಜಿಕಲ್ ಆಪರೇಟರ್ ಗಳಗೆ ಪೀಠಿಕೆಯೊಂದಿಗೆ ಪ್ರಾರಂಭಿಸೋಣ.
00:43 c ಮತ್ತು c++ ನಲ್ಲಿ ಟ್ರು ಎಂಬುದು ಸೊನ್ನೆಯನ್ನು ಹೊರತುಪಡಿಸಿ ಉಳಿದ ಯಾವುದೇ ಮೌಲ್ಯವಾಗಬಹುದು.
00:48 ನಾನ್ ಝೀರೋ ಎಂದರೆ ಟ್ರು ಎಂದರ್ಥ.
00:50 ಮತ್ತು ಝೀರೋ ಎಂದರೆ ಫಾಲ್ಸ್ ಎಂದರ್ಥ
00:53 ಲಾಜಿಕಲ್ ಆಪರೇಟರ್ ಗಳನ್ನು ಉಪಯೋಗಿಸಲ್ಪಟ್ಟ ಎಕ್ಸ್ಪ್ರೆಶನ್ ಗಳು, ಟ್ರು ಗೆ ಒಂದು, ಮತ್ತು ಫಾಲ್ಸ್ ಗೆ ಸೊನ್ನೆಯನ್ನು ಕೊಡುತ್ತದೆ.
00:58 ಈಗ ನಾನು ಲಾಜಿಕಲ್ ಆಪರೇಟರ್ ಗಳನ್ನು ಉದಾಹರಣೆಯೊಂದಿಗೆ ವಿವರಿಸುತ್ತೇನೆ.
01:03 c ಯಲ್ಲಿ ಲಾಜಿಕಲ್ ಆಪರೇಟರ್ ಗಳಿಗೆ ಪ್ರೊಗ್ರಾಮ್ ಇಲ್ಲಿದೆ.
01:08 ಮೈನ್ ಬ್ಲಾಕ್ ನ ಒಳಗೆ
01:10 ಈ ಸ್ಟೇಟ್ಮೆಂಟ್, a, b, ಮತ್ತು c ಎಂದು ಇಂಟಿಜರ್ ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡುತ್ತದೆ.
01:16 ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್, ಯೂಸರ್ ಗೆ a, b ಮತ್ತು c ಯ ಮೌಲ್ಯಗಳನ್ನು ಕೊಡಲು ಪ್ರಾಂಪ್ಟ್ ಮಾಡುತ್ತದೆ.
01:21 ಈ ಸ್ಕ್ಯಾನ್ ಎಫ್ ಸ್ಟೇಟ್ಮೆಂಟ್, ಯೂಸರ್ ಇಂದ a, b ಮತ್ತು c ಯ ಮೌಲ್ಯಗಳನ್ನು ತೆಗೆದುಕೊಳ್ಳುತ್ತದೆ.
01:28 ಇಲ್ಲಿ a, b ಮತ್ತು c ಗಳನ್ನು ಹೋಲಿಸಿ, ಅತಿ ದೊಡ್ಡ ಮೌಲ್ಯವನ್ನು ಕಂಡುಹಿಡಿಯುತ್ತಿದ್ದೇವೆ.
01:33 ಏಕಕಾಲಕ್ಕೇ ಹೋಲಿಸಲು ನಾವು ಲಾಜಿಕಲ್ ಎಂಡ್ ಎಂಬ ಆಪರೇಟರ್ ಅನ್ನು ಉಪಯೋಗಿಸುತ್ತಿದ್ದೇವೆ.
01:38 ಇಲ್ಲಿ, ಲಾಜಿಕಲ್ ಎಂಡ್ ಟ್ರು ಎಂದು ಕೊಡಬೇಕಾದರೆ, ಎಲ್ಲ ಕಂಡೀಶನ್ ಗಳೂ ಟ್ರು ಇರಬೇಕು.
01:43 ಫಾಲ್ಸ್ ಕಂಡೀಶನ್ ಎದುರಾದಲ್ಲಿ, ಎಕ್ಸ್ಪ್ರೆಶನ್ ಮುಂದೆ ಇವ್ಯಾಲ್ಯುಯೇಟ್ ಆಗುವುದಿಲ್ಲ.
01:49 ಹಾಗಾಗಿ, a ಗ್ರೇಟರ್ ದ್ಯಾನ್ b ಎಂಬುದು ಟ್ರು ಇದ್ದಾಗ ಮಾತ್ರ a ಗ್ರೇಟರ್ ದ್ಯಾನ್ c ಎಂಬುದು ಇವ್ಯಾಲ್ಯುಯೇಟ್ ಆಗುತ್ತದೆ.
01:56 a ಯು b ಗಿಂತ ಸಣ್ಣದಿದ್ದಲ್ಲಿ, ಎಕ್ಸ್ಪ್ರೆಶನ್ ಇವ್ಯಾಲ್ಯುಯೇಟ್ ಆಗುವುದಿಲ್ಲ.
02:02 ಹಿಂದಿನ ಕಂಡೀಶನ್ ಟ್ರು ಇದ್ದರೆ ಮಾತ್ರ ಈ ಸ್ಟೇಟ್ಮೆಂಟ್ ಇವ್ಯಾಲ್ಯುಯೇಟ್ ಆಗುತ್ತದೆ.
02:07 ನಂತರ, b ಗ್ರೇಟರ್ ದ್ಯಾನ್ c ಎಂಬುದು ಇವ್ಯಾಲ್ಯುಯೇಟ್ ಆಗುತ್ತದೆ.
02:10 ಒಂದು ವೇಳೆ, ಕಂಡೀಶನ್ ಟ್ರು ಇದ್ದರೆ, b ಈಸ್ ಗ್ರೇಟೆಸ್ಟ್ ಎಂದು ಸ್ಕ್ರೀನ್ ನ ಮೇಲೆ ತೋರಿಸುತ್ತದೆ.
02:16 ಇಲ್ಲದಿದ್ದಲ್ಲಿ, c ಈಸ್ ಗ್ರೇಟೆಸ್ಟ್ ಎಂದು ಸ್ಕ್ರೀನ್ ನ ಮೇಲೆ ತೋರಿಸುತ್ತದೆ.
02:21 ಈಗ ನಾವು ಲಾಜಿಕಲ್ ಆರ್ ಆಪರೇಟರ್ ಅನ್ನು ನೋಡೋಣ.
02:24 ಇಲ್ಲಿ, ಲಾಜಿಕಲ್ ಆರ್, ಟ್ರು ಎಂದು ಕೊಡಬೇಕಾದರೆ, ಯಾವುದಾದರೂ ಒಂದು ಕಂಡೀಶನ್ ಟ್ರು ಇರಲೇಬೇಕು.
02:30 ಒಂದು ಟ್ರು ಕಂಡೀಶನ್ ಬಂದರೆ, ಮುಂದಿನ ಎಕ್ಸ್ಪ್ರೆಶನ್ ಇವ್ಯಾಲ್ಯುಯೇಟ್ ಆಗುವುದಿಲ್ಲ.
02:35 ಹಾಗಾಗಿ, a ಈಕ್ವಲ್ಸ್ ಈಕ್ವಲ್ಸ್ ಝೀರೋ ಆಗಿದ್ದಲ್ಲಿ, ಉಳಿದೆರಡು ಎಕ್ಸ್ಪ್ರೆಶನ್ ಗಳು ಇವ್ಯಾಲ್ಯುಯೇಟ್ ಆಗುವುದಿಲ್ಲ.
02:43 a, b ಅಥವಾ c ಯಲ್ಲಿ ಒಂದು ಸೊನ್ನೆಯಾಗಿದ್ದರೂ, ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗುತ್ತದೆ.
02:49 ಪ್ರೊಗ್ರಾಮ್ ನ ಅಂತ್ಯಕ್ಕೆ ಬರೋಣ. ರಿಟರ್ನ್ ಝೀರೋ , ಕ್ಲೋಸಿಂಗ್ ಕರ್ಲಿ ಬ್ರಾಕೆಟ್ ಅನ್ನು ಟೈಪ್ ಮಾಡಿ.
02:54 ಪ್ರೊಗ್ರಾಮ್ ಅನ್ನು ಸೇವ್ ಮಾಡಿ.
02:57 ಇದನ್ನು, ಡಾಟ್ ಸಿ ಎಂಬ ಎಕ್ಸ್ಟೆಂಶನ್ ನೊಂದಿಗೆ ಸೇವ್ ಮಾಡಿ.
03:00 ನನ್ನ ಫೈಲ್ ಅನ್ನು ನಾನು ಲಾಜಿಕಲ್ ಡಾಟ್ ಸಿ ಎಂದು ಸೇವ್ ಮಾಡಿದ್ದೇನೆ.
03:03 ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ.
03:08 ಕೋಡ್ ಅನ್ನು ಕಂಪೈಲ್ ಮಾಡಲು, gcc ಸ್ಪೇಸ್ ಲಾಜಿಕಲ್ ಡಾಟ್ ಸಿ ಸ್ಪೇಸ್ ಮೈನಸ್ ಒ ಸ್ಪೇಸ್ ಲಾಗ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
03:23 ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ಲಾಗ್ ಎಂದು ಟೈಪ್ ಮಾಡಿ,
03:27 Enter ಕೀಯನ್ನು ಒತ್ತಿ.
03:29 ನಾನು ಸೊನ್ನೆ ಮತ್ತು ಮೂವತ್ನಾಲ್ಕು, ಐದುನೂರಾಅರವತ್ತೇಳು ಎಂದು ಮೌಲ್ಯಗಳನ್ನು ಕೊಡುತ್ತೇನೆ.
03:39 c ಈಸ್ ಗ್ರೇಟೆಸ್ಟ್. ದ ಪ್ರೊಡಕ್ಟ್ ಆಫ್ a, b ಎಂಡ್ c ಈಸ್ ಝೀರೋ ಎಂದು ಔಟ್ ಪುಟ್ ತೋರಿಸುತ್ತದೆ.
03:50 ವಿವಿಧ ಇನ್ಪುಟ್ ಗಳನ್ನು ಕೊಟ್ಟು ಈ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಲು ಪ್ರಯತ್ನಿಸಿ.
03:55 ಈಗ, ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಬರೆಯೋಣ.
03:59 ನಾನೀಗಾಗಲೇ ಪ್ರೊಗ್ರಾಮ್ ಅನ್ನು ಬರೆದಿದ್ದೇನೆ, ಅದನ್ನು ವಿವರಿಸುತ್ತೇನೆ.
04:03 c++ ನಲ್ಲಿ ಕೋಡ್ ಇಲ್ಲಿದೆ.
04:06 ಈಗ, ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಮಾಡಲು, ಸ್ವಲ್ಪ ಬದಲಾವಣೆಗಳನ್ನು ಮಾಡೋಣ.
04:11 ಹೆಡರ್ ಫೈಲ್ ನಲ್ಲಿ ಒಂದು ಬದಲಾವಣೆ ಇದೆ.
04:14 ಯೂಸಿಂಗ್ ಸ್ಟೇಟ್ಮೆಂಟ್ ಅನ್ನು ಉಪಯೋಗಿಸಲಾಗಿದೆ.
04:18 ಮತ್ತು, ಇನ್ಪುಟ್ ಮತ್ತು ಔಟ್ ಪುಟ್ ಸ್ಟೇಟ್ಮೆಂಟ್ ನಲ್ಲಿ ವ್ಯತ್ಯಾಸವಿದೆ.
04:21 ಆಪರೇಟರ್ ಗಳು c ನಲ್ಲಿ ವರ್ತಿಸುವಂತೆಯೇ ವರ್ತಿಸುತ್ತದೆ.
04:25 save ಒತ್ತಿ.
04:27 ಫೈಲ್, ಡಾಟ್ ಸಿಪಿಪಿ ಎಕ್ಸ್ಟೆಂಶನ್ ನೊಂದಿಗೆ ಸೇವ್ ಆಗಿದೆಯೆಂದು ಖಚಿತಪಡಿಸಿಕೊಳ್ಳಿ.
04:31 ನಿಮ್ಮ ಕೀಬೋರ್ಡ ನಲ್ಲಿCtrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ.
04:36 ಕಂಪೈಲ್ ಮಾಡಲು, g++ ಲಾಜಿಕಲ್ ಡಾಟ್ ಸಿಪಿಪಿ ಸ್ಪೇಸ್ ಮೈನಸ್ ಒ ಸ್ಪೇಸ್ ಲಾಗ್ ಒನ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
04:49 ಎಕ್ಸಿಕ್ಯೂಟ್ ಮಾಡಲು ಡಾಟ್ ಸ್ಲ್ಯಾಶ್ ಲಾಗ್ ಒನ್ ಎಂದು ಟೈಪ್ ಮಾಡಿ.
04:53 Enter ಕೀಯನ್ನು ಒತ್ತಿ
04:56 ನಾನು ಸೊನ್ನೆ, ಮೂವತ್ನಾಲ್ಕು ಮತ್ತು ಐದುನೂರಾಅರವತ್ತೇಳು ಎಂದು ಮೌಲ್ಯಗಳನ್ನು ಕೊಡುತ್ತೇನೆ.
05:02 ಔಟ್ ಪುಟ್, c ಪ್ರೊಗ್ರಾಮ್ ನಂತಿರುವುದನ್ನು ನೋಡಬಹುದು.
05:05 ವಿವಿಧ ಇನ್ಪುಟ್ ಗಳನ್ನು ಕೊಟ್ಟು ಈ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಲು ಪ್ರಯತ್ನಿಸಿ.
05:10 ಈಗ, ಸಾಮಾನ್ಯವಾಗಿ ನಾವು ಎದುರಿಸುವ ಒಂದು ಎರರ್ ಅನ್ನು ನೋಡೋಣ.
05:12 ಎಡಿಟರ್ ಗೆ ಹಿಂದಿರುಗೋಣ.
05:16 ಇಲ್ಲಿ ನಾವು ಬ್ರಾಕೆಟ್ ಅನ್ನು ಬಿಡುತ್ತೇವೆಂದೆಣಿಸಿ.
05:20 ಇದು ಮತ್ತು ಇದನ್ನು ಡಿಲೀಟ್ ಮಾಡಿ.
05:26 ಈಗ ಏನಾಗುತ್ತದೆ ಎಂದು ನೋಡೋಣ, ಪ್ರೊಗ್ರಾಮ್ ಅನ್ನು ಸೇವ್ ಮಾಡಿ.
05:30 ಟರ್ಮಿನಲ್ ಗೆ ಹಿಂದಿರುಗಿ.
05:32 ಮೊದಲಿನಂತೆ ಕಂಪೈಲ್ ಮಾಡಿ, ಎಕ್ಸಿಕ್ಯೂಟ್ ಮಾಡಿ.
05:38 ಎಕ್ಸ್ಪೆಕ್ಟೆಡ್ ಐಡೆಂಟಿಫೈರ್ ಬಿಫೊರ್ ಟೋಕನ್ ಎಂದು ಎರರ್ ತೋರಿಸುತ್ತದೆ.
05:45 ಏಕೆಂದರೆ, ಇಲ್ಲಿ ನಾವು ಎರಡು ಬೇರೆ ಬೇರೆ ಎಕ್ಸ್ಪ್ರೆಶನ್ ಗಳನ್ನು ಹೊಂದಿದ್ದೇವೆ.
05:48 ನಾವು ಇವುಗಳನ್ನು, ಎಂಡ್ ಆಪರೇಟರ್ ಅನ್ನು ಉಪಯೋಗಿಸಿ ಒಂದೇ ಎಕ್ಸ್ಪ್ರೆಶನ್ ಆಗಿ ಇವ್ಯಾಲ್ಯುಯೇಟ್ ಮಾಡಬೇಕು.
05:53 ಈಗ ಪ್ರೊಗ್ರಾಮ್ ಗೆ ಹಿಂದಿರುಗಿ, ಈ ಎರರ್ ಅನ್ನು ಸರಿಪಡಿಸೋಣ.
05:57 ಇಲ್ಲಿ ಮತ್ತು ಇಲ್ಲಿ ಬ್ರಾಕೆಟ್ ಅನ್ನು ಟೈಪ್ ಮಾಡೋಣ.
06:04 Save ಒತ್ತಿ.
06:06 ಟರ್ಮಿನಲ್ ಗೆ ಹಿಂದಿರುಗಿ.
06:09 ಮೊದಲಿನಂತೆ ಕಂಪೈಲ್ ಮಾಡಿ, ಎಕ್ಸಿಕ್ಯೂಟ್ ಮಾಡಿ.
06:14 ಹಾಗಾಗಿ, ಈಗ ಇದು ಕೆಲಸ ಮಾಡುತ್ತಿದೆ.
06:22 ಈಗ, ಟ್ಯುಟೋರಿಯಲ್ ನ ಸಾರಾಂಶ ತಿಳಿಯೋಣ.
06:24 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು: ಲಾಜಿಕಲ್ ಎಂಡ್, ಉದಾಹರಣೆಗೆ a ಗ್ರೇಟರ್ ದ್ಯಾನ್ b ಎಂಡ್ a ಗ್ರೇಟರ್ ದ್ಯಾನ್ c
06:32 ಲಾಜಿಕಲ್ ಆರ್, ಉದಾಹರಣೆಗೆ a ಈಕ್ವಲ್ಸ್ ಈಕ್ವಲ್ಸ್ ಝೀರೋ ಆರ್ b ಈಕ್ವಲ್ಸ್ ಈಕ್ವಲ್ಸ್ ಝೀರೋ ಆರ್ c ಈಕ್ವಲ್ಸ್ ಈಕ್ವಲ್ಸ್ ಝೀರೋ
06:39 ಅಸೈನ್ಮೆಂಟ್
06:41 ಎರಡು ನಂಬರ್ ಗಳನ್ನು ಯೂಸರ್ ಇಂದ ಇನ್ಪುಟ್ ಪಡೆದು, ಅವುಗಳು ಸಮವೇ ಆಲ್ಲವೇ ಎಂದು ನಾಟ್ ಆಪರೇಟರ್ ಉಪಯೋಗಿಸಿ ಕಂಡುಹಿಡಿಯಿರಿ.

ಸುಳಿವು: a ನಾಟ್ ಈಕ್ವಲ್ ಟು b

06:54 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ.
06:57 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
06:59 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
07:03 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿಕಾರ್ಯಗಾರವನ್ನು ನಡೆಸುತ್ತದೆ.
07:07 ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
07:11 ಹೆಚ್ಚಿನ ಮಾಹಿತಿಗಾಗಿ,contact@spoken-tutorial.org ಗೆ ಬರೆಯಿರಿ.
07:18 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
07:21 ಇದುರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದಬೆಂಬಲಿತವಾಗಿದೆ.
07:27 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ.
07:37 ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ. ಇದರ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Vasudeva ahitanal