C-and-Cpp/C2/Logical-Operators/Kannada
From Script | Spoken-Tutorial
Time | Narration |
00:02 | c ಮತ್ತು c++ ನಲ್ಲಿ ಲಾಜಿಕಲ್ ಆಪರೇಟರ್ ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:08 | ಈ ಟ್ಯುಟೊರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು : ಲಾಜಿಕಲ್ ಆಪರೇಟರ್ ಗಳಾದ ಲಾಜಿಕಲ್ ಅಂಡ್, ಉದಾಹರಣೆಗೆ: ಎಕ್ಸ್ಪ್ರೆಶನ್ ಒನ್ ಅಂಡ್ ಎಕ್ಸ್ಪ್ರೆಶನ್ ಟು. |
00:16 | ಲಾಜಿಕಲ್ ಆರ್, ಉದಾಹರಣೆಗೆ: ಎಕ್ಸ್ಪ್ರೆಶನ್ ಒನ್ ಆರ್ ಎಕ್ಸ್ಪ್ರೆಶನ್ ಟು |
00:21 | ಲಾಜಿಕಲ್ ನಾಟ್, ಉದಾಹರಣೆಗೆ: ನಾಟ್ ಎಕ್ಸ್ಪ್ರೆಶನ್ ಒನ್ |
00:25 | ಇದನ್ನು ನಾವು ಉದಾಹರಣೆಯ ಸಹಾಯದೊಂದಿಗೆ ಮಾಡೋಣ. |
00:28 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ನ11.10 ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. |
00:39 | ಲಾಜಿಕಲ್ ಆಪರೇಟರ್ ಗಳಗೆ ಪೀಠಿಕೆಯೊಂದಿಗೆ ಪ್ರಾರಂಭಿಸೋಣ. |
00:43 | c ಮತ್ತು c++ ನಲ್ಲಿ ಟ್ರು ಎಂಬುದು ಸೊನ್ನೆಯನ್ನು ಹೊರತುಪಡಿಸಿ ಉಳಿದ ಯಾವುದೇ ಮೌಲ್ಯವಾಗಬಹುದು. |
00:48 | ನಾನ್ ಝೀರೋ ಎಂದರೆ ಟ್ರು ಎಂದರ್ಥ. |
00:50 | ಮತ್ತು ಝೀರೋ ಎಂದರೆ ಫಾಲ್ಸ್ ಎಂದರ್ಥ |
00:53 | ಲಾಜಿಕಲ್ ಆಪರೇಟರ್ ಗಳನ್ನು ಉಪಯೋಗಿಸಲ್ಪಟ್ಟ ಎಕ್ಸ್ಪ್ರೆಶನ್ ಗಳು, ಟ್ರು ಗೆ ಒಂದು, ಮತ್ತು ಫಾಲ್ಸ್ ಗೆ ಸೊನ್ನೆಯನ್ನು ಕೊಡುತ್ತದೆ. |
00:58 | ಈಗ ನಾನು ಲಾಜಿಕಲ್ ಆಪರೇಟರ್ ಗಳನ್ನು ಉದಾಹರಣೆಯೊಂದಿಗೆ ವಿವರಿಸುತ್ತೇನೆ. |
01:03 | c ಯಲ್ಲಿ ಲಾಜಿಕಲ್ ಆಪರೇಟರ್ ಗಳಿಗೆ ಪ್ರೊಗ್ರಾಮ್ ಇಲ್ಲಿದೆ. |
01:08 | ಮೈನ್ ಬ್ಲಾಕ್ ನ ಒಳಗೆ |
01:10 | ಈ ಸ್ಟೇಟ್ಮೆಂಟ್, a, b, ಮತ್ತು c ಎಂದು ಇಂಟಿಜರ್ ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡುತ್ತದೆ. |
01:16 | ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್, ಯೂಸರ್ ಗೆ a, b ಮತ್ತು c ಯ ಮೌಲ್ಯಗಳನ್ನು ಕೊಡಲು ಪ್ರಾಂಪ್ಟ್ ಮಾಡುತ್ತದೆ. |
01:21 | ಈ ಸ್ಕ್ಯಾನ್ ಎಫ್ ಸ್ಟೇಟ್ಮೆಂಟ್, ಯೂಸರ್ ಇಂದ a, b ಮತ್ತು c ಯ ಮೌಲ್ಯಗಳನ್ನು ತೆಗೆದುಕೊಳ್ಳುತ್ತದೆ. |
01:28 | ಇಲ್ಲಿ a, b ಮತ್ತು c ಗಳನ್ನು ಹೋಲಿಸಿ, ಅತಿ ದೊಡ್ಡ ಮೌಲ್ಯವನ್ನು ಕಂಡುಹಿಡಿಯುತ್ತಿದ್ದೇವೆ. |
01:33 | ಏಕಕಾಲಕ್ಕೇ ಹೋಲಿಸಲು ನಾವು ಲಾಜಿಕಲ್ ಎಂಡ್ ಎಂಬ ಆಪರೇಟರ್ ಅನ್ನು ಉಪಯೋಗಿಸುತ್ತಿದ್ದೇವೆ. |
01:38 | ಇಲ್ಲಿ, ಲಾಜಿಕಲ್ ಎಂಡ್ ಟ್ರು ಎಂದು ಕೊಡಬೇಕಾದರೆ, ಎಲ್ಲ ಕಂಡೀಶನ್ ಗಳೂ ಟ್ರು ಇರಬೇಕು. |
01:43 | ಫಾಲ್ಸ್ ಕಂಡೀಶನ್ ಎದುರಾದಲ್ಲಿ, ಎಕ್ಸ್ಪ್ರೆಶನ್ ಮುಂದೆ ಇವ್ಯಾಲ್ಯುಯೇಟ್ ಆಗುವುದಿಲ್ಲ. |
01:49 | ಹಾಗಾಗಿ, a ಗ್ರೇಟರ್ ದ್ಯಾನ್ b ಎಂಬುದು ಟ್ರು ಇದ್ದಾಗ ಮಾತ್ರ a ಗ್ರೇಟರ್ ದ್ಯಾನ್ c ಎಂಬುದು ಇವ್ಯಾಲ್ಯುಯೇಟ್ ಆಗುತ್ತದೆ. |
01:56 | a ಯು b ಗಿಂತ ಸಣ್ಣದಿದ್ದಲ್ಲಿ, ಎಕ್ಸ್ಪ್ರೆಶನ್ ಇವ್ಯಾಲ್ಯುಯೇಟ್ ಆಗುವುದಿಲ್ಲ. |
02:02 | ಹಿಂದಿನ ಕಂಡೀಶನ್ ಟ್ರು ಇದ್ದರೆ ಮಾತ್ರ ಈ ಸ್ಟೇಟ್ಮೆಂಟ್ ಇವ್ಯಾಲ್ಯುಯೇಟ್ ಆಗುತ್ತದೆ. |
02:07 | ನಂತರ, b ಗ್ರೇಟರ್ ದ್ಯಾನ್ c ಎಂಬುದು ಇವ್ಯಾಲ್ಯುಯೇಟ್ ಆಗುತ್ತದೆ. |
02:10 | ಒಂದು ವೇಳೆ, ಕಂಡೀಶನ್ ಟ್ರು ಇದ್ದರೆ, b ಈಸ್ ಗ್ರೇಟೆಸ್ಟ್ ಎಂದು ಸ್ಕ್ರೀನ್ ನ ಮೇಲೆ ತೋರಿಸುತ್ತದೆ. |
02:16 | ಇಲ್ಲದಿದ್ದಲ್ಲಿ, c ಈಸ್ ಗ್ರೇಟೆಸ್ಟ್ ಎಂದು ಸ್ಕ್ರೀನ್ ನ ಮೇಲೆ ತೋರಿಸುತ್ತದೆ. |
02:21 | ಈಗ ನಾವು ಲಾಜಿಕಲ್ ಆರ್ ಆಪರೇಟರ್ ಅನ್ನು ನೋಡೋಣ. |
02:24 | ಇಲ್ಲಿ, ಲಾಜಿಕಲ್ ಆರ್, ಟ್ರು ಎಂದು ಕೊಡಬೇಕಾದರೆ, ಯಾವುದಾದರೂ ಒಂದು ಕಂಡೀಶನ್ ಟ್ರು ಇರಲೇಬೇಕು. |
02:30 | ಒಂದು ಟ್ರು ಕಂಡೀಶನ್ ಬಂದರೆ, ಮುಂದಿನ ಎಕ್ಸ್ಪ್ರೆಶನ್ ಇವ್ಯಾಲ್ಯುಯೇಟ್ ಆಗುವುದಿಲ್ಲ. |
02:35 | ಹಾಗಾಗಿ, a ಈಕ್ವಲ್ಸ್ ಈಕ್ವಲ್ಸ್ ಝೀರೋ ಆಗಿದ್ದಲ್ಲಿ, ಉಳಿದೆರಡು ಎಕ್ಸ್ಪ್ರೆಶನ್ ಗಳು ಇವ್ಯಾಲ್ಯುಯೇಟ್ ಆಗುವುದಿಲ್ಲ. |
02:43 | a, b ಅಥವಾ c ಯಲ್ಲಿ ಒಂದು ಸೊನ್ನೆಯಾಗಿದ್ದರೂ, ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗುತ್ತದೆ. |
02:49 | ಪ್ರೊಗ್ರಾಮ್ ನ ಅಂತ್ಯಕ್ಕೆ ಬರೋಣ. ರಿಟರ್ನ್ ಝೀರೋ , ಕ್ಲೋಸಿಂಗ್ ಕರ್ಲಿ ಬ್ರಾಕೆಟ್ ಅನ್ನು ಟೈಪ್ ಮಾಡಿ. |
02:54 | ಪ್ರೊಗ್ರಾಮ್ ಅನ್ನು ಸೇವ್ ಮಾಡಿ. |
02:57 | ಇದನ್ನು, ಡಾಟ್ ಸಿ ಎಂಬ ಎಕ್ಸ್ಟೆಂಶನ್ ನೊಂದಿಗೆ ಸೇವ್ ಮಾಡಿ. |
03:00 | ನನ್ನ ಫೈಲ್ ಅನ್ನು ನಾನು ಲಾಜಿಕಲ್ ಡಾಟ್ ಸಿ ಎಂದು ಸೇವ್ ಮಾಡಿದ್ದೇನೆ. |
03:03 | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
03:08 | ಕೋಡ್ ಅನ್ನು ಕಂಪೈಲ್ ಮಾಡಲು, gcc ಸ್ಪೇಸ್ ಲಾಜಿಕಲ್ ಡಾಟ್ ಸಿ ಸ್ಪೇಸ್ ಮೈನಸ್ ಒ ಸ್ಪೇಸ್ ಲಾಗ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
03:23 | ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ಲಾಗ್ ಎಂದು ಟೈಪ್ ಮಾಡಿ, |
03:27 | Enter ಕೀಯನ್ನು ಒತ್ತಿ. |
03:29 | ನಾನು ಸೊನ್ನೆ ಮತ್ತು ಮೂವತ್ನಾಲ್ಕು, ಐದುನೂರಾಅರವತ್ತೇಳು ಎಂದು ಮೌಲ್ಯಗಳನ್ನು ಕೊಡುತ್ತೇನೆ. |
03:39 | c ಈಸ್ ಗ್ರೇಟೆಸ್ಟ್. ದ ಪ್ರೊಡಕ್ಟ್ ಆಫ್ a, b ಎಂಡ್ c ಈಸ್ ಝೀರೋ ಎಂದು ಔಟ್ ಪುಟ್ ತೋರಿಸುತ್ತದೆ. |
03:50 | ವಿವಿಧ ಇನ್ಪುಟ್ ಗಳನ್ನು ಕೊಟ್ಟು ಈ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಲು ಪ್ರಯತ್ನಿಸಿ. |
03:55 | ಈಗ, ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಬರೆಯೋಣ. |
03:59 | ನಾನೀಗಾಗಲೇ ಪ್ರೊಗ್ರಾಮ್ ಅನ್ನು ಬರೆದಿದ್ದೇನೆ, ಅದನ್ನು ವಿವರಿಸುತ್ತೇನೆ. |
04:03 | c++ ನಲ್ಲಿ ಕೋಡ್ ಇಲ್ಲಿದೆ. |
04:06 | ಈಗ, ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಮಾಡಲು, ಸ್ವಲ್ಪ ಬದಲಾವಣೆಗಳನ್ನು ಮಾಡೋಣ. |
04:11 | ಹೆಡರ್ ಫೈಲ್ ನಲ್ಲಿ ಒಂದು ಬದಲಾವಣೆ ಇದೆ. |
04:14 | ಯೂಸಿಂಗ್ ಸ್ಟೇಟ್ಮೆಂಟ್ ಅನ್ನು ಉಪಯೋಗಿಸಲಾಗಿದೆ. |
04:18 | ಮತ್ತು, ಇನ್ಪುಟ್ ಮತ್ತು ಔಟ್ ಪುಟ್ ಸ್ಟೇಟ್ಮೆಂಟ್ ನಲ್ಲಿ ವ್ಯತ್ಯಾಸವಿದೆ. |
04:21 | ಆಪರೇಟರ್ ಗಳು c ನಲ್ಲಿ ವರ್ತಿಸುವಂತೆಯೇ ವರ್ತಿಸುತ್ತದೆ. |
04:25 | save ಒತ್ತಿ. |
04:27 | ಫೈಲ್, ಡಾಟ್ ಸಿಪಿಪಿ ಎಕ್ಸ್ಟೆಂಶನ್ ನೊಂದಿಗೆ ಸೇವ್ ಆಗಿದೆಯೆಂದು ಖಚಿತಪಡಿಸಿಕೊಳ್ಳಿ. |
04:31 | ನಿಮ್ಮ ಕೀಬೋರ್ಡ ನಲ್ಲಿCtrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
04:36 | ಕಂಪೈಲ್ ಮಾಡಲು, g++ ಲಾಜಿಕಲ್ ಡಾಟ್ ಸಿಪಿಪಿ ಸ್ಪೇಸ್ ಮೈನಸ್ ಒ ಸ್ಪೇಸ್ ಲಾಗ್ ಒನ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
04:49 | ಎಕ್ಸಿಕ್ಯೂಟ್ ಮಾಡಲು ಡಾಟ್ ಸ್ಲ್ಯಾಶ್ ಲಾಗ್ ಒನ್ ಎಂದು ಟೈಪ್ ಮಾಡಿ. |
04:53 | Enter ಕೀಯನ್ನು ಒತ್ತಿ |
04:56 | ನಾನು ಸೊನ್ನೆ, ಮೂವತ್ನಾಲ್ಕು ಮತ್ತು ಐದುನೂರಾಅರವತ್ತೇಳು ಎಂದು ಮೌಲ್ಯಗಳನ್ನು ಕೊಡುತ್ತೇನೆ. |
05:02 | ಔಟ್ ಪುಟ್, c ಪ್ರೊಗ್ರಾಮ್ ನಂತಿರುವುದನ್ನು ನೋಡಬಹುದು. |
05:05 | ವಿವಿಧ ಇನ್ಪುಟ್ ಗಳನ್ನು ಕೊಟ್ಟು ಈ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಲು ಪ್ರಯತ್ನಿಸಿ. |
05:10 | ಈಗ, ಸಾಮಾನ್ಯವಾಗಿ ನಾವು ಎದುರಿಸುವ ಒಂದು ಎರರ್ ಅನ್ನು ನೋಡೋಣ. |
05:12 | ಎಡಿಟರ್ ಗೆ ಹಿಂದಿರುಗೋಣ. |
05:16 | ಇಲ್ಲಿ ನಾವು ಬ್ರಾಕೆಟ್ ಅನ್ನು ಬಿಡುತ್ತೇವೆಂದೆಣಿಸಿ. |
05:20 | ಇದು ಮತ್ತು ಇದನ್ನು ಡಿಲೀಟ್ ಮಾಡಿ. |
05:26 | ಈಗ ಏನಾಗುತ್ತದೆ ಎಂದು ನೋಡೋಣ, ಪ್ರೊಗ್ರಾಮ್ ಅನ್ನು ಸೇವ್ ಮಾಡಿ. |
05:30 | ಟರ್ಮಿನಲ್ ಗೆ ಹಿಂದಿರುಗಿ. |
05:32 | ಮೊದಲಿನಂತೆ ಕಂಪೈಲ್ ಮಾಡಿ, ಎಕ್ಸಿಕ್ಯೂಟ್ ಮಾಡಿ. |
05:38 | ಎಕ್ಸ್ಪೆಕ್ಟೆಡ್ ಐಡೆಂಟಿಫೈರ್ ಬಿಫೊರ್ ಟೋಕನ್ ಎಂದು ಎರರ್ ತೋರಿಸುತ್ತದೆ. |
05:45 | ಏಕೆಂದರೆ, ಇಲ್ಲಿ ನಾವು ಎರಡು ಬೇರೆ ಬೇರೆ ಎಕ್ಸ್ಪ್ರೆಶನ್ ಗಳನ್ನು ಹೊಂದಿದ್ದೇವೆ. |
05:48 | ನಾವು ಇವುಗಳನ್ನು, ಎಂಡ್ ಆಪರೇಟರ್ ಅನ್ನು ಉಪಯೋಗಿಸಿ ಒಂದೇ ಎಕ್ಸ್ಪ್ರೆಶನ್ ಆಗಿ ಇವ್ಯಾಲ್ಯುಯೇಟ್ ಮಾಡಬೇಕು. |
05:53 | ಈಗ ಪ್ರೊಗ್ರಾಮ್ ಗೆ ಹಿಂದಿರುಗಿ, ಈ ಎರರ್ ಅನ್ನು ಸರಿಪಡಿಸೋಣ. |
05:57 | ಇಲ್ಲಿ ಮತ್ತು ಇಲ್ಲಿ ಬ್ರಾಕೆಟ್ ಅನ್ನು ಟೈಪ್ ಮಾಡೋಣ. |
06:04 | Save ಒತ್ತಿ. |
06:06 | ಟರ್ಮಿನಲ್ ಗೆ ಹಿಂದಿರುಗಿ. |
06:09 | ಮೊದಲಿನಂತೆ ಕಂಪೈಲ್ ಮಾಡಿ, ಎಕ್ಸಿಕ್ಯೂಟ್ ಮಾಡಿ. |
06:14 | ಹಾಗಾಗಿ, ಈಗ ಇದು ಕೆಲಸ ಮಾಡುತ್ತಿದೆ. |
06:22 | ಈಗ, ಟ್ಯುಟೋರಿಯಲ್ ನ ಸಾರಾಂಶ ತಿಳಿಯೋಣ. |
06:24 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು: ಲಾಜಿಕಲ್ ಎಂಡ್, ಉದಾಹರಣೆಗೆ a ಗ್ರೇಟರ್ ದ್ಯಾನ್ b ಎಂಡ್ a ಗ್ರೇಟರ್ ದ್ಯಾನ್ c |
06:32 | ಲಾಜಿಕಲ್ ಆರ್, ಉದಾಹರಣೆಗೆ a ಈಕ್ವಲ್ಸ್ ಈಕ್ವಲ್ಸ್ ಝೀರೋ ಆರ್ b ಈಕ್ವಲ್ಸ್ ಈಕ್ವಲ್ಸ್ ಝೀರೋ ಆರ್ c ಈಕ್ವಲ್ಸ್ ಈಕ್ವಲ್ಸ್ ಝೀರೋ |
06:39 | ಅಸೈನ್ಮೆಂಟ್ |
06:41 | ಎರಡು ನಂಬರ್ ಗಳನ್ನು ಯೂಸರ್ ಇಂದ ಇನ್ಪುಟ್ ಪಡೆದು, ಅವುಗಳು ಸಮವೇ ಆಲ್ಲವೇ ಎಂದು ನಾಟ್ ಆಪರೇಟರ್ ಉಪಯೋಗಿಸಿ ಕಂಡುಹಿಡಿಯಿರಿ.
ಸುಳಿವು: a ನಾಟ್ ಈಕ್ವಲ್ ಟು b |
06:54 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. |
06:57 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
06:59 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
07:03 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿಕಾರ್ಯಗಾರವನ್ನು ನಡೆಸುತ್ತದೆ. |
07:07 | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
07:11 | ಹೆಚ್ಚಿನ ಮಾಹಿತಿಗಾಗಿ,contact@spoken-tutorial.org ಗೆ ಬರೆಯಿರಿ. |
07:18 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. |
07:21 | ಇದುರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದಬೆಂಬಲಿತವಾಗಿದೆ. |
07:27 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. |
07:37 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ. ಇದರ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |