Blender/C2/Types-of-Windows-Properties-Part-3/Kannada

From Script | Spoken-Tutorial
Revision as of 17:49, 21 October 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:05 ಬ್ಲೆಂಡರ್ ನ ಟ್ಯುಟೋರಿಯಲ್ಸ್ ಸರಣಿಗೆ ಸ್ವಾಗತ.
00:09 ಈ ಟ್ಯುಟೋರಿಯಲ್, ಬ್ಲೆಂಡರ್ 2.59 ನಲ್ಲಿಯ ಪ್ರಾಪರ್ಟೀಸ್ ವಿಂಡೋ ಕುರಿತು ಆಗಿದೆ.
00:16 ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೇಕರ್.
00:28 ಈ ಟ್ಯುಟೋರಿಯಲ್ ಅನ್ನು ನೋಡಿದ ನಂತರ, ಪ್ರಾಪರ್ಟೀಸ್ ವಿಂಡೋ ಎಂದರೇನು;
00:35 ಪ್ರಾಪರ್ಟೀಸ್ ವಿಂಡೋದಲ್ಲಿ ಒಬ್ಜೆಕ್ಟ್ ಕನ್ಸ್ಟ್ರೇಂಟ್ಸ್ ಪ್ಯಾನಲ್, ಮೋಡಿಫೈಯರ್ಸ್ ಪ್ಯಾನಲ್ ಮತ್ತು ಓಬ್ಜೆಕ್ಟ್ ಡೇಟಾ ಪ್ಯಾನಲ್ ಗಳೆಂದರೇನು ;
00:44 ಮತ್ತು ಪ್ರಾಪರ್ಟೀಸ್ ವಿಂಡೋದಲ್ಲಿ ಒಬ್ಜೆಕ್ಟ್ ಕನ್ಸ್ಟ್ರೇಂಟ್ಸ್ ಪ್ಯಾನಲ್, ಮೋಡಿಫೈಯರ್ಸ್ ಪ್ಯಾನಲ್ ಮತ್ತು ಓಬ್ಜೆಕ್ಟ್ ಡೇಟಾ ಪ್ಯಾನಲ್ ಗಳಲ್ಲಿ ಇರುವ ವಿವಿಧ ಸೆಟ್ಟಿಂಗ್ ಗಳು ಮುಂತಾದವುಗಳ ಬಗೆಗೆ ನಾವು ಕಲಿಯುವೆವು.
00:57 ಬ್ಲೆಂಡರ್ ಇಂಟರ್ಫೇಸ್ ನ ಮೂಲ ಅಂಶಗಳನ್ನು ನೀವು ತಿಳಿದಿರುವಿರಿ ಎಂದು ನಾನು ಭಾವಿಸುತ್ತೇನೆ.
01:01 ಇಲ್ಲವಾದಲ್ಲಿ, ದಯವಿಟ್ಟು ನಮ್ಮ ಮೊದಲಿನ ಟ್ಯುಟೋರಿಯಲ್ Basic Description of the Blender Interface (ಬೇಸಿಕ್ ಡಿಸ್ಕ್ರಿಪ್ಶನ್ ಆಫ್ ದ ಬ್ಲೆಂಡರ್ ಇಂಟರ್ಫೇಸ್) ಎನ್ನುವುದನ್ನು ನೋಡಿರಿ.
01:10 ಈ ಪ್ರಾಪರ್ಟೀಸ್ ವಿಂಡೋ ಎನ್ನುವುದು ನಮ್ಮ ಸ್ಕ್ರೀನ್ ನ ಬಲಬದಿಗೆ ಇರುತ್ತದೆ.
01:16 ಪ್ರಾಪರ್ಟೀಸ್ ವಿಂಡೋದ ಮೊದಲ ನಾಲ್ಕು ಪ್ಯಾನಲ್ ಗಳು ಹಾಗೂ ಅವುಗಳ ಸೆಟ್ಟಿಂಗ್ ಗಳನ್ನು ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಈಗಾಗಲೇ ನೋಡಿದ್ದೇವೆ.
01:23 ಪ್ರಾಪರ್ಟೀಸ್ ವಿಂಡೋದಲ್ಲಿಯ ಮುಂದಿನ ಪ್ಯಾನಲ್ ಗಳನ್ನು ನಾವು ನೋಡೋಣ. ಮೊದಲು, ಉತ್ತಮ ವೀಕ್ಷಣೆ ಮತ್ತು ಗ್ರಹಿಕೆಗಳಿಗಾಗಿ ನಮ್ಮ ಪ್ರಾಪರ್ಟೀಸ್ ವಿಂಡೋವನ್ನು ನಾವು ರಿಸೈಜ್ ಮಾಡಲೇಬೇಕು.
01:33 ಪ್ರಾಪರ್ಟೀಸ್ ವಿಂಡೋದ ಎಡ ಅಂಚಿನ ಮೇಲೆ ಲೆಫ್ಟ್ ಕ್ಲಿಕ್ ಮಾಡಿ, ಹಿಡಿಯಿರಿ ಮತ್ತು ಎಡಗಡೆಗೆ ಎಳೆಯಿರಿ.
01:43 ಪ್ರಾಪರ್ಟೀಸ್ ವಿಂಡೋದಲ್ಲಿಯ ಆಯ್ಕೆಗಳನ್ನು ಈಗ ನಾವು ಹೆಚ್ಚು ಸ್ಪಷ್ಟವಾಗಿ ನೋಡಬಹುದು.
01:47 ಬ್ಲೆಂಡರ್ ನ ವಿಂಡೋ ಗಳನ್ನು ಹೇಗೆ ರಿಸೈಜ್ ಮಾಡುವದೆಂದು ತಿಳಿಯಲು, How to Change Window Types in Blender (ಹೌ ಟು ಚೇಂಜ್ ವಿಂಡೋ ಟೈಪ್ಸ್ ಇನ್ ಬ್ಲೆಂಡರ್) ಎನ್ನುವ ನಮ್ಮ ಟ್ಯುಟೋರಿಯಲ್ ನೋಡಿರಿ.
01:57 ಪ್ರಾಪರ್ಟೀಸ್ ವಿಂಡೋದ ಮೇಲಿನ ಸಾಲಿಗೆ ಹೋಗಿರಿ.
02:03 Chain ಐಕಾನ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಇದು Object Constraints ಎನ್ನುವ ಪ್ಯಾನಲ್ ಆಗಿದೆ.
02:12 Add constraint (ಕನ್ಸ್ಟ್ರೇಂಟ್) ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಈ ಮೆನ್ಯು ಹಲವಾರು ಒಬ್ಜೆಕ್ಟ್ ಕನ್ಸ್ಟ್ರೇಂಟ್ ಗಳನ್ನು ಲಿಸ್ಟ್ ಮಾಡುತ್ತದೆ.
02:19 ಇಲ್ಲಿ ಮುಖ್ಯವಾಗಿ Transform, Tracking ಮತ್ತು Relationship ಎನ್ನುವ ಮೂರು ವಿಧದ ಕನ್ಸ್ಟ್ರೇಂಟ್ ಗಳು ಇರುತ್ತವೆ.
02:31 Copy location ಎನ್ನುವ ಕನ್ಸ್ಟ್ರೇಂಟ್, ಒಂದು ಒಬ್ಜೆಕ್ಟ್ ನ ಲೊಕೇಶನ್ ಅನ್ನು ನಕಲು ಮಾಡಿ ಇನ್ನೊಂದು ಒಬ್ಜೆಕ್ಟ್ ಗೆ ಅದನ್ನು ಸೆಟ್ ಮಾಡುತ್ತದೆ.
02:38 3D ವ್ಯೂಗೆ ಹೋಗಿರಿ. Lamp ಅನ್ನು ಆಯ್ಕೆಮಾಡಲು ಅದರ ಮೇಲೆ ರೈಟ್ ಕ್ಲಿಕ್ ಮಾಡಿರಿ.
02:45 ಒಬ್ಜೆಕ್ಟ್ ಕನ್ಸ್ಟ್ರೇಂಟ್ಸ್ ಪ್ಯಾನಲ್ ಗೆ ಹಿಂತಿರುಗಿರಿ.
02:49 Add constraint ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
02:52 Transform ನ ಕೆಳಗಿರುವ Copy location ಎನ್ನುವುದನ್ನು ಆಯ್ಕೆಮಾಡಿರಿ.
02:57 Add constraint ಎನ್ನುವುದರ ಮೆನ್ಯು ಬಾರ್ ನ ಕೆಳಗೆ ಒಂದು ಹೊಸ ಪ್ಯಾನಲ್ ಕಾಣಿಸುತ್ತದೆ.
03:05 ಈ ಪ್ಯಾನಲ್, ಕಾಪೀ ಲೊಕೇಶನ್ ಕನ್ಸ್ಟ್ರೇಂಟ್ ಗಾಗಿ ಸೆಟ್ಟಿಂಗ್ ಗಳನ್ನು ಒಳಗೊಂಡಿದೆ.
03:06 ಕಾಪೀ ಲೊಕೇಶನ್ ಪ್ಯಾನಲ್ ನಲ್ಲಿ, ಎಡಗಡೆಗೆ ಆರೆಂಜ್ ಕ್ಯೂಬ್ ಅನ್ನು ಹೊಂದಿರುವ ಈ ಬಿಳಿ ಬಣ್ಣದ ಬಾರ್, ನಿಮಗೆ ಕಾಣುತ್ತಿದೆಯೇ ?
03:12 ಇದು Target ಬಾರ್ ಆಗಿದೆ. ಇಲ್ಲಿ ನಾವು, ನಮ್ಮ ಟಾರ್ಗೆಟ್ ಒಬ್ಜೆಕ್ಟ್ ನ ಹೆಸರನ್ನು ಸೇರಿಸುತ್ತೇವೆ.
03:21 Target ಬಾರ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
03:24 ಲಿಸ್ಟ್ ನಿಂದ Cube ಅನ್ನು ಆಯ್ಕೆಮಾಡಿರಿ.
03:29 ಕಾಪೀ ಲೊಕೇಶನ್ ಕನ್ಸ್ಟ್ರೇಂಟ್, ಕ್ಯೂಬ್ನ ಸ್ಥಾನದ ನಿರ್ದೇಶಾಂಕಗಳನ್ನು ನಕಲು ಮಾಡಿ ಅವುಗಳನ್ನು ಲ್ಯಾಂಪ್ ಗೆ ಅಳವಡಿಸುತ್ತದೆ.
03:37 ಇದರ ಪರಿಣಾಮವಾಗಿ, ಲ್ಯಾಂಪ್, ಕ್ಯೂಬ್ ಇರುವ ಸ್ಥಳಕ್ಕೆ ಸ್ಥಾನಾಂತರವಾಗುತ್ತದೆ.
03:42 ಕಾಪೀ ಲೊಕೇಶನ್ ಪ್ಯಾನಲ್ ನ ಮೇಲ್ಗಡೆ, ಬಲಕ್ಕೆ ಇರುವ ಕ್ರಾಸ್ ಐಕಾನ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
03:50 ಈ ಕನ್ಸ್ಟ್ರೇಂಟ್ ಅನ್ನು ತೆಗೆಯಲಾಗಿದೆ. ಲ್ಯಾಂಪ್, ತನ್ನ ಮೊದಲಿನ ಸ್ಥಳಕ್ಕೆ ಹಿಂದಿರುಗುತ್ತದೆ.
03:58 ಹೀಗೆ, ಒಬ್ಜೆಕ್ಟ್ ಕನ್ಸ್ಟ್ರೇಂಟ್ ಈ ರೀತಿಯಲ್ಲಿ ಕೆಲಸ ಮಾಡುತ್ತದೆ.
04:02 ಒಬ್ಜೆಕ್ಟ್ ಕನ್ಸ್ಟ್ರೇಂಟ್ ಗಳನ್ನು ನಂತರದ ಟ್ಯುಟೋರಿಯಲ್ ಗಳಲ್ಲಿ ಹಲವಾರು ಬಾರಿ ನಾವು ಬಳಸುತ್ತೇವೆ.
04:07 ಇದೀಗ, ನಾವು ಪ್ರಾಪರ್ಟೀಸ್ ವಿಂಡೋದಲ್ಲಿಯ ಮುಂದಿನ ಪ್ಯಾನಲ್ ಗೆ ನಡೆಯೋಣ. 3D ವ್ಯೂಗೆ ಹೋಗಿರಿ.
04:16 Cube ಅನ್ನು ಆಯ್ಕೆಮಾಡಲು ಅದರ ಮೇಲೆ ರೈಟ್ ಕ್ಲಿಕ್ ಮಾಡಿರಿ.
04:19 ಪ್ರಾಪರ್ಟೀಸ್ ವಿಂಡೋದ ಮೇಲಿನ ಸಾಲಿನಲ್ಲಿರುವ ಮುಂದಿನ ಐಕಾನ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
04:26 ಇದು Modifiers ಎನ್ನುವ ಪ್ಯಾನಲ್ ಆಗಿದೆ.
04:29 ಮೋಡಿಫೈಯರ್ ಎನ್ನುವುದು ಒಬ್ಜೆಕ್ಟ್ ಅನ್ನು, ಅದರ ಮೂಲ ಗುಣಲಕ್ಷಣಗಳನ್ನು ಬದಲಿಸದೇ ವಿರೂಪಗೊಳಿಸುತ್ತದೆ. ನನಗೆ ತೋರಿಸಲು ಅವಕಾಶ ಕೊಡಿರಿ.
04:36 ಮೋಡಿಫೈಯರ್ಸ್ ಪ್ಯಾನಲ್ ಗೆ ಹಿಂದಿರುಗಿರಿ.
04:40 Add Modifier ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಇಲ್ಲಿ ಮುಖ್ಯವಾಗಿ Generate, Deform ಮತ್ತು Simulate ಎನ್ನುವ ಮೂರು ವಿಧದ ಮೋಡಿಫೈಯರ್ ಗಳಿವೆ.
04:54 ಮೆನ್ಯು ವಿನ ಕೆಳಗಿನ ಎಡ ಮೂಲೆಯಲ್ಲಿರುವ Subdivision Surface ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
05:02 ಈ ಕ್ಯೂಬ್, ಒಂದು ವಿಕೃತ, ಗುಂಡಗಿರುವ ವಸ್ತು ಆಗಿ ವಿರೂಪಗೊಳ್ಳುತ್ತದೆ. ಆಡ್ ಮೋಡಿಫೈಯರ್ ದ ಮೆನ್ಯು ಬಾರ್ ನ ಕೆಳಗೆ ಒಂದು ಹೊಸ ಪ್ಯಾನಲ್ ಕಾಣಿಸಿಕೊಂಡಿದೆ.
05:10 ಈ ಪ್ಯಾನಲ್, ಸಬ್‌ಡಿವಿಷನ್ ಸರ್ಫೇಸ್ ಮೋಡಿಫೈಯರ್ ಗಾಗಿ ಸೆಟ್ಟಿಂಗ್ ಗಳನ್ನು ತೋರಿಸುತ್ತದೆ.
05:16 View 1 ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ನಿಮ್ಮ ಕೀಬೋರ್ಡ್ನ ಮೇಲೆ 3 ಯನ್ನು ಟೈಪ್ ಮಾಡಿ Enter ಕೀಯನ್ನು ಒತ್ತಿರಿ.
05:25 ಈಗ ಕ್ಯೂಬ್, ಚ೦ಡು ಅಥವಾ ಗೋಳದ ಹಾಗೆ ಕಾಣುತ್ತದೆ.
05:28 ನಂತರದ ಟ್ಯುಟೋರಿಯಲ್ ಗಳಲ್ಲಿ, ಸಬ್‌ಡಿವಿಷನ್ ಸರ್ಫೇಸ್ ಮೋಡಿಫೈಯರ್ಸ್ ಗಳ ಬಗೆಗೆ ವಿವರವಾಗಿ ನಾವು ಕಲಿಯುವೆವು.
05:35 ಸಬ್‌ಡಿವಿಷನ್ ಸರ್ಫೇಸ್ ಪ್ಯಾನಲ್ ನ ಮೇಲಿನ ಬಲಮೂಲೆಯಲ್ಲಿರುವ ಕ್ರಾಸ್ ಐಕಾನ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
05:43 ಈ ಮೋಡಿಫೈಯರ್ ಅನ್ನು ತೆಗೆಯಲಾಗಿದೆ. ಕ್ಯೂಬ್, ತನ್ನ ಮೊದಲಿನ ರೂಪಕ್ಕೆ ಬದಲಾಯಿಸುತ್ತದೆ.
05:49 ಹೀಗಾಗಿ, ಮೋಡಿಫೈಯರ್ ಎನ್ನುವುದು ಕ್ಯೂಬ್ ನ ಮೊದಲಿನ ಗುಣಲಕ್ಷಣಗಳನ್ನು ಬದಲಾಯಿಸಲಿಲ್ಲ.
05:54 ಬೇರೆ ಮೋಡಿಫೈಯರ್ಸ್ ಗಳ ಬಗೆಗೆ ವಿವರವಾಗಿ ನಾವು ನಂತರದ ಟ್ಯುಟೋರಿಯಲ್ ಗಳಲ್ಲಿ ಕಲಿಯುವೆವು.
05:59 ಪ್ರಾಪರ್ಟೀಸ್ ವಿಂಡೋದ ಮೇಲಿನ ಸಾಲಿನಲ್ಲಿರುವ inverted triangle ಐಕಾನ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
06:07 ಇದು Object Data ಎನ್ನುವ ಪ್ಯಾನಲ್ ಆಗಿದೆ.
06:10 Vertex groups ಎನ್ನುವುದು ಆಯ್ಕೆಮಾಡಿದ ಶೃಂಗಗಳ (vertices) ಸಮೂಹವನ್ನು ಗುಂಪು ಮಾಡಲು ಉಪಯೋಗಿಸಲ್ಪಡುತ್ತದೆ.
06:15 ಈ ವರ್‌ಟೆಕ್ಸ್ ಗ್ರೂಪ್ಸ್ ಅನ್ನು ಹೇಗೆ ಬಳಸುವುದೆಂದು ಹೆಚ್ಚು ಮುಂದುವರೆದ ಟ್ಯುಟೋರಿಯಲ್ ಗಳಲ್ಲಿ ನಾವು ನೋಡುವೆವು.
06:22 Shape Keys ಗಳು ಎಡಿಟ್ ಮೋಡ್ ನಲ್ಲಿ, ಓಬ್ಜೆಕ್ಟ್ ಅನ್ನು ಅನಿಮೇಟ್ ಮಾಡಲು ಬಳಸಲ್ಪಡುತ್ತವೆ.
06:28 ಶೇಪ್ ಕೀಸ್ ನ ಬಾಕ್ಸ್ ನ ಬಲತುದಿಯಲ್ಲಿ ಪ್ಲಸ್ ಸೈನ್ ನಿಮಗೆ ಕಾಣುತ್ತಿದೆಯೇ?
06:34 ಇದು, ಹೊಸದೊಂದು ಶೇಪ್ ಕೀಯನ್ನು ಓಬ್ಜೆಕ್ಟ್ ಗೆ ಸೇರಿಸಲು ಬಳಸಲ್ಪಡುತ್ತದೆ.
06:39 plus sign ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಮೊದಲನೇ ಕೀ Basis ಎನ್ನುವುದು ಆಗಿದೆ.
06:50 ನಾವು ಅನಿಮೇಟ್ ಮಾಡಲಿರುವ ಓಬ್ಜೆಕ್ಟ್ ನ ಮೂಲ ರೂಪವನ್ನು ಈ ಕೀ ಸೇವ್ ಮಾಡುತ್ತದೆ.
06:55 ಆದ್ದರಿಂದ, ನಾವು ಈ ಕೀಯನ್ನು ಮಾರ್ಪಡಿಸಲು ಸಾಧ್ಯವಿಲ್ಲ.
06:58 ಇನ್ನೊಂದು ಕೀಯನ್ನು ಸೇರಿಸಲು, plus sign ನ ಮೇಲೆ ಮತ್ತೊಮ್ಮೆ ಲೆಫ್ಟ್ ಕ್ಲಿಕ್ ಮಾಡಿರಿ. Key 1 ಎನ್ನುವುದು ಮಾರ್ಪಡಿಸಲು ಸಾಧ್ಯವಿದ್ದ ಮೊದಲನೇ ಕೀ ಆಗಿದೆ.
07:10 3D ವ್ಯೂಗೆ ಹೋಗಿರಿ.
07:13 ಎಡಿಟ್ ಮೋಡ್ ನಲ್ಲಿ ಹೋಗಲು ನಿಮ್ಮ ಕೀಬೋರ್ಡ್ ಮೇಲಿನ Tab ಅನ್ನು ಒತ್ತಿರಿ.
07:18 ಕ್ಯೂಬ್ಅನ್ನು ಸ್ಕೇಲ್ ಮಾಡಲು S ಅನ್ನು ಒತ್ತಿರಿ. ನಿಮ್ಮ ಮೌಸ್ ಅನ್ನು ಎಳೆಯಿರಿ. ಸ್ಕೇಲ್ ಅನ್ನು ದೃಢೀಕರಿಸಲು ಲೆಫ್ಟ್ ಕ್ಲಿಕ್ ಮಾಡಿರಿ.
07:29 ಓಬ್ಜೆಕ್ಟ್ ಮೋಡ್ ಗೆ ಮರಳಿ ಹೋಗಲು Tab ಅನ್ನು ಒತ್ತಿರಿ.
07:33 ಕ್ಯೂಬ್, ತನ್ನ ಮೊದಲಿನ ಸೈಜ್ ಗೆ ಹಿಂದಿರುಗಿದೆ. ಆದರೆ, ಎಡಿಟ್ ಮೋಡ್ ನಲ್ಲಿ ನಾವು ಮಾಡಿದ ಸ್ಕೇಲಿಂಗ್ ಗೆ ಏನಾಯಿತು?
07:40 ಓಬ್ಜೆಕ್ಟ್ ಡೇಟಾ ಪ್ಯಾನಲ್ ನಲ್ಲಿಯ Shape keys ನ ಬಾಕ್ಸ್ ಗೆ ಮರಳಿ ಹೋಗಿರಿ.
07:45 Key 1, ಆಕ್ಟಿವ್ ಕೀ ಆಗಿದೆ ಮತ್ತು ಬ್ಲೂ (ಬಣ್ಣದಲ್ಲಿ) ಹೈಲೈಟ್ ಆಗಿದೆ.
07:50 ಬಲಭಾಗದಲ್ಲಿ ಶೇಪ್ ಕೀಯ ಮೌಲ್ಯವಿದೆ. ಈ ಮೌಲ್ಯವನ್ನು ಕೆಳಗಡೆ ಮಾರ್ಪಡಿಸಬಹುದು.
07:57 0.000, ಈ ಮೌಲ್ಯದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
08:03 ನಿಮ್ಮ ಕೀಬೋರ್ಡ್ನ ಮೇಲೆ 1 ಅನ್ನು ಟೈಪ್ ಮಾಡಿರಿ ಮತ್ತು Enter ಕೀಯನ್ನು ಒತ್ತಿರಿ. ಈಗ ಕ್ಯೂಬ್, ಸ್ಕೇಲ್ ಮಾಡಲ್ಪಟ್ಟಿದೆ.
08:12 ನಾವು ಇನ್ನೂ ಹೆಚ್ಚು ಶೇಪ್ ಕೀಗಳನ್ನು ಸೇರಿಸುತ್ತ ಮತ್ತು ಕ್ಯೂಬನ್ನು ಮಾರ್ಪಡಿಸುತ್ತ ಹೋಗಬಹುದು.
08:17 ಈ ಬ್ಲೆಂಡರ್ ನ ಟ್ಯುಟೋರಿಯಲ್ಸ್ ಸರಣಿಯಲ್ಲಿ ಅನಿಮೇಟ್ ಮಾಡುವಾಗ ನಾನು ಶೇಪ್ ಕೀಗಳನ್ನು ಪದೇಪದೇ ಬಳಸುತ್ತಿರುವುದನ್ನು ನೀವು ನೋಡುವಿರಿ.
08:26 ಮುಂದಿನ ಸೆಟ್ಟಿಂಗ್, UV Texture ಎನ್ನುವುದು ಆಗಿದೆ. ಓಬ್ಜೆಕ್ಟ್ ಗೆ ಸೇರಿಸಿದ ಟೆಕ್ಸ್ಚರ್ ಅನ್ನು ಮಾರ್ಪಡಿಸಲು ಇದು ಬಳಸಲ್ಪಡುತ್ತದೆ.
08:33 ನಾವು ಇದನ್ನು ನಂತರದ ಟ್ಯುಟೋರಿಯಲ್ ಗಳಲ್ಲಿ ವಿವರವಾಗಿ ನೋಡುವೆವು.
08:38 ಈಗ ನೀವು ಮುಂದೆ ಹೋಗಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಬಹುದು;
08:42 ಕಾಪೀ ಲೊಕೇಶನ್ ಕನ್ಸ್ಟ್ರೇಂಟ್ ಅನ್ನು ಬಳಸಿ ಕ್ಯೂಬ್ ನ ಲೊಕೇಶನ್ ಅನ್ನು ಲ್ಯಾಂಪ್ ಗೆ ಕಾಪಿ ಮಾಡಿರಿ;
08:49 ಸಬ್‌ಡಿವಿಷನ್ ಸರ್ಫೇಸ್ ಮೋಡಿಫೈಯರ್ ಅನ್ನು ಬಳಸಿ, ಕ್ಯೂಬ್ಅನ್ನು ಗೋಳವಾಗಿ ಮಾರ್ಪಡಿಸಿರಿ; ಮತ್ತು ಶೇಪ್ ಕೀಗಳನ್ನು ಬಳಸಿ ಕ್ಯೂಬ್ಅನ್ನು ಅನಿಮೇಟ್ ಮಾಡಿರಿ.
09:00 ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ.
09:09 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ಗಳ ಮೇಲೆ ಲಭ್ಯವಿದೆ.

oscar.iitb.ac.in ಮತ್ತು spoken-tutorial.org/NMEICT-Intro

09:30 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು
09:32 ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
09:35 ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:40 ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
09:47 ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Pratik kamble, Vasudeva ahitanal