Blender/C2/Types-of-Windows-Properties-Part-3/Kannada
From Script | Spoken-Tutorial
Time | Narration |
00:05 | ಬ್ಲೆಂಡರ್ ನ ಟ್ಯುಟೋರಿಯಲ್ಸ್ ಸರಣಿಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್, ಬ್ಲೆಂಡರ್ 2.59 ನಲ್ಲಿಯ ಪ್ರಾಪರ್ಟೀಸ್ ವಿಂಡೋ ಕುರಿತು ಆಗಿದೆ. |
00:16 | ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೇಕರ್. |
00:28 | ಈ ಟ್ಯುಟೋರಿಯಲ್ ಅನ್ನು ನೋಡಿದ ನಂತರ, ಪ್ರಾಪರ್ಟೀಸ್ ವಿಂಡೋ ಎಂದರೇನು; |
00:35 | ಪ್ರಾಪರ್ಟೀಸ್ ವಿಂಡೋದಲ್ಲಿ ಒಬ್ಜೆಕ್ಟ್ ಕನ್ಸ್ಟ್ರೇಂಟ್ಸ್ ಪ್ಯಾನಲ್, ಮೋಡಿಫೈಯರ್ಸ್ ಪ್ಯಾನಲ್ ಮತ್ತು ಓಬ್ಜೆಕ್ಟ್ ಡೇಟಾ ಪ್ಯಾನಲ್ ಗಳೆಂದರೇನು ; |
00:44 | ಮತ್ತು ಪ್ರಾಪರ್ಟೀಸ್ ವಿಂಡೋದಲ್ಲಿ ಒಬ್ಜೆಕ್ಟ್ ಕನ್ಸ್ಟ್ರೇಂಟ್ಸ್ ಪ್ಯಾನಲ್, ಮೋಡಿಫೈಯರ್ಸ್ ಪ್ಯಾನಲ್ ಮತ್ತು ಓಬ್ಜೆಕ್ಟ್ ಡೇಟಾ ಪ್ಯಾನಲ್ ಗಳಲ್ಲಿ ಇರುವ ವಿವಿಧ ಸೆಟ್ಟಿಂಗ್ ಗಳು ಮುಂತಾದವುಗಳ ಬಗೆಗೆ ನಾವು ಕಲಿಯುವೆವು. |
00:57 | ಬ್ಲೆಂಡರ್ ಇಂಟರ್ಫೇಸ್ ನ ಮೂಲ ಅಂಶಗಳನ್ನು ನೀವು ತಿಳಿದಿರುವಿರಿ ಎಂದು ನಾನು ಭಾವಿಸುತ್ತೇನೆ. |
01:01 | ಇಲ್ಲವಾದಲ್ಲಿ, ದಯವಿಟ್ಟು ನಮ್ಮ ಮೊದಲಿನ ಟ್ಯುಟೋರಿಯಲ್ Basic Description of the Blender Interface (ಬೇಸಿಕ್ ಡಿಸ್ಕ್ರಿಪ್ಶನ್ ಆಫ್ ದ ಬ್ಲೆಂಡರ್ ಇಂಟರ್ಫೇಸ್) ಎನ್ನುವುದನ್ನು ನೋಡಿರಿ. |
01:10 | ಈ ಪ್ರಾಪರ್ಟೀಸ್ ವಿಂಡೋ ಎನ್ನುವುದು ನಮ್ಮ ಸ್ಕ್ರೀನ್ ನ ಬಲಬದಿಗೆ ಇರುತ್ತದೆ. |
01:16 | ಪ್ರಾಪರ್ಟೀಸ್ ವಿಂಡೋದ ಮೊದಲ ನಾಲ್ಕು ಪ್ಯಾನಲ್ ಗಳು ಹಾಗೂ ಅವುಗಳ ಸೆಟ್ಟಿಂಗ್ ಗಳನ್ನು ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಈಗಾಗಲೇ ನೋಡಿದ್ದೇವೆ. |
01:23 | ಪ್ರಾಪರ್ಟೀಸ್ ವಿಂಡೋದಲ್ಲಿಯ ಮುಂದಿನ ಪ್ಯಾನಲ್ ಗಳನ್ನು ನಾವು ನೋಡೋಣ. ಮೊದಲು, ಉತ್ತಮ ವೀಕ್ಷಣೆ ಮತ್ತು ಗ್ರಹಿಕೆಗಳಿಗಾಗಿ ನಮ್ಮ ಪ್ರಾಪರ್ಟೀಸ್ ವಿಂಡೋವನ್ನು ನಾವು ರಿಸೈಜ್ ಮಾಡಲೇಬೇಕು. |
01:33 | ಪ್ರಾಪರ್ಟೀಸ್ ವಿಂಡೋದ ಎಡ ಅಂಚಿನ ಮೇಲೆ ಲೆಫ್ಟ್ ಕ್ಲಿಕ್ ಮಾಡಿ, ಹಿಡಿಯಿರಿ ಮತ್ತು ಎಡಗಡೆಗೆ ಎಳೆಯಿರಿ. |
01:43 | ಪ್ರಾಪರ್ಟೀಸ್ ವಿಂಡೋದಲ್ಲಿಯ ಆಯ್ಕೆಗಳನ್ನು ಈಗ ನಾವು ಹೆಚ್ಚು ಸ್ಪಷ್ಟವಾಗಿ ನೋಡಬಹುದು. |
01:47 | ಬ್ಲೆಂಡರ್ ನ ವಿಂಡೋ ಗಳನ್ನು ಹೇಗೆ ರಿಸೈಜ್ ಮಾಡುವದೆಂದು ತಿಳಿಯಲು, How to Change Window Types in Blender (ಹೌ ಟು ಚೇಂಜ್ ವಿಂಡೋ ಟೈಪ್ಸ್ ಇನ್ ಬ್ಲೆಂಡರ್) ಎನ್ನುವ ನಮ್ಮ ಟ್ಯುಟೋರಿಯಲ್ ನೋಡಿರಿ. |
01:57 | ಪ್ರಾಪರ್ಟೀಸ್ ವಿಂಡೋದ ಮೇಲಿನ ಸಾಲಿಗೆ ಹೋಗಿರಿ. |
02:03 | Chain ಐಕಾನ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಇದು Object Constraints ಎನ್ನುವ ಪ್ಯಾನಲ್ ಆಗಿದೆ. |
02:12 | Add constraint (ಕನ್ಸ್ಟ್ರೇಂಟ್) ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಈ ಮೆನ್ಯು ಹಲವಾರು ಒಬ್ಜೆಕ್ಟ್ ಕನ್ಸ್ಟ್ರೇಂಟ್ ಗಳನ್ನು ಲಿಸ್ಟ್ ಮಾಡುತ್ತದೆ. |
02:19 | ಇಲ್ಲಿ ಮುಖ್ಯವಾಗಿ Transform, Tracking ಮತ್ತು Relationship ಎನ್ನುವ ಮೂರು ವಿಧದ ಕನ್ಸ್ಟ್ರೇಂಟ್ ಗಳು ಇರುತ್ತವೆ. |
02:31 | Copy location ಎನ್ನುವ ಕನ್ಸ್ಟ್ರೇಂಟ್, ಒಂದು ಒಬ್ಜೆಕ್ಟ್ ನ ಲೊಕೇಶನ್ ಅನ್ನು ನಕಲು ಮಾಡಿ ಇನ್ನೊಂದು ಒಬ್ಜೆಕ್ಟ್ ಗೆ ಅದನ್ನು ಸೆಟ್ ಮಾಡುತ್ತದೆ. |
02:38 | 3D ವ್ಯೂಗೆ ಹೋಗಿರಿ. Lamp ಅನ್ನು ಆಯ್ಕೆಮಾಡಲು ಅದರ ಮೇಲೆ ರೈಟ್ ಕ್ಲಿಕ್ ಮಾಡಿರಿ. |
02:45 | ಒಬ್ಜೆಕ್ಟ್ ಕನ್ಸ್ಟ್ರೇಂಟ್ಸ್ ಪ್ಯಾನಲ್ ಗೆ ಹಿಂತಿರುಗಿರಿ. |
02:49 | Add constraint ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
02:52 | Transform ನ ಕೆಳಗಿರುವ Copy location ಎನ್ನುವುದನ್ನು ಆಯ್ಕೆಮಾಡಿರಿ. |
02:57 | Add constraint ಎನ್ನುವುದರ ಮೆನ್ಯು ಬಾರ್ ನ ಕೆಳಗೆ ಒಂದು ಹೊಸ ಪ್ಯಾನಲ್ ಕಾಣಿಸುತ್ತದೆ. |
03:05 | ಈ ಪ್ಯಾನಲ್, ಕಾಪೀ ಲೊಕೇಶನ್ ಕನ್ಸ್ಟ್ರೇಂಟ್ ಗಾಗಿ ಸೆಟ್ಟಿಂಗ್ ಗಳನ್ನು ಒಳಗೊಂಡಿದೆ.ಕಾಪೀ ಲೊಕೇಶನ್ ಪ್ಯಾನಲ್ ನಲ್ಲಿ, ಎಡಗಡೆಗೆ ಆರೆಂಜ್ ಕ್ಯೂಬ್ ಅನ್ನು ಹೊಂದಿರುವ ಈ ಬಿಳಿ ಬಣ್ಣದ ಬಾರ್, ನಿಮಗೆ ಕಾಣುತ್ತಿದೆಯೇ ? |
03:12 | ಇದು Target ಬಾರ್ ಆಗಿದೆ. ಇಲ್ಲಿ ನಾವು, ನಮ್ಮ ಟಾರ್ಗೆಟ್ ಒಬ್ಜೆಕ್ಟ್ ನ ಹೆಸರನ್ನು ಸೇರಿಸುತ್ತೇವೆ. |
03:21 | Target ಬಾರ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
03:24 | ಲಿಸ್ಟ್ ನಿಂದ Cube ಅನ್ನು ಆಯ್ಕೆಮಾಡಿರಿ. |
03:29 | ಕಾಪೀ ಲೊಕೇಶನ್ ಕನ್ಸ್ಟ್ರೇಂಟ್, ಕ್ಯೂಬ್ನ ಸ್ಥಾನದ ನಿರ್ದೇಶಾಂಕಗಳನ್ನು ನಕಲು ಮಾಡಿ ಅವುಗಳನ್ನು ಲ್ಯಾಂಪ್ ಗೆ ಅಳವಡಿಸುತ್ತದೆ. |
03:37 | ಇದರ ಪರಿಣಾಮವಾಗಿ, ಲ್ಯಾಂಪ್, ಕ್ಯೂಬ್ ಇರುವ ಸ್ಥಳಕ್ಕೆ ಸ್ಥಾನಾಂತರವಾಗುತ್ತದೆ. |
03:42 | ಕಾಪೀ ಲೊಕೇಶನ್ ಪ್ಯಾನಲ್ ನ ಮೇಲ್ಗಡೆ, ಬಲಕ್ಕೆ ಇರುವ ಕ್ರಾಸ್ ಐಕಾನ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
03:50 | ಈ ಕನ್ಸ್ಟ್ರೇಂಟ್ ಅನ್ನು ತೆಗೆಯಲಾಗಿದೆ. ಲ್ಯಾಂಪ್, ತನ್ನ ಮೊದಲಿನ ಸ್ಥಳಕ್ಕೆ ಹಿಂದಿರುಗುತ್ತದೆ. |
03:58 | ಹೀಗೆ, ಒಬ್ಜೆಕ್ಟ್ ಕನ್ಸ್ಟ್ರೇಂಟ್ ಈ ರೀತಿಯಲ್ಲಿ ಕೆಲಸ ಮಾಡುತ್ತದೆ. |
04:02 | ಒಬ್ಜೆಕ್ಟ್ ಕನ್ಸ್ಟ್ರೇಂಟ್ ಗಳನ್ನು ನಂತರದ ಟ್ಯುಟೋರಿಯಲ್ ಗಳಲ್ಲಿ ಹಲವಾರು ಬಾರಿ ನಾವು ಬಳಸುತ್ತೇವೆ. |
04:07 | ಇದೀಗ, ನಾವು ಪ್ರಾಪರ್ಟೀಸ್ ವಿಂಡೋದಲ್ಲಿಯ ಮುಂದಿನ ಪ್ಯಾನಲ್ ಗೆ ನಡೆಯೋಣ. 3D ವ್ಯೂಗೆ ಹೋಗಿರಿ. |
04:16 | Cube ಅನ್ನು ಆಯ್ಕೆಮಾಡಲು ಅದರ ಮೇಲೆ ರೈಟ್ ಕ್ಲಿಕ್ ಮಾಡಿರಿ. |
04:19 | ಪ್ರಾಪರ್ಟೀಸ್ ವಿಂಡೋದ ಮೇಲಿನ ಸಾಲಿನಲ್ಲಿರುವ ಮುಂದಿನ ಐಕಾನ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
04:26 | ಇದು Modifiers ಎನ್ನುವ ಪ್ಯಾನಲ್ ಆಗಿದೆ. |
04:29 | ಮೋಡಿಫೈಯರ್ ಎನ್ನುವುದು ಒಬ್ಜೆಕ್ಟ್ ಅನ್ನು, ಅದರ ಮೂಲ ಗುಣಲಕ್ಷಣಗಳನ್ನು ಬದಲಿಸದೇ ವಿರೂಪಗೊಳಿಸುತ್ತದೆ. ನನಗೆ ತೋರಿಸಲು ಅವಕಾಶ ಕೊಡಿರಿ. |
04:36 | ಮೋಡಿಫೈಯರ್ಸ್ ಪ್ಯಾನಲ್ ಗೆ ಹಿಂದಿರುಗಿರಿ. |
04:40 | Add Modifier ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಇಲ್ಲಿ ಮುಖ್ಯವಾಗಿ Generate, Deform ಮತ್ತು Simulate ಎನ್ನುವ ಮೂರು ವಿಧದ ಮೋಡಿಫೈಯರ್ ಗಳಿವೆ. |
04:54 | ಮೆನ್ಯು ವಿನ ಕೆಳಗಿನ ಎಡ ಮೂಲೆಯಲ್ಲಿರುವ Subdivision Surface ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
05:02 | ಈ ಕ್ಯೂಬ್, ಒಂದು ವಿಕೃತ, ಗುಂಡಗಿರುವ ವಸ್ತು ಆಗಿ ವಿರೂಪಗೊಳ್ಳುತ್ತದೆ. ಆಡ್ ಮೋಡಿಫೈಯರ್ ದ ಮೆನ್ಯು ಬಾರ್ ನ ಕೆಳಗೆ ಒಂದು ಹೊಸ ಪ್ಯಾನಲ್ ಕಾಣಿಸಿಕೊಂಡಿದೆ. |
05:10 | ಈ ಪ್ಯಾನಲ್, ಸಬ್ಡಿವಿಷನ್ ಸರ್ಫೇಸ್ ಮೋಡಿಫೈಯರ್ ಗಾಗಿ ಸೆಟ್ಟಿಂಗ್ ಗಳನ್ನು ತೋರಿಸುತ್ತದೆ. |
05:16 | View 1 ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ನಿಮ್ಮ ಕೀಬೋರ್ಡ್ನ ಮೇಲೆ 3 ಯನ್ನು ಟೈಪ್ ಮಾಡಿ Enter ಕೀಯನ್ನು ಒತ್ತಿರಿ. |
05:25 | ಈಗ ಕ್ಯೂಬ್, ಚ೦ಡು ಅಥವಾ ಗೋಳದ ಹಾಗೆ ಕಾಣುತ್ತದೆ. |
05:28 | ನಂತರದ ಟ್ಯುಟೋರಿಯಲ್ ಗಳಲ್ಲಿ, ಸಬ್ಡಿವಿಷನ್ ಸರ್ಫೇಸ್ ಮೋಡಿಫೈಯರ್ಸ್ ಗಳ ಬಗೆಗೆ ವಿವರವಾಗಿ ನಾವು ಕಲಿಯುವೆವು. |
05:35 | ಸಬ್ಡಿವಿಷನ್ ಸರ್ಫೇಸ್ ಪ್ಯಾನಲ್ ನ ಮೇಲಿನ ಬಲಮೂಲೆಯಲ್ಲಿರುವ ಕ್ರಾಸ್ ಐಕಾನ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
05:43 | ಈ ಮೋಡಿಫೈಯರ್ ಅನ್ನು ತೆಗೆಯಲಾಗಿದೆ. ಕ್ಯೂಬ್, ತನ್ನ ಮೊದಲಿನ ರೂಪಕ್ಕೆ ಬದಲಾಯಿಸುತ್ತದೆ. |
05:49 | ಹೀಗಾಗಿ, ಮೋಡಿಫೈಯರ್ ಎನ್ನುವುದು ಕ್ಯೂಬ್ ನ ಮೊದಲಿನ ಗುಣಲಕ್ಷಣಗಳನ್ನು ಬದಲಾಯಿಸಲಿಲ್ಲ. |
05:54 | ಬೇರೆ ಮೋಡಿಫೈಯರ್ಸ್ ಗಳ ಬಗೆಗೆ ವಿವರವಾಗಿ ನಾವು ನಂತರದ ಟ್ಯುಟೋರಿಯಲ್ ಗಳಲ್ಲಿ ಕಲಿಯುವೆವು. |
05:59 | ಪ್ರಾಪರ್ಟೀಸ್ ವಿಂಡೋದ ಮೇಲಿನ ಸಾಲಿನಲ್ಲಿರುವ inverted triangle ಐಕಾನ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
06:07 | ಇದು Object Data ಎನ್ನುವ ಪ್ಯಾನಲ್ ಆಗಿದೆ. |
06:10 | Vertex groups ಎನ್ನುವುದು ಆಯ್ಕೆಮಾಡಿದ ಶೃಂಗಗಳ (vertices) ಸಮೂಹವನ್ನು ಗುಂಪು ಮಾಡಲು ಉಪಯೋಗಿಸಲ್ಪಡುತ್ತದೆ. |
06:15 | ಈ ವರ್ಟೆಕ್ಸ್ ಗ್ರೂಪ್ಸ್ ಅನ್ನು ಹೇಗೆ ಬಳಸುವುದೆಂದು ಹೆಚ್ಚು ಮುಂದುವರೆದ ಟ್ಯುಟೋರಿಯಲ್ ಗಳಲ್ಲಿ ನಾವು ನೋಡುವೆವು. |
06:22 | Shape Keys ಗಳು ಎಡಿಟ್ ಮೋಡ್ ನಲ್ಲಿ, ಓಬ್ಜೆಕ್ಟ್ ಅನ್ನು ಅನಿಮೇಟ್ ಮಾಡಲು ಬಳಸಲ್ಪಡುತ್ತವೆ. |
06:28 | ಶೇಪ್ ಕೀಸ್ ನ ಬಾಕ್ಸ್ ನ ಬಲತುದಿಯಲ್ಲಿ ಪ್ಲಸ್ ಸೈನ್ ನಿಮಗೆ ಕಾಣುತ್ತಿದೆಯೇ? |
06:34 | ಇದು, ಹೊಸದೊಂದು ಶೇಪ್ ಕೀಯನ್ನು ಓಬ್ಜೆಕ್ಟ್ ಗೆ ಸೇರಿಸಲು ಬಳಸಲ್ಪಡುತ್ತದೆ. |
06:39 | plus sign ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಮೊದಲನೇ ಕೀ Basis ಎನ್ನುವುದು ಆಗಿದೆ. |
06:50 | ನಾವು ಅನಿಮೇಟ್ ಮಾಡಲಿರುವ ಓಬ್ಜೆಕ್ಟ್ ನ ಮೂಲ ರೂಪವನ್ನು ಈ ಕೀ ಸೇವ್ ಮಾಡುತ್ತದೆ. |
06:55 | ಆದ್ದರಿಂದ, ನಾವು ಈ ಕೀಯನ್ನು ಮಾರ್ಪಡಿಸಲು ಸಾಧ್ಯವಿಲ್ಲ. |
06:58 | ಇನ್ನೊಂದು ಕೀಯನ್ನು ಸೇರಿಸಲು, plus sign ನ ಮೇಲೆ ಮತ್ತೊಮ್ಮೆ ಲೆಫ್ಟ್ ಕ್ಲಿಕ್ ಮಾಡಿರಿ. Key 1 ಎನ್ನುವುದು ಮಾರ್ಪಡಿಸಲು ಸಾಧ್ಯವಿದ್ದ ಮೊದಲನೇ ಕೀ ಆಗಿದೆ. |
07:10 | 3D ವ್ಯೂಗೆ ಹೋಗಿರಿ. |
07:13 | ಎಡಿಟ್ ಮೋಡ್ ನಲ್ಲಿ ಹೋಗಲು ನಿಮ್ಮ ಕೀಬೋರ್ಡ್ ಮೇಲಿನ Tab ಅನ್ನು ಒತ್ತಿರಿ. |
07:18 | ಕ್ಯೂಬ್ಅನ್ನು ಸ್ಕೇಲ್ ಮಾಡಲು S ಅನ್ನು ಒತ್ತಿರಿ. ನಿಮ್ಮ ಮೌಸ್ ಅನ್ನು ಎಳೆಯಿರಿ. ಸ್ಕೇಲ್ ಅನ್ನು ದೃಢೀಕರಿಸಲು ಲೆಫ್ಟ್ ಕ್ಲಿಕ್ ಮಾಡಿರಿ. |
07:29 | ಓಬ್ಜೆಕ್ಟ್ ಮೋಡ್ ಗೆ ಮರಳಿ ಹೋಗಲು Tab ಅನ್ನು ಒತ್ತಿರಿ. |
07:33 | ಕ್ಯೂಬ್, ತನ್ನ ಮೊದಲಿನ ಸೈಜ್ ಗೆ ಹಿಂದಿರುಗಿದೆ. ಆದರೆ, ಎಡಿಟ್ ಮೋಡ್ ನಲ್ಲಿ ನಾವು ಮಾಡಿದ ಸ್ಕೇಲಿಂಗ್ ಗೆ ಏನಾಯಿತು? |
07:40 | ಓಬ್ಜೆಕ್ಟ್ ಡೇಟಾ ಪ್ಯಾನಲ್ ನಲ್ಲಿಯ Shape keys ನ ಬಾಕ್ಸ್ ಗೆ ಮರಳಿ ಹೋಗಿರಿ. |
07:45 | Key 1, ಆಕ್ಟಿವ್ ಕೀ ಆಗಿದೆ ಮತ್ತು ಬ್ಲೂ (ಬಣ್ಣದಲ್ಲಿ) ಹೈಲೈಟ್ ಆಗಿದೆ. |
07:50 | ಬಲಭಾಗದಲ್ಲಿ ಶೇಪ್ ಕೀಯ ಮೌಲ್ಯವಿದೆ. ಈ ಮೌಲ್ಯವನ್ನು ಕೆಳಗಡೆ ಮಾರ್ಪಡಿಸಬಹುದು. |
07:57 | 0.000, ಈ ಮೌಲ್ಯದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
08:03 | ನಿಮ್ಮ ಕೀಬೋರ್ಡ್ನ ಮೇಲೆ 1 ಅನ್ನು ಟೈಪ್ ಮಾಡಿರಿ ಮತ್ತು Enter ಕೀಯನ್ನು ಒತ್ತಿರಿ. ಈಗ ಕ್ಯೂಬ್, ಸ್ಕೇಲ್ ಮಾಡಲ್ಪಟ್ಟಿದೆ. |
08:12 | ನಾವು ಇನ್ನೂ ಹೆಚ್ಚು ಶೇಪ್ ಕೀಗಳನ್ನು ಸೇರಿಸುತ್ತ ಮತ್ತು ಕ್ಯೂಬನ್ನು ಮಾರ್ಪಡಿಸುತ್ತ ಹೋಗಬಹುದು. |
08:17 | ಈ ಬ್ಲೆಂಡರ್ ನ ಟ್ಯುಟೋರಿಯಲ್ಸ್ ಸರಣಿಯಲ್ಲಿ ಅನಿಮೇಟ್ ಮಾಡುವಾಗ ನಾನು ಶೇಪ್ ಕೀಗಳನ್ನು ಪದೇಪದೇ ಬಳಸುತ್ತಿರುವುದನ್ನು ನೀವು ನೋಡುವಿರಿ. |
08:26 | ಮುಂದಿನ ಸೆಟ್ಟಿಂಗ್, UV Texture ಎನ್ನುವುದು ಆಗಿದೆ. ಓಬ್ಜೆಕ್ಟ್ ಗೆ ಸೇರಿಸಿದ ಟೆಕ್ಸ್ಚರ್ ಅನ್ನು ಮಾರ್ಪಡಿಸಲು ಇದು ಬಳಸಲ್ಪಡುತ್ತದೆ. |
08:33 | ನಾವು ಇದನ್ನು ನಂತರದ ಟ್ಯುಟೋರಿಯಲ್ ಗಳಲ್ಲಿ ವಿವರವಾಗಿ ನೋಡುವೆವು. |
08:38 | ಈಗ ನೀವು ಮುಂದೆ ಹೋಗಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಬಹುದು; |
08:42 | ಕಾಪೀ ಲೊಕೇಶನ್ ಕನ್ಸ್ಟ್ರೇಂಟ್ ಅನ್ನು ಬಳಸಿ ಕ್ಯೂಬ್ ನ ಲೊಕೇಶನ್ ಅನ್ನು ಲ್ಯಾಂಪ್ ಗೆ ಕಾಪಿ ಮಾಡಿರಿ; |
08:49 | ಸಬ್ಡಿವಿಷನ್ ಸರ್ಫೇಸ್ ಮೋಡಿಫೈಯರ್ ಅನ್ನು ಬಳಸಿ, ಕ್ಯೂಬ್ಅನ್ನು ಗೋಳವಾಗಿ ಮಾರ್ಪಡಿಸಿರಿ; ಮತ್ತು ಶೇಪ್ ಕೀಗಳನ್ನು ಬಳಸಿ ಕ್ಯೂಬ್ಅನ್ನು ಅನಿಮೇಟ್ ಮಾಡಿರಿ. |
09:00 | ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ. |
09:09 | ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ಗಳ ಮೇಲೆ ಲಭ್ಯವಿದೆ.oscar.iitb.ac.in ಮತ್ತು spoken-tutorial.org/NMEICT-Intro |
09:30 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು |
09:32 | ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:35 | ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:40 | ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
09:47 | ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ. ಧನ್ಯವಾದಗಳು. |