Blender/C2/Types-of-Windows-File-Browser-Info-Panel/Kannada

From Script | Spoken-Tutorial
Revision as of 16:20, 16 October 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಬ್ಲೆಂಡರ್ ಟ್ಯುಟೋರಿಯಲ್ಸ್ ಸರಣಿಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ಬ್ಲೆಂಡರ್ 2.59 ರಲ್ಲಿಯ ಫೈಲ್ ಬ್ರೌಜರ್ ಮತ್ತು ಇನ್ಫೊ ಪ್ಯಾನೆಲ್ ಕುರಿತು ಇದೆ.
00:15 ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೆಕರ್ .
00:24 ಈ ಟ್ಯುಟೋರಿಯಲ್ ನೋಡಿದ ನಂತರ ಫೈಲ್ ಬ್ರೌಜರ್ ಮತ್ತು ಇನ್ಫೊ ಪ್ಯಾನೆಲ್ ಎಂದರೆ ಏನು ಹಾಗೂ ಎರಡರಲ್ಲಿಯೂ ಲಭ್ಯವಿರುವ ವಿವಿಧ ಆಯ್ಕೆಗಳನ್ನು ಕಲಿಯುತ್ತೇವೆ.
00:40 ಬ್ಲೆಂಡರ್ ಇಂಟರ್ಫೇಸ್ ನ ಮೂಲ ಅಂಶಗಳನ್ನು ನೀವು ತಿಳಿದಿರುವಿರಿ ಎಂದು ನಾನು ಭಾವಿಸುತ್ತೇನೆ.
00:45 ಇಲ್ಲವಾದಲ್ಲಿ, ದಯವಿಟ್ಟು ನಮ್ಮ ಮೊದಲಿನ ಟ್ಯುಟೋರಿಯಲ್ Basic Description of the Blender Interface (ಬೇಸಿಕ್ ಡಿಸ್ಕ್ರಿಪ್ಶನ್ ಆಫ್ ದ್ ಬ್ಲೆಂಡರ್ ಇಂಟರ್ಫೇಸ್) ಅನ್ನು ನೋಡಿರಿ.
00:55 3D ವ್ಯೂ ನ ಕೆಳಗೆ ಎಡ ಮೂಲೆಯಲ್ಲಿರುವ ಎಡಿಟರ್ ಟೈಪ್ ಮೆನ್ಯು ಗೆ ಹೋಗಿ.
01:02 ಮೆನ್ಯು ಓಪನ್ ಮಾಡಲು ಲೆಫ್ಟ್ ಕ್ಲಿಕ್ ಮಾಡಿ. ಬ್ಲೆಂಡರ್ ನಲ್ಲಿ ಲಭ್ಯವಿರುವ ವಿವಿಧ ರೀತಿಯ ವಿಂಡೋ ಗಳ ಲಿಸ್ಟ್ ನ್ನು ಇದು ಒಳಗೊಂಡಿದೆ.
01:14 File Browser ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
01:18 ಇದು ಫೈಲ್ ಬ್ರೌಜರ್ ಆಗಿದೆ.
01:21 ನಮ್ಮ ಸಿಸ್ಟೆಮ್ ನಲ್ಲಿ ಸೇವ್ ಮಾಡಿದ ನಮ್ಮ ಎಲ್ಲ ಬ್ಲೆಂಡ್ ಫೈಲ್ಸ್ ಗಳನ್ನು ಇಲ್ಲಿ ನಾವು ಗುರುತಿಸಬಹುದು.
01:29 ಈ ನಾಲ್ಕು ಆರೋ ಬಟನ್ ಗಳು ನಮ್ಮ ಡಿರೆಕ್ಟರಿ ಯಲ್ಲಿ ಸುತ್ತಾಡಲು ನಮಗೆ ಸಹಾಯ ಮಾಡುತ್ತವೆ.
01:37 ಬ್ಯಾಕ್ ಆರೋ ನಮ್ಮನ್ನು ಹಿಂದಿನ ಫೋಲ್ಡರ್ ಗೆ ಕರೆದೊಯ್ಯುವದು.
01:41 ಕೀಬೋರ್ಡ್ ಶಾರ್ಟ್ಕಟ್ ಗಾಗಿ Backspace ಒತ್ತಿರಿ.
01:48 ಫಾರ್ವರ್ಡ್ ಆರೋ ನಮ್ಮನ್ನು ಮುಂದಿನ ಫೋಲ್ಡರ್ ಗೆ ಕರೆದೊಯ್ಯುವದು.
01:52 ಕೀಬೋರ್ಡ್ ಶಾರ್ಟ್ಕಟ್ ಗಾಗಿ shift & backspace ಒತ್ತಿರಿ.
01:59 ‘ಅಪ್ ಆರೋ‘ ಬಟನ್ ನಿಮ್ಮನ್ನು ಪೇರೆಂಟ್ ಡಿರೆಕ್ಟರಿ ಗೆ ಕರೆದೊಯ್ಯುತ್ತದೆ.
02:05 ಕೀಬೋರ್ಡ್ ಶಾರ್ಟ್ಕಟ್ ಗಾಗಿ P ಒತ್ತಿರಿ.
02:10 ರಿಫ್ರೆಶ್ ಬಟನ್ ನಿಮ್ಮ ಈಗಿನ ಡಿರೆಕ್ಟರಿ ಯಲ್ಲಿನ ಫೈಲ್ ಲಿಸ್ಟ್ ನ್ನು ರಿಫ್ರೆಶ್ ಮಾಡುತ್ತದೆ.
02:19 Create new directory ಯು ಒಂದು ಹೊಸ ಡಿರೆಕ್ಟರಿ ಅಥವಾ ಫೋಲ್ಡರ್ ನ್ನು ನಿಮ್ಮ ಈಗಿನ ಡಿರೆಕ್ಟರಿ ಯಲ್ಲಿ ಸೃಷ್ಟಿ ಮಾಡುತ್ತದೆ.
02:29 ನಿಮ್ಮ ಫೈಲ್ ಅಥವಾ ಫೋಲ್ಡರ್ ಗಳನ್ನು ಅನುಕ್ರಮವಾಗಿ ಹೊಂದಿಸಲು ಈ ಬಟನ್ ಗಳು ನಿಮಗೆ ಸಹಾಯ ಮಾಡುತ್ತವೆ.
02:39 ಫಿಲ್ಟರ್ ಬಟನ್ ನಿಮ್ಮ ಡಿರೆಕ್ಟರಿ ಯಲ್ಲಿನ ಫೈಲ್ ಗಳನ್ನು ಫಿಲ್ಟರ್ ಮಾಡುವದನ್ನು ಸಕ್ರಿಯಗೊಳಿಸುವದು.
02:46 ಫಿಲ್ಟರ್ ಟ್ಯಾಬ್ ನ ಬದಿಯಲ್ಲಿರುವ ಆಕ್ಟಿವ್ ಐಕಾನ್ ಗಳು ಮಾತ್ರ ಡಿರೆಕ್ಟರಿ ಯಲ್ಲಿ ಗೋಚರಿಸುವವು.
02:57 ಅದು ಬ್ಲೆಂಡರ್ ನಲ್ಲಿಯ ಫೈಲ್ ಬ್ರೌಜರ್ ವಿಂಡೋ ಕುರಿತಾಗಿ ಇತ್ತು.
03:03 ಫೈಲ್ ಬ್ರೌಜರ್ ನ ಮೇಲಿನ ಎಡ ಮೂಲೆಯಲ್ಲಿರುವ ಎಡಿಟರ್ ಟೈಪ್ ಮೆನ್ಯು ಗೆ ಹೋಗಿ.
03:10 ಮೆನ್ಯು ಓಪನ್ ಮಾಡಲು ಲೆಫ್ಟ್ ಕ್ಲಿಕ್ ಮಾಡಿ.
03:15 3D view ಮೇಲೆ ಲೆಫ್ಟ್ ಕ್ಲಿಕ್ ಮಾಡಿ.
03:19 ನಾವು ಬ್ಲೆಂಡರ್ ನ ಡಿಫಾಲ್ಟ್ ವರ್ಕಸ್ಪೇಸ್ ಗೆ ಮರಳಿದ್ದೇವೆ.
03:24 ಈಗ ನಾವು ಇನ್ಫೋ ಪ್ಯಾನೆಲ್ ದೆಡೆಗೆ ನೋಡೋಣ.
03:30 ಇನ್ಫೋ ಪ್ಯಾನೆಲ್ ಬ್ಲೆಂಡರ್ ಇಂಟರ್ಫೇಸ್ ನ ಅತ್ಯಂತ ಮೇಲಿನ ಪ್ಯಾನೆಲ್ ಇರುತ್ತದೆ. ಇದೇ ಮೇನ್ ಮೆನ್ಯು ಪ್ಯಾನೆಲ್.
03:40 File ಮೇಲೆ ಲೆಫ್ಟ್ ಕ್ಲಿಕ್ ಮಾಡಿ.
03:42 ಇಲ್ಲಿ ನಮಗೆ ಒಪನ್ ಎ ನ್ಯೂ ಆರ್ ಆನ್ ಎಕ್ಸಿಸ್ಟಿಂಗ್ ಫೈಲ್, ಸೇವ್ ದ ಫೈಲ್, ಯೂಸರ್ ಪ್ರಿಫರೆನ್ಸಿಸ್ ವಿಂಡೋ ಮತ್ತು ಇಂಪೋರ್ಟ ಹಾಗೂ ಎಕ್ಸ್ಪೋರ್ಟ್ ಆಯ್ಕೆಗಳಿವೆ.
03:58 open ಮೇಲೆ ಲೆಫ್ಟ್ ಕ್ಲಿಕ್ ಮಾಡಿ.
04:02 ಇದು ಫೈಲ್ ಬ್ರೌಜರ್ ನಂತೆಯೇ ಇರುವ ಒಂದು ಬ್ರೌಜರ್ ನ್ನು ಓಪನ್ ಮಾಡುವದು.
04:07 ಈಗಾಗಲೇ ನಿಮ್ಮ ಸಿಸ್ಟೆಮ್ ನಲ್ಲಿ ಸೇವ್ ಮಾಡಿರುವ ಬ್ಲೆಂಡ್ ಫೈಲ್ ನ್ನು ನೀವು ಇಲ್ಲಿಂದ ಓಪನ್ ಮಾಡಬಹುದು.
04:14 ಫೈಲ್ ಓಪನ್ ಮಾಡುವ ಮೊದಲು load UI ನ್ನು ಆಕ್ಟಿವೇಟ್ ಮಾಡುವದರಿಂದ ಯೂಸರ್ ಇಂಟರ್ಫೇಸ್ ಅಥವಾ ಇದಕ್ಕಾಗಿಯೇ ನೀವು ಸೇವ್ ಮಾಡಿದ UI ಜೊತೆಗೆ ಬ್ಲೆಂಡ್ ಫೈಲ್ ಓಪನ್ ಮಾಡಲು ನಿಮಗೆ ಸಹಾಯ ಆಗುತ್ತದೆ.
04:26 ಓಪನ್ ಫೈಲ್ ವಿಂಡೋ ದಿಂದ ಹೊರಬರಲು Back to Previous ಮೇಲೆ ಲೆಫ್ಟ್ ಕ್ಲಿಕ್ ಮಾಡಿ.
04:35 ನಿಮ್ಮ ಸೀನ್ ಗೆ ನೀವು ಸೇರಿಸಬಹುದಾದ ವಿಭಿನ್ನ ಆಬ್ಜೆಕ್ಟ್ ಗಳ ರಿಪೊಸಿಟರಿ ಒಂದನ್ನು Add ಒಳಗೊಂಡಿದೆ.
04:42 Add ಮೇಲೆ ಲೆಫ್ಟ್ ಕ್ಲಿಕ್ ಮಾಡಿ.
04:46 ಆಬ್ಜೆಕ್ಟ್ ರಿಪೊಸಿಟರಿ ಇಲ್ಲಿ ಇದೆ.
04:50 ಈ ಮೆನ್ಯು ಬಳಸಿ ನಾವು ಹೊಸ ಆಬ್ಜೆಕ್ಟ್ ಗಳನ್ನು 3D ವ್ಯೂ ಗೆ ಸೇರಿಸಬಹುದು.
04:56 ಕೀಬೋರ್ಡ್ ಶಾರ್ಟ್ಕಟ್ ಗಾಗಿ shift & A ಒತ್ತಿರಿ.
05:04 ಈಗ 3D ವ್ಯೂ ಗೆ ಒಂದು ಪ್ಲೇನ್ ಅನ್ನು ನಾವು ಸೇರಿಸೋಣ.
05:09 3D ಕರ್ಸರ್ ಅನ್ನು ಚಲಿಸಲು ಸ್ಕ್ರೀನ್ ಮೇಲೆ ಎಲ್ಲಿಯಾದರೂ ಲೆಫ್ಟ್ ಕ್ಲಿಕ್ ಮಾಡಿ.
05:15 ನಾನು ಈ ಸ್ಥಳವನ್ನು ಆರಿಸಿಕೊಳ್ಳುತ್ತಿದ್ದೇನೆ.
05:20 ಆಡ್ ಮೆನ್ಯು ಮೇಲೆ ತರಲು Shift & A ಒತ್ತಿರಿ.
05:25 Mesh. plane ಮೇಲೆ ಲೆಫ್ಟ್ ಕ್ಲಿಕ್ ಮಾಡಿ.
05:30 3D ಕರ್ಸರ್ ನ ಸ್ಥಳದಲ್ಲಿ ಒಂದು ಹೊಸ ಪ್ಲೇನ್ 3D ವ್ಯೂ ಗೆ ಸೇರಿಸಲ್ಪಟ್ಟಿದೆ.
05:37 3D ಕರ್ಸರ್ ಬಗೆಗೆ ತಿಳಿಯಲು ದಯವಿಟ್ಟು Navigation – 3D cursor (ನೇವಿಗೇಶನ್-3D ಕರ್ಸರ್) ಎನ್ನುವ ಟ್ಯುಟೋರಿಯಲ್ ನೋಡಿರಿ.
05:46 ಹೀಗೆಯೇ ಇನ್ನೂ ಕೆಲವು ಆಬ್ಜೆಕ್ಟ್ ಗಳನ್ನು 3D ವ್ಯೂ ಗೆ ಸೇರಿಸಲು ನೀವು ಪ್ರಯತ್ನಿಸಬಹುದು.
05:53 ಈಗ ನಾವು ಇನ್ಫೊ ಪ್ಯಾನೆಲ್ ಗೆ ಮರಳಿ ಹೋಗೋಣ.
05:56 ರೆಂಡರ್ ಮೆನ್ಯು ಓಪನ್ ಮಾಡಲು Render ಮೇಲೆ ಲೆಫ್ಟ್ ಕ್ಲಿಕ್ ಮಾಡಿ.
06:00 ರೆಂಡರ್ ಇಮೇಜ್, ರೆಂಡರ್ ಅನಿಮೇಶನ್, ಶೋ ಆರ್ ಹೈಡ್ ರೆಂಡರ್ ಮುಂತಾದ ಇಮೇಜ್ ಅಥವಾ ವಿಡಿಯೋ ರೆಂಡರ್ ನ ಆಯ್ಕೆಗಳನ್ನು Render ಒಳಗೊಂಡಿದೆ.
06:14 ರೆಂಡರ್ ಸೆಟಿಂಗ್ಸ್ ನ್ನು ಮುಂದಿನ ಟ್ಯುಟೋರಿಯಲ್ ಗಳಲ್ಲಿ ವಿವರವಾಗಿ ಹೇಳಲಾಗುವದು.
06:19 ಇನ್ಫೊ ಪ್ಯಾನೆಲ್ ನಲ್ಲಿ Help ನ ಬದಿಯಲ್ಲಿರುವ ಸ್ಕ್ವೇರ್ ಐಕಾನ್ ಗೆ ಹೋಗಿ.
06:26 ಇದು ಚೂಸ್ ಸ್ಕ್ರೀನ್ ಲೇಔಟ್ ಇದೆ.
06:31 ನಾವು ಕೆಲಸ ಮಾಡುತ್ತಿರುವ ಡಿಫಾಲ್ಟ್ ಬ್ಲೆಂಡರ್ ಇಂಟರ್ಫೇಸ್ ಅನ್ನು ಇದು ನಮಗೆ ತೋರಿಸುತ್ತದೆ.
06:37 Choose Screen Layout ಮೇಲೆ ಲೆಫ್ಟ್ ಕ್ಲಿಕ್ ಮಾಡಿ.
06:41 ಈ ಲಿಸ್ಟ್ ನಿಮಗೆ ವಿವಿಧ ಲೇಔಟ್ ಗಳಿಗಾಗಿ ಆಯ್ಕೆಗಳನ್ನು ಕೊಡುತ್ತದೆ.
06:48 ಅನಿಮೇಶನ್, ಕಂಪೋಸಿಟಿಂಗ್, ಗೇಮ್ ಲಾಜಿಕ್, ವಿಡಿಯೊ ಎಡಿಟಿಂಗ್.
06:55 ನಿಮ್ಮ ಅವಶ್ಯಕತೆಗೆ ಅನುಸಾರವಾಗಿ ನೀವು ಯಾವುದೇ ಒಂದನ್ನು ಆರಿಸಿಕೊಳ್ಳಬಹುದು.
07:04 ಚೂಸ್ ಸ್ಕ್ರೀನ್ ಲೇಔಟ್ ನಿಂದ ಹೊರಬರಲು ಬ್ಲೆಂಡರ್ ಸ್ಕ್ರೀನ್ ಮೇಲೆ ಎಲ್ಲಿಯಾದರೂ ಲೆಫ್ಟ್ ಕ್ಲಿಕ್ ಮಾಡಿ ಅಥವಾ ನಿಮ್ಮ ಕೀಬೋರ್ಡ್ ಮೇಲಿನ Esc ಒತ್ತಿ.
07:15 Scene ಈಗ ನಾವು ಕೆಲಸ ಮಾಡುತ್ತಿರುವ ಸೀನ್ ಅನ್ನು ತೋರಿಸುತ್ತದೆ.
07:22 ಇದು ಇನ್ಫೊ ಪ್ಯಾನೆಲ್ ಕುರಿತಾಗಿ ಇತ್ತು.
07:25 ಈಗ, ಬ್ಲೆಂಡರ್ ನಲ್ಲಿಯ ಫೈಲ್ ಬ್ರೌಜರ್ ಉಪಯೋಗಿಸಿ ನಿಮ್ಮ ಸಿಸ್ಟೆಮ್ ನಲ್ಲಿ ಒಂದು ಹೊಸ ಡಿರೆಕ್ಟರಿ ಕ್ರಿಯೇಟ್ ಮಾಡಲು ಪ್ರಯತ್ನಿಸಿ.
07:32 ನಂತರ ಸ್ಕ್ರೀನ್ ದ ಲೇಔಟ್ ಅನ್ನು ಡಿಫಾಲ್ಟ್ ನಿಂದ ಅನಿಮೇಶನ್ ಗೆ ಬದಲಾಯಿಸಿರಿ.
07:39 ಮತ್ತು ಇಲ್ಲಿಗೆ ಫೈಲ್ ಬ್ರೌಜರ್ ಮತ್ತು ಇನ್ಫೊ ಪ್ಯಾನೆಲ್ ಬಗೆಗಿನ ಈ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ.
07:47 ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ.
07:55 ಇದರ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನ ಲಿಂಕ್ ಗಳ ಮೇಲೆ ಲಭ್ಯವಿದೆ.
08:00 oscar.iitb.ac.in ಮತ್ತು spoken-tutorial.org/NMEICT-Intro.
08:14 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು-
08:16 ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
08:20 ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:25 ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
08:32 ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Vasudeva ahitanal