Blender/C2/Types-of-Windows-File-Browser-Info-Panel/Kannada
From Script | Spoken-Tutorial
Time | Narration |
00:01 | ಬ್ಲೆಂಡರ್ ಟ್ಯುಟೋರಿಯಲ್ಸ್ ಸರಣಿಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ಬ್ಲೆಂಡರ್ 2.59 ರಲ್ಲಿಯ ಫೈಲ್ ಬ್ರೌಜರ್ ಮತ್ತು ಇನ್ಫೊ ಪ್ಯಾನೆಲ್ ಕುರಿತು ಇದೆ. |
00:15 | ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೆಕರ್ . |
00:24 | ಈ ಟ್ಯುಟೋರಿಯಲ್ ನೋಡಿದ ನಂತರ ಫೈಲ್ ಬ್ರೌಜರ್ ಮತ್ತು ಇನ್ಫೊ ಪ್ಯಾನೆಲ್ ಎಂದರೆ ಏನು ಹಾಗೂ ಎರಡರಲ್ಲಿಯೂ ಲಭ್ಯವಿರುವ ವಿವಿಧ ಆಯ್ಕೆಗಳನ್ನು ಕಲಿಯುತ್ತೇವೆ. |
00:40 | ಬ್ಲೆಂಡರ್ ಇಂಟರ್ಫೇಸ್ ನ ಮೂಲ ಅಂಶಗಳನ್ನು ನೀವು ತಿಳಿದಿರುವಿರಿ ಎಂದು ನಾನು ಭಾವಿಸುತ್ತೇನೆ. |
00:45 | ಇಲ್ಲವಾದಲ್ಲಿ, ದಯವಿಟ್ಟು ನಮ್ಮ ಮೊದಲಿನ ಟ್ಯುಟೋರಿಯಲ್ Basic Description of the Blender Interface (ಬೇಸಿಕ್ ಡಿಸ್ಕ್ರಿಪ್ಶನ್ ಆಫ್ ದ್ ಬ್ಲೆಂಡರ್ ಇಂಟರ್ಫೇಸ್) ಅನ್ನು ನೋಡಿರಿ. |
00:55 | 3D ವ್ಯೂ ನ ಕೆಳಗೆ ಎಡ ಮೂಲೆಯಲ್ಲಿರುವ ಎಡಿಟರ್ ಟೈಪ್ ಮೆನ್ಯು ಗೆ ಹೋಗಿ. |
01:02 | ಮೆನ್ಯು ಓಪನ್ ಮಾಡಲು ಲೆಫ್ಟ್ ಕ್ಲಿಕ್ ಮಾಡಿ. ಬ್ಲೆಂಡರ್ ನಲ್ಲಿ ಲಭ್ಯವಿರುವ ವಿವಿಧ ರೀತಿಯ ವಿಂಡೋ ಗಳ ಲಿಸ್ಟ್ ನ್ನು ಇದು ಒಳಗೊಂಡಿದೆ. |
01:14 | File Browser ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
01:18 | ಇದು ಫೈಲ್ ಬ್ರೌಜರ್ ಆಗಿದೆ. |
01:21 | ನಮ್ಮ ಸಿಸ್ಟೆಮ್ ನಲ್ಲಿ ಸೇವ್ ಮಾಡಿದ ನಮ್ಮ ಎಲ್ಲ ಬ್ಲೆಂಡ್ ಫೈಲ್ಸ್ ಗಳನ್ನು ಇಲ್ಲಿ ನಾವು ಗುರುತಿಸಬಹುದು. |
01:29 | ಈ ನಾಲ್ಕು ಆರೋ ಬಟನ್ ಗಳು ನಮ್ಮ ಡಿರೆಕ್ಟರಿ ಯಲ್ಲಿ ಸುತ್ತಾಡಲು ನಮಗೆ ಸಹಾಯ ಮಾಡುತ್ತವೆ. |
01:37 | ಬ್ಯಾಕ್ ಆರೋ ನಮ್ಮನ್ನು ಹಿಂದಿನ ಫೋಲ್ಡರ್ ಗೆ ಕರೆದೊಯ್ಯುವದು. |
01:41 | ಕೀಬೋರ್ಡ್ ಶಾರ್ಟ್ಕಟ್ ಗಾಗಿ Backspace ಒತ್ತಿರಿ. |
01:48 | ಫಾರ್ವರ್ಡ್ ಆರೋ ನಮ್ಮನ್ನು ಮುಂದಿನ ಫೋಲ್ಡರ್ ಗೆ ಕರೆದೊಯ್ಯುವದು. |
01:52 | ಕೀಬೋರ್ಡ್ ಶಾರ್ಟ್ಕಟ್ ಗಾಗಿ shift & backspace ಒತ್ತಿರಿ. |
01:59 | ‘ಅಪ್ ಆರೋ‘ ಬಟನ್ ನಿಮ್ಮನ್ನು ಪೇರೆಂಟ್ ಡಿರೆಕ್ಟರಿ ಗೆ ಕರೆದೊಯ್ಯುತ್ತದೆ. |
02:05 | ಕೀಬೋರ್ಡ್ ಶಾರ್ಟ್ಕಟ್ ಗಾಗಿ P ಒತ್ತಿರಿ. |
02:10 | ರಿಫ್ರೆಶ್ ಬಟನ್ ನಿಮ್ಮ ಈಗಿನ ಡಿರೆಕ್ಟರಿ ಯಲ್ಲಿನ ಫೈಲ್ ಲಿಸ್ಟ್ ನ್ನು ರಿಫ್ರೆಶ್ ಮಾಡುತ್ತದೆ. |
02:19 | Create new directory ಯು ಒಂದು ಹೊಸ ಡಿರೆಕ್ಟರಿ ಅಥವಾ ಫೋಲ್ಡರ್ ನ್ನು ನಿಮ್ಮ ಈಗಿನ ಡಿರೆಕ್ಟರಿ ಯಲ್ಲಿ ಸೃಷ್ಟಿ ಮಾಡುತ್ತದೆ. |
02:29 | ನಿಮ್ಮ ಫೈಲ್ ಅಥವಾ ಫೋಲ್ಡರ್ ಗಳನ್ನು ಅನುಕ್ರಮವಾಗಿ ಹೊಂದಿಸಲು ಈ ಬಟನ್ ಗಳು ನಿಮಗೆ ಸಹಾಯ ಮಾಡುತ್ತವೆ. |
02:39 | ಫಿಲ್ಟರ್ ಬಟನ್ ನಿಮ್ಮ ಡಿರೆಕ್ಟರಿ ಯಲ್ಲಿನ ಫೈಲ್ ಗಳನ್ನು ಫಿಲ್ಟರ್ ಮಾಡುವದನ್ನು ಸಕ್ರಿಯಗೊಳಿಸುವದು. |
02:46 | ಫಿಲ್ಟರ್ ಟ್ಯಾಬ್ ನ ಬದಿಯಲ್ಲಿರುವ ಆಕ್ಟಿವ್ ಐಕಾನ್ ಗಳು ಮಾತ್ರ ಡಿರೆಕ್ಟರಿ ಯಲ್ಲಿ ಗೋಚರಿಸುವವು. |
02:57 | ಅದು ಬ್ಲೆಂಡರ್ ನಲ್ಲಿಯ ಫೈಲ್ ಬ್ರೌಜರ್ ವಿಂಡೋ ಕುರಿತಾಗಿ ಇತ್ತು. |
03:03 | ಫೈಲ್ ಬ್ರೌಜರ್ ನ ಮೇಲಿನ ಎಡ ಮೂಲೆಯಲ್ಲಿರುವ ಎಡಿಟರ್ ಟೈಪ್ ಮೆನ್ಯು ಗೆ ಹೋಗಿ. |
03:10 | ಮೆನ್ಯು ಓಪನ್ ಮಾಡಲು ಲೆಫ್ಟ್ ಕ್ಲಿಕ್ ಮಾಡಿ. |
03:15 | 3D view ಮೇಲೆ ಲೆಫ್ಟ್ ಕ್ಲಿಕ್ ಮಾಡಿ. |
03:19 | ನಾವು ಬ್ಲೆಂಡರ್ ನ ಡಿಫಾಲ್ಟ್ ವರ್ಕಸ್ಪೇಸ್ ಗೆ ಮರಳಿದ್ದೇವೆ. |
03:24 | ಈಗ ನಾವು ಇನ್ಫೋ ಪ್ಯಾನೆಲ್ ದೆಡೆಗೆ ನೋಡೋಣ. |
03:30 | ಇನ್ಫೋ ಪ್ಯಾನೆಲ್ ಬ್ಲೆಂಡರ್ ಇಂಟರ್ಫೇಸ್ ನ ಅತ್ಯಂತ ಮೇಲಿನ ಪ್ಯಾನೆಲ್ ಇರುತ್ತದೆ. ಇದೇ ಮೇನ್ ಮೆನ್ಯು ಪ್ಯಾನೆಲ್. |
03:40 | File ಮೇಲೆ ಲೆಫ್ಟ್ ಕ್ಲಿಕ್ ಮಾಡಿ. |
03:42 | ಇಲ್ಲಿ ನಮಗೆ ಒಪನ್ ಎ ನ್ಯೂ ಆರ್ ಆನ್ ಎಕ್ಸಿಸ್ಟಿಂಗ್ ಫೈಲ್, ಸೇವ್ ದ ಫೈಲ್, ಯೂಸರ್ ಪ್ರಿಫರೆನ್ಸಿಸ್ ವಿಂಡೋ ಮತ್ತು ಇಂಪೋರ್ಟ ಹಾಗೂ ಎಕ್ಸ್ಪೋರ್ಟ್ ಆಯ್ಕೆಗಳಿವೆ. |
03:58 | open ಮೇಲೆ ಲೆಫ್ಟ್ ಕ್ಲಿಕ್ ಮಾಡಿ. |
04:02 | ಇದು ಫೈಲ್ ಬ್ರೌಜರ್ ನಂತೆಯೇ ಇರುವ ಒಂದು ಬ್ರೌಜರ್ ನ್ನು ಓಪನ್ ಮಾಡುವದು. |
04:07 | ಈಗಾಗಲೇ ನಿಮ್ಮ ಸಿಸ್ಟೆಮ್ ನಲ್ಲಿ ಸೇವ್ ಮಾಡಿರುವ ಬ್ಲೆಂಡ್ ಫೈಲ್ ನ್ನು ನೀವು ಇಲ್ಲಿಂದ ಓಪನ್ ಮಾಡಬಹುದು. |
04:14 | ಫೈಲ್ ಓಪನ್ ಮಾಡುವ ಮೊದಲು load UI ನ್ನು ಆಕ್ಟಿವೇಟ್ ಮಾಡುವದರಿಂದ ಯೂಸರ್ ಇಂಟರ್ಫೇಸ್ ಅಥವಾ ಇದಕ್ಕಾಗಿಯೇ ನೀವು ಸೇವ್ ಮಾಡಿದ UI ಜೊತೆಗೆ ಬ್ಲೆಂಡ್ ಫೈಲ್ ಓಪನ್ ಮಾಡಲು ನಿಮಗೆ ಸಹಾಯ ಆಗುತ್ತದೆ. |
04:26 | ಓಪನ್ ಫೈಲ್ ವಿಂಡೋ ದಿಂದ ಹೊರಬರಲು Back to Previous ಮೇಲೆ ಲೆಫ್ಟ್ ಕ್ಲಿಕ್ ಮಾಡಿ. |
04:35 | ನಿಮ್ಮ ಸೀನ್ ಗೆ ನೀವು ಸೇರಿಸಬಹುದಾದ ವಿಭಿನ್ನ ಆಬ್ಜೆಕ್ಟ್ ಗಳ ರಿಪೊಸಿಟರಿ ಒಂದನ್ನು Add ಒಳಗೊಂಡಿದೆ. |
04:42 | Add ಮೇಲೆ ಲೆಫ್ಟ್ ಕ್ಲಿಕ್ ಮಾಡಿ. |
04:46 | ಆಬ್ಜೆಕ್ಟ್ ರಿಪೊಸಿಟರಿ ಇಲ್ಲಿ ಇದೆ. |
04:50 | ಈ ಮೆನ್ಯು ಬಳಸಿ ನಾವು ಹೊಸ ಆಬ್ಜೆಕ್ಟ್ ಗಳನ್ನು 3D ವ್ಯೂ ಗೆ ಸೇರಿಸಬಹುದು. |
04:56 | ಕೀಬೋರ್ಡ್ ಶಾರ್ಟ್ಕಟ್ ಗಾಗಿ shift & A ಒತ್ತಿರಿ. |
05:04 | ಈಗ 3D ವ್ಯೂ ಗೆ ಒಂದು ಪ್ಲೇನ್ ಅನ್ನು ನಾವು ಸೇರಿಸೋಣ. |
05:09 | 3D ಕರ್ಸರ್ ಅನ್ನು ಚಲಿಸಲು ಸ್ಕ್ರೀನ್ ಮೇಲೆ ಎಲ್ಲಿಯಾದರೂ ಲೆಫ್ಟ್ ಕ್ಲಿಕ್ ಮಾಡಿ. |
05:15 | ನಾನು ಈ ಸ್ಥಳವನ್ನು ಆರಿಸಿಕೊಳ್ಳುತ್ತಿದ್ದೇನೆ. |
05:20 | ಆಡ್ ಮೆನ್ಯು ಮೇಲೆ ತರಲು Shift & A ಒತ್ತಿರಿ. |
05:25 | Mesh. plane ಮೇಲೆ ಲೆಫ್ಟ್ ಕ್ಲಿಕ್ ಮಾಡಿ. |
05:30 | 3D ಕರ್ಸರ್ ನ ಸ್ಥಳದಲ್ಲಿ ಒಂದು ಹೊಸ ಪ್ಲೇನ್ 3D ವ್ಯೂ ಗೆ ಸೇರಿಸಲ್ಪಟ್ಟಿದೆ. |
05:37 | 3D ಕರ್ಸರ್ ಬಗೆಗೆ ತಿಳಿಯಲು ದಯವಿಟ್ಟು Navigation – 3D cursor (ನೇವಿಗೇಶನ್-3D ಕರ್ಸರ್) ಎನ್ನುವ ಟ್ಯುಟೋರಿಯಲ್ ನೋಡಿರಿ. |
05:46 | ಹೀಗೆಯೇ ಇನ್ನೂ ಕೆಲವು ಆಬ್ಜೆಕ್ಟ್ ಗಳನ್ನು 3D ವ್ಯೂ ಗೆ ಸೇರಿಸಲು ನೀವು ಪ್ರಯತ್ನಿಸಬಹುದು. |
05:53 | ಈಗ ನಾವು ಇನ್ಫೊ ಪ್ಯಾನೆಲ್ ಗೆ ಮರಳಿ ಹೋಗೋಣ. |
05:56 | ರೆಂಡರ್ ಮೆನ್ಯು ಓಪನ್ ಮಾಡಲು Render ಮೇಲೆ ಲೆಫ್ಟ್ ಕ್ಲಿಕ್ ಮಾಡಿ. |
06:00 | ರೆಂಡರ್ ಇಮೇಜ್, ರೆಂಡರ್ ಅನಿಮೇಶನ್, ಶೋ ಆರ್ ಹೈಡ್ ರೆಂಡರ್ ಮುಂತಾದ ಇಮೇಜ್ ಅಥವಾ ವಿಡಿಯೋ ರೆಂಡರ್ ನ ಆಯ್ಕೆಗಳನ್ನು Render ಒಳಗೊಂಡಿದೆ. |
06:14 | ರೆಂಡರ್ ಸೆಟಿಂಗ್ಸ್ ನ್ನು ಮುಂದಿನ ಟ್ಯುಟೋರಿಯಲ್ ಗಳಲ್ಲಿ ವಿವರವಾಗಿ ಹೇಳಲಾಗುವದು. |
06:19 | ಇನ್ಫೊ ಪ್ಯಾನೆಲ್ ನಲ್ಲಿ Help ನ ಬದಿಯಲ್ಲಿರುವ ಸ್ಕ್ವೇರ್ ಐಕಾನ್ ಗೆ ಹೋಗಿ. |
06:26 | ಇದು ಚೂಸ್ ಸ್ಕ್ರೀನ್ ಲೇಔಟ್ ಇದೆ. |
06:31 | ನಾವು ಕೆಲಸ ಮಾಡುತ್ತಿರುವ ಡಿಫಾಲ್ಟ್ ಬ್ಲೆಂಡರ್ ಇಂಟರ್ಫೇಸ್ ಅನ್ನು ಇದು ನಮಗೆ ತೋರಿಸುತ್ತದೆ. |
06:37 | Choose Screen Layout ಮೇಲೆ ಲೆಫ್ಟ್ ಕ್ಲಿಕ್ ಮಾಡಿ. |
06:41 | ಈ ಲಿಸ್ಟ್ ನಿಮಗೆ ವಿವಿಧ ಲೇಔಟ್ ಗಳಿಗಾಗಿ ಆಯ್ಕೆಗಳನ್ನು ಕೊಡುತ್ತದೆ. |
06:48 | ಅನಿಮೇಶನ್, ಕಂಪೋಸಿಟಿಂಗ್, ಗೇಮ್ ಲಾಜಿಕ್, ವಿಡಿಯೊ ಎಡಿಟಿಂಗ್. |
06:55 | ನಿಮ್ಮ ಅವಶ್ಯಕತೆಗೆ ಅನುಸಾರವಾಗಿ ನೀವು ಯಾವುದೇ ಒಂದನ್ನು ಆರಿಸಿಕೊಳ್ಳಬಹುದು. |
07:04 | ಚೂಸ್ ಸ್ಕ್ರೀನ್ ಲೇಔಟ್ ನಿಂದ ಹೊರಬರಲು ಬ್ಲೆಂಡರ್ ಸ್ಕ್ರೀನ್ ಮೇಲೆ ಎಲ್ಲಿಯಾದರೂ ಲೆಫ್ಟ್ ಕ್ಲಿಕ್ ಮಾಡಿ ಅಥವಾ ನಿಮ್ಮ ಕೀಬೋರ್ಡ್ ಮೇಲಿನ Esc ಒತ್ತಿ. |
07:15 | Scene ಈಗ ನಾವು ಕೆಲಸ ಮಾಡುತ್ತಿರುವ ಸೀನ್ ಅನ್ನು ತೋರಿಸುತ್ತದೆ. |
07:22 | ಇದು ಇನ್ಫೊ ಪ್ಯಾನೆಲ್ ಕುರಿತಾಗಿ ಇತ್ತು. |
07:25 | ಈಗ, ಬ್ಲೆಂಡರ್ ನಲ್ಲಿಯ ಫೈಲ್ ಬ್ರೌಜರ್ ಉಪಯೋಗಿಸಿ ನಿಮ್ಮ ಸಿಸ್ಟೆಮ್ ನಲ್ಲಿ ಒಂದು ಹೊಸ ಡಿರೆಕ್ಟರಿ ಕ್ರಿಯೇಟ್ ಮಾಡಲು ಪ್ರಯತ್ನಿಸಿ. |
07:32 | ನಂತರ ಸ್ಕ್ರೀನ್ ದ ಲೇಔಟ್ ಅನ್ನು ಡಿಫಾಲ್ಟ್ ನಿಂದ ಅನಿಮೇಶನ್ ಗೆ ಬದಲಾಯಿಸಿರಿ. |
07:39 | ಮತ್ತು ಇಲ್ಲಿಗೆ ಫೈಲ್ ಬ್ರೌಜರ್ ಮತ್ತು ಇನ್ಫೊ ಪ್ಯಾನೆಲ್ ಬಗೆಗಿನ ಈ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ. |
07:47 | ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ. |
07:55 | ಇದರ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನ ಲಿಂಕ್ ಗಳ ಮೇಲೆ ಲಭ್ಯವಿದೆ. |
08:00 | oscar.iitb.ac.in ಮತ್ತು spoken-tutorial.org/NMEICT-Intro. |
08:14 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು- |
08:16 | ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ. |
08:20 | ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:25 | ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
08:32 | ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ. ಧನ್ಯವಾದಗಳು. |