BASH/C2/Logical-Operators/Kannada

From Script | Spoken-Tutorial
Revision as of 21:17, 22 November 2015 by NaveenBhat (Talk | contribs)

Jump to: navigation, search
Time Narration
00:01 ಬ್ಯಾಶ್ ನಲ್ಲಿ Logical Operators ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು
00:10 * 'Logical AND ,
  • Logical OR, ಮತ್ತು
  • Logical NOT ಗಳನ್ನು ಉಪಯೋಗಿಸುವುದನ್ನುಕೆಲವು ಉದಾಹರಣೆಗಳೊಂದಿಗೆ ಕಲಿಯುತ್ತೇವೆ.
00:19 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು
00:22 * ' ಬ್ಯಾಶ್ ನಲ್ಲಿ if-else statement, '
  • command line arguments ಮತ್ತು
  • quoting” ಗಳ ಕುರಿತು ತಿಳಿದಿರಬೇಕು.
00:30 ತಿಳಿದಿಲ್ಲವಾದಲ್ಲಿ ಸಂಬಂಧಿತ Linux ಟ್ಯುಟೊರಿಯಲ್ ಗಾಗಿ ಕೆಳಕಂಡ ಜಾಲತಾಣವನ್ನು ಭೇಟಿಮಾಡಿ.
00:36 ಈ ಪಾಠಕ್ಕಾಗಿ ನಾನು
00:38 * Ubuntu Linux 12.04 OS ಮತ್ತು
00:43 * GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ.
00:47 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:53 ಮೊದಲು Logical operator” ಗಳ ಉಪಯೋಗವನ್ನು ತಿಳಿಯೋಣ.
00:57 * Logical operator ಗಳನ್ನು ಮುಖ್ಯವಾಗಿ ಪ್ರೋಗ್ರಾಮ್ ನ ಹರಿವನ್ನು ನಿಯಂತ್ರಿಸಲು ಉಪಯೋಗಿಸುತ್ತಾರೆ.
01:02 * Logical operator ಗಳು ಎರಡು ಎಕ್ಸ್ ಪ್ರೆಷನ್ ಗಳು ಮತ್ತು ಕಂಡಿಷನ್ ಗಳನ್ನು ಬೆಸೆಯಲು ಸಹಾಯ ಮಾಡುತ್ತವೆ.
01:09 * ಇವುಗಳು if, while, ಗಳ ಒಂದು ಭಾಗವಾಗಿರಬಹುದು ಅಥವಾ ಬೇರೆ control statement ಗಳ ಭಾಗವಾಗಿರಬಹುದು.
01:15 ಈಗ logical AND ನ ಸಿಂಟ್ಯಾಕ್ಸ್ ಅನ್ನು ನೋಡೋಣ.
01:19 * ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition1 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ ಸ್ಪೇಸ್ ಆಂಪ್ರಸೆಂಡ್ ಆಂಪ್ರಸೆಂಡ್ ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ.
01:38 * ಅಥವಾ ಈ ಸಿಂಟ್ಯಾಕ್ಸ್ ಅನ್ನು ಬಳಸಬಹುದು.
01:41 * ಸ್ಕ್ವೇರ್ ಬ್ರ್ಯಾಕೆಟ್ ಅನ್ನು ತೆರೆದು ಡಾಲರ್ ಚಿಹ್ನೆ condition1 ಸ್ಪೇಸ್ ಹೈಫನ್ a ಸ್ಪೇಸ್ ಡಾಲರ್ ಚಿಹ್ನೆ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ.
01:53 * Logical AND ಇದು condition1 ಮತ್ತು condition2 ಎರಡೂ 'true' ಆಗಿದ್ದರೆ 'true' ವನ್ನು ಹಿಂದಿರುಗಿಸುತ್ತದೆ.
02:00 ಈಗ ನಾವು Logical OR ನ ಸಿಂಟ್ಯಾಕ್ಸ್ ಅನ್ನು ನೋಡೋಣ.
02:04 * ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition1 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ ಸ್ಪೇಸ್ ವರ್ಟಿಕಲ್ ಬಾರ್ ಮತ್ತೊಂದು ವರ್ಟಿಕಲ್ ಬಾರ್ ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ.
02:22 * ಅಥವಾ ಈ ಸಿಂಟ್ಯಾಕ್ಸ್ ಅನ್ನು ಉಪಯೋಗಿಸಬಹುದು..
02:24 * ಸ್ಕ್ವೇರ್ ಬ್ರ್ಯಾಕೆಟ್ ಅನ್ನು ತೆರೆದು ಡಾಲರ್ ಚಿಹ್ನೆ condition1 ಸ್ಪೇಸ್ ಹೈಫನ್ o ಸ್ಪೇಸ್ ಡಾಲರ್ ಚಿಹ್ನೆ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ.
02:36 *'Logical OR ಇದು condition1 ಅಥವಾ condition2 ಯಾವುದಾದರು ಒಂದು true ಆಗಿದ್ದರೂ true ಅನ್ನು ಹಿಂದಿರುಗಿಸುತ್ತದೆ.
02:43 ಈಗ ನಾವು ಉದಾಹರಣೆಯೊಂದಿಗೆ Logical OR ಮತ್ತು Logical AND ಗಳನ್ನು ಉಪಯೋಗಿಸುವುದನ್ನು ನೋಡೋಣ.
02:50 ನಾನು ಈಗಾಗಲೇ logical.sh ಎಂಬ ಫೈಲ್ ನಲ್ಲಿ ಕೋಡ್ ಅನ್ನು ಟೈಪ್ ಮಾಡಿಟ್ಟಿದ್ದೇನೆ.
02:55 ctrl alt ಮತ್ತು t ಕೀಲಿಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ.
03:04 gedit ಸ್ಪೇಸ್ logical.sh ಸ್ಪೇಸ್ ಆಂಪ್ರಸಂಡ್ ಚಿಹ್ನೆಯನ್ನು ಟೈಪ್ ಮಾಡಿ,Enter ಅನ್ನು ಒತ್ತಿರಿ.
03:12 ಈಗ ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ನಿಮ್ಮ' logical.sh' ಫೈಲ್ ನಲ್ಲಿ ಟೈಪ್ ಮಾಡಿ.
03:18 ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ.
03:21 ಇದು shebang line.
03:25 'read command' ಇದು ಸ್ಟ್ಯಾಂಡರ್ಡ್ ಇನ್ಪುಟ್ ನಿಂದ ಒಂದು ಸಾಲು ಡಾಟಾವನ್ನು ಪಡೆಯುತ್ತದೆ.
03:29 - (ಹೈಫನ್) p ಪ್ರಾಮ್ಟ್ ಅನ್ನು ಡಿಸ್ಪ್ಲೇ ಮಾಡುತ್ತದೆ.
03:33 string ಇದು ಎಕ್ಸಿಕ್ಯೂಷನ್ ವೇಳೆಯಲ್ಲಿ ಬಳಕೆದಾರರಿಂದ ನಮೂದಿಸಲ್ಪಟ್ಟ ಅಕ್ಷರಗಳನ್ನು ಹಿಡಿದಿಟ್ಟುಕೊಳ್ಳುವ ವೇರಿಯೇಬಲ್.
03:39 'if statement ಇದು ನಮೂದಿಸಿದ ಸ್ಟ್ರಿಂಗ್ ಖಾಲಿಯಾಗಿದೆಯೇ ಎಂದು ಪರೀಕ್ಷಿಸುತ್ತದೆ.
03:45 - (ಹೈಫನ್) z ಸ್ಟ್ರಿಂಗ್ ನ ಉದ್ದ ಸೊನ್ನೆಯೇ ಎಂದು ಪರೀಕ್ಷಿಸುತ್ತದೆ.
03:50 man ಸ್ಪೇಸ್ test ಎಂದು ಟರ್ಮಿನಲ್ ನಲ್ಲಿ ಟೈಪ್ ಮಾಡಿದರೆ ಸ್ಟ್ರಿಂಗ್ ಕಂಪೇರಿಸನ್ ಗಳ ಕುರಿತು ತಿಳಿಯಬಹುದು.
03:57 ಬಳಕೆದಾರ ಏನನ್ನೂ ನಮೂದಿಸದಿದ್ದಲ್ಲಿ echo statement ಸಂದೇಶವನ್ನುಪ್ರಿಂಟ್ ಮಾಡುತ್ತದೆ.
04:02 string ಖಾಲಿ ಯಾಗಿರದಿದ್ದಲ್ಲಿ ಪ್ರೋಗ್ರಾಮ್ ನ ನಿಯಂತ್ರಣವು ಮೊದಲ elif statement ಗೆ ಹೋಗುತ್ತದೆ.
04:08 ಇಲ್ಲಿ ಇದು ನಮೂದಿಸಿದ string ಇದು raj ಮತ್ತು 'jit ಗಳನ್ನು ಒಳಗೊಂಡಿದೆಯೇ ಎಂದು ಪರೀಕ್ಷಿಸುತ್ತದೆ.
04:16 ಹೊಂದಿದ್ದಲ್ಲಿ ದು ಸಂದೇಶವನ್ನು echo ಮಾಡುತ್ತದೆ.
04:20 ದಯವಿಟ್ಟು ಗಮನಿಸಿ ಇಲ್ಲಿ ನಾವು logical AND ಅನ್ನು ಉಪಯೋಗಿಸಿದ್ದೇವೆ.
04:24 ಹಾಗಾಗಿ ಯಾವಾಗ ಎರಡೂ ಕಂಡಿಷನ್ ಗಳೂ ಸರಿಯಾಗಿರುತ್ತವೋ ಆಗ ಮಾತ್ರ ಸಂದೇಶ ಡಿಸ್ಪ್ಲೇ ಆಗುತ್ತದೆ.
04:31 ಇಲ್ಲದೇ ಇದ್ದಲ್ಲಿ ಪ್ರೋಗ್ರಾಮ್ ನ ನಿಯಂತ್ರಣವು ಎರಡನೇ elif statement. ಗೆ ಹೋಗುತ್ತದೆ.
04:37 ಇಲ್ಲಿ ನಮೂದಿಸಿದ string ಇದು 'raj ಅಥವಾ jit ಅನ್ನು ಒಳಗೊಂಡಿದೆಯೇ ಎಂದು ಪರೀಕ್ಷಿಸುತ್ತದೆ.
04:43 ಹೌದಾಗಿದ್ದಲ್ಲಿ ಸಂದೇಶ ಡಿಸ್ಪ್ಲೇ ಆಗುತ್ತದೆ.
04:47 ದಯವಿಟ್ಟು ಗಮನಿಸಿ ಇಲ್ಲಿ ನಾವು logical OR ಅನ್ನು ಉಪಯೋಗಿಸಿದ್ದೇವೆ
04:52 ಯಾವುದಾದರೂ ಒಂದು ಕಂಡಿಶನ್ ಸರಿಯಾಗಿದ್ದರೂ ಸಂದೇಶ ಡಿಸ್ಪ್ಲೇ ಆಗುತ್ತದೆ.
04:59 ಕೊನೆಯಲ್ಲಿ ನಾವು ಡಿಫಾಲ್ಟ್ 'else statement ಅನ್ನು ಹೊಂದಿದ್ದೇವೆ.
05:02 ಯಾವಾಗ ಮೇಲಿನ ಎಲ್ಲಾ ಸ್ಟೇಟ್ಮೆಂಟ್ ಗಳೂ false ಆಗಿರುವುದೋ ಆಗ ಈ ಸ್ಟೇಟ್ ಮೆಂಟ್ ಎಕ್ಸಿಕ್ಯೂಟ್ ಆಗುತ್ತದೆ.
05:08 fi ಇದು multilevel if-else ನ ಕೊನೆ.
05:12 ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
05:15 ಟರ್ಮಿನಲ್ ಗೆ ಹಿಂದಿರುಗಿ.
05:17 ಮೊದಲಿಗೆ ಫೈಲ್ ಎಕ್ಸಿಕ್ಯೂಟ್ ಆಗುವಂತೆ ಮಾಡಲು - 'chmod ಸ್ಪೇಸ್ ಪ್ಲಸ್ x ಸ್ಪೇಸ್ logical ಡಾಟ್ sh ಎಂದು ಟೈಪ್ ಮಾಡಿ. Enter ಅನ್ನು ಒತ್ತಿ.
05:30 ಈಗ ಡಾಟ್ ಸ್ಲ್ಯಾಶ್ logical.sh ಎಂದು ಟೈಪ್ ಮಾಡಿ Enter. ಅನ್ನು ಒತ್ತಿ.
05:36 ಪ್ರಾಮ್ಟ್ Enter a word: ಎಂದು ಡಿಸ್ಪ್ಲೇ ಮಾಡುತ್ತದೆ.
05:38 ನಾನು jitinraj ಎಂದು ನಮೂದಿಸುತ್ತೇನೆ.
05:42 ಫಲಿತವು : jitinraj contains both the words raj and jit ಎಂದಾಗಿರುತ್ತದೆ.
05:48 ಇದರರ್ಥ ಪ್ರೋಗ್ರಾಮ್ ನ ನಿಯಂತ್ರಣವು ಎರಡನೇ ಸ್ಟೇಟ್ ಮೆಂಟ್ ಗೆ ಹೋಗಿದೆ.
05:52 ಮತ್ತು ಎರಡೂ ಕಂಡಿಶನ್ ಗಳೂ ಸರಿಯಾಗಿರುವುದರಿಂದ ಸಂದೇಶ ಡಿಸ್ಪ್ಲೇ ಆಗಿದೆ.
05:57 ಈಗ ಇನ್ನೊಮ್ಮೆ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
06:00 up arrow ಕೀಲಿಯನ್ನು ಒತ್ತಿ.
06:02 ಡಾಟ್ ಸ್ಲ್ಯಾಶ್ logical.sh ಗೆ ಹೋಗಿ Enter ಅನ್ನು ಒತ್ತಿರಿ.
06:07 ಪ್ರಾಮ್ಟ್ 'Enter a word: ಎಂದು ಡಿಸ್ಪ್ಲೇ ಮಾಡುತ್ತದೆ.
06:09 ಈ ಬಾರಿ ನಾನು 'abhijit. ಎಂದು ನಮೂದಿಸುತ್ತೇನೆ.
06:13 ಫಲಿತವು : abhijit contains the word 'raj' or 'jit'. ಎಂದು ಡಿಸ್ಪ್ಲೇ ಮಾಡುತ್ತದೆ
06:19 ದಯವಿಟ್ಟು ಬೇರೆ ಬೇರೆ ಇನ್ ಪುಟ್ ಗಳೊಡನೆ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಿ ಫಲಿತವನ್ನು ಗಮನಿಸಿ.
06:25 ಸ್ಲೈಡ್ಸ್ ಗೆ ಹಿಂದಿರುಗೋಣ.
06:27 ಈಗ 'logical NOT ಆಪರೇಟರ್ಗಳ ಕುರಿತು ನೋಡೋಣ.
06:31 *ಇದು ಒಂದು ಎಕ್ಸ್ಪ್ರೆಷನ್ ನ 'boolean ಬೆಲೆಯನ್ನು ಅದಲು ಬದಲು ಮಾಡುತ್ತದೆ.
06:35 * ಅಂದರೆ ಇದು ಎಕ್ಸ್ ಪ್ರೆಷನ್ false ಆಗಿದ್ದರೆ true ವನ್ನು ಹಿಂದಿರುಗಿಸುತ್ತದೆ.
06:40 * ಮತ್ತು ಎಕ್ಸ್ ಪ್ರೆಷನ್ true ಆಗಿದ್ದರೆ false ಅನ್ನು ಹಿಂದಿರುಗಿಸುತ್ತದೆ.
06:44 logical NOT ಆಪರೇಟರ್ ನ ಸಿಂಟ್ಯಾಕ್ಸ್:
06:48 * ಎಕ್ಸ್ಲಾಮೇಶನ್ ಚಿಹ್ನೆ ಸ್ಪೇಸ್ ಎಕ್ಸ್ ಪ್ರೆಷನ್
06:52 ಅಥವಾ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಎಕ್ಸ್ಲಾಮೇಶನ್ ಚಿಹ್ನೆ ಸ್ಪೇಸ್ ಎಕ್ಸ್ ಪ್ರೆಶನ್ ಸ್ಪೇಸ್ ಎಂದು ಟೈಪ್ ಮಾಡಿ ಸ್ಕ್ವೇರ್ ಬ್ರ್ಯಾಕೆಟ್ಅನ್ನು ಮುಚ್ಚಿರಿ.
07:00 ಉದಾಹರಣೆಯನ್ನು ನೋಡೋಣ.
07:03 ನಾನು ಈಗಾಗಲೇ ಈ ಫೈಲ್ ನಲ್ಲಿ ಕೋಡ್ ಅನ್ನು ಟೈಪ್ ಮಾಡಿದ್ದೇನೆ.
07:05 ಹಾಗಾಗಿ ನಾನು ಟರ್ಮಿನಲ್ ಗೆ ಹೋಗಿ gedit ಸ್ಪೇಸ್ logicalNOT ಡಾಟ್ sh ಸ್ಪೇಸ್ ಆಂಪ್ರಸಂಡ್ ಚಿಹ್ನೆಯನ್ನು ಟೈಪ್ ಮಾಡಿ Enter ಅನ್ನು ಒತ್ತುತ್ತೇನೆ.
07:18 ಈಗ ನಿಮ್ಮ logicalNOT ಡಾಟ್ sh ಫೈಲ್ ನಲ್ಲಿ ಇಲ್ಲಿರುವ ಕೋಡ್ ಅನ್ನು ಟೈಪ್ ಮಾಡಿ.
07:24 ನಾವು ಈಗಾಗಲೇ ತಿಳಿದಿರುವಂತೆ ಇದು shebang line
07:28 $1 ಇದು ಸ್ಕ್ರಿಪ್ಟ್ ಗೆ ಕಳುಹಿಸಿದ ಮೊದಲ command line argument.
07:33 '- (ಹೈಫನ್) f ಇದು ಆರ್ಗ್ಯುಮೆಂಟ್ ಆಗಿ ಕಳುಹಿಸಿದ ಹೆಸರಿನ ಫೈಲ್ ಇದೆಯೇ ಎಂದು ಪರೀಕ್ಷಿಸುತ್ತದೆ.
07:41 ಹಾಗಾಗಿ ಇದು ಫೈಲ್ ಇದ್ದಲ್ಲಿ true ವನ್ನೂ ಇಲ್ಲದಿದ್ದಲ್ಲಿ false ಅನ್ನೂ ಹಿಂದಿರುಗಿಸುತ್ತದೆ.
07:48 NOT operator ಇಲ್ಲಿ ಇದು ಹಿಂದಿರುಗಿಸಿದ ಬೆಲೆಯನ್ನು ಅದಲು ಬದಲು ಮಾಡುತ್ತದೆ.
07:52 ಅಂದರೆ ಆ ಹೆಸರಿನ ಫೈಲ್ ಇದ್ದರೆ ಕಂಡಿಶನ್ true ಆಗಿರುತ್ತದೆ.
07:58 ಆದರೆ NOT operator ಈ ಬೆಲೆಯನ್ನು false ಎಂದು ಬದಲಾಯಿಸುತ್ತದೆ.
08:02 ಮತ್ತು ಇದು “FILE does not exist” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
08:07 ಇಲ್ಲಿ else statement, ನಲ್ಲಿ FILE exists ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
08:13 fi' ಇದು if loop ನ ಕೊನೆಯನ್ನು ತೋರಿಸುತ್ತದೆ.
08:16 ಈಗ ಟರ್ಮಿನಲ್ ಗೆ ಹಿಂದಿರುಗೋಣ.
08:18 ಪ್ರಾಮ್ಟ್ ಅನ್ನು ಖಾಲಿ ಮಾಡೋಣ.
08:20 ಈಗ ನಾವು 'test.txt ಎಂಬ ಹೆಸರಿನ ಒಂದು ಖಾಲಿ ಫೈಲ್ ಅನ್ನು ರಚಿಸೋಣ.
08:25 touch ಸ್ಪೇಸ್ test ಡಾಟ್ txt ಎಂದು ಟೈಪ್ ಮಾಡಿ Enter ಅನ್ನು ಒತ್ತಿ.
08:32 ನಂತರ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಲು chmod ಸ್ಪೇಸ್ ಪ್ಲಸ್ x ಸ್ಪೇಸ್ logicalNOT ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ.
08:45 ಈಗ ಡಾಟ್ ಸ್ಲ್ಯಾಶ್ logicalNOT ಡಾಟ್ sh ಸ್ಪೇಸ್ test ಡಾಟ್ txt ಎಂದು ಟೈಪ್ ಮಾಡಿ Enter ಅನ್ನು ಒತ್ತಿ.
08:55 ನಮ್ಮ ಶೆಲ್ ಸ್ಕ್ರಿಪ್ಟ್ ಈ ಫೈಲ್ ಇದೆಯೇ ಎಂದು ಪರೀಕ್ಷಿಸುತ್ತದೆ.
09:00 'test ಡಾಟ್ txt ಎಂಬ ಫೈಲ್ ಇದೆ ಆದ್ದರಿಂದ ಬೆಲೆಯು true ಆಗಿರುತ್ತದೆ.
09:07 ನಂತರ 'logical NOT' ಈ ಬೆಲೆಯನ್ನು ಬದಲಾಯಿಸಿ 'false ಅನ್ನು ಹಿಂದಿರುಗಿಸುತ್ತದೆ.
09:12 ಮೌಲ್ಯವು 'false ಆಗಿರುವುದರಿಂದ else statement ಮೌಲ್ಯಮಾಪನಕ್ಕೊಳಪಡುತ್ತದೆ.
09:18 ಮತ್ತು File 'test.txt' exists ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ.
09:23 ಮತ್ತೊಮ್ಮೆ 'test1.txt ಎಂಬ ಆರ್ಗ್ಯುಮೆಂಟ್ ನೊಂದಿಗೆ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಲು ಪ್ರಯತ್ನಿಸಿ.
09:29 ಮತ್ತು ಮೊದಲೇ ವಿವರಿಸಿದಂತೆ ನಿಯಂತ್ರಣದ ಹರಿವನ್ನು ಗಮನಿಸಿ.
09:33 ಸ್ಲೈಡ್ಸ್ ಗೆ ಹಿಂದಿರುಗಿ ಸಾರಾಂಶವನ್ನು ನೋಡೋಣ.
09:37 ಈ ಟ್ಯುಟೋರಿಯಲ್ ನಲ್ಲಿ ನಾವು
  • logical AND
  • logical OR ಮತ್ತು
  • 'logical NOT ಗಳನ್ನು ಉಪಯೋಗಿಸುವುದನ್ನು ಕಲಿತಿದ್ದೇವೆ.
09:45 ಸ್ವಂತ ಅಭ್ಯಾಸಕ್ಕಾಗಿ,
09:47 ಫೈಲ್ ಇದೆಯೇ ಮತ್ತು
09:49 ಅದು ಎಕ್ಸಿಕ್ಯೂಟ್ ಆಗುತ್ತದೆಯೇ ಎಂದು ಪರೀಕ್ಷಿಸಲು
09:51 * ಈ ಟ್ಯುಟೋರಿಯಲ್ ನಲ್ಲಿ ವಿವರಿಸಿದ logical operator ಗಳನ್ನು ಉಪಯೋಗಿಸಿ ಪ್ರೋಗ್ರಾಂ ಬರೆಯಿರಿ.
09:56 * (ಸುಳಿವು: man ಸ್ಪೇಸ್ test)
09:59 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ..
10:02 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
10:05 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
10:09 Spoken Tutorial Project Team ಇದು
10:12 spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
10:15 online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
10:19 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ.
10:26 Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ.
10:30 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
10:37 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken tutorial.org\NMEICT-Intro
10:42 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ
10:47 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ..
10:51 ಧನ್ಯವಾದಗಳು.

Contributors and Content Editors

NaveenBhat, Pratik kamble