Difference between revisions of "Avogadro/C3/Stereoisomerism/Kannada"

From Script | Spoken-Tutorial
Jump to: navigation, search
Line 234: Line 234:
 
|-
 
|-
 
||06:36
 
||06:36
|| '''Draw settings''' ಮೆನ್ಯುವಿನಲ್ಲಿ, '''Element''' ಡ್ರಾಪ್ ಡೌನ್ ಅನ್ನುಕ್ಲಿಕ್ ಮಾಡಿ ಮತ್ತು '''Other''' ಅನ್ನು ಆಯ್ಕೆಮಾಡಿ.
+
|| '''Draw settings''' ಮೆನ್ಯುವಿನಲ್ಲಿ, '''Element''' ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Other''' ಅನ್ನು ಆಯ್ಕೆಮಾಡಿ.
 
'''Periodic table''' (ಪೀರಿಯಾಡಿಕ್ ಟೇಬಲ್) ಎಂಬ ವಿಂಡೋ ತೆರೆದುಕೊಳ್ಳುತ್ತದೆ.
 
'''Periodic table''' (ಪೀರಿಯಾಡಿಕ್ ಟೇಬಲ್) ಎಂಬ ವಿಂಡೋ ತೆರೆದುಕೊಳ್ಳುತ್ತದೆ.
 
|-
 
|-

Revision as of 15:34, 25 July 2018

Time
Narration
00:01 Stereoisomerism (ಸ್ಟೀರಿಯೋ-ಐಸೊಮೆರಿಸಮ್) ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು, Conformational isomerism (ಕನ್ಫರ್ಮೇಷನಲ್ ಐಸೊಮೆರಿಸಮ್)

Geometrical isomerism(ಜಾಮೆಟ್ರಿಕಲ್ ಐಸೋಮೆರಿಸಮ್) ಮತ್ತು R-S configurations (ಆರ್. ಎಸ್ ಕಾನ್ಫಿಗರೇಷನ್ಸ್) ಇವುಗಳ ಕುರಿತು ಉದಾಹರಣೆಗಳೊಂದಿಗೆ ಕಲಿಯುವೆವು.

00:18 ಇಲ್ಲಿ ನಾನು , Ubuntu Linux OS, ಆವೃತ್ತಿ 14.04 ಮತ್ತು Avogadro ಆವೃತ್ತಿ 1.1.1. ಇವುಗಳನ್ನು ಬಳಸುತ್ತಿದ್ದೇನೆ.
00:28 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು, Avogadro ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ.
00:39 ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಉದಾಹರಣೆಯ ಫೈಲ್ ಗಳನ್ನು ಕೋಡ್ ಫೈಲ್ ಗಳೆಂದು ಕೊಡಲಾಗಿದೆ.
00:45 ಈ ಟ್ಯುಟೋರಿಯಲ್ ನಲ್ಲಿ ನಾವು, ಅವೊಗ್ಯಡ್ರೋ ವನ್ನು ಬಳಸಿ, ಸ್ಟಿರಿಯೋ-ಐಸೋಮರ್ ಗಳನ್ನು ರಚಿಸಲು ಕಲಿಯುವೆವು.
00:51 ನಾನು ಸ್ಟಿರಿಯೋ-ಐಸೋಮೆರಿಸಮ್ ನ ಕುರಿತು ಕಿರು ಪರಿಚಯವನ್ನು ಕೊಡುವೆನು.
00:56 ಪರಮಾಣುಗಳ ಸ್ಥಾನದ ಜೋಡಣೆಯಲ್ಲಿನ ವ್ಯತ್ಯಾಸಗಳಿಂದ 'ಸ್ಟೀರಿಯೋ-ಐಸೊಮೆರಿಸಮ್' ಉಂಟಾಗುತ್ತದೆ.
01:03 ಐಸೋಮರ್ ಗಳು ಒಂದೇ ರಚನೆಯನ್ನು ಹೊಂದಿರುವುದರಿಂದ ಅವುಗಳ ಗುಣಲಕ್ಷಣಗಳಲ್ಲಿ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ.
01:09 ಇಲ್ಲಿ, ಐಸೋಮರ್ ಗಳ ವರ್ಗೀಕರಣವನ್ನು ತೋರಿಸುವ ಒಂದು ಸ್ಲೈಡ್ ಇದೆ.
01:16 ನಾನು Conformational isomerism (ಕನ್ಫರ್ಮೇಷನಲ್ ಐಸೊಮೆರಿಸಮ್) ನಿಂದ ಪ್ರಾರಂಭಿಸುವೆನು.
01:21 ಇದು ಸ್ಟಿರಿಯೋ-ಐಸೋಮರಿಸಮ್ ನ ಒಂದು ವಿಧವಾಗಿದೆ.
01:23 ಇದರಲ್ಲಿ, ಐಸೋಮರ್ ಗಳನ್ನು ಸಿಂಗಲ್-ಬಾಂಡ್ ನ ಸುತ್ತ ತಿರುಗಿಸುವುದರ ಮೂಲಕ, ಅವುಗಳನ್ನು ಒಂದರಿಂದ ಇನ್ನೊಂದಕ್ಕೆ ಪರಿವರ್ತಿಸಬಹುದು.
01:30 ಸಿಂಗಲ್-ಬಾಂಡ್ ನ ಸುತ್ತ ತಿರುಗಿಸುವುದು, ರೊಟೇಷನಲ್ ಎನರ್ಜಿ ಬ್ಯಾರಿಯರ್ ನಿಂದ ನಿರ್ಬಂಧಿತವಾಗಿದೆ.
01:36 ಈಗ ನಾವು '1,2-ಡೈಕ್ಲೋರೋ ಇಥೇನ್' ನ ಕನ್ಫರ್ಮರ್ ಗಳೊಂದಿಗೆ ಪ್ರಾರಂಭಿಸೋಣ.
01:41 '1,2-ಡೈಕ್ಲೋರೋ ಇಥೇನ್', ಎಕ್ಲಿಪ್ಸ್ಡ್ (Eclipsed), ಗಾಶ್ Gauche ಮತ್ತು ಆಂಟಿ (Anti) ಎಂಬ ಮೂರು ಕನ್ಫರ್ಮರ್ ಗಳಲ್ಲಿ ಇರುತ್ತದೆ.
01:50 ನಾನು ಅವೊಗ್ಯಡ್ರೋ ವಿಂಡೊ ವನ್ನು ತೆರೆದಿದ್ದೇನೆ.
01:53 Draw ಟೂಲ್ ನ ಮೇಲೆ ಕ್ಲಿಕ್ ಮಾಡಿ.
01:55 Adjust Hydrogens ಎಂಬ ಚೆಕ್ ಬಾಕ್ಸ್ ಅನ್ನು ಅನ್-ಚೆಕ್ ಮಾಡಿ.
01:59 ಎರಡು ಪರಮಾಣುಗಳನ್ನು ರಚಿಸಲು, Panel ನ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ.
02:04 Element ಡ್ರಾಪ್ ಡೌನ್ ನಿಂದ, Chlorine ಅನ್ನು ಆಯ್ಕೆಮಾಡಿ.
02:08 ಪ್ರತಿಯೊಂದು 'ಕಾರ್ಬನ್' ನ ಮೇಲೆ, ಒಂದು ಬಾಂಡ್ ಅನ್ನು ರಚಿಸಿ.
02:11 Build ಮೆನ್ಯು ಗೆ ಹೋಗಿ, Add Hydrogens ಅನ್ನು ಕ್ಲಿಕ್ ಮಾಡಿ.
02:15 ಪ್ಯಾನಲ್ ನ ಮೇಲೆ, '1,2-ಡೈಕ್ಲೋರೋ ಇಥೇನ್' ಅನ್ನು ರಚಿಸಲಾಗಿದೆ.
02:19 ಈ ರಚನೆಯನ್ನು ಆಪ್ಟಿಮೈಜ್ ಮಾಡೋಣ.
02:22 Auto Optimization ಟೂಲ್ ಅನ್ನು ಕ್ಲಿಕ್ ಮಾಡಿ.
02:25 Force Field ನಲ್ಲಿ, MMFF94 ಅನ್ನು ಆಯ್ಕೆಮಾಡಿ, Start ಅನ್ನು ಕ್ಲಿಕ್ ಮಾಡಿ.
02:35 ಆಪ್ಟಿಮೈಜೇಷನ್ ಕ್ರಿಯೆಯನ್ನು ನಿಲ್ಲಿಸಲು, Stop ಅನ್ನು ಕ್ಲಿಕ್ ಮಾಡಿ.
02:40 ರಚನೆಯನ್ನು ಸರಿಯಾಗಿ ಹೊಂದಿಸಲು (orientation) , Navigation ಟೂಲ್ ಅನ್ನು ಕ್ಲಿಕ್ ಮಾಡಿ.
02:45 ಪ್ಯಾನಲ್ ನಲ್ಲಿ ನಾವು, 'ಗಾಶ್ ಕನ್ಫರ್ಮರ್' ಅನ್ನು ಹೊಂದಿದ್ದೇವೆ.
02:49 '1,2-ಡೈಕ್ಲೋರೋ ಇಥೇನ್' ನ ಕನ್ಫರ್ಮರ್ ಗಳನ್ನು ತೋರಿಸಲು, ನಾನು ಸುತ್ತುವಿಕೆಯ ಪ್ಲೇನ್ ಅನ್ನು ನಿರ್ಧರಿಸುವೆನು.
02:55 Bond Centric Manipulation (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್) ಟೂಲ್ ಅನ್ನು ಕ್ಲಿಕ್ ಮಾಡಿ.
02:59 ಎರಡು ಕಾರ್ಬನ್ ಪರಮಾಣುಗಳ ನಡುವಿನ ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
03:03 ಎರಡು ಪರಮಾಣುಗಳ ನಡುವಿನ ಪ್ಲೇನ್, ನೀಲಿ ಅಥವಾ ಹಳದಿ ಬಣ್ಣದಲ್ಲಿ ಕಾಣುತ್ತದೆ.
03:08 ಕರ್ಸರ್ ಅನ್ನು, ಕ್ಲೋರಿನ್ ಪರಮಾಣುವಿನ ಮೇಲಿಡಿ.
03:10 ಬಾಂಡ್ ಅನ್ನು, ಕ್ಲಾಕ್-ವೈಸ್ ದಿಕ್ಕಿನಲ್ಲಿ ತಿರುಗಿಸಿ.
03:14 Navigation ಟೂಲ್ ನ ಮೇಲೆ ಕ್ಲಿಕ್ ಮಾಡಿ, ರಚನೆಯನ್ನು ತಿರುಗಿಸಿ.
03:18 ನಾವು ಪ್ಯಾನಲ್ ನಲ್ಲಿ , Anti conformer (ಆಂಟಿ ಕನ್ಫರ್ಮರ್) ಅನ್ನು ಹೊಂದಿದ್ದೇವೆ.
03:21 C-C bond ಅನ್ನು ತಿರುಗಿಸಲು, ಇನ್ನೊಮ್ಮೆ 'ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್' ಟೂಲ್ ಅನ್ನು ಬಳಸಿ.
03:25 ನಾವು ಪ್ಯಾನಲ್ ನಲ್ಲಿ, 'ಎಕ್ಲಿಪ್ಸ್ಡ್ ಕನ್ಫರ್ಮರ್' ಅನ್ನು (Eclipsed conformer) ಹೊಂದಿದ್ದೇವೆ.
03:30 ಈಗ ನಾನು, ಸೈಕ್ಲೋಹೆಕ್ಸೇನ್ ನ ವಿವಿಧ ಕನ್ಫರ್ಮರ್ ಗಳನ್ನು ತೋರಿಸುವೆನು.
03:35 ಒಂದು ಹೊಸ ವಿಂಡೋ ವನ್ನು ತೆರೆಯಿರಿ.
03:38 Draw settings ಮೆನ್ಯುವಿನಲ್ಲಿ, ಡಿಫಾಲ್ಟ್ ಆಗಿ, Carbon ಆಯ್ಕೆಯಾಗಿದೆ.
03:44 Adjust Hydrogens ಎಂಬ ಚೆಕ್ ಬಾಕ್ಸ್ ಅನ್ನು ಅನ್-ಚೆಕ್ ಮಾಡಿ.
03:48 ನಾವು ಸೈಕ್ಲೋಹೆಕ್ಸೇನ್ ನ ರಚನೆಯನ್ನು ದೋಣಿಯಾಕಾರದಲ್ಲಿ ರಚಿಸೋಣ.
03:53 ಪ್ಯಾನಲ್ ನಲ್ಲಿ, ಸೈಕ್ಲೋಹೆಕ್ಸೇನ್ ನ ಬೋಟ್ ಕನ್ಫರ್ಮರ್ ಅನ್ನು ರಚಿಸಲು, ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ.
04:01 ಪರಮಾಣುಗಳನ್ನು ಲೇಬಲ್ ಮಾಡಲು, Display Types ಮೆನ್ಯುವಿನಲ್ಲಿ, Label ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
04:07 ಗಮನಿಸಿ: ಲೇಬಲ್ ಮಾಡುವುದು, ಎಲ್ಲ ಸಮಯದಲ್ಲಿ ಒಂದೇ ರೀತಿಯಾಗಿರುವುದಿಲ್ಲ.
04:11 ನಮ್ಮ ಅಗತ್ಯಕ್ಕೆ ತಕ್ಕಂತೆ, ಕನ್ಫರ್ಮರ್ ಗಳನ್ನು ಲೇಬಲ್ ಮಾಡೋಣ.
04:16 Selection ಟೂಲ್ ಮೇಲೆ ಕ್ಲಿಕ್ ಮಾಡಿ. ನಂತರ, ಮೊದಲ ಕಾರ್ಬನ್ ಪರಮಾಣುವಿನ ಮೇಲೆ ರೈಟ್-ಕ್ಲಿಕ್ ಮಾಡಿ.
04:21 ಒಂದು ಮೆನ್ಯು ತೆರೆದುಕೊಳ್ಳುತ್ತದೆ. Change label ಅನ್ನು ಆಯ್ಕೆಮಾಡಿ.
04:25 Change label of the atom ಎಂಬ ಟೆಕ್ಸ್ಟ್- ಬಾಕ್ಸ್ ತೆರೆದುಕೊಳ್ಳುತ್ತದೆ.
04:30 New Label ಫೀಲ್ಡ್ ನಲ್ಲಿ, 1 ಎಂದು ಟೈಪ್ ಮಾಡಿ, OK ಯನ್ನು ಕ್ಲಿಕ್ ಮಾಡಿ.
04:35 ನಂತರ, ಎರಡನೇ ಪರಮಾಣುವಿನ ಮೇಲೆ ರೈಟ್- ಕ್ಲಿಕ್ ಮಾಡಿ ಮತ್ತು ಲೇಬಲ್ ಅನ್ನು 2 ಎಂದು ಬದಲಾಯಿಸಿ.
04:41 ಹೀಗೆಯೇ, ನಾನು ಪರಮಾಣುಗಳ ಲೇಬಲ್ ಗಳನ್ನು 3, 4, 5 ಮತ್ತು 6 ಎಂದು ಬದಲಾಯಿಸುವೆನು.
04:50 ನಾವು 'ಬೋಟ್ ಕನ್ಫರ್ಮರ್' ಅನ್ನು 'ಟ್ವಿಸ್ಟ್ ಬೋಟ್ ಕನ್ಫರ್ಮರ್' ಆಗಿ ಪರಿವರ್ತಿಸುವೆವು.
04:54 Manipulation ಟೂಲ್ ಅನ್ನು ಕ್ಲಿಕ್ ಮಾಡಿ. 2 ರ ಮೇಲೆ ಕ್ಲಿಕ್ ಮಾಡಿ, ಅದನ್ನು ಮೇಲ್ಮುಖವಾಗಿ ಎಳೆಯಿರಿ.
04:57 5 ಅನ್ನು ಕ್ಲಿಕ್ ಮಾಡಿ, ಅದನ್ನು ಮೇಲ್ಮುಖವಾಗಿ ಎಳೆಯಿರಿ. 3 ಅನ್ನು ಕ್ಲಿಕ್ ಮಾಡಿ, ಅದನ್ನು ಮೇಲ್ಮುಖವಾಗಿ ಎಳೆಯಿರಿ.
05:08 ಈಗ ನಾವು ಪ್ಯಾನಲ್ ನಲ್ಲಿ, ಟ್ವಿಸ್ಟ್ ಬೋಟ್ ಅನ್ನು ಹೊಂದಿದ್ದೇವೆ.
05:10 ಈಗ ನಾವು, 'ಟ್ವಿಸ್ಟ್ ಬೋಟ್' ಅನ್ನು 'ಹಾಫ್ ಚೇರ್ ಕನ್ಫರ್ಮರ್' ಆಗಿ ಪರಿವರ್ತಿಸುವೆವು.
05:16 2 ಅನ್ನು ಕ್ಲಿಕ್ ಮಾಡಿ, ಅದನ್ನು ಕೆಳಮುಖವಾಗಿ ಎಳೆಯಿರಿ.
05:19 5 ಅನ್ನು ಕ್ಲಿಕ್ ಮಾಡಿ, ಅದನ್ನು ಕೆಳಮುಖವಾಗಿ ಎಳೆಯಿರಿ.
05:23 4 ಅನ್ನು ಕ್ಲಿಕ್ ಮಾಡಿ, ಮತ್ತು ಅಡ್ಡಲಾಗಿ (ಹಾರಿಝೋಂಟಲ್ ) ಎಳೆಯಿರಿ.
05:27 ಅಗತ್ಯವಿದ್ದಲ್ಲಿ, ಸರಿಯಾದ ರಚನೆಯನ್ನು ಪಡೆಯಲು, ಎಲ್ಲಾ ಕಾರ್ಬನ್ ಪರಮಾಣುಗಳ ಸ್ಥಾನವನ್ನು ಹೊಂದಿಸಿ.
05:33 ಪ್ಯಾನಲ್ ನಲ್ಲಿ, ನಾವು 'ಹಾಫ್-ಚೇರ್' ಅನ್ನು ಹೊಂದಿದ್ದೇವೆ.
05:36 ಈಗ ನಾವು, 'ಹಾಫ್ ಚೇರ್' ಅನ್ನು 'ಚೇರ್ ಕನ್ಫರ್ಮರ್' ಆಗಿ ಪರಿವರ್ತಿಸುವೆವು.
05:41 4 ಅನ್ನು ಕ್ಲಿಕ್ ಮಾಡಿ, ಅದನ್ನು ಕೆಳಮುಖವಾಗಿ ಎಳೆಯಿರಿ.
05:44 1 ಅನ್ನು ಕ್ಲಿಕ್ ಮಾಡಿ, ಅದನ್ನು ಕೆಳಮುಖವಾಗಿ ಎಳೆಯಿರಿ.
05:47 ಅಗತ್ಯವಿದ್ದಲ್ಲಿ, ಸರಿಯಾದ ರಚನೆಯನ್ನು ಪಡೆಯಲು, ಎಲ್ಲಾ ಕಾರ್ಬನ್ ಪರಮಾಣುಗಳ ಸ್ಥಾನವನ್ನು ಹೊಂದಿಸಿ.
05:53 ಪ್ಯಾನಲ್ ನಲ್ಲಿ, ನಾವು 'ಚೇರ್ ಕನ್ಫರ್ಮರ್' ಅನ್ನು ಹೊಂದಿದ್ದೇವೆ.
05:56 ಒಂದು ಅಸೈನ್ಮೆಂಟ್: ಬ್ಯುಟೇನ್ ಮತ್ತು 'ಸೈಕ್ಲೋ ಪೆಂಟೇನ್' ಗಳ ವಿವಿಧ ಕನ್ಫರ್ಮರ್ ಗಳನ್ನು ರಚಿಸಿ.
06:03 ಈಗ ನಾನು, 'ಜಾಮೆಟ್ರಿಕಲ್ ಐಸೋಮೆರಿಸಮ್' ಅನ್ನು ತೋರಿಸಲು ಕೆಲವು ರಚನೆಗಳನ್ನು ಬರೆಯುವೆನು.
06:09 ಡಬಲ್ ಬಾಂಡ್ ನ ಸುತ್ತ, ಪರಮಾಣುಗಳ ವಿಭಿನ್ನ ಸ್ಥಾನದಲ್ಲಿನ ಜೋಡಣೆಗಳಿಂದ, 'ಜಾಮೆಟ್ರಿಕಲ್ ಐಸೋಮೆರಿಸಮ್' ಉಂಟಾಗುತ್ತದೆ.
06:17 ಇಲ್ಲಿ, ಡಬಲ್ ಬಾಂಡ್ ಹೊಂದಿರುವ ಕಾರ್ಬನ್ ನ ಸುತ್ತ, ಪರಮಾಣುಗಳ ಅಥವಾ ಗುಂಪುಗಳ ಸುತ್ತುವಿಕೆಯು ಸೀಮಿತವಾಗಿದೆ.
06:24 ನಾನು ವಿವರಣೆಗಾಗಿ, 'ಡೈಅಮೈನ್ ಡೈ ಕ್ಲೋರೋ ಪ್ಲ್ಯಾಟಿನಂ ಟು' ರಚನೆಯನ್ನು ಬರೆಯುವೆನು. ಇದನ್ನು 'ಸಿಸ್ಪ್ಲ್ಯಾಟಿನ್' ಎಂದು ಸಹ ಕರೆಯುತ್ತಾರೆ.
06:33 ಒಂದು ಹೊಸ ವಿಂಡೋ ವನ್ನು ಓಪನ್ ಮಾಡಿ.
06:36 Draw settings ಮೆನ್ಯುವಿನಲ್ಲಿ, Element ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Other ಅನ್ನು ಆಯ್ಕೆಮಾಡಿ.

Periodic table (ಪೀರಿಯಾಡಿಕ್ ಟೇಬಲ್) ಎಂಬ ವಿಂಡೋ ತೆರೆದುಕೊಳ್ಳುತ್ತದೆ.

06:44 ಟೇಬಲ್ ನಿಂದ, 'ಪ್ಲಾಟಿನಮ್ (Pt)' ಅನ್ನು ಆಯ್ಕೆ ಮಾಡಿ. Periodic table ವಿಂಡೋವನ್ನು ಕ್ಲೋಸ್ ಮಾಡಿ.
06:50 ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ.
06:53 Element ಡ್ರಾಪ್ ಡೌನ್ ನಿಂದ, Chlorine (ಕ್ಲೋರಿನ್) ಅನ್ನು ಆಯ್ಕೆ ಮಾಡಿ.
06:55 ಪ್ಲ್ಯಾಟಿನಂ ಪರಮಾಣುವಿನ ಒಂದೇ ಬದಿಯಲ್ಲಿ, ಎರಡು ಕ್ಲೋರಿನ್ ಬಾಂಡ್ ಗಳನ್ನು ರಚಿಸಿ.
07:00 Element ಡ್ರಾಪ್ ಡೌನ್ ನಿಂದ, Nitrogen ಅನ್ನು ಆಯ್ಕೆ ಮಾಡಿ. ಮೊದಲಿನಂತೆಯೇ, ಎರಡು ನೈಟ್ರೋಜನ್ ಬಾಂಡ್ ಅನ್ನು ರಚಿಸಿ.
07:07 ರಚನೆಯನ್ನು ಪೂರ್ಣಗೊಳಿಸಲು, ನಮಗೆ ನೈಟ್ರೋಜನ್ ಪರಮಾಣುಗಳಿಗೆ ಹೊಂದಿಕೊಂಡ ಮೂರು ಹೈಡ್ರೋಜನ್ ಗಳು ಬೇಕು.
07:13 Element ಡ್ರಾಪ್ ಡೌನ್ ನಿಂದ, Hydrogen ಅನ್ನು ಆಯ್ಕೆ ಮಾಡಿ.
07:16 ಮೂರನೇ ಬಾಂಡ್ ಅನ್ನು ರಚಿಸಲು, ಪ್ರತಿಯೊಂದು ನೈಟ್ರೋಜನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ.
07:21 ನಾವು ರಚನೆಯನ್ನು ಆಪ್ಟಿಮೈಜ್ ಮಾಡೋಣ.
07:24 Auto Optimization ಟೂಲ್ ನ ಮೇಲೆ ಕ್ಲಿಕ್ ಮಾಡಿ.
07:27 Force Field ಫೀಲ್ಡ್ ನಲ್ಲಿ, UFF ಅನ್ನು ಆಯ್ಕೆ ಮಾಡಿ ಮತ್ತು Start ಬಟನ್ ಅನ್ನು ಕ್ಲಿಕ್ ಮಾಡಿ.
07:35 ಆಪ್ಟಿಮೈಜೇಷನ್ ಕ್ರಿಯೆಯನ್ನು ನಿಲ್ಲಿಸಲು, Stop ಅನ್ನು ಕ್ಲಿಕ್ ಮಾಡಿ.
07:39 ವಿವರಣೆಗಾಗಿ, ನನಗೆ ಎರಡು ರಚನೆಗಳ ಅವಶ್ಯಕತೆಯಿದೆ.
07:43 ನಾನು ರಚನೆಗಳನ್ನು ಕಾಪಿ ಮಾಡಿ, ಪೇಸ್ಟ್ ಮಾಡುವೆನು.
07:46 ರಚನೆಯನ್ನು ಆಯ್ಕೆ ಮಾಡಲು, Selection ಟೂಲ್ ಅನ್ನು ಕ್ಲಿಕ್ ಮಾಡಿ.
07:50 ಕಾಪಿ ಮಾಡಲು CTRL+C ಯನ್ನು ಮತ್ತು ಪೇಸ್ಟ್ ಮಾಡಲು CTRL+V ಯನ್ನು ಒತ್ತಿ. ಪೇಸ್ಟ್ ಮಾಡಿದ ರಚನೆಯನ್ನು ಬಲಕ್ಕೆ ಎಳೆಯಿರಿ.
07:57 ನಮ್ಮ ಅನುಕೂಲಕ್ಕಾಗಿ, ನಾನು ಪರಮಾಣುಗಳನ್ನು ಲೇಬಲ್ ಮಾಡುವೆನು.
08:00 Display Types ಮೆನ್ಯುವಿನಲ್ಲಿ, Label ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
08:05 Hydrogen ಗಳನ್ನು ತೆಗೆದುಹಾಕಲು, Build ಮೆನ್ಯುವಿಗೆ ಹೋಗಿ ಮತ್ತು Remove Hydrogens ಅನ್ನು ಆಯ್ಕೆಮಾಡಿ.
08:11 ನಾವು ಪ್ಯಾನಲ್ ನಲ್ಲಿ, ಸಿಸ್ಪ್ಲ್ಯಾಟಿನ್ ನ ಎರಡು ಐಸೋಮರ್ ಗಳನ್ನು ಹೊಂದಿದ್ದೇವೆ.
08:16 ನಾನು ಎರಡನೆಯ 'ಸಿಸ್ ಐಸೋಮರ್' ಅನ್ನು 'ಟ್ರಾನ್ಸ್ ಐಸೋಮರ್' ಆಗಿ ಪರಿವರ್ತಿಸುವೆನು.
08:21 Manipulation ಟೂಲ್ ಅನ್ನು ಕ್ಲಿಕ್ ಮಾಡಿ.
08:24 Cl 4 ಅನ್ನು (ಸಿ ಎಲ್ ಫೋರ್) ಕ್ಲಿಕ್ ಮಾಡಿ ಎಡಕ್ಕೆ ಎಳೆಯಿರಿ. N4 ಅನ್ನು ಕ್ಲಿಕ್ ಮಾಡಿ ಬಲಕ್ಕೆ ಎಳೆಯಿರಿ.
08:32 ನಂತರ, ಸರಿಯಾದ ಓರಿಯಂಟೇಶನ್ ಅನ್ನು ತೋರಿಸಲು, ಎಲ್ಲ ಬಾಂಡ್ ಗಳ ಸ್ಥಾನವನ್ನು ಹೊಂದಿಸಿ.
08:38 Build ಮೆನ್ಯುವಿಗೆ ಹೋಗಿ, Add Hydrogens ಅನ್ನು ಆಯ್ಕೆಮಾಡಿ.
08:43 ಮೊದಲಿನಂತೆ, ಪ್ರತಿಯೊಂದು ನೈಟ್ರೋಜನ್ ಗೆ, ಎರಡು ಪರಮಾಣುಗಳು ಹೊಂದಿಕೊಂಡಿವೆ.
08:48 Draw ಟೂಲ್ ನಲ್ಲಿರುವ, Hydrogen ಅನ್ನು ಬಳಸಿ ಮೂರನೆಯ ಹೈಡ್ರೋಜನ್ ಅನ್ನು ಸೇರಿಸಿ.
08:53 ನಾವು ರಚನೆಯನ್ನು ಆಪ್ಟಿಮೈಜ್ ಮಾಡೋಣ.
08:55 Auto Optimization ಟೂಲ್ ಅನ್ನು ಕ್ಲಿಕ್ ಮಾಡಿ.
08:59 Force Field ನಲ್ಲಿ, UFF ಅನ್ನು ಆಯ್ಕೆಮಾಡಿ ಮತ್ತು Start ಬಟನ್ ಅನ್ನು ಕ್ಲಿಕ್ ಮಾಡಿ.
09:05 ಆಪ್ಟಿಮೈಜೇಷನ್ ಕ್ರಿಯೆಯನ್ನು ನಿಲ್ಲಿಸಲು, Stop ಬಟನ್ ಅನ್ನು ಒತ್ತಿ.
09:09 ಈಗ ಪ್ಯಾನಲ್ ನಲ್ಲಿ ನಾವು, 'ಡೈಅಮೈನ್ ಡೈಕ್ಲೋರೋ ಪ್ಲ್ಯಾಟಿನಮ್ ಟು' ದ ಎರಡು 'ಜಾಮೆಟ್ರಿಕಲ್ ಐಸೋಮರ್' ಗಳನ್ನು ಹೊಂದಿದ್ದೇವೆ.
09:17 ಇದೇರೀತಿ, 'ಡೈಅಮೈನ್ ಟೆಟ್ರಾ ಸೈನೋಫರೇಟ್ ಥ್ರೀ ಅಯಾನ್' ನ 'ಜಾಮೆಟ್ರಿಕಲ್ ಐಸೋಮರ್' ಗಳನ್ನು ಹೊಂದಿದ್ದೇವೆ.
09:25 ನಂತರ, ನಾವು R-S configuration(ಆರ್-ಎಸ್ ಕಾನ್ಫಿಗರೇಷನ್) ನ ಕುರಿತು ಚರ್ಚಿಸುವೆವು.
09:29 'ಆರ್ ಎಸ್ ಕಾನ್ಫಿಗರೇಷನ್ ' ಗಳು Chiral centre(ಕೈರಲ್ ಸೆಂಟರ್) ನ ಇರುವಿಕೆಯಿಂದ ಉಂಟಾಗುತ್ತವೆ.
09:35 Chiral centre (ಕೈರಲ್ ಸೆಂಟರ್) ಇದು ಒಂದು ಪರಮಾಣು ಆಗಿದ್ದು, ನಾಲ್ಕು ವಿಭಿನ್ನ ಸಬ್ಸ್ಟಿಟ್ಯುಯೆಂಟ್ (substituent) ಗಳೊಂದಿಗೆ ಹೊಂದಿಕೊಂಡಿರುತ್ತದೆ.
09:41 ಕಾನ್ಫಿಗರೇಷನ್ ಗಳು, ಪರಸ್ಪರ 'ನಾನ್ ಸುಪರ್ ಇಂಪೋಸೇಬಲ್ ಮಿರರ್ ಇಮೇಜ್' ಗಳಾಗಿವೆ.
09:47 ಆರ್ ಎಸ್ ಕಾನ್ಫಿಗರೇಷನ್ ಗಳ ವಿವರಣೆಗಾಗಿ, ನಾನು ಅಮಿನೋ ಆಸಿಡ್ – ಅಲನೈನ್ ಅನ್ನು ಬಳಸುವೆನು.
09:53 ಒಂದು ಹೊಸ ವಿಂಡೋವನ್ನು ತೆರೆಯಿರಿ.
09:56 ನಾನು Fragment library (ಫ್ರ್ಯಾಗ್ಮೆಂಟ್ ಲೈಬ್ರರಿ) ಯಿಂದ, Alanine (ಅಲನೈನ್) ರಚನೆಯನ್ನು ಲೋಡ್ ಮಾಡುವೆನು.
10:01 ಫ್ರ್ಯಾಗ್ಮೆಂಟ್ ಲೈಬ್ರರಿಯಲ್ಲಿ ಲಭ್ಯವಿರುವ ಎಲ್ಲಾ ಅಮಿನೋ ಆಸಿಡ್ ಗಳು, ಬೆಳಕಿಗೆ ಸಂಬಂಧಿಸಿದಂತೆ ಸಕ್ರಿಯವಾಗಿರುತ್ತವೆ (ಆಪ್ಟಿಕಲಿ ಆಕ್ಟಿವ್).
10:07 ನೀವು ಲೋಡ್ ಮಾಡಿ, ಅವುಗಳ ಬಗ್ಗೆ ತಿಳಿದುಕೊಳ್ಳಬಹುದು.
10:11 ರಚನೆಯನ್ನು ಡಿ-ಸೆಲೆಕ್ಟ್ ಮಾಡಲು CTRL+SHIFT ಮತ್ತು A ಕೀ ಗಳನ್ನು ಒತ್ತಿ.
10:15 ಸರಿಯಾದ ಓರಿಯಂಟೇಶನ್ ಗಾಗಿ, Navigation ಟೂಲ್ ಅನ್ನು ಬಳಸಿ ರಚನೆಯನ್ನು ತಿರುಗಿಸಿ.
10:22 ಮಧ್ಯದ ಕಾರ್ಬನ್ ಪರಮಾಣು, ಕೈರಾಲ್ ಆಗಿದೆ. ಇದು ನಾಲ್ಕು ಬೇರೆ ಬೇರೆ ಗುಂಪುಗಳಿಗೆ ಅಂಟಿಕೊಂಡಿದೆ.
10:26 ಕ್ಲಾಕ್- ವೈಸ್ ಅಥವಾ anti ಕ್ಲಾಕ್- ವೈಸ್ ದಿಕ್ಕಿನಲ್ಲಿ, ಸಬ್ಸ್ಟಿಟ್ಯುಯೆಂಟ್ ಗೆ ಕೊಡುವ ಮೇಲೆ ಆದ್ಯತೆಯ ಮೇಲೆ, 'ಆರ್ ಎಸ್ ಕಾನ್ಫಿಗರೇಷನ್', ಅವಲಂಬಿಸಿದೆ.
10:35 ಆದ್ಯತೆಯು, ಸಬ್ಸ್ಟಿಟ್ಯುಯೆಂಟ್ ನ ಪರಮಾಣುವಿನ ಸಂಖ್ಯೆಯನ್ನು ಅವಲಂಬಿಸಿದೆ.
10:40 ಹೆಚ್ಚಿನ ಪರಮಾಣು ಸಂಖ್ಯೆಯನ್ನು ಹೊಂದಿದ ಸಬ್ಸ್ಟಿಟ್ಯುಯೆಂಟ್, ಮೊದಲ ಆದ್ಯತೆಯನ್ನು ಪಡೆಯುತ್ತದೆ.
10:45 ಈಗ ನಾವು ಕ್ಲಾಕ್- ವೈಸ್ ದಿಕ್ಕಿನಲ್ಲಿ, ಆದ್ಯತೆಯನ್ನು ನೋಡುತ್ತೇವೆ.
10:49 ಈ ರಚನೆಯಲ್ಲಿ, ನೈಟ್ರೋಜನ್ ಗೆ ಮೊದಲ ಆದ್ಯತೆಯನ್ನು ಕೊಡಲಾಗಿದೆ.
10:53 ಆಕ್ಸಿಜನ್ ಗಳಿಗೆ ಹೊಂದಿಕೊಂಡ ಕಾರ್ಬನ್ ಗೆ ಎರಡನೇ ಮತ್ತು ಮೀಥೈಲ್ ಗೆ ಮೂರನೆ ಆದ್ಯತೆಯನ್ನು ಕೊಡಲಾಗಿದೆ.
11:02 ರಚನೆಯು 'R ಕಾನ್ಫಿಗರೇಷನ್' ಅನ್ನು ಹೊಂದಿದೆ.
11:05 ನಾನು ಕೈರಾಲ್ ಕಾರ್ಬನ್ ಗೆ ಹೊಂದಿಕೊಂಡ ಗುಂಪುಗಳ ಸ್ಥಾನಗಳನ್ನು ಬದಲಾಯಿಸುವೆನು.
11:10 Build ಮೆನ್ಯುವಿಗೆ ಹೋಗಿ, Remove Hydrogens ಅನ್ನು ಆಯ್ಕೆಮಾಡಿ.
11:15 Manipulation ಟೂಲ್ ಅನ್ನು ಕ್ಲಿಕ್ ಮಾಡಿ.
11:17 ಕಾರ್ಬನ್ ಅನ್ನು ಬಲಭಾಗಕ್ಕೆ ಸರಿಸಿ.
11:20 ಆಕ್ಸಿಜನ್ ಗಳಿಗೆ ಹೊಂದಿಕೊಂಡ ಕಾರ್ಬನ್ ಅನ್ನು ಎಡಭಾಗಕ್ಕೆ ಸರಿಸಿ.
11:25 Build ಮೆನ್ಯುಗೆ ಹೋಗಿ, Add Hydrogens ಅನ್ನು ಆಯ್ಕೆಮಾಡಿ.
11:29 ಈಗ ನಾವು anti ಕ್ಲಾಕ್- ವೈಸ್ ದಿಕ್ಕಿನಲ್ಲಿ ಆದ್ಯತೆಯನ್ನು ನೋಡುವೆವು.
11:33 ನೈಟ್ರೋಜನ್, ಮೊದಲ ಆದ್ಯತೆಯನ್ನು ಹೊಂದಿದೆ. ಆಕ್ಸಿಜನ್ ಗೆ ಹೊಂದಿಕೊಂಡ ಕಾರ್ಬನ್ ಎರಡನೇ ಆದ್ಯತೆಯನ್ನು ಮತ್ತು ಮೀಥೈಲ್ ಮೂರನೆ ಆದ್ಯತೆಯನ್ನು ಪಡೆದಿದೆ.
11:45 ಈ ರಚನೆಯು 'ಎಸ್ ಕಾನ್ಫಿಗರೇಷನ್' ಅನ್ನು ಹೊಂದಿದೆ.
11:48 ಇದೇರೀತಿ, ಪ್ಯಾನಲ್ ನಲ್ಲಿ ನಾವು, 'ಗ್ಲಿಸೆರಾಲ್ಡಿಹೈಡ್' ನ R ಮತ್ತು S ಕಾನ್ಫಿಗರೇಷನ್ ಗಳನ್ನು ಹೊಂದಿದ್ದೇವೆ.
11:55 ಸಂಕ್ಷಿಪ್ತವಾಗಿ,
11:57 ಈ ಟ್ಯುಟೋರಿಯಲ್ ನಲ್ಲಿ ನಾವು, '1,2-ಡೈಕ್ಲೋರೋ ಇಥೇನ್' ನ 'ಕನ್ಫರ್ಮೇಷನ್' ಗಳು, ಸೈಕ್ಲೋಹೆಕ್ಸೇನ್ ನ ಕನ್ಫರ್ಮೇಷನ್ ಗಳು, 'ಸಿಸ್ಪ್ಲ್ಯಾಟಿನ್' ನ (cisplatin) 'ಜಾಮೆಟ್ರಿಕಲ್ ಐಸೋಮರ್' ಗಳು, 'ಅಮಿನೋ ಆಸಿಡ್ ಅಲನೈನ್' ನ 'ಆರ್ ಎಸ್ ಕಾನ್ಫಿಗರೇಷನ್'- ಇವುಗಳನ್ನು ರಚಿಸಲು ಕಲಿತಿದ್ದೇವೆ.
12:15 ಇಲ್ಲಿ ಒಂದು ಅಸೈನ್ ಮೆಂಟ್ ಇದೆ: '2-ಬ್ಯುಟೇನ್' ಮತ್ತು'1,2-ಡೈಕ್ಲೋರೋ ಇಥೇನ್' ಗಳ 'ಜಾಮೆಟ್ರಿಕಲ್ ಐಸೋಮರ್' ಗಳನ್ನು ರಚಿಸಿ. 'ಬ್ರೋಮೋ ಕ್ಲೋರೋ ಅಯೋಡೋ ಮಿಥೇನ್' ನ 'ಆರ್-ಎಸ್ ಕಾನ್ಫಿಗರೇಷನ್' ಗಳನ್ನು ರಚಿಸಿ.
12:29 ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
12:37 ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
12:44 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
12:51 ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14