Avogadro/C3/Stereoisomerism/Kannada
From Script | Spoken-Tutorial
|
|
00:01 | Stereoisomerism (ಸ್ಟೀರಿಯೋ-ಐಸೊಮೆರಿಸಮ್) ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, Conformational isomerism (ಕನ್ಫರ್ಮೇಷನಲ್ ಐಸೊಮೆರಿಸಮ್)
Geometrical isomerism(ಜಾಮೆಟ್ರಿಕಲ್ ಐಸೋಮೆರಿಸಮ್) ಮತ್ತು R-S configurations (ಆರ್. ಎಸ್ ಕಾನ್ಫಿಗರೇಷನ್ಸ್) ಇವುಗಳ ಕುರಿತು ಉದಾಹರಣೆಗಳೊಂದಿಗೆ ಕಲಿಯುವೆವು. |
00:18 | ಇಲ್ಲಿ ನಾನು , Ubuntu Linux OS, ಆವೃತ್ತಿ 14.04 ಮತ್ತು Avogadro ಆವೃತ್ತಿ 1.1.1. ಇವುಗಳನ್ನು ಬಳಸುತ್ತಿದ್ದೇನೆ. |
00:28 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು, Avogadro ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ. |
00:39 | ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಉದಾಹರಣೆಯ ಫೈಲ್ ಗಳನ್ನು ಕೋಡ್ ಫೈಲ್ ಗಳೆಂದು ಕೊಡಲಾಗಿದೆ. |
00:45 | ಈ ಟ್ಯುಟೋರಿಯಲ್ ನಲ್ಲಿ ನಾವು, ಅವೊಗ್ಯಡ್ರೋ ವನ್ನು ಬಳಸಿ, ಸ್ಟಿರಿಯೋ-ಐಸೋಮರ್ ಗಳನ್ನು ರಚಿಸಲು ಕಲಿಯುವೆವು. |
00:51 | ನಾನು ಸ್ಟಿರಿಯೋ-ಐಸೋಮೆರಿಸಮ್ ನ ಕುರಿತು ಕಿರು ಪರಿಚಯವನ್ನು ಕೊಡುವೆನು. |
00:56 | ಪರಮಾಣುಗಳ ಸ್ಥಾನದ ಜೋಡಣೆಯಲ್ಲಿನ ವ್ಯತ್ಯಾಸಗಳಿಂದ 'ಸ್ಟೀರಿಯೋ-ಐಸೊಮೆರಿಸಮ್' ಉಂಟಾಗುತ್ತದೆ. |
01:03 | ಐಸೋಮರ್ ಗಳು ಒಂದೇ ರಚನೆಯನ್ನು ಹೊಂದಿರುವುದರಿಂದ ಅವುಗಳ ಗುಣಲಕ್ಷಣಗಳಲ್ಲಿ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. |
01:09 | ಇಲ್ಲಿ, ಐಸೋಮರ್ ಗಳ ವರ್ಗೀಕರಣವನ್ನು ತೋರಿಸುವ ಒಂದು ಸ್ಲೈಡ್ ಇದೆ. |
01:16 | ನಾನು Conformational isomerism (ಕನ್ಫರ್ಮೇಷನಲ್ ಐಸೊಮೆರಿಸಮ್) ನಿಂದ ಪ್ರಾರಂಭಿಸುವೆನು. |
01:21 | ಇದು ಸ್ಟಿರಿಯೋ-ಐಸೋಮರಿಸಮ್ ನ ಒಂದು ವಿಧವಾಗಿದೆ. |
01:23 | ಇದರಲ್ಲಿ, ಐಸೋಮರ್ ಗಳನ್ನು ಸಿಂಗಲ್-ಬಾಂಡ್ ನ ಸುತ್ತ ತಿರುಗಿಸುವುದರ ಮೂಲಕ, ಅವುಗಳನ್ನು ಒಂದರಿಂದ ಇನ್ನೊಂದಕ್ಕೆ ಪರಿವರ್ತಿಸಬಹುದು. |
01:30 | ಸಿಂಗಲ್-ಬಾಂಡ್ ನ ಸುತ್ತ ತಿರುಗಿಸುವುದು, ರೊಟೇಷನಲ್ ಎನರ್ಜಿ ಬ್ಯಾರಿಯರ್ ನಿಂದ ನಿರ್ಬಂಧಿತವಾಗಿದೆ. |
01:36 | ಈಗ ನಾವು '1,2-ಡೈಕ್ಲೋರೋ ಇಥೇನ್' ನ ಕನ್ಫರ್ಮರ್ ಗಳೊಂದಿಗೆ ಪ್ರಾರಂಭಿಸೋಣ. |
01:41 | '1,2-ಡೈಕ್ಲೋರೋ ಇಥೇನ್', ಎಕ್ಲಿಪ್ಸ್ಡ್ (Eclipsed), ಗಾಶ್ Gauche ಮತ್ತು ಆಂಟಿ (Anti) ಎಂಬ ಮೂರು ಕನ್ಫರ್ಮರ್ ಗಳಲ್ಲಿ ಇರುತ್ತದೆ. |
01:50 | ನಾನು ಅವೊಗ್ಯಡ್ರೋ ವಿಂಡೊ ವನ್ನು ತೆರೆದಿದ್ದೇನೆ. |
01:53 | Draw ಟೂಲ್ ನ ಮೇಲೆ ಕ್ಲಿಕ್ ಮಾಡಿ. |
01:55 | Adjust Hydrogens ಎಂಬ ಚೆಕ್ ಬಾಕ್ಸ್ ಅನ್ನು ಅನ್-ಚೆಕ್ ಮಾಡಿ. |
01:59 | ಎರಡು ಪರಮಾಣುಗಳನ್ನು ರಚಿಸಲು, Panel ನ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ. |
02:04 | Element ಡ್ರಾಪ್ ಡೌನ್ ನಿಂದ, Chlorine ಅನ್ನು ಆಯ್ಕೆಮಾಡಿ. |
02:08 | ಪ್ರತಿಯೊಂದು 'ಕಾರ್ಬನ್' ನ ಮೇಲೆ, ಒಂದು ಬಾಂಡ್ ಅನ್ನು ರಚಿಸಿ. |
02:11 | Build ಮೆನ್ಯು ಗೆ ಹೋಗಿ, Add Hydrogens ಅನ್ನು ಕ್ಲಿಕ್ ಮಾಡಿ. |
02:15 | ಪ್ಯಾನಲ್ ನ ಮೇಲೆ, '1,2-ಡೈಕ್ಲೋರೋ ಇಥೇನ್' ಅನ್ನು ರಚಿಸಲಾಗಿದೆ. |
02:19 | ಈ ರಚನೆಯನ್ನು ಆಪ್ಟಿಮೈಜ್ ಮಾಡೋಣ. |
02:22 | Auto Optimization ಟೂಲ್ ಅನ್ನು ಕ್ಲಿಕ್ ಮಾಡಿ. |
02:25 | Force Field ನಲ್ಲಿ, MMFF94 ಅನ್ನು ಆಯ್ಕೆಮಾಡಿ, Start ಅನ್ನು ಕ್ಲಿಕ್ ಮಾಡಿ. |
02:35 | ಆಪ್ಟಿಮೈಜೇಷನ್ ಕ್ರಿಯೆಯನ್ನು ನಿಲ್ಲಿಸಲು, Stop ಅನ್ನು ಕ್ಲಿಕ್ ಮಾಡಿ. |
02:40 | ರಚನೆಯನ್ನು ಸರಿಯಾಗಿ ಹೊಂದಿಸಲು (orientation) , Navigation ಟೂಲ್ ಅನ್ನು ಕ್ಲಿಕ್ ಮಾಡಿ. |
02:45 | ಪ್ಯಾನಲ್ ನಲ್ಲಿ ನಾವು, 'ಗಾಶ್ ಕನ್ಫರ್ಮರ್' ಅನ್ನು ಹೊಂದಿದ್ದೇವೆ. |
02:49 | '1,2-ಡೈಕ್ಲೋರೋ ಇಥೇನ್' ನ ಕನ್ಫರ್ಮರ್ ಗಳನ್ನು ತೋರಿಸಲು, ನಾನು ಸುತ್ತುವಿಕೆಯ ಪ್ಲೇನ್ ಅನ್ನು ನಿರ್ಧರಿಸುವೆನು. |
02:55 | Bond Centric Manipulation (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್) ಟೂಲ್ ಅನ್ನು ಕ್ಲಿಕ್ ಮಾಡಿ. |
02:59 | ಎರಡು ಕಾರ್ಬನ್ ಪರಮಾಣುಗಳ ನಡುವಿನ ಬಾಂಡ್ ನ ಮೇಲೆ ಕ್ಲಿಕ್ ಮಾಡಿ. |
03:03 | ಎರಡು ಪರಮಾಣುಗಳ ನಡುವಿನ ಪ್ಲೇನ್, ನೀಲಿ ಅಥವಾ ಹಳದಿ ಬಣ್ಣದಲ್ಲಿ ಕಾಣುತ್ತದೆ. |
03:08 | ಕರ್ಸರ್ ಅನ್ನು, ಕ್ಲೋರಿನ್ ಪರಮಾಣುವಿನ ಮೇಲಿಡಿ. |
03:10 | ಬಾಂಡ್ ಅನ್ನು, ಕ್ಲಾಕ್-ವೈಸ್ ದಿಕ್ಕಿನಲ್ಲಿ ತಿರುಗಿಸಿ. |
03:14 | Navigation ಟೂಲ್ ನ ಮೇಲೆ ಕ್ಲಿಕ್ ಮಾಡಿ, ರಚನೆಯನ್ನು ತಿರುಗಿಸಿ. |
03:18 | ನಾವು ಪ್ಯಾನಲ್ ನಲ್ಲಿ , Anti conformer (ಆಂಟಿ ಕನ್ಫರ್ಮರ್) ಅನ್ನು ಹೊಂದಿದ್ದೇವೆ. |
03:21 | C-C bond ಅನ್ನು ತಿರುಗಿಸಲು, ಇನ್ನೊಮ್ಮೆ 'ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್' ಟೂಲ್ ಅನ್ನು ಬಳಸಿ. |
03:25 | ನಾವು ಪ್ಯಾನಲ್ ನಲ್ಲಿ, 'ಎಕ್ಲಿಪ್ಸ್ಡ್ ಕನ್ಫರ್ಮರ್' ಅನ್ನು (Eclipsed conformer) ಹೊಂದಿದ್ದೇವೆ. |
03:30 | ಈಗ ನಾನು, ಸೈಕ್ಲೋಹೆಕ್ಸೇನ್ ನ ವಿವಿಧ ಕನ್ಫರ್ಮರ್ ಗಳನ್ನು ತೋರಿಸುವೆನು. |
03:35 | ಒಂದು ಹೊಸ ವಿಂಡೋ ವನ್ನು ತೆರೆಯಿರಿ. |
03:38 | Draw settings ಮೆನ್ಯುವಿನಲ್ಲಿ, ಡಿಫಾಲ್ಟ್ ಆಗಿ, Carbon ಆಯ್ಕೆಯಾಗಿದೆ. |
03:44 | Adjust Hydrogens ಎಂಬ ಚೆಕ್ ಬಾಕ್ಸ್ ಅನ್ನು ಅನ್-ಚೆಕ್ ಮಾಡಿ. |
03:48 | ನಾವು ಸೈಕ್ಲೋಹೆಕ್ಸೇನ್ ನ ರಚನೆಯನ್ನು ದೋಣಿಯಾಕಾರದಲ್ಲಿ ರಚಿಸೋಣ. |
03:53 | ಪ್ಯಾನಲ್ ನಲ್ಲಿ, ಸೈಕ್ಲೋಹೆಕ್ಸೇನ್ ನ ಬೋಟ್ ಕನ್ಫರ್ಮರ್ ಅನ್ನು ರಚಿಸಲು, ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ. |
04:01 | ಪರಮಾಣುಗಳನ್ನು ಲೇಬಲ್ ಮಾಡಲು, Display Types ಮೆನ್ಯುವಿನಲ್ಲಿ, Label ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
04:07 | ಗಮನಿಸಿ: ಲೇಬಲ್ ಮಾಡುವುದು, ಎಲ್ಲ ಸಮಯದಲ್ಲಿ ಒಂದೇ ರೀತಿಯಾಗಿರುವುದಿಲ್ಲ. |
04:11 | ನಮ್ಮ ಅಗತ್ಯಕ್ಕೆ ತಕ್ಕಂತೆ, ಕನ್ಫರ್ಮರ್ ಗಳನ್ನು ಲೇಬಲ್ ಮಾಡೋಣ. |
04:16 | Selection ಟೂಲ್ ಮೇಲೆ ಕ್ಲಿಕ್ ಮಾಡಿ. ನಂತರ, ಮೊದಲ ಕಾರ್ಬನ್ ಪರಮಾಣುವಿನ ಮೇಲೆ ರೈಟ್-ಕ್ಲಿಕ್ ಮಾಡಿ. |
04:21 | ಒಂದು ಮೆನ್ಯು ತೆರೆದುಕೊಳ್ಳುತ್ತದೆ. Change label ಅನ್ನು ಆಯ್ಕೆಮಾಡಿ. |
04:25 | Change label of the atom ಎಂಬ ಟೆಕ್ಸ್ಟ್- ಬಾಕ್ಸ್ ತೆರೆದುಕೊಳ್ಳುತ್ತದೆ. |
04:30 | New Label ಫೀಲ್ಡ್ ನಲ್ಲಿ, 1 ಎಂದು ಟೈಪ್ ಮಾಡಿ, OK ಯನ್ನು ಕ್ಲಿಕ್ ಮಾಡಿ. |
04:35 | ನಂತರ, ಎರಡನೇ ಪರಮಾಣುವಿನ ಮೇಲೆ ರೈಟ್- ಕ್ಲಿಕ್ ಮಾಡಿ ಮತ್ತು ಲೇಬಲ್ ಅನ್ನು 2 ಎಂದು ಬದಲಾಯಿಸಿ. |
04:41 | ಹೀಗೆಯೇ, ನಾನು ಪರಮಾಣುಗಳ ಲೇಬಲ್ ಗಳನ್ನು 3, 4, 5 ಮತ್ತು 6 ಎಂದು ಬದಲಾಯಿಸುವೆನು. |
04:50 | ನಾವು 'ಬೋಟ್ ಕನ್ಫರ್ಮರ್' ಅನ್ನು 'ಟ್ವಿಸ್ಟ್ ಬೋಟ್ ಕನ್ಫರ್ಮರ್' ಆಗಿ ಪರಿವರ್ತಿಸುವೆವು. |
04:54 | Manipulation ಟೂಲ್ ಅನ್ನು ಕ್ಲಿಕ್ ಮಾಡಿ. 2 ರ ಮೇಲೆ ಕ್ಲಿಕ್ ಮಾಡಿ, ಅದನ್ನು ಮೇಲ್ಮುಖವಾಗಿ ಎಳೆಯಿರಿ. |
04:57 | 5 ಅನ್ನು ಕ್ಲಿಕ್ ಮಾಡಿ, ಅದನ್ನು ಮೇಲ್ಮುಖವಾಗಿ ಎಳೆಯಿರಿ. 3 ಅನ್ನು ಕ್ಲಿಕ್ ಮಾಡಿ, ಅದನ್ನು ಮೇಲ್ಮುಖವಾಗಿ ಎಳೆಯಿರಿ. |
05:08 | ಈಗ ನಾವು ಪ್ಯಾನಲ್ ನಲ್ಲಿ, ಟ್ವಿಸ್ಟ್ ಬೋಟ್ ಅನ್ನು ಹೊಂದಿದ್ದೇವೆ. |
05:10 | ಈಗ ನಾವು, 'ಟ್ವಿಸ್ಟ್ ಬೋಟ್' ಅನ್ನು 'ಹಾಫ್ ಚೇರ್ ಕನ್ಫರ್ಮರ್' ಆಗಿ ಪರಿವರ್ತಿಸುವೆವು. |
05:16 | 2 ಅನ್ನು ಕ್ಲಿಕ್ ಮಾಡಿ, ಅದನ್ನು ಕೆಳಮುಖವಾಗಿ ಎಳೆಯಿರಿ. |
05:19 | 5 ಅನ್ನು ಕ್ಲಿಕ್ ಮಾಡಿ, ಅದನ್ನು ಕೆಳಮುಖವಾಗಿ ಎಳೆಯಿರಿ. |
05:23 | 4 ಅನ್ನು ಕ್ಲಿಕ್ ಮಾಡಿ, ಮತ್ತು ಅಡ್ಡಲಾಗಿ (ಹಾರಿಝೋಂಟಲ್ ) ಎಳೆಯಿರಿ. |
05:27 | ಅಗತ್ಯವಿದ್ದಲ್ಲಿ, ಸರಿಯಾದ ರಚನೆಯನ್ನು ಪಡೆಯಲು, ಎಲ್ಲಾ ಕಾರ್ಬನ್ ಪರಮಾಣುಗಳ ಸ್ಥಾನವನ್ನು ಹೊಂದಿಸಿ. |
05:33 | ಪ್ಯಾನಲ್ ನಲ್ಲಿ, ನಾವು 'ಹಾಫ್-ಚೇರ್' ಅನ್ನು ಹೊಂದಿದ್ದೇವೆ. |
05:36 | ಈಗ ನಾವು, 'ಹಾಫ್ ಚೇರ್' ಅನ್ನು 'ಚೇರ್ ಕನ್ಫರ್ಮರ್' ಆಗಿ ಪರಿವರ್ತಿಸುವೆವು. |
05:41 | 4 ಅನ್ನು ಕ್ಲಿಕ್ ಮಾಡಿ, ಅದನ್ನು ಕೆಳಮುಖವಾಗಿ ಎಳೆಯಿರಿ. |
05:44 | 1 ಅನ್ನು ಕ್ಲಿಕ್ ಮಾಡಿ, ಅದನ್ನು ಕೆಳಮುಖವಾಗಿ ಎಳೆಯಿರಿ. |
05:47 | ಅಗತ್ಯವಿದ್ದಲ್ಲಿ, ಸರಿಯಾದ ರಚನೆಯನ್ನು ಪಡೆಯಲು, ಎಲ್ಲಾ ಕಾರ್ಬನ್ ಪರಮಾಣುಗಳ ಸ್ಥಾನವನ್ನು ಹೊಂದಿಸಿ. |
05:53 | ಪ್ಯಾನಲ್ ನಲ್ಲಿ, ನಾವು 'ಚೇರ್ ಕನ್ಫರ್ಮರ್' ಅನ್ನು ಹೊಂದಿದ್ದೇವೆ. |
05:56 | ಒಂದು ಅಸೈನ್ಮೆಂಟ್: ಬ್ಯುಟೇನ್ ಮತ್ತು 'ಸೈಕ್ಲೋ ಪೆಂಟೇನ್' ಗಳ ವಿವಿಧ ಕನ್ಫರ್ಮರ್ ಗಳನ್ನು ರಚಿಸಿ. |
06:03 | ಈಗ ನಾನು, 'ಜಾಮೆಟ್ರಿಕಲ್ ಐಸೋಮೆರಿಸಮ್' ಅನ್ನು ತೋರಿಸಲು ಕೆಲವು ರಚನೆಗಳನ್ನು ಬರೆಯುವೆನು. |
06:09 | ಡಬಲ್ ಬಾಂಡ್ ನ ಸುತ್ತ, ಪರಮಾಣುಗಳ ವಿಭಿನ್ನ ಸ್ಥಾನದಲ್ಲಿನ ಜೋಡಣೆಗಳಿಂದ, 'ಜಾಮೆಟ್ರಿಕಲ್ ಐಸೋಮೆರಿಸಮ್' ಉಂಟಾಗುತ್ತದೆ. |
06:17 | ಇಲ್ಲಿ, ಡಬಲ್ ಬಾಂಡ್ ಹೊಂದಿರುವ ಕಾರ್ಬನ್ ನ ಸುತ್ತ, ಪರಮಾಣುಗಳ ಅಥವಾ ಗುಂಪುಗಳ ಸುತ್ತುವಿಕೆಯು ಸೀಮಿತವಾಗಿದೆ. |
06:24 | ನಾನು ವಿವರಣೆಗಾಗಿ, 'ಡೈಅಮೈನ್ ಡೈ ಕ್ಲೋರೋ ಪ್ಲ್ಯಾಟಿನಂ ಟು' ರಚನೆಯನ್ನು ಬರೆಯುವೆನು. ಇದನ್ನು 'ಸಿಸ್ಪ್ಲ್ಯಾಟಿನ್' ಎಂದು ಸಹ ಕರೆಯುತ್ತಾರೆ. |
06:33 | ಒಂದು ಹೊಸ ವಿಂಡೋ ವನ್ನು ಓಪನ್ ಮಾಡಿ. |
06:36 | Draw settings ಮೆನ್ಯುವಿನಲ್ಲಿ, Element ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Other ಅನ್ನು ಆಯ್ಕೆಮಾಡಿ.
Periodic table (ಪೀರಿಯಾಡಿಕ್ ಟೇಬಲ್) ಎಂಬ ವಿಂಡೋ ತೆರೆದುಕೊಳ್ಳುತ್ತದೆ. |
06:44 | ಟೇಬಲ್ ನಿಂದ, 'ಪ್ಲಾಟಿನಮ್ (Pt)' ಅನ್ನು ಆಯ್ಕೆ ಮಾಡಿ. Periodic table ವಿಂಡೋವನ್ನು ಕ್ಲೋಸ್ ಮಾಡಿ. |
06:50 | ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ. |
06:53 | Element ಡ್ರಾಪ್ ಡೌನ್ ನಿಂದ, Chlorine (ಕ್ಲೋರಿನ್) ಅನ್ನು ಆಯ್ಕೆ ಮಾಡಿ. |
06:55 | ಪ್ಲ್ಯಾಟಿನಂ ಪರಮಾಣುವಿನ ಒಂದೇ ಬದಿಯಲ್ಲಿ, ಎರಡು ಕ್ಲೋರಿನ್ ಬಾಂಡ್ ಗಳನ್ನು ರಚಿಸಿ. |
07:00 | Element ಡ್ರಾಪ್ ಡೌನ್ ನಿಂದ, Nitrogen ಅನ್ನು ಆಯ್ಕೆ ಮಾಡಿ. ಮೊದಲಿನಂತೆಯೇ, ಎರಡು ನೈಟ್ರೋಜನ್ ಬಾಂಡ್ ಅನ್ನು ರಚಿಸಿ. |
07:07 | ರಚನೆಯನ್ನು ಪೂರ್ಣಗೊಳಿಸಲು, ನಮಗೆ ನೈಟ್ರೋಜನ್ ಪರಮಾಣುಗಳಿಗೆ ಹೊಂದಿಕೊಂಡ ಮೂರು ಹೈಡ್ರೋಜನ್ ಗಳು ಬೇಕು. |
07:13 | Element ಡ್ರಾಪ್ ಡೌನ್ ನಿಂದ, Hydrogen ಅನ್ನು ಆಯ್ಕೆ ಮಾಡಿ. |
07:16 | ಮೂರನೇ ಬಾಂಡ್ ಅನ್ನು ರಚಿಸಲು, ಪ್ರತಿಯೊಂದು ನೈಟ್ರೋಜನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ. |
07:21 | ನಾವು ರಚನೆಯನ್ನು ಆಪ್ಟಿಮೈಜ್ ಮಾಡೋಣ. |
07:24 | Auto Optimization ಟೂಲ್ ನ ಮೇಲೆ ಕ್ಲಿಕ್ ಮಾಡಿ. |
07:27 | Force Field ಫೀಲ್ಡ್ ನಲ್ಲಿ, UFF ಅನ್ನು ಆಯ್ಕೆ ಮಾಡಿ ಮತ್ತು Start ಬಟನ್ ಅನ್ನು ಕ್ಲಿಕ್ ಮಾಡಿ. |
07:35 | ಆಪ್ಟಿಮೈಜೇಷನ್ ಕ್ರಿಯೆಯನ್ನು ನಿಲ್ಲಿಸಲು, Stop ಅನ್ನು ಕ್ಲಿಕ್ ಮಾಡಿ. |
07:39 | ವಿವರಣೆಗಾಗಿ, ನನಗೆ ಎರಡು ರಚನೆಗಳ ಅವಶ್ಯಕತೆಯಿದೆ. |
07:43 | ನಾನು ರಚನೆಗಳನ್ನು ಕಾಪಿ ಮಾಡಿ, ಪೇಸ್ಟ್ ಮಾಡುವೆನು. |
07:46 | ರಚನೆಯನ್ನು ಆಯ್ಕೆ ಮಾಡಲು, Selection ಟೂಲ್ ಅನ್ನು ಕ್ಲಿಕ್ ಮಾಡಿ. |
07:50 | ಕಾಪಿ ಮಾಡಲು CTRL+C ಯನ್ನು ಮತ್ತು ಪೇಸ್ಟ್ ಮಾಡಲು CTRL+V ಯನ್ನು ಒತ್ತಿ. ಪೇಸ್ಟ್ ಮಾಡಿದ ರಚನೆಯನ್ನು ಬಲಕ್ಕೆ ಎಳೆಯಿರಿ. |
07:57 | ನಮ್ಮ ಅನುಕೂಲಕ್ಕಾಗಿ, ನಾನು ಪರಮಾಣುಗಳನ್ನು ಲೇಬಲ್ ಮಾಡುವೆನು. |
08:00 | Display Types ಮೆನ್ಯುವಿನಲ್ಲಿ, Label ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
08:05 | Hydrogen ಗಳನ್ನು ತೆಗೆದುಹಾಕಲು, Build ಮೆನ್ಯುವಿಗೆ ಹೋಗಿ ಮತ್ತು Remove Hydrogens ಅನ್ನು ಆಯ್ಕೆಮಾಡಿ. |
08:11 | ನಾವು ಪ್ಯಾನಲ್ ನಲ್ಲಿ, ಸಿಸ್ಪ್ಲ್ಯಾಟಿನ್ ನ ಎರಡು ಐಸೋಮರ್ ಗಳನ್ನು ಹೊಂದಿದ್ದೇವೆ. |
08:16 | ನಾನು ಎರಡನೆಯ 'ಸಿಸ್ ಐಸೋಮರ್' ಅನ್ನು 'ಟ್ರಾನ್ಸ್ ಐಸೋಮರ್' ಆಗಿ ಪರಿವರ್ತಿಸುವೆನು. |
08:21 | Manipulation ಟೂಲ್ ಅನ್ನು ಕ್ಲಿಕ್ ಮಾಡಿ. |
08:24 | Cl 4 ಅನ್ನು (ಸಿ ಎಲ್ ಫೋರ್) ಕ್ಲಿಕ್ ಮಾಡಿ ಎಡಕ್ಕೆ ಎಳೆಯಿರಿ. N4 ಅನ್ನು ಕ್ಲಿಕ್ ಮಾಡಿ ಬಲಕ್ಕೆ ಎಳೆಯಿರಿ. |
08:32 | ನಂತರ, ಸರಿಯಾದ ಓರಿಯಂಟೇಶನ್ ಅನ್ನು ತೋರಿಸಲು, ಎಲ್ಲ ಬಾಂಡ್ ಗಳ ಸ್ಥಾನವನ್ನು ಹೊಂದಿಸಿ. |
08:38 | Build ಮೆನ್ಯುವಿಗೆ ಹೋಗಿ, Add Hydrogens ಅನ್ನು ಆಯ್ಕೆಮಾಡಿ. |
08:43 | ಮೊದಲಿನಂತೆ, ಪ್ರತಿಯೊಂದು ನೈಟ್ರೋಜನ್ ಗೆ, ಎರಡು ಪರಮಾಣುಗಳು ಹೊಂದಿಕೊಂಡಿವೆ. |
08:48 | Draw ಟೂಲ್ ನಲ್ಲಿರುವ, Hydrogen ಅನ್ನು ಬಳಸಿ ಮೂರನೆಯ ಹೈಡ್ರೋಜನ್ ಅನ್ನು ಸೇರಿಸಿ. |
08:53 | ನಾವು ರಚನೆಯನ್ನು ಆಪ್ಟಿಮೈಜ್ ಮಾಡೋಣ. |
08:55 | Auto Optimization ಟೂಲ್ ಅನ್ನು ಕ್ಲಿಕ್ ಮಾಡಿ. |
08:59 | Force Field ನಲ್ಲಿ, UFF ಅನ್ನು ಆಯ್ಕೆಮಾಡಿ ಮತ್ತು Start ಬಟನ್ ಅನ್ನು ಕ್ಲಿಕ್ ಮಾಡಿ. |
09:05 | ಆಪ್ಟಿಮೈಜೇಷನ್ ಕ್ರಿಯೆಯನ್ನು ನಿಲ್ಲಿಸಲು, Stop ಬಟನ್ ಅನ್ನು ಒತ್ತಿ. |
09:09 | ಈಗ ಪ್ಯಾನಲ್ ನಲ್ಲಿ ನಾವು, 'ಡೈಅಮೈನ್ ಡೈಕ್ಲೋರೋ ಪ್ಲ್ಯಾಟಿನಮ್ ಟು' ದ ಎರಡು 'ಜಾಮೆಟ್ರಿಕಲ್ ಐಸೋಮರ್' ಗಳನ್ನು ಹೊಂದಿದ್ದೇವೆ. |
09:17 | ಇದೇರೀತಿ, 'ಡೈಅಮೈನ್ ಟೆಟ್ರಾ ಸೈನೋಫರೇಟ್ ಥ್ರೀ ಅಯಾನ್' ನ 'ಜಾಮೆಟ್ರಿಕಲ್ ಐಸೋಮರ್' ಗಳನ್ನು ಹೊಂದಿದ್ದೇವೆ. |
09:25 | ನಂತರ, ನಾವು R-S configuration(ಆರ್-ಎಸ್ ಕಾನ್ಫಿಗರೇಷನ್) ನ ಕುರಿತು ಚರ್ಚಿಸುವೆವು. |
09:29 | 'ಆರ್ ಎಸ್ ಕಾನ್ಫಿಗರೇಷನ್ ' ಗಳು Chiral centre(ಕೈರಲ್ ಸೆಂಟರ್) ನ ಇರುವಿಕೆಯಿಂದ ಉಂಟಾಗುತ್ತವೆ. |
09:35 | Chiral centre (ಕೈರಲ್ ಸೆಂಟರ್) ಇದು ಒಂದು ಪರಮಾಣು ಆಗಿದ್ದು, ನಾಲ್ಕು ವಿಭಿನ್ನ ಸಬ್ಸ್ಟಿಟ್ಯುಯೆಂಟ್ (substituent) ಗಳೊಂದಿಗೆ ಹೊಂದಿಕೊಂಡಿರುತ್ತದೆ. |
09:41 | ಕಾನ್ಫಿಗರೇಷನ್ ಗಳು, ಪರಸ್ಪರ 'ನಾನ್ ಸುಪರ್ ಇಂಪೋಸೇಬಲ್ ಮಿರರ್ ಇಮೇಜ್' ಗಳಾಗಿವೆ. |
09:47 | ಆರ್ ಎಸ್ ಕಾನ್ಫಿಗರೇಷನ್ ಗಳ ವಿವರಣೆಗಾಗಿ, ನಾನು ಅಮಿನೋ ಆಸಿಡ್ – ಅಲನೈನ್ ಅನ್ನು ಬಳಸುವೆನು. |
09:53 | ಒಂದು ಹೊಸ ವಿಂಡೋವನ್ನು ತೆರೆಯಿರಿ. |
09:56 | ನಾನು Fragment library (ಫ್ರ್ಯಾಗ್ಮೆಂಟ್ ಲೈಬ್ರರಿ) ಯಿಂದ, Alanine (ಅಲನೈನ್) ರಚನೆಯನ್ನು ಲೋಡ್ ಮಾಡುವೆನು. |
10:01 | ಫ್ರ್ಯಾಗ್ಮೆಂಟ್ ಲೈಬ್ರರಿಯಲ್ಲಿ ಲಭ್ಯವಿರುವ ಎಲ್ಲಾ ಅಮಿನೋ ಆಸಿಡ್ ಗಳು, ಬೆಳಕಿಗೆ ಸಂಬಂಧಿಸಿದಂತೆ ಸಕ್ರಿಯವಾಗಿರುತ್ತವೆ (ಆಪ್ಟಿಕಲಿ ಆಕ್ಟಿವ್). |
10:07 | ನೀವು ಲೋಡ್ ಮಾಡಿ, ಅವುಗಳ ಬಗ್ಗೆ ತಿಳಿದುಕೊಳ್ಳಬಹುದು. |
10:11 | ರಚನೆಯನ್ನು ಡಿ-ಸೆಲೆಕ್ಟ್ ಮಾಡಲು CTRL+SHIFT ಮತ್ತು A ಕೀ ಗಳನ್ನು ಒತ್ತಿ. |
10:15 | ಸರಿಯಾದ ಓರಿಯಂಟೇಶನ್ ಗಾಗಿ, Navigation ಟೂಲ್ ಅನ್ನು ಬಳಸಿ ರಚನೆಯನ್ನು ತಿರುಗಿಸಿ. |
10:22 | ಮಧ್ಯದ ಕಾರ್ಬನ್ ಪರಮಾಣು, ಕೈರಾಲ್ ಆಗಿದೆ. ಇದು ನಾಲ್ಕು ಬೇರೆ ಬೇರೆ ಗುಂಪುಗಳಿಗೆ ಅಂಟಿಕೊಂಡಿದೆ. |
10:26 | ಕ್ಲಾಕ್- ವೈಸ್ ಅಥವಾ anti ಕ್ಲಾಕ್- ವೈಸ್ ದಿಕ್ಕಿನಲ್ಲಿ, ಸಬ್ಸ್ಟಿಟ್ಯುಯೆಂಟ್ ಗೆ ಕೊಡುವ ಆದ್ಯತೆಯ ಮೇಲೆ, 'ಆರ್ ಎಸ್ ಕಾನ್ಫಿಗರೇಷನ್', ಅವಲಂಬಿಸಿದೆ. |
10:35 | ಆದ್ಯತೆಯು, ಸಬ್ಸ್ಟಿಟ್ಯುಯೆಂಟ್ ನ ಪರಮಾಣುವಿನ ಸಂಖ್ಯೆಯನ್ನು ಅವಲಂಬಿಸಿದೆ. |
10:40 | ಹೆಚ್ಚಿನ ಪರಮಾಣು ಸಂಖ್ಯೆಯನ್ನು ಹೊಂದಿದ ಸಬ್ಸ್ಟಿಟ್ಯುಯೆಂಟ್, ಮೊದಲ ಆದ್ಯತೆಯನ್ನು ಪಡೆಯುತ್ತದೆ. |
10:45 | ಈಗ ನಾವು ಕ್ಲಾಕ್- ವೈಸ್ ದಿಕ್ಕಿನಲ್ಲಿ, ಆದ್ಯತೆಯನ್ನು ನೋಡುತ್ತೇವೆ. |
10:49 | ಈ ರಚನೆಯಲ್ಲಿ, ನೈಟ್ರೋಜನ್ ಗೆ ಮೊದಲ ಆದ್ಯತೆಯನ್ನು ಕೊಡಲಾಗಿದೆ. |
10:53 | ಆಕ್ಸಿಜನ್ ಗಳಿಗೆ ಹೊಂದಿಕೊಂಡ ಕಾರ್ಬನ್ ಗೆ ಎರಡನೇ ಮತ್ತು ಮೀಥೈಲ್ ಗೆ ಮೂರನೆ ಆದ್ಯತೆಯನ್ನು ಕೊಡಲಾಗಿದೆ. |
11:02 | ರಚನೆಯು 'R ಕಾನ್ಫಿಗರೇಷನ್' ಅನ್ನು ಹೊಂದಿದೆ. |
11:05 | ನಾನು ಕೈರಾಲ್ ಕಾರ್ಬನ್ ಗೆ ಹೊಂದಿಕೊಂಡ ಗುಂಪುಗಳ ಸ್ಥಾನಗಳನ್ನು ಬದಲಾಯಿಸುವೆನು. |
11:10 | Build ಮೆನ್ಯುವಿಗೆ ಹೋಗಿ, Remove Hydrogens ಅನ್ನು ಆಯ್ಕೆಮಾಡಿ. |
11:15 | Manipulation ಟೂಲ್ ಅನ್ನು ಕ್ಲಿಕ್ ಮಾಡಿ. |
11:17 | ಕಾರ್ಬನ್ ಅನ್ನು ಬಲಭಾಗಕ್ಕೆ ಸರಿಸಿ. |
11:20 | ಆಕ್ಸಿಜನ್ ಗಳಿಗೆ ಹೊಂದಿಕೊಂಡ ಕಾರ್ಬನ್ ಅನ್ನು ಎಡಭಾಗಕ್ಕೆ ಸರಿಸಿ. |
11:25 | Build ಮೆನ್ಯುಗೆ ಹೋಗಿ, Add Hydrogens ಅನ್ನು ಆಯ್ಕೆಮಾಡಿ. |
11:29 | ಈಗ ನಾವು anti ಕ್ಲಾಕ್- ವೈಸ್ ದಿಕ್ಕಿನಲ್ಲಿ ಆದ್ಯತೆಯನ್ನು ನೋಡುವೆವು. |
11:33 | ನೈಟ್ರೋಜನ್, ಮೊದಲ ಆದ್ಯತೆಯನ್ನು ಹೊಂದಿದೆ. ಆಕ್ಸಿಜನ್ ಗೆ ಹೊಂದಿಕೊಂಡ ಕಾರ್ಬನ್ ಎರಡನೇ ಆದ್ಯತೆಯನ್ನು ಮತ್ತು ಮೀಥೈಲ್ ಮೂರನೆ ಆದ್ಯತೆಯನ್ನು ಪಡೆದಿದೆ. |
11:45 | ಈ ರಚನೆಯು 'ಎಸ್ ಕಾನ್ಫಿಗರೇಷನ್' ಅನ್ನು ಹೊಂದಿದೆ. |
11:48 | ಇದೇರೀತಿ, ಪ್ಯಾನಲ್ ನಲ್ಲಿ ನಾವು, 'ಗ್ಲಿಸೆರಾಲ್ಡಿಹೈಡ್' ನ R ಮತ್ತು S ಕಾನ್ಫಿಗರೇಷನ್ ಗಳನ್ನು ಹೊಂದಿದ್ದೇವೆ. |
11:55 | ಸಂಕ್ಷಿಪ್ತವಾಗಿ, |
11:57 | ಈ ಟ್ಯುಟೋರಿಯಲ್ ನಲ್ಲಿ ನಾವು, '1,2-ಡೈಕ್ಲೋರೋ ಇಥೇನ್' ನ 'ಕನ್ಫರ್ಮೇಷನ್' ಗಳು, ಸೈಕ್ಲೋಹೆಕ್ಸೇನ್ ನ ಕನ್ಫರ್ಮೇಷನ್ ಗಳು, 'ಸಿಸ್ಪ್ಲ್ಯಾಟಿನ್' ನ (cisplatin) 'ಜಾಮೆಟ್ರಿಕಲ್ ಐಸೋಮರ್' ಗಳು, 'ಅಮಿನೋ ಆಸಿಡ್ ಅಲನೈನ್' ನ 'ಆರ್ ಎಸ್ ಕಾನ್ಫಿಗರೇಷನ್'- ಇವುಗಳನ್ನು ರಚಿಸಲು ಕಲಿತಿದ್ದೇವೆ. |
12:15 | ಇಲ್ಲಿ ಒಂದು ಅಸೈನ್ ಮೆಂಟ್ ಇದೆ: '2-ಬ್ಯುಟೇನ್' ಮತ್ತು'1,2-ಡೈಕ್ಲೋರೋ ಇಥೇನ್' ಗಳ 'ಜಾಮೆಟ್ರಿಕಲ್ ಐಸೋಮರ್' ಗಳನ್ನು ರಚಿಸಿ. 'ಬ್ರೋಮೋ ಕ್ಲೋರೋ ಅಯೋಡೋ ಮಿಥೇನ್' ನ 'ಆರ್-ಎಸ್ ಕಾನ್ಫಿಗರೇಷನ್' ಗಳನ್ನು ರಚಿಸಿ. |
12:29 | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
12:37 | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
12:44 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
12:51 | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |