What-is-Spoken-Tutorial/C2/What-is-Spoken-Tutorial-12min/Kannada
From Script | Spoken-Tutorial
Time | Narration |
00:01 | ಭಾರತವನ್ನು ಐಟಿ (IT) ಸಾಕ್ಷರ ದೇಶವನ್ನಾಗಿ ಮಾಡುವ ಸಾಮರ್ಥ್ಯವನ್ನು ಹೊಂದಿರುವ, 'ಸ್ಪೋಕನ್-ಟ್ಯುಟೋರಿಯಲ್' ತಂತ್ರಜ್ಞಾನವನ್ನು ಪರಿಚಯಿಸುವ ಪ್ರಸ್ತುತಿಗೆ ನಿಮಗೆ ಸ್ವಾಗತ. |
00:15 | ಸ್ಪೋಕನ್ ಟ್ಯುಟೋರಿಯಲ್ ಎಂದರೇನು? |
00:17 | ಇದು, ಕೆಲವು ಸಾಫ್ಟ್ವೇರ್ ಅನ್ನು ರನ್ನಿಂಗ್ ಕಾಮೆಂಟ್ರಿಯೊಂದಿಗೆ ವಿವರಿಸುವ |
00:19 | ಕಂಪ್ಯೂಟರ್-ಸೆಷನ್ ನ ಒಂದು ರೆಕಾರ್ಡಿಂಗ್ ಆಗಿದೆ. |
00:24 | ಹೀಗೆ ತಯಾರಾದ ಚಲನಚಿತ್ರವೇ ಸ್ಪೋಕನ್-ಟ್ಯುಟೋರಿಯಲ್ ಆಗಿದೆ. |
00:27 | ಸಾಮಾನ್ಯವಾಗಿ ಇದು 10 ನಿಮಿಷಗಳ ಅವಧಿಯನ್ನು ಹೊಂದಿರುತ್ತದೆ. |
00:30 | ಸ್ಪೋಕನ್ ಟ್ಯುಟೋರಿಯಲ್ ಅನ್ನು ತಯಾರಿಸುವ ಹಂತಗಳು ಹೀಗಿವೆ: |
00:33 | Outline (ಔಟ್ಲೈನ್), Script (ಸ್ಕ್ರಿಪ್ಟ್), |
00:35 | Recording (ರೆಕಾರ್ಡಿಂಗ್), Translating the script into other languages ಮತ್ತು |
00:38 | Dubbing (ಡಬ್ಬಿಂಗ್).
ನಾನು ಈ ಹಂತಗಳಲ್ಲಿ ಪ್ರತಿಯೊಂದನ್ನು ವಿವರಿಸುತ್ತೇನೆ. |
00:42 | ನಾವು Xfig ಹಾಗೂ PHP/MySQL ಈ ಎರಡು |
00:47 | ಸಾಫ್ಟ್ವೇರ್ ಸಿಸ್ಟಮ್‌ಗಳ ಔಟ್ಲೈನ್ ಅನ್ನು ತೋರಿಸುತ್ತೇವೆ. |
00:52 | http://spoken-tutorial.org ಯಿಂದ ಈ ಟ್ಯುಟೋರಿಯಲ್ ಗೆ ಅಗತ್ಯವಿರುವ ಎಲ್ಲಾ 'ಲಿಂಕ್' ಗಳನ್ನು ನಾನು ಈಗಾಗಲೇ ಡೌನ್ಲೋಡ್ ಮಾಡಿದ್ದೇನೆ. |
01:03 | ನಾವು Xfig ನ ಔಟ್ಲೈನ್ ಅನ್ನು ನೋಡೋಣ. |
01:09 | PHP ಯ ಔಟ್ಲೈನ್ ಅನ್ನು ನೋಡೋಣ. |
01:15 | ಈಗ ಮುಂದಿನ ಸ್ಲೈಡ್‌ಗೆ ಹೋಗೋಣ. |
01:19 | 'ಸ್ಕ್ರಿಪ್ಟ್', ಸ್ಪೋಕನ್ ಟ್ಯುಟೋರಿಯಲ್ ಗಳನ್ನು ರಚಿಸುವ 2 ನೇ ಹಂತವಾಗಿದೆ. |
01:24 | ಒಂದು ಚಲನಚಿತ್ರಕ್ಕೆ ಉತ್ತಮ ಸ್ಕ್ರಿಪ್ಟ್ ನ ಅಗತ್ಯವಿರುವಂತೆ, |
01:26 | ಸ್ಪೋಕನ್ ಟ್ಯುಟೋರಿಯಲ್ ಗೆ ಸಹ ಉತ್ತಮ ಸ್ಕ್ರಿಪ್ಟ್ ನ ಅಗತ್ಯವಿದೆ. |
01:29 | ಪ್ರಸ್ತುತ ಟ್ಯುಟೋರಿಯಲ್ ನ ಸ್ಕ್ರಿಪ್ಟ್ ಇಲ್ಲಿದೆ. |
01:38 | ಸ್ಕ್ರಿಪ್ಟ್ ಅನ್ನು ಬರೆಯಲು ಮಾರ್ಗಸೂಚಿಗಳು ಇಲ್ಲಿವೆ. |
01:45 | ಮಾರ್ಗಸೂಚಿಗಳನ್ನು ವಿವರಿಸುವ ಟ್ಯುಟೋರಿಯಲ್ ಕೂಡ ಶೀಘ್ರದಲ್ಲೇ ಲಭ್ಯವಾಗುವುದು. |
01:52 | ಈಗ ಒಂದು ಸಣ್ಣ 'ಸ್ಪೋಕನ್ ಟ್ಯುಟೋರಿಯಲ್' ಅನ್ನು ತಯಾರಿಸುತ್ತೇನೆ. ಅದು ಜಿ-ಮೇಲ್ ಅಕೌಂಟ್ ನಿಂದ, ಇಮೇಲ್ ಅನ್ನು ಹೇಗೆ ಕಳುಹಿಸುವುದೆಂದು ವಿವರಿಸುತ್ತದೆ. |
02:00 | ನಾನು iShowU ಎಂಬ ಸ್ಕ್ರೀನ್ ರೆಕಾರ್ಡಿಂಗ್ ಸಾಫ್ಟ್ವೇರ್ ಅನ್ನು ತೆರೆಯುತ್ತೇನೆ. |
02:06 | ಸ್ಕ್ರೀನ್ ಮೇಲೆ ಆಯತವನ್ನು ಗಮನಿಸಿ. |
02:09 | ಈ ಆಯತದೊಳಗೆ ಏನೇ ಬಂದರೂ ಅದು ರೆಕಾರ್ಡ್ ಆಗುತ್ತದೆ. |
02:15 | ನಾನು Netscape ಅನ್ನು ತೆರೆದಿದ್ದೇನೆ. |
02:17 | ಅದನ್ನು ಸರಿಯಾಗಿ ಈ ಆಯತದೊಳಗೆ ಇರಿಸಿದ್ದೇನೆ. |
02:22 | ಇದು gmail ಅನ್ನು ತೋರಿಸುತ್ತಿದೆ. |
02:25 | ನಾನು ತಮಿಳಿನಲ್ಲಿ ಮಾತನಾಡುತ್ತೇನೆ. |
02:27 | ರೆಕಾರ್ಡಿಂಗ್ ಅನ್ನು ಆರಂಭಿಸುತ್ತೇನೆ. |
02:30 | "Guest.spoken aaga login seygiren gmail ai thirandagi vittadu" |
02:40 | "compose button moolam aarambikap pogiren" [1] |
02:56 | Subject: Test |
03:03 | ingu varuvom. |
03:06 | "This is a test mail". |
03:11 | Send button moolam email ai anuppugiren |
03:16 | ippodu sign out seygiren nanri, vanakkam. |
03:26 | ನಾನು ರೆಕಾರ್ಡಿಂಗ್ ಅನ್ನು ಮುಗಿಸಿದ್ದೇನೆ. |
03:28 | ತಕ್ಷಣ, ರೆಕಾರ್ಡಿಂಗ್ ಸಾಫ್ಟ್ವೇರ್ ಚಲನಚಿತ್ರವನ್ನು ತಯಾರಿಸುತ್ತದೆ. |
03:32 | ನಾನು ಮೊದಲು Netscape ಹಾಗೂ iShowU ಗಳನ್ನು ಮುಚ್ಚುತ್ತೇನೆ. |
03:43 | ಈಗ ರೆಕಾರ್ಡ್ ಮಾಡಿದ ಚಲನಚಿತ್ರವನ್ನು ಪ್ಲೇ ಮಾಡುತ್ತೇನೆ. |
03:47 | “Recording plays” |
03:53 | ನಾವು ಅದನ್ನು ಸ್ವಲ್ಪ ಮುಂದೆ ತರೋಣ. |
03:57 | “Recording plays” |
04:04 | ಇದನ್ನು ಕ್ಲೋಸ್ ಮಾಡುತ್ತೇನೆ. |
04:09 | ಈಗ ನಾವು ಮುಂದಿನ ಸ್ಲೈಡ್‌ಗೆ ಹೋಗೋಣ. |
04:11 | ಇದನ್ನೇ ನಾನು 'ಸ್ಪೋಕನ್ ಟ್ಯುಟೋರಿಯಲ್' ಎಂದು ಕರೆಯುತ್ತೇನೆ. |
04:14 | ಶಾಲೆಗೆ ಹೋಗುವ ಮಕ್ಕಳು ಸಹ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ತಯಾರಿಸಬಹುದು - ಇದು ತುಂಬಾ ಸುಲಭವಾಗಿದೆ. |
04:20 | ರೆಕಾರ್ಡಿಂಗ್ ಗಾಗಿ ನಾವು ಹೊಂದಿರುವ 'ಟೂಲ್' ಗಳನ್ನು ಈಗ ವಿವರಿಸುತ್ತೇನೆ. |
04:24 | Linux ನಲ್ಲಿ, recordMyDesktop ಇದೆ. |
04:27 | ಇದನ್ನು ಹೇಗೆ ಮಾಡಬೇಕೆಂದು ಒಂದು ಸ್ಪೋಕನ್-ಟ್ಯುಟೋರಿಯಲ್ ವಿವರಿಸುತ್ತದೆ. |
04:37 | “Recording plays” |
04:43 | Windows ನಲ್ಲಿ, Camstudio ಇದೆ. |
04:47 | ಇದನ್ನು ಹೇಗೆ ಮಾಡಬೇಕೆಂದು ಈ ಸ್ಪೋಕನ್-ಟ್ಯುಟೋರಿಯಲ್ ವಿವರಿಸುತ್ತದೆ. |
04:52 | ಇವೆರಡೂ FOSS ಆಗಿವೆ. |
04:59 | ನಿರೂಪಣೆಗಾಗಿ ಮಾರ್ಗದರ್ಶನ ಮಾಡಲು ಒಂದು ಟ್ಯುಟೋರಿಯಲ್ ಇದೆ. |
05:03 | ನಾನು ಅದನ್ನು ಪ್ಲೇ ಮಾಡುತ್ತೇನೆ. |
05:08 | “Recording plays” |
05:16 | ನಾನು ಸ್ಲೈಡ್ ಗಳಿಗೆ ಹಿಂದಿರುಗುತ್ತೇನೆ. |
05:19 | ಸ್ಕ್ರಿಪ್ಟ್ ಅನ್ನು ಸ್ಥಳೀಯ ಭಾಷೆಗಳಿಗೆ ಅನುವಾದಿಸುವುದು, ಸ್ಪೋಕನ್-ಟ್ಯುಟೋರಿಯಲ್ ಗಳನ್ನು ರಚಿಸುವಾಗಿನ 4 ನೇ ಹಂತವಾಗಿದೆ. |
05:26 | ಇಂಗ್ಲಿಷ್ ಅನ್ನು ಅಷ್ಟು ಸರಿಯಾಗಿ ತಿಳಿಯದ ಜನರ ಅನುಕೂಲಕ್ಕಾಗಿ ಇದನ್ನು ಮಾಡಲಾಗಿದೆ. |
05:31 | Getting started on Scilab ನ |
05:35 | ಹಿಂದಿ, ಮರಾಠಿ ಮತ್ತು ಬಂಗಾಳಿಗಳಲ್ಲಿ ಅನುವಾದಿತ ಸ್ಕ್ರಿಪ್ಟ್ ಗಳನ್ನು ನಾನು ತೋರಿಸುತ್ತೇನೆ. |
05:40 | ಹಿಂದಿ, ಮರಾಠಿ ಮತ್ತು ಬಂಗಾಳಿ. |
05:46 | ನಾವು ಬ್ರೌಸರ್‌ಗೆ ಹಿಂದಿರುಗೋಣ. |
05:49 | ಸ್ಕ್ರಿಪ್ಟ್ ಅನ್ನು ಬಳಸಿ, ನಾವು ಮಾತನಾಡಿದ ಭಾಗವನ್ನು ಮಾತ್ರ ಬದಲಾಯಿಸುತ್ತೇವೆ. |
05:53 | ವೀಡಿಯೊ ಹಾಗೆಯೇ ಇರುತ್ತದೆ. |
05:56 | Linux ನಲ್ಲಿ, ನಾವು Audacity ಹಾಗೂ ffmpeg ಅನ್ನು ಬಳಸಬಹುದು. |
06:00 | ಇದನ್ನು ಹೇಗೆ ಮಾಡಬೇಕೆಂದು ಒಂದು ಸ್ಪೋಕನ್-ಟ್ಯುಟೋರಿಯಲ್ ವಿವರಿಸುತ್ತದೆ. |
06:06 | ಈ ಬ್ರೌಸರ್ ಅನ್ನು ನಾನು ಚಿಕ್ಕದು ಮಾಡುತ್ತೇನೆ. |
06:09 | ಇದರ ಕೆಳಗೆ, ಹಲವಾರು ಟ್ಯಾಬ್‌ಗಳನ್ನು ಹೊಂದಿದ ಮತ್ತೊಂದು ಬ್ರೌಸರ್ ಇದೆ. |
06:13 | ನಾನು ಇದನ್ನು ಪ್ಲೇ ಮಾಡುತ್ತೇನೆ: “Recording plays” |
06:31 | Windows ನಲ್ಲಿ, ನಾವು Movie Maker ಅನ್ನು ಬಳಸಬಹುದು. |
06:38 | ಇದನ್ನು ಹೇಗೆ ಮಾಡಬೇಕೆಂದು ಒಂದು ಸ್ಪೋಕನ್-ಟ್ಯುಟೋರಿಯಲ್ ವಿವರಿಸುತ್ತದೆ. |
06:42 | ನಾವು ಮುಂದಿನ ಸ್ಲೈಡ್ ಗೆ ಹೋಗೋಣ. |
06:50 | ನಾವು ಈಗ ಹಿಂದಿ, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ Scilab ಸ್ಪೋಕನ್- ಟ್ಯುಟೋರಿಯಲ್ ಗಳನ್ನು ನೋಡುತ್ತೇವೆ. |
07:06 | “Recording plays”. ನಾನು ಮಲಯಾಳಂ ಅನ್ನು ಪ್ಲೇ ಮಾಡುತ್ತೇನೆ.. “Recording plays”. ಬಂಗಾಳಿ ಯನ್ನು ಪ್ಲೇ ಮಾಡುತ್ತೇನೆ.. “Recording plays”. |
07:46 | ನಾವು ಇಲ್ಲಿ, ಸ್ಲೈಡ್ ಗಳಿಗೆ ಹಿಂದಿರುಗೋಣ. |
07:50 | ಸ್ಪೋಕನ್-ಟ್ಯುಟೋರಿಯಲ್ ಮೂಲಕ, ಜಟಿಲ ವಿಷಯಗಳನ್ನು ಹೇಗೆ ಹೇಳಬೇಕು ಎಂದು ನೋಡೋಣ. |
07:54 | ಹೇಗಿದ್ದರೂ ಸ್ಪೋಕನ್-ಟ್ಯುಟೋರಿಯಲ್ ಕೇವಲ ಹತ್ತು ನಿಮಿಷದಷ್ಟು ಮಾತ್ರ ಇರುತ್ತದೆ. |
07:59 | ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಒಟ್ಟಿಗೆ ಸೇರಿಸಿ, ಸುಧಾರಿತ ವಿಷಯಗಳನ್ನು ಸಹ ಕಲಿಸಬಹುದು. |
08:03 | ಸಾಕಷ್ಟು ಸಣ್ಣ ಮೆಟ್ಟಿಲುಗಳು ಲಭ್ಯವಿದ್ದರೆ, |
08:06 | ಹಿಮಾಲಯವನ್ನು ಸಹ ಏರಬಹುದು. |
08:09 | ಈಗ ನಾವು "LaTeX" ಹಾಗೂ "Scilab" ಗಳ study plan ಗಳನ್ನು ನೋಡೋಣ. |
08:20 | LaTeX study plans.. |
08:26 | Scilab study plans.. |
08:29 | ನಾವು ಮುಂದಿನ ಸ್ಲೈಡ್ ಗೆ ಹೋಗೋಣ. |
08:32 | ಸ್ಪೋಕನ್-ಟ್ಯುಟೋರಿಯಲ್ ಗಳ ಮೂಲಕ ಡಿಜಿಟಲ್-ಡಿವೈಡ್ ಅನ್ನು ನಿವಾರಿಸಬಹುದು. |
08:36 | ಉದಾಹರಣೆಗೆ, ನಾವು ಇವುಗಳನ್ನು ವಿವರಿಸಬಹುದು:
irctc ಮೂಲಕ ರೈಲು ಟಿಕೆಟ್‌ಗಳನ್ನು ಹೇಗೆ ಖರೀದಿಸುವುದು, |
08:41 | ಕಡಿಮೆ ವೆಚ್ಚದ ಕೃಷಿ ಸಾಲಗಳನ್ನು ಹೇಗೆ ಹುಡುಕುವುದು, |
08:44 | ಪ್ರಾಥಮಿಕ ಆರೋಗ್ಯ ರಕ್ಷಣೆಯ ಬಗೆ ಮಾಹಿತಿಯನ್ನು ಹೇಗೆ ಹುಡುಕುವುದು, |
08:47 | ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿಯನ್ನು ಹೇಗೆ ಪಡೆಯುವುದು, |
08:51 | ಅತ್ಯಂತ ಕಡಿಮೆ ಬೆಲೆಗೆ ಟಿವಿಗಳನ್ನು ಮಾರಾಟ ಮಾಡುವ ಅಂಗಡಿಯನ್ನು ಹುಡುಕಲು ವೆಬ್ ಸರ್ಚ್ ಹೇಗೆ ಮಾಡುವುದು ಇತ್ಯಾದಿ. |
08:56 | ಈ ಪಟ್ಟಿಗೆ ಕೊನೆಯಿಲ್ಲ. |
08:58 | ವಾಸ್ತವವಾಗಿ, ಡಿಜಿಟಲ್-ಡಿವೈಡ್ ಅನ್ನು ನಿವಾರಿಸಲು ಈ ವಿಧಾನವನ್ನು ಬಳಸಬಹುದು. |
09:04 | ಸ್ಪೋಕನ್-ಟ್ಯುಟೋರಿಯಲ್ ಗಳನ್ನು creative commons ಲೈಸೆನ್ಸ್ ನ ಅಡಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ. |
09:08 | spoken tutorial ವೆಬ್‌ಸೈಟ್‌ನಿಂದ ಇವುಗಳು ಉಚಿತ ಡೌನ್‌ಲೋಡ್ ಗಾಗಿ ಲಭ್ಯವಿರುತ್ತವೆ. |
09:13 | ಈಗ ಹತ್ತು ನಿಮಿಷಗಳ ಒಂದು ಸ್ಪೋಕನ್-ಟ್ಯುಟೋರಿಯಲ್ ಅನ್ನು ತಯಾರಿಸಲು ಕೊಡಲಾಗುವ ಗೌರವ ಧನದ ಬಗ್ಗೆ ಚರ್ಚಿಸೋಣ: |
09:19 | Rs. 3,500 ಸ್ಕ್ರಿಪ್ಟ್ ಮತ್ತು ಸ್ಲೈಡ್‌ಗಳನ್ನು ತಯಾರಿಸಲು, |
09:23 | Rs. 500 ಅನನುಭವಿ ಅಥವಾ ಆರಂಭಿಕರಿಂದ ವಿಮರ್ಶೆಗಾಗಿ, |
09:28 | Rs. 1,000 ಸ್ಪೋಕನ್-ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ಇದನ್ನು ಆರಂಭಿಕರು ಸಹ ಮಾಡಬಹುದು. |
09:34 | Rs. 1,000 ಸ್ಥಳೀಯ ಭಾಷೆಗೆ ಅನುವಾದಕ್ಕಾಗಿ, |
09:37 | Rs. 500 ಸ್ಥಳೀಯ ಭಾಷೆಗೆ ಡಬ್ ಮಾಡಲು. |
09:40 | ವಿಮರ್ಶೆ (review) ಮತ್ತು ಸ್ವೀಕಾರದ ನಂತರ ಹಣವನ್ನು ಕೊಡಲಾಗುವುದು. |
09:43 | ಮೇಲೆ ಹೇಳಿದ ಹಣವು, ಹತ್ತು ನಿಮಿಷಗಳ ಸ್ಪೋಕನ್-ಟ್ಯುಟೋರಿಯಲ್ ಗಾಗಿ ಆಗಿದೆ. ನಿಜವಾದ ಗೌರವ ಧನವು ಒಟ್ಟು ನಿಮಿಷಗಳಿಗೆ ಅನುಗುಣವಾಗಿರುತ್ತದೆ. |
09:50 | Rs. 5,000 ನ ಒಂದು ಬೋನಸ್ ಸಹ ಇದೆ. |
09:54 | ಸಹಾಯ ಮಾಡಲು ಯಾರೂ ಇಲ್ಲದೆ, ಮಧ್ಯರಾತ್ರಿಯಲ್ಲಿ ಏಕಾಂಗಿಯಾಗಿ ಕೆಲಸ ಮಾಡುತ್ತಿರುವ, |
09:57 | ದೂರದ ಮಗುವಿಗೆ ಸಹಾಯ ಮಾಡುವುದು ನಮ್ಮ ಗುರಿ ಆಗಿದೆ. |
10:00 | ಎಂದರೆ, ಸ್ವಯಂ ಕಲಿಕೆಗಾಗಿ ಸ್ಪೋಕನ್-ಟ್ಯುಟೋರಿಯಲ್ ಗಳನ್ನು ತಯಾರಿಸಬೇಕಾಗಿದೆ. |
10:05 | ನಾವು ‘ಓಪನ್ ಸೋರ್ಸ್ ಸಾಫ್ಟ್ವೇರ್’ ಅನ್ನು (Open Source Software) ಸಕ್ರಿಯವಾಗಿ ಪ್ರಚಾರ ಮಾಡುತ್ತೇವೆ. |
10:08 | ಸ್ಪೋಕನ್-ಟ್ಯುಟೋರಿಯಲ್ ಗಳು ಮತ್ತು ಆರ್ಥಿಕ ಸಹಾಯವನ್ನು ಬಳಸಿಕೊಂಡು, ವಿದ್ಯಾರ್ಥಿ ಕ್ಲಬ್‌ಗಳ ಮೂಲಕ ಕಾರ್ಯಶಾಲೆಗಳನ್ನು ನಡೆಸುತ್ತೇವೆ. |
10:13 | ನಾವು ಕ್ಯಾಂಪಸ್ ರಾಯಭಾರಿಗಳಿಗಾಗಿ ಹುಡುಕುತ್ತಿದ್ದೇವೆ. |
10:16 | ನಮ್ಮಲ್ಲಿ Campus Ambassador ಪ್ರೊಗ್ರಾಂ ಬಗ್ಗೆ ಒಂದು ಸ್ಪೋಕನ್-ಟ್ಯುಟೋರಿಯಲ್ ಇದೆ. |
10:21 | ಇದನ್ನು ಪ್ಲೇ ಮಾಡೋಣ.. “Recording plays”. |
10:35 | ನಮ್ಮ ಪ್ರೊಜೆಕ್ಟ್ ನ ವೆಬ್-ಸೈಟ್ ಅನ್ನು ತೋರಿಸೋಣ: |
10:45 | ಪ್ರಸ್ತುತ ಟ್ಯುಟೋರಿಯಲ್ ಇಲ್ಲಿ ಲಭ್ಯವಿದೆ. |
10:48 | ಇಲ್ಲಿ ನಮ್ಮನ್ನು ಎಲ್ಲಿ ಸಂಪರ್ಕಿಸಬೇಕೆಂದು ಇದೆ. |
10:50 | FOSS ಸಿಸ್ಟಂಗಳ ಒಂದು ಪಟ್ಟಿಯು ಈ ವಿಕಿಯ ಮೂಲಕ ಲಭ್ಯವಿದೆ. |
10:59 | ಇವುಗಳಲ್ಲಿ ಯಾವುದೇ ಪ್ರಯತ್ನದಲ್ಲಿ ನೀವು ಸೇರಿಕೊಳ್ಳಬಹುದು. |
11:03 | ಹೊಸ ಸಿಸ್ಟಂ ಗಳಲ್ಲಿ ಕೆಲಸ ಮಾಡಲು ಸಹ ನೀವು ಪ್ರಸ್ತಾಪಿಸಬಹುದು. |
11:06 | ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
11:10 | ಮುಂದಿನ ಸ್ಲೈಡ್‌ಗೆ ಹೋಗೋಣ. ಸ್ಪೋಕನ್-ಟ್ಯುಟೋರಿಯಲ್ ಗಳನ್ನು ತಯಾರಿಸಲು, |
11:14 | ವಿಮರ್ಶಿಸಲು ಮತ್ತು ಬಳಸಲು ನಿಮ್ಮ ಭಾಗವಹಿಸುವಿಕೆಯನ್ನು ನಾವು ಸ್ವಾಗತಿಸುತ್ತೇವೆ. |
11:17 | ನಮಗೆ ತಂತ್ರಜ್ಞಾನದ ಬೆಂಬಲ ಕೂಡ ಅಗತ್ಯವಿದೆ. |
10:20 | ನಮ್ಮಲ್ಲಿ ಸಾಕಷ್ಟು ಉದ್ಯೋಗಗಳು ಸಹ ಇವೆ. |
11:22 | ಪೂರ್ಣ ಸಮಯ ಅಥವಾ ಸ್ವಲ್ಪ ಸಮಯ ನಮ್ಮೊಂದಿಗೆ ಕೆಲಸ ಮಾಡಿ. |
11:25 | ನೀವು ನಮ್ಮೊಂದಿಗೆ ಏಕೆ ಕೆಲಸ ಮಾಡಬೇಕು? |
11:27 | ಡಿಜಿಟಲ್ ಡಿವೈಡ್ ಅನ್ನು ತೆಗೆದುಹಾಕಲು, |
11:29 | ನಮ್ಮ ಮಕ್ಕಳನ್ನು ಐಟಿ ಸಾಕ್ಷರರನ್ನಾಗಿ ಮಾಡಲು, |
11:31 | FOSS ಅನ್ನು ಪ್ರೋತ್ಸಾಹಿಸಲು, |
11:33 | ನಮ್ಮ ಮಕ್ಕಳಿಗೆ ಉದ್ಯೋಗ ಸಿಗುವಂತೆ ಮಾಡಲು, |
11:35 | ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ಮತ್ತು |
11:37 | ಡಾ.ಅಬ್ದುಲ್ ಕಲಾಂ ಅವರ ಕನಸನ್ನು ನನಸಾಗಿಸಲು. |
11:40 | ಮುಂದಿನ ಸ್ಲೈಡ್‌ಗೆ ಹೋಗೋಣ. ನಿಮಗಾಗಿ ಒಂದು ಸಣ್ಣ ಅಸೈನ್ಮೆಂಟ್ ಇದೆ. |
11:44 | ಈ ಟ್ಯುಟೋರಿಯಲ್ ನಲ್ಲಿ ತೋರಿಸಿದ ಎಲ್ಲಾ ವೆಬ್ ಪೇಜ್ ಗಳು ನಿಮಗೆ ಸಿಗುತ್ತಿವೆಯೇ ಎಂದು ನೋಡಿ. |
11:49 | ನಾನು ಈಗ ಧನಸಹಾಯ ಮಾಡಿದವರ ಬಗ್ಗೆ ಹೇಳಬಯಸುತ್ತೇನೆ. |
11:52 | Spoken tutorial, ಇದು Talk to a Teacher ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
11:56 | ಇದು ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಭಾರತ ಸರ್ಕಾರದ ಮೂಲಕ ಅನುದಾನವನ್ನು ಪಡೆದಿದೆ. |
12:01 | ಈ ಮಿಶನ್ ಬಗ್ಗೆ ಹೆಚ್ಚಿನ ಮಾಹಿತಿಯು ಇಲ್ಲಿ ಲಭ್ಯವಿದೆ:
spoken-tutorial.org/NMEICT-Intro. |
12:11 | ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
12:14 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |