Synfig/C3/Rocket-animation/Kannada

From Script | Spoken-Tutorial
Jump to: navigation, search
Time
Narration
00:00 Synfig ಅನ್ನು ಬಳಸಿ, “Rocket animation” ಮಾಡುವ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,

ಫೈರ್ ಎಫೆಕ್ಟ್,

00:11 ಕಟ್ ಔಟ್ ಎಫೆಕ್ಟ್,
00:13 slope & offset ಪ್ಯಾರಾಮೀಟರ್ ಗಳನ್ನು ಬದಲಿಸುವುದು ಮತ್ತು ಫೆದರ್ ಎಫೆಕ್ಟ್ ಇವುಗಳ ಕುರಿತು ಕಲಿಯುವೆವು.
00:19 ನಾವು ಇವುಗಳನ್ನೆಲ್ಲ ಬಳಸಿ rocket animation ಮಾಡುವುದನ್ನು ಕೂಡ ಕಲಿಯುವೆವು.
00:24 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು:

Ubuntu Linux 14.04 OS, Synfig ಆವೃತ್ತಿ1.0.2 – ಇವುಗಳನ್ನು ಬಳಸಿದ್ದೇನೆ.

00:34 Synfig ಅನ್ನು ತೆರೆಯೋಣ.
00:36 ನನ್ನ Documents ಫೋಲ್ಡರ್ ನಲ್ಲಿ ರಾಕೆಟ್ ನ ಚಿತ್ರವಿದೆ.
00:40 ನಾನು ಇದನ್ನು Inkscape ಅನ್ನು ಬಳಸಿ ರಚಿಸಿದ್ದೇನೆ.
00:43 ಈಗ ಆ ಇಮೇಜ್ ಅನ್ನು import ಮಾಡೋಣ. File ಗೆ ಹೋಗಿ Import ಅನ್ನು ಕ್ಲಿಕ್ ಮಾಡಿ.
00:49 Rocket ಇಮೇಜ್ ಅನ್ನು ಆಯ್ಕೆ ಮಾಡಿ, Import ಅನ್ನು ಕ್ಲಿಕ್ ಮಾಡಿ.
00:53 rocket ಇಮೇಜ್ ಅನ್ನು ಗ್ರುಪ್ ಮಾಡಿ. group layer ಅನ್ನು Rocket ಎಂದು ಹೆಸರಿಸಿ.
00:59 ಹ್ಯಾಂಡಲ್ ನ ಕಿತ್ತಳೆ ಬಣ್ಣದ ಚುಕ್ಕಿಯನ್ನು ಬಳಸಿ, ಇಲ್ಲಿ ತೋರಿಸಿರುವಂತೆ ಇಮೇಜ್ ನ ಗಾತ್ರವನ್ನು ಕಡಿಮೆ ಮಾಡಿ.
01:06 ಫೈಲ್ ಅನ್ನು save' ಮಾಡಲು Ctrl ಮತ್ತು S ಕೀ ಗಳನ್ನು ಒತ್ತಿ.
01:11 ನಾನು ಫೈಲ್ ಅನ್ನು Desktop ನಲ್ಲಿ ಸೇವ್ ಮಾಡುವೆನು. ಫೈಲ್ ನೇಮ್ ಅನ್ನು Rocket hyphen animation ಎಂದು ಬದಲಿಸಿ.
01:20 Save ಅನ್ನು ಕ್ಲಿಕ್ ಮಾಡಿ. ಈಗ, ಬೆಂಕಿಯನ್ನು (ಫೈರ್) ರಚಿಸೋಣ.
01:23 Fill color ಅನ್ನು ಕಪ್ಪು ಬಣ್ಣಕ್ಕೆ ಮತ್ತು Outline color ಅನ್ನು ಬಿಳಿ ಬಣ್ಣಕ್ಕೆ ಬದಲಿಸಿ.
01:31 Layers panel ಹೋಗಿ, Rocket group ಲೇಯರ್ ನ ಮೇಲೆ ರೈಟ್ ಕ್ಲಿಕ್ ಮಾಡಿ.
01:36 New layer ಅನ್ನು ಆಯ್ಕೆ ಮಾಡಿಕೊಂಡು, Gradient ನ ಮೇಲೆ ಕ್ಲಿಕ್ ಮಾಡಿ, ನಂತರ Noise Gradient ಅನ್ನು ಕ್ಲಿಕ್ ಮಾಡಿ.
01:43 ಕ್ಯಾನ್ವಾಸ್ ನ ಮೇಲೆ ಒಂದು ಕಪ್ಪು ಮತ್ತು ಬಿಳಿಯ noise gradient ರಚನೆಯಾಗಿದೆ.
01:47 Tool box ಗೆ ಹೋಗಿ, Gradient tool ಅನ್ನು ಕ್ಲಿಕ್ ಮಾಡಿ.
01:52 Tool options ನಲ್ಲಿ, create a linear gradient ಅನ್ನು ಕ್ಲಿಕ್ ಮಾಡಿ.
01:57 ಈಗ, ಕ್ಯಾನ್ವಾಸ್ ನ ಮೇಲೆ ಕ್ಲಿಕ್ ಮಾಡಿ, ಮೇಲಿನಿಂದ ಕೆಳಕ್ಕೆ ಡ್ರ್ಯಾಗ್ ಮಾಡಿ.
02:02 ಕ್ಯಾನ್ವಾಸ್ ನ ಮೇಲೆ ಒಂದು ಕಪ್ಪು ಮತ್ತು ಬಿಳುಪಿನ linear gradient ರಚನೆಯಾಗಿರುವುದನ್ನು ನೀವು ಗಮನಿಸಿ.
02:08 Transform tool ಅನ್ನು ಆಯ್ಕೆ ಮಾಡಿ,

ಲೇಯರ್ ನೇಮ್ ಅನ್ನು BW-Gradient ಎಂದು ಬದಲಿಸಿ.

02:16 Parameters panel ನಲ್ಲಿ, Blend method ಅನ್ನು Subtract ಗೆ ಬದಲಿಸಿ.
02:22 Rectangle tool ಅನ್ನು ಆಯ್ಕೆ ಮಾಡಿಕೊಂಡು, ಪೂರ್ಣ ಕ್ಯಾನ್ವಾಸ್ ಅನ್ನು ಆವರಿಸುವಂತೆ ಒಂದು ಆಯತವನ್ನು ಚಿತ್ರಿಸಿ.
02:29 Transform tool ಅನ್ನು ಕ್ಲಿಕ್ ಮಾಡಿ ಮತ್ತು layer ನ ಹೆಸರನ್ನು Orange ಎಂದು ಬದಲಿಸಿ.
02:35 ಈಗ, ಆಯತದ ಬಣ್ಣವನ್ನು ವಾರ್ಮ್ ಆರೆಂಜ್(ತಿಳಿ ಕಿತ್ತಳೆ ) ಬಣ್ಣಕ್ಕೆ ಬದಲಿಸೋಣ.
02:40 Parameters panel ನಲ್ಲಿ Color parameter ಅನ್ನು ಕ್ಲಿಕ್ ಮಾಡಿ.
02:45 RGB ವ್ಯಾಲ್ಯುಗಳನ್ನು ಕ್ರಮವಾಗಿ 100, 55 ಮತ್ತು 10 ಎಂದು ಬದಲಿಸಿ.

ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.

02:56 Parameters panel ನಲ್ಲಿ, Blend method ಅನ್ನು Color ಎಂದು ಬದಲಿಸಿ.
03:01 Noise gradient ಲೇಯರ್ ಅನ್ನು ಗ್ರುಪ್ ಮಾಡಿ. ಅದರ ಹೆಸರನ್ನು Moving-base ಎಂದು ಬದಲಿಸಿ.
03:10 Parameters panel ನಲ್ಲಿ, Origin ಅನ್ನು ರೈಟ್ ಕ್ಲಿಕ್ ಮಾಡಿ.
03:14 Convert ಅನ್ನು ಕ್ಲಿಕ್ ಮಾಡಿ ಮತ್ತು ನಂತರ Linear ಅನ್ನು ಕ್ಲಿಕ್ ಮಾಡಿ.
03:19 Origin ನ ಡ್ರಾಪ್ ಡೌನ್ ಲಿಸ್ಟ್ ಅನ್ನು ಕ್ಲಿಕ್ ಮಾಡಿ.
03:22 Slope ವ್ಯಾಲ್ಯುಗಳನ್ನು 0 ಮತ್ತು -100 ಎಂದು ಬದಲಿಸಿ, ಮತ್ತು Offset ವ್ಯಾಲ್ಯುಗಳನ್ನು 0 ಮತ್ತು 100 ಎಂದು ಬದಲಿಸಿ.
03:32 ಈಗ ಫೈರ್ ಎಫೆಕ್ಟ್ ರಚನೆಯಾಗಿದೆ.

ಪರಿಣಾಮವನ್ನು ಪರೀಕ್ಷಿಸಲು, Play ಬಟನ್ ಅನ್ನು ಕ್ಲಿಕ್ ಮಾಡಿ.

03:38 ಈಗ ರಾಕೆಟ್ ನ ಅಳತೆಗೆ ಅನುಗುಣವಾಗಿ, ಎಫೆಕ್ಟ್ ಅನ್ನು ಕಟ್ ಮಾಡೋಣ.
03:43 Rocket layer ಅನ್ನು ಹೊರತುಪಡಿಸಿ, ಉಳಿದೆಲ್ಲಾ
03:47 ಹೆಸರನ್ನು Fire ಎಂದು ಬದಲಿಸಿ.
03:50 ಫೈಲ್ ಅನ್ನು ಸೇವ್ ಮಾಡಲು, Ctrl ಮತ್ತು S ಕೀಗಳನ್ನು ಒತ್ತಿ.
03:54 Tool box ಗೆ ಹೋಗಿ, Cutout tool ಅನ್ನು ಆಯ್ಕೆ ಮಾಡಿ.
03:58 ಇಲ್ಲಿ ತೋರಿಸಿದಂತೆ ಫೈರ್ ಎಫೆಕ್ಟ್ ಅನ್ನು ಕಟ್ ಮಾಡಿ. ಗ್ರುಪ್ ಲೇಯರ್ ನ ಹೆಸರು Fire cut ಎಂದು ಬದಲಾಗಿರುವುದನ್ನು ಗಮನಿಸಿ.
04:06 Transform tool ಅನ್ನು ಆಯ್ಕೆ ಮಾಡಿ.
04:09 handle ನ ಕಿತ್ತಳೆ ಬಣ್ಣದ ಚುಕ್ಕಿಯನ್ನು ಬಳಸಿ, ಫೈರ್ (ಬೆಂಕಿಯ) ಅಳತೆಯನ್ನು ಕಡಿಮೆ ಮಾಡಿ.
04:14 ಈ ಲೇಯರ್ ಅನ್ನು Rocket layer ನ ಕೆಳಗಡೆ ಸರಿಸಿ.
04:19 ಡ್ರಾಪ್ ಡೌನ್ ಲಿಸ್ಟ್ ಅನ್ನು ಕ್ಲಿಕ್ ಮಾಡಿ. Mask layer ಅನ್ನು ಆಯ್ಕೆ ಮಾಡಿ. ಈಗ ನಾವು nodes ಗಳನ್ನು ಹೊಂದಿಸಬಹುದು.
04:27 Parameters panel ನಲ್ಲಿ, Feather parameter ಅನ್ನು 25 ಎಂದು ಬದಲಿಸಿ.
04:33 ಫೈರ್ ಗೆ ಫೀದರ್ ಎಫೆಕ್ಟ್ ಅನ್ವಯವಾಗಿರುವುದನ್ನು ಗಮನಿಸಿ.
04:38 ಈಗ ನಾವು ಫೈರ್ ಅನ್ನು ಆನಿಮೇಟ್ ಮಾಡೋಣ. Turn on animate editing mode ಐಕಾನ್ ಅನ್ನು ಕ್ಲಿಕ್ ಮಾಡಿ.
04:44 3 ನೆಯ ಫ್ರೇಮ್ ಗೆ ಹೋಗಿ, Keyframes panel ನಲ್ಲಿ ಒಂದು keyframe ಅನ್ನು ಸೇರಿಸಿ.
04:49 ಫೈರ್ ನ node ಗಳನ್ನು ಇಲ್ಲಿ ತೋರಿಸಿರುವಂತೆ ಹೊಂದಿಸಿ.
04:56 ಈಗ 6 ನೆಯ ಫ್ರೇಮ್ ಗೆ ಹೋಗಿ. Keyframes panel ನಲ್ಲಿ ಸೊನ್ನೆಯ ಫ್ರೇಮ್ ಅನ್ನು ಡುಪ್ಲಿಕೇಟ್(ನಕಲು) ಮಾಡಿ.
05:03 ನಂತರ ನಾವು ಈ ಫೈರ್ ಆನಿಮೇಷನ್ ಅನ್ನು ಲೂಪ್ ಮಾಡುವೆವು. ಹಾಗಾಗಿ, Fire cut group layer ನ ಮೇಲೆ ರೈಟ್ ಕ್ಲಿಕ್ ಮಾಡಿ.
05:10 ಅಲ್ಲಿ New layer ಅನ್ನೂ, ನಂತರ Other ಅನ್ನೂ ಮತ್ತು Time loop ಅನ್ನೂ ಕ್ಲಿಕ್ ಮಾಡಿ.
05:17 Parameters panel ನಲ್ಲಿ, Duration parameter ಅನ್ನು 12 ಎಂದು ಬದಲಿಸಿ.
05:24 Only for Positive Duration ಚೆಕ್ ಬಾಕ್ಸ್ ಅನ್ನು ಟಿಕ್ ಮಾಡಿ.

ಈಗ ಆನಿಮೇಷನ್ ಅನ್ನು ಪರೀಕ್ಷಿಸಲು Play ಬಟನ್ ಅನ್ನು ಕ್ಲಿಕ್ ಮಾಡಿ.

05:33 ಈಗ ರಾಕೆಟ್ ಅನ್ನು ಆನಿಮೇಟ್ ಮಾಡೋಣ. ಎಲ್ಲಾ ಲೇಯರ್ ಗಳನ್ನೂ ಗ್ರುಪ್ ಮಾಡಿ.
05:39 Group layer ನ ಹೆಸರನ್ನು Rocket ಎಂದು ಬದಲಿಸಿ.
05:42 ಈಗ ಫ್ರೇಮ್ ಸಂಖ್ಯೆ ಸೊನ್ನೆಗೆ ಹೋಗಿ, ರಾಕೆಟ್ ಅನ್ನು ಇಲ್ಲಿ ತೋರಿಸಿದಂತೆ , ಕ್ಯಾನ್ವಾಸ್ ನ ಕೆಳಕ್ಕೆ ತನ್ನಿ.
05:48 ಈಗ 100 ನೆಯ ಫ್ರೇಮ್ ಗೆ ಹೋಗಿ, ರಾಕೆಟ್ ಅನ್ನು ಕ್ಯಾನ್ವಾಸ್ ನ ಮೇಲ್ಭಾಗಕ್ಕೆ ಸರಿಸಿ.
05:55 ಈಗ rocket animation ಅನ್ನು ಮಾಡಲಾಗಿದೆ.
05:58 ಈಗ ನಾವು Inkscape ನಲ್ಲಿ ರಚಿಸಿದ ಬ್ಯಾಕ್-ಗ್ರೌಂಡ್ ಇಮೇಜ್ ಅನ್ನು ಸೇರಿಸೋಣ.
06:03 ನಾನು ಈ ಇಮೇಜ್ ಅನ್ನು Documents ಫೋಲ್ಡರ್ ನಲ್ಲಿ ಸೇವ್ ಮಾಡಿಕೊಂಡಿದ್ದೇನೆ.
06:06 File ಗೆ ಹೋಗಿ, Import ಅನ್ನು ಕ್ಲಿಕ್ ಮಾಡಿ.
06:11 ಈ ಲೇಯರ್ ಅನ್ನು Rocket group layer ನ ಕೆಳಕ್ಕೆ ಸರಿಸಿ.
06:15 ಫೈಲ್ ಅನ್ನು ಸೇವ್ ಮಾಡಲು, Ctrl ಮತ್ತು S ಕೀಲಿಗಳನ್ನು ಒತ್ತಿ.
06:18 ಕೊನೆಯದಾಗಿ ಆನಿಮೇಷನ್ ಅನ್ನು ರೆಂಡರ್ ಮಾಡೋಣ.

File ಗೆ ಹೋಗಿ Render ಅನ್ನು ಕ್ಲಿಕ್ ಮಾಡಿ.

06:25 ನಾನು ಔಟ್ಪುಟ್ ಅನ್ನು Desktop ನಲ್ಲಿ ಸೇವ್ ಮಾಡುವೆನು.

extension ಅನ್ನು avi ಎಂದೂ, Target ಅನ್ನು ffmpeg ಎಂದೂ ಬದಲಿಸಿ.

06:34 ಈಗ Render ನ ಮೇಲೆ ಕ್ಲಿಕ್ ಮಾಡಿ.
06:37 ಈಗ ಆನಿಮೇಷನ್ ಅನ್ನು ಪರೀಕ್ಷಿಸೋಣ.

Desktop ಗೆ ಹೋಗಿ, ಔಟ್ ಪುಟ್ ಫೈಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ, ನಮ್ಮ ಆನಿಮೇಷನ್ ಅನ್ನು ಪ್ಲೇ ಮಾಡೋಣ.

06:45 ನಮ್ಮ ರಾಕೆಟ್ ಆನಿಮೇಷನ್ ಈ ರೀತಿಯಾಗಿ ಕಾಣುತ್ತದೆ.
06:48 ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ
06:53 ಈ ಟ್ಯುಟೋರಿಯಲ್ ನಲ್ಲಿ ನಾವು, ಫೈರ್ ಎಫೆಕ್ಟ್,
06:58 Cut out ಎಫೆಕ್ಟ್,

slope & offset ಪ್ಯಾರಾಮೀಟರ್ ಗಳನ್ನು ಬದಲಿಸುವುದು, ಮತ್ತು Feather ಎಫೆಕ್ಟ್ ಇವುಗಳ ಕುರಿತು ಕಲಿತಿದ್ದೇವೆ.

07:02 ಇದರ ಜೊತೆಗೆ rocket animation ಮಾಡುವುದನ್ನು ಕಲಿತಿದ್ದೇವೆ.
07:05 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ - ಒಂದು ವುಡ್ ಫೈರ್ ಆನಿಮೇಷನ್ ಅನ್ನು ರಚಿಸಿ.
07:10 Code files ಲಿಂಕ್ ನಲ್ಲಿ ಕಟ್ಟಿಗೆಯ ಇಮೇಜ್ ಅನ್ನು ಕೊಡಲಾಗಿದೆ.
07:14 ನಿಮ್ಮ ಪೂರ್ಣಗೊಂಡ ಅಸೈನ್ ಮೆಂಟ್ ಈ ರೀತಿಯಾಗಿ ಕಾಣಬೇಕು.
07:18 ಈ ವಿಡಿಯೋ Spoken Tutorial ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ. ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ನೋಡಿ.
07:23 ಸ್ಪೋಕನ್ ಟ್ಯುಟೋರಿಯಲ್ಸ್ ಕಾರ್ಯಶಾಲೆಗಳನ್ನು ನಡೆಸಿ, ಪ್ರಮಾಣಪತ್ರವನ್ನು ಕೊಡುತ್ತದೆ.

ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ

07:32 ದಯವಿಟ್ಟು ಸಮಯವನ್ನೊಳಗೊಂಡ ನಿಮ್ಮ ಪ್ರಶ್ನೆಗಳನ್ನುಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
07:35 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD, ಭಾರತ ಸರ್ಕಾರ – ಇವರಿಂದ ಅನುದಾನವನ್ನು ಪಡೆದಿರುತ್ತದೆ.

ಈ ಮಿಷನ್ ನ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿದೆ.

07:45 ಅನುವಾದ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

NaveenBhat