Synfig/C3/Plant-animation/Kannada

From Script | Spoken-Tutorial
Jump to: navigation, search
Time Narration
00:00 Synfig ಅನ್ನು ಬಳಸಿ, “Create a Plant animation” ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ, Synfig ಅನ್ನು ಬಳಸಿ, ಅಕೃತಿಗಳನ್ನು ಎನಿಮೇಟ್ ಮಾಡುವುದು ಹೇಗೆ ಎಂದು ನಾವು ಪರಿಚಯಿಸಿಕೊಳ್ಳುತ್ತೇವೆ.
00:11 ನಾವು – ಆಕೃತಿಗಳನ್ನು ಬಿಡಿಸುವುದು ಮತ್ತು ಲೇಯರ್ ಗಳನ್ನು ಗ್ರುಪ್ ಮಾಡುವುದು,
00:15 Insert item ಅನ್ನು ಬಳಸಿ, vertex ಅನ್ನು ಸೇರಿಸುವುದು,
00:18 split tangent ಆಯ್ಕೆ,
00:21 mark active point as off ಆಯ್ಕೆ ಮತ್ತು
00:24 ಆಕೃತಿಗಳನ್ನು ಅನಿಮೇಟ್ ಮಾಡುವುದು – ಇವುಗಳ ಕುರಿತು ಕಲಿಯುವೆವು.
00:26 ಇಲ್ಲಿ ನಾವು Plant animation ಅನ್ನು ರಚಿಸುವೆವು.
00:29 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು -
00:31 Ubuntu Linux 14.04 ಒ.ಎಸ್,
00:35 Synfig ಆವೃತಿ 1.0.2 – ಇವುಗಳನ್ನು ಬಳಸುತ್ತಿದ್ದೇನೆ.
00:39 ಈಗ synfig ಅನ್ನು ತೆರೆಯೋಣ.
00:41 Dash home ಹೋಗಿ, ಮತ್ತು Synfig ಎಂದು ಟೈಪ್ ಮಾಡಿ.
00:45 ನೀವು logo ಅನ್ನು ಕ್ಲಿಕ್ ಮಾಡಿ ಕೂಡ, Synfig ಅನ್ನು ಓಪನ್ ಮಾಡಬಹುದು.
00:50 ಈಗ Plant animation ಅನ್ನು ರಚಿಸಲು ಆರಂಭಿಸೋಣ.
00:54 ನಾವು ಮೊದಲು Synfig ನಲ್ಲಿ ಗ್ರಾಫಿಕ್ ಅನ್ನು ರಚಿಸಬೇಕು.
00:59 ನಾವು ಹೂವಿನೊಂದಿಗೆ ಒಂದು ಗಿಡವನ್ನು ರಚಿಸೋಣ.
01:02 ನಮ್ಮ Synfig ಫೈಲ್ ಅನ್ನು save ಮಾಡೋಣ.
01:05 File ಗೆ ಹೋಗಿ, Save ಅನ್ನು ಕ್ಲಿಕ್ ಮಾಡಿ.
01:08 ಯಾವ ಫೋಲ್ಡರ್ ನಲ್ಲಿ ಸೇವ್ ಮಾಡಬೇಕೆಂದು ಆಯ್ಕೆ ಮಾಡಿ.
01:11 ಫೈಲ್ ನೇಮ್ ಅನ್ನು Plant-animation ಎಂದು ಟೈಪ್ ಮಾಡಿ ಮತ್ತು Save ಬಟನ್ ಅನ್ನು ಕ್ಲಿಕ್ ಮಾಡಿ.
01:16 ಯಾವುದೇ ಆಕೃತಿಯನ್ನು ಬರೆಯುವ ಮೊದಲು ಬಿಳಿಯ ಬ್ಯಾಕ್ ಗ್ರೌಂಡ್ ಅನ್ನು ರಚಿಸಿಕೊಳ್ಳಿ.
01:21 ಲೇಯರ್ ನ ಹೆಸರನ್ನು Background ಎಂದು ಬದಲಿಸಿ.
01:26 toolbox ಗೆ ಹೋಗಿ, Spline tool ಅನ್ನು ಆಯ್ಕೆ ಮಾಡಿ.
01:30 ಕೇವಲ "Create Region Layer" ಮಾತ್ರ ಆಯ್ಕೆಯಾಗಿದೆ ಎಂದು ಖಚಿತಪಡಿಸಿಕೊಳ್ಳಿ.
01:35 toolbox ನಲ್ಲಿ, fill colour ಅನ್ನು ಹಸಿರು ಬಣ್ಣಕ್ಕೆ(ಗ್ರೀನ್) ಸೆಟ್ ಮಾಡಿ.
01:38 ಈಗ ಇಲ್ಲಿ ತೋರಿಸಿರುವಂತೆ, Spline ಟೂಲ್ ನಿಂದು ಒಂದು ತ್ರಿಕೋನವನ್ನು ರಚಿಸಿ.
01:43 ನಾವು ಮೂರು ವರ್ಟೈಸಿಸ್( ಶೃಂಗ) ಗಳನ್ನು ಚಿತ್ರಿಸಿದ ನಂತರ ಈ ಆಕೃತಿಯನ್ನು ಮುಚ್ಚಬೇಕು.
01:49 ಇದನ್ನು ಮಾಡಲು, ಮೊದಲ ವರ್ಟೆಕ್ಸ್ ಅನ್ನು ರೈಟ್ ಕ್ಲಿಕ್ ಮಾಡಿ ಮತ್ತು Loop Spline ಅನ್ನು ಆಯ್ಕೆ ಮಾಡಿ.
01:55 ಇದು ಹಸಿರು ಬಣ್ಣದ ತ್ರಿಕೋನಾಕಾರವನ್ನು ಪೂರ್ಣಗೊಳಿಸುತ್ತದೆ.
01:57 ದುಂಡಾದ ತ್ರಿಕೋನವನ್ನು ಮಾಡಲು, ನಾವು ಟ್ಯಾಂಜಂಟ್ ನ ಹ್ಯಾಂಡಲ್ಸ್ ಗಳನ್ನು ಸ್ವಲ್ಪ ತಿರುಚಬೇಕು.
02:03 Transform tool ಅನ್ನು ಕ್ಲಿಕ್ ಮಾಡಿ, ನಂತರ ಪ್ರತಿಯೊಂದು ವರ್ಟೆಕ್ಸ್ ಅನ್ನು ರೈಟ್ ಕ್ಲಿಕ್ ಮಾಡಿ.
02:09 Split tangents ಅನ್ನು ಆಯ್ಕೆ ಮಾಡಿ, ಅದರಿಂದ ಪ್ರತಿ ವರ್ಟೆಕ್ಸ ನ ಟ್ಯಾಂಜೆಂಟ್ ಹ್ಯಾಂಡಲ್ಸ್ ಗಳನ್ನು ಪ್ರತ್ಯೇಕವಾಗಿ ಸರಿಸಬಹುದು.
02:18 Layers ಪ್ಯಾನಲ್ ಅನ್ನು ಗಮನಿಸಿ.
02:20 ಹೊಸ ಲೇಯರ್ ರಚನೆಯಾಗಿದೆ. ಇದನ್ನು Stem ಎಂದು ಹೆಸರಿಸೋಣ.
02:24 ಫೈಲ್ ಅನ್ನು ಸೇವ್ ಮಾಡಲು, Ctrl ಮತ್ತು S ಗಳನ್ನು ಒಟ್ಟಿಗೆ ಒತ್ತಿ.
02:29 ಈಗ ನಾವು ಕಾಂಡ(ಸ್ಟೆಮ್) ದ ಆಕಾರವನ್ನು ಆನಿಮೇಟ್ ಮಾಡುವುದನ್ನು ಕಲಿಯುವೆವು.
02:34 Turn on animate editing mode ಐಕಾನ್ ಅನ್ನು ಕ್ಲಿಕ್ ಮಾಡಿ.
02:38 Stem ಲೇಯರ್ ಅನ್ನು ಕ್ಲಿಕ್ ಮಾಡಿ, ಆಕೃತಿಯನ್ನು ಆಯ್ಕೆ ಮಾಡಿಕೊಳ್ಳಿ.
02:42 ಕ್ಯಾನ್ವಾಸ್ ನ ಮೇಲ್ಭಾಗದಲ್ಲಿ, Toggle tangent handles ಆಯ್ಕೆಯು, ON ಆಗಿರುವುದನ್ನು ಖಚಿತಪಡಿಸಿಕೊಳ್ಳಿ.
02:50 ನಂತರ, Time track panel ಗೆ ಹೋಗಿ, ಮತ್ತು 24 ನೇ ಫ್ರೇಮ್ ನ ಮೇಲೆ Time cursor ಅನ್ನು ಇಡಿ.
02:57 Transform tool ಅನ್ನು ಆಯ್ಕೆ ಮಾಡಿ.
03:00 ಕಾಂಡದ ಮೇಲ್ಬಾಗದ ವರ್ಟೆಕ್ಸ್ ಅನ್ನು ಕ್ಲಿಕ್ ಮಾಡಿ, ಇದನ್ನು ಇಲ್ಲಿ ತೋರಿಸಿರುವಂತೆ, ಕ್ಯಾನ್ವಾಸ್ ನ ಮೇಲೆ ಮೇಲ್ಮುಖವಾಗಿ ಡ್ರ್ಯಾಗ್ ಮಾಡಿ.
03:06 ನೀವು zoom in ಮತ್ತು zoom out ಮಾಡಲು, ಕ್ರಮವಾಗಿ + ಮತ್ತು – ಚಿಹ್ನೆಯನ್ನು ಬಳಸಬಹುದು.
03:13 ನಂತರ, ruler ಗೆ ಹೋಗಿ,
03:17 ಕ್ಯಾನ್ವಾಸ್ ನ ಮೇಲೆ, ಇಲ್ಲಿ ತೋರಿಸಿರುವಂತೆ ಐದು Guidlines ಗಳನ್ನು ಡ್ರ್ಯಾಗ್ ಮಾಡಿ.
03:24 ಫೈಲ್ ಅನ್ನು ಸೇವ್ ಮಾಡಲು, Ctrl ಮತ್ತು S ಕೀಲಿಗಳನ್ನು ಒತ್ತಿ.
03:29 Toolbar ನಲ್ಲಿ, Transform tool ಅನ್ನು ಕ್ಲಿಕ್ ಮಾಡಿ.
03:32 canvas ನಲ್ಲಿ, ಆಕೃತಿಯ ಮೇಲೆ ರೈಟ್-ಕ್ಲಿಕ್ ಮಾಡಿ.
03:36 ನಂತರ Insert item and keep shape ಅನ್ನು ಕ್ಲಿಕ್ ಮಾಡಿ.
03:40 ಇಲ್ಲಿ ಮಾಡಿರುವಂತೆ, Guidelines ಗಳ ಮೇಲೆ, ಇನ್ನೂ 10 ವರ್ಟೈಸಿಸ್ ಗಳನ್ನು ಸಂಯೋಜಿಸಿ.
03:45 ಇದನ್ನು Insert item and keep shape ಕ್ಲಿಕ್ ಮಾಡಿ, ಮಾಡಬಹುದು.
03:49 ಈಗ, ಪ್ರತಿ ವರ್ಟೆಕ್ಸ್ ನ ಮೇಲೂ ರೈಟ್-ಕ್ಲಿಕ್ ಮಾಡಿ.
03:53 Split tangents ಅನ್ನು ಆಯ್ಕೆ ಮಾಡಿ, ಅದರಿಂದ ಪ್ರತಿ ವರ್ಟೆಕ್ಸ ನ ಟ್ಯಾಂಜೆಂಟ್ ಹ್ಯಾಂಡಲ್ಸ್ ಗಳನ್ನು ಪ್ರತ್ಯೇಕವಾಗಿ ಸರಿಸಬಹುದು.
04:00 ನಂತರ Time track panel ಗೆ ಹೋಗಿ ಮತ್ತು 23 ನೆಯ ಫ್ರೇಮ್ ನಲ್ಲಿ Time cursor ಅನ್ನು ಇಡಿ.
04:06 parameter panel ಗೆ ಹೋಗಿ.
04:08 ಗ್ರುಪ್ ಅನ್ನು ತೆರೆಯಲು, Vertices ಗಳ ಟ್ರೈ ಆಂಗಲ್ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
04:13 ಹೊಸದಾಗಿ ಸೇರಿಸಿದ ವರ್ಟೈಸಿಸ್ ಗಳನ್ನು ಪರೀಕ್ಷಿಸಿ.
04:15 ನಾವು ಅವುಗಳನ್ನು 23 ನೆಯ ಫ್ರೇಮ್ ನಲ್ಲಿ ನಿಷ್ಕ್ರಿಯಗೊಳಿಸಬೇಕು.
04:19 ಹೊಸದಾಗಿ ಸೇರಿಸಿದ ವರ್ಟೈಸಿಸ್ ಗಳ ಮೇಲೆ ರೈಟ್-ಕ್ಲಿಕ್ ಮಾಡಿ.
04:22 Mark active point as off ಅನ್ನು ಕ್ಲಿಕ್ ಮಾಡಿ.
04:26 ಇದೇರೀತಿಯಾಗಿ ಹೊಸದಾಗಿ ಸೇರಿಸಿದ ಎಲ್ಲ ವರ್ಟೈಸಿಸ್ ಗಳಿಗೂ ಮಾಡಿ.
04:39 ಫೈಲ್ ಅನ್ನು ಸೇವ್ ಮಾಡಲು, Ctrl ಮತ್ತು S ಕೀಲಿಗಳನ್ನು ಒತ್ತಿ.
04:43 ಈಗ ಮತ್ತೊಮ್ಮೆ Time track panel ಗೆ ಹೋಗಿ, Time cursor ಅನ್ನು 30ನೆಯ ಫ್ರೇಮ್ ನಲ್ಲಿಡಿ.
04:49 canvas ಗೆ ಹಿಂದಿರುಗಿ.
04:50 ಈಗ ಎಲೆಗಳ ನೇರವಾದ ಭಾಗಗಳನ್ನು ರಚಿಸಲು ಇಲ್ಲಿ ತೋರಿಸಿರುವಂತೆ, ವರ್ಟೈಸಿಸ್ ಗಳನ್ನು ಸರಿಸಿ.
04:57 ಮತ್ತೆ ಈಗ Time track panel ಗೆ ಹೋಗಿ, Time cursor 37ನೆಯ ಫ್ರೇಮ್ ನಲ್ಲಿಡಿ.
05:04 ಮತ್ತೆ canvasಗೆ ಹಿಂದಿರುಗೋಣ.
05:06 ಎಲೆಗಳನ್ನು ರಚಿಸಲು, ವರ್ಟೈಸಿಸ್ ಗಳನ್ನು ಈ ರೀತಿಯಾಗಿ ಸರಿಸಿ.
05:11 ನೆನಪಿಡಿ, ಹೊಸತಾಗಿ ಸೇರಿಸಿದ ವರ್ಟೈಸಿಸ್ ಗಳಿಗೆ ಮಾತ್ರ mark active point ಅನ್ನು off ಎಂದು ಸೆಟ್ ಮಾಡಲಾಗಿದೆ.
05:18 Time track panel ಗೆ ಹಿಂದಿರುಗಿ.
05:20 Time cursor ಅನ್ನು 45 ನೆಯ ಫ್ರೇಮ್ ನಲ್ಲಿಡಿ, ಮತ್ತು ಮೇಲಿನ ವರ್ಟೆಕ್ಸ್ ಅನ್ನು ಇಲ್ಲಿ ತೋರಿಸಿರುವಂತೆ ಸರಿಸಿ.
05:30 ಇದೇ ರೀತಿಯಾಗಿ, ನಾವು Stem ನಲ್ಲಿಯೇ ಇನ್ನೂ ಎರಡು ಎಲೆಗಳನ್ನು ಸೇರಿಸುವೆವು.
05:35 Time track panel ಗೆ ಹೋಗಿ ಮತ್ತು Time cursor 80 ನೆಯ ಫ್ರೇಮ್ ನಲ್ಲಿಡಿ.
05:40 ಈಗ ಮೊಗ್ಗಿನ ಸುತ್ತ ಹಸಿರು ಬಣ್ಣದ ದಳಗಳನ್ನು ಮಾಡಲು ಸ್ಟೆಮ್ ನ vertices ಗಳನ್ನು ಸರಿಸಿ.
05:53 ಮತ್ತೊಮ್ಮೆ Time track panel ಹೋಗಿ ಮತ್ತು Time cursor ಅನ್ನು 90 ನೆಯ ಫ್ರೇಮ್ ನಲ್ಲಿಡಿ.
05:59 ನಂತರ Keyframes ಗೆ ಹೋಗಿ ಮತ್ತು ಒಂದು ಹೊಸ keyframe ಅನ್ನು ಸೇರಿಸಿ.
06:02 ಈಗ, Spline ಟೂಲ್ ಅನ್ನು ಕ್ಲಿಕ್ ಮಾಡಿ.
06:05 "Create Region Layer" ಮಾತ್ರ ಆಯ್ಕೆಯಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ.
06:11 toolbox ನಲ್ಲಿ, ಫಿಲ್ ಕಲರ್ ಅನ್ನು ಗುಲಾಬಿ (ಪಿಂಕ್) ಬಣ್ಣಕ್ಕೆ ಸೆಟ್ ಮಾಡಿ.
06:14 ನಂತರ ಇಲ್ಲಿ ತೋರಿಸಿರುವಂತೆ, Spline ಟೂಲ್ ಅನ್ನು ಬಳಸಿ, ಒಂದು ಮೊಗ್ಗನ್ನು ಬರೆಯಿರಿ.
06:19 ಮೂರು ವರ್ಟೈಸಿಸ್ ಗಳನ್ನು ಬರೆದಾದ ನಂತರ, ಈ ಆಕೃತಿಯನ್ನು ಮುಚ್ಚುವುದನ್ನು ನೆನಪಿಡಿ.
06:25 ಇದನ್ನು ಮಾಡಲು, ಮೊದಲ ವರ್ಟೆಕ್ಸ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Loop Spline'" ಅನ್ನು ಆಯ್ಕೆ ಮಾಡಿ.
06:31 ಗಮನಿಸಿ, ಈಗ ಆಕೃತಿಯು ಮುಚ್ಚಲ್ಪಟ್ಟಿದೆ.
06:36 vertices ಗಳನ್ನು ಹೊಂದಿಸಿ, ಮೊಗ್ಗಿನ ಆಕಾರವನ್ನು ರಚಿಸಿ.
06:40 ಲೇಯರ್ ನ ಹೆಸರನ್ನು Bud ಎಂದು ಬದಲಿಸಿ.
06:43 Bud ಲೇಯರ್ ಅನ್ನು, Stem ಲೇಯರ್ ನ ಕೆಳಗಡೆ ಇಡಿ.
06:47 ಮತ್ತೆ Time track panel ಗೆ ಹೋಗಿ ಮತ್ತು Time cursor ಅನ್ನು 99 ನೆಯ ಫ್ರೇಮ್ ನಲ್ಲಿಡಿ.
06:54 ಈಗ ಮೊಗ್ಗಿನ top vertex ಅನ್ನು, ಇಲ್ಲಿ ಮಾಡಿರುವಂತೆ, ಸರಿಸಿ.
06:58 ಫೈಲ್ ಅನ್ನು ಸೇವ್ ಮಾಡಲು, Ctrl ಮತ್ತು S ಕೀಲಿಗಳನ್ನು ಒತ್ತಿ.
07:03 ಈಗ Layers panel ಹೋಗಿ, Stem ಲೇಯರ್ ಅನ್ನು ಆಯ್ಕೆ ಮಾಡಿ.
07:07 ಇದಾದ ನಂತರ, canvas ಗೆ ಹಿಂದಿರುಗಿ, ಮತ್ತು ಕಾಂಡದ ಆಕೃತಿಯ ಮೇಲೆ ರೈಟ್ ಕ್ಲಿಕ್ ಮಾಡಿ.
07:13 Insert item and keep shape ಅನ್ನು ಕ್ಲಿಕ್ ಮಾಡಿ, ಇನ್ನೊಂದು ವರ್ಟೆಕ್ಸ್ ಅನ್ನು ಸೇರಿಸಿ.
07:18 ಇದೇ ರೀತಿಯಾಗಿ ನಾವು ಇನ್ನೂ ನಾಲ್ಕು ವರ್ಟೈಸಿಸ್ ಗಳನ್ನು ಸೇರಿಸಬೇಕು.
07:22 time cursor ಅನ್ನು 98 ನೆಯ ಫ್ರೇಮ್ ನಲ್ಲಿಡಿ. ಮತ್ತು ಈ ವರ್ಟೈಸಿಸ್ ಗಳಿಗೆ active point ಅನ್ನು off ಎಂದು ಮಾರ್ಕ್ ಮಾಡಿ.
07:33 ಇಲ್ಲಿ ತೋರಿಸಿರುವಂತೆ ವರ್ಟೈಸಿಸ್ ಗಳನ್ನು ಸರಿಸಿ, ನಾವು ಈ ರೀತಿಯ ಆಕೃತಿಯನ್ನು ಪಡೆಯಬೇಕು.
07:41 ಫೈಲ್ ಅನ್ನು ಸೇವ್ ಮಾಡಲು, Ctrl ಮತ್ತು S ಕೀಲಿಗಳನ್ನು ಒತ್ತಿ.
07:45 ನಿಮ್ಮ ಫೈಲ್ ಅನ್ನು ಆಗಾಗ್ಗೆ ಸೇವ್ ಮಾಡುವುದು ಉತ್ತಮ ಹವ್ಯಾಸವಾಗಿದೆ.
07:49 ಮುಂದೆ ಹೋದಂತೆ ನಾನು ಇದನ್ನು, ಬಾಹ್ಯವಾಗಿ ತಿಳಿಸುವುದಿಲ್ಲ.
07:54 ದಯವಿಟ್ಟು ನಿರ್ದಿಷ್ಟಾವಧಿಗೊಮ್ಮೆ ಇದನ್ನು ನೀವೇ ಮಾಡಿ.
07:58 Time track panel ಗೆ ಹಿಂದಿರುಗಿ ಮತ್ತು Time cursor ಅನ್ನು 100 ನೆಯ ಫ್ರೇಮ್ ನಲ್ಲಿಡಿ.
08:03 Layers ಪ್ಯಾನೆಲ್ ಗೆ ಹೋಗಿ ಮತ್ತು Bud ಲೇಯರ್ ಅನ್ನು ಆಯ್ಕೆ ಮಾಡಿ.
08:06 Duplicate ನ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.
08:10 ಲೇಯರ್ ಗಳನ್ನು ಕ್ರಮವಾಗಿ, petal_1 ಮತ್ತು petal_2 ಎಂದು ಹೆಸರಿಸಿ.
08:19 Time cursor ಅನ್ನು 108 ನೆಯ ಫ್ರೇಮ್ ನಲ್ಲಿಡಿ.
08:22 ದಳಗಳ ನೋಡ್ಸ್ ಗಳನ್ನು ಇಲ್ಲಿ ತೋರಿಸಿರುವಂತೆ ಸರಿಸಿ.
08:26 Time track panel ಗೆ ಹಿಂದಿರುಗಿ ಮತ್ತು Time cursor ಅನ್ನು 115ನೆಯ ಫ್ರೇಮ್ ನಲ್ಲಿಡಿ.
08:34 Layers ಪ್ಯಾನೆಲ್ ಗೆ ಹೋಗಿ, ಮತ್ತು petal_1 ಮತ್ತು petal_2 ಲೇಯರ್ ಗಳೆರಡನ್ನೂ ಆಯ್ಕೆ ಮಾಡಿ.
08:40 Duplicate ಅನ್ನು ಕ್ಲಿಕ್ ಮಾಡಿ.
08:43 ಹೊಸ ಲೇಯರ್ ಗಳನ್ನು petal_3 ಮತ್ತು petal_4 ಎಂದು ಹೆಸರಿಸಿ.
08:47 ಈಗ Time track panel ಗೆ ಹಿಂದಿರುಗೋಣ.
08:52 Time cursor ಅನ್ನು120 ನೆಯ ಫ್ರೇಮ್ ನಲ್ಲಿಡಿ.
08:56 3 ಮತ್ತು 4 ನೆಯ ಪೆಟಲ್ ಗಳ vertices ಗಳನ್ನು, ಇಲ್ಲಿ ತೋರಿಸಿರುವಂತೆ ಸರಿಸಿ.
09:03 Layers ಪ್ಯಾನಲ್ ಗೆ ಹೋಗಿ ಮತ್ತು petal _3 ಮತ್ತು petal_4 ಲೇಯರ್ ಗಳನ್ನು ಆಯ್ಕೆ ಮಾಡಿಕೊಳ್ಳಿ.
09:10 Duplicate ಅನ್ನು ಕ್ಲಿಕ್ ಮಾಡಿ.
09:12 ಹೊಸ ಲೇಯರ್ ಗಳನ್ನು, petal_5 ಮತ್ತು petal_6 ಎಂದು ಹೆಸರಿಸಿ.
09:17 Time track panel ಗೆ ಹಿಂದಿರುಗಿ, Time cursor ಅನ್ನು 140 ನೆಯ ಫ್ರೇಮ್ ನಲ್ಲಿಡಿ.
09:23 5 ಮತ್ತು 6ನೆಯ ಪೆಟಲ್ ಗಳ ವರ್ಟೈಸಿಸ್ ಗಳನ್ನು ಇಲ್ಲಿ ತೋರಿಸಿರುವಂತೆ ಸರಿಸಿ.
09:33 ಮತ್ತೆ, Time track panel ಗೆ ಹೋಗಿ, Time cursor ಅನ್ನು 108 ನೆಯ ಫ್ರೇಮ್ ನಲ್ಲಿಡಿ.
09:42 ನಂತರ Toolbar ಗೆ ಹೋಗಿ, Transform tool ಅನ್ನು ಕ್ಲಿಕ್ ಮಾಡಿ.
09:46 ಡ್ರಾಯಿಂಗ್ ನ ಕಾಂಡದ ಭಾಗವನ್ನು ಆಯ್ಕೆ ಮಾಡಿ.
09:48 ಮೊಗ್ಗಿನ ಹಸಿರು ದಳಗಳ ವರ್ಟೈಸಿಸ್ ಗಳನ್ನು, ಇಲ್ಲಿ ತೋರಿಸಿರುವಂತೆ ಸರಿಸಿ.
09:55 Time track panel ಗೆ ಹೋಗಿ, Time cursor ಅನ್ನು 128 ನೆಯ ಫ್ರೇಮ್ ನಲ್ಲಿಡಿ.
10:01 ಮೊಗ್ಗಿನ ಹಸಿರು ದಳಗಳ ವರ್ಟೈಸಿಸ್ ಗಳನ್ನು, ಇಲ್ಲಿ ತೋರಿಸಿರುವಂತೆ ಸರಿಸಿ.
10:13 ಕರ್ಸರ್ ಅನ್ನು 0 ಫ್ರೇಮ್ ನಲ್ಲಿಡಿ. Bud ಲೇಯರ್ ಅನ್ನು ಆಯ್ಕೆ ಮಾಡಿ.
10:17 Parameters ಪ್ಯಾನಲ್ ಗೆ ಹೋಗಿ, ಮತ್ತು Amount ಅನ್ನು 0 ಎಂದು ಬದಲಿಸಿ.
10:20 petals ಲೇಯರ್ ಗಳಿಗೂ ಇದೇ ರೀತಿಯಾಗಿ ಮಾಡಿ.
10:34 ಈಗ 89 ನೆಯ ಫ್ರೇಮ್ ಗೂ ಇದೇ ರೀತಿಯಾಗಿ ಮಾಡೋಣ.
10:46 Turn off animate editing mode ಐಕಾನ್ ಅನ್ನು ಕ್ಲಿಕ್ ಮಾಡಿ.
10:51 ಕ್ಯಾನ್ವಾಸ್ ನ ಕೆಳಭಾಗದಲ್ಲಿರುವ Seek to begin ಅನ್ನು ಕ್ಲಿಕ್ ಮಾಡಿ.
10:55 Play ಐಕಾನ್ ಅನ್ನು ಕ್ಲಿಕ್ ಮಾಡಿ, ಆನಿಮೇಷನ್ ಅನ್ನು ಪ್ಲೇ ಮಾಡಿ.
10:58 ಈಗ background ನಲ್ಲಿ, gradient (ಗ್ರೇಡಿಯೆಂಟ್) ಅನ್ನು ಸೇರಿಸೋಣ.
11:02 Background ಲೇಯರ್ ಅನ್ನು ಆಯ್ಕೆ ಮಾಡಿ. gradient ಅನ್ನು ಕ್ಲಿಕ್ ಮಾಡಿ.
11:06 ಇಲ್ಲಿ ತೋರಿಸಿರುವಂತೆ ಬ್ಯಾಕ್ ಗ್ರೌಂಡ್ ನಲ್ಲಿ ಗ್ರೇಡಿಯೆಂಟ್ ಅನ್ನು ಡ್ರ್ಯಾಗ್ ಮಾಡಿ.
11:11 outline colour ಅನ್ನು ಕಂದು ಬಣ್ಣ(ಬ್ರೌನ್), fill colour ಅನ್ನು ನೀಲಿ ಬಣ್ಣವನ್ನೂ ಆಯ್ಕೆ ಮಾಡಿ.
11:15 ಈಗ ನಾವು Synfig ಫೈಲ್ ಅನ್ನು save ಸೇವ್ ಮಾಡೋಣ.
11:18 ಈಗ ನಾವು , preview ಅನ್ನು ಪರೀಕ್ಷಿಸೋಣ.
11:21 File ಹೋಗಿ ಮತ್ತು Preview ಅನ್ನು ಕ್ಲಿಕ್ ಮಾಡಿ.
11:25 Quality ಅನ್ನು 0.5 ಎಂದೂ ಮತ್ತು Frame per second ಅನ್ನು 24 ಎಂದೂ ಸೆಟ್ ಮಾಡಿ.
11:30 Preview ಬಟನ್ ಅನ್ನು ಕ್ಲಿಕ್ ಮಾಡಿ, ನಂತರ Play ಬಟನ್ ಅನ್ನು ಕ್ಲಿಕ್ ಮಾಡಿ.
11:35 ನಾವು ಪರದೆಯ ಮೇಲೆ ಆನಿಮೇಷನ್ ನ ಪ್ರಿವಿವ್ಯೂ ವನ್ನು ನೋಡಬಹುದು.
11:40 Preview ವಿಂಡೋ ವನ್ನು ಮುಚ್ಚಿರಿ.
11:42 ಈಗ ಆನಿಮೇಷನ್ ಅನ್ನು ರೆಂಡರ್ ಮಾಡೋಣ.
11:46 ಅದನ್ನು ಮಾಡಲು, File ಅನ್ನೂ ನಂತರ Render ಅನ್ನೂ ಕ್ಲಿಕ್ ಮಾಡಿ.
11:51 Choose ಅನ್ನು ಕ್ಲಿಕ್ ಮಾಡಿ ಮತ್ತು Save render as ವಿಂಡೋವನ್ನು ತೆರೆಯಿರಿ.
11:56 ನೀವು ರೆಂಡರ್ ಆದ ಫೈಲ್ ಸೇವ್ ಆಗಬೇಕಾದ ಲೊಕೇಷನ್ ಅನ್ನು ಕ್ಲಿಕ್ ಮಾಡಿ.
12:00 ಹೆಸರನ್ನು plant-animation.avi ಎಂದು ಬದಲಿಸಿ.
12:05 Target ಡ್ರಾಪ್ ಡೌನ್ ಮೆನುವನ್ನು ಕ್ಲಿಕ್ ಮಾಡಿ, ಮತ್ತು ಎಕ್ಸ್ಟೆನ್ಷನ್ ಅನ್ನು ffmpeg ಎಂದು ಆಯ್ಕೆ ಮಾಡಿ.
12:10 ನಂತರ, Time ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತು End time ಅನ್ನು 150 ಎಂದು ಬದಲಿಸಿ.
12:16 ನಂತರ Render ಅನ್ನು ಕ್ಲಿಕ್ ಮಾಡಿ.
12:21 ಈಗ ನಮ್ಮ ಆನಿಮೇಷನ್ ಅನ್ನು ಪರೀಕ್ಷಿಸೋಣ.
12:24 Desktop ಗೆ ಹೋಗಿ.
12:27 ನಮ್ಮ ಫೈಲ್ ಅನ್ನು ಸೇವ್ ಮಾಡಿರುವ ಫೋಲ್ಡರ್ ಅನ್ನು ತೆರೆಯೋಣ.
12:31 ಈಗ plant-animation. avi ಅನ್ನು ಆಯ್ಕೆ ಮಾಡಿ.
12:35 ರೈಟ್ ಕ್ಲಿಕ್ ಮಾಡಿ, ಮತ್ತು Firefox ವೆಬ್ ಬ್ರೌಸರ್ ಅನ್ನು ಬಳಸಿ, ಆನಿಮೇಷನ್ ಅನ್ನು ಪ್ಲೇ ಮಾಡಿ.
12:48 ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
12:51 ಸಂಕ್ಷಿಪ್ತವಾಗಿ,
12:53 ಈ ಟ್ಯೂಟೋರಿಯಲ್ ನಲ್ಲಿ ನಾವು, Synfig ನಲ್ಲಿ ಒಂದು ಗಿಡವನ್ನು ಆನಿಮೇಟ್ ಮಾಡುವುದನ್ನು ಕಲಿತಿದ್ದೇವೆ.
12:58 ನಾವು:
13:00 Spline ಟೂಲ್ ನಿಂದ ಆಕೃತಿಯನ್ನು ರಚಿಸುವುದು,
13:03 Insert item ಅನ್ನು ಬಳಸಿ, ವರ್ಟೆಕ್ಸ್ ಅನ್ನು ಸೇರಿಸುವುದು,
13:07 split tangent ಆಯ್ಕೆ,
13:09 mark active point as off ಆಯ್ಕೆ,
13:13 ಆಕೃತಿಯನ್ನು ಆನಿಮೇಟ್ ಮಾಡುವುದು – ಇವುಗಳ ಕುರಿತು ಕಲಿತಿದ್ದೇವೆ.
13:15 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
13:17 ಒಂದು ಸರಳವಾದ ಕಾರ್ಟೂನ್ ಮುಖವನ್ನು ಬರೆಯಿರಿ, ಇದು ಬೇರೆ ಬಣ್ಣವಿರುವ ಉದ್ದವಾದ ಕೂದಲನ್ನು ಹೊಂದಿರಬೇಕು.
13:22 ಮತ್ತು ಕೂದಲನ್ನು ಆನಿಮೇಟ್ ಮಾಡಿ.
13:26 ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಈ ರೀತಿಯಾಗಿ ಕಾಣಬೇಕು.
13:29 ಉದ್ದ ಕೂದಲುಳ್ಳ ಕಾರ್ಟೂನ್ ಮುಖ.
13:33 ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ Spoken Tutorial ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ವಿವರಿಸುತ್ತದೆ.
13:37 ದಯವಿಟ್ಟು ಅದನ್ನು ನೋಡಿ.
13:40 ಸ್ಪೋಕನ್ ಟ್ಯುಟೋರಿಯಲ್ಸ್ ಗಳು ಕಾರ್ಯಶಾಲೆಗಳನ್ನು ನಡೆಸಿ, ಪ್ರಮಾಣಪತ್ರವನ್ನು ಕೊಡುತ್ತದೆ.
13:45 ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
13:47 ದಯವಿಟ್ಟು ಸಮಯವನ್ನೊಳಗೊಂಡ ನಿಮ್ಮ ಪ್ರಶ್ನೆಗಳನ್ನುಈ ಫೋರಮ್ ನಲ್ಲಿ ಪೋಸ್ಟ್ ಮಾಡಬಹುದು.
13:51 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD, ಭಾರತ ಸರ್ಕಾರ – ಇವರಿಂದ ಅನುದಾನವನ್ನು ಪಡೆದಿರುತ್ತದೆ.
13:58 ಅನುವಾದ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

NaveenBhat