Synfig/C2/Animate-a-Toy-train/Kannada
From Script | Spoken-Tutorial
Time | Narration |
00:01 | “Animate a toy train” using Synfig ಎಂಬ ಸ್ಪೋಕನ್ ಟ್ಯುಟೊರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು ಮೊದಲು ರಚಿಸಿದ ಆಟಿಕೆ ರೈಲನ್ನು ಅನಿಮೇಟ್ ಮಾಡಲು ಕಲಿಯುತ್ತೇವೆ. |
00:12 | ಈ ಪಾಠಕ್ಕಾಗಿ ನಾನು :
Ubuntu Linux 14.04 OS, Synfig version 1.0.2 ಗಳನ್ನು ಉಪಯೋಗಿಸುತ್ತಿದ್ದೇನೆ. |
00:21 | Train Synfig ಫೈಲ್ ಅನ್ನು ತೆರೆಯೋಣ. |
00:25 | ನಿಮ್ಮ ಸಿಸ್ಟಮ್ ನಲ್ಲಿರುವ Train Synfig ಫೈಲ್ ಅನ್ನು ತೆರೆಯಿರಿ. |
00:29 | ನಾವು ಅನಿಮೇಷನ್‌ನೊಂದಿಗೆ ಪ್ರಾರಂಭಿಸೋಣ. |
00:31 | Engine group layer ನ ಡ್ರೊಪ್ ಡೌನ್ ಲಿಸ್ಟ್ ಅನ್ನು ತೆರೆಯಿರಿ. |
00:36 | ಯಾವುದೇ Wheel group layer ನ ಮೇಲೆ ರೈಟ್ ಕ್ಲಿಕ್ ಮಾಡಿ. |
00:39 | Star ಲೆಯರ್ ಅನ್ನು ಸೆಲೆಕ್ಟ್ ಮಾಡಿ. |
00:41 | ಪುನಃ ರೈಟ್ ಕ್ಲಿಕ್ ಮಾಡಿ New layer ಮೇಲೆ ಕ್ಲಿಕ್ ಮಾಡಿ. |
00:45 | ನಂತರ Transform ಮತ್ತು Rotate ಗಳ ಮೇಲೆ ಕ್ಲಿಕ್ ಮಾಡಿ. |
00:50 | ಈಗ ಚಕ್ರಕ್ಕೆ Rotate effect ಅನ್ನು ಅನ್ವಯಿಸಲಾಗಿದೆ. |
00:54 | ಆಂಕರ್ ಪಾಯಿಂಟ್ ಅನ್ನು ಚಕ್ರದ ಮಧ್ಯಕ್ಕೆ ಸರಿಸಿ. |
00:58 | ಎನಿಮೆಶನ್ ಪೆನಲ್ ನಲ್ಲಿ Turn on animate editing mode ಐಕಾನ್ ಅನ್ನು ಕ್ಲಿಕ್ ಮಾಡಿ. |
01:05 | Current frame ಬೊಕ್ಸ್ ನಲ್ಲಿ 24 ಎಂದು ಟೈಪ್ ಮಾಡಿ. |
01:09 | Parameters panel ಗೆ ಹೋಗಿ. |
01:11 | Amount parameter ನ ಮೌಲ್ಯದ ಮೇಲೆ ಡಬಲ್ ಕ್ಲಿಕ್ ಮಾಡಿ, ಅದನ್ನು 360 ಕ್ಕೆ ಬದಲಾಯಿಸಿ. |
01:18 | ಟೈಮ್ ಟ್ರ್ಯಾಕ್ ಪ್ಯಾನೆಲ್‌ನಲ್ಲಿ ವೇ ಪಾಯಿಂಟ್‌ಗಳನ್ನು ರಚಿಸಲಾಗಿದೆ ಎಂಬುದನ್ನು ಗಮನಿಸಿ. |
01:23 | 2 ವೇ ಪಾಯಿಂಟ್‌ಗಳ ನಡುವೆ 'ಟೈಮ್ ಕರ್ಸರ್' ಅನ್ನು ಕ್ಲಿಕ್ ಮಾಡಿ ಮತ್ತು ಎಳೆಯಿರಿ ಮತ್ತು ಚಕ್ರದ ತಿರುಗುವಿಕೆಯನ್ನು ಪರಿಶೀಲಿಸಿ. |
01:29 | Ctrl + S ಒತ್ತಿ ಫೈಲ್ ಅನ್ನು ಸೇವ್ ಮಾಡಿ. |
01:33 | ಈ ತಿರುಗುವಿಕೆಯ ಪರಿಣಾಮಕ್ಕಾಗಿ ನಾವು ಈಗ ಟೈಮ್ ಲೂಪ್ ಅನ್ನು ರಚಿಸೋಣ. |
01:37 | Rotate effect layer ಮೇಲೆ ರೈಟ್ ಕ್ಲಿಕ್ ಮಾಡಿ New layer ಅನ್ನು ಕ್ಲಿಕ್ ಮಾಡಿ. |
01:42 | ನಂತರ Other ಮತ್ತು Time Loop ಮೇಲೆ ಕ್ಲಿಕ್ ಮಾಡಿ. |
01:48 | Parameters panel, ನಲ್ಲಿ Only For Positive Duration ಚೆಕ್ ಬೊಕ್ಸ್ ಅನ್ನು ಟಿಕ್ ಮಾಡಿ. |
01:55 | ನಂತರ ಎಲ್ಲಾ ಚಕ್ರಗಳಿಗೂ Rotate & Time Loop ಎಫ್ಫೆಕ್ಟ್ ಅನ್ನು ಸಂಯೋಜಿಸೋಣ. |
02:00 | ಹಾಗಾಗಿ Shift ಕೀಯನ್ನು ಬಳಸಿ, ಎರಡೂ ಎಫ್ಫೆಕ್ಟ್ ಲೇಯರ್ ಗಳನ್ನು ಸೆಲೆಕ್ಟ್ ಮಾಡಿ. |
02:05 | ಮತ್ತು ಕೊಪಿ ಮಾಡಲು Ctrl ಹಾಗೂ C ಕೀಗಳನ್ನು ಒತ್ತಿ. |
02:09 | ಈಗ, Wheel-1 group layer ನ ಡ್ರೊಪ್-ಡೌನ್ ಲಿಸ್ಟ್ ಮೇಲೆ ಕ್ಲಿಕ್ ಮಾಡಿ. |
02:13 | ಲೇಯರ್ ಗಳನ್ನು ಪೇಸ್ಟ್ ಮಾಡಲು Ctrl ಮತ್ತು V ಕೀಗಳನ್ನು ಒತ್ತಿ. |
02:17 | ಎಲ್ಲಾ ಚಕ್ರಗಳಿಗೆ ಇದೇ ಪ್ರಕ್ರಿಯೆಯನ್ನು ಪುನರಾವರ್ತಿಸಿ. |
02:24 | ಈಗ ಆಟಿಕೆ ರೈಲಿನ ಎಲ್ಲಾ ಚಕ್ರಗಳಿಗೆ ತಿರುಗುವಿಕೆಯ ಪರಿಣಾಮವನ್ನು ಅನ್ವಯಿಸಲಾಗಿದೆ. |
02:29 | ಮತ್ತೊಮ್ಮೆ ಫೈಲ್ ಅನ್ನು Ctrl + S ಒತ್ತುವ ಮೂಲಕ ಸೇವ್ ಮಾಡಿ. |
02:34 | ಈಗ ನಾವು ರೈಲನ್ನು ಅನಿಮೇಟ್ ಮಾಡೋಣ. |
02:37 | Rail ಬಿಟ್ಟು ಉಳಿದೆಲ್ಲ ಲೇಯರ್ ಸಮೂಹಗಳನ್ನು ಆರಿಸಿ. |
02:41 | ಅವುಗಳನ್ನು ಒಟ್ಟಿಗೆ ಗುಂಪು ಮಾಡಿ ಮತ್ತು ಲೇಯರ್ ಗಳ ಗುಂಪನ್ನು Trainಎಂದು ರೀನೇಮ್ ಮಾಡಿ. |
02:47 | ಟೈಮ್ ಕರ್ಸರ್ ಇದು ಸೊನ್ನೆಯ ಫ್ರೇಮ್ ನಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ. |
02:52 | Shift ಕೀ ಉಪಯೋಗಿಸಿ, ರೈಲನ್ನು ಕ್ಯಾನ್ವಾಸ್ ನ ಹೊರಗೆ ಬಲಕ್ಕೆ ಎಳೆಯಿರಿ. |
02:57 | ಟೈಮ್ ಕರ್ಸರ್ ಅನ್ನು 100ನೇ ಫ್ರೇಮ್ ಗೆ ತನ್ನಿ. |
03:01 | Shift ಕೀಯನ್ನು ಉಪಯೋಗಿಸಿ, ರೈಲನ್ನು ಕ್ಯಾನ್ವಾಸ್‌ನ ಹೊರಗೆ ಎಡಭಾಗಕ್ಕೆ ಎಳೆಯಿರಿ. |
03:07 | Turn off animate editing mode ಐಕೊನ್ ಅನ್ನು ಕ್ಲಿಕ್ ಮಾಡಿ. |
03:11 | Ctrl + S ಒತ್ತುವ ಮೂಲಕ ಫೈಲ್ ಅನ್ನು ಸೇವ್ ಮಾಡಿ. |
03:15 | ಈಗ ನಾವು ಅನಿಮೇಷನ್ ಅನ್ನು ನಿರೂಪಿಸೋಣ. |
03:18 | ಇದಕ್ಕಾಗಿ File ಗೆ ಹೋಗಿ Render ಅನ್ನು ಒತ್ತಿ. |
03:22 | File name ಫೀಲ್ಡ್ ನಲ್ಲಿ ಎಕ್ಸ್ಟೆನ್ಶನ್ ಅನ್ನು avi ಗೆ ಮತ್ತು Target ಅನ್ನು ffmpeg ಗೆ ಬದಲಿಸಿ. |
03:31 | quality ಯನ್ನು 9ಕ್ಕೆ ಹೆಚ್ಚಿಸಿ ಮತ್ತು Render ಬಟನ್ ಒತ್ತಿ. |
03:36 | ಈಗ Desktop. ಗೆ ಹೋಗಿ, avi ಫೈಲ್ ಅನ್ನು ರೈಟ್ ಕ್ಲಿಕ್ ಮಾಡಿ, Firefox ವೆಬ್ ಬ್ರೌಸರ್ ಉಪಯೋಗಿಸಿ ಪ್ಲೇ ಮಾಡಿ. |
03:43 | ನಾವು ಈಗ ಆಟಿಕೆ ರೈಲಿನ ಅನಿಮೇಷನ್ ಅನ್ನು ನೋಡಬಹುದು. |
03:47 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಅಂತ್ಯಕ್ಕೆ ಬಂದಿದ್ದೇವೆ. |
03:50 | ನಾವು ಸಂಕ್ಷಿಪ್ತವಾಗಿ ತಿಳಿಯೋಣ. ಈ ಟ್ಯುಟೋರಿಯಲ್ ನಲ್ಲಿ, ನಾವು ಟಾಯ್ ಟ್ರೈನ್ ಅನ್ನು ಅನಿಮೇಟ್ ಮಾಡಲು ಕಲಿತಿದ್ದೇವೆ. |
03:56 | ನಿಮಗಾಗಿ ಒಂದು ನಿಯೋಜನೆ ಇಲ್ಲಿದೆ. ಈ ಟ್ಯುಟೋರಿಯಲ್ ನಲ್ಲಿ ತೋರಿಸಿರುವ ಹಂತಗಳನ್ನು ಅನುಸರಿಸಿ ಹಿಂದಿನ ನಿಯೋಜನೆಯಲ್ಲಿ ರಚಿಸಲಾದ ಬಸ್ ಅನ್ನು ಅನಿಮೇಟ್ ಮಾಡಿ. |
04:06 | ನಿಮ್ಮ ಪೂರ್ಣಗೊಂಡ ನಿಯೋಜನೆಯು ಈ ರೀತಿ ಇರಬೇಕು. |
04:09 | ಈ ವೀಡಿಯೊ 'ಸ್ಪೋಕನ್ ಟ್ಯುಟೋರಿಯಲ್' ಯೋಜನೆಯ ಸಾರಾಂಶವಾಗಿದೆ. ದಯವಿಟ್ಟು ಅದನ್ನು ಡೌನ್‌ಲೋಡ್ ಮಾಡಿ ಮತ್ತು ವೀಕ್ಷಿಸಿ. |
04:15 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಸ್ಪೋಕನ್ ಟ್ಯುಟೋರಿಯಲ್ ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ, ಆನ್‌ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ. |
04:22 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
|
04:24 | ಸಮಯಾಧಾರಿತ ಪ್ರಶ್ನೆಗಳನ್ನು ಈ ಫೊರಮ್ ನಲ್ಲಿ ಪೋಸ್ಟ್ ಮಾಡಿ. |
04:29 | ಸ್ಪೋಕನ್ ಟ್ಯುಟೋರಿಯಲ್ ಯೋಜನೆಗೆ ಭಾರತ ಸರ್ಕಾರದ NMEICT, MHRD ಧನಸಹಾಯ ನೀಡುತ್ತಿದೆ. |
04:35 | ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್‌ನಲ್ಲಿ ಲಭ್ಯವಿದೆ. |
04:39 | ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು. |