STEMI-2017/C2/Search,-select-and-edit-a-patient-file/Kannada
From Script | Spoken-Tutorial
|
|
00:00 | ನಮಸ್ಕಾರ. Search, select and edit a patient file ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ, ನಾವು- ಡಿವೈಸ್ ನಲ್ಲಿ ಈಗಾಗಲೇ ಸೇವ್ ಮಾಡಲಾದ ರೋಗಿಯ ಫೈಲ್ ಅನ್ನು ಹುಡುಕುವುದು ಮತ್ತು ಆಯ್ಕೆಮಾಡುವುದು, |
00:17 | ಅದರಲ್ಲಿ ರೋಗಿಯ ವಿವರಗಳನ್ನು ಎಡಿಟ್ ಮಾಡುವುದು, ಇವುಗಳನ್ನು ಕಲಿಯುವೆವು. |
00:22 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮಗೆ - STEMI App ಅನ್ನು ಇನ್ಸ್ಟಾಲ್ ಮಾಡಿರುವ Android tablet (ಆಂಡ್ರೈಡ್ ಟ್ಯಾಬ್ಲೆಟ್) ಹಾಗೂ |
00:30 | ಸಕ್ರಿಯ ಇಂಟರ್ನೆಟ್ ಸಂಪರ್ಕವು ಬೇಕಾಗುವುದು. |
00:34 | ನಾವು ಈಗ STEMI ಹೋಮ್-ಪೇಜ್ ನಲ್ಲಿ ಇದ್ದೇವೆ. |
00:38 | ಇಲ್ಲಿ, D Hospital user ಎಂದು ಇದು ಹೇಳುತ್ತಿರುವುದನ್ನು ದಯವಿಟ್ಟು ಗಮನಿಸಿ. |
00:43 | ನೀವು ಇರುವ ಆಸ್ಪತ್ರೆಗೆ ಅನುಸಾರವಾಗಿ ನಿಮ್ಮ ಲಾಗ್-ಇನ್ user ID ಬೇರೆಯಾಗಿರಲು ಸಾಧ್ಯವಿದೆ. |
00:50 | Search Page ಗೆ ಹೋಗಲು Search ಟ್ಯಾಬ್ ಅನ್ನು ಆಯ್ಕೆಮಾಡಿ. |
00:54 | Search Page ನ ಮೇಲ್ತುದಿಯ ಎಡಭಾಗದಲ್ಲಿ ಒಂದು Menu ಟ್ಯಾಬ್ ಅನ್ನು ಹೊಂದಿದೆ. |
01:00 | ಇದು ಆರು ಸರ್ಚ್ ಕ್ರೈಟೀರಿಯಾಗಳನ್ನು ಹೊಂದಿದೆ- Patient ID, Patient Name, Admission From to End Date, STEMI Status, Type of Hospital, Hospital Cluster. |
01:17 | ಇವುಗಳು ಮೇಲ್ತುದಿಯಲ್ಲಿ ಪೇಜ್ ನ ಉದ್ದಕ್ಕೂ ಕಂಡುಬರುತ್ತವೆ. |
01:22 | ಕೆಳಗಡೆ, ಇಲ್ಲಿ, ಇತ್ತೀಚಿನ 14 ನಮೂದುಗಳನ್ನು ಸಹ ಪ್ರದರ್ಶಿಸಲಾಗಿದೆ. |
01:27 | ಏಕೆಂದರೆ, ನನ್ನ STEMI ಡಿವೈಸ್ ನಲ್ಲಿ, ಈಗಾಗಲೇ 14 ಕ್ಕಿಂತ ಹೆಚ್ಚು ನಮೂದುಗಳು ನನ್ನ ಹತ್ತಿರ ಇರುತ್ತವೆ. |
01:33 | ನಿಮ್ಮ STEMI ಡಿವೈಸ್ ನಲ್ಲಿ 14 ಕ್ಕಿಂತ ಕಡಿಮೆ ನಮೂದುಗಳು ಇದ್ದರೆ, ನೀವು ಇದಕ್ಕಿಂತ ಚಿಕ್ಕ ಪಟ್ಟಿಯನ್ನು ನೋಡಬಹುದು. |
01:41 | ಆದರೆ ನಿಮ್ಮ ಹತ್ತಿರ 14 ಕ್ಕಿಂತ ಹೆಚ್ಚು ನಮೂದುಗಳು ಇದ್ದರೆ ಆಗ ಇತ್ತೀಚಿನ 14 ನಮೂದುಗಳನ್ನು ಪ್ರದರ್ಶಿಸಲಾಗುವುದು. |
01:49 | ಕೆಳತುದಿಯ ಬಲಭಾಗದಲ್ಲಿ ಒಂದು Search ಬಟನ್ ಇದೆ. |
01:54 | ಈಗಾಗಲೇ ಸೇವ್ ಮಾಡಲಾದ ರೋಗಿಯ ಫೈಲ್ ಅನ್ನು ಹುಡುಕಲು, ನಾವು ನಮಗೆ ಬೇಕಾದ ಸರ್ಚ್ ಕ್ರೈಟೀರಿಯಾ ಅನ್ನು (search criteria) ನಮೂದಿಸಬೇಕು. |
02:03 | ನಂತರ, ಪೇಜ್ ನ ಕೆಳತುದಿಯಲ್ಲಿರುವ Search ಬಟನ್ ಅನ್ನು ಆಯ್ಕೆಮಾಡಬೇಕು. |
02:08 | ಅನೇಕ ಸರ್ಚ್ ಕ್ರೈಟೀರಿಯಾ ಗಳನ್ನು ಒಟ್ಟಿಗೇ ನಮೂದಿಸಿ ಸಹ ರೋಗಿಯ ಫೈಲ್ ಅನ್ನು ನಾವು ಹುಡುಕಬಹುದು. ಇದು ಹುಡುಕುವ ಕ್ರಿಯೆಯನ್ನು ಮೊಟಕುಗೊಳಿಸುತ್ತದೆ. |
02:19 | ದಯವಿಟ್ಟು ಗಮನಿಸಿ- Search ಟ್ಯಾಬ್ ನ ಅಡಿಯಲ್ಲಿ, ಮೊದಲೇ ಸೇವ್ ಮಾಡಿರುವ ಫೈಲ್ ಗಳನ್ನು ಮಾತ್ರ ನಾವು ಹುಡುಕಬಹುದು. |
02:26 | ಇದರ ಅರ್ಥ- ಒಂದುವೇಳೆ, ರೋಗಿಯ ವಿವರಗಳನ್ನು ಸೇರಿಸಿದ ನಂತರ ನಾವು Save and Continue ಬಟನ್ ಅನ್ನು ಆಯ್ಕೆಮಾಡದಿದ್ದರೆ, ಈ ಪೇಜ್ ಸೇವ್ ಆಗುವುದಿಲ್ಲ ಮತ್ತು ಆನಂತರ ನಾವು ಅದನ್ನು ನೋಡಲು ಸಾಧ್ಯವಾಗುವುದಿಲ್ಲ. |
02:40 | ನಾವು ಒಂದು ಕ್ರೈಟೀರಿಯಾವನ್ನು ತೆಗೆದುಕೊಂಡು, ಸೇವ್ ಮಾಡಲಾದ ಕೆಲವು ಫೈಲ್ ಗಳನ್ನು ಹುಡುಕೋಣ. |
02:46 | ಮೊದಲು, ಒಂದು ನಿರ್ದಿಷ್ಟ Patient ID ಯೊಂದಿಗೆ ರೋಗಿಯ ಫೈಲ್ ಅನ್ನು ನಾವು ಹುಡುಕೋಣ. |
02:51 | ಪ್ರದರ್ಶಿತ ಲಿಸ್ಟ್ ನಿಂದ, ಯಾವುದೋ ಒಂದು ರೋಗಿಯ ಫೈಲ್ ಅನ್ನು ಆಯ್ಕೆಮಾಡಿ. |
02:56 | ನಮ್ಮ ಡಿವೈಸ್ ನಲ್ಲಿ ಈಗ ಫೈಲ್ ಅನ್ನು ತೆರೆಯಲಾಗಿದೆ. |
02:59 | ಪೇಜ್ ನ ಮೇಲ್ತುದಿಯಲ್ಲಿ ಪ್ರದರ್ಶಿಸಲಾದ Patient Id ಯನ್ನು ಗಮನಿಸಿ. |
03: 05 | ನನ್ನ ಡಿವೈಸ್ ನಲ್ಲಿ, ನಾನು ಆಯ್ಕೆಮಾಡಿರುವ ರೋಗಿಗಾಗಿ ಈ ಸಂಖ್ಯೆಯನ್ನು ತೋರಿಸುತ್ತಿದೆ. |
03:12 | ನಿಮ್ಮ ಡಿವೈಸ್ ನಲ್ಲಿ, ನೀವು ಆಯ್ಕೆಮಾಡಿರುವ ರೋಗಿಗಾಗಿ ನೀವು ಬೇರೊಂದು ನಂಬರ್ ಅನ್ನು ನೋಡಬಹುದು. |
03:17 | ಈ ಸಂಖ್ಯೆಯನ್ನು ಗುರುತಿಸಿಕೊಳ್ಳಿ. ನಾವು ನಂತರ ಇದನ್ನು ಬಳಸುವೆವು. |
03:22 | ರೋಗಿಯ ಫೈಲ್ ಕವರ್ ನಿಂದ ಸಹ Patient Id ಯನ್ನು ಪಡೆಯಲು ಸಾಧ್ಯವಿದೆ. |
03:28 | ಡೇಟಾ ಅನ್ನು ಸೇರಿಸುವ ಸಮಯದಲ್ಲಿ, ಈ ಸಂಖ್ಯೆಯು STEMI ಡಿವೈಸ್ ನಿಂದ ಸ್ವಯಂ ರಚಿತವಾಗಿದೆ (auto-generated). |
03:35 | ಈಗ, ಪೇಜ್ ನ ಮೇಲ್ತುದಿಯ ಎಡಮೂಲೆಯಲ್ಲಿರುವ ಮೆನ್ಯು ಟ್ಯಾಬ್ ಅನ್ನು ಆಯ್ಕೆಮಾಡಿ. |
03:42 | ನಂತರ Home ಟ್ಯಾಬ್ ಅನ್ನು ಆಯ್ಕೆಮಾಡಿ. |
03:44 | ಈಗ ಮತ್ತೆ Homepage ನಲ್ಲಿರುವ Search ಟ್ಯಾಬ್ ಅನ್ನು ಆಯ್ಕೆಮಾಡಿ. |
03:49 | ಈಗ ನಾವು Search Page ಗೆ ಹಿಂದಿರುಗಿದ್ದೇವೆ. |
03:52 | ಇಲ್ಲಿ, Patient Id ಎಂಬ ಸರ್ಚ್ ಕ್ರೈಟೀರಿಯಾದಲ್ಲಿ, ನಾವು Patient Id ಯನ್ನು ನಮೂದಿಸಬೇಕು. |
03:59 | Patient Id ಎಂಬ ಸರ್ಚ್ ಕ್ರೈಟೀರಿಯಾದಲ್ಲಿ ನಾನು ಈ ಸಂಖ್ಯೆಯನ್ನು ಟೈಪ್ ಮಾಡುವೆನು. ನಾನು ಈಮೊದಲೇ ಗುರುತಿಸಿ ಇಟ್ಟುಕೊಂಡ ಫೈಲ್ ನ ಸಂಖ್ಯೆಯು ಇದೇ ಆಗಿತ್ತು. |
04:09 | ನಿಮ್ಮ ಡಿವೈಸ್ ನ ಮೇಲೆ ಗುರುತಿಸಿಕೊಂಡ ಸಂಖ್ಯೆಯನ್ನು ನೀವು ಟೈಪ್ ಮಾಡಬೇಕು. |
04:14 | ಈಗ, ಪೇಜ್ ನ ಕೆಳಗೆ, ಬಲಭಾಗದಲ್ಲಿರುವ Search ಬಟನ್ ಅನ್ನು ಆಯ್ಕೆಮಾಡಿ. |
04:19 | ಪೇಶಂಟ್ (ರೋಗಿಯ) ಫೈಲ್ ಅನ್ನು ಟೈಪ್ ಮಾಡಿದ Patient Id ಯೊಂದಿಗೆ ಸ್ಕ್ರೀನ್ ನ ಮೇಲೆ ಪ್ರದರ್ಶಿಸಲಾಗಿದೆ. |
04:26 | ಫೈಲ್ ನಲ್ಲಿ ಇರುವುದನ್ನು ನೋಡಲು ಅದನ್ನು ಆಯ್ಕೆಮಾಡಿ. |
04:30 | ನಂತರ, ನಾವು Patient name “Ramesh” ಎಂದು ಇರುವ ಒಂದು ರೋಗಿಯ ಫೈಲನ್ನು ಆಯ್ಕೆಮಾಡೋಣ. |
04:35 | Patient name “Ramesh” ಎಂದು ಇರುವ ಒಂದು ಫೈಲ್ ಅನ್ನು ಪೇಜ್ ನ ಮೇಲೆ ಪ್ರದರ್ಶಿಸಲಾಗಿದೆ. |
04:40 | ಈಗ ಫೈಲ್ ಅನ್ನು ತೆರೆಯಲು ಮತ್ತು ಅದರಲ್ಲಿ ಇರುವುದನ್ನು ನೋಡಲು ಫೈಲ್ ಅನ್ನು ಆಯ್ಕೆಮಾಡಿ. |
04:45 | ಈ ಪೇಜ್ ನ ಮೇಲ್ತುದಿಯ ಬಲಗಡೆಯಲ್ಲಿ ಇರುವ EDIT ಐಕಾನ್ ಅನ್ನು ಗಮನಿಸಿ. |
04:50 | ರೋಗಿಯ ವಿವರಗಳನ್ನು ಎಡಿಟ್ ಮಾಡಲು ಈ ಐಕಾನ್ ಅನ್ನು ಆಯ್ಕೆಮಾಡಿ. |
04:55 | ಎಲ್ಲ ಬದಲಾವಣೆಗಳನ್ನು ಸೇವ್ ಮಾಡಲು ನೆನಪಿಡಿ. |
04:59 | ನಾವು ಈಗ ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಸೇವ್ ಮಾಡಲಾದ ಎಲ್ಲ ರೋಗಿಗಳ ಫೈಲ್ ಗಳನ್ನು ಹುಡುಕುವೆವು. |
05:05 | ನಾನು From Date ನಲ್ಲಿ 1 January 2016 ಮತ್ತು End Date ನಲ್ಲಿ 9 February 2016 ಎಂದು ಆಯ್ಕೆಮಾಡುವೆನು. |
05:14 | ದಯವಿಟ್ಟು ನಿಮ್ಮ ಡಿವೈಸ್ ನಲ್ಲಿ ನೀವು ಡೇಟಾ ಅನ್ನು ಸೇರಿಸಿದ ದಿನಾಂಕಗಳಿಗೆ ಅನುಸಾರವಾಗಿ ಕಾಲಾವಧಿಯನ್ನು ಆಯ್ಕೆಮಾಡಿ. |
05:22 | ಆಮೇಲೆ, ಪೇಜ್ ನ ಕೆಳಗೆ ಬಲಭಾಗದಲ್ಲಿರುವ Search ಬಟನ್ ಅನ್ನು ಆಯ್ಕೆಮಾಡಿ. |
05:27 | January 1st 2016 ನಿಂದ February 9th 2016 ವರೆಗೆ ಸೇವ್ ಮಾಡಲಾದ ಎಲ್ಲ ಫೈಲ್ ಗಳು ನನ್ನ ಪೇಜ್ ನ ಮೇಲೆ ಪ್ರದರ್ಶಿತವಾಗಿವೆ. |
05:38 | ನೀವು, ನಿಮ್ಮ ಡಿವೈಸ್ ಗೆ ಕೊಟ್ಟ ಕಾಲಾವಧಿಯಲ್ಲಿ ಸೇವ್ ಮಾಡಲಾದ ರೋಗಿಗಳ ಫೈಲ್ ಗಳನ್ನು ನೋಡುವಿರಿ. |
05:44 | ಈಗ, ನಿಮಗೆ ಇಷ್ಟವಾದ ಯಾವುದೇ ಫೈಲ್ ಅನ್ನು ತೆರೆದು ಅದರಲ್ಲಿರುವುದನ್ನು ನೋಡಲು ಅದನ್ನು ಆಯ್ಕೆಮಾಡಿ. |
05:50 | ನಂತರ, STEMI status confirmed ಎಂದು ಇರುವ ಫೈಲ್ ಗಳನ್ನು ನಾವು ಹುಡುಕುವೆವು. |
05:55 | STEMI status ಎಂಬ ಸರ್ಚ್ ಕ್ರೈಟೀರಿಯಾದ ಅಡಿಯಲ್ಲಿ, ನಾವು ಈ ಕೆಳಗಿನ ಆಯ್ಕೆಗಳನ್ನು ಪಡೆದಿದ್ದೇವೆ -
ALL STEMI Confirmed STEMI Inconclusive STEMI not Confirmed Non STEMI. |
06:11 | ನಾನು STEMI Confirmed ಅನ್ನು ಆಯ್ಕೆಮಾಡಿ ಆನಂತರ ಪೇಜ್ ನ ಕೆಳಗೆ ಬಲಭಾಗದಲ್ಲಿರುವ Search ಬಟನ್ ಅನ್ನು ಆಯ್ಕೆಮಾಡುವೆನು. |
06:18 | ಪೇಜ್, STEMI Confirmed ಎಂಬ ಸ್ಟ್ಯಾಟಸ್ ನೊಂದಿಗೆ ಎಲ್ಲ ಪೇಶಂಟ್ ಫೈಲ್ ಗಳನ್ನು ತೋರಿಸುತ್ತದೆ. |
06:24 | ನನ್ನ STEMI ಡಿವೈಸ್ ನಲ್ಲಿ, ನಾವು 14 ರೋಗಿಗಳ ಫೈಲ್ ಗಳನ್ನು ನೋಡಬಹುದು. |
06:28 | ನಿಮ್ಮ STEMI ಡಿವೈಸ್ ನಲ್ಲಿ, ಈ ಲಿಸ್ಟ್ ಇನ್ನೂ ದೊಡ್ಡದು ಅಥವಾ ಚಿಕ್ಕದು ಆಗಿರಬಹುದು. |
06:33 | ಇದು STEMI status ಅನ್ನು Confirmed ಎಂದು ಹೊಂದಿರುವ ಎಷ್ಟು ರೋಗಿಗಳನ್ನು ಆಯ್ಕೆಮಾಡಲಾಗಿದೆ ಎಂಬುದನ್ನು ಅವಲಂಬಿಸಿದೆ. |
06:42 | ಹೀಗೆಯೇ, Hospital Type ಸರ್ಚ್ ಕ್ರೈಟೀರಿಯಾಗಾಗಿ ನಾವು ಈ ಕೆಳಗಿನ ಆಯ್ಕೆಗಳನ್ನು ಪಡೆದಿದ್ದೇವೆ –
ALL EMRI A Hospital C Hospital D Hospital. |
06:55 | ಈ ಹುಡುಕುವಿಕೆಯು, ನಿರ್ದಿಷ್ಟವಾದ ಪೇಶಂಟ್ ಫೈಲ್ ಡಿವೈಸ್ ನಲ್ಲಿ ಮೊದಲು ಎಲ್ಲಿ ರಚಿಸಲಾಗಿದೆ ಎಂಬುದನ್ನು ಅವಲಂಬಿಸಿದೆ. |
07:02 | ನಾನು D Hospital ಅನ್ನು ಆಯ್ಕೆಮಾಡಿ ಆನಂತರ Search ಬಟನ್ ಅನ್ನು ಆಯ್ಕೆಮಾಡುವೆನು. |
07:07 | ನೀವು ಹುಡುಕುತ್ತಿರುವ ಪೇಶಂಟ್ ಫೈಲ್ ಗೆ ಅನುಸಾರವಾಗಿ hospital type ಅನ್ನು ನೀವು ಆಯ್ಕೆಮಾಡಬೇಕು. |
07:14 | ನನ್ನ ಡಿವೈಸ್ ನ ಮೇಲೆ ಆಯ್ಕೆಮಾಡಿರುವ ಪೇಜ್, D Hospital ನಲ್ಲಿಯ ಎಲ್ಲ ಪೇಶಂಟ್ ಫೈಲ್ ಗಳನ್ನು ತೋರಿಸುತ್ತದೆ. |
07:21 | ನೀವು ಈ ಸರ್ಚ್ ಕ್ರೈಟೀರಿಯಾವನ್ನು ನಿಮ್ಮ ಆಸ್ಪತ್ರೆಯಿಂದ ವರ್ಗಾಯಿಸಲಾದ ಪೇಶಂಟ್ ಫೈಲ್ ಗಳನ್ನು ವೀಕ್ಷಿಸಲು ಸಹ ಬಳಸಬಹುದು. |
07:29 | ನಿಮ್ಮಲ್ಲಿ ಇದು ನಿಮ್ಮ ಡಿವೈಸ್ ನಲ್ಲಿಯ user id ಗೆ ಅನುಸಾರವಾಗಿ ಇರುವುದು. |
07:34 | ಹೀಗೆಯೇ, Type of Hospital Cluster ನ ಅಡಿಯಲ್ಲಿ, ನಾವು ನಮಗೆ ಇಷ್ಟವಾದ ಕ್ಲಸ್ಟರ್ ಅನ್ನು ಆಯ್ಕೆಮಾಡಬಹುದು. |
07:41 | ನಾನು Kovai Medical Centre and Hospital ಅನ್ನು ಆಯ್ಕೆಮಾಡುವೆನು. |
07:45 | ನೀವು ನಿಮಗೆ ಇಷ್ಟವಾದ ಕ್ಲಸ್ಟರ್ ಅನ್ನು ಆಯ್ಕೆಮಾಡಬೇಕು. |
07:49 | ನಿರ್ದಿಷ್ಟ ಕ್ಲಸ್ಟರ್ ನಲ್ಲಿ, ಕ್ಲಸ್ಟರ್ ಗಳಿಗೆ Hub Hospital (ಅರ್ಥಾತ್ A B Hospital) ನ ಹೆಸರನ್ನು ಇಡಲಾಗಿದೆ. |
07:58 | ಆನಂತರ, ಪೇಜ್ ನ ಕೆಳಗೆ ಬಲಭಾಗದಲ್ಲಿರುವ Search ಬಟನ್ ಅನ್ನು ಆಯ್ಕೆಮಾಡಿ. |
08:02 | ಈಗ , ನಾವು ಒಂದು ನಿರ್ದಿಷ್ಟ clusterನ ಅಡಿಯಲ್ಲಿ ಸೇವ್ ಮಾಡಲಾದ ಫೈಲ್ ಗಳನ್ನು ನೋಡಲು ಸಾಧ್ಯವಾಗುತ್ತದೆ. |
08:08 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು- ವಿವಿಧ ಸರ್ಚ್ ಕ್ರೈಟೀರಿಯಾಗಳನ್ನು ಬಳಸಿ ರೋಗಿಯ ಫೈಲ್ ಅನ್ನು ಹುಡುಕುವುದು ಮತ್ತು ಆಯ್ಕೆಮಾಡುವುದು |
08:17 | ಅಲ್ಲದೇ, ಈಗಾಗಲೇ ಸೇವ್ ಮಾಡಲಾದ ಫೈಲ್ ನಲ್ಲಿ ರೋಗಿಯ ವಿವರಗಳನ್ನು ಎಡಿಟ್ ಮಾಡುವುದು ಇವುಗಳನ್ನು ಕಲಿತಿದ್ದೇವೆ. |
08:21 | STEMI INDIA ಅನ್ನು ಮುಖ್ಯವಾಗಿ ಹೃದಯಾಘಾತದ ರೋಗಿಗಳಿಗೆ ಸೂಕ್ತ ಕಾಳಜಿಯನ್ನು ಪಡೆಯುವಲ್ಲಿ ಆಗುವ ವಿಳಂಬವನ್ನು ಕಡಿಮೆ ಮಾಡಲು ಮತ್ತು ಹೃದಯಾಘಾತದಿಂದಾಗುವ ಮರಣದ ಸಂಖ್ಯೆಯನ್ನು ಕಡಿಮೆ ಮಾಡಲು ‘not for profit’ ಸಂಸ್ಥೆ ಎಂದು ಸ್ಥಾಪಿಸಲಾಯಿತು. |
08:34 | “ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, IIT ಬಾಂಬೆ” ಇದು NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ಸಂಪರ್ಕಿಸಿ. http://spoken-tutorial.org |
08:48 | ಈ ಟ್ಯುಟೋರಿಯಲ್, STEMI INDIA ಮತ್ತು Spoken Tutorial Project, IIT Bombay ಇವರ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ . ವಂದನೆಗಳು. |