STEMI-2017/C2/Search,-select-and-edit-a-patient-file/Kannada

From Script | Spoken-Tutorial
Jump to: navigation, search
Time
NARRATION
00:00 ನಮಸ್ಕಾರ. Search, select and edit a patient file ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ, ನಾವು- ಡಿವೈಸ್ ನಲ್ಲಿ ಈಗಾಗಲೇ ಸೇವ್ ಮಾಡಲಾದ ರೋಗಿಯ ಫೈಲ್ ಅನ್ನು ಹುಡುಕುವುದು ಮತ್ತು ಆಯ್ಕೆಮಾಡುವುದು,
00:17 ಅದರಲ್ಲಿ ರೋಗಿಯ ವಿವರಗಳನ್ನು ಎಡಿಟ್ ಮಾಡುವುದು, ಇವುಗಳನ್ನು ಕಲಿಯುವೆವು.
00:22 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮಗೆ - STEMI App ಅನ್ನು ಇನ್ಸ್ಟಾಲ್ ಮಾಡಿರುವ Android tablet (ಆಂಡ್ರೈಡ್ ಟ್ಯಾಬ್ಲೆಟ್) ಹಾಗೂ
00:30 ಸಕ್ರಿಯ ಇಂಟರ್ನೆಟ್ ಸಂಪರ್ಕವು ಬೇಕಾಗುವುದು.
00:34 ನಾವು ಈಗ STEMI ಹೋಮ್-ಪೇಜ್ ನಲ್ಲಿ ಇದ್ದೇವೆ.
00:38 ಇಲ್ಲಿ, D Hospital user ಎಂದು ಇದು ಹೇಳುತ್ತಿರುವುದನ್ನು ದಯವಿಟ್ಟು ಗಮನಿಸಿ.
00:43 ನೀವು ಇರುವ ಆಸ್ಪತ್ರೆಗೆ ಅನುಸಾರವಾಗಿ ನಿಮ್ಮ ಲಾಗ್-ಇನ್ user ID ಬೇರೆಯಾಗಿರಲು ಸಾಧ್ಯವಿದೆ.
00:50 Search Page ಗೆ ಹೋಗಲು Search ಟ್ಯಾಬ್ ಅನ್ನು ಆಯ್ಕೆಮಾಡಿ.
00:54 Search Page ನ ಮೇಲ್ತುದಿಯ ಎಡಭಾಗದಲ್ಲಿ ಒಂದು Menu ಟ್ಯಾಬ್ ಅನ್ನು ಹೊಂದಿದೆ.
01:00 ಇದು ಆರು ಸರ್ಚ್ ಕ್ರೈಟೀರಿಯಾಗಳನ್ನು ಹೊಂದಿದೆ- Patient ID, Patient Name, Admission From to End Date, STEMI Status, Type of Hospital, Hospital Cluster.
01:17 ಇವುಗಳು ಮೇಲ್ತುದಿಯಲ್ಲಿ ಪೇಜ್ ನ ಉದ್ದಕ್ಕೂ ಕಂಡುಬರುತ್ತವೆ.
01:22 ಕೆಳಗಡೆ, ಇಲ್ಲಿ, ಇತ್ತೀಚಿನ 14 ನಮೂದುಗಳನ್ನು ಸಹ ಪ್ರದರ್ಶಿಸಲಾಗಿದೆ.
01:27 ಏಕೆಂದರೆ, ನನ್ನ STEMI ಡಿವೈಸ್ ನಲ್ಲಿ, ಈಗಾಗಲೇ 14 ಕ್ಕಿಂತ ಹೆಚ್ಚು ನಮೂದುಗಳು ನನ್ನ ಹತ್ತಿರ ಇರುತ್ತವೆ.
01:33 ನಿಮ್ಮ STEMI ಡಿವೈಸ್ ನಲ್ಲಿ 14 ಕ್ಕಿಂತ ಕಡಿಮೆ ನಮೂದುಗಳು ಇದ್ದರೆ, ನೀವು ಇದಕ್ಕಿಂತ ಚಿಕ್ಕ ಪಟ್ಟಿಯನ್ನು ನೋಡಬಹುದು.
01:41 ಆದರೆ ನಿಮ್ಮ ಹತ್ತಿರ 14 ಕ್ಕಿಂತ ಹೆಚ್ಚು ನಮೂದುಗಳು ಇದ್ದರೆ ಆಗ ಇತ್ತೀಚಿನ 14 ನಮೂದುಗಳನ್ನು ಪ್ರದರ್ಶಿಸಲಾಗುವುದು.
01:49 ಕೆಳತುದಿಯ ಬಲಭಾಗದಲ್ಲಿ ಒಂದು Search ಬಟನ್ ಇದೆ.
01:54 ಈಗಾಗಲೇ ಸೇವ್ ಮಾಡಲಾದ ರೋಗಿಯ ಫೈಲ್ ಅನ್ನು ಹುಡುಕಲು, ನಾವು ನಮಗೆ ಬೇಕಾದ ಸರ್ಚ್ ಕ್ರೈಟೀರಿಯಾ ಅನ್ನು (search criteria) ನಮೂದಿಸಬೇಕು.
02:03 ನಂತರ, ಪೇಜ್ ನ ಕೆಳತುದಿಯಲ್ಲಿರುವ Search ಬಟನ್ ಅನ್ನು ಆಯ್ಕೆಮಾಡಬೇಕು.
02:08 ಅನೇಕ ಸರ್ಚ್ ಕ್ರೈಟೀರಿಯಾ ಗಳನ್ನು ಒಟ್ಟಿಗೇ ನಮೂದಿಸಿ ಸಹ ರೋಗಿಯ ಫೈಲ್ ಅನ್ನು ನಾವು ಹುಡುಕಬಹುದು. ಇದು ಹುಡುಕುವ ಕ್ರಿಯೆಯನ್ನು ಮೊಟಕುಗೊಳಿಸುತ್ತದೆ.
02:19 ದಯವಿಟ್ಟು ಗಮನಿಸಿ- Search ಟ್ಯಾಬ್ ನ ಅಡಿಯಲ್ಲಿ, ಮೊದಲೇ ಸೇವ್ ಮಾಡಿರುವ ಫೈಲ್ ಗಳನ್ನು ಮಾತ್ರ ನಾವು ಹುಡುಕಬಹುದು.
02:26 ಇದರ ಅರ್ಥ- ಒಂದುವೇಳೆ, ರೋಗಿಯ ವಿವರಗಳನ್ನು ಸೇರಿಸಿದ ನಂತರ ನಾವು Save and Continue ಬಟನ್ ಅನ್ನು ಆಯ್ಕೆಮಾಡದಿದ್ದರೆ, ಈ ಪೇಜ್ ಸೇವ್ ಆಗುವುದಿಲ್ಲ ಮತ್ತು ಆನಂತರ ನಾವು ಅದನ್ನು ನೋಡಲು ಸಾಧ್ಯವಾಗುವುದಿಲ್ಲ.
02:40 ನಾವು ಒಂದು ಕ್ರೈಟೀರಿಯಾವನ್ನು ತೆಗೆದುಕೊಂಡು, ಸೇವ್ ಮಾಡಲಾದ ಕೆಲವು ಫೈಲ್ ಗಳನ್ನು ಹುಡುಕೋಣ.
02:46 ಮೊದಲು, ಒಂದು ನಿರ್ದಿಷ್ಟ Patient ID ಯೊಂದಿಗೆ ರೋಗಿಯ ಫೈಲ್ ಅನ್ನು ನಾವು ಹುಡುಕೋಣ.
02:51 ಪ್ರದರ್ಶಿತ ಲಿಸ್ಟ್ ನಿಂದ, ಯಾವುದೋ ಒಂದು ರೋಗಿಯ ಫೈಲ್ ಅನ್ನು ಆಯ್ಕೆಮಾಡಿ.
02:56 ನಮ್ಮ ಡಿವೈಸ್ ನಲ್ಲಿ ಈಗ ಫೈಲ್ ಅನ್ನು ತೆರೆಯಲಾಗಿದೆ.
02:59 ಪೇಜ್ ನ ಮೇಲ್ತುದಿಯಲ್ಲಿ ಪ್ರದರ್ಶಿಸಲಾದ Patient Id ಯನ್ನು ಗಮನಿಸಿ.
03: 05 ನನ್ನ ಡಿವೈಸ್ ನಲ್ಲಿ, ನಾನು ಆಯ್ಕೆಮಾಡಿರುವ ರೋಗಿಗಾಗಿ ಈ ಸಂಖ್ಯೆಯನ್ನು ತೋರಿಸುತ್ತಿದೆ.
03:12 ನಿಮ್ಮ ಡಿವೈಸ್ ನಲ್ಲಿ, ನೀವು ಆಯ್ಕೆಮಾಡಿರುವ ರೋಗಿಗಾಗಿ ನೀವು ಬೇರೊಂದು ನಂಬರ್ ಅನ್ನು ನೋಡಬಹುದು.
03:17 ಈ ಸಂಖ್ಯೆಯನ್ನು ಗುರುತಿಸಿಕೊಳ್ಳಿ. ನಾವು ನಂತರ ಇದನ್ನು ಬಳಸುವೆವು.
03:22 ರೋಗಿಯ ಫೈಲ್ ಕವರ್ ನಿಂದ ಸಹ Patient Id ಯನ್ನು ಪಡೆಯಲು ಸಾಧ್ಯವಿದೆ.
03:28 ಡೇಟಾ ಅನ್ನು ಸೇರಿಸುವ ಸಮಯದಲ್ಲಿ, ಈ ಸಂಖ್ಯೆಯು STEMI ಡಿವೈಸ್ ನಿಂದ ಸ್ವಯಂ ರಚಿತವಾಗಿದೆ (auto-generated).
03:35 ಈಗ, ಪೇಜ್ ನ ಮೇಲ್ತುದಿಯ ಎಡಮೂಲೆಯಲ್ಲಿರುವ ಮೆನ್ಯು ಟ್ಯಾಬ್ ಅನ್ನು ಆಯ್ಕೆಮಾಡಿ.
03:42 ನಂತರ Home ಟ್ಯಾಬ್ ಅನ್ನು ಆಯ್ಕೆಮಾಡಿ.
03:44 ಈಗ ಮತ್ತೆ Homepage ನಲ್ಲಿರುವ Search ಟ್ಯಾಬ್ ಅನ್ನು ಆಯ್ಕೆಮಾಡಿ.
03:49 ಈಗ ನಾವು Search Page ಗೆ ಹಿಂದಿರುಗಿದ್ದೇವೆ.
03:52 ಇಲ್ಲಿ, Patient Id ಎಂಬ ಸರ್ಚ್ ಕ್ರೈಟೀರಿಯಾದಲ್ಲಿ, ನಾವು Patient Id ಯನ್ನು ನಮೂದಿಸಬೇಕು.
03:59 Patient Id ಎಂಬ ಸರ್ಚ್ ಕ್ರೈಟೀರಿಯಾದಲ್ಲಿ ನಾನು ಈ ಸಂಖ್ಯೆಯನ್ನು ಟೈಪ್ ಮಾಡುವೆನು. ನಾನು ಈಮೊದಲೇ ಗುರುತಿಸಿ ಇಟ್ಟುಕೊಂಡ ಫೈಲ್ ನ ಸಂಖ್ಯೆಯು ಇದೇ ಆಗಿತ್ತು.
04:09 ನಿಮ್ಮ ಡಿವೈಸ್ ನ ಮೇಲೆ ಗುರುತಿಸಿಕೊಂಡ ಸಂಖ್ಯೆಯನ್ನು ನೀವು ಟೈಪ್ ಮಾಡಬೇಕು.
04:14 ಈಗ, ಪೇಜ್ ನ ಕೆಳಗೆ, ಬಲಭಾಗದಲ್ಲಿರುವ Search ಬಟನ್ ಅನ್ನು ಆಯ್ಕೆಮಾಡಿ.
04:19 ಪೇಶಂಟ್ (ರೋಗಿಯ) ಫೈಲ್ ಅನ್ನು ಟೈಪ್ ಮಾಡಿದ Patient Id ಯೊಂದಿಗೆ ಸ್ಕ್ರೀನ್ ನ ಮೇಲೆ ಪ್ರದರ್ಶಿಸಲಾಗಿದೆ.
04:26 ಫೈಲ್ ನಲ್ಲಿ ಇರುವುದನ್ನು ನೋಡಲು ಅದನ್ನು ಆಯ್ಕೆಮಾಡಿ.
04:30 ನಂತರ, ನಾವು Patient name “Ramesh” ಎಂದು ಇರುವ ಒಂದು ರೋಗಿಯ ಫೈಲನ್ನು ಆಯ್ಕೆಮಾಡೋಣ.
04:35 Patient name “Ramesh” ಎಂದು ಇರುವ ಒಂದು ಫೈಲ್ ಅನ್ನು ಪೇಜ್ ನ ಮೇಲೆ ಪ್ರದರ್ಶಿಸಲಾಗಿದೆ.
04:40 ಈಗ ಫೈಲ್ ಅನ್ನು ತೆರೆಯಲು ಮತ್ತು ಅದರಲ್ಲಿ ಇರುವುದನ್ನು ನೋಡಲು ಫೈಲ್ ಅನ್ನು ಆಯ್ಕೆಮಾಡಿ.
04:45 ಈ ಪೇಜ್ ನ ಮೇಲ್ತುದಿಯ ಬಲಗಡೆಯಲ್ಲಿ ಇರುವ EDIT ಐಕಾನ್ ಅನ್ನು ಗಮನಿಸಿ.
04:50 ರೋಗಿಯ ವಿವರಗಳನ್ನು ಎಡಿಟ್ ಮಾಡಲು ಈ ಐಕಾನ್ ಅನ್ನು ಆಯ್ಕೆಮಾಡಿ.
04:55 ಎಲ್ಲ ಬದಲಾವಣೆಗಳನ್ನು ಸೇವ್ ಮಾಡಲು ನೆನಪಿಡಿ.
04:59 ನಾವು ಈಗ ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಸೇವ್ ಮಾಡಲಾದ ಎಲ್ಲ ರೋಗಿಗಳ ಫೈಲ್ ಗಳನ್ನು ಹುಡುಕುವೆವು.
05:05 ನಾನು From Date ನಲ್ಲಿ 1 January 2016 ಮತ್ತು End Date ನಲ್ಲಿ 9 February 2016 ಎಂದು ಆಯ್ಕೆಮಾಡುವೆನು.
05:14 ದಯವಿಟ್ಟು ನಿಮ್ಮ ಡಿವೈಸ್ ನಲ್ಲಿ ನೀವು ಡೇಟಾ ಅನ್ನು ಸೇರಿಸಿದ ದಿನಾಂಕಗಳಿಗೆ ಅನುಸಾರವಾಗಿ ಕಾಲಾವಧಿಯನ್ನು ಆಯ್ಕೆಮಾಡಿ.
05:22 ಆಮೇಲೆ, ಪೇಜ್ ನ ಕೆಳಗೆ ಬಲಭಾಗದಲ್ಲಿರುವ Search ಬಟನ್ ಅನ್ನು ಆಯ್ಕೆಮಾಡಿ.
05:27 January 1st 2016 ನಿಂದ February 9th 2016 ವರೆಗೆ ಸೇವ್ ಮಾಡಲಾದ ಎಲ್ಲ ಫೈಲ್ ಗಳು ನನ್ನ ಪೇಜ್ ನ ಮೇಲೆ ಪ್ರದರ್ಶಿತವಾಗಿವೆ.
05:38 ನೀವು, ನಿಮ್ಮ ಡಿವೈಸ್ ಗೆ ಕೊಟ್ಟ ಕಾಲಾವಧಿಯಲ್ಲಿ ಸೇವ್ ಮಾಡಲಾದ ರೋಗಿಗಳ ಫೈಲ್ ಗಳನ್ನು ನೋಡುವಿರಿ.
05:44 ಈಗ, ನಿಮಗೆ ಇಷ್ಟವಾದ ಯಾವುದೇ ಫೈಲ್ ಅನ್ನು ತೆರೆದು ಅದರಲ್ಲಿರುವುದನ್ನು ನೋಡಲು ಅದನ್ನು ಆಯ್ಕೆಮಾಡಿ.
05:50 ನಂತರ, STEMI status confirmed ಎಂದು ಇರುವ ಫೈಲ್ ಗಳನ್ನು ನಾವು ಹುಡುಕುವೆವು.
05:55 STEMI status ಎಂಬ ಸರ್ಚ್ ಕ್ರೈಟೀರಿಯಾದ ಅಡಿಯಲ್ಲಿ, ನಾವು ಈ ಕೆಳಗಿನ ಆಯ್ಕೆಗಳನ್ನು ಪಡೆದಿದ್ದೇವೆ -

ALL STEMI Confirmed STEMI Inconclusive STEMI not Confirmed Non STEMI.

06:11 ನಾನು STEMI Confirmed ಅನ್ನು ಆಯ್ಕೆಮಾಡಿ ಆನಂತರ ಪೇಜ್ ನ ಕೆಳಗೆ ಬಲಭಾಗದಲ್ಲಿರುವ Search ಬಟನ್ ಅನ್ನು ಆಯ್ಕೆಮಾಡುವೆನು.
06:18 ಪೇಜ್, STEMI Confirmed ಎಂಬ ಸ್ಟ್ಯಾಟಸ್ ನೊಂದಿಗೆ ಎಲ್ಲ ಪೇಶಂಟ್ ಫೈಲ್ ಗಳನ್ನು ತೋರಿಸುತ್ತದೆ.
06:24 ನನ್ನ STEMI ಡಿವೈಸ್ ನಲ್ಲಿ, ನಾವು 14 ರೋಗಿಗಳ ಫೈಲ್ ಗಳನ್ನು ನೋಡಬಹುದು.
06:28 ನಿಮ್ಮ STEMI ಡಿವೈಸ್ ನಲ್ಲಿ, ಈ ಲಿಸ್ಟ್ ಇನ್ನೂ ದೊಡ್ಡದು ಅಥವಾ ಚಿಕ್ಕದು ಆಗಿರಬಹುದು.
06:33 ಇದು STEMI status ಅನ್ನು Confirmed ಎಂದು ಹೊಂದಿರುವ ಎಷ್ಟು ರೋಗಿಗಳನ್ನು ಆಯ್ಕೆಮಾಡಲಾಗಿದೆ ಎಂಬುದನ್ನು ಅವಲಂಬಿಸಿದೆ.
06:42 ಹೀಗೆಯೇ, Hospital Type ಸರ್ಚ್ ಕ್ರೈಟೀರಿಯಾಗಾಗಿ ನಾವು ಈ ಕೆಳಗಿನ ಆಯ್ಕೆಗಳನ್ನು ಪಡೆದಿದ್ದೇವೆ –

ALL EMRI A Hospital C Hospital D Hospital.

06:55 ಈ ಹುಡುಕುವಿಕೆಯು, ನಿರ್ದಿಷ್ಟವಾದ ಪೇಶಂಟ್ ಫೈಲ್ ಡಿವೈಸ್ ನಲ್ಲಿ ಮೊದಲು ಎಲ್ಲಿ ರಚಿಸಲಾಗಿದೆ ಎಂಬುದನ್ನು ಅವಲಂಬಿಸಿದೆ.
07:02 ನಾನು D Hospital ಅನ್ನು ಆಯ್ಕೆಮಾಡಿ ಆನಂತರ Search ಬಟನ್ ಅನ್ನು ಆಯ್ಕೆಮಾಡುವೆನು.
07:07 ನೀವು ಹುಡುಕುತ್ತಿರುವ ಪೇಶಂಟ್ ಫೈಲ್ ಗೆ ಅನುಸಾರವಾಗಿ hospital type ಅನ್ನು ನೀವು ಆಯ್ಕೆಮಾಡಬೇಕು.
07:14 ನನ್ನ ಡಿವೈಸ್ ನ ಮೇಲೆ ಆಯ್ಕೆಮಾಡಿರುವ ಪೇಜ್, D Hospital ನಲ್ಲಿಯ ಎಲ್ಲ ಪೇಶಂಟ್ ಫೈಲ್ ಗಳನ್ನು ತೋರಿಸುತ್ತದೆ.
07:21 ನೀವು ಈ ಸರ್ಚ್ ಕ್ರೈಟೀರಿಯಾವನ್ನು ನಿಮ್ಮ ಆಸ್ಪತ್ರೆಯಿಂದ ವರ್ಗಾಯಿಸಲಾದ ಪೇಶಂಟ್ ಫೈಲ್ ಗಳನ್ನು ವೀಕ್ಷಿಸಲು ಸಹ ಬಳಸಬಹುದು.
07:29 ನಿಮ್ಮಲ್ಲಿ ಇದು ನಿಮ್ಮ ಡಿವೈಸ್ ನಲ್ಲಿಯ user id ಗೆ ಅನುಸಾರವಾಗಿ ಇರುವುದು.
07:34 ಹೀಗೆಯೇ, Type of Hospital Cluster ನ ಅಡಿಯಲ್ಲಿ, ನಾವು ನಮಗೆ ಇಷ್ಟವಾದ ಕ್ಲಸ್ಟರ್ ಅನ್ನು ಆಯ್ಕೆಮಾಡಬಹುದು.
07:41 ನಾನು Kovai Medical Centre and Hospital ಅನ್ನು ಆಯ್ಕೆಮಾಡುವೆನು.
07:45 ನೀವು ನಿಮಗೆ ಇಷ್ಟವಾದ ಕ್ಲಸ್ಟರ್ ಅನ್ನು ಆಯ್ಕೆಮಾಡಬೇಕು.
07:49 ನಿರ್ದಿಷ್ಟ ಕ್ಲಸ್ಟರ್ ನಲ್ಲಿ, ಕ್ಲಸ್ಟರ್ ಗಳಿಗೆ Hub Hospital (ಅರ್ಥಾತ್ A B Hospital) ನ ಹೆಸರನ್ನು ಇಡಲಾಗಿದೆ.
07:58 ಆನಂತರ, ಪೇಜ್ ನ ಕೆಳಗೆ ಬಲಭಾಗದಲ್ಲಿರುವ Search ಬಟನ್ ಅನ್ನು ಆಯ್ಕೆಮಾಡಿ.
08:02 ಈಗ , ನಾವು ಒಂದು ನಿರ್ದಿಷ್ಟ clusterನ ಅಡಿಯಲ್ಲಿ ಸೇವ್ ಮಾಡಲಾದ ಫೈಲ್ ಗಳನ್ನು ನೋಡಲು ಸಾಧ್ಯವಾಗುತ್ತದೆ.
08:08 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು- ವಿವಿಧ ಸರ್ಚ್ ಕ್ರೈಟೀರಿಯಾಗಳನ್ನು ಬಳಸಿ ರೋಗಿಯ ಫೈಲ್ ಅನ್ನು ಹುಡುಕುವುದು ಮತ್ತು ಆಯ್ಕೆಮಾಡುವುದು
08:17 ಅಲ್ಲದೇ, ಈಗಾಗಲೇ ಸೇವ್ ಮಾಡಲಾದ ಫೈಲ್ ನಲ್ಲಿ ರೋಗಿಯ ವಿವರಗಳನ್ನು ಎಡಿಟ್ ಮಾಡುವುದು ಇವುಗಳನ್ನು ಕಲಿತಿದ್ದೇವೆ.
08:21 STEMI INDIA ಅನ್ನು ಮುಖ್ಯವಾಗಿ ಹೃದಯಾಘಾತದ ರೋಗಿಗಳಿಗೆ ಸೂಕ್ತ ಕಾಳಜಿಯನ್ನು ಪಡೆಯುವಲ್ಲಿ ಆಗುವ ವಿಳಂಬವನ್ನು ಕಡಿಮೆ ಮಾಡಲು ಮತ್ತು ಹೃದಯಾಘಾತದಿಂದಾಗುವ ಮರಣದ ಸಂಖ್ಯೆಯನ್ನು ಕಡಿಮೆ ಮಾಡಲು ‘not for profit’ ಸಂಸ್ಥೆ ಎಂದು ಸ್ಥಾಪಿಸಲಾಯಿತು.
08:34 “ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, IIT ಬಾಂಬೆ” ಇದು NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ಸಂಪರ್ಕಿಸಿ. http://spoken-tutorial.org

08:48 ಈ ಟ್ಯುಟೋರಿಯಲ್, STEMI INDIA ಮತ್ತು Spoken Tutorial Project, IIT Bombay ಇವರ ಕೊಡುಗೆಯಾಗಿದೆ.

ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ . ವಂದನೆಗಳು.

Contributors and Content Editors

PoojaMoolya