Ruby/C3/Object-Oriented-Programming-Methods/Kannada

From Script | Spoken-Tutorial
Jump to: navigation, search
Time Narration
00:01 Ruby ಯಲ್ಲಿ, Object Oriented Programming – Methods ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ, ನಾವು:
00:09 * ಇನ್ಸ್ಟನ್ಸ್ ಮೆಥಡ್ ಗಳು
00:11 * ಕ್ಲಾಸ್ ಮೆಥಡ್ ಗಳು ಮತ್ತು
00:14 * ಅಕ್ಸೆಸ್ಸರ್ (accessor) ಮೆಥಡ್ ಗಳನ್ನು ಬಳಸಲು ಕಲಿಯುವೆವು.
00:15 ಇಲ್ಲಿ ನಾವು,Ubuntu ಆವೃತ್ತಿ 12.04
00:19 * Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.
00:22 ಈ ಟ್ಯುಟೋರಿಯಲ್ ಅನ್ನು ಬಳಸಲು, ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು.
00:27 ಅಲ್ಲದೇ ನೀವು ಲಿನಕ್ಸ್ ಕಮಾಂಡ್ ಗಳು, ಟರ್ಮಿನಲ್ ಮತ್ತು ಟೆಕ್ಸ್ತ್-ಎಡಿಟರ್ ಗಳ ಬಗ್ಗೆ ತಿಳಿದಿರಬೇಕು.
00:31 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನು ನೋಡಿ.
00:36 ಪ್ರಾರಂಭಿಸುವ ಮುನ್ನ, ನಾವು ಈ ಮೊದಲು “ttt” ಎಂಬ ಡಿರೆಕ್ಟರೀಯನ್ನು ಕ್ರಿಯೇಟ್ ಮಾಡಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ.
00:41 ನಾವು ಆ ಡಿರೆಕ್ಟರೀಗೆ,
00:44 ಆನಂತರ ruby-tutorial ಗೆ ಹೋಗೋಣ.
00:47 oop-methods ಎಂಬ ಒಂದು ಡಿರೆಕ್ಟರೀಯನ್ನು ಕ್ರಿಯೇಟ್ ಮಾಡಿ ಮತ್ತು ಅದಕ್ಕೆ cd ಮಾಡಿಕೊಳ್ಳಿ.
00:54 ’ಇನ್ಸ್ಟನ್ಸ್ ಮೆಥಡ್’ಗಳೆಂದರೆ ಏನು?
00:56 ’ಇನ್ಸ್ಟನ್ಸ್ ಮೆಥಡ್’ಗಳು, ಒಂದು ಕ್ಲಾಸ್ ನ ಎಲ್ಲ ಇನ್ಸ್ಟನ್ಸ್ ಗಳಿಗೆ ಲಭ್ಯವಿರುವ ಮೆಥಡ್ ಗಳಾಗಿವೆ.
01:03 ಒಂದು ’ಕ್ಲಾಸ್’ನ ’ಆಬ್ಜೆಕ್ಟ್’ಗಳನ್ನು ಅಥವಾ ’ಇನ್ಸ್ಟನ್ಸ್’ಗಳನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ಹಿಂದೆ ನಾವು ಕಲಿತಿದ್ದೆವು.
01:09 ಪ್ರಾಥಮಿಕ ಹಂತದ (basic level) Ruby tutorials ನಲ್ಲಿ ತೋರಿಸಿದಂತೆ, gedit ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.
01:14 ಅದನ್ನು instance_methods.rb ಎಂದು ಹೆಸರಿಸಿ.
01:19 ನನ್ನ ಹತ್ತಿರ instance methods (ಇನ್ಸ್ಟನ್ಸ್ ಮೆಥಡ್ಸ್) ಅನ್ನು ಜಾರಿಗೊಳಿಸುವ ಒಂದು ಉದಾಹರಣೆಯಿದೆ.
01:24 ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಕೋಡ್ ಅನ್ನು ಟೈಪ್ ಮಾಡಬಹುದು.
01:29 ಈ ಉದಾಹರಣೆಯಲ್ಲಿ, ನಾನು Product (ಪ್ರೊಡಕ್ಟ್) ಎಂಬ ಒಂದು ಕ್ಲಾಸ್ ಅನ್ನು ಡಿಫೈನ್ ಮಾಡಿದ್ದೇನೆ.
01:33 "name" ಹಾಗೂ "price" ಗಳೆಂಬ ಇನ್ಸ್ಟನ್ಸ್ ವೇರಿಯೇಬಲ್ ಗಳನ್ನು ಇನಿಶಿಯಲೈಸ್ ಮಾಡಲು, ನಾನು 'initialize' (ಇನಿಶಿಯಲೈಸ್) ಎಂಬ ಮೆಥಡ್ ಅನ್ನು ಕಾಲ್ ಮಾಡಿದ್ದೇನೆ.
01:41 "name" ಹಾಗೂ "price" ಗಳೆಂಬ ಇನ್ಸ್ಟನ್ಸ್ ಮೆಥಡ್ ಗಳನ್ನು ಸಹ ಡಿಫೈನ್ ಮಾಡಿದ್ದೇನೆ.
01:47 ಇವುಗಳಲ್ಲಿ ಪ್ರತಿಯೊಂದು, ಕ್ರಮವಾಗಿ "name" ಹಾಗೂ "price" ಇನ್ಸ್ಟನ್ಸ್ ವೇರಿಯೇಬಲ್ ಗಳನ್ನು ರಿಟರ್ನ್ ಮಾಡುತ್ತದೆ (ಹಿಂದಿರುಗಿಸುತ್ತದೆ).
01:54 ಇನ್ಸ್ಟನ್ಸ್ ಮೆಥಡ್ ಗಳನ್ನು ಸಾಮಾನ್ಯ ಮೆಥಡ್ ಗಳಂತೆಯೇ ಡಿಫೈನ್ ಮಾಡಲಾಗುತ್ತದೆ.
01:58 Ruby (ರೂಬಿ) ಯಲ್ಲಿ ಮೆಥಡ್ ಗಳನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ಈಮೊದಲು ನಾವು ಕಲಿತಿದ್ದೆವು.
02:02 ಎಲ್ಲ ಇನ್ಸ್ಟನ್ಸ್ ಗಳಿಗೆ, ಈ ಮೆಥಡ್ ಗಳು ಹೇಗೆ ಲಭ್ಯವಾಗುತ್ತವೆ ಎಂಬುದನ್ನು ಇದೀಗ ನಾವು ನೋಡುವೆವು.
02:07 ಈಗ, ನಮ್ಮ ಹತ್ತಿರ ಇರುವ ಲಾಜಿಕ್ ಅನ್ನು ಕಾರ್ಯಗತಗೊಳಿಸೋಣ.
02:11 ಇಲ್ಲಿ, ನಾನು Product ಎಂಬ ಆಬ್ಜೆಕ್ಟ್ ಅನ್ನು ಇನಿಶಿಯಲೈಸ್ ಮಾಡಿದ್ದೇನೆ ಮತ್ತು ಅದನ್ನು 'product_object_1' ಎಂದು ಹೆಸರಿಸಿದ್ದೇನೆ.
02:18 ನಾನು ಇದನ್ನು ಒಂದು name ನ ವ್ಯಾಲ್ಯೂ ಹಾಗೂ ಒಂದು price ನ ವ್ಯಾಲ್ಯೂಗಳೊಂದಿಗೆ ಇನಿಶಿಯಲೈಸ್ ಮಾಡಿದ್ದೇನೆ.
02:24 ಇನಿಶಿಯಲೈಸರ್ (initializer) ಬ್ಲಾಕ್, ಇನ್ಸ್ಟನ್ಸ್ ವೇರಿಯೇಬಲ್ ಗಳಾದ '@name' ಹಾಗೂ '@price' ಗಳಿಗೆ ವ್ಯಾಲ್ಯೂಗಳನ್ನು ರವಾನಿಸುತ್ತದೆ (pass).
02:31 ಈಗ, ಈ product ಇನ್ಸ್ಟನ್ಸ್ ಅಥವಾ ಆಬ್ಜೆಕ್ಟ್, 'name' ಹಾಗೂ price ಎಂಬ ಇನ್ಸ್ಟನ್ಸ್ ಮೆಥಡ್ ಗಳನ್ನು ಬಳಸಬಹುದು.
02:37 ಈ ಮೆಥಡ್ ಗಳನ್ನು ಇನ್ವೋಕ್ ಮಾಡಿದಾಗ, ಇನ್ಸ್ಟನ್ಸ್ ವೇರಿಯೇಬಲ್ ಗಳಲ್ಲಿ ಸ್ಟೋರ್ ಮಾಡಲಾದ ವ್ಯಾಲ್ಯುಗಳನ್ನು ನಾವು ಪಡೆಯುತ್ತೇವೆ.
02:43 ಈಗ, ನಾವು ಈ ಕೋಡ್ ಅನ್ನು ಎಕ್ಸೀಕ್ಯೂಟ್ ಮಾಡೋಣ.
02:46 ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'ruby instance_methods.rb' ಹಾಗೂ ಔಟ್ಪುಟ್ ಅನ್ನು ನೋಡಲು 'Enter' ಅನ್ನು ಒತ್ತಿ.
02:56 ನೀವು ಆಬ್ಜೆಕ್ಟ್ ಅನ್ನು ಇನಿಶಿಯಲೈಸ್ ಮಾಡಿದ ವ್ಯಾಲ್ಯೂಗಳನ್ನು ಅದು ಪ್ರಿಂಟ್ ಮಾಡುವುದನ್ನು ನೀವು ನೋಡುವಿರಿ.
03:02 ಅರ್ಥಾತ್, “laptop” ಹಾಗೂ “35,000”.
03:07 ನಂತರ, ಇನ್ನೊಂದು ಇನ್ಸ್ಟನ್ಸ್ ಅಥವಾ ಆಬೆಕ್ಟ್ ಅನ್ನು ಇನಿಶಿಯಲೈಸ್ ಮಾಡಿ.
03:12 ನಾವು ಈ ಆಬ್ಜೆಕ್ಟ್ ಅನ್ನು 'product_object_2' ಎಂದು ಹೆಸರಿಸೋಣ.
03:18 ಈ ಸಲ, ನಾವು 'name' ಹಾಗೂ 'price' ಗಳಿಗಾಗಿ ವ್ಯಾಲ್ಯೂಗಳ ಬೇರೊಂದು ಸೆಟ್ ಅನ್ನು ಕೊಡೋಣ.
03:23 ಈಗ, ನಾವು ಈ ಆಬ್ಜೆಕ್ಟ್ ಗಾಗಿ 'name' ಹಾಗೂ 'price' ಎಂಬ ಇನ್ಸ್ಟನ್ಸ್ ಮೆಥಡ್ ಗಳನ್ನು ಕಾಲ್ ಮಾಡೋಣ.
03:35 ನಂತರ, ನಾವು ಮತ್ತೆ ಟರ್ಮಿನಲ್ ಗೆ ಬದಲಾಯಿಸೋಣ ಹಾಗೂ ಹಿಂದಿನಂತೆ ಕೋಡ್ ಅನ್ನು ಎಕ್ಸೀಕ್ಯೂಟ್ ಮಾಡೋಣ.
03:41 ಇದು ಯಶಸ್ವಿಯಾಗಿ ಎಕ್ಸೀಕ್ಯೂಟ್ ಆಗುವುದನ್ನು ಮತ್ತು ಹೊಸ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡುವುದನ್ನು ನೀವು ನೋಡುವಿರಿ.
03:48 ಇನ್ಸ್ಟನ್ಸ್ ಮೆಥಡ್ ಗಳು, 'Product' ಎಂಬ ಕ್ಲಾಸ್ ನ ಎಲ್ಲ ಆಬ್ಜೆಕ್ಟ್ ಗಳಿಗೆ ಲಭ್ಯವಾಗಿರುತ್ತವೆ ಎಂಬುದನ್ನು ಇದು ಸಾಬೀತು ಮಾಡುತ್ತದೆ.
03:55 ಈಗ ನಿಮಗೆ ನಿಮ್ಮ ಸ್ವಂತದ ಇನ್ಸ್ಟನ್ಸ್ ಮೆಥಡ್ ಗಳನ್ನು ಬರೆಯಲು ಸಾಧ್ಯವಾಗಬೇಕು.
03:59 ಇನ್ನು ಮುಂದೆ, ಕ್ಲಾಸ್ ಮೆಥಡ್ ಗಳೆಂದರೆ ಏನು ಎಂಬುದನ್ನು ನಾವು ನೋಡೋಣ.
04:04 ಕ್ಲಾಸ್ ಮೆಥಡ್ ಗಳು, ಕ್ಲಾಸ್ ಗೆ ಮಾತ್ರ ಲಭ್ಯವಿರುವ ಮೆಥಡ್ ಗಳಾಗಿವೆ.
04:09 ಈ ಮೆಥಡ್ ಗಳು, ಕ್ಲಾಸ್ ನ ಇನ್ಸ್ಟನ್ಸ್ ಗಳಿಗೆ ಲಭ್ಯವಿರುವುದಿಲ್ಲ.
04:14 ನೀವು ’ಕ್ಲಾಸ್ ಮೆಥಡ್’ ಗಳನ್ನು ವಿವಿಧ ರೀತಿಗಳಲ್ಲಿ ಡಿಫೈನ್ ಮಾಡಬಹುದು.
04:16 ನಾವು ಒಂದು ಉದಾಹರಣೆಯನ್ನು ನೋಡೋಣ.
04:18 ಪ್ರಾಥಮಿಕ ಹಂತದ 'Ruby tutorials' ನಲ್ಲಿ ತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.
04:24 ಅದನ್ನು 'class_methods.rb' ಎಂದು ಹೆಸರಿಸಿ.
04:28 ನನ್ನ ಹತ್ತಿರ ' class methods' (ಕ್ಲಾಸ್ ಮೆಥಡ್ಸ್) ಅನ್ನು ಕಾರ್ಯಗತಗೊಳಿಸುವ ಒಂದು ಉದಾಹರಣೆಯಿದೆ.
04:32 ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಕೋಡ್ ಅನ್ನು ಟೈಪ್ ಮಾಡಬಹುದು.
04:36 ನಾನು ಈಮೊದಲು ಮಾಡಿದಂತೆ, 'Product' ಎಂಬ ಕ್ಲಾಸ್ ಅನ್ನು ಡಿಫೈನ್ ಮಾಡಿದ್ದೇನೆ.
04:40 ಹಿಂದೆ ಮಾಡಿದಂತೆ ಒಂದು 'initializer' (ಇನಿಶಿಯಲೈಸರ್) ಅನ್ನು ಕಾಲ್ ಮಾಡಿದ್ದೇನೆ.
04:44 ಆದರೆ ಈ ಸಲ ನಾನು 'description' (ಡಿಸ್ಕ್ರಿಪ್ಶನ್) ಎಂಬ ಒಂದು ಹೆಚ್ಚಿನ ’ಆರ್ಗ್ಯೂಮೆಂಟ್’ಅನ್ನು ಸೇರಿಸಿದ್ದೇನೆ.
04:48 ವ್ಯಾಲ್ಯೂಗಳನ್ನು ಇಡಲು, ಹಿಂದಿನಂತೆ ಇನ್ಸ್ಟನ್ಸ್ ವೇರಿಯೇಬಲ್ ಗಳನ್ನು ಬಳಸದೇ, ನಾನು ಕ್ಲಾಸ್ ವೇರಿಯೇಬಲ್ ಗಳನ್ನು ಬಳಸುತ್ತಿದ್ದೇನೆ.
04:55 ಕ್ಲಾಸ್ ಮೆಥಡ್ ಗಳನ್ನು ಡಿಫೈನ್ ಮಾಡಬಹುದಾದ ಮೂರು ವಿಧಾನಗಳನ್ನು ಈ ಕ್ಲಾಸ್, ನಿಮಗೆ ತೋರಿಸುವುದು.
05:01 'name' ಎಂಬ 'ಕ್ಲಾಸ್ ಮೆಥಡ್' ನ ಡಿಕ್ಲೆರೇಶನ್ ಅನ್ನು ನೋಡಿ.
05:06 ಇಲ್ಲಿ, ಇದನ್ನು ಕ್ಲಾಸ್-ನೇಮ್ 'Product' ಅನ್ನು ಬಳಸಿ ಡಿಫೈನ್ ಮಾಡಲಾಗಿದೆ.
05:10 ಆಮೇಲೆ, ಎರಡನೆಯ 'ಕ್ಲಾಸ್ ಮೆಥಡ್' ನ ಡಿಕ್ಲೆರೇಶನ್ ಅನ್ನು ನೋಡಿ.
05:14 ಇಲ್ಲಿ ನಾನು "self" ಎಂಬ ಕೀವರ್ಡ್ ಅನ್ನು ಬಳಸಿದ್ದೇನೆ.
05:18 ನಂತರ, ನೀವು 'ಕ್ಲಾಸ್ ಮೆಥಡ್' ಗಳನ್ನು ಡಿಫೈನ್ ಮಾಡಬಹುದಾದ ಮೂರನೆಯ ರೀತಿಯನ್ನು ಪರಿಶೀಲಿಸಿ.
05:23 ಈಗ ನಾವು, ಈ 'ಕ್ಲಾಸ್ ಮೆಥಡ್'ಗಳನ್ನು ಕಾರ್ಯಗತಗೊಳಿಸೋಣ.
05:27 ಹಿಂದೆ ಮಾಡಿದಂತೆ, ಮೊದಲು, ನಾವು Product ನ ಒಂದು ಆಬ್ಜೆಕ್ಟ್ ಅನ್ನು ಇನಿಶಿಯಲೈಸ್ ಮಾಡೋಣ.
05:32 ಈ ಸಲ, ನಾವು description ಗೆ ಒಂದು ವ್ಯಾಲ್ಯೂಅನ್ನು ಸಹ ಕೊಡುತ್ತಿದ್ದೇವೆ.
05:37 ಈಗ, ಇಲ್ಲಿ ತೋರಿಸಿದಂತೆ, ನಾವು ಕ್ಲಾಸ್ ಮೆಥಡ್ ಗಳನ್ನು ಇನ್ವೋಕ್ ಮಾಡೋಣ.
05:42 ಈಗ, ಕೋಡ್ ಅನ್ನು ಎಕ್ಸೀಕ್ಯೂಟ್ ಮಾಡೋಣ ಮತ್ತು ಔಟ್ಪುಟ್ ಅನ್ನು ಪರೀಕ್ಷಿಸೋಣ.
05:47 ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹಿಂದಿನಂತೆ ಕೋಡ್ ಅನ್ನು ಎಕ್ಸೀಕ್ಯೂಟ್ ಮಾಡಿ.
05:54 ಅದು name, price ಹಾಗೂ ' description ಗಳ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡುವುದನ್ನು ನೀವು ನೋಡುವಿರಿ.
05:59 ಈಗ ನೀವು ನಿಮ್ಮ ಸ್ವಂತದ 'ಕ್ಲಾಸ್ ಮೆಥಡ್' ಗಳನ್ನು ಬರೆಯಲು ಸಾಧ್ಯವಾಗಬೇಕು.
06:03 ಇನ್ನುಮುಂದೆ, ಆಕ್ಸೆಸ್ಸರ್ (accessor) ಮೆಥಡ್ ಗಳೆಂದರೆ ಏನು ಎಂದು ನಾವು ನೋಡುವೆವು.
06:07 ರೂಬಿ, ಕ್ಲಾಸ್ ಗಳಲ್ಲಿ ಡಿಫೈನ್ ಮಾಡಿದ ಡೇಟಾಅನ್ನು ಅಕ್ಸೆಸ್ ಮಾಡಲು, ಆಕ್ಸೆಸ್ಸರ್ (accessor) ಮೆಥಡ್ ಗಳನ್ನು ಬಳಸುತ್ತದೆ.
06:13 ಆಕ್ಸೆಸ್ಸರ್ ಮೆಥಡ್ ಗಳು, 'ಸೆಟ್ಟರ್ ಮೆಥಡ್' ಮತ್ತು 'ಗೆಟ್ಟರ್ ಮೆಥಡ್'ಗಳನ್ನು ಒಳಗೊಂಡಿವೆ.
06:18 ’ಸೆಟ್ಟರ್ ಮೆಥಡ್’ಗಳು (Setter methods) ವ್ಯಾಲ್ಯೂಗಳನ್ನು ಸೆಟ್ ಮಾಡುತ್ತವೆ.
06:22 ’ಗೆಟ್ಟರ್ ಮೆಥಡ್’ಗಳು (Getter methods) ಆ ವ್ಯಾಲ್ಯೂಗಳನ್ನು ಪಡೆಯುತ್ತವೆ.
06:24 ಈ ಮೆಥಡ್ ಗಳನ್ನು ಡಿಕ್ಲೇರ್ ಮಾಡಲು, ರೂಬಿ, attr_accessor ಎಂಬ ಶಬ್ದವನ್ನು ಬಳಸುತ್ತದೆ.
06:31 ನಾವು ಆಕ್ಸೆಸ್ಸರ್ (accessor) ಮೆಥಡ್ ಗಳ ಒಂದು ಉದಾಹರಣೆಯನ್ನು ನೋಡೋಣ.
06:35 ಪ್ರಾಥಮಿಕ ಹಂತದ Ruby tutorials ನಲ್ಲಿತೋರಿಸಿದಂತೆ, gedit ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.
06:39 ಇದನ್ನು 'accessor_methods.rb' ಎಂದು ಹೆಸರಿಸಿ.
06:43 ನನ್ನ ಹತ್ತಿರ accessor methods (ಅಕ್ಸೆಸ್ಸರ್ ಮೆಥಡ್ಸ್) ಅನ್ನು ಕಾರ್ಯಗತಗೊಳಿಸುವ ಒಂದು ಉದಾಹರಣೆಯಿದೆ.
06:47 ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಕೋಡ್ ಅನ್ನು ಟೈಪ್ ಮಾಡಬಹುದು.
06:52 ಈ ಉದಾಹರಣೆಯಲ್ಲಿ, ನಾನು Product ಎಂಬ ಒಂದು ಕ್ಲಾಸ್ ಅನ್ನು ಡಿಫೈನ್ ಮಾಡಿದ್ದೇನೆ.
06:56 'name' ಮತ್ತು price ಗಳಿಗಾಗಿ, ನಾನು attr_accessor ಅನ್ನು ಡಿಕ್ಲೇರ್ ಮಾಡಿದ್ದೇನೆ.
07:01 ಈ ವಿಧದ ಮೆಥಡ್ ಗಳನ್ನು ಬಳಸಲು ಬೇಕಾಗಿರುವುದು ಇಷ್ಟೇ.
07:05 ಈಗ ಇದನ್ನು ಕಾರ್ಯರೂಪಕ್ಕೆ ತರೋಣ.
07:07 ಒಂದು Product ಆಬ್ಜೆಕ್ಟ್ ಅನ್ನು ನಾನು ಇನಿಶಿಯಲೈಸ್ ಮಾಡಿದ್ದೇನೆ.
07:10 ಆಮೇಲೆ, product ಆಬ್ಜೆಕ್ಟ್ ನ name ಹಾಗೂ price ಗಳನ್ನು ನಾನು ಸೆಟ್ ಮಾಡಿದ್ದೇನೆ.
07:14 ಇದು ಸಾಧ್ಯವಿದೆ. ಏಕೆಂದರೆ attr_declaration (ಎ ಟಿ ಟಿ ಆರ್ ಅಂಡರ್ ಸ್ಕೋರ್ ಡಿಕ್ಲೆರೇಶನ್), ವ್ಯಾಲ್ಯೂಗಳನ್ನು ಸೆಟ್ ಮಾಡಲು ಡೀಫಾಲ್ಟ್ ಆಗಿ ಮೆಥಡ್ ಗಳನ್ನು ಕ್ರಿಯೇಟ್ ಮಾಡುತ್ತದೆ.
07:22 ಆಮೇಲೆ ನಾನು ’ಗೆಟ್ಟರ್ ಮೆಥಡ್’ಗಳನ್ನು ಬಳಸಿ, name' ಹಾಗೂ price ಗಳಿಗಾಗಿ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು ಪ್ರಯತ್ನಿಸಿದ್ದೇನೆ.
07:28 ಈ ’ಗೆಟ್ಟರ್ ಮೆಥಡ್’ ಗಳು ಸಹ, attr_accessor ನ ಡಿಕ್ಲೆರೇಶನ್ ನಿಂದ ರಚಿಸಲ್ಪಟ್ಟಿದ್ದವು.
07:35 ಈಗ, ನಾವು ಮುಂಚಿನಂತೆಯೇ ಕೋಡ್ ಅನ್ನು ಎಕ್ಸೀಕ್ಯೂಟ್ ಮಾಡೋಣ.
07:40 ಸೆಟ್ ಮಾಡಿದ ವ್ಯಾಲ್ಯೂಗಳನ್ನು ಅದು ಪ್ರಿಂಟ್ ಮಾಡುವುದನ್ನು ನೀವು ನೋಡುವಿರಿ.
07:44 ಈಗ, ನಿಮ್ಮ ಸ್ವಂತದ ಅಕ್ಸೆಸ್ಸರ್ ’ಮೆಥಡ್’ಗಳನ್ನು ಬರೆಯಲು ನಿಮಗೆ ಸಾಧ್ಯವಾಗಬೇಕು.
07:50 ಗಮನಿಸಬೇಕಾದ ಒಂದು ಅಂಶವೆಂದರೆ, ಅಕ್ಸೆಸ್ಸರ್ ’ಮೆಥಡ್’ಗಳು, ಡೀಫಾಲ್ಟ್ ಆಗಿ, ಇನ್ಸ್ಟನ್ಸ್ ಮೆಥಡ್ ಗಳಾಗಿವೆ.
07:55 ಹೀಗಾಗಿ, class Product ನ ವಿವಿಧ ಇನ್ಸ್ಟನ್ಸ್ ಗಳಿಂದ ಅವುಗಳನ್ನು ಅಕ್ಸೆಸ್ ಮಾಡಬಹುದು.
08:00 ಈ ಟ್ಯುಟೋರಿಯಲ್ ನಲ್ಲಿ ನಾವು, ಇನ್ಸ್ಟನ್ಸ್ ಮೆಥಡ್ ಗಳು, ಕ್ಲಾಸ್ ಮೆಥಡ್ ಗಳು ಹಾಗೂ ಅಕ್ಸೆಸ್ಸರ್ ’ಮೆಥಡ್’ಗಳ ಬಗ್ಗೆ ಕಲಿತಿದ್ದೇವೆ.
08:06 ಒಂದು ಅಸೈನ್ಮೆಂಟ್: Temperature ಎಂಬ ಹೆಸರಿನ ಒಂದು ಕ್ಲಾಸ್ ಅನ್ನು ಡಿಫೈನ್ ಮಾಡಿ.
08:10 ’ರೂಬಿ’ಯ ಅಕ್ಸೆಸ್ಸರ್ (accessor) ಮೆಥಡ್ ನ ಸಿಂಟ್ಯಾಕ್ಸ್ ಅನ್ನು ಬಳಸಿ, ಒಂದು ಇನ್ಸ್ಟನ್ಸ್ ಮೆಥಡ್ ಅನ್ನು ಬರೆಯಿರಿ.
08:15 ಈ ಮೆಥಡ್, ಕೊಟ್ಟಿರುವ ಫ್ಯಾರನ್ಹೈಟ್ ಗೆ (Fahrenheit), ಸೆಲ್ಸಿಯಸ್ (Celsius) ಅನ್ನು ಕಂಡುಹಿಡಿಯಬೇಕು.
08:20 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
08:23 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
08:26 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:30 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
08:31 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
08:34 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:38 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:contact at spoken hyphen tutorial dot org.
08:44 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
08:48 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
08:55 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

09:03 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ .ವಂದನೆಗಳು.

Contributors and Content Editors

NaveenBhat, Pratik kamble, Sandhya.np14