QGIS/C4/Interpolation/Kannada

From Script | Spoken-Tutorial
Jump to: navigation, search
Time Narration
00:01 QGIS ನಲ್ಲಿ Interpolation Methods ಗಳ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, ಇಂಟರ್ಪೊಲೇಷನ್ ವಿಧಾನಗಳು,
00:12 Inverse Distance Weighting (IDW) (ಇನ್ವರ್ಸ್ ಡಿಸ್ಟೆನ್ಸ್ ವೇಯ್ಟಿಂಗ್) ಮತ್ತು

Triangulated Irregular Network (TIN) (ಟ್ರೈಆಂಗ್ಯುಲೇಟೆಡ್ ಇರೆಗ್ಯುಲರ್ ನೆಟ್ವರ್ಕ್) – ಇವುಗಳ ಕುರಿತು ಕಲಿಯುವೆವು.

00:18 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು

ಉಬಂಟು ಲಿನಕ್ಸ್ ಒ.ಎಸ್ 16.04 ಆವೃತ್ತಿ ಮತ್ತು

00:24 QGIS ಆವೃತ್ತಿ 2.18 – ಇವುಗಳನ್ನು ಬಳಸುತ್ತಿದ್ದೇನೆ.
00:28 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು QGIS ಇಂಟರ್ಫೇಸ್ ನ ಕುರಿತು ತಿಳಿದಿರಬೇಕು.
00:34 ಹಿಂದಿನ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ ಸೈಟ್ ಅನ್ನು ಭೇಟಿಮಾಡಿ.
00:40 ಈ ಟ್ಯುಟೋರಿಯಲ್ ಗೆ ಅಗತ್ಯವಿರುವ ಡಾಟಾ ಫೈಲ್ ಗಳನ್ನು Code files ಲಿಂಕ್ ನಲ್ಲಿ ಕೊಡಲಾಗಿದೆ.
00:46 ದಯವಿಟ್ಟು ಫೋಲ್ಡರ್ ಅನ್ನು ಡೌನ್ಲೋಡ್ ಮಾಡಿಕೊಂಡು, ಕಂಟೆಂಟ್ ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿ.
00:51 ನಾನು ಫೋಲ್ಡರ್ ಅನ್ನು Desktop ನಲ್ಲಿ ಸೇವ್ ಮಾಡಿದ್ದೇನೆ.

ಅದನ್ನು ತೆರೆಯಲು, ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ.

00:59 ಎಕ್ಸ್ಟ್ರ್ಯಾಕ್ಟ್ ಮಾಡಿದ ಫೋಲ್ಡರ್ ನಲ್ಲಿ Air Stations.shp ಫೈಲ್ ಗೆ ಹೋಗಿ.
01:04 ಈ ಫೈಲ್ ಮಹಾರಾಷ್ಟ್ರದಲ್ಲಿರುವ ಹವಾಮಾನ ಕೇಂದ್ರಗಳನ್ನು ತೋರಿಸುತ್ತದೆ.
01:10 Interpolation ಎನ್ನುವುದು ಪ್ರತ್ಯೇಕ ಬಿಂದುಗಳಿಂದ ನಿರಂತರ ಮೇಲ್ಮೈಯನ್ನು ರಚಿಸುವ ಒಂದು ವಿಧಾನವಾಗಿದೆ
01:17 QGIS ನಲ್ಲಿ interpolation ನ ಎರಡು ವಿಧಾನಗಳು ಲಭ್ಯವಿವೆ.
01:22 ಅವು Inverse Distance Weighting (IDW) (ಇನ್ವರ್ಸ್ ಡಿಸ್ಟೆನ್ಸ್ ವೇಯ್ಟಿಂಗ್) ಮತ್ತು Triangulated Irregular Network (TIN) (ಟ್ರೈಆಂಗ್ಯುಲೇಟೆದ್ ಇರೆಗ್ಯುಲರ್ ನೆಟ್ವರ್ಕ್) ಗಳಾಗಿವೆ.
01:28 Interpolation Plugin ಅನ್ನು Point layer ನಿಂದ interpolated raster (ಇಂಟರ್ಪೊಲೇಟೆಡ್ ರಾಸ್ಟರ್) ಅನ್ನು ರಚಿಸಲು ಬಳಸಲಾಗುತ್ತದೆ.
01:35 QGIS ಇಂಟರ್ಫೇಸ್ ಅನ್ನು ತೆರೆಯಿರಿ.
01:38 ಇಲ್ಲಿ ನಾನು QGIS ಇಂಟರ್ಫೇಸ್ ಅನ್ನು ತೆರೆದಿದ್ದೇನೆ.
01:43 ಇಲ್ಲಿ ತೋರಿಸಿದಂತೆ, Plugins ಮೆನ್ಯುವನ್ನು ಬಳಸಿ, ಇಂಟರ್ಪೊಲೇಷನ್ ಪ್ಲಗ್ ಇನ್ ಅನ್ನು ಸಕ್ರಿಯಗೊಳಿಸಿ.
01:49 Interpolation plugin ನ ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ.

ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.

01:56 Raster ಮೆನ್ಯುವನ್ನು ತೆರೆಯಿರಿ.
01:59 Interpolation ಆಯ್ಕೆಯು ಈಗ Raster ಮೆನ್ಯುವಿನಲ್ಲಿ ಸೇರ್ಪಡೆಯಾಗಿದೆ.
02:04 Add Vector Layer ಟೂಲ್ ಅನ್ನು ಕ್ಲಿಕ್ ಮಾಡಿ. Add vector layer ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
02:11 Browse ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು Code files ಫೋಲ್ಡರ್ ಗೆ ಹೋಗಿ. ಇಲ್ಲಿ ನಾವು ಎರಡು ಫೈಲ್ ಗಳನ್ನು ಆಯ್ಕೆ ಮಾಡುವೆವು.
02:20 AirStations.shp ಫೈಲ್ ಅನ್ನು ಆಯ್ಕೆ ಮಾಡಿ.
02:24 ಕೀ ಬೋರ್ಡ್ ನಲ್ಲಿ Ctrl ಹಿಡಿದುಕೊಂಡು, MH_Districts.shp ಫೈಲ್ ನ ಮೇಲೆ ಕ್ಲಿಕ್ ಮಾಡಿ.
02:32 Open ಬಟನ್ ನ ಮೇಲೆ ಕ್ಲಿಕ್ ಮಾಡಿ.
02:35 Add vector layer ಡಯಲಾಗ್ ಬಾಕ್ಸ್ ನಲ್ಲಿ, Open ಬಟನ್ ನ ಮೇಲೆ ಕ್ಲಿಕ್ ಮಾಡಿ.
02:40 ಕ್ಯಾನ್ವಾಸ್ ನ ಮೇಲೆ ಮಹಾರಾಷ್ಟ್ರ ರಾಜ್ಯದ ನಕ್ಷೆಯನ್ನು ನೋಡಬಹುದು.
02:45 ಪ್ರತಿ ಜಿಲ್ಲೆಯ Air stations ಇರುವ ಪ್ರದೇಶವನ್ನು ಪಾಯಿಂಟ್ ಫೀಚರ್ಸ್ ನಲ್ಲಿ ತೋರಿಸಲಾಗಿದೆ.
02:52 ಈ ಪಾಯಿಂಟ್ ಫೀಚರ್ ಗಳನ್ನು ಲೇಬಲ್ ಮಾಡೋಣ.
02:56 Air Stations layer ನ ಮೇಲೆ ರೈಟ್ ಕ್ಲಿಕ್ ಮಾಡಿ.
03:00 Layer Properties ಡಯಲಾಗ್ ಬಾಕ್ಸ್ ಅನ್ನು ತೆರೆಯಲು, Properties ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
03:06 ಎಡ ಪ್ಯಾನಲ್ ನಲ್ಲಿರುವ Labels ಆಯ್ಕೆಯನ್ನು ಆಯ್ಕೆ ಮಾಡಿ.
03:11 ಮೇಲ್ಭಾಗದಲ್ಲಿರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ.
03:15 ಡ್ರಾಪ್ ಡೌನ್ ನಲ್ಲಿ Show labels for this layer ಆಯ್ಕೆ ಮಾಡಿ.
03:20 Label with ಡ್ರಾಪ್ ಡೌನ್ ನಲ್ಲಿ, Air ಅಂಡರ್ಸ್ಕೋರ್ Pollut ಅನ್ನು ಆಯ್ಕೆ ಮಾಡಿ.

ಕೆಳಕ್ಕೆ ಸ್ಕ್ರೋಲ್ ಮಾಡಿ.

03:28 ಇಲ್ಲಿ ಲೇಬಲ್ ಸ್ಟೈಲ್ ಅನ್ನು ಬದಲಿಸಲು, ಹಲವಾರು ಆಯ್ಕೆಗಳನ್ನು ನೀವು ನೋಡಬಹುದು.
03:33 ಬೇಕಾದ ಸ್ಟೈಲ್ ಅನ್ನು ಆಯ್ಕೆ ಮಾಡಿ ಮತ್ತು OK ಬಟನ್ ಅನ್ನು ಕ್ಲಿಕ್ ಮಾಡಿ.
03:38 ಕ್ಯಾನ್ವಾಸ್ ನಲ್ಲಿ, ಲೇಬಲ್ ಗಳೊಂದಿಗೆ ಪಾಯಿಂಟ್ ಗಳು ಕಾಣಿಸುತ್ತವೆ.
03:43 Air Stations ಡಾಟ್ shp layer ಗೆ attribute ಅಟ್ರಿಬ್ಯೂಟ್ ಟೇಬಲ್ ಅನ್ನು ತೆರೆಯಿರಿ.
03:49 attribute ಟೇಬಲ್ ನಲ್ಲಿ ಪ್ರತಿ ಕೇಂದ್ರ(ಸ್ಟೇಶನ್) ಗೂ Nitrogen Oxides ನ ಮಟ್ಟವನ್ನು ಕೊಡಲಾಗಿದೆ.
03:57 ನಾವು ಈಗ Nox attribute ನಿಂದ Air Stations layer ಅನ್ನು ಇಂಟರ್ಪೊಲೇಟ್ ಮಾಡುವೆವು.
04:03 ಇಲ್ಲಿ ನಾವು, ಇಂಟರ್ಪೊಲೇಷನ್ ಗೆ IDW method ಅನ್ನು ಬಳಸುವೆವು.

attribute ಟೇಬಲ್ ಅನ್ನು ಕ್ಲೋಸ್ ಮಾಡಿ.

04:11 Inverse Distance Weighting ವಿಧಾನವು ಸ್ಯಾಂಪಲ್ ಪಾಯಿಂಟ್ ಗಳಿಗೆ ತೂಕವನ್ನು (ವೇಯ್ಟ್ಸ್) ನೀಡುತ್ತದೆ.
04:17 ಇದನ್ನು ಉಷ್ಣತೆ, ಮಳೆ, ಮತ್ತು ಜನಸಂಖ್ಯೆ ಗಳಂತಹ ಡಾಟಾಗಳನ್ನು ಇಂಟರ್ಪೊಲೇಟ್ ಮಾಡಲು ಬಳಸಲಾಗುತ್ತದೆ.
04:26 QGIS ಇಂಟರ್ಫೇಸ್ ಗೆ ಹಿಂದಿರುಗಿ.
04:29 Raster ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
04:32 interpolation ಪ್ಲಗಿನ್ ನ ಮೇಲೆ ಕ್ಲಿಕ್ ಮಾಡಿ.
04:35 Interpolation plugin ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
04:39 Input ವಿಭಾಗದಡಿಯಲ್ಲಿ,

Air Stations ಅನ್ನು Vector layers ನ ಆಯ್ಕೆಯಾಗಿ ಆರಿಸಿಕೊಳ್ಳಿ.

04:46 ಇಲ್ಲಿ ಡಿಫಾಲ್ಟ್ ಆಗಿ, Air Stations layer ಈಗಾಗಲೇ ಆಯ್ಕೆಯಾಗಿದೆ.
04:52 Interpolation attribute ಅನ್ನು NOx ಎಂದು ಆಯ್ಕೆ ಮಾಡಿ.
04:57 Add ಬಟನ್ ನ ಮೇಲೆ ಕ್ಲಿಕ್ ಮಾಡಿ.
05:00 ಇದು Air Stations ಡಾಟ್ shp layer ಅನ್ನು Nitrogen Oxide ಅಟ್ರಿಬ್ಯೂಟ್ ನೊಂದಿಗೆ ಸೇರಿಸುತ್ತದೆ.
05:06 Type ಡ್ರಾಪ್ ಡೌನ್ ನಲ್ಲಿ Points ಎಂದು ಆಯ್ಕೆ ಮಾಡಿ.

ಇಲ್ಲಿ Points ಡಿಫಾಲ್ಟ್ ಆಗಿ ಆಯ್ಕೆಯಾಗಿರುತ್ತದೆ.

05:14 Output ವಿಭಾಗಕ್ಕೆ ಹೋಗಿ.
05:17 Interpolation method ಅನ್ನು Inverse Distance Weighting ಎಂದು ಆಯ್ಕೆ ಮಾಡಿ.

ಉಳಿದ ಎಲ್ಲ ಸೆಟ್ಟಿಂಗ್ ಗಳನ್ನು default ಆಗಿಯೇ ಬಿಡಿ.

05:26 Output file ನ ಮುಂದೆ ಇರುವ ಮೂರು ಚುಕ್ಕಿಗಳಿರುವ ಬಟನ್ ಅನ್ನು ಕ್ಲಿಕ್ ಮಾಡಿ.
05:30 ಬೇಕಾದ ಫೋಲ್ಡರ್ ನಲ್ಲಿ ಔಟ್ಪುಟ್ ಅನ್ನು IDW ಅಂಡರ್ಸ್ಕೋರ್ Stations ಎಂದು ಸೇವ್ ಮಾಡಿ.

ನಾನು ಇದನ್ನು Desktop ನಲ್ಲಿ ಸೇವ್ ಮಾಡುವೆನು.

05:40 Add result to project ಇದು ಅನ್ಚೆಕ್ ಆಗಿದ್ದರೆ ಚೆಕ್ ಮಾಡಿ.
05:45 OK ಬಟನ್ ನ ಮೇಲೆ ಕ್ಲಿಕ್ ಮಾಡಿ.
05:47 ಪರದೆಯ ಮೇಲೆ ಮ್ಯಾಪ್ ನ ಜಾಗಗಳು ಕಪ್ಪು ಮತ್ತು ಬಿಳುಪಿನಲ್ಲಿ ಡಿಸ್ಪ್ಲೇ ಆಗುತ್ತವೆ.
05:53 ಬಿಳಿ ಬಣ್ಣದಲ್ಲಿರುವ ಜಾಗಗಳು, Nitrogen Oxides ನ ಹೆಚ್ಚಿನ ಮಟ್ಟವನ್ನು ಸೂಚಿಸುತ್ತವೆ.
05:58 ಕಪ್ಪು ಬಣ್ಣದಲ್ಲಿರುವ ಜಾಗಗಳು, Nitrogen Oxides ನ ಕಡಿಮೆ ಮಟ್ಟವನ್ನು ಸೂಚಿಸುತ್ತವೆ.
06:03 ಇನ್ನು ಹೆಚ್ಚಿನ ಸ್ಪಷ್ಟತೆಗಾಗಿ ನಾವು ಲೇಯರ್ ನ ಸಿಂಬೊಲಜಿಯನ್ನು ಬದಲಿಸುವೆವು.
06:08 IDW layer ಗೆ Layer properties ಅನ್ನು ತೆರೆಯಿರಿ.
06:13 ಎಡ ಪ್ಯಾನಲ್ ನಿಂದ, Style ಆಯ್ಕೆಯನ್ನು ಕ್ಲಿಕ್ ಮಾಡಿ.
06:17 Render type ಅನ್ನು Single band Pseudocolor (ಸಿಂಗಲ್ ಬ್ಯಾಂಡ್ ಸುಡೋಕಲರ್) ಎಂದು ಆಯ್ಕೆ ಮಾಡಿ.
06:22 Interpolation ಡ್ರಾಪ್ ಡೌನ್ ನಿಂದ Discrete ಅನ್ನು ಆಯ್ಕೆ ಮಾಡಿ.
06:26 color ಡ್ರಾಪ್ ಡೌನ್ ನಿಂದ Spectral ಅನ್ನು ಆಯ್ಕೆ ಮಾಡಿ. Invert ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ.
06:33 Classify ಬಟನ್ ನ ಮೇಲೆ ಕ್ಲಿಕ್ ಮಾಡಿ.
06:36 ಉಳಿದ ಎಲ್ಲ ಸೆಟಿಂಗ್ ಗಳನ್ನು ಡಿಫಾಲ್ಟ್ ಆಗಿ ಬಿಡಿ.
06:40 Apply ಬಟನ್ ಅನ್ನೂ, ನಂತರ OK ಬಟನ್ ಅನ್ನೂ ಕ್ಲಿಕ್ ಮಾಡಿ.
06:44 Spectral ಬಣ್ಣಗಳ ಪ್ರದೇಶಗಳನ್ನೊಳಗೊಂಡ ಮ್ಯಾಪ್ ಕ್ಯಾನ್ವಾಸ್ ನ ಮೇಲೆ ಡಿಸ್ಪ್ಲೇ ಆಗುತ್ತದೆ.
06:50 ಕೆಂಪು ಬಣ್ಣದ ಪ್ರದೇಶವು Nitrogen Oxides ನ ಅಧಿಕ ಸಾಂಧ್ರತೆಯುಳ್ಳ ಪ್ರದೇಶವನ್ನು ಸೂಚಿಸುತ್ತದೆ.
06:56 ನೀಲಿ ಬಣ್ಣದ ಪ್ರದೇಶವು Nitrogen Oxides ನ ಕಡಿಮೆ ಸಾಂಧ್ರತೆಯುಳ್ಳ ಪ್ರದೇಶವನ್ನು ಸೂಚಿಸುತ್ತದೆ.
07:01 ಟೂಲ್ ಬಾರ್ ನಿಂದ Save ಟೂಲ್ ಅನ್ನು ಬಳಸಿ, project ಅನ್ನು ಸೇವ್ ಮಾಡಿ.
07:06 ಸರಿಯಾದ ಹೆಸರನ್ನು ಕೊಡಿ, ಅನುಕೂಲಕರವಾದ ಜಾಗವನ್ನು ಆರಿಸಿಕೊಳ್ಳಿ.
07:12 Save ಬಟನ್ ಅನ್ನು ಕ್ಲಿಕ್ ಮಾಡಿ.
07:15 ಈಗ ನಾವು Triangulated Irregular Network interpolation (ಟ್ರೈಆಂಗ್ಯುಲೇಟೆಡ್ ಇರೆಗ್ಯುಲರ್ ನೆಟ್ವರ್ಕ್ ಇಂಟರ್ಪೊಲೇಷನ್) ವಿಧಾನದ ಕುರಿತು ಕಲಿಯೋಣ.
07:22 TIN ಇದನ್ನು ತ್ರಿಕೋನಗಳಿಂದಾದ ಮೇಲ್ಮೈಯನ್ನು ರಚಿಸಲು ಬಳಸಲಾಗುತ್ತದೆ.
07:28 ಇದು nearest neighbor point (ನಿಯರೆಸ್ಟ್ ನೈಬರ್ ಪಾಯಿಂಟ್) ಮಾಹಿತಿಯ ಆಧಾರದ ಮೇಲಿರುತ್ತದೆ.
07:33 TIN ವಿಧಾನವನ್ನು ಸಾಮಾನ್ಯವಾಗಿ ಡಾಟಾ ಎಲಿವೇಷನ್ ಗಾಗಿ ಬಳಸಲಾಗುತ್ತದೆ.
07:38 ಒಂದು QGIS ವಿಂಡೋವನ್ನು ತೆರೆಯಿರಿ.

ಟೂಲ್ ಬಾರ್ ನಲ್ಲಿ New ಟೂಲ್ ಅನ್ನು ಕ್ಲಿಕ್ ಮಾಡಿ.

07:45 Points ಡಾಟ್ shp layer ಅನ್ನು ಲೋಡ್ ಮಾಡಲು, Add Vector Layer ಅನ್ನು ಬಳಸಿ.
07:52 Points layerAttribute table ಅನ್ನು ತೆರೆಯಿರಿ.
07:56 ಪ್ರತಿ ಪಾಯಿಂಟ್ ಫೀಚರ್ ನ Elevation ಡಾಟಾವನ್ನು ಗಮನಿಸಿ.
08:01 Attribute ಟೇಬಲ್ ಅನ್ನು ಕ್ಲೋಸ್ ಮಾಡಿ.
08:04 ಈಗ ಮತ್ತೊಮ್ಮೆ Raster ಮೆನ್ಯುವಿನಿಂದ, Interpolation window ವನ್ನು ತೆರೆಯಿರಿ.
08:09 Input ವಿಭಾಗದಲ್ಲಿ, Vector layers ಡ್ರಾಪ್ ಡೌನ್ ನಲ್ಲಿ, Points layer ಅನ್ನು ಆಯ್ಕೆ ಮಾಡಿ.

elevation ಅನ್ನು Interpolation attribute ಎಂದು ಆಯ್ಕೆ ಮಾಡಿ.

08:20 Add ಬಟನ್ ಅನ್ನು ಕ್ಲಿಕ್ ಮಾಡಿ.

ಇದು ಇಂಟರ್ಪೊಲೇಟಿಂಗ್ ಗಾಗಿ, elevation attribute ನೊಂದಿಗೆ Points layer ಅನ್ನು ಸೇರಿಸುತ್ತದೆ.

08:28 Type ಡ್ರಾಪ್ ಡೌನ್ ನಲ್ಲಿ Points ಎಂದು ತಂತಾನೆ ಆಯ್ಕೆಯಾಗಿರುತ್ತದೆ. ಅದನ್ನು ಹಾಗೆ ಮಾಡಿ.
08:34 Output ವಿಭಾಗದಡಿಯಲ್ಲಿ, Interpolation method ಅನ್ನು Triangular interpolation ಎಂದು ಆಯ್ಕೆ ಮಾಡಿ.
08:41 output ಫೈಲ್ ಅನ್ನು TIN-Stations ಎಂದು ಸೇವ್ ಮಾಡಿ ಮತ್ತು OK button ಅನ್ನು ಕ್ಲಿಕ್ ಮಾಡಿ.
08:49 triangulated interpolation (ಟ್ರೈಆಂಗ್ಯುಲೇಟೆಡ್ ಇಂಟರ್ಪೊಲೇಷನ್) ಅನ್ನು ತೋರಿಸುವ ಮ್ಯಾಪ್ ಕ್ಯಾನ್ವಾಸ್ ನ ಮೇಲೆ ಕಾಣಿಸುತ್ತದೆ.
08:54 ಈ ಲೇಯರ್ ಗೆ symbology ಯನ್ನು ಬದಲಿಸಿ.
08:58 ನಾವು IDW layer ಗೆ ಅನುಸರಿಸಿದ ಹಂತಗಳನ್ನೇ ಅನುಸರಿಸಿ.
09:12 ಈಗ ಮ್ಯಾಪ್ Spectral ಬಣ್ಣಗಳಲ್ಲಿ ಪ್ರದರ್ಶಿತವಾಗಿದೆ.

ಕೆಂಪು ಬಣ್ಣದಲ್ಲಿರುವ ಪ್ರದೇಶಗಳು ಹೆಚ್ಚು ಎಲಿವೇಷನ್ ಅನ್ನು ಪ್ರತಿನಿಧಿಸುತ್ತದೆ.

09:21 ನೀಲಿ ಬಣ್ಣದಲ್ಲಿರುವ ಪ್ರದೇಶಗಳು ಕಡಿಮೆ ಎಲಿವೇಷನ್ ಅನ್ನು ಸೂಚಿಸುತ್ತವೆ.
09:25 ಟೂಲ್ ಬಾರ್ ನಲ್ಲಿರುವ Save ಟೂಲ್ ಅನ್ನು ಬಳಸಿ ಮ್ಯಾಪ್ ಅನ್ನು ಸೇವ್ ಮಾಡಿ.
09:30 ಸಂಕ್ಷಿಪ್ತವಾಗಿ,

ಈ ಟ್ಯುಟೋರಿಯಲ್ ನಲ್ಲಿ ನಾವು, ಇಂಟರ್ಪೊಲೇಷನ್ ವಿಧಾನಗಳು,

09:37 Inverse Distance Weighting (IDW) (ಇನ್ವರ್ಸ್ ಡಿಸ್ಟೆನ್ಸ್ ವೇಯ್ಟಿಂಗ್)

Triangulated Irregular Network (TIN) (ಟ್ರೈಆಂಗ್ಯುಲೇಟೆಡ್ ಇರೆಗ್ಯುಲರ್ ನೆಟ್ವರ್ಕ್) – ಇವುಗಳ ಕುರಿತು ಕಲಿತಿದ್ದೇವೆ.

09:43 ನಿಮಗಾಗಿ ಅಸೈನ್ಮೆಂಟ್,

SO2 attribute ನೊಂದಿಗೆ, Air Stations layer ಗೆ IDW interpolated ಮ್ಯಾಪ್ ಅನ್ನು ರಚಿಸಿ.

09:52 ನಿಮ್ಮ ಮ್ಯಾಪ್ ಈ ರೀತಿಯಾಗಿ ಕಾಣಬೇಕು
09:56 ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.

ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.

10:03 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.

ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

10:13 ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

10:17

ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.

ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

NaveenBhat