QGIS/C2/Raster-Data-Styling/Kannada
Time | Narration |
00:01 | QGIS ನಲ್ಲಿ, Raster Data Styling ನ ಕುರಿತಾದ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು ನಿರಂತರವಾದ raster ಅನ್ನು ಸ್ಟೈಲ್ ಮಾಡುವುದು, |
00:13 | Raster Calculator (ರ್ಯಾಸ್ಟರ್ ಕ್ಯಾಲ್ಕ್ಯುಲೇಟರ್ ) ನಲ್ಲಿ ಸಮೀಕರಣಗಳನ್ನು ಬರೆಯುವುದು ಮತ್ತು |
00:17 | raster ನ ಗುಣಲಕ್ಷಣಗಳ ಕುರಿತು ಕಲಿಯುವೆವು. |
00:20 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,
Ubuntu Linux OS ನ16.04 ಆವೃತ್ತಿ, |
00:28 | QGIS ನ 2.18 ಆವೃತ್ತಿಯನ್ನು ಬಳಸಿದ್ದೇನೆ. |
00:32 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು QGIS ಇಂಟರ್ಫೇಸ್ ನ ಕುರಿತು ತಿಳಿದಿರಬೇಕು. |
00:38 | ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ ಸೈಟ್ ಅನ್ನು ಭೇಟಿಮಾಡಿ. |
00:43 | ಪ್ಲೇಯರ್ ನ ಕೆಳಗಿರುವ, Code files ಲಿಂಕ್ ನಲ್ಲಿ ಕೊಟ್ಟಿರುವ ಫೋಲ್ಡರ್ ಅನ್ನು ಡೌನ್ ಲೋಡ್ ಮಾಡಿ. |
00:49 | ಡೌನ್ಲೋಡ್ ಆದ ಝಿಪ್ ಫೈಲ್ ನಲ್ಲಿರುವ ಕಂಟೆಂಟ್ ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿಕೊಳ್ಳಿ. |
00:56 | ಇಲ್ಲಿ ನನ್ನ Code files ಫೋಲ್ಡರ್ ಇದೆ. |
00:59 | ಫೋಲ್ಡರ್ ಅನ್ನು ತೆರೆಯಲು ಅದನ್ನು ಡಬಲ್ ಕ್ಲಿಕ್ ಮಾಡಿ. |
01:02 | ಈ ಫೋಲ್ಡರ್ ನಲ್ಲಿ, Population Density grid files ಇದು 2000 ಮತ್ತು 1990 ಇಸ್ವಿಯಲ್ಲಿನ ಇಡಿ ಪ್ರಪಂಚದ ಜನಸಂಖ್ಯೆಗೆ ಸಂಬಂಧಿಸಿದ ಫೈಲ್ ಆಗಿದೆ. |
01:12 | ಇಲ್ಲಿ .asc ಫೈಲ್ ಎಕ್ಸ್ಟೆನ್ಷನ್ ಅನ್ನು ಹೊಂದಿರುವ , ASCII ಫಾರ್ಮ್ಯಾಟ್ ನಲ್ಲಿರುವ ಎರಡು ಫೈಲ್ ಗಳಿವೆ. |
01:20 | ಈಗ ಈ ಫೈಲ್ ಗಳನ್ನು QGIS ನಲ್ಲಿ ತೆರೆಯೋಣ. |
01:24 | Code files ಫೋಲ್ಡರ್ ಅನ್ನು ಕ್ಲೋಸ್ ಮಾಡಿ. |
01:27 | ಇಲ್ಲಿ ನಾನು QGIS ಇಂಟರ್ಫೇಸ್ ಅನ್ನು ತೆರೆದಿದ್ದೇನೆ.
Layer ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. |
01:34 | ಡ್ರಾಪ್ ಡೌನ್ ನಿಂದ Add Layer ಅನ್ನು ಆಯ್ಕೆ ಮಾಡಿ. |
01:38 | ಸಬ್-ಮೆನ್ಯುವಿನಿಂದ Add Raster Layer ಅನ್ನು ಆಯ್ಕೆ ಮಾಡಿ. |
01:43 | ಒಂದು ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. ನಾನು Desktop ನಲ್ಲಿರುವ Code file ಫೋಲ್ಡರ್ ಗೆ ಹೋಗುತ್ತೇನೆ. |
01:52 | .asc ಫೈಲ್ ಎಕ್ಸ್ಟೆನ್ಷನ್ ಇರುವ ಎರಡು ಫೈಲ್ ಗಳನ್ನು ಆಯ್ಕೆ ಮಾಡಿ. |
01:58 | Ctrl ಕೀಯನ್ನು ಹಿಡಿದಿಟ್ಟುಕೊಂಡು ಎರಡೂ ಫೈಲ್ ಗಳ ಮೇಲೆ ಕ್ಲಿಕ್ ಮಾಡಿ. |
02:04 | Open ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:07 | Coordinate Reference System Selector (ಕೋ-ಆರ್ಡಿನೇಟ್ ರೆಫರೆನ್ಸ್ ಸಿಸ್ಟಮ್ ಸೆಲೆಕ್ಟರ್) ತೆರೆದುಕೊಳ್ಳುತ್ತದೆ. |
02:11 | ಸೆಟ್ಟಿಂಗ್ಸ್ ನಲ್ಲಿ, CRS ಆಯ್ಕೆಯು ತಂತಾನೇ ಆಯ್ಕೆಯಾಗಿರುತ್ತದೆ. |
02:17 | ಅಂತಹ ಸಂದರ್ಭದಲ್ಲಿ, ಈ ವಿಂಡೋ ತೆರೆದುಕೊಳ್ಳದೇ ಇರಬಹುದು. |
02:21 | Coordinate Reference System Selector (ಕೋ-ಆರ್ಡಿನೇಟ್ ರೆಫರೆನ್ಸ್ ಸಿಸ್ಟಮ್ ಸೆಲೆಕ್ಟರ್) ತೆರೆದುಕೊಳ್ಳದೇ ಇದ್ದರೆ, ಈ ಹಂತವನ್ನು ಬಿಟ್ಟು ಮುಂದಿನ ಹಂತದಿಂದ ಮುಂದುವರಿಸಿ. |
02:30 | ಇಲ್ಲಿ ಈ ಪಟ್ಟಿಯಿಂದ ನಾನು WGS 84 EPSG 4326 ಇದನ್ನು ಆಯ್ಕೆ ಮಾಡುವೆನು. |
02:39 | OK ಬಟನ್ ಅನ್ನು ಕ್ಲಿಕ್ ಮಾಡಿ. |
02:42 | ನಾವು ಇಲ್ಲಿ ಎರಡು ಲೇಯರ್ ಗಳನ್ನು ಒಟ್ಟಿಗೇ ಸೇರಿಸುತ್ತಿರುವುದರಿಂದ Coordinate Reference System Selector (ಕೋ-ಆರ್ಡಿನೇಟ್ ರೆಫರೆನ್ಸ್ ಸಿಸ್ಟಮ್ ಸೆಲೆಕ್ಟರ್) ಇನ್ನೊಮ್ಮೆ ತೆರೆದುಕೊಳ್ಳುತ್ತದೆ. |
02:51 | ಮತ್ತೆ WGS 84 EPSG 4326 ಅನ್ನು ಆಯ್ಕೆ ಮಾಡಿ. |
02:58 | OK ಬಟನ್ ಅನ್ನು ಕ್ಲಿಕ್ ಮಾಡಿ. |
03:01 | ಕ್ಯಾನ್ವಾಸ್ ನಲ್ಲಿ ನೀವು ವರ್ಲ್ಡ್ ಮ್ಯಾಪ್ grayscale ಬಂದಿರುವುದನ್ನು ನೋಡಬಹುದು. |
03:07 | ಕಡಿಮೆ pixels ಗಳು ಹೆಚ್ಚು ಜನಸಂಖ್ಯೆಯನ್ನೂ, ಗಾಢವಾದ pixels ಗಳು ಕಡಿಮೆ ಜನಸಂಖ್ಯೆಯನ್ನು ಸೂಚಿಸುತ್ತವೆ. |
03:15 | Layers Panel ನಲ್ಲಿ ನೀವು ಲೋಡ್ ಆಗಿರುವ ಎರಡೂ raster layers ಗಳನ್ನು ನೋಡಬಹುದು. |
03:21 | raster ನಲ್ಲಿನ ಪ್ರತಿ pixel ಆ ಗ್ರಿಡ್ ನ ಪಾಪ್ಯುಲೇಷನ್ ಡೆನ್ಸಿಟಿ ವ್ಯಾಲ್ಯುವನ್ನು ಹೊಂದಿರುತ್ತದೆ. |
03:27 | pixel ನ ವ್ಯಾಲ್ಯುವನ್ನು ನೋಡಲು, ಟೂಲ್ ಬಾರ್ ನ ಮೇಲ್ಗಡೆಯ ಬಲ ಮೂಲೆಯಲ್ಲಿರುವ Identify Features ಟೂಲ್ ಅನ್ನು ಕ್ಲಿಕ್ ಮಾಡಿ. |
03:35 | ಮ್ಯಾಪ್ ನಲ್ಲಿ ಝೂಮ್ ಮಾಡಲು, ಮೌಸ್ ನ ಚಕ್ರವನ್ನು ಬಳಸಿ. |
03:38 | raster ಮ್ಯಾಪ್ ನ ಯಾವುದೇ ಭಾಗದಲ್ಲಾದರೂ ಕ್ಲಿಕ್ ಮಾಡಿ. |
03:41 | Identify Results ಪ್ಯಾನಲ್ ನಲ್ಲಿ ಪಿಕ್ಸೆಲ್ ವ್ಯಾಲ್ಯೂ ಕಾಣಿಸುತ್ತದೆ. |
03:48 | ಗಮನಿಸಿ, ಕಡಿಮೆ pixels ಗಳು ಹೆಚ್ಚು ಜನಸಂಖ್ಯೆಯನ್ನೂ, ಗಾಢವಾದ pixels ಗಳು ಕಡಿಮೆ ಜನಸಂಖ್ಯೆಯನ್ನು ಹೊಂದಿವೆ. |
03:57 | Identify Results ಪ್ಯಾನಲ್ ಅನ್ನು ಕ್ಲೋಸ್ ಮಾಡಿ. |
04:00 | ಮ್ಯಾಪ್ ಅನ್ನು ಝೂಮ್ ಔಟ್ ಮಾಡಿ. Pan Map ಟೂಲ್ ಅನ್ನು ಕ್ಲಿಕ್ ಮಾಡಿ ಮತ್ತು ಮ್ಯಾಪ್ ಅನ್ನು ಕ್ಯಾನ್ವಾಸ್ ನ ಮೇಲೆ ಸರಿಯಾಗಿ ಹೊಂದಿಸಿ. |
04:09 | ಸರಿಯಾದ ಸ್ಟೈಲಿಂಗ್ ನಲ್ಲಿ ಪಾಪ್ಯುಲೇಷನ್ ಡೆನ್ಸಿಟಿ ಪ್ಯಾಟರ್ನ್ ಚೆನ್ನಾಗಿ ಕಾಣಿಸುವಂತೆ ಮಾಡಬಹುದು. |
04:16 | Layers Panel ನಲ್ಲಿ ಮೊದಲನೆಯ ಲೇಯರ್ ನ ಮೇಲೆ ರೈಟ್ ಕ್ಲಿಕ್ ಮಾಡಿ. |
04:21 | ಕಂಟೆಕ್ಸ್ಟ್ ಮೆನ್ಯುವಿನಿಂದ, Properties ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
04:26 | Layer Properties ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
04:30 | ಡಯಲಾಗ್ ಬಾಕ್ಸ್ ನಲ್ಲಿ Style ಅನ್ನು ಆಯ್ಕೆ ಮಾಡಿ. |
04:35 | Band Rendering ವಿಭಾಗದಡಿಯಲ್ಲಿ, Render type ಅನ್ನು Singleband pseudocolor (ಸಿಂಗಲ್ ಬ್ಯಾಂಡ್ ಸ್ಯುಡೋಕಲರ್) ಎಂದು ಬದಲಿಸಿ. |
04:42 | Interpolation (ಇಂಟರ್ ಪೊಲೇಷನ್) Linear ಆಗಿರಲಿ. |
04:46 | Color ಡ್ರಾಪ್ ಡೌನ್ ನಲ್ಲಿ, Spectral(ಸ್ಪೆಕ್ಟ್ರಲ್) ಅನ್ನು ಆಯ್ಕೆ ಮಾಡಿ. |
04:51 | ಕೆಳಕ್ಕೆ ಸ್ಕ್ರೋಲ್ ಮಾಡಿ. |
04:54 | Mode ಅನ್ನು Continuous ಎಂದು ಬದಲಿಸಿ.
Classify ಬಟನ್ ನ ಮೇಲೆ ಕ್ಲಿಕ್ ಮಾಡಿ. |
05:00 | ನೀವು ಐದು ಕಲರ್ ವ್ಯಾಲ್ಯುಗಳು ರಚನೆಯಾಗಿರುವುದನ್ನು ನೋಡುವಿರಿ. |
05:05 | Apply ಬಟನ್ ಅನ್ನು ಕ್ಲಿಕ್ ಮಾಡಿ, ನಂತರ ಡಯಲಾಗ್ ಬಾಕ್ಸ್ ನ ಕೆಳ ಬಲ ಮೂಲೆಯಲ್ಲಿರುವ OK ಬಟನ್ ಅನ್ನು ಕ್ಲಿಕ್ ಮಾಡಿ. |
05:14 | QGIS ಕ್ಯಾನ್ವಾಸ್ ನಲ್ಲಿ, ಸ್ಪೆಕ್ಟ್ರಲ್ ಕಲರ್ ರೆಂಡರಿಂಗ್ ನ ಐದು ವಿಭಾಗಗಳಲ್ಲಿ raster ಮ್ಯಾಪ್ ಡಿಸ್ಪ್ಲೇ ಆಗಿರುವುದನ್ನುನೋಡಬಹುದು. |
05:24 | ಮೊದಲನೆಯ ಲೇಯರ್ ಗೆ ಮಾಡಿದ ಹಂತಗಳನ್ನೇ ಅನುಸರಿಸಿ, ಎರಡನೆಯ ಲೇಯರ್ ಗೂ ಕೂಡ raster style ಅನ್ನು ಬದಲಿಸಬಹುದು. |
05:45 | ನಮ್ಮ ವಿಶ್ಲೇಷಣೆಗಾಗಿ, ನಾವು 1990 ಮತ್ತು 2000 ನೇ ಇಸ್ವಿಗಳ ನಡುವಿನ ಗರಿಷ್ಟ ಜನಸಂಖ್ಯೆ ಬದಲಾವಣೆಯಾದ ಪ್ರದೇಶಗಳನ್ನು ಕಂಡುಹಿಡಿಯಲು ಇಚ್ಛಿಸುವೆವು. |
05:54 | ಇದಕ್ಕಾಗಿ ನಾವು ಎರಡೂ ಲೇಯರ್ ಗಳಲ್ಲೂ, ಪ್ರತಿ ಗ್ರಿಡ್ ನ ಪಿಕ್ಸೆಲ್ ಗಳ ವ್ಯತ್ಯಾಸವನ್ನು ಕಂಡುಹಿಡಿಯಬೇಕು. |
06:02 | ಈ ಕ್ಯಾಲ್ಕ್ಯುಲೇಷನ್ ಗಳಿಗೆ ನಾವು , Raster Calculator tool (ರ್ಯಾಸ್ಟರ್ ಕ್ಯಾಲ್ಕ್ಯುಲೇಟರ್ ಟೂಲ್) ಅನ್ನು ಬಳಸುವೆವು. |
06:07 | ಮೆನ್ಯು ಬಾರ್ ನಿಂದ Raster ಮೆನ್ಯುವನ್ನು ಆಯ್ಕೆ ಮಾಡಿ.
ಡ್ರಾಪ್ ಡೌನ್ ನಿಂದ Raster calculator ಅನ್ನು ಆಯ್ಕೆ ಮಾಡಿ. |
06:16 | Raster Calculator ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
06:20 | Raster bands ವಿಭಾಗದಡಿಯಲ್ಲಿ, ಬ್ಯಾಂಡ್ ಗಳ ಹೆಸರುಗಳು ಡಿಸ್ಪ್ಲೇ ಆಗುತ್ತದೆ. |
06:26 | ನಮ್ಮ ಪ್ರತಿಯೊಂದೂ ರ್ಯಾಸ್ಟರ್ ಗಳೂ ಒಂದೇ ಬ್ಯಾಂಡ್ ಹೊಂದಿರುವುದರಿಂದ, ನಾವು ಪ್ರತಿ raster ಗೆ ಒಂದು ಎಂಟ್ರಿಯನ್ನು ಮಾತ್ರ ನೀವು ನೋಡಬಹುದು. |
06:33 | raster calculator ಇದು raster pixels ಗಳ ಮೇಲೆ ಗಣಿತೀಯ ಕ್ರಿಯೆಗಳನ್ನು ಅನ್ವಯಿಸಬಲ್ಲದು. |
06:40 | ಈ ಉದಾಹರಣೆಯಲ್ಲಿ ನಾವು ಒಂದು ಸರಳ ಸೂತ್ರ ಅಂದರೆ, ನಾವು 1990 ಇಸ್ವಿಯ ಜನಸಂಖ್ಯಾ ಸಾಂದ್ರತೆ(ಪಾಪ್ಯುಲೇಷನ್ ಡೆನ್ಸಿಟಿ) ಯನ್ನು 2000 ನೇ ಇಸ್ವಿಯ ಇಸ್ವಿಯ ಜನಸಂಖ್ಯಾ ಸಾಂದ್ರತೆ(ಪಾಪ್ಯುಲೇಷನ್ ಡೆನ್ಸಿಟಿ) ಯಿಂದ ಕಳೆಯಬೇಕಾಗಿದೆ. |
06:52 | Raster bands ವಿಭಾಗದಡಿಯಲ್ಲಿ, 2000 ನೆಯ ಇಸ್ವಿಯ raster layer ನ ಮೇಲೆ ಡಬಲ್ ಕ್ಲಿಕ್ ಮಾಡುವುದರ ಮೂಲಕ, ಲೇಯರ್ ಅನ್ನು ಆಯ್ಕೆ ಮಾಡಿ. |
07:00 | ಈಗ ಈ ಸಮೀಕರಣವನ್ನು Raster calculator expression ವಿಭಾಕಕ್ಕೆ ಸೇರಿಸಬೇಕು. |
07:06 | Operators ವಿಭಾಗದಲ್ಲಿ, ವ್ಯವಕಲನದ ಚಿಹ್ನೆಯ ಬಟನ್ ನ ಮೇಲೆ ಕ್ಲಿಕ್ ಮಾಡಿ. |
07:12 | ಈಗ ಮತ್ತೊಮ್ಮೆ Raster bands ವಿಭಾಗದಲ್ಲಿ, 1990 ನೆಯ ಇಸ್ವಿಯ raster layer ನ ಮೇಲೆ ಡಬಲ್ ಕ್ಲಿಕ್ ಮಾಡಿ. |
07:20 | ಈಗ ಈ ಲೆಕ್ಕದ ಸೂತ್ರವು Raster calculator expression ವಿಭಾಗದಲ್ಲಿ ಡಿಸ್ಪ್ಲೇ ಆಗಿದೆ. |
07:27 | Result Layer ವಿಭಾಗದಡಿಯಲ್ಲಿ, ನೀವು Output layer ಬಾಕ್ಸ್ ಅನ್ನು ನೋಡಬಹುದು. |
07:33 | ಈ ಬಾಕ್ಸ್ ನಲ್ಲಿ, ನಿಮ್ಮ output layer ಅನ್ನು pop-change.tif ಎಂದು ಟೈಪ್ ಮಾಡಿ. |
07:41 | Output format ಡ್ರಾಪ್ ಡೌನ್ ನಲ್ಲಿ, Geo TIFF ಅನ್ನು ಆಯ್ಕೆ ಮಾಡಿ. |
07:47 | Output CRS ಆಯ್ಕೆಯು ತಂತಾನೇ ಆಯ್ಕೆಯಾಗಿರುತ್ತದೆ. ಅದನ್ನು ಹಾಗೆ ಬಿಡಿ. |
07:54 | Add result to project ನ ಮುಂದೆ ಇರುವ ಬಾಕ್ಸ್ ಅನ್ನು ಟಿಕ್ ಮಾಡಿ. |
08:00 | ಡಯಲಾಗ್ ಬಾಕ್ಸ್ ನ ಕೆಳಗಡೆಯಿರುವ, OK ಬಟನ್ ಅನ್ನು ಕ್ಲಿಕ್ ಮಾಡಿ. |
08:04 | ನೀವು, Layers Panel ನಲ್ಲಿ ಹೊಸ layer ಸೇರ್ಪಡೆಯಾಗಿರುವುದನ್ನು ನೋಡಬಹುದು. |
08:08 | 3 ನೆಯ ಲೇಯರ್ ನ ಮ್ಯಾಪ್ ನೋಡಲು, Layers Panel ನಲ್ಲಿ pop-2000 ಮತ್ತು pop-1990 ಲೇಯರ್ ಗಳ ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ. |
08:21 | ಈ ಲೇಯರ್ ನ ಸ್ಟೈಲ್ ಅನ್ನು ಬದಲಿಸುವುದರ ಮೂಲಕ, ನಾವು ಇನ್ನೂ ಹೆಚ್ಚು ಮಾಹಿತಿಪೂರ್ಣವಾದ ಮ್ಯಾಪ್ ಅನ್ನು ರಚಿಸಬಹುದು. |
08:27 | pop-change layer ನ ಮೇಲೆ ರೈಟ್ ಕ್ಲಿಕ್ ಮಾಡಿ. ಕಂಟೆಕ್ಸ್ಟ್ ಮೆನ್ಯುವಿನಿಂದ,
Properties ಅನ್ನು ಆಯ್ಕೆ ಮಾಡಿ. |
08:36 | Layer Properties ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
08:40 | ನಾವು ಲೇಯರ್ ಅನ್ನು ಹೇಗೆ ಸ್ಟೈಲ್ ಮಾಡಬೇಕೆಂದರೆ, ನಿರ್ದಿಷ್ಟವಾದ ವ್ಯಾಪ್ತಿಯ ಪಿಕ್ಸೆಲ್ ವ್ಯಾಲ್ಯುಗಳು ಒಂದೇ ಬಣ್ಣವನ್ನು ಹೊಂದಿರಬೇಕು. |
08:47 | Metadata ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ, Properties ವಿಭಾಗಕ್ಕೆ ಸ್ಕ್ರೋಲ್ ಮಾಡಿ. |
08:55 | maximum ಮತ್ತು minimum ವ್ಯಾಲ್ಯುಗಳನ್ನು ಗುರುತು ಮಾಡಿಕೊಳ್ಳಿ. |
08:59 | ಗರಿಷ್ಟ ವ್ಯಾಲ್ಯುವು 6000 ಕ್ಕೆ ಹತ್ತಿರವಾಗಿದೆ. |
09:02 | ಕನಿಷ್ಟ ವ್ಯಾಲ್ಯು -2000 ಕ್ಕೆ ಸ್ವಲ್ಪ ಹೆಚ್ಚಿದೆ. |
09:06 | Style ಟ್ಯಾಬ್ ಗೆ ಹೋಗಿ,
Band Rendering ನ ಅಡಿಯಲ್ಲಿ, Singleband pseudocolor (ಸಿಂಗಲ್ ಬ್ಯಾಂಡ್ ಸ್ಯುಡೋಕಲರ್) ಅನ್ನು Render type ಎಂದು ಆಯ್ಕೆ ಮಾಡಿ. |
09:14 | Interpolation (ಇಂಟರ್ಪೋಲೇಷನ್) ಅನ್ನು Discrete ಎಂದು ಸೆಟ್ ಮಾಡಿ. |
09:19 | ಕೆಳಕ್ಕೆ ಸ್ಕ್ರೋಲ್ ಮಾಡಿ.
Add Values Manually ಬಟನ್ ಗೆ ಹೋಗಿ. |
09:25 | Classify ಬಟನ್ ನ ನಂತರ ಇರುವ ಇದು ಹಸಿರು ಬಣ್ಣದ ಚಿಹ್ನೆಯಾಗಿದೆ. |
09:31 | ನಾಲ್ಕು ಅನನ್ಯವಾದ classes ಗಳನ್ನು ರಚಿಸಲು, Add Values Manually ಬಟನ್ ಅನ್ನು 4 ಬಾರಿ ಕ್ಲಿಕ್ ಮಾಡಿ. |
09:39 | ಈ ವ್ಯಾಲ್ಯುಗಳು ಮಧ್ಯದ ಪ್ಯಾನಲ್ ನಲ್ಲಿ ಕಾಣಿಸುತ್ತದೆ. |
09:43 | ಈಗ ನೀವು ಇಲ್ಲಿ ಪ್ರತಿ ರೋ ದಲ್ಲೂ ವ್ಯಾಲ್ಯುಗಳನ್ನೂ ಬದಲಿಸಿ. |
09:47 | ಇಲ್ಲಿ ನಮೂದಿಸಿದ ವ್ಯಾಲ್ಯು ವಿಗಿಂತ ಕಡಿಮೆ ಇರುವ ಪಾಪ್ಯುಲೇಷನ್ ವ್ಯಾಲ್ಯುಗಳನ್ನು, ಆ ಎಂಟ್ರಿಯ ಬಣ್ಣದಲ್ಲಿಯೆ ಕೊಡಲಾಗುತ್ತದೆ. |
09:54 | ವ್ಯಾಲ್ಯುವನ್ನು ಬದಲಿಸಲು, Values ಕಾಲಮ್ ನ ಮೊದಲ ಎಂಟ್ರಿಯನ್ನು ಡಬಲ್ ಕ್ಲಿಕ್ ಮಾಡಿ. |
10:00 | ನಾವು ಗಮನಿಸಿದಂತೆ, ನಮ್ಮ metadata ಅನಾಲಿಸಿಸ್ ನಲ್ಲಿ ಕನಿಷ್ಟ ವ್ಯಾಲ್ಯುವು -2000 ಕ್ಕಿಂತ ಸ್ವಲ್ಪ ಜಾಸ್ತಿಯಿದೆ.
ಮೊದಲ ಎಂಟ್ರಿಯಲ್ಲಿ -2000 ಎಂದು ಟೈಪ್ ಮಾಡಿ. |
10:12 | ಕಲರ್ ಬಾಕ್ಸ್ ಅನ್ನು ಡಬಲ್ ಕ್ಲಿಕ್ ಮಾಡಿ ಮತ್ತು ಬಣ್ಣವನ್ನು ಬದಲಿಸಿ. |
10:20 | ಮೊದಲ ರೋ ದಲ್ಲಿ, Label ಕಾಲಮ್ ಅನ್ನು ಡಬಲ್ ಕ್ಲಿಕ್ ಮಾಡಿ.
No Data values ಎಂದು ಟೈಪ್ ಮಾಡಿ. |
10:28 | ಇದೇ ರೀತಿಯಾಗಿ, ಇಲ್ಲಿ ತೋರಿಸಿದಂತೆ ಎಲ್ಲಾ ವ್ಯಾಲ್ಯುಗಳನ್ನು ಮತ್ತು ಲೇಬಲ್ ಗಳನ್ನು ಭರ್ತಿ ಮಾಡಿ. |
10:33 | 2 ನೆಯ ರೋ ದಲ್ಲಿ, -10 ಇದು Negative ಬದಲಾವಣೆಯನ್ನು ಸೂಚಿಸುತ್ತದೆ. |
10:46 | 3 ನೆಯ ರೋ ದಲ್ಲಿ, 10 ಇದು Neutral ಎಂದು ಸೂಚಿಸುತ್ತದೆ. |
10:59 | ಕೊನೆಯದಾಗಿ, 6000 ಇದು Positive ಬದಲಾವಣೆಯನ್ನು ಸೂಚಿಸುತ್ತದೆ. |
11:03 | ಏಕೆಂದರೆ, ನಮ್ಮ ಮೆಟಾ ಡಾಟಾ ಅನಾಲಿಸಿಸ್ ನ ಗರಿಷ್ಟ ವ್ಯಾಲ್ಯುವು, 6000 ಕ್ಕೆ ಹತ್ತಿರವಾಗಿದೆ. |
11:23 | ವಿಂಡೋದ ಕೆಳ ಬಲ ಮೂಲೆಯಲ್ಲಿರುವ Apply ಬಟನ್ ಅನ್ನು ಕ್ಲಿಕ್ ಮಾಡಿ , ನಂತರ OK ಬಟನ್ ಅನ್ನು ಕ್ಲಿಕ್ ಮಾಡಿ. |
11:30 | ಈಗ ನೀವು ಇನ್ನೂ ಸುಧಾರಿತ ದೃಶ್ಯಗಳನ್ನೊಳಗೊಂಡ ಪಾಪ್ಯುಲೇಷನ್ ಡಾಟಾವನ್ನು ಕ್ಯಾನ್ವಾಸ್ ನ ಮೇಲೆ ನೋಡಬಹುದು. |
11:37 | ಇಲ್ಲಿ ನೀವು ಜನಸಂಖ್ಯಾ ಸಾಂದ್ರತೆಯಲ್ಲಿ, ಋಣಾತ್ಮಕ ಮತ್ತು ಧನಾತ್ಮಕ ಬದಲಾವಣೆಯನ್ನು ಹೊಂದಿದ ಪ್ರದೇಶಗಳನ್ನು ಸ್ಪಷ್ಟವಾಗಿ ನೋಡಬಹುದು. |
11:46 | ನೀಲಿಬಣ್ಣದಿಂದ ಗುರುತಿಸಲ್ಪಟ್ಟ ಪ್ರದೇಶಗಳು, ಧನಾತ್ಮಕ ಬದಲಾವಣೆಯನ್ನು ಸೂಚಿಸುತ್ತವೆ. |
11:52 | ಹಸಿರು ಬಣ್ಣದ ಪ್ರದೇಶಗಳು , ಋಣಾತ್ಮಕ ಬದಲಾವಣೆಯನ್ನು ಸೂಚಿಸುತ್ತವೆ. |
11:56 | ಗುಲಾಬಿ ಬಣ್ಣದಲ್ಲಿರುವ ಪ್ರದೇಶಗಳು ಜನಸಂಖ್ಯೆಯಲ್ಲಿ ಹೆಚ್ಚು ಬದಲಾವಣೆ ಹೊಂದಿರದ ಪ್ರದೇಶಗಳಾಗಿವೆ. |
12:02 | ಸಂಕ್ಷಿಪ್ತವಾಗಿ, |
12:04 | ಈ ಟ್ಯುಟೋರಿಯಲ್ ನಲ್ಲಿ ನಾವು, ನಿರಂತರವಾದ raster ಅನ್ನು ಸ್ಟೈಲ್ ಮಾಡುವುದು,
Raster Calculator (ರ್ಯಾಸ್ಟರ್ ಕ್ಯಾಲ್ಕ್ಯುಲೇಟರ್ ) ನಲ್ಲಿ ಸಮೀಕರಣಗಳನ್ನು ಬರೆಯುವುದು ಮತ್ತು raster ನ ಗುಣಲಕ್ಷಣಗಳ ಕುರಿತು ಕಲಿತಿದ್ದೇವೆ. |
12:17 | ಅಸೈನ್ಮೆಂಟ್ :
Code files ಲಿಂಕ್ ನಲ್ಲಿ ಕೊಟ್ಟಿರುವ ಪಾಪ್ಯುಲೇಷನ್ ಡಾಟಾವನ್ನು ಬಳಸಿ, ಕೇವಲ ಜನಸಂಖ್ಯೆಯ ಋಣಾತ್ಮಕ ಬದಲಾವಣೆಯನ್ನು ತೋರಿಸುವ ಒಂದು ರ್ಯಾಸ್ಟರ್ ಫೈಲ್ ಅನ್ನು ರಚಿಸಿ. |
12:28 | ಸುಳಿವು: Raster Calculator ಅನ್ನು ಬಳಸಿ, 0 ಗಿಂತ ಕಡಿಮೆ ಇರುವ ಜನಸಂಖ್ಯೆಯ ಬದಲಾವಣೆಯನ್ನು ಆಯ್ಕೆ ಮಾಡಲು ಒಂದು ಸೂತ್ರವನ್ನು ಬರೆದುಕೊಳ್ಳಿ. ’ |
12:36 | ನಿಮ್ಮ ಪೂರ್ಣಗೊಂಡ ಅಸೈನ್ ಮೆಂಟ್ ಈ ರೀತಿಯಾಗಿ ಕಾಣಬೇಕು. |
12:41 | ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.
ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
12:49 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
13:00 | ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.
ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. |
13:04 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.
ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ. |
13:16 | ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು. |