QGIS/C2/Installation-of-QGIS/Kannada

From Script | Spoken-Tutorial
Jump to: navigation, search
TIme Narration
00:01 QGIS ಇನ್ಸ್ಟಾಲೆಶನ್ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸುಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು 'QGIS' ಅನ್ನು

Ubuntu Linux

00:15 Windows ಮತ್ತು Mac ಒಪರೇಟಿಂಗ್ ಸಿಸ್ಟಮ್ ಗಳಲ್ಲಿ ಇನ್ಸ್ಟಾಲ್ ಮಾಡಲು ಕಲಿಯುವೆವು.
00:20 ಇನ್ಸ್ಟಾಲೆಶನ್ ಮಾಡಲು ನಾನು

Ubuntu Linux version 16.04

00:28 Windows 10
00:30 Mac OS X 10.10 ಮತ್ತು
00:33 ಸಕ್ರಿಯ Internet ಸಂಪರ್ಕಗಳನ್ನು ಬಳಸುತ್ತಿದ್ದೇನೆ.
00:36 Ctrl, Alt ಮತ್ತು T ಕೀಗಳನ್ನು ಏಕಕಾಲದಲ್ಲಿ ಒತ್ತಿ ಟರ್ಮಿನಲ್ ತೆರೆಯಿರಿ.
00:43 ಪ್ರೊಮ್ಟ್ ನಲ್ಲಿ sudo space su ಎಂದು ಟೈಪ್ ಮಾಡಿ Enter ಒತ್ತಿರಿ.
00:52 ನಿಮ್ಮ 'ಸಿಸ್ಟಮ್ ಪಾಸ್ವರ್ಡ್' ಅನ್ನು ನಮೂದಿಸಲು ನಿಮ್ಮನ್ನು ಕೇಳುವ ಸಂದೇಶವು ಕಾಣಿಸಿಕೊಳ್ಳುತ್ತದೆ.
00:58 password ಅನ್ನು ಟೈಪ್ ಮಾಡಿ ಮತ್ತು Enter ಒತ್ತಿರಿ.
01:02 ಈಗ ನಾವು ಇನ್ಸ್ಟಾಲೇಶನ್ ಗಾಗಿ ಕೆಲವು ಕಮಾಂಡ್ ಗಳನ್ನು ಕಾರ್ಯಗತಗೊಳಿಸಬೇಕಾಗಿದೆ.
01:08 ಇಲ್ಲಿ ನಾನು ಅಗತ್ಯವಾದ ಕಮಾಂಡ್ ಗಳ ಪಟ್ಟಿಯೊಂದಿಗೆ ಫೈಲ್ ಅನ್ನು ಹೊಂದಿದ್ದೇನೆ.
01:13 ಈ ಫೈಲ್ ಅನ್ನು Code files link ನಲ್ಲಿ QGIS Installation Repositories ಎಂಬ ಹೆಸರಿನೊಂದಿಗೆ ಒದಗಿಸಲಾಗಿದೆ.
01:21 ಈಗ QGIS repositories ಗಳನ್ನು sources.list ಫೈಲ್ಗೆ ಸೇರಿಸೋಣ.
01:28 ಕೆಳಗಿನ ಕಮಾಂಡ್ ಗಳನ್ನು Ctrl C ಒತ್ತುವ ಮೂಲಕ ಕೊಪಿ ಮಾಡಿ.
01:34 terminal promptನಲ್ಲಿ, ರೈಟ್ ಕ್ಲಿಕ್ ಮಾಡಿ, ಪೇಸ್ಟ್ ಮಾಡಿ.

ಮತ್ತು Enterಅನ್ನು ಒತ್ತಿರಿ.

01:43 Gedit editor ಇದು sources.list ಫೈಲ್ ನೊಂದಿಗೆ ತೆರೆಯುತ್ತದೆ.
01:48 QGIS Installation Repositories ಫೈಲ್ ಗೆ ಮರಳಿ.
01:53 ಈಗ source.list ಫೈಲ್ನ ಕೊನೆಯಲ್ಲಿ ಇಲ್ಲಿ ಹೈಲೈಟ್ ಮಾಡಿದ ಎರಡು ಸಾಲುಗಳನ್ನು ಸೇರಿಸಿ.
02:00 ಇಲ್ಲಿ ತೋರಿಸಿದ ಎರಡು ಲೈನ್ ಗಳನ್ನು ಕೊಪಿ ಮಾಡಿ.
02:04 Sources.list ಫೈಲ್ನ ಕೊನೆಯಲ್ಲಿ ಪೇಸ್ಟ್ ಮಾಡಿ.
02:09 ಸೇವ್ ಮಾಡಲು Ctrl S ಉಪಯೋಗಿಸಿ.
02:13 ನಿಮ್ಮ ವಿಂಡೋದ ಮೇಲಿನ ಎಡ ಮೂಲೆಯಲ್ಲಿರುವ ಕ್ರೊಸ್ ಅನ್ನು ಕ್ಲಿಕ್ ಮಾಡುವ ಮೂಲಕ ಈಗ ಈ ಫೈಲ್ ಅನ್ನು ಮುಚ್ಚಿ.
02:20 ಟರ್ಮಿನಲ್ ಪ್ರೊಮ್ಟ್ ನಲ್ಲಿ sudo space apt-get space update ಎಂದು ಟೈಪ್ ಮಾಡಿ Enter ಒತ್ತಿರಿ.
02:32 ಈ ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಅಪ್ಡೇಟ್ ಈಗ ಪೂರ್ಣಗೊಂಡಿದೆ.
02:39 ಈ ಸಮಯದಲ್ಲಿ ನಾವು ಇನ್ನೂ ಕೆಲವು ಕಮಾಂಡ್ ಗಳನ್ನು ಕಾರ್ಯಗತಗೊಳಿಸಬೇಕಾಗಿದೆ.
02:44 ಅದಕ್ಕಾಗಿ QGIS Installation Repositories ಫೈಲ್ ಗೆ ಮರಳಿ.
02:49 ಕೆಳಗಿನ ಮೂರು ಕಮಾಂಡ್ ಗಳನ್ನು ಇಲ್ಲಿ ತೋರಿಸಲಾಗಿದೆ.
02:53 ನಾವು ಅವುಗಳನ್ನು ಒಂದೊಂದಾಗಿ ಕಾರ್ಯಗತಗೊಳಿಸಬೇಕಾಗಿದೆ.
02:57 ಒಂದು ಸಮಯದಲ್ಲಿ ಒಂದು ಕಮಾಂಡ್ ಅನ್ನು ಕೊಪಿ ಮಾಡಿ ಮತ್ತು ಅವುಗಳನ್ನು ಟರ್ಮಿನಲ್ ನಲ್ಲಿ ಅಂಟಿಸಿ.
03:03 ಪ್ರತಿ ಕಮಾಂಡ್ ಅನ್ನು 'ಪ್ರಾಂಪ್ಟ್' ನಲ್ಲಿ ಪೇಸ್ಟ್ ಮಾಡಿದ ನಂತರ Enterಒತ್ತಿರಿ.
03:27 ಮೂರನೇ ಕಮಾಂಡ್ ಅನ್ನು ಕಾರ್ಯಗತಗೊಳಿಸಿದ ನಂತರ, ನೀವು OK ಸಂದೇಶವನ್ನು ನೋಡುತ್ತೀರಿ.
03:32 ಈಗ QGIS Installation Repositories file ನಿಂದ ಕೊನೆಯ ಕಮಾಂಡ್ ಅನ್ನು ಕಾರ್ಯಗತಗೊಳಿಸಿ.

ಕೆಳಗಿನ ಕಮಾಂಡ್ ಗಳನ್ನು ಕೊಪಿ ಮಾಡಿ.

03:41 ಅದನ್ನು ಟರ್ಮಿನಲ್ ಪ್ರೊಮ್ಟ್ ನಲ್ಲಿ ಪೇಸ್ಟ್ ಮಾಡಿ Enter ಒತ್ತಿರಿ.
03:47 ಮುಂದುವರಿಯಲು Y ಒತ್ತಿ Enter ಅನ್ನು ಒತ್ತಿರಿ.
03:53 ಈ ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
03:57 ಇನ್ಸ್ಟಾಲೇಶನ್ ಈಗ ಸಮಾಪ್ತಿಯಾಗಿದೆ.
04:01 ನಿಮ್ಮ ಕೀಬೋರ್ಡ್ನಲ್ಲಿ ವಿಂಡೋಸ್ಕೀಯನ್ನು ಒತ್ತಿ ಮತ್ತು ಸರ್ಚ್ ಬಾರ್ ನಲ್ಲಿ QGIS ಎಂದು ಟೈಪ್ ಮಾಡಿ.
04:09 ನೀವು QGIS Desktop Application ಅನ್ನು ನೋಡಲು ಸಾಧ್ಯವಾಗುತ್ತದೆ.

QGIS ಅನ್ನು ತೆರೆಯಲು ಇದರಮೇಲೆ ಕ್ಲಿಕ್ ಮಾಡಿ.

04:18 ಇದೇ QGIS interface ಆಗಿದೆ.
04:22 ಈಗ ನಾವು ವಿಂಡೋಸ್ ನಲ್ಲಿ QGIS ನ ಇನ್ಸ್ಟಾಲೇಶನ್ ಗೆ ಹೋಗೋಣ.
04:27 QGIS Installation Repositories ಫೈಲ್ ಗೆ ಮರಳಿ. ಕೆಳಗಿನ ಲಿಂಕ್ ಅನ್ನು ಕೊಪಿ ಮಾಡಿ.
04:35 ನಿಮ್ಮ ಸಿಸ್ಟಂನಲ್ಲಿ ಯಾವುದೇ ವೆಬ್ ಬ್ರೌಸರ್ ತೆರೆಯಿರಿ. ನಾನು 'Chrome' 'ಅನ್ನು ತೆರೆಯುತ್ತಿದ್ದೇನೆ.
04:42 ಕೊಪಿ ಮಾಡಿದ ಲಿಂಕ್ ಅನ್ನು ವೆಬ್ ಬ್ರೌಸರ್ನಲ್ಲಿ ಪೇಸ್ಟ್ಮಾಡಿ ಮತ್ತು Enter ಒತ್ತಿರಿ.
04:49 ಈ ದೋಷ ಸಂದೇಶವನ್ನು ನಿರ್ಲಕ್ಷಿಸಿ ಮತ್ತು OK ಯನ್ನುಕ್ಲಿಕ್ ಮಾಡಿ.
04:55 Long term release repository most stable ಸೆಕ್ಶನ್ ಗೆ ಸ್ಕ್ರೋಲ್ ಡೌನ್ ಮಾಡಿ.
05:01 ನಿಮ್ಮ ಸಿಸ್ಟಂ ಪ್ರಕಾರ 64 ಬಿಟ್ ಅಥವಾ 32 ಬಿಟ್ ನಡುವೆ ಸೂಕ್ತವಾದ ಸೆಟಪ್ ಆಯ್ಕೆಮಾಡಿ.
05:09 setupನ ಎಡಭಾಗದಲ್ಲಿರುವ Download icon ಮೇಲೆ ಕ್ಲಿಕ್ ಮಾಡಿ.
05:16 ನಿಮ್ಮ 'ಇಂಟರ್ನೆಟ್' ವೇಗವನ್ನು ಅವಲಂಬಿಸಿ ಇನ್ಸ್ಟಾಲರ್ ಫೈಲ್ ಡೌನ್ಲೋಡ್ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
05:23 ನಾನು ಈಗಾಗಲೇ ಈ setup ಫೈಲ್ ಅನ್ನು ಡೌನ್ಲೋಡ್ ಮಾಡಿದ್ದೇನೆ ಮತ್ತು ಅದನ್ನು Downloads folder ನಲ್ಲಿ ಸೇವ್ ಮಾಡಿದ್ದೇನೆ.
05:30 ಈಗ ನಾವು Downloads folder ಗೆ ನೆವಿಗೇಟ್ ಮಾಡೋಣ.
05:34 task bar ನಲ್ಲಿ ಲಭ್ಯವಿರುವ search ಬೊಕ್ಸ್ ನಲ್ಲಿ, downloadsಎಂದು ಟೈಪ್ ಮಾಡಿ.
05:40 Downloads ಒಪ್ಶನ್ ಮೇಲೆ ಕ್ಲಿಕ್ ಮಾಡಿ.
05:43 Downloads ಫೋಲ್ಡರ್ ತೆರೆಯುತ್ತದೆ.
05:46 QGIS installer file ಅನ್ನು ಕಾಣುವಿರಿ.
05:50 ಇನ್ಸ್ಟಾಲೇಶನ್ ಅನ್ನು ಆರಂಭಿಸಲು ಅದರ ಮೇಲೆ ಡಬಲ್ ಕ್ಲಿಕ್ ಮಾಡಿ.
05:55 ನಿಮ್ಮ ಸಿಸ್ಟಮ್ ನಲ್ಲಿ ಒಂದು ಡೈಲಾಗ್ ಬೊಕ್ಸ್ ತೆರೆದುಕೊಳ್ಳುತ್ತದೆ.

ಮುಂದುವರೆಯಲು Yes ಅನ್ನು ಕ್ಲಿಕ್ ಮಾಡಿ.

06:02 Installation Wizard ತೆರೆದುಕೊಳ್ಳುತ್ತದೆ.
06:05 ಸೂಚನೆಗಳನ್ನು ಓದಿ ಮತ್ತು Next ಬಟನ್ ಕ್ಲಿಕ್ ಮಾಡಿ.
06:10 software license agreement ಪೇಜ್ ನಲ್ಲಿ , I Agree ಬಟನ್ ಅನ್ನು ಒತ್ತಿ.
06:16 ಸಾಫ್ಟ್ವೇರ್ ಅನ್ನು ಎಲ್ಲಿ ಸ್ಥಾಪಿಸಬೇಕು ಎಂಬುದನ್ನು ಆರಿಸಿ, ಖಚಿತವಾಗಿಲ್ಲದಿದ್ದರೆ ಡೀಫಾಲ್ಟ್ ಸ್ಥಳವನ್ನು ಬಿಡಿ.
06:24 ಇನ್ಸ್ಟಾಲೆಶನ್ ಗೆ ನೀವು ಯಾವುದೇ ಹೆಚ್ಚುವರಿ ಅಂಶಗಳನ್ನು ಆಯ್ಕೆ ಮಾಡಬೇಕಾಗಿಲ್ಲ, QGIS ನೊಂದಿಗೆ ಮುಂದುವರಿಯಿರಿ.
06:32 Install ಬಟನ್ ಅನ್ನು ಕ್ಲಿಕ್ ಮಾಡಿ.
06:35 ಇನ್ಸ್ಟಾಲೆಶನ್ ಗೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
06:40 ಒಮ್ಮೆ ಮಾಡಿದ ನಂತರ, ಇನ್ಸ್ಟಾಲೆಶನ್ ಪೂರ್ಣಗೊಳಿಸಲು Finish ಬಟನ್ ಕ್ಲಿಕ್ ಮಾಡಿ.

QGIS ನಿಮ್ಮ ಸಿಸ್ಟಮ್ ನಲ್ಲಿ ಇನ್ಸ್ಟಾಲ್ ಆಗುತ್ತದೆ.

06:51 ಟಾಸ್ಕ್ ಬಾರ್ನಲ್ಲಿ ಲಭ್ಯವಿರುವ ಸರ್ಚ್ ಬಾರ್ ನಲ್ಲಿ, QGIS ಎಂದು ಟೈಪ್ ಮಾಡಿ.
06:57 ಪಟ್ಟಿಯಲ್ಲಿ, ನೀವು QGIS Desktop Application ಅನ್ನು ನೋಡಲು ಸಾಧ್ಯವಾಗುತ್ತದೆ.
07:04 QGIS ಅನ್ನು ತೆರೆಯಲು ಇದರ ಮೇಲೆ ಕ್ಲಿಕ್ ಮಾಡಿ.
07:09 ಇದುವೇ QGIS interface ಆಗಿದೆ.
07:13 ಈಗ ನಾವು Mac OS ನಲ್ಲಿ QGIS ಸ್ಥಾಪನೆಗೆ ಹೋಗೋಣ.
07:19 ನಾವು ಈ ಹಿಂದೆ ತೆರೆದ QGIS ಡೌನ್ಲೋಡ್ ವೆಬ್ ಪೇಜ್ ಗೆ ಹಿಂತಿರುಗಿ.
07:25 Mac OS X ಟ್ಯಾಬ್ಗಾಗಿ Download ತೆರೆಯಿರಿ.
07:29 Long term release most stable ವಿಭಾಗಕ್ಕೆ ಕೆಳಗೆ ಸ್ಕ್ರಾಲ್ ಮಾಡಿ.
07:34 ಆಯಾ setup ಫೈಲ್ನ ಎಡಭಾಗದಲ್ಲಿ ನೀಡಲಾದ download icon ಕ್ಲಿಕ್ ಮಾಡಿ.
07:40 ಒಂದು ಡೈಲಾಗ್ ಬೊಕ್ಸ್ ತೆರೆಯುತ್ತದೆ.
07:43 ಡೀಫಾಲ್ಟ್ ಫೈಲ್ ಹೆಸರನ್ನು ಬದಲಾಯಿಸುವುದು ಬೇಡ.
07:47 ಈ ಫೈಲ್ ಅನ್ನು ಸೇವ್ ಮಾಡಲು Downloads ಫೋಲ್ಡರ್ ಅನ್ನು ಸ್ಥಳವಾಗಿ ಆರಿಸಿ.
07:52 Save ಬಟನ್ ಮೇಲೆ ಕ್ಲಿಕ್ ಮಾಡಿ.
07:55 ನಿಮ್ಮ ಇಂಟರ್ನೆಟ್ ವೇಗವನ್ನು ಅವಲಂಬಿಸಿ ಇನ್ಸ್ಟಾಲರ್ ಫೈಲ್ ಡೌನ್ಲೋಡ್ ಆಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
08:02 ನಾನು ಈಗಾಗಲೇ ಈ ಸೆಟಪ್ ಫೈಲ್ ಅನ್ನು ಡೌನ್ಲೋಡ್ ಮಾಡಿದ್ದೇನೆ ಮತ್ತು ಅದನ್ನು Downloads ಫೋಲ್ಡರ್ ನಲ್ಲಿ ಸೇವ್ ಮಾಡಿದ್ದೇನೆ.
08:08 ಈಗ Downloads ಫೋಲ್ಡರ್ ಗೆ ಹೋಗೋಣ.
08:12 ಸ್ಕ್ರೀನ್ ನ ಮೇಲಿನ ಬಲ ಮೂಲೆಯಲ್ಲಿರುವ search ಐಕಾನ್ ಕ್ಲಿಕ್ ಮಾಡಿ.
08:18 Downloads ಎಂದು ಟೈಪ್ ಮಾಡಿ, Downloads ಫೋಲ್ಡರ್ ಆಯ್ಕೆಯ ಮೇಲೆ ಡಬಲ್ ಕ್ಲಿಕ್ ಮಾಡಿ.
08:25 QGIS Installer ಫೈಲ್ ಅನ್ನು ಹುಡುಕಿ, ಇನ್ಸ್ಟಾಲೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅದರ ಮೇಲೆ ಕ್ಲಿಕ್ ಮಾಡಿ.
08:33 ಸೆಟಪ್ ಫೋಲ್ಡರ್ ಅನೇಕ ಫೈಲ್ಗಳೊಂದಿಗೆ ತೆರೆಯುತ್ತದೆ.
08:37 ನಾಲ್ಕು ಪ್ಯಾಕೇಜ್ ಗಳಿವೆ, ಪ್ರತಿಯೊಂದೂ ಒಂದು ಸಂಖ್ಯೆಯಿಂದ ಪ್ರಾರಂಭವಾಗುತ್ತದೆ.
08:42 ಪ್ಯಾಕೇಜಸ್ ಗಳನ್ನು ಸ್ಥಾಪಿಸುವ ಆದೇಶವನ್ನು ಇದು ನಿಮಗೆ ತಿಳಿಸುತ್ತದೆ.
08:46 ಆಪಲ್ ಅಲ್ಲದ ಡೆವಲಪರ್ ಮಾನ್ಯತೆ ಪಡೆದ ಸಾಫ್ಟ್ವೇರ್ ಸ್ಥಾಪನೆಗೆ ಅನುಮತಿಸಲು,

ಮೊದಲು ನಿಮ್ಮ Mac Security Preferences ಅನ್ನು Allow apps downloaded from: Anywhere ಗೆ ಬದಲಾಯಿಸಿ.

08:58 ಪರದೆಯ ಮೇಲಿನ ಬಲ ಮೂಲೆಯಲ್ಲಿರುವ search icon ಕ್ಲಿಕ್ ಮಾಡಿ. System Preferences ಅನ್ನು ಟೈಪ್ ಮಾಡಿ Enter ಒತ್ತಿರಿ.
09:09 system preferences ನೊಂದಿಗೆ ಒಂದು ವಿಂಡೋ ತೆರೆದುಕೊಳ್ಳುತ್ತದೆ.
09:13 Security & Privacy ಮೇಲೆ ಕ್ಲಿಕ್ ಮಾಡಿ.
09:17 Security & Privacy ವಿಂಡೋದಿಂದ, General ಟ್ಯಾಬ್ನಲ್ಲಿ. ಬದಲಾವಣೆಗಳನ್ನು ಅನುಮತಿಸಲು ಕೆಳಗಿನ ಎಡ ಮೂಲೆಯಲ್ಲಿರುವ ಲಾಕ್ ಐಕಾನ್ ಕ್ಲಿಕ್ ಮಾಡಿ.
09:28 ಡೈಲಾಗ್ ಬೊಕ್ಸ್ ನಲ್ಲಿ system password ಅನ್ನು ಕೊಡಿ.
09:32 ನಂತರ Unlock ಬಟನ್ ಅನ್ನು ಕ್ಲಿಕ್ ಮಾಡಿ.
09:35 Allow apps downloaded from ವಿಭಾಗದಲ್ಲಿ , Anywhere ರೇಡಿಯೋ ಬಟನ್ ಕ್ಲಿಕ್ ಮಾಡಿ.
09:42 ಒಂದು ಡೈಲಾಗ್ ಬೊಕ್ಸ್ ತೆರೆದುಕೊಳ್ಳುತ್ತದೆ, Allow from anywhere ಬಟನ್ ಮೇಲೆ ಕ್ಲಿಕ್ ಮಾಡಿ.
09:49 ಸೆಟ್ಟಿಂಗ್ಗಳನ್ನು ಲಾಕ್ ಮಾಡಲು ಕೆಳಗಿನ ಎಡ ಮೂಲೆಯಲ್ಲಿ ತೆರೆದ ಲಾಕ್ ಐಕಾನ್ ಕ್ಲಿಕ್ ಮಾಡಿ.
09:55 ವಿಂಡೋ ವನ್ನು ಕ್ಲೋಸ್ ಮಾಡಿ.
09:57 ಈಗ ಸೆಟಪ್ ಫೋಲ್ಡರ್ಗೆ ಹೋಗಿ ಮತ್ತು ಪ್ಯಾಕೇಜ್ ಸಂಖ್ಯೆ 1 ಮೇಲೆ ಡಬಲ್ ಕ್ಲಿಕ್ ಮಾಡಿ.
10:03 Installation wizard ನಲ್ಲಿನ ಸೂಚನೆಗಳನ್ನು ಅನುಸರಿಸಿ ಮತ್ತು ಪ್ಯಾಕೇಜ್ಅನ್ನು ಇನ್ಸ್ಟಾಲ್ ಮಾಡಿ.
10:09 Continue ಮೇಲೆ ಕ್ಲಿಕ್ ಮಾಡಿ.
10:12 ನೀಡಿರುವ ಪ್ರಮುಖ ಸೂಚನೆಗಳನ್ನು ಓದಿ ಮತ್ತು Continue ಅನ್ನು ಕ್ಲಿಕ್ ಮಾಡಿ.
10:17 license agreement ಅನ್ನು ಓದಿ Continue ಮೇಲೆ ಕ್ಲಿಕ್ ಮಾಡಿ.
10:22 ತೆರೆದ ಡೈಲಾಗ್ ಬೊಕ್ಸ್ನಲ್ಲಿನ Agree ಗುಂಡಿಯನ್ನು ಕ್ಲಿಕ್ ಮಾಡುವುದರ ಮೂಲಕ software license agreement ಅನ್ನು ಒಪ್ಪಿಕೊಳ್ಳಿ.
10:30 install ಮೇಲೆ ಕ್ಲಿಕ್ ಮಾಡಿ.
10:33 ತೆರೆದ ಡೈಲಾಗ್ ಬೊಕ್ಸ್ ನಲ್ಲಿ system password ಅನ್ನು ಟೈಪ್ ಮಾಡಿ.
10:38 ಮತ್ತು Install Software ಬಟನ್ ಅನ್ನು ಕ್ಲಿಕ್ ಮಾಡಿ.
10:45 ಇನ್ಸ್ಟಾಲೇಶನ್ ಪೂರ್ಣಗೊಂಡ ನಂತರ, Close ಬಟನ್ ಕ್ಲಿಕ್ ಮಾಡಿ.
10:50 ಪ್ಯಾಕೇಜ್ ಸಂಖ್ಯೆಗಳು 2,3 ಮತ್ತು 4 ಗಾಗಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.
11:19 ಎಲ್ಲಾ ನಾಲ್ಕು ಪ್ಯಾಕೇಜ್ಗಳ ಇನ್ಸ್ಟಾಲೇಶನ್ ಪೂರ್ಣಗೊಂಡ ನಂತರ, QGIS ಅನ್ನು ನಿಮ್ಮ ಸಿಸ್ಟಂನಲ್ಲಿ ಇನ್ಸ್ಟಾಲ್ ಮಾಡಲಾಗುವುದು.
11:27 ಸರ್ಚ್ ಐಕಾನ್ ಮೇಲೆ ಕ್ಲಿಕ್ ಮಾಡಿ. QGIS ಎಂದು ಟೈಪ್ ಮಾಡಿ.
11:33 QGIS ಅನ್ನು ಪ್ರಾರಂಭಿಸಲು QGIS ಅಪ್ಲಿಕೇಶನ್ ಮೇಲೆ ಡಬಲ್ ಕ್ಲಿಕ್ ಮಾಡಿ.
11:39 ಇಲ್ಲಿ QGIS ಇಂಟರ್ಫೇಸ್ ಇದೆ.
11:43 ಮುಂಬರುವ ಟ್ಯುಟೋರಿಯಲ್ಗಳಲ್ಲಿ ಇಂಟರ್ಫೇಸ್ ಮತ್ತು ವೈಶಿಷ್ಟ್ಯಗಳ ಕುರಿತು ಹೆಚ್ಚಿನ ಮಾಹಿತಿ ಇದೆ.
11:51 ನಾವು ಸಂಕ್ಷಿಪ್ತವಾಗಿ ಹೇಳೋಣ. ಈ ಟ್ಯುಟೋರಿಯಲ್ ನಲ್ಲಿ, ನಾವು:
11:57 QGIS ಆವೃತ್ತಿ 2.18 ಅನ್ನು, ಉಬುಂಟು ಲಿನಕ್ಸ್ ಆವೃತ್ತಿ 16.04, ವಿಂಡೋಸ್ 10 ಮತ್ತು ಮ್ಯಾಕ್ ಒಎಸ್ ಎಕ್ಸ್10.10 ನಲ್ಲಿ ಇನ್ಸ್ಟಾಲ್ ಮಾಡಲು ಕಲಿತಿದ್ದೇವೆ.
12:11 ಪಾಠನಿಯೋಜನೆಯಾಗಿ,

ನಿಮ್ಮ ಗಣಕಯಂತ್ರದಲ್ಲಿ QGIS ಅನ್ನು ಸ್ಥಾಪಿಸಿ.

12:17 QGIS ಇಂಟರ್ಫೇಸ್ ಅನ್ನುತೆರೆಯಿರಿ ಮತ್ತು ಅನ್ವೇಷಿಸಿ.
12:21 ಮೆನ್ಯೂಗಳು ಮತ್ತು ಟೂಲ್ಬಾರ್ಗಳ ಮೂಲಕ ಹೋಗಿ.
12:25 ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.

ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.

12:34 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.

ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

12:48 ಈ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ನೀವು ಪ್ರಶ್ನೆಗಳನ್ನು ಹೊಂದಿದ್ದೀರಾ?

ದಯವಿಟ್ಟು ಈ ವೆಬ್ಸೈಟ್ಗೆ ಭೇಟಿ ನೀಡಿ.

12:55 ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದ ಯಾರಾದರೂ ಅವರಿಗೆ ಉತ್ತರಿಸುತ್ತಾರೆ.

13:07 ಈ ಟ್ಯುಟೋರಿಯಲ್ ನಲ್ಲಿ ನಿರ್ದಿಷ್ಟ ಪ್ರಶ್ನೆಗಳಿಗಾಗಿ ಸ್ಪೋಕನ್ ಟ್ಯುಟೋರಿಯಲ್ ಫೋರಮ್ ಆಗಿದೆ.
13:13 ದಯವಿಟ್ಟು ಅವುಗಳಿಗೆ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ.

ಇದು ಗೊಂದಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

13:21 ಕಡಿಮೆ ಗೊಂದಲದಿಂದ, ನಾವು ಈ ಚರ್ಚೆಗಳನ್ನು ಕಲಿಕಾ ವಸ್ತುವಾಗಿ ಬಳಸಬಹುದು.
13:27 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.

ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ.


13:40 ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

NaveenBhat