QGIS/C2/Importing-Spreadsheets/Kannada

From Script | Spoken-Tutorial
Jump to: navigation, search
Time Narration
00:01 QGIS ನಲ್ಲಿ Importing spreadsheets ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ,
00:10 Point Layer' ಅನ್ನು ರಚಿಸಲು, CSV ಫಾರ್ಮ್ಯಾಟ್ ನಲ್ಲಿ ಸ್ಪ್ರೆಡ್ ಶೀಟ್ ಗಳನ್ನು ಇಂಪೋರ್ಟ್ ಮಾಡುವುದು,
00:16 Point Layer (ಪಾಯಿಂಟ್ ಲೇಯರ್) ಅನ್ನು Polyline Layer(ಪಾಲಿಲೈನ್ ಲೇಯರ್) ಆಗಿ ಪರಿವರ್ತಿಸುವುದು,
00:20 QGIS ನಲ್ಲಿ, WMS (ವೆಬ್ ಮ್ಯಾಪ್ ಸರ್ವಿಸ್) ಲೇಯರ್ ಅನ್ನು ಲೋಡ್ ಮಾಡುವುದು – ಇವುಗಳ ಕುರಿತು ಕಲಿಯುವೆವು.
00:25 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,

Ubuntu Linux ಒ.ಎಸ್. 16.04 ಆವೃತ್ತಿ,

00:32 QGIS 2.18 ಆವೃತ್ತಿಗಳನ್ನು ಬಳಸುತ್ತಿದ್ದೇನೆ.
00:36 ಮತ್ತು ಇಂಟರ್ನೆಟ್ ಸಂಪರ್ಕ ಬೇಕು.
00:39 ಈ ಟ್ಯುಟೊರಿಯಲ್ ಅನ್ನು ಕಲಿಯಲು ನೀವು QGIS ಇಂಟರ್ಫೇಸ್ ನ ಕುರಿತು ಕಲಿತಿರಬೇಕು.
00:47 ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ, ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ.
00:52 ಸಾಮಾನ್ಯವಾಗಿ, GIS ಡಾಟಾವು ಟೇಬಲ್ ಅಥವಾ ಸ್ಪ್ರೆಡ್ಶೀಟ್ ಫಾರ್ಮ್ಯಾಟ್ ನಲ್ಲಿ ಲಭ್ಯವಿರುತ್ತದೆ.
00:59 ಸ್ಪ್ರೆಡ್ಶೀಟ್ ನಲ್ಲಿರುವ ಡಾಟಾ ವನ್ನು QGIS ಗೆ ಇಂಪೋರ್ಟ್ ಮಾಡಿಕೊಳ್ಳಬಹುದು.
01:05 ಡಾಟಾ ಫೈಲ್, X ಮತ್ತು Y coordinates ಗಳನ್ನೊಳಗೊಂಡ, ಎರಡು ಕಾಲಮ್ ಗಳನ್ನು ಹೊಂದಿರಲೇ ಬೇಕು.
01:12 ಈ ಟ್ಯುಟೋರಿಯಲ್ ಅನ್ನು ಅಭ್ಯಸ ಮಾಡಲು, ನೀವು ಈ ಪ್ಲೇಯರ್ ನ ಕೆಳಗಡೆ ಇರುವ Code files ಲಿಂಕ್ನಲ್ಲಿರುವ, ಫೋಲ್ಡರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
01:21 ಡೌನ್ಲೋಡ್ ಮಾಡಿಕೊಂಡಿರುವ ಝಿಪ್ ಫೈಲ್ ನಿಂದ, ಕಂಟೆಂಟ್ ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿಕೊಳ್ಳಿ.
01:25 ಎಕ್ಸ್ಟ್ರ್ಯಾಕ್ಟ್ ಮಾಡಿದ ಫೋಲ್ಡರ್ ನಲ್ಲಿ Places.txt ಮತ್ತು Places.csv ಫೈಲ್ ಗಳನ್ನು ಲೊಕೇಟ್ ಮಾಡಿ.
01:33 ನಾನು ಈಗಾಗಲೇ code file ಅನ್ನು ಡೌನ್ಲೋಡ್ ಮಾಡಿ, ಎಕ್ಸ್ಟ್ರ್ಯಾಕ್ಟ್ ಮಾಡಿ, Desktop ನಲ್ಲಿ ಸೇವ್ ಮಾಡಿದ್ದೇನೆ.
01:41 ನಾನು Code files ಫೋಲ್ಡರ್ ನ ಮೇಲೆ ಡಬಲ್ ಕ್ಲಿಕ್ ಮಾಡಿ, ಅದರ ಕಂಟೆಂಟ್ ಗಳನ್ನು ನೋಡುವೆನು.
01:46 ಇಲ್ಲಿ ನೀವು, Places.csv ಮತ್ತು Places.txt. ಎನ್ನುವ 2 ಫೈಲ್ ಗಳನ್ನು ನೋಡಬಹುದು.
01:54 Places.csv ಫೈಲ್ ನ ಮೇಲೆ ಡಬಲ್ ಕ್ಲಿಕ್ ಮಾಡಿ.
02:02 CSV ಫಾರ್ಮ್ಯಾಟ್ ನಲ್ಲಿರುವ ಒಂದು ಸ್ಪ್ರೆಡ್ಶೀಟ್ ತೆರೆದುಕೊಳ್ಳುತ್ತದೆ.
02:06 ಇದರಲ್ಲಿ latitude (ಲ್ಯಾಟಿಟ್ಯೂಡ್) ಮತ್ತು longitude (ಲೊಂಜಿಟ್ಯೂಡ್) ಡಾಟಾದೊಂದಿಗೆ ನಗರಗಳ ಹೆಸರು ಇವೆ.
02:14 CSV ಫೈಲ್ ಅನ್ನು ಕ್ಲೋಸ್ ಮಾಡಿ.
02:17 ಡಬಲ್ ಕ್ಲಿಕ್ ಮಾಡಿ, Places.txt ಫೈಲ್ ಅನ್ನು ತೆರೆಯಿರಿ.
02:22 ಇದರಲ್ಲಿಯೂ ಕೂಡ latitude (ಲ್ಯಾಟಿಟ್ಯೂಡ್) ಮತ್ತು longitude (ಲೊಂಜಿಟ್ಯೂಡ್) ಡಾಟಾದೊಂದಿಗೆ ನಗರಗಳ ಹೆಸರು ಇವೆ.
02:32 ಟೆಕ್ಸ್ಟ್ ಫೈಲ್ ಅನ್ನು ಕ್ಲೋಸ್ ಮಾಡಿ.
02:35 Code-files ಫೋಲ್ಡರ್ ಅನ್ನು ಕ್ಲೋಸ್ ಮಾಡಿ ಮತ್ತು QGIS ಇಂಟರ್ಫೇಸ್ ಅನ್ನು ತೆರೆಯಿರಿ.
02:41 ಮೆನ್ಯುಬಾರ್ ನಲ್ಲಿ Layer ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
02:45 ಡ್ರಾಪ್ ಡೌನ್ ಪಟ್ಟಿಯಿಂದ , Add layer ಅನ್ನು ಆಯ್ಕೆ ಮಾಡಿ.
02:49 ಸಬ್-ಮೆನ್ಯುವಿನಲ್ಲಿ, Add Delimited Text Layer ಅನ್ನು ಆಯ್ಕೆ ಮಾಡಿ.
02:54 ಒಂದು ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
02:57 File Name ಟೆಕ್ಸ್ಟ್ ಬಾಕ್ಸ್ ನ ಮುಂದೆ ಇರುವ Browse ಬಟನ್ ಅನ್ನು ಕ್ಲಿಕ್ ಮಾಡಿ.
03:02 ಒಂದು ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
03:05 ನೀವು ಈಗಾಗಲೇ ಡೌನ್ಲೋಡ್ ಮಾಡಿ, ಸೇವ್ ಮಾಡಿರುವ csv ಫೈಲ್ ಗೆ ನ್ಯಾವಿಗೇಟ್ ಮಾಡಿ.
03:11 Open ಬಟನ್ ಅನ್ನು ಕ್ಲಿಕ್ ಮಾಡಿ.
03:14 ಕ್ರಿಯೇಟ್ ಲೇಯರ್ ಡಯಲಾಗ್ ಬಾಕ್ಸ್ ನಲ್ಲಿ, ಈಗ File Name ಟೆಕ್ಸ್ಟ್ ಬಾಕ್ಸ್ ನಲ್ಲಿ, file path ಕಾಣಿಸುತ್ತಿದೆ.
03:21 File format ವಿಭಾಗದಲ್ಲಿ, CSV ಆಯ್ಕೆಯು ಡಿಫಾಲ್ಟ್ ಆಗಿ ಆಯ್ಕೆಯಾಗಿರುತ್ತದೆ.
03:28 ಇಲ್ಲವಾದಲ್ಲಿ ಅದನ್ನು ಆಯ್ಕೆಮಾಡಲು, CSV ರೇಡಿಯೋ ಬಟನ್ ನ ಮೇಲೆ ಕ್ಲಿಕ್ ಮಾಡಿ.
03:33 .txt ಫೈಲ್ ಅನ್ನು ಬಳಸುವುದಾದರೆ, Custom Delimiters (ಕಸ್ಟಮ್ ಡೆಲಿಮೀಟರ್) ಆಯ್ಕೆಯನ್ನು ಆರಿಸಿಕೊಳ್ಳಿ.
03:39 Geometry definition (ಜ್ಯಾಮೆಟ್ರಿ ಡೆಫಿನೇಷನ್) ವಿಭಾಗವು, Latitude ಮತ್ತು Longitude ಡಾಟಾದೊಂದಿಗೆ, ತನ್ನಿಂದ ತಾನೆ ಸಿದ್ಧವಾಗುತ್ತದೆ.
03:47 ದಯವಿಟ್ಟು ಗಮನಿಸಿ X-coordinate ಇದು longitude ಆಗಿದೆ ಮತ್ತು Y-coordinate ಇದು latitude ಆಗಿದೆ.
03:55 Longitude ಒಂದು ಬಿಂದುವಿನ ಪೂರ್ವ-ಪಶ್ಚಿಮ ಸ್ಥಾನವನ್ನು ಸೂಚಿಸುತ್ತದೆ.
04:01 ಮತ್ತು Latitude ಒಂದು ಬಿಂದುವಿನ ಉತ್ತರ-ದಕ್ಷಿಣ ಸ್ಥಾನವನ್ನು ಸೂಚಿಸುತ್ತದೆ.
04:06 OK ಬಟನ್ ಅನ್ನು ಕ್ಲಿಕ್ ಮಾಡಿ.
04:09 Coordinate Reference System Selector(ಕೋ-ಆರ್ಡಿನೇಟ್ ರೆಫರೆನ್ಸ್ ಸಿಸ್ಟಮ್ ಸೆಲೆಕ್ಟರ್) ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
04:14 WGS 84 EPSG 4326 ಅನ್ನು ಆಯ್ಕೆ ಮಾಡಿ.
04:21 OK ಬಟನ್ ಅನ್ನು ಕ್ಲಿಕ್ ಮಾಡಿ.
04:24 ಡಾಟಾವು ಇಂಪೋರ್ಟ್ ಆಗಿದೆ, ಮತ್ತು QGIS canvas ನ ಮೇಲೆ ಡಿಸ್ಪ್ಲೇ ಆಗಿದೆ.
04:30 ಭಾರತದ ಮ್ಯಾಪ್ ಪಾಯಿಂಟ್ ಗಳೊಂದಿಗೆ ತೆರೆದುಕೊಳ್ಳುತ್ತದೆ.
04:34 ಈ ಗುರುತುಗಳು, CSV ಫೈಲ್ ನಲ್ಲಿ ಪಟ್ಟಿ ಮಾಡಿರುವ ಬೇರೆ ಬೇರೆ ನಗರಗಳಾಗಿವೆ.
04:40 ಈ ಗುರುತುಗಳ ಸ್ಟೈಲ್ ಮತ್ತು ಬಣ್ಣವನ್ನು ಬದಲಿಸಬಹುದು.
04:45 ಇದನ್ನು ಮುಂದೆ ಬರುವ ಟ್ಯುಟೋರಿಯಲ್ ಗಳಲ್ಲಿ ವಿವರಿಸಲಾಗಿದೆ.
04:51 ನಿಮಗಾಗಿ ಅಸೈನ್ಮೆಂಟ್,
04:53 QGIS ನಲ್ಲಿ Places.txt ಫೈಲ್ ಅನ್ನು ಇಂಪೋರ್ಟ್ ಮಾಡುವುದು,
04:58 Code files ಲಿಂಕ್ ನಿಂದ ಡೌನ್ಲೋಡ್ ಮಾಡಿರುವ ಫೋಲ್ಡರ್ ನಲ್ಲಿ Places.txt ಫೈಲ್ ನಲ್ಲಿ ಲಭ್ಯವಿದೆ.
05:06 ಈಗ ಈ Point layer ಅನ್ನು Polyline ಲೇಯರ್ ಆಗಿ ಪರಿವರ್ತಿಸೋಣ.
05:12 ಇಲ್ಲಿ ನಾವು ಈ ಎಲ್ಲ ನಗರಗಳನ್ನು ಒಂದು ಮಾರ್ಗದ(ಪಾಥ್) ಮೂಲಕ ಸಂಪರ್ಕಿಸುತ್ತೇವೆ.
05:17 ಈ ಮಾರ್ಗವು(ಪಾಥ್) ದಕ್ಷಿಣದ ಕೊನೆಯ ನಗರದಿಂದ ಉತ್ತರದ ಕೊನೆಯ ನಗರವನ್ನು ಜೋಡಿಸುತ್ತದೆ.
05:23 ಇದು ಪ್ರತಿಯೊಂದು ನಗರದ latitude ಡಾಟಾವನ್ನು ಅವಲಂಭಿಸಿರುತ್ತದೆ.
05:28 ಮೆನ್ಯುಬಾರನಲ್ಲಿರುವ Processing ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
05:32 ಡ್ರಾಪ್-ಡೌನ್ ನಿಂದ Toolbox ಅನ್ನು ಆಯ್ಕೆ ಮಾಡಿ.
05:36 Processing Toolbox ಪ್ಯಾನೆಲ್ ಪರದೆಯ ಬಲಭಾಗದಲ್ಲಿ ತೆರೆದುಕೊಳ್ಳುತ್ತದೆ.
05:41 ಇದು ಹಲವು ವಿಭಾಗಗಳಲ್ಲಿ ಗುಂಪು ಮಾಡಿದ, algorithms ಗಳ ಪಟ್ಟಿಯನ್ನು ತೋರಿಸುತ್ತದೆ.
05:47 QGIS geoalgorithm (ಕ್ಯುಜಿಐಎಸ್ ಜಿಯೋಆಲ್ಗಾರಿದಮ್) ಅನ್ನು ಅದರ ಮುಂದಿರುವ ಕಪ್ಪು ತ್ರಿಕೋನಾಕೃತಿಯನ್ನು ಕ್ಲಿಕ್ ಮಾಡುವುದರ ಮೂಲಕ ವಿಸ್ತರಿಸಿ.
05:55 ಡಿಸ್ಪ್ಲೇ ಆಗಿರುವ ಪಟ್ಟಿಯಿಂದ , Vector creation tools ಆಯ್ಕೆಯನ್ನು ವಿಸ್ತರಿಸಿ.
06:01 algorithm ಅನ್ನು ಎಕ್ಸಿಕ್ಯೂಟ್ ಮಾಡಲು, ವಿಸ್ತರಿಸಲ್ಪಟ್ಟ ಮೆನ್ಯುವಿನಿಂದ, Points to path ಟೂಲ್ ಅನ್ನು ಡಬಲ್ ಕ್ಲಿಕ್ ಮಾಡಿ.
06:08 Points to path ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
06:12 Input layer ನಲ್ಲಿ Places ಅನ್ನು ಆಯ್ಕೆ ಮಾಡಿ.
06:16 Group field ಡ್ರಾಪ್ ಡೌನ್ ನಿಂದ, type ಕೊಮಾ C ಕೊಮಾ16 ಅನ್ನು ಆಯ್ಕೆ ಮಾಡಿ.
06:23 ಈ ಫೀಲ್ಡ್ shape ಫೈಲ್ ನಲ್ಲಿರುವ ಎಲ್ಲ ಫೀಚರ್ ಗಳನ್ನುಹೊಂದಿರುವ ನಗರಗಳ ಹೆಸರುಗಳನ್ನು ಒಳಗೊಂಡಿದೆ.
06:29 Order field ಡ್ರಾಪ್-ಡೌನ್ ನಲ್ಲಿ, Latitude ಕೊಮಾ N ಕೊಮಾ 19 ಕೊಮಾ11 ಅನ್ನು ಆಯ್ಕೆ ಮಾಡಿ.
06:37 ಇದು ಮಾರ್ಗವು(ಪಾಥ್) latitude ನ ಆರೋಹಣ ಕ್ರಮದಲ್ಲಿ ಚಲಿಸುತ್ತದೆ ಎಂಬುದನ್ನು ಸೂಚಿಸುತ್ತದೆ.
06:42 Paths ಫೀಲ್ಡ್ ನ ಮುಂದೆ ಇರುವ ಬಟನ್ ನ ಮೇಲೆ ಕ್ಲಿಕ್ ಮಾಡಿ.
06:46 ಸಬ್ಮೆನ್ಯುವಿನಿಂದ , Save to file ಆಯ್ಕೆಯನ್ನು ಆರಿಸಿಕೊಳ್ಳಿ.
06:51 Save file ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
06:55 ಫೈಲ್ ಅನ್ನು ಸೇವ್ ಮಾಡಲು ಸೂಕ್ತವಾದ ಲೊಕೇಷನ್ ಅನ್ನು ಆಯ್ಕೆಮಾಡಿಕೊಳ್ಳಿ. ನಾನು Desktop ಅನ್ನು ಆಯ್ಕೆ ಮಾಡಿಕೊಳ್ಳುವೆನು.
07:02 ಫೈಲ್ ಅನ್ನು Path-1 ಎಂದು ಹೆಸರಿಸಿ.
07:06 Save ಬಟನ್ ಅನ್ನು ಕ್ಲಿಕ್ ಮಾಡಿ.
07:09 Paths ಫೀಲ್ಡ್ ನಲ್ಲಿ, ಫೈಲ್ ನೇಮ್ ನೊಂದಿಗೆ ಪಾಥ್ ಸಹ ಕಾಣಿಸುತ್ತದೆ.
07:14 Open output file after running algorithm (ಓಪನ್ ಔಟ್ಪುಟ್ ಫೈಲ್ ಆಫ್ಟರ್ ರನ್ನಿಂಗ್ ಆಲ್ಗಾರಿದಮ್) ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
07:19 ಡಯಲಾಗ್ ಬಾಕ್ಸ್ ನ ಕೆಳ ಬಲ ಮೂಲೆಯಲ್ಲಿರುವ Run ಬಟನ್ ಅನ್ನು ಕ್ಲಿಕ್ ಮಾಡಿ.
07:24 ಕ್ಯಾನ್ವಾಸ್ ನ ಮೇಲೆ ಮ್ಯಾಪ್ ಅನ್ನು ಗಮನಿಸಿ.
07:27 ನಗರಗಳ ನಡುವಿನ ಔಟ್ಪುಟ್ ಪಾಥ್ ತೋರಿಸುತ್ತಿದೆ.
07:31 algorithm ಅನ್ನು ಬಳಸಿ ಮ್ಯಾಪ್ ನಲ್ಲಿ ಯಾವುದಾದರೂ ಎರಡು ಬಿಂದು (ಪಾಯಿಂಟ್) ಗಳನ್ನು ಮಾರ್ಗದ (ಪಾಥ್) ಮೂಲಕ ಸೇರಿಸಬಹುದು.
07:38 ಅಸೈನ್ಮೆಂಟ್ – ಪಶ್ಚಿಮದಿಂದ ಪೂರ್ವದ ನಗರಗಳ ನಡುವೆ ಒಂದು ಮಾರ್ಗ(ಪಾಥ್) ಅನ್ನು ರಚಿಸಿ.
07:45 ಸುಳಿವು : Points to path ಡಯಲಾಗ್ ಬಾಕ್ಸ್ ನಲ್ಲಿ, Order field ಡ್ರಾಪ್ ಡೌನ್ ನಲ್ಲಿ Longitude ಕೊಮಾ N ಕೊಮಾ 19 ಕೊಮಾ 11 ಆಯ್ಕೆಯನ್ನು ಬಳಸಿ.
07:57 ಈಗ QGIS ನಲ್ಲಿ , WMS ಲೇಯರ್ ಅನ್ನು ಸೇರಿಸೋಣ.
08:03 WMS ಕುರಿತು ಹೇಳುವುದಾದರೆ,
08:06 WMS ಅಂದರೆ Web Map Services ಎಂದರ್ಥ.
08:11 WMS ಇದೊಂದು, ಪರಸ್ಪರ ಕಾರ್ಯ ನಡೆಸುವ ಮ್ಯಾಪಿಂಗ್ ವಿಧಾನಕ್ಕೆ ಒಂದು ಓಪನ್ GIS ಸ್ಟ್ಯಾಂಡರ್ಡ್ ಸ್ಪೆಸಿಫಿಕೇಷನ್ ಆಗಿದೆ.
08:17 ಇದು ಇಂಟರ್ನೆಟ್ ನ ಮೂಲಕ ಸರ್ವರ್ ನಿಂದ ಮ್ಯಾಪ್ ನ ಇಮೇಜ್ ಗಳ ಕೋರಿಕೆಯ ಮೇಲೆ ಅವಲಂಬಿತವಾಗಿದೆ.
08:23 ಇದನ್ನು ವಿವರಿಸಲು, ಇಂಟರ್ನೆಟ್ ನ ಸಂಪರ್ಕ ಅವಶ್ಯಕವಾಗಿದೆ.
08:28 ಯಾವುದಾದರೂ ವೆಬ್ ಬ್ರೌಸರ್ ಅನ್ನು ತೆರೆಯಿರಿ.
08:31 ಅಡ್ರೆಸ್ ಬಾರ್ ನಲ್ಲಿ bhuvan.nrsc.gov.in ಎಂದು ಟೈಪ್ ಮಾಡಿ.

Enter ಅನ್ನು ಒತ್ತಿ.

08:41 Bhuvan ಹೋಮ್ ಪೇಜ್ ತೆರೆದುಕೊಳ್ಳುತ್ತದೆ.
08:44 Thematic Services (ಥಿಮ್ಯಾಟಿಕ್ ಸರ್ವಿಸಸ್) ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
08:48 ಒಂದು ಹೊಸ ವಿಂಡೋದಲ್ಲಿ Thematic Services ಪೇಜ್ ತೆರೆದುಕೊಳ್ಳುತ್ತದೆ.
08:52 ಎಡಗಡೆಯಿರುವ ಪ್ಯಾನಲ್ ನಲ್ಲಿ, Search ಟ್ಯಾಬ್ ನಲ್ಲಿ, Select Theme ಡ್ರಾಪ್-ಡೌನ್ ನಡಿಯಲ್ಲಿ,

Land Use Land Cover (50K):2005-06 ಅನ್ನು ಆಯ್ಕೆ ಮಾಡಿ.

09:06 Select Geography ಡ್ರಾಪ್ ಡೌನ್ ನಡಿಯಲ್ಲಿ , Karnataka ಅನ್ನು ಆಯ್ಕೆ ಮಾಡಿ.
09:12 Web Services ಟ್ಯಾಬ್ ಅನ್ನು ಕ್ಲಿಕ್ ಮಾಡಿ.
09:15 For QGIS, uDig, ArcGIS and Other Users, Web Map Service (WMS)URL ವಿಭಾಗದಡಿಯಲ್ಲಿ,
09:25 ಈ ಲೇಯರ್ ಗೆ Layer id ಅನ್ನು ಗುರುತು ಮಾಡಿಕೊಳ್ಳಿ, ಮತ್ತು URL ಅನ್ನು ಹೈಲೈಟ್ ಮಾಡಿ,
09:31 ರೈಟ್ ಕ್ಲಿಕ್ ಮಾಡಿ ಮತ್ತು URL ಅನ್ನು ಕಾಪಿ ಮಾಡಿ.
09:36 QGIS ಇಂಟರ್ಫೇಸ್ ಗೆ ಹಿಂದಿರುಗಿ,

Layers ಪ್ಯಾನಲ್ ನಲ್ಲಿ, Paths ಮತ್ತು Place layers ಗಳನ್ನು ಅನ್ಚೆಕ್ ಮಾಡುವುದರ ಮೂಲಕ ಅವುಗಳನ್ನು ಅಡಗಿಸಿ.

09:47 ಮೆನ್ಯು ಬಾರ್ ನಲ್ಲಿ, Layer ಮೆನ್ಯುವನ್ನು ಕ್ಲಿಕ್ ಮಾಡಿ, ಡ್ರಾಪ್ ಡೌನ್ ನಲ್ಲಿ, Add Layer ಅನ್ನು ಆಯ್ಕೆ ಮಾಡಿ.
09:55 ಸಬ್-ಮೆನ್ಯುವಿನಲ್ಲಿ, Add WMS/WMTS layer ಅನ್ನು ಆಯ್ಕೆ ಮಾಡಿ.
10:01 Add Layer ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
10:04 Layers ಟ್ಯಾಬ್ ನಲ್ಲಿ, New ಬಟನ್ ಅನ್ನು ಕ್ಲಿಕ್ ಮಾಡಿ.
10:08 Create a new WMS Connection ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
10:13 Name ಫೀಲ್ಡ್ ನಲ್ಲಿ Bhuvan ಎಂದು ಟೈಪ್ ಮಾಡಿ.
10:16 , Bhuvan ವೆಬ್ಸೈಟ್ ನ URL ಲಿಂಕ್ ನಿಂದ ಕಾಪಿ ಮಾಡಿದ್ದನ್ನು, ಈ URL ಫೀಲ್ಡ್ ನಲ್ಲಿ ಪೇಸ್ಟ್ ಮಾಡಿ.
10:23 ಡಯಲಾಗ್ ಬಾಕ್ಸ್ ನ ಕೆಳ ಬಲ ಮೂಲೆಯಲ್ಲಿರುವ OK ಬಟನ್ ಅನ್ನು ಕ್ಲಿಕ್ ಮಾಡಿ.
10:29 Save Connection ಡಯಲಾಗ್ ಬಾಕ್ಸ್ ನಲ್ಲಿ, OK ಬಟನ್ ಅನ್ನು ಕ್ಲಿಕ್ ಮಾಡಿ.
10:34 Add Layers ಡಯಲಾಗ್ ಬಾಕ್ಸ್ ನಲ್ಲಿ, Connect ಬಟನ್ ಅನ್ನು ಕ್ಲಿಕ್ ಮಾಡಿ.
10:40 id ವಿಭಾಗದಲ್ಲಿ, id 971 ಅನ್ನು ಆಯ್ಕೆ ಮಾಡಿ
10:46 id ಯು Bhuvan ವೆಬ್ಸೈಟ್ ನ WMS layerid layer ಅನ್ನು ಪ್ರತಿನಿಧಿಸುತ್ತದೆ.
10:53 ಡಯಲಾಗ್ ಬಾಕ್ಸ್ ನ ಕೆಳ ಬಲ ಮೂಲೆಯಲ್ಲಿರುವ Add ಬಟನ್ ಅನ್ನು ಕ್ಲಿಕ್ ಮಾಡಿ.
10:59 Close ಬಟನ್ ಅನ್ನು ಕ್ಲಿಕ್ ಮಾಡಿ.
11:02 canvas ನಲ್ಲಿ , ಕರ್ನಾಟಕದ Land Use Land Cover layer ಡಿಸ್ಪ್ಲೇ ಆಗಿದೆ.
11:08 ಇದೇ ರೀತಿಯಾಗಿ, ನಾವು ಲಭ್ಯವಿರುವ ವಿವಿಧ ಥೀಮ್ ಗಳ ಯಾವುದೇ ಲೇಯರ್ ಅನ್ನು ಲೋಡ್ ಮಾಡಬಹುದು.
11:15 ಸಂಕ್ಷಿಪ್ತವಾಗಿ,

ಈ ಟ್ಯುಟೋರಿಯಲ್ ನಲ್ಲಿ ನಾವು,

11:21 Point Layer ಲೇಯರ್ ಅನ್ನು ರಚಿಸಲು, CSV ಫಾರ್ಮ್ಯಾಟ್ ನಲ್ಲಿ ಸ್ಪ್ರೆಡ್ಶೀಟ್ ಅನ್ನು ಇಂಪೋರ್ಟ್ ಮಾಡುವುದು,
11:27 Point Layer ಅನ್ನು Polyline Layer ಆಗಿ ಪರಿವರ್ತಿಸುವುದು ಮತ್ತು
11:31 QGIS ನಲ್ಲಿ, Bhuvan ವೆಬ್ಸೈಟ್ ನಿಂದ WMS (Web Map Service) ಲೇಯರ್ ಅನ್ನು ಲೋಡ್ ಮಾಡುವುದು – ಇವುಗಳ ಕುರಿತು ಕಲಿತಿದ್ದೇವೆ.
11:47 ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.

ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.

11:45 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.

ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

11:58 ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

12:02 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.

ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ.

12:14 ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

NaveenBhat