PHP-and-MySQL/C4/Sending-Email-Part-3/Kannada

From Script | Spoken-Tutorial
Jump to: navigation, search
Time Narration
00:00 ನಮಸ್ಕಾರ. "'Sendmail_from' not set in php dot ini" ಎಂಬ ಎರರ್ ಅನ್ನು ಹೇಗೆ ಸರಿಪಡಿಸುವುದು?
00:11 ಈ ಇ-ಮೇಲ್ ಯಾರಿಂದ ಬಂದಿರುವುದೆಂದು ನಾವು ಕಂಡುಹಿಡಿದಿಲ್ಲ.
00:18 ಇ-ಮೇಲ್ ಅನ್ನು ಕಳುಹಿಸಲು ನಾವು ಇದನ್ನು ಮಾಡಬೇಕು.
00:23 ಇಲ್ಲಿ ನಾವು "from" ಪ್ಯಾರಾಮೀಟರ್ ಅನ್ನು ಬಳಸುವುದಿಲ್ಲ.
00:29 ನಾವು ನಿರ್ದಿಷ್ಟವಾದ header ಗಳಿಗೆ ಕಳುಹಿಸಬೇಕು.
00:32 ಇಲ್ಲಿ "$headers" ಎಂಬ ವೇರಿಯೇಬಲ್ ಅನ್ನು ರಚಿಸೋಣ. ಅದು "me @me.com" ನ ಹಾಗೆ ಇಲ್ಲ.
00:43 ನಾವು "From:" ನಂತಹ ಪ್ರಮಾಣಿತ mail header ನೊಂದಿಗೆ ಕೆಲಸ ಮಾಡಬೇಕು. ಅದಕ್ಕಾಗಿ, ನಂತರ ಕೋಲನ್, ಇದು ಸೆಮಿಕೋಲನ್ ಅಲ್ಲ. ನಂತರ "PHP Academy" ಎನ್ನುತ್ತೇನೆ.
00:54 ಅಥವಾ "admin @PHP Academy" ಎನ್ನಿ. ಬೇಕಿದ್ದರೆ ".com" ಸೇರಿಸಿ.
01:02 ನಾನು ಈ ಡೋಮೇನ್ ಹೆಸರನ್ನು ಹೊಂದಿಲ್ಲ, ಆದರೆ ಸದ್ಯಕ್ಕೆ ಹೀಗೆ ಇರಲಿ.
01:08 ಹಾಗಾಗಿ "From: admin @phpacademy.com" ಎಂದಿದೆ.
01:11 ನಮ್ಮ "mail" ನಲ್ಲಿ, "headers" ಎನ್ನುವ ಇನ್ನೊಂದು ಪ್ಯಾರಾಮೀಟರ್ ಅನ್ನು ಸೇರಿಸಬೇಕು.
01:18 ಈಗ ಇಲ್ಲಿಗೆ ಬಂದು , "Alex" ಎಂದು ಮತ್ತು ಇಲ್ಲಿ "This is a test!" ಎಂದೂ ಟೈಪ್ ಮಾಡಿ.
01:24 "Send me this" ಅನ್ನು ಕ್ಲಿಕ್ ಮಾಡಿ. ಇನ್ನೊಂದು ಎರರ್ ಕಾಣಿಸುತ್ತದೆ.
01:27 ವಾಸ್ತವದಲ್ಲಿ, ನನ್ನ ಕಂಪ್ಯೂಟರ್ ನಲ್ಲಿ ನಾನು ಮೇಲ್-ಸರ್ವರ್ ಅನ್ನು ರನ್ ಮಾಡುತ್ತಿಲ್ಲ.
01:33 ನಿಮ್ಮ ಕಂಪ್ಯೂಟರ್ ನಲ್ಲಿ ಮೇಲ್ ಸರ್ವರ್ ಅನ್ನು ರನ್ ಮಾಡಲು ಇಷ್ಟವಿಲ್ಲದಿದ್ದರೆ, "mail free mail server" ಎಂದು ಗೂಗಲ್ ಮಾಡಿ. ಈಗ ನಾವು local host ನಲ್ಲಿ ರನ್ ಮಾಡುತ್ತಿರುವಂತೆ, ಅದು ನಿಮ್ಮ ಕಂಪ್ಯೂಟರ್ ನಲ್ಲಿ mail server ಅನ್ನು ಇನ್ಸ್ಟಾಲ್ ಮಾಡುತ್ತದೆ.
01:46 ಈಗ ನಿಮಗೆ local host ನಲ್ಲಿ ರನ್ ಆಗುವ SMTP mail server ಸಿಗುವುದು.
01:54 ನಾನು mail server ಹೊಂದಿಲ್ಲ. ನನ್ನ ವಿಶ್ವವಿದ್ಯಾನಿಲಯದ ಇ-ಮೇಲ್ ಸಿಸ್ಟಮ್ ಅನ್ನು ಬಳಸುವೆನು. ಅದು ನನ್ನ ವಿಶ್ಯವಿದ್ಯಾನಿಲಯದ ಇ-ಮೇಲ್ ನ " DNS" ಅಥವಾ "Domain Name Server" ಆಗಿದೆ.
02:06 ಹೀಗೆ, ನನ್ನ ಇ-ಮೇಲ್ ವಿಶ್ವವಿದ್ಯಾನಿಲಯದ ಮೂಲಕ ಕಳುಹಿಸಲ್ಪಡುತ್ತದೆ.
02:11 ನಿಮಗೆ ನಿರ್ದಿಷ್ಟವಾದ "DNS Server" ಗೊತ್ತಿದ್ದರೆ, ನೀವು ಡೊಮೇನ್ ನೇಮ್ ಅಥವಾ ವೆಬ್ಸೈಟ್ ಅನ್ನು ಅನ್ನು ಈಗಾಗಲೇ ಹೊಂದಿದ್ದರೆ, ನೀವು ಇದನ್ನು ತಿಳಿದಿರುತ್ತೀರಿ ಅಥವ ಇದನ್ನು ಹುಡುಕಲು ಸಾಧ್ಯವಾಗುತ್ತದೆ.
02:22 ಮತ್ತು ನೀವು ಅದರ ಮೂಲಕ ಇ-ಮೇಲ್ ಅನ್ನು ಕಳುಹಿಸಲು ಸಾಧ್ಯವಾಗುತ್ತದೆ.
02:27 ನನ್ನ ವಿಶ್ವವಿದ್ಯಾನಿಲಯದ ಇ-ಮೇಲ್ "DNS server", "mailhost dot shef dot ac dot uk" ಎಂದು ಇದೆ ಎಂದು ತಿಳಿದಿದ್ದೇನೆ. ಏಕೆಂದರೆ ನಾನು " Sheffield university " ಯಲ್ಲಿದ್ದೇನೆ.
02:36 ನಾನು ಇದನ್ನು ನನ್ನ "php dot ini" ನಲ್ಲಿ ಸೇರಿಸಬೇಕು.
02:41 ಇದಕ್ಕಾಗಿ ನಾನು ಇಲ್ಲಿ ನಮ್ಮ ವೇರಿಯೇಬಲ್ ಗಳನ್ನು ಸೆಟ್ ಮಾಡಬೇಕು.
02:46 ಸರಿ, ನಮಗೆ ಎರಡು ಬೇಕು. ಇಲ್ಲಿ "set SMTP in "php dot ini" " ಎಂದು ಕಾಮೆಂಟ್ ಮಾಡಿ.
02:59 ನನ್ನ "php dot ini" ಫೈಲ್ ಅನ್ನು ತೆರೆಯುವ ಬದಲು, ನಾನು "ini_set()" ಫಂಕ್ಷನ್ ಅನ್ನು ಬಳಸುವೆನು.
03:05 ಮತ್ತು ವೇರಿಯೇಬಲ್ ನ ಹೆಸರು "SMTP" ಎಂದಿರಲಿ.
03:12 "php dot ini" ಫೈಲ್ ನ ಒಳಗೆ, ಈ ಸಾಲನ್ನು ಎಡಿಟ್ ಮಾಡುತ್ತಿದ್ದೇವೆ.
03:16 ಇಲ್ಲಿ ವ್ಯಾಲ್ಯು ಅನ್ನು "mailhost" ಎಂದು ಸೆಟ್ ಮಾಡುವೆನು.
03:20 ಇಲ್ಲಿ ನಾವು echo "get_ini()" ಎನ್ನೋಣ. ಇದು ಒಂದು ನಿರ್ದಿಷ್ಟವಾದ ವ್ಯಾಲ್ಯುವನ್ನು ಪಡೆಯುತ್ತದೆ.
03:25 ನಂತರ "SMTP" ಎಂದು ಹೇಳುವೆನು. ಇದು ಇಲ್ಲಿ ಸ್ಕ್ರಿಪ್ಟ್ ಅನ್ನು ಕಿಲ್ ಮಾಡಬಹುದು.
03:30 ಈಗ ಇದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡೋಣ.
03:32 ಇಲ್ಲಿ "Alex" ಎಂದು, ಇಲ್ಲಿ "Test" ಎಂದೂ ಟೈಪ್ ಮಾಡಿ "Send me this" ಮೇಲೆ ಕ್ಲಿಕ್ ಮಾಡುವೆನು.
03:40 ಕ್ಷಮಿಸಿ, ನಾನು ಇದನ್ನು ತಪ್ಪಾಗಿ ಟೈಪ್ ಮಾಡಿದ್ದೇನೆ. ಅದು "ini_get()" ಎಂದಿರಬೇಕು. ಈಗ ರಿಫ್ರೆಶ್ ಮಾಡೋಣ.
03:52 ಸರಿ, ನಾವು "ini" ಫೈಲ್ ನ ಒಳಗೆ, "SMTP" ಯನ್ನು"mail host dot shef dot ac dot uk" ಗೆ ಸೆಟ್ ಮಾಡುತ್ತಿದ್ದೇವೆ.
03:59 ನಂತರ ಇದರ ವ್ಯಾಲ್ಯುವನ್ನು echo ಮಾಡುವೆವು.
04:03 ಅದು "mail host dot shef dot ac dot uk" ಗೆ ಸೆಟ್ ಆಗಿದೆ ಎಂದು ಇದು ಹೇಳುತ್ತದೆ.
04:10 ಈ 'ಮೇಲ್ ಹೋಸ್ಟ್ ಸರ್ವರ್' ಅಥವಾ "DNS ಸರ್ವರ್ " ಕೆಲಸ ಮಾಡುತ್ತಿದೆ ಎಂದು ಭಾವಿಸಿದರೆ, ಉಳಿದ ಕೋಡ್ ಕೆಲಸ ಮಾಡುವುದು.
04:17 ಮೇಲ್ ಅನ್ನು ಕಳುಹಿಸಿದ ನಂತರ, ನಾನು ಈ ಪೇಜ್ ಅನ್ನು ಕಿಲ್ ಮಾಡುವೆನು.
04:24 ಬೇಡ. ನಾನು ಹಾಗೇ ಪೇಜ್ ಅನ್ನು ಕಿಲ್ ಮಾಡುವೆನು.
04:28 ಈಗ ಹಿಂದಿರುಗಿ, ಇಲ್ಲಿ "Alex" ಮತ್ತು ಇಲ್ಲಿ "This is a test" ಎನ್ನೋಣ.
04:36 ಎಲ್ಲವೂ ಸರಿಯಾಗಿದೆಯೇ ಎಂದು ನೋಡೋಣ. ಇಲ್ಲಿ ನನ್ನ "$to", "$subject" ಮತ್ತು "From:admin@phpacademy.com" ಎಂದು ಹೇಳುವ "$headers" ಇವೆ.
04:45 ಇಲ್ಲಿ ನಮ್ಮ $body ಇದೆ. ನಮ್ಮ mail() ಫಂಕ್ಷನ್ ಅನ್ನು ಎಕ್ಸಿಕ್ಯೂಟ್ ಮಾಡುತ್ತಿದ್ದೇವೆ.
04:51 ನಾನು "Send me this" ಅನ್ನು ಕ್ಲಿಕ್ ಮಾಡಿದಾಗ, ಏನೂ ಆಗಲಿಲ್ಲ. ನಾವು ಎರರ್ ಗಳನ್ನು ಸಹ ಪಡೆದಿಲ್ಲ. ಹಾಗಾಗಿ ಎಲ್ಲವೂ ಸರಿಯಾಗಿ ಕೆಲಸ ಮಾಡಿದೆ ಎಂದು ನಾವು ಭಾವಿಸಬಹುದು.
04:58 ಈಗ ನನ್ನ "Hotmail" ಅಥವಾ ನನ್ನ ಇ-ಮೇಲ್ ಗೆ ಬಂದು, "INBOX" ಅನ್ನು ಕ್ಲಿಕ್ ಮಾಡಿದರೆ, "admin @ phpacademy dot com" ಇಂದ ನಮಗೆ ಒಂದು ಹೊಸ ಮೇಲ್ ಬಂದಿರುವುದನ್ನು ನೋಡಬಹುದು.
05:09 ನಾವು ಅದನ್ನು ಕ್ಲಿಕ್ ಮಾಡಿದರೆ, ಸಬ್ಜೆಕ್ಟ್ "Email from PHPAcademy" ಎಂದು ಇರುವುದನ್ನು ನೋಡಬಹುದು. ಅದನ್ನು ನಾವು ಇಲ್ಲಿ ಸೆಟ್ ಮಾಡಿದ್ದೆವು.
05:17 ನಾನು "from" ಎಂದು ಸೂಚಿಸಿರುವ, ಇ-ಮೇಲ್ ಅಡ್ರೆಸ್ ಇದೆ.
05:22 ನೀವು ಇದನ್ನು " from Alex" ಅಥವಾ" from 'phpacademy' " ಎಂದು ಇಡಬಹುದು.
05:27 ಇಲ್ಲಿ "This is an email from Alex" ಎಂದಿದೆ. ಈ ಹೆಸರನ್ನು ಫಾರ್ಮ್ ನಲ್ಲಿ ನಾವು ಕೊಟ್ಟಿದ್ದೆವು.
05:35 ನಂತರ ಎರಡು ಲೈನ್ ಬ್ರೇಕ್ ಗಳಿವೆ, ಒಂದು ಮತ್ತು ಎರಡು.
05:40 ಇದು ನಾನು ಇಲ್ಲಿ ಇಟ್ಟಿರುವ ಟೆಕ್ಸ್ಟ್ "This is a test" ಆಗಿದೆ.
05:46 ಇದು ನನ್ನ ವಿಶ್ವವಿದ್ಯಾನಿಲಯದ "DNS ಮೇಲ್ ಸರ್ವರ್ " ಅನ್ನು ಬಳಸಿದ mail ಫಂಕ್ಷನ್ ಆಗಿದೆ.
05:50 ನಿಮ್ಮ INSP ಯು ಒಂದು "DNS ಮೇಲ್ ಸರ್ವರ್" ಅನ್ನು ಹೊಂದಿರುತ್ತದೆ.
05:55 ಇದು ಅಥೆಂಟಿಕೇಷನ್ ಅನ್ನು ಕೇಳಬಹುದು. ನಾನು ಅದರ ಕುರಿತು ಸಧ್ಯದಲ್ಲಿಯೇ ಟ್ಯುಟೋರಿಯಲ್ ಅನ್ನು ಮಾಡುವೆನು.
06:00 ಇದು ಕೆಲಸ ಮಾಡದಿದ್ದರೆ, ಟ್ಯುಟೋರಿಯಲ್ ಅನ್ನು ನೋಡಿ. ಅಥವಾ ನನಗೆ ಒಂದು ಇ-ಮೇಲ್ ಅನ್ನು ಕಳುಹಿಸಿ, ಅಥವಾ ನನ್ನ ಯು-ಟ್ಯೂಬ್ ಮೂಲಕ ಸಂಪರ್ಕಿಸಿರಿ.
06:09 ಇದು ತುಂಬ ಜನರಿಗೆ ಉಪಯೋಗ ಆಗುವುದೆಂದು ನಾನು ಭಾವಿಸುವೆನು.
06:13 ನೀವು ಸಬ್ಸ್ಕ್ರೈಬ್ ಮಾಡಿರದಿದ್ದಲ್ಲಿ ದಯವಿಟ್ಟು ಮಾಡಿಕೊಳ್ಳಿ.
06:15 ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

NaveenBhat, Sandhya.np14