PHP-and-MySQL/C4/Sending-Email-Part-1/Kannada
From Script | Spoken-Tutorial
Time | Narration |
00:00 | ನಮಸ್ಕಾರ. ವೆಬ್ಸೈಟ್ ನಲ್ಲಿ ಬಳಕೆದಾರನನ್ನು ರೆಜಿಸ್ಟರ್ ಮಾಡುವಾಗ ಬಳಸುವ ಇಮೇಲ್ ಸ್ಕ್ರಿಪ್ಟ್ ಅನ್ನು ತಯಾರಿಸಲು ನಾನು ಈಗ ಕಲಿಸುವೆನು. |
00:12 | ಅವರು ದಾಖಲಾಗಿದ್ದನ್ನು ಖಚಿತಪಡಿಸುವ ಇ-ಮೇಲ್ ಅನ್ನು ನೀವು ಹೇಗೆ ಕಳುಹಿಸುಬಹುದು? ಒಂದು "Send me an email" ಎಂಬ ಸ್ಕ್ರಿಪ್ಟ್ ಅನ್ನು ರಚಿಸಿ, ನಾನು ಅದನ್ನು ಭಾಗಶಃ ಮಾಡುವೆನು. |
00:24 | ಇದೊಂದು HTML form ಆಗಿರುವುದು. ಇದರಲ್ಲಿ ನೀವು, ಸಬ್ಜೆಕ್ಟ್ (ವಿಷಯ) , ಮೆಸೇಜ್ (ಸಂದೇಶ) ಬರೆದು ಸೂಚಿಸಲಾದ ಅಡ್ರೆಸ್ (ವಿಳಾಸ) ಗೆ ಕಳಿಸಬಹುದು. |
00:34 | ಹಾಗಾಗಿ ನಾನು $address ಎಂಬ ಒಂದು ವೇರಿಯೇಬಲ್ ಅನ್ನು ರಚಿಸುವೆನು. |
00:39 | ನಾನು ಇಲ್ಲಿ ನನ್ನ "hotmail" ನ ಅಡ್ರೆಸ್ ಅನ್ನು ಬರೆಯುವೆನು. |
00:48 | ನಾನು ನನ್ನ ಈಗಿನ "hotmail" ಪೇಜ್ ಅನ್ನು ತೆರೆದು "Inbox" ಅನ್ನು ಕ್ಲಿಕ್ ಮಾಡಿದಾಗ, ಇಲ್ಲಿ ನನಗೆ ಯಾವುದೇ ಇ-ಮೇಲ್ ಬಂದಿಲ್ಲ. |
00:55 | ಈಗ ಸದ್ಯಕ್ಕೆ ಯಾವುದೇ ಹೊಸ ಇಮೇಲ್ ಗಳಿಲ್ಲ. |
01:05 | ನನ್ನ address ವೇರಿಯೇಬಲ್ ನಲ್ಲಿ ಈ ವಿಳಾಸವನ್ನು ಇದೆ. ನಾನು ಈ ವೇರಿಯೇಬಲ್ ಹೆಸರನ್ನು $to ಎಂದು ಬದಲಿಸುವೆನು. |
01:13 | ನಾನು ಇದನ್ನು ಕಳುಹಿಸಲು, mail ಫಂಕ್ಷನ್ ಅನ್ನು ಬಳಸುವೆನು. |
01:17 | ಇಲ್ಲಿ from ಮತ್ತು subject ಇರಲಿ. |
01:21 | ಇಲ್ಲಿ $subject, "Email from PHPAcademy" ಎಂದಿರಲಿ. |
01:32 | ನಂತರ, ಸಬ್ಮಿಟ್ ಮಾಡಲು ಒಂದು HTML (ಎಚ್.ಟಿ.ಎಮ್.ಎಲ್) ಫಾರ್ಮ್ ಬೇಕು. ತಾನಾಗಿಯೇ ಸಬ್ಮಿಟ್ ಆಗುವ ಫಾರ್ಮ್ ಅನ್ನು ರಚಿಸುವೆನು. |
01:39 | ಇಲ್ಲಿ ಸ್ವಲ್ಪ html ಕೋಡ್ ಅನ್ನು ಬರೆಯೋಣ. ಇಲ್ಲಿ form ಇದೆ. ಇದು "send me an email dot php" ಎಂದು ಈ ಪೇಜ್ ಗೆ ಸಬ್ಮಿಟ್ ಮಾಡುವುದು. |
01:54 | method, POST ಆಗಿರುವುದು. |
01:59 | ಇಲ್ಲಿ form ಮುಗಿಯುವುದು. |
02:02 | ಇಲ್ಲಿ ಸೂಚಿಸಿದ ಇ-ಮೇಲ್ ವಿಳಾಸಕ್ಕೆ ತಾನು ಕಳಿಸಬೇಕಾದ ವಿಷಯವನ್ನು ಬಳಕೆದಾರನು ಇಲ್ಲಿ ಟೈಪ್ ಮಾಡಬಹುದು. |
02:10 | ಫಾರ್ಮ್ ಅನ್ನು ರಚಿಸುವಾಗ, ನೀವು ನಿರ್ದಿಷ್ಟವಾದ ವಿಳಾಸಕ್ಕೆ ಕಳುಹಿಸಬೇಕು ಎಂದು ಸೂಚಿಸಬಹುದು. |
02:18 | ಇದು ಕೇವಲ "send me an email" ಸ್ಕ್ರಿಪ್ಟ್, ನೀವು ನಿಮ್ಮ ವೆಬ್ಸೈಟ್ ನಲ್ಲಿ ಸೇರಿಸಲು ಬಯಸುವ ಇ-ಮೇಲ್ ಆಗಿರುತ್ತದೆ. |
02:27 | ಈಗ ನಾವು ಒಂದು "text" ಇನ್ಪುಟ್ ಅನ್ನು ಸೇರಿಸಬೇಕು. |
02:31 | ಇದು ನನಗೆ ಇ ಮೇಲ್ ಅನ್ನು ಕಳುಹಿಸುವ ವ್ಯಕ್ತಿಯ ಹೆಸರಾಗಿದೆ. |
02:34 | ಇಲ್ಲಿ type "text" ಮತ್ತು name ಗಾಗಿ "name" ಎಂದಿದೆ. |
02:39 | ಸಧ್ಯಕ್ಕೆ "max length" ಇದು 20 ಎನ್ನೋಣ. |
02:45 | ಇದರ ಕೆಳಗೆ ನಾವು ಒಂದು " text area " ಅನ್ನು ರಚಿಸೋಣ. |
02:49 | ನಾನು "textarea" ಎಂದು ಟೈಪ್ ಮಾಡಿ, ಹಾಗೆಯೇ ಮುಗಿಸುತ್ತೇನೆ. |
02:53 | ನಂತರ ಇದರ name ಅನ್ನು "message" ಎನ್ನೋಣ. |
02:59 | ಇಲ್ಲಿ ಪ್ಯಾರಾಗ್ರಾಫ್ ನ ಆರಂಭ ಮತ್ತು ಕೊನೆಯನ್ನು ಸೂಚಿಸುವ ಟ್ಯಾಗ್ ಗಳಿರಲಿ. |
03:04 | ಮತ್ತು ಇಲ್ಲಿ ಕೆಳಗೆ ಒಂದು ಸಬ್ಮಿಟ್ ಬಟನ್ ಇರಲಿ. ಅದರ value, "Send" |
03:14 | ಅಥವಾ "Send me this", ಎಂದಿರಲಿ. |
03:17 | ಈಗ ನೀವು ನಮ್ಮ ಪೇಜ್ ಗೆ ಬಂದು ಇಲ್ಲಿ ಈ ಪೇಜ್ ಅನ್ನು ಆಯ್ಕೆ ಮಾಡಿದರೆ, |
03:21 | ಇಲ್ಲಿ name ಗಾಗಿ ಮತ್ತು ಇಲ್ಲಿ message ಗಾಗಿ ಜಾಗ ಇದೆ. |
03:25 | ಇಲ್ಲಿ "Name:" ಎಂದು, ಇಲ್ಲಿ "Message:" ಎಂದೂ ಟೈಪ್ ಮಾಡುವೆನು. |
03:31 | ಈಗ ಇದು ಚೆನ್ನಾಗಿ ಕಾಣುತ್ತಿದೆ. ಇಲ್ಲಿ ನಮ್ಮ "Name:" ಮತ್ತು "Message:" ಬಾಕ್ಸ್ ಗಳಿವೆ. |
03:38 | ನಾವು ಈ ಬಟನ್ ಅನ್ನು ಕ್ಲಿಕ್ ಮಾಡಿದಾಗ , ಇ-ಮೇಲ್ ಅನ್ನು ಕಳುಹಿಸಲಾಗುತ್ತದೆ. |
03:44 | ಮೊದಲಿಗೆ ನಾವು ನಮ್ಮ ಪಿ.ಎಚ್.ಪಿ. ಕೋಡ್ ನಲ್ಲಿ, ಸಬ್ಮಿಟ್ ಬಟನ್ ಅನ್ನು ಒತ್ತಲಾಗಿದೆಯೇ ಎಂದು ಪರೀಕ್ಷಿಸಬೇಕು. |
03:53 | ಅದಕ್ಕಾಗಿ ಇಲ್ಲಿ ಒಂದು if ಸ್ಟೇಟ್ಮೆಂಟ್ ಇದೆ. ನಮ್ಮ ಕಂಡಿಷನ್ TRUE ಆಗಿದ್ದಾಗ ಎಕ್ಸಿಕ್ಯೂಟ್ ಆಗುವ ಬ್ಲಾಕ್ ಕರ್ಲಿ ಬ್ರ್ಯಾಕೆಟ್ ನಲ್ಲಿದೆ. |
04:01 | ಈ condition ಅನ್ನು ಬ್ರ್ಯಾಕೆಟ್ ನಲ್ಲಿ ಬರೆಯಬೇಕು. |
04:05 | ಕಂಡಿಷನ್, "submit" ಬಟನ್ ನ POST ವೇರಿಯೇಬಲ್ ಆಗಿರುತ್ತದೆ. |
04:15 | ಸಬ್ಮಿಟ್ ಬಟನ್ ವ್ಯಾಲ್ಯುವನ್ನು ಹೊಂದಿದೆ. |
04:19 | ಅಂದರೆ, "submit" ಬಟನ್ ಅನ್ನು ಒತ್ತಿದ್ದರೆ, ಇದು "Send me this" ಎಂಬ value ವನ್ನು ಹೊಂದಿರುತ್ತದೆ. |
04:30 | ಅಂದರೆ, ಫಾರ್ಮ್ ಅನ್ನು ಸಬ್ಮಿಟ್ ಮಾಡಲಾಗಿದೆ. ಏಕೆಂದರೆ ಆ ಬಟನ್ ಅನ್ನು ಒತ್ತಲಾಗಿದೆ. |
04:37 | ಈಗ ಇಲ್ಲಿ ನಾವು ಮಾಡಬೇಕಾದ ಮೊದಲ ಕೆಲಸ, ಫಾರ್ಮ್ ನಿಂದ ಡೇಟಾವನ್ನು ಪಡೆಯುವುದು. |
04:44 | ಅದು ಫಾರ್ಮ್ ಅನ್ನು ಸಬ್ಮಿಟ್ ಮಾಡಿ, ಇ-ಮೇಲ್ ಅನ್ನು ಕಳಿಸಿದ ವ್ಯಕ್ತಿಯ ಹೆಸರಾಗಿದೆ. |
04:49 | ಅವರ ಹೆಸರು "name" ಎಂಬ ಈ ಫೀಲ್ಡ್ ನಲ್ಲಿ ಇರುತ್ತದೆ. |
04:56 | ಇಲ್ಲಿ $message ಕೂಡ ಇದೆ. ಈ ವೇರಿಯೇಬಲ್ ನ ರಚನೆಯನ್ನು ಇಲ್ಲಿ ನಕಲು ಮಾಡಿ ಅಲ್ಲಿ 'message' ಎನ್ನೋಣ. |
05:08 | ಇದನ್ನು ಪರೀಕ್ಷಿಸಲು ನಾನು echo $name ಎನ್ನುವೆನು. |
05:12 | ಮತ್ತು ಅದರಲ್ಲಿ $message ಅನ್ನು ಜೋಡಿಸುವೆನು. |
05:17 | ಈಗ ಇದನ್ನು ಪರೀಕ್ಷಿಸೋಣ. ಇಲ್ಲಿ ನಾನು "Alex" ಎಂದು |
05:21 | ಮತ್ತು ಇಲ್ಲಿ "Hi there!" ಎಂದು ಟೈಪ್ ಮಾಡುವೆನು. |
05:23 | "Send me this" ಅನ್ನು ಕ್ಲಿಕ್ ಮಾಡಿ. ಇಲ್ಲಿ "Alex" ಮತ್ತು "Hi there!" ಬಂದಿದೆ. |
05:28 | ಈಗ form ಡೇಟಾ ಸರಿಯಾಗಿ ಸಬ್ಮಿಟ್ ಆಗಿದೆ ಎಂದು ನಮಗೆ ತಿಳಿಯಿತು. |
05:33 | ಈ ವೀಡಿಯೋ ದ ಮುಂದಿನ ಭಾಗದಲ್ಲಿ, ಇದನ್ನು ವ್ಯಾಲಿಡೇಟ್ ಮಾಡುವ ಬಗ್ಗೆ ಮತ್ತು ಇಲ್ಲಿ ಹೇಳಿದ ಇ-ಮೇಲ್ ಐಡಿಗೆ ಈ ಇ-ಮೇಲ್ ಅನ್ನು ಕಳುಹಿಸುವ ಬಗ್ಗೆ ಕಲಿಯುವೆವು. |
05:42 | ಮುಂದಿನ ಭಾಗದಲ್ಲಿ ಮತ್ತೆ ಭೇಟಿಯಾಗೋಣ. |
05:45 | ಈ ಸ್ಕ್ರಿಪ್ಟ್ ನ ಅನುವಾದಕಿ, ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |