LibreOffice-Suite-Draw/C2/Create-simple-drawings/Kannada
From Script | Spoken-Tutorial
Time | Narration |
00:02 | ಲಿಬೆರ್-ಆಫಿಸ್ ಡ್ರಾ-ನಲ್ಲಿ Create Simple Drawings ಎಂಬ ಟ್ಯುಟೊರಿಯಲ್-ಗೆ ಸ್ವಾಗತ |
00:08 | ಈ ಟ್ಯುಟೊರಿಯಲ್-ನಲ್ಲಿ ನೀವು ಗೆರೆ, ಬಾಣ ಮತ್ತು ಆಯತದಂತಹ ಮೂಲ ಆಕಾರಗಳು; ಜ್ಯಾಮಿತೀಯ ಆಕಾರಗಳು, ಚಿಹ್ನೆಗಳು, ನಕ್ಷತ್ರಗಳು ಮತ್ತು ಬ್ಯಾನರ್ಗಳು ಇವುಗಳನ್ನು ಬಳಸಿ ಸರಳ ಚಿತ್ರಗಳನ್ನು ಬಿಡಿಸುವುದನ್ನು ಕಲಿಯಲಿದ್ದೀರಿ. |
00:22 | ನೀವು ವಸ್ತುವನ್ನು ಆಯ್ಕೆ ಮಾಡುವುದು, ಸ್ಥಳ ಬದಲಾವಣೆ ಮಾಡುವುದು, ತೆಗೆದು ಹಾಕುವುದು, ‘ರೂಲರ್’ ಉಪಯೋಗಿಸಿ ಅಂಚು-ಗಳನ್ನು ಗೊತ್ತುಪಡಿಸುವುದು ಮತ್ತು “ಅಲೈನ್” ಟೂಲ್-ಬಾರನ್ನು ಉಪಯೋಗಿಸಿ ವಸ್ತುಗಳ ಸ್ಥಾನವನ್ನು ಬದಲಿಸುವುದು ಇತ್ಯಾದಿಗಳನ್ನೂ ಕಲಿಯಲಿದ್ದೀರಿ. |
00:33 | ನಾವು ಉಬುಂಟು ಲಿನಕ್ಸ್ ೧೦.೦೪ನ್ನೂ ಲಿಬರ್-ಆಫೀಸ್ ೩.೩.೪ನ್ನೂ ಬಳಸಲಿದ್ದೇವೆ. |
00:42 | ’ಆಬ್ಜೆಕ್ಟ್’ ಅಥವಾ ವಸ್ತುವನ್ನು ವಿವರಿಸೋಣ. |
00:44 | ‘ಡ್ರಾ’ದಲ್ಲಿರುವ ಗೆರೆಗಳು, ಚೌಕಗಳು, ಬಾಣಗಳು, ಗತಿ-ನಕ್ಷೆ ಇತ್ಯಾದಿ ಇತ್ಯಾದಿ ಆಕಾರಗಳನ್ನು ಅಥವಾ ಆಕಾರಗಳ ಗುಂಪನ್ನು ’ಆಬ್ಜೆಕ್ಟ್’ ಎನ್ನುವರು |
00:55 | ಈ ಸ್ಲೈಡ್-ನಲ್ಲಿ ತೋರಿಸಿರುವ ಎಲ್ಲ ಆಕಾರಗಳೂ ‘ಆಬ್ಜೆಕ್ಟ್’ ಆಗಿವೆ. |
00:59 | Desktop ಮೇಲಿರುವ ”WaterCycle” ಎಂಬ ಫೈಲನ್ನು ತೆರೆಯೋಣ. |
01:04 | ಆಬ್ಜೆಕ್ಟ್ ಅನ್ನು ಹೇಗೆ ಆಯ್ಕೆ ಮಾಡುವುದೆಂದು ನೋಡೋಣ . |
01:08 | ಮೋಡವನ್ನು ಆಯ್ಕೆ ಮಾಡಬೇಕೆಂದಿದ್ದರೆ ಅದರ ಮೇಲೆ ಕ್ಲಿಕ್ ಮಾಡಿ. |
01:13 | ಕ್ಲಿಕ್ ಮಾಡಿದಾಗ ಎಂಟು ‘ಹ್ಯಾಂಡಲ್-ಗಳು ಕಾಣುತ್ತವೆ. |
01:16 | ಆಯ್ಕೆ ಮಾಡಿದ ವಸ್ತು ಅಥವಾ ಆಬ್ಜೆಕ್ಟ್-ನ ಬದಿಗಿರುವ ಸಣ್ಣ ನೀಲಿ ಅಥವಾ ಹಸಿರಿನ ಚೌಕಗಳನ್ನು ಹ್ಯಾಂಡಲ್-ಗಳು ಎನ್ನುತ್ತಾರೆ. |
01:22 | ಹ್ಯಾಂಡಲ್-ಗಳು ಮತ್ತು ಅವುಗಳ ಉಪಯೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದಿನ ಟ್ಯುಟೊರಿಯಲ್-ಗಳಲ್ಲಿ ನೋಡೋಣ. |
01:27 | ನಮ್ಮ ಚಿತ್ರದಲ್ಲಿ ಇನ್ನೂ ಕೆಲವು ವಸ್ತುಗಳನ್ನು ಸೇರಿಸೋಣ. |
01:30 | ಭೂಮಿಯನ್ನು ಪ್ರತಿನಿಧಿಸಲು ಒಂದು ಆಯತವನ್ನು ಸೇರಿಸೋಣ. |
01:34 | ’ಡ್ರಾಯಿಂಗ್ ಟೂಲ್-ಬಾರ್’ನಲ್ಲಿ ‘basic shapes’ ಎನ್ನುವುದನ್ನು ಕ್ಲಿಕ್ ಮಾಡಿ, ನಂತರ ‘rectangle’ ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
01:39 | ಈಗ, ಕರ್ಸರ್ ಅನ್ನು “page” ಮೇಲೆ ಕೊಂಡೊಯ್ಯಿರಿ. ನೀವು ಕೂಡಿಸು ಚಿಹ್ನೆಯನ್ನು ಒಂದು ದೊಡ್ಡ ‘I’ ಅಕ್ಷರದೊಂದಿಗೆ ನೋಡುವಿರಿ. |
01:45 | ಮೌಸ್-ನ ಎಡಬಟನ್ ಅನ್ನು ಒತ್ತಿ ಹಿಡಿದು ಆಯತಾಕಾರ ಬರುವಂತೆ ಎಳೆಯಿರಿ. |
01:50 | ಈಗ, ಮೌಸ್-ನ ಬಟನ್ ಅನ್ನು ಬಿಟ್ಟುಬಿಡಿ. |
01:52 | ಇನ್ನು ನಾವು ಭೂಮಿಯಿಂದ ಮೋಡದತ್ತ ನೀರು ಆವಿಯಾಗುವುದನ್ನು ಸೂಚಿಸಲು ಕೆಲವು ಬಾಣಗಳನ್ನು ಚಿತ್ರಿಸೋಣ. |
02:00 | ಗೆರೆಯನ್ನು ಎಳೆಯಲು, “drawing toolbar” ನಲ್ಲಿರುವ “line” ಎಂಬುದನ್ನು ಒತ್ತಿ. |
02:04 | ಕರ್ಸರ್ ಅನ್ನು “page” ಮೇಲೆ ಕೊಂಡೊಯ್ಯಿರಿ. |
02:06 | ನೀವು ಕೂಡಿಸು ಚಿಹ್ನೆಯೊಂದಿಗೆ ಒಂದು ಓರೆಯಾದ ಸಂಯೋಜಕ ರೇಖೆಯನ್ನು ನೋಡುವಿರಿ. |
02:10 | ಮೌಸ್-ನ ಎಡಬಟನ್ ಅನ್ನು ಒತ್ತಿಹಿಡಿದು ಮೇಲಿನಿಂದ ಕೆಳಗಿನ ತನಕ ಎಳೆಯಿರಿ. |
02:15 | ನೀವು ಒಂದು ನೇರವಾದ ಗೆರೆಯನ್ನು ಎಳೆದಿದ್ದೀರಿ! |
02:17 | ಒಂದು ಗೆರೆಯು ಎರಡು ಹ್ಯಾಂಡಲ್-ಗಳನ್ನು ಹೊಂದಿರುತ್ತದೆ. |
02:20 | ಈಗ, ನಾವು ಬಾಣದ ತಲೆಯನ್ನು ಗೆರೆಗೆ ಕೂಡಿಸೋಣ. |
02:23 | ಗೆರೆಯನ್ನು ಆಯ್ಕೆ ಮಾಡೋಣ. |
02:25 | ಮೌಸ್-ನ ಬಲಬಟನ್ ಅನ್ನು ಒತ್ತಿ ಕಾಂಟೆಕ್ಸ್ಟ್ ಮೆನ್ಯುವಿಗೆ ಹೋಗಿ ಅಲ್ಲಿ “line” ಅನ್ನು ಒತ್ತಿರಿ. |
02:30 | “line” ಎಂಬ ಡಯಲಾಗ್ ಬಾಕ್ಸ್ ಅನ್ನು ನೀವು ಕಾಣುವಿರಿ. ಈಗ, “arrow styles” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ “Arrow Style” ಎಂಬ ಡ್ರಾಪ್ ಡೌನ್ ನ ಮೇಲೆ ಕ್ಲಿಕ್ ಮಾಡಿ. |
02:39 | ಇದು ಲಭ್ಯವಿರುವ “Arrow Styles” ಅಥವಾ ಬಾಣಗಳ ಶೈಲಿಗಳನ್ನು ತೋರಿಸುತ್ತದೆ. |
02:43 | ”Arrow” ಎಂದು ಹೆಸರಿರುವ ಮೊದಲ ಆಯ್ಕೆಯನ್ನು ಆಯ್ಕೆ ಮಾಡಿ. |
02:46 | ”OK” ಎಂಬುದನ್ನು ಕ್ಲಿಕ್ ಮಾಡಿ. |
02:48 | ಇದು ಆಯ್ಕೆ ಮಾಡಿದ ಬಾಣದ ತಲೆಯನ್ನು ಗೆರೆಯ ಎರಡೂ ಬದಿಗೆ ಕೂಡಿಸುತ್ತದೆ. |
02:52 | ಆದರೆ ನಮಗೆ ಕೇವಲ ಗೆರೆಯ ಒಂದೇ ಬದಿಗೆ ಬಾಣದ ತಲೆಯು ಬೇಕಿದೆ. |
02:57 | ಆದ್ದರಿಂದ ನಾವು ಮೊದಲಿಗೆ Ctrl ಮತ್ತು Z ಅನ್ನು ಒಟ್ಟಿಗೇ ಒತ್ತಿ ಮಾಡಿದ್ದನ್ನು ರದ್ದು ಮಾಡೋಣ. |
03:02 | ಕಾಂಟೆಕ್ಸ್ಟ್ ಮೆನ್ಯುವನ್ನು ನೋಡಲು ಬಲಬಟನ್ ಅನ್ನು ಒತ್ತಿ. |
03:05 | ಈಗ, “Line” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
03:09 | ”Arrow styles” ಎಂಬ ಆಯ್ಕೆಯ ಕೆಳಗೆ, “Style” ಎಂಬ ಆಯ್ಕೆ ಕಾಣಿಸುತ್ತದೆ. |
03:14 | ನೀವು ಗೆರೆಯ ಎರಡೂ ತುದಿಗಳಲ್ಲಿ ಡ್ರಾಪ್ ಡೌನ್ ಬಾಕ್ಸ್ ಗಳನ್ನು ನೋಡುವಿರಿ. |
03:19 | ಎಡಬದಿಯ ಡ್ರಾಪ್ ಡೌನ್ ಬಾಕ್ಸ್ ನಲ್ಲಿ “Arrow” ಎಂಬುವುದನ್ನು ಆಯ್ಕೆ ಮಾಡಿ. |
03:23 | ಬಲಬದಿಯ ಡ್ರಾಪ್ ಡೌನ್ ಬಾಕ್ಸ್ ನಲ್ಲಿ “none” ಎಂದು ಆಯ್ಕೆ ಮಾಡಿ. |
03:26 | ”OK” ಎಂದು ಕ್ಲಿಕ್ ಮಾಡಿ. |
03:28 | ಬಾಣದ ತಲೆಯು ಗೆರೆಯ ಒಂದು ತುದಿಗೆ ಕೂಡಿದ್ದನ್ನು ಗಮನಿಸಿ. |
03:33 | ನಾವು ಬಾಣವನ್ನು “Lines And Arrows” ಎಂಬ ಆಯ್ಕೆಯಿಂದಲೂ ಚಿತ್ರಿಸಬಹುದು. |
03:38 | ಈಗ ಈ ಬಾಣದ ಪಕ್ಕದಲ್ಲಿ ಇನ್ನೂ ಎರಡು ಬಾಣಗಳನ್ನು ಚಿತ್ರಿಸೋಣ. |
03:42 | ಡ್ರಾಯಿಂಗ್ ಟೂಲ್-ಬಾರ್-ನಲ್ಲಿ “Lines and Arrows” ಅನ್ನುವುದರ ಮೇಲೆ ಕ್ಲಿಕ್ ಮಾಡಿ “Line starts with Arrow” ಆಯ್ಕೆ ಮಾಡಿ. |
03:48 | ಕರ್ಸರ್ ಅನ್ನು “Draw” ಪುಟದ ಮೇಲೆ ಕೊಂಡೊಯ್ಯಿರಿ. |
03:51 | ಮೌಸ್-ನ ಎಡಗುಂಡಿಯನ್ನು ಒತ್ತಿಹಿಡಿದು ಮೇಲಿನಿಂದ ಕೆಳಗಿನವರೆಗೆ ಎಳೆಯಿರಿ. |
03:56 | ಬಾಣವನ್ನು ಹೀಗೆ ಬರೆಯಲು ಸುಲಭವಲ್ಲವೇ? |
04:00 | ಹೀಗೆಯೇ ಇನ್ನೊಂದು ಬಾಣವನ್ನು ಬರೆಯೋಣ. |
04:06 | ಈ ಟ್ಯುಟೊರಿಯಲ್-ಅನ್ನು ನಿಲ್ಲಿಸಿ ಈ ಅಭ್ಯಾಸವನ್ನು ಮಾಡಿರಿ. |
04:09 | ”MyWaterCycle” ಎಂಬ ಫೈಲ್ ನಲ್ಲಿ, ಗೆರೆಯೊಂದನ್ನು ಎಳೆಯಿರಿ. |
04:13 | ಗೆರೆಯನ್ನು ಆಯ್ಕೆ ಮಾಡಿ, “Line” ಎಂಬ ಡಯಲಾಗ್ ಬಾಕ್ಸ್ ಅನ್ನು ತೆರೆಯಿರಿ. |
04:16 | ”Line Properties” ಎಂಬ ಆಯ್ಕೆಯಡಿ, ಗೆರೆಗಳ “style, color, width ಮತ್ತು “transparency”ಗಳನ್ನು ಬದಲಿಸಿ. |
04:24 | ”Arrow Styles” ಆಯ್ಕೆಯಡಿ ಬಾಣದ ಶೈಲಿಯನ್ನು ಬದಲಿಸಿ. |
04:28 | ಮುಂದೆ, ನಾವು ನಕ್ಷತ್ರವೊಂದನ್ನು ಬಿಡಿಸೋಣ. |
04:31 | ಡ್ರಾಯಿಂಗ್ ಟೂಲ್-ಬಾರ್-ಗೆ ಹೋಗಿ “Stars” ಎಂದು ಬರೆದಿರುವ ಸಣ್ಣ ಕಪ್ಪು ತ್ರಿಕೋನವನ್ನು ಆಯ್ಕೆ ಮಾಡಿ. |
04:37 | ನಾವು “5 Point Star” ಅನ್ನು ಆಯ್ಕೆ ಮಾಡೋಣ. |
04:41 | ಈಗ ಕರ್ಸರ್-ಅನ್ನು ಮೋಡದ ಪಕ್ಕಕ್ಕೆ ಇರಿಸಿ. |
04:44 | ಮೌಸ್-ನ ಎಡಬಟನ್ ಅನ್ನು ಒತ್ತಿ ಎಡಕ್ಕೆ ಎಳೆಯಿರಿ. |
04:48 | ನೀವು ನಕ್ಷತ್ರವನ್ನು ಚಿತ್ರಿಸಿದ್ದೀರಿ. |
04:50 | ಈಗ, ಆಬ್ಜೆಕ್ಟ್ ಅಥವಾ ವಸ್ತುಗಳ ಸ್ಥಳ ಬದಲಾಯಿಸುವುದು ಮತ್ತು ಮರೆಮಾಡುವ (Delete) ಬಗ್ಗೆ ಕಲಿಯೋಣ. |
04:54 | ವಸ್ತುವಿನ ಸ್ಥಳ ಬದಲಾಯಿಸಲು, ವಸ್ತುವನ್ನು ಆಯ್ಕೆ ಮಾಡಿ ಬೇಕಾದ ಸ್ಥಳಕ್ಕೆ ಎಳೆಯಿರಿ. |
04:59 | ಈಗ, ಮೌಸ್-ನ ಬಟನ್ ಅನ್ನು ಬಿಟ್ಟುಬಿಡಿ. |
05:02 | ವಸ್ತುವನ್ನು ನಡೆಸಲು ಕೀಬೋರ್ಡ್ ನಲ್ಲಿನ “ಮೇಲೆ”, “ಕೆಳಗೆ”, “ಬಲ” ಮತ್ತು “ಎಡ” ಕೀಲಿಗಳನ್ನು ಬಳಸಬಹುದು. |
05:08 | ವಸ್ತುಗಳನ್ನು ನಡೆಸುವುದು ಸುಲಭವಲ್ಲವೆ? |
05:11 | ವಸ್ತುವನ್ನು ಮರೆಯಾಗಿಸಲು, ಅದನ್ನು ಆಯ್ಕೆ ಮಾಡಿ “Delete” ಕೀಯನ್ನು ಒತ್ತಿರಿ. |
05:17 | ವಸ್ತುವು ಅಳಿಸಲ್ಪಟ್ಟಿದೆ. ಸುಲಭವಲ್ಲವೇ? |
05:20 | ಈಗ ನಾವು “Ruler” ಮತ್ತು “Align” ಎಂಬ ಕೆಲವು ಮೂಲಭೂತ ಆಯ್ಕೆಗಳ ಬಗ್ಗೆ ಕಲಿಯೋಣ. |
05:26 | ”Ruler” ಎಂಬುದನ್ನು ಪುಟದ ಅಂಚನ್ನು ಸರಿಹೊಂದಿಸಲು ಮತ್ತು ಪರಿಮಾಣದ ಪ್ರಮಾಣ ಅಥವಾ unit ಅನ್ನು ಬದಲಿಸಲು ಉಪಯೋಗಿಸುತ್ತೇವೆ. |
05:31 | ”Align” ಟೂಲ್-ಬಾರ್ ಎಂಬುದು ವಸ್ತುಗಳನ್ನು ಸ್ಥಾಪಿಸಲು ಉಪಯೋಗಿಸಲ್ಪಡುತ್ತದೆ. |
05:35 | ”Ruler” ಎಂಬುದು Draw ನ ಕಾರ್ಯಕ್ಷೇತ್ರದ ಮೇಲ್ಭಾಗದಲ್ಲಿ ಹಾಗೂ ಎಡಬದಿಗೆ ಕಾಣಿಸುತ್ತದೆ. |
05:40 | ಪರಿಮಾಣದ ಪ್ರಮಾಣವನ್ನು ಗೊತ್ತುಪಡಿಸಲು, “Ruler” ಎಂಬುದರ ಮೇಲೆ ಮೌಸ್ ನ ಬಲಬಟನ್ ಅನ್ನು ಒತ್ತಿರಿ. |
05:45 | ನೀವು ಪರಿಮಾಣ-ಪ್ರಮಾಣದ ವಿವಿಧ ಹೆಸರುಗಳನ್ನು ಕಾಣುವಿರಿ. |
05:48 | ”Centimeter” ಎನ್ನುವುದನ್ನು ಆಯ್ಕೆ ಮಾಡಿ. |
05:50 | ಮೇಲಿನ ರೂಲರ್-ಗೆ ಪರಿಮಾಣ ಪ್ರಮಾಣವು ಸೆಂಟಿಮೀಟರ್ ಎಂದು ಆಯ್ಕೆ ಮಾಡಲ್ಪಟ್ಟಿದೆ. |
05:55 | ಹಾಗೆಯೇ, ಎಡಬದಿಯ ರೂಲರ್-ಗೆ ಕೂಡ ಪರಿಮಾಣ-ಪ್ರಮಾಣವನ್ನು ಆಯ್ಕೆ ಮಾಡೋಣ. |
06:00 | ವಸ್ತುಗಳು ಅಳತೆಗೆ ತಕ್ಕಂತೆ ಬರೆಯಲ್ಪಟ್ಟಿವೆ ಎಂದು ಖಚಿತಪಡಿಸಿಕೊಳ್ಳಲು ಎರಡೂ ರೂಲರ್-ಗಳಿಗೆ ಒಂದೇ ಪರಿಮಾಣ-ಪ್ರಮಾಣವನ್ನು ಆಯ್ಕೆ ಮಾಡಿ. |
06:08 | ಸಕ್ರಿಯ ರೂಲರ್ ಬಿಳಿಬಣ್ಣದಲ್ಲಿರುವುದನ್ನು ಗಮನಿಸಬಹುದು. |
06:12 | ರೂಲರ್-ನ ತುದಿಗಳು “Page Setup” ಆಯ್ಕೆಯ ಮುಖಾಂತರ ಗೊತ್ತುಪಡಿಸಿದ ಪುಟದ ಅಂಚನ್ನು ಸೂಚಿಸುತ್ತವೆ. |
06:19 | ರೂಲರ್ ಹೇಗೆ ವಸ್ತುಗಳ ಅಳತೆಯನ್ನು ಸೂಚಿಸುತ್ತದೆ ಎಂಬುದನ್ನು ನೋಡೋಣ. |
06:23 | ಮೋಡವನ್ನು ಆಯ್ಕೆ ಮಾಡಿರಿ. |
06:25 | ರೂಲರ್-ನ ಮೇಲೆ ಸಣ್ಣ ಆರಂಭದ ಮತ್ತು ಕೊನೆಯ ಗುರುತುಗಳನ್ನು ಗಮನಿಸಿದಿರಾ? |
06:29 | ಇವು ಮೋಡದ ಅಂಚುಗಳನ್ನು ಸೂಚಿಸುತ್ತವೆ. |
06:32 | ನೀವು ರೂಲರ್-ನಲ್ಲಿ ಈ ಗುರುತುಗಳನ್ನು ಚಲಿಸಿದಂತೆಯೇ ವಸ್ತುವೂ ಬದಲಾಗುತ್ತಿರುವುದನ್ನು ಗಮನಿಸಿ. |
06:38 | ರೂಲರ್ ಎಂಬುದು “page”ನ ಮೇಲಿರುವ ವಸ್ತುವಿನ ಗಾತ್ರವನ್ನು ತೋರಿಸುತ್ತದೆ. |
06:42 | ಇದು ಯಾವುದೇ ವಸ್ತುವನ್ನು ಪುಟದ ಮೇಲೆ ಸ್ಥಾಪಿಸಲು ನಮ್ಮನ್ನು ಶಕ್ತಗೊಳಿಸುತ್ತದೆ ಮತ್ತು ಪುಟದ ಗಡಿಯನ್ನೂ ತೋರಿಸುತ್ತದೆ. |
06:49 | ಈಗ ಮುಂದಿನ ಸಹಾಯಕ ವಿಷಯವಾದ “Align” ಟೂಲ್-ಬಾರ್-ನ ಬಗ್ಗೆ ತಿಳಿಯೋಣ. |
06:53 | ”Align” ಟೂಲ್-ಬಾರ್-ಅನ್ನು, ಆಯ್ಕೆ ಮಾಡಿದ ವಸ್ತುವನ್ನು ಎಡ, ಬಲ, ಮೇಲೆ ಅಥವಾ ಕೆಳಕ್ಕೆ ಸಾಲುಗೂಡಿಸಲು ಉಪಯೋಗಿಸಬಹುದು. |
07:01 | ”Align” ಟೂಲ್-ಬಾರ್ ಅನ್ನು ಸಕ್ರಿಯಗೊಳಿಸಲು “Main Menu” ಗೆ ಹೋಗಿ “View” ಅನ್ನು ಕ್ಲಿಕ್ ಮಾಡಿ. |
07:07 | ”View” ಆಯ್ಕೆಯಡಿ “Toolbars” ಅನ್ನು ಒತ್ತಿರಿ. |
07:11 | ವಿವಿಧ ಟೂಲ್-ಬಾರ್-ಗಳ ಪಟ್ಟಿಯನ್ನು ಕಾಣುವಿರಿ. |
07:13 | ”Align” ಅನ್ನು ಒತ್ತಿರಿ. |
07:15 | ”Align” ಟೂಲ್-ಬಾರ್ ಪ್ರದರ್ಶಿಸಲ್ಪಡುತ್ತದೆ. |
07:18 | ವಿವಿಧ ಅಲೈನ್ ಆಯ್ಕೆಗಳನ್ನು ಉಪಯೋಗಿಸಿ ವಸ್ತುಗಳನ್ನು ಹೇಗೆ ಜೋಡಿಸಬಹುದು ಎಂದು ನೋಡೋಣ. |
07:24 | ಮೋಡವನ್ನು ಆಯ್ಕೆ ಮಾಡೋಣ. |
07:26 | ”Align” ಟೂಲ್-ಬಾರ್-ನಲ್ಲಿ “Left” ಎಂದು ಆಯ್ಕೆ ಮಾಡಿ. |
07:29 | ಮೋಡವು ಎಡಬದಿಗೆ ಜೋಡಿಸಲ್ಪಟ್ಟಿತು. |
07:32 | ಈಗ “Centered” ಮತ್ತು “Centre” ಎಂಬ ಆಯ್ಕೆಗಳ ವ್ಯತ್ಯಾಸವನ್ನು ತಿಳಿಯೋಣ. |
07:38 | ವೃತ್ತವನ್ನು “centre” ಆಯ್ಕೆಯೊಂದಿಗೆ ಜೋಡಿಸಿ ನಂತರ “Centered” ಆಯ್ಕೆಯೊಂದಿಗೆ ಜೋಡಿಸೋಣ. |
07:43 | ಮೊದಲಿಗೆ, ವೃತ್ತವನ್ನು ಬಲಕ್ಕೆ ಜೋಡಿಸೋಣ. |
07:47 | ಈಗ ವೃತ್ತವನ್ನು ಆಯ್ಕೆ ಮಾಡಿ, “Align” ಟೂಲ್-ಬಾರ್-ನಲ್ಲಿ “Right” ಎಂಬುದನ್ನು ಆಯ್ಕೆ ಮಾಡಿ. |
07:52 | ಈಗ “Align” ಟೂಲ್-ಬಾರ್-ನಲ್ಲಿ “Centre” ಎಂದು ಆಯ್ಕೆ ಮಾಡಿರಿ. |
07:56 | ಈಗ ವೃತ್ತವು ಮಧ್ಯಕ್ಕೆ ಜೋಡಿಸಲ್ಪಟ್ಟಿತು. |
07:59 | ”Centre” ಆಯ್ಕೆಯು ವಸ್ತುವನ್ನು ಪುಟದ ಮೇಲಿನ ಮತ್ತು ಕೆಳಗಿನ ಅಂಚಿನ ಮಧ್ಯಬಿಂದುವಿಗೆ ಸ್ಥಾಪಿಸುತ್ತದೆ. . |
08:06 | ಈ ಆಯ್ಕೆಯು ವಸ್ತುವಿನ ಸ್ಥಾನವನ್ನು ಪುಟದ ಅಗಲದ ಪ್ರಕಾರ ಬದಲಿಸದು. |
08:10 | ಈಗ, “Align” ಟೂಲ್-ಬಾರ್-ನಲ್ಲಿ “Centered" ಆಯ್ಕೆ ಮಾಡಿ. |
08:15 | ಈಗ ವೃತ್ತವು ಪುಟದ ಮಧ್ಯಭಾಗದಲ್ಲಿ ಸ್ಥಾಪಿಸಲ್ಪಟ್ಟಿದೆ. |
08:18 | ”Centered” ಆಯ್ಕೆಯು ವೃತ್ತವನ್ನು ಪುಟದ ಮಧ್ಯಭಾಗಕ್ಕೆ ಸರಿಯಾಗಿ ಜೋಡಿಸಿತು. |
08:23 | ಈ ಆಯ್ಕೆಯು ವಸ್ತುವನ್ನು ಪುಟದ ಮೇಲಿನ-ಕೆಳಗಿನ ಅಂಚುಗಳ ಪ್ರಕಾರವಾಗಿ, ಅಂತೆಯೇ ಪುಟದ ಅಗಲದ ಪ್ರಕಾರ ಸ್ಥಾಪಿಸುತ್ತದೆ. |
08:33 | ಈಗ, ನಾವು ವಸ್ತುಗಳನ್ನು ಮೊದಲಿನಂತೆಯೇ ಅವುಗಳ ಸರಿಯಾದ ಸ್ಥಾನಕ್ಕೆ ಹಿಂದಿರುಗಿಸೋಣ. |
08:40 | ಫೈಲ್ ಅನ್ನು ಮುಚ್ಚುವ ಮುನ್ನ “save” ಮಾಡಲು ನೆನಪಿಡಿ. |
08:43 | ನಿಮಗೆ ಇನ್ನೊಂದು ಅಭ್ಯಾಸ ಇಲ್ಲಿದೆ. |
08:46 | ”MyWaterCycle” ಫೈಲ್ ನಲ್ಲಿ ಇನ್ನೊಂದು ಪುಟವನ್ನು ಸೇರಿಸಿ. |
08:50 | ಈ ಎರಡು ಆಕಾರಗಳನ್ನು ಬಿಡಿಸಿರಿ. |
08:53 | ಕೀ ಬೋರ್ಡ್ ನ ದಿಕ್ಸೂಚಕ ಕೀಲಿಗಳ ಮೂಲಕ ಅವುಗಳನ್ನು ನಡೆಸಿರಿ. |
08:55 | ನೀವು ರಚಿಸಿದ ಯಾವುದೇ ವಸ್ತುವನ್ನು ಆಯ್ಕೆ ಮಾಡಿ ಅಳಿಸಿರಿ. |
08:59 | ರೂಲರ್ ಅನ್ನು ಉಪಯೋಗಿಸಿ ಕೆಲವು ವಸ್ತುಗಳ ಅಳತೆ ಮಾಡಿರಿ. |
09:04 | ನಂತರ “Align” ಟೂಲ್-ಬಾರ್ ಅನ್ನು ಬಳಸಿ ವಸ್ತುಗಳನ್ನು ಪುಟದ ಮಧ್ಯಕ್ಕೆ ಜೋಡಿಸಿರಿ. |
09:11 | ಇದರೊಂದಿಗೆ ಲಿಬ್ರೆ-ಆಫೀಸ್ ಡ್ರಾ ದ ಈ ಟ್ಯುಟೊರಿಯಲ್-ನ ಕೊನೆಗೆ ಬಂದಿದ್ದೇವೆ. |
09:15 | ಈ ಟ್ಯುಟೊರಿಯಲ್-ನಲ್ಲಿ ನೀವು ಗೆರೆ, ಬಾಣ ಮತ್ತು ಆಯತದಂತಹ ಮೂಲ ಆಕಾರಗಳು; ಜ್ಯಾಮಿತೀಯ ಆಕಾರಗಳು, ಚಿಹ್ನೆಗಳು, ನಕ್ಷತ್ರಗಳು ಮತ್ತು ಬ್ಯಾನರ್ಗಳು ಇವುಗಳನ್ನು ಬಳಸಿ ಸರಳ ಚಿತ್ರಗಳನ್ನು ಬಿಡಿಸುವುದನ್ನು ಕಲಿಯಲಿದ್ದೀರಿ. |
09:29 | ನೀವು ವಸ್ತುಗಳನ್ನು ಆಯ್ಕೆ ಮಾಡಲು ಮತ್ತು ಅಳಿಸಲು ಹಾಗೂ “ರೂಲರ್” ಮತ್ತು “align” ಟೂಲ್-ಬಾರ್ ಉಪಯೋಗಿಸಿ ವಸ್ತುಗಳನ್ನು ಜೋಡಿಸಲು ಕಲಿತಿದ್ದೀರಿ. |
09:37 | ಈ ಲಿಂಕ್-ನಲ್ಲಿ ಸಿಗುವ ವೀಡಿಯೊ ವೀಕ್ಷಿಸಿ:http://spoken-tutorial.org/What_is_a_Spoken_Tutorial |
09:41 | ಇದು ಸ್ಪೋಕನ್ ಟ್ಯುಟೊರಿಯಲ್ ಪ್ರಕಲ್ಪವನ್ನು ವಿವರಿಸುತ್ತದೆ. |
09:44 | ನಿಮ್ಮಲ್ಲಿ ಉತ್ತಮ ಬ್ಯಾಂಡ್-ವಿಡ್ತ್ ಇಲ್ಲದಿದ್ದರೆ ವೀಡಿಯೊ-ವನ್ನು ಡೌನ್ಲೋಡ್ ಮಾಡಿ ನೋಡಿ. |
09:48 | ಸ್ಪೋಕನ್ ಟ್ಯುಟೊರಿಯಲ್ ತಂಡವು ಸ್ಪೋಕನ್ ಟ್ಯುಟೊರಿಯಲ್-ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:54 | * ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:58 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
10:04 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ. |
10:09 | ಇದು ICT, MHRD ಮೂಲಕ ಭಾರತ ಸರ್ಕಾರದ ರಾಷ್ಟ್ರೀಯ ಸಾಕ್ಷರತಾ ಮಿಷನ್ ನ ಆಧಾರವನ್ನು ಪಡೆದಿದೆ. |
10:17 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. |
10:27 | ಈ ಟ್ಯುಟೊರಿಯಲ್ ನ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ರಾಕೇಶ್ ರಾವ್. ಧನ್ಯವಾದಗಳು. |