LibreOffice-Suite-Draw/C2/Create-simple-drawings/Kannada

From Script | Spoken-Tutorial
Jump to: navigation, search
Time Narration
00:02 ಲಿಬೆರ್-ಆಫಿಸ್ ಡ್ರಾ-ನಲ್ಲಿ Create Simple Drawings ಎಂಬ ಟ್ಯುಟೊರಿಯಲ್-ಗೆ ಸ್ವಾಗತ
00:08 ಈ ಟ್ಯುಟೊರಿಯಲ್-ನಲ್ಲಿ ನೀವು ಗೆರೆ, ಬಾಣ ಮತ್ತು ಆಯತದಂತಹ ಮೂಲ ಆಕಾರಗಳು; ಜ್ಯಾಮಿತೀಯ ಆಕಾರಗಳು, ಚಿಹ್ನೆಗಳು, ನಕ್ಷತ್ರಗಳು ಮತ್ತು ಬ್ಯಾನರ್ಗಳು ಇವುಗಳನ್ನು ಬಳಸಿ ಸರಳ ಚಿತ್ರಗಳನ್ನು ಬಿಡಿಸುವುದನ್ನು ಕಲಿಯಲಿದ್ದೀರಿ.
00:22 ನೀವು ವಸ್ತುವನ್ನು ಆಯ್ಕೆ ಮಾಡುವುದು, ಸ್ಥಳ ಬದಲಾವಣೆ ಮಾಡುವುದು, ತೆಗೆದು ಹಾಕುವುದು, ‘ರೂಲರ್’ ಉಪಯೋಗಿಸಿ ಅಂಚು-ಗಳನ್ನು ಗೊತ್ತುಪಡಿಸುವುದು ಮತ್ತು “ಅಲೈನ್” ಟೂಲ್-ಬಾರನ್ನು ಉಪಯೋಗಿಸಿ ವಸ್ತುಗಳ ಸ್ಥಾನವನ್ನು ಬದಲಿಸುವುದು ಇತ್ಯಾದಿಗಳನ್ನೂ ಕಲಿಯಲಿದ್ದೀರಿ.
00:33 ನಾವು ಉಬುಂಟು ಲಿನಕ್ಸ್ ೧೦.೦೪ನ್ನೂ ಲಿಬರ್-ಆಫೀಸ್ ೩.೩.೪ನ್ನೂ ಬಳಸಲಿದ್ದೇವೆ.
00:42 ’ಆಬ್ಜೆಕ್ಟ್’ ಅಥವಾ ವಸ್ತುವನ್ನು ವಿವರಿಸೋಣ.
00:44 ‘ಡ್ರಾ’ದಲ್ಲಿರುವ ಗೆರೆಗಳು, ಚೌಕಗಳು, ಬಾಣಗಳು, ಗತಿ-ನಕ್ಷೆ ಇತ್ಯಾದಿ ಇತ್ಯಾದಿ ಆಕಾರಗಳನ್ನು ಅಥವಾ ಆಕಾರಗಳ ಗುಂಪನ್ನು ’ಆಬ್ಜೆಕ್ಟ್’ ಎನ್ನುವರು
00:55 ಈ ಸ್ಲೈಡ್-ನಲ್ಲಿ ತೋರಿಸಿರುವ ಎಲ್ಲ ಆಕಾರಗಳೂ ‘ಆಬ್ಜೆಕ್ಟ್’ ಆಗಿವೆ.
00:59 Desktop ಮೇಲಿರುವ ”WaterCycle” ಎಂಬ ಫೈಲನ್ನು ತೆರೆಯೋಣ.
01:04 ಆಬ್ಜೆಕ್ಟ್ ಅನ್ನು ಹೇಗೆ ಆಯ್ಕೆ ಮಾಡುವುದೆಂದು ನೋಡೋಣ .
01:08 ಮೋಡವನ್ನು ಆಯ್ಕೆ ಮಾಡಬೇಕೆಂದಿದ್ದರೆ ಅದರ ಮೇಲೆ ಕ್ಲಿಕ್ ಮಾಡಿ.
01:13 ಕ್ಲಿಕ್ ಮಾಡಿದಾಗ ಎಂಟು ‘ಹ್ಯಾಂಡಲ್-ಗಳು ಕಾಣುತ್ತವೆ.
01:16 ಆಯ್ಕೆ ಮಾಡಿದ ವಸ್ತು ಅಥವಾ ಆಬ್ಜೆಕ್ಟ್-ನ ಬದಿಗಿರುವ ಸಣ್ಣ ನೀಲಿ ಅಥವಾ ಹಸಿರಿನ ಚೌಕಗಳನ್ನು ಹ್ಯಾಂಡಲ್-ಗಳು ಎನ್ನುತ್ತಾರೆ.
01:22 ಹ್ಯಾಂಡಲ್-ಗಳು ಮತ್ತು ಅವುಗಳ ಉಪಯೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದಿನ ಟ್ಯುಟೊರಿಯಲ್-ಗಳಲ್ಲಿ ನೋಡೋಣ.
01:27 ನಮ್ಮ ಚಿತ್ರದಲ್ಲಿ ಇನ್ನೂ ಕೆಲವು ವಸ್ತುಗಳನ್ನು ಸೇರಿಸೋಣ.
01:30 ಭೂಮಿಯನ್ನು ಪ್ರತಿನಿಧಿಸಲು ಒಂದು ಆಯತವನ್ನು ಸೇರಿಸೋಣ.
01:34 ’ಡ್ರಾಯಿಂಗ್ ಟೂಲ್-ಬಾರ್’ನಲ್ಲಿ ‘basic shapes’ ಎನ್ನುವುದನ್ನು ಕ್ಲಿಕ್ ಮಾಡಿ, ನಂತರ ‘rectangle’ ಎನ್ನುವುದರ ಮೇಲೆ ಕ್ಲಿಕ್ ಮಾಡಿ.
01:39 ಈಗ, ಕರ್ಸರ್ ಅನ್ನು “page” ಮೇಲೆ ಕೊಂಡೊಯ್ಯಿರಿ. ನೀವು ಕೂಡಿಸು ಚಿಹ್ನೆಯನ್ನು ಒಂದು ದೊಡ್ಡ ‘I’ ಅಕ್ಷರದೊಂದಿಗೆ ನೋಡುವಿರಿ.
01:45 ಮೌಸ್-ನ ಎಡಬಟನ್ ಅನ್ನು ಒತ್ತಿ ಹಿಡಿದು ಆಯತಾಕಾರ ಬರುವಂತೆ ಎಳೆಯಿರಿ.
01:50 ಈಗ, ಮೌಸ್-ನ ಬಟನ್ ಅನ್ನು ಬಿಟ್ಟುಬಿಡಿ.
01:52 ಇನ್ನು ನಾವು ಭೂಮಿಯಿಂದ ಮೋಡದತ್ತ ನೀರು ಆವಿಯಾಗುವುದನ್ನು ಸೂಚಿಸಲು ಕೆಲವು ಬಾಣಗಳನ್ನು ಚಿತ್ರಿಸೋಣ.
02:00 ಗೆರೆಯನ್ನು ಎಳೆಯಲು, “drawing toolbar” ನಲ್ಲಿರುವ “line” ಎಂಬುದನ್ನು ಒತ್ತಿ.
02:04 ಕರ್ಸರ್ ಅನ್ನು “page” ಮೇಲೆ ಕೊಂಡೊಯ್ಯಿರಿ.
02:06 ನೀವು ಕೂಡಿಸು ಚಿಹ್ನೆಯೊಂದಿಗೆ ಒಂದು ಓರೆಯಾದ ಸಂಯೋಜಕ ರೇಖೆಯನ್ನು ನೋಡುವಿರಿ.
02:10 ಮೌಸ್-ನ ಎಡಬಟನ್ ಅನ್ನು ಒತ್ತಿಹಿಡಿದು ಮೇಲಿನಿಂದ ಕೆಳಗಿನ ತನಕ ಎಳೆಯಿರಿ.
02:15 ನೀವು ಒಂದು ನೇರವಾದ ಗೆರೆಯನ್ನು ಎಳೆದಿದ್ದೀರಿ!
02:17 ಒಂದು ಗೆರೆಯು ಎರಡು ಹ್ಯಾಂಡಲ್-ಗಳನ್ನು ಹೊಂದಿರುತ್ತದೆ.
02:20 ಈಗ, ನಾವು ಬಾಣದ ತಲೆಯನ್ನು ಗೆರೆಗೆ ಕೂಡಿಸೋಣ.
02:23 ಗೆರೆಯನ್ನು ಆಯ್ಕೆ ಮಾಡೋಣ.
02:25 ಮೌಸ್-ನ ಬಲಬಟನ್ ಅನ್ನು ಒತ್ತಿ ಕಾಂಟೆಕ್ಸ್ಟ್ ಮೆನ್ಯುವಿಗೆ ಹೋಗಿ ಅಲ್ಲಿ “line” ಅನ್ನು ಒತ್ತಿರಿ.
02:30 “line” ಎಂಬ ಡಯಲಾಗ್ ಬಾಕ್ಸ್ ಅನ್ನು ನೀವು ಕಾಣುವಿರಿ. ಈಗ, “arrow styles” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ “Arrow Style” ಎಂಬ ಡ್ರಾಪ್ ಡೌನ್ ನ ಮೇಲೆ ಕ್ಲಿಕ್ ಮಾಡಿ.
02:39 ಇದು ಲಭ್ಯವಿರುವ “Arrow Styles” ಅಥವಾ ಬಾಣಗಳ ಶೈಲಿಗಳನ್ನು ತೋರಿಸುತ್ತದೆ.
02:43 ”Arrow” ಎಂದು ಹೆಸರಿರುವ ಮೊದಲ ಆಯ್ಕೆಯನ್ನು ಆಯ್ಕೆ ಮಾಡಿ.
02:46 ”OK” ಎಂಬುದನ್ನು ಕ್ಲಿಕ್ ಮಾಡಿ.
02:48 ಇದು ಆಯ್ಕೆ ಮಾಡಿದ ಬಾಣದ ತಲೆಯನ್ನು ಗೆರೆಯ ಎರಡೂ ಬದಿಗೆ ಕೂಡಿಸುತ್ತದೆ.
02:52 ಆದರೆ ನಮಗೆ ಕೇವಲ ಗೆರೆಯ ಒಂದೇ ಬದಿಗೆ ಬಾಣದ ತಲೆಯು ಬೇಕಿದೆ.
02:57 ಆದ್ದರಿಂದ ನಾವು ಮೊದಲಿಗೆ Ctrl ಮತ್ತು Z ಅನ್ನು ಒಟ್ಟಿಗೇ ಒತ್ತಿ ಮಾಡಿದ್ದನ್ನು ರದ್ದು ಮಾಡೋಣ.
03:02 ಕಾಂಟೆಕ್ಸ್ಟ್ ಮೆನ್ಯುವನ್ನು ನೋಡಲು ಬಲಬಟನ್ ಅನ್ನು ಒತ್ತಿ.
03:05 ಈಗ, “Line” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
03:09 ”Arrow styles” ಎಂಬ ಆಯ್ಕೆಯ ಕೆಳಗೆ, “Style” ಎಂಬ ಆಯ್ಕೆ ಕಾಣಿಸುತ್ತದೆ.
03:14 ನೀವು ಗೆರೆಯ ಎರಡೂ ತುದಿಗಳಲ್ಲಿ ಡ್ರಾಪ್ ಡೌನ್ ಬಾಕ್ಸ್ ಗಳನ್ನು ನೋಡುವಿರಿ.
03:19 ಎಡಬದಿಯ ಡ್ರಾಪ್ ಡೌನ್ ಬಾಕ್ಸ್ ನಲ್ಲಿ “Arrow” ಎಂಬುವುದನ್ನು ಆಯ್ಕೆ ಮಾಡಿ.
03:23 ಬಲಬದಿಯ ಡ್ರಾಪ್ ಡೌನ್ ಬಾಕ್ಸ್ ನಲ್ಲಿ “none” ಎಂದು ಆಯ್ಕೆ ಮಾಡಿ.
03:26 ”OK” ಎಂದು ಕ್ಲಿಕ್ ಮಾಡಿ.
03:28 ಬಾಣದ ತಲೆಯು ಗೆರೆಯ ಒಂದು ತುದಿಗೆ ಕೂಡಿದ್ದನ್ನು ಗಮನಿಸಿ.
03:33 ನಾವು ಬಾಣವನ್ನು “Lines And Arrows” ಎಂಬ ಆಯ್ಕೆಯಿಂದಲೂ ಚಿತ್ರಿಸಬಹುದು.
03:38 ಈಗ ಈ ಬಾಣದ ಪಕ್ಕದಲ್ಲಿ ಇನ್ನೂ ಎರಡು ಬಾಣಗಳನ್ನು ಚಿತ್ರಿಸೋಣ.
03:42 ಡ್ರಾಯಿಂಗ್ ಟೂಲ್-ಬಾರ್-ನಲ್ಲಿ “Lines and Arrows” ಅನ್ನುವುದರ ಮೇಲೆ ಕ್ಲಿಕ್ ಮಾಡಿ “Line starts with Arrow” ಆಯ್ಕೆ ಮಾಡಿ.
03:48 ಕರ್ಸರ್ ಅನ್ನು “Draw” ಪುಟದ ಮೇಲೆ ಕೊಂಡೊಯ್ಯಿರಿ.
03:51 ಮೌಸ್-ನ ಎಡಗುಂಡಿಯನ್ನು ಒತ್ತಿಹಿಡಿದು ಮೇಲಿನಿಂದ ಕೆಳಗಿನವರೆಗೆ ಎಳೆಯಿರಿ.
03:56 ಬಾಣವನ್ನು ಹೀಗೆ ಬರೆಯಲು ಸುಲಭವಲ್ಲವೇ?
04:00 ಹೀಗೆಯೇ ಇನ್ನೊಂದು ಬಾಣವನ್ನು ಬರೆಯೋಣ.
04:06 ಈ ಟ್ಯುಟೊರಿಯಲ್-ಅನ್ನು ನಿಲ್ಲಿಸಿ ಈ ಅಭ್ಯಾಸವನ್ನು ಮಾಡಿರಿ.
04:09 ”MyWaterCycle” ಎಂಬ ಫೈಲ್ ನಲ್ಲಿ, ಗೆರೆಯೊಂದನ್ನು ಎಳೆಯಿರಿ.
04:13 ಗೆರೆಯನ್ನು ಆಯ್ಕೆ ಮಾಡಿ, “Line” ಎಂಬ ಡಯಲಾಗ್ ಬಾಕ್ಸ್ ಅನ್ನು ತೆರೆಯಿರಿ.
04:16 ”Line Properties” ಎಂಬ ಆಯ್ಕೆಯಡಿ, ಗೆರೆಗಳ “style, color, width ಮತ್ತು “transparency”ಗಳನ್ನು ಬದಲಿಸಿ.
04:24 ”Arrow Styles” ಆಯ್ಕೆಯಡಿ ಬಾಣದ ಶೈಲಿಯನ್ನು ಬದಲಿಸಿ.
04:28 ಮುಂದೆ, ನಾವು ನಕ್ಷತ್ರವೊಂದನ್ನು ಬಿಡಿಸೋಣ.
04:31 ಡ್ರಾಯಿಂಗ್ ಟೂಲ್-ಬಾರ್-ಗೆ ಹೋಗಿ “Stars” ಎಂದು ಬರೆದಿರುವ ಸಣ್ಣ ಕಪ್ಪು ತ್ರಿಕೋನವನ್ನು ಆಯ್ಕೆ ಮಾಡಿ.
04:37 ನಾವು “5 Point Star” ಅನ್ನು ಆಯ್ಕೆ ಮಾಡೋಣ.
04:41 ಈಗ ಕರ್ಸರ್-ಅನ್ನು ಮೋಡದ ಪಕ್ಕಕ್ಕೆ ಇರಿಸಿ.
04:44 ಮೌಸ್-ನ ಎಡಬಟನ್ ಅನ್ನು ಒತ್ತಿ ಎಡಕ್ಕೆ ಎಳೆಯಿರಿ.
04:48 ನೀವು ನಕ್ಷತ್ರವನ್ನು ಚಿತ್ರಿಸಿದ್ದೀರಿ.
04:50 ಈಗ, ಆಬ್ಜೆಕ್ಟ್ ಅಥವಾ ವಸ್ತುಗಳ ಸ್ಥಳ ಬದಲಾಯಿಸುವುದು ಮತ್ತು ಮರೆಮಾಡುವ (Delete) ಬಗ್ಗೆ ಕಲಿಯೋಣ.
04:54 ವಸ್ತುವಿನ ಸ್ಥಳ ಬದಲಾಯಿಸಲು, ವಸ್ತುವನ್ನು ಆಯ್ಕೆ ಮಾಡಿ ಬೇಕಾದ ಸ್ಥಳಕ್ಕೆ ಎಳೆಯಿರಿ.
04:59 ಈಗ, ಮೌಸ್-ನ ಬಟನ್ ಅನ್ನು ಬಿಟ್ಟುಬಿಡಿ.
05:02 ವಸ್ತುವನ್ನು ನಡೆಸಲು ಕೀಬೋರ್ಡ್ ನಲ್ಲಿನ “ಮೇಲೆ”, “ಕೆಳಗೆ”, “ಬಲ” ಮತ್ತು “ಎಡ” ಕೀಲಿಗಳನ್ನು ಬಳಸಬಹುದು.
05:08 ವಸ್ತುಗಳನ್ನು ನಡೆಸುವುದು ಸುಲಭವಲ್ಲವೆ?
05:11 ವಸ್ತುವನ್ನು ಮರೆಯಾಗಿಸಲು, ಅದನ್ನು ಆಯ್ಕೆ ಮಾಡಿ “Delete” ಕೀಯನ್ನು ಒತ್ತಿರಿ.
05:17 ವಸ್ತುವು ಅಳಿಸಲ್ಪಟ್ಟಿದೆ. ಸುಲಭವಲ್ಲವೇ?
05:20 ಈಗ ನಾವು “Ruler” ಮತ್ತು “Align” ಎಂಬ ಕೆಲವು ಮೂಲಭೂತ ಆಯ್ಕೆಗಳ ಬಗ್ಗೆ ಕಲಿಯೋಣ.
05:26 ”Ruler” ಎಂಬುದನ್ನು ಪುಟದ ಅಂಚನ್ನು ಸರಿಹೊಂದಿಸಲು ಮತ್ತು ಪರಿಮಾಣದ ಪ್ರಮಾಣ ಅಥವಾ unit ಅನ್ನು ಬದಲಿಸಲು ಉಪಯೋಗಿಸುತ್ತೇವೆ.
05:31 ”Align” ಟೂಲ್-ಬಾರ್ ಎಂಬುದು ವಸ್ತುಗಳನ್ನು ಸ್ಥಾಪಿಸಲು ಉಪಯೋಗಿಸಲ್ಪಡುತ್ತದೆ.
05:35 ”Ruler” ಎಂಬುದು Draw ನ ಕಾರ್ಯಕ್ಷೇತ್ರದ ಮೇಲ್ಭಾಗದಲ್ಲಿ ಹಾಗೂ ಎಡಬದಿಗೆ ಕಾಣಿಸುತ್ತದೆ.
05:40 ಪರಿಮಾಣದ ಪ್ರಮಾಣವನ್ನು ಗೊತ್ತುಪಡಿಸಲು, “Ruler” ಎಂಬುದರ ಮೇಲೆ ಮೌಸ್ ನ ಬಲಬಟನ್ ಅನ್ನು ಒತ್ತಿರಿ.
05:45 ನೀವು ಪರಿಮಾಣ-ಪ್ರಮಾಣದ ವಿವಿಧ ಹೆಸರುಗಳನ್ನು ಕಾಣುವಿರಿ.
05:48 ”Centimeter” ಎನ್ನುವುದನ್ನು ಆಯ್ಕೆ ಮಾಡಿ.
05:50 ಮೇಲಿನ ರೂಲರ್-ಗೆ ಪರಿಮಾಣ ಪ್ರಮಾಣವು ಸೆಂಟಿಮೀಟರ್ ಎಂದು ಆಯ್ಕೆ ಮಾಡಲ್ಪಟ್ಟಿದೆ.
05:55 ಹಾಗೆಯೇ, ಎಡಬದಿಯ ರೂಲರ್-ಗೆ ಕೂಡ ಪರಿಮಾಣ-ಪ್ರಮಾಣವನ್ನು ಆಯ್ಕೆ ಮಾಡೋಣ.
06:00 ವಸ್ತುಗಳು ಅಳತೆಗೆ ತಕ್ಕಂತೆ ಬರೆಯಲ್ಪಟ್ಟಿವೆ ಎಂದು ಖಚಿತಪಡಿಸಿಕೊಳ್ಳಲು ಎರಡೂ ರೂಲರ್-ಗಳಿಗೆ ಒಂದೇ ಪರಿಮಾಣ-ಪ್ರಮಾಣವನ್ನು ಆಯ್ಕೆ ಮಾಡಿ.
06:08 ಸಕ್ರಿಯ ರೂಲರ್ ಬಿಳಿಬಣ್ಣದಲ್ಲಿರುವುದನ್ನು ಗಮನಿಸಬಹುದು.
06:12 ರೂಲರ್-ನ ತುದಿಗಳು “Page Setup” ಆಯ್ಕೆಯ ಮುಖಾಂತರ ಗೊತ್ತುಪಡಿಸಿದ ಪುಟದ ಅಂಚನ್ನು ಸೂಚಿಸುತ್ತವೆ.
06:19 ರೂಲರ್ ಹೇಗೆ ವಸ್ತುಗಳ ಅಳತೆಯನ್ನು ಸೂಚಿಸುತ್ತದೆ ಎಂಬುದನ್ನು ನೋಡೋಣ.
06:23 ಮೋಡವನ್ನು ಆಯ್ಕೆ ಮಾಡಿರಿ.
06:25 ರೂಲರ್-ನ ಮೇಲೆ ಸಣ್ಣ ಆರಂಭದ ಮತ್ತು ಕೊನೆಯ ಗುರುತುಗಳನ್ನು ಗಮನಿಸಿದಿರಾ?
06:29 ಇವು ಮೋಡದ ಅಂಚುಗಳನ್ನು ಸೂಚಿಸುತ್ತವೆ.
06:32 ನೀವು ರೂಲರ್-ನಲ್ಲಿ ಈ ಗುರುತುಗಳನ್ನು ಚಲಿಸಿದಂತೆಯೇ ವಸ್ತುವೂ ಬದಲಾಗುತ್ತಿರುವುದನ್ನು ಗಮನಿಸಿ.
06:38 ರೂಲರ್ ಎಂಬುದು “page”ನ ಮೇಲಿರುವ ವಸ್ತುವಿನ ಗಾತ್ರವನ್ನು ತೋರಿಸುತ್ತದೆ.
06:42 ಇದು ಯಾವುದೇ ವಸ್ತುವನ್ನು ಪುಟದ ಮೇಲೆ ಸ್ಥಾಪಿಸಲು ನಮ್ಮನ್ನು ಶಕ್ತಗೊಳಿಸುತ್ತದೆ ಮತ್ತು ಪುಟದ ಗಡಿಯನ್ನೂ ತೋರಿಸುತ್ತದೆ.
06:49 ಈಗ ಮುಂದಿನ ಸಹಾಯಕ ವಿಷಯವಾದ “Align” ಟೂಲ್-ಬಾರ್-ನ ಬಗ್ಗೆ ತಿಳಿಯೋಣ.
06:53 ”Align” ಟೂಲ್-ಬಾರ್-ಅನ್ನು, ಆಯ್ಕೆ ಮಾಡಿದ ವಸ್ತುವನ್ನು ಎಡ, ಬಲ, ಮೇಲೆ ಅಥವಾ ಕೆಳಕ್ಕೆ ಸಾಲುಗೂಡಿಸಲು ಉಪಯೋಗಿಸಬಹುದು.
07:01 ”Align” ಟೂಲ್-ಬಾರ್ ಅನ್ನು ಸಕ್ರಿಯಗೊಳಿಸಲು “Main Menu” ಗೆ ಹೋಗಿ “View” ಅನ್ನು ಕ್ಲಿಕ್ ಮಾಡಿ.
07:07 ”View” ಆಯ್ಕೆಯಡಿ “Toolbars” ಅನ್ನು ಒತ್ತಿರಿ.
07:11 ವಿವಿಧ ಟೂಲ್-ಬಾರ್-ಗಳ ಪಟ್ಟಿಯನ್ನು ಕಾಣುವಿರಿ.
07:13 ”Align” ಅನ್ನು ಒತ್ತಿರಿ.
07:15 ”Align” ಟೂಲ್-ಬಾರ್ ಪ್ರದರ್ಶಿಸಲ್ಪಡುತ್ತದೆ.
07:18 ವಿವಿಧ ಅಲೈನ್ ಆಯ್ಕೆಗಳನ್ನು ಉಪಯೋಗಿಸಿ ವಸ್ತುಗಳನ್ನು ಹೇಗೆ ಜೋಡಿಸಬಹುದು ಎಂದು ನೋಡೋಣ.
07:24 ಮೋಡವನ್ನು ಆಯ್ಕೆ ಮಾಡೋಣ.
07:26 ”Align” ಟೂಲ್-ಬಾರ್-ನಲ್ಲಿ “Left” ಎಂದು ಆಯ್ಕೆ ಮಾಡಿ.
07:29 ಮೋಡವು ಎಡಬದಿಗೆ ಜೋಡಿಸಲ್ಪಟ್ಟಿತು.
07:32 ಈಗ “Centered” ಮತ್ತು “Centre” ಎಂಬ ಆಯ್ಕೆಗಳ ವ್ಯತ್ಯಾಸವನ್ನು ತಿಳಿಯೋಣ.
07:38 ವೃತ್ತವನ್ನು “centre” ಆಯ್ಕೆಯೊಂದಿಗೆ ಜೋಡಿಸಿ ನಂತರ “Centered” ಆಯ್ಕೆಯೊಂದಿಗೆ ಜೋಡಿಸೋಣ.
07:43 ಮೊದಲಿಗೆ, ವೃತ್ತವನ್ನು ಬಲಕ್ಕೆ ಜೋಡಿಸೋಣ.
07:47 ಈಗ ವೃತ್ತವನ್ನು ಆಯ್ಕೆ ಮಾಡಿ, “Align” ಟೂಲ್-ಬಾರ್-ನಲ್ಲಿ “Right” ಎಂಬುದನ್ನು ಆಯ್ಕೆ ಮಾಡಿ.
07:52 ಈಗ “Align” ಟೂಲ್-ಬಾರ್-ನಲ್ಲಿ “Centre” ಎಂದು ಆಯ್ಕೆ ಮಾಡಿರಿ.
07:56 ಈಗ ವೃತ್ತವು ಮಧ್ಯಕ್ಕೆ ಜೋಡಿಸಲ್ಪಟ್ಟಿತು.
07:59 ”Centre” ಆಯ್ಕೆಯು ವಸ್ತುವನ್ನು ಪುಟದ ಮೇಲಿನ ಮತ್ತು ಕೆಳಗಿನ ಅಂಚಿನ ಮಧ್ಯಬಿಂದುವಿಗೆ ಸ್ಥಾಪಿಸುತ್ತದೆ. .
08:06 ಈ ಆಯ್ಕೆಯು ವಸ್ತುವಿನ ಸ್ಥಾನವನ್ನು ಪುಟದ ಅಗಲದ ಪ್ರಕಾರ ಬದಲಿಸದು.
08:10 ಈಗ, “Align” ಟೂಲ್-ಬಾರ್-ನಲ್ಲಿ “Centered" ಆಯ್ಕೆ ಮಾಡಿ.
08:15 ಈಗ ವೃತ್ತವು ಪುಟದ ಮಧ್ಯಭಾಗದಲ್ಲಿ ಸ್ಥಾಪಿಸಲ್ಪಟ್ಟಿದೆ.
08:18 ”Centered” ಆಯ್ಕೆಯು ವೃತ್ತವನ್ನು ಪುಟದ ಮಧ್ಯಭಾಗಕ್ಕೆ ಸರಿಯಾಗಿ ಜೋಡಿಸಿತು.
08:23 ಈ ಆಯ್ಕೆಯು ವಸ್ತುವನ್ನು ಪುಟದ ಮೇಲಿನ-ಕೆಳಗಿನ ಅಂಚುಗಳ ಪ್ರಕಾರವಾಗಿ, ಅಂತೆಯೇ ಪುಟದ ಅಗಲದ ಪ್ರಕಾರ ಸ್ಥಾಪಿಸುತ್ತದೆ.
08:33 ಈಗ, ನಾವು ವಸ್ತುಗಳನ್ನು ಮೊದಲಿನಂತೆಯೇ ಅವುಗಳ ಸರಿಯಾದ ಸ್ಥಾನಕ್ಕೆ ಹಿಂದಿರುಗಿಸೋಣ.
08:40 ಫೈಲ್ ಅನ್ನು ಮುಚ್ಚುವ ಮುನ್ನ “save” ಮಾಡಲು ನೆನಪಿಡಿ.
08:43 ನಿಮಗೆ ಇನ್ನೊಂದು ಅಭ್ಯಾಸ ಇಲ್ಲಿದೆ.
08:46 ”MyWaterCycle” ಫೈಲ್ ನಲ್ಲಿ ಇನ್ನೊಂದು ಪುಟವನ್ನು ಸೇರಿಸಿ.
08:50 ಈ ಎರಡು ಆಕಾರಗಳನ್ನು ಬಿಡಿಸಿರಿ.
08:53 ಕೀ ಬೋರ್ಡ್ ನ ದಿಕ್ಸೂಚಕ ಕೀಲಿಗಳ ಮೂಲಕ ಅವುಗಳನ್ನು ನಡೆಸಿರಿ.
08:55 ನೀವು ರಚಿಸಿದ ಯಾವುದೇ ವಸ್ತುವನ್ನು ಆಯ್ಕೆ ಮಾಡಿ ಅಳಿಸಿರಿ.
08:59 ರೂಲರ್ ಅನ್ನು ಉಪಯೋಗಿಸಿ ಕೆಲವು ವಸ್ತುಗಳ ಅಳತೆ ಮಾಡಿರಿ.
09:04 ನಂತರ “Align” ಟೂಲ್-ಬಾರ್ ಅನ್ನು ಬಳಸಿ ವಸ್ತುಗಳನ್ನು ಪುಟದ ಮಧ್ಯಕ್ಕೆ ಜೋಡಿಸಿರಿ.
09:11 ಇದರೊಂದಿಗೆ ಲಿಬ್ರೆ-ಆಫೀಸ್ ಡ್ರಾ ದ ಈ ಟ್ಯುಟೊರಿಯಲ್-ನ ಕೊನೆಗೆ ಬಂದಿದ್ದೇವೆ.
09:15 ಈ ಟ್ಯುಟೊರಿಯಲ್-ನಲ್ಲಿ ನೀವು ಗೆರೆ, ಬಾಣ ಮತ್ತು ಆಯತದಂತಹ ಮೂಲ ಆಕಾರಗಳು; ಜ್ಯಾಮಿತೀಯ ಆಕಾರಗಳು, ಚಿಹ್ನೆಗಳು, ನಕ್ಷತ್ರಗಳು ಮತ್ತು ಬ್ಯಾನರ್ಗಳು ಇವುಗಳನ್ನು ಬಳಸಿ ಸರಳ ಚಿತ್ರಗಳನ್ನು ಬಿಡಿಸುವುದನ್ನು ಕಲಿಯಲಿದ್ದೀರಿ.
09:29 ನೀವು ವಸ್ತುಗಳನ್ನು ಆಯ್ಕೆ ಮಾಡಲು ಮತ್ತು ಅಳಿಸಲು ಹಾಗೂ “ರೂಲರ್” ಮತ್ತು “align” ಟೂಲ್-ಬಾರ್ ಉಪಯೋಗಿಸಿ ವಸ್ತುಗಳನ್ನು ಜೋಡಿಸಲು ಕಲಿತಿದ್ದೀರಿ.
09:37 ಈ ಲಿಂಕ್-ನಲ್ಲಿ ಸಿಗುವ ವೀಡಿಯೊ ವೀಕ್ಷಿಸಿ:http://spoken-tutorial.org/What_is_a_Spoken_Tutorial
09:41 ಇದು ಸ್ಪೋಕನ್ ಟ್ಯುಟೊರಿಯಲ್ ಪ್ರಕಲ್ಪವನ್ನು ವಿವರಿಸುತ್ತದೆ.
09:44 ನಿಮ್ಮಲ್ಲಿ ಉತ್ತಮ ಬ್ಯಾಂಡ್-ವಿಡ್ತ್ ಇಲ್ಲದಿದ್ದರೆ ವೀಡಿಯೊ-ವನ್ನು ಡೌನ್ಲೋಡ್ ಮಾಡಿ ನೋಡಿ.
09:48 ಸ್ಪೋಕನ್ ಟ್ಯುಟೊರಿಯಲ್ ತಂಡವು ಸ್ಪೋಕನ್ ಟ್ಯುಟೊರಿಯಲ್-ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
09:54 * ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:58 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
10:04 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ.
10:09 ಇದು ICT, MHRD ಮೂಲಕ ಭಾರತ ಸರ್ಕಾರದ ರಾಷ್ಟ್ರೀಯ ಸಾಕ್ಷರತಾ ಮಿಷನ್ ನ ಆಧಾರವನ್ನು ಪಡೆದಿದೆ.
10:17 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.

[1]

10:27 ಈ ಟ್ಯುಟೊರಿಯಲ್ ನ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ರಾಕೇಶ್ ರಾವ್. ಧನ್ಯವಾದಗಳು.

Contributors and Content Editors

Vasudeva ahitanal