LibreOffice-Suite-Base/C4/Design-Refine-Database-Design-and-Normalization-Rules/Kannada
From Script | Spoken-Tutorial
Time | Narration
|
00:02 | ಲಿಬರ್ ಆಫಿಸ್ ಬೇಸ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಲ್, ಡೇಟಾಬೇಸ್ ಡಿಸೈನ್ ಕುರಿತ ಹಿಂದಿನ ಟ್ಯುಟೋರಿಯಲ್ ನ ಮುಂದುವರಿದ ಭಾಗವಾಗಿದೆ. |
00:11 | ಇಲ್ಲಿ ನಾವು ಈ ಕೆಳಗಿನ ವಿಷಯಗಳನ್ನು ಕಲಿಯಲಿದ್ದೇವೆ: |
00:15 | 7. ಡೇಟಾಬೇಸ್ ಡಿಸೈನ್ ಪರಿಷ್ಕರಿಸುವುದು, |
00:18 | 8. ನಾರ್ಮಲೈಸೇಶನ್ ನಿಯಮಗಳನ್ನು ಅನ್ವಯಿಸುವುದು, |
00:21 | 9. ಮತ್ತು ಡೇಟಾಬೇಸ್ ಡಿಸೈನ್ ಅನ್ನು ಪರೀಕ್ಷಿಸುವುದು. |
00:25 | ಕಳೆದ ಟ್ಯುಟೋರಿಯಲ್ ನಲ್ಲಿ ನಾವು, ಟೇಬಲ್ ಸಂಬಂಧಗಳನ್ನು ಸ್ಥಾಪಿಸುವುದಕ್ಕಾಗಿ ಪ್ರೈಮರಿ ಕೀಗಳು ಮತ್ತು ಫಾರಿನ್ ಕೀಗಳನ್ನು ವ್ಯವಸ್ಥೆಗೊಳಿಸುವುದನ್ನು ಕಲಿತೆವು. |
00:34 | ನಾವೀಗ `ಡೇಟಾಬೇಸ್ ಡಿಸೈನ್’ ಪ್ರಕ್ರಿಯೆಯನ್ನು ಮುಂದುವರಿಸೋಣ. |
00:38 | ಮೊದಲಿಗೆ, ನಮ್ಮ ಡೇಟಾಬೇಸ್ ಡಿಸೈನ್ ಅನ್ನು ಪರಿಷ್ಕರಿಸೋಣ. |
00:42 | ನಾವು ಆರಂಭಿಕ ವಿನ್ಯಾಸವನ್ನು ಹೊಂದಿರುವುದರಿಂದ, ನಾವು ಮಾದರಿ ಡೇಟಾದ ಜೊತೆ ಟೇಬಲ್ ಗಳನ್ನು ರಚಿಸಿ ನೆಲೆಸಬಹುದು. |
00:50 | ನಾವು ಮಾದರಿ ಕ್ವೆರಿಗಳು, ಫಾರ್ಮ್ ಗಳು ಮತ್ತು ರಿಪೋರ್ಟ್ ಗಳನ್ನು ರಚಿಸಬಹುದು ಮತ್ತು ನಮ್ಮ ಆರಂಭಿಕ ಪ್ರಶ್ನೆಗಳಿಗೆ ಉತ್ತರಿಸಲಾಗಿದೆಯೇ ಎಂಬುದನ್ನು ನೋಡಬಹುದು. |
00:59 | ಅನಗತ್ಯ ಡುಪ್ಲಿಕೇಶನ್ ಗಳನ್ನು ನಾವು ಪರೀಕ್ಷಿಸಬಹುದು ಮತ್ತು ವಿನ್ಯಾಸವನ್ನು ಮಾರ್ಪಾಡು ಮಾಡಿ ಅವುಗಳನ್ನು ಅಳಿಸಿ ಬಿಡಬಹುದು. |
01:06 | ನಾವು ಮರೆತು ಬಿಟ್ಟಿರುವ ಕಾಲಂಗಳನ್ನು ಸೇರಿಸಬಹುದು. |
01:10 | ಅಲ್ಲದೆ, ಡೇಟಾಬೇಸ್ ಇಂಟೆಗ್ರಿಟಿಯನ್ನು ಕಾರ್ಯಗತಗೊಳಿಸಲು ಲೈಬ್ರರಿ ಡೇಟಾಬೇಸ್ ಗೆ ಬ್ಯುಸಿನೆಸ್ ರೂಲ್ ಗಳನ್ನು ಸೇರಿಸಬಹುದು. |
01:19 | ಉದಾಹರಣೆಗೆ, ಬುಕ್ಸ್ ಟೇಬಲ್ ನ ಪ್ರೈಸ್ ಕಾಲಂ ಅಂಕಿಗಳನ್ನು ಹೊಂದಿರಬೇಕು. |
01:24 | ಇನ್ನೊಂದು ಬ್ಯುಸಿನೆಸ್ ರೂಲ್: ಪುಸ್ತಕವೊಂದನ್ನು ನೀಡಿದ ಒಂದು ತಿಂಗಳ ನಂತರವೇ ರಿಟರ್ನ್ ಡೇಟ್ ಬರುವಂತೆ ಮಾಡಬಹುದು. |
01:32 | ಅಥವಾ, ನಿರ್ದಿಷ್ಟ ಕ್ರಿಯೆ ಉಂಟಾದ ಸಂದರ್ಭದಲ್ಲಿ, ಮುಂದಿನ ಕ್ರಮಗಳನ್ನು ಪ್ರಚೋದಿಸಬೇಕು. |
01:39 | ಹೀಗೆ, ಪುಸ್ತಕ ಹಿಂತಿರುಗಿಸುವ ದಿನಾಂಕ ಮೀರಿದ್ದರೆ, ಸದಸ್ಯರಿಗೆ ಜ್ಞಾಪಿಸುವ ಇಮೇಲ್ ಅನ್ನು ಕಳುಹಿಸಲು ಡೇಟಾಬೇಸ್ ನಲ್ಲಿ ನಾವು ಕ್ರಮಗಳನ್ನು ವ್ಯವಸ್ಥೆಗೊಳಿಸಬಹುದು. |
01:50 | ಈ ರೀತಿ ನಾವು ಮರುವಿನ್ಯಾಸಗೊಳಿಸಿದಂತೆ, ಹೊಸ ಟೇಬಲ್ ಗಳು, ಕಾಲಂಗಳು, ನಿಯಮಗಳು ಅಥವಾ ನಿರ್ಬಂಧಗಳನ್ನು ನಾವು ಪರಿಚಯಿಸಬಹುದು. |
01:58 | ಹಾಗೂ, ಡೇಟಾ ಇಂಟೆಗ್ರಿಟಿಯ ನಷ್ಟವಾಗಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು ಹಿಂದಿನ ಹಂತಕ್ಕೆ ಹೋಗಬೇಕಾಗುತ್ತದೆ. |
02:07 | ನಂತರ ನಾವು ನಾರ್ಮಲೈಸೇಶನ್ ನಿಯಮಗಳನ್ನು ಅನ್ವಯಿಸಬಹುದು. |
02:13 | ಈ ಕೆಳಗಿನವುಗಳನ್ನು ನೋಡಲು ಇವುಗಳನ್ನು ಬಳಸಲಾಗುತ್ತದೆ: |
02:17 | a) ವ್ಯವಸ್ಥಿತವಾಗಿ ಜೋಡಿಸಲಾಗಿದೆಯೇ ಎಂದು ಮತ್ತು, |
02:20 | b)ನಾವು ಹಿಂದೆ ನೋಡಿದ ತಿದ್ದುಪಡಿಯ ಅನೊಮಲಿಗಳಿಂದ ಮುಕ್ತವಾಗಿದೆಯೇ ಎಂದು. |
02:25 | ಡೇಟಾಬೇಸ್ ಡಿಸೈನ್ ಗೆ ನಿಯಮಗಳು ಅಥವಾ ನಾರ್ಮಲ್ ಫಾರ್ಮ್ ಗಳನ್ನು ಅನ್ವಯಿಸುವ ಪ್ರಕ್ರಿಯೆಯನ್ನು ನಾರ್ಮಲೈಸೇಶನ್ ಎಂದು ಕರೆಯಲಾಗುತ್ತದೆ. |
02:33 | ನಮ್ಮ ಟ್ಯುಟೋರಿಯಲ್ ನಲ್ಲಿ ಮೊದಲ ಮೂರು ನಾರ್ಮಲ್ ಫಾರ್ಮ್ ಗಳನ್ನು ನೋಡೋಣ. |
02:38 | ಫಸ್ಟ್ ನಾರ್ಮಲ್ ಫಾರ್ಮ್ ಅನ್ನು ನಾವೀಗ ನೋಡೋಣ.
ಎಲ್ಲಾ ಕಾಲಂ ಮೌಲ್ಯಗಳು ಅಟೋಮಿಕ್ ಆಗಿರಬೇಕು ಎಂದು `ಫಸ್ಟ್ ನಾರ್ಮಲ್ ಫಾರ್ಮ್’ ಅಥವಾ 1NF ಹೇಳುತ್ತದೆ. |
02:51 | ಉದಾಹರಣೆಗೆ, ಬುಕ್ಸ್ ಟೇಬಲ್ ನಲ್ಲಿರುವ ಪ್ರೈಸ್ ಕಾಲಂ ನ ಪ್ರತಿ ಸೆಲ್ ಸಹ ಒಂದು ಮೌಲ್ಯವನ್ನು ಮಾತ್ರ ಹೊಂದಿರಬೇಕು. |
02:59 | ಅಂದರೆ, ಆ ಕಾಲಂ, ಪುಸ್ತಕದ ಒಂದು ಬೆಲೆಯನ್ನು ಹೊರತುಪಡಿಸಿ ಬೇರೆ ಏನನ್ನೂ ಹೊಂದಿರಬಾರದು. |
03:07 | ಇದೇ ರೀತಿ, ಆಥರ್ಸ್ ಟೇಬಲ್ ನ ಪ್ರತಿ ಫಸ್ಟ್ ನೇಮ್ ಸೆಲ್, ಲೇಖಕರ ಮೊದಲ ಹೆಸರನ್ನು ಮಾತ್ರ ಹೊಂದಿರಬೇಕು. |
03:16 | ಕಾಲಂಗಳ ಗುಂಪುಗಳ ಪುನರಾವರ್ತನೆ ಆಗಬಾರದು ಎಂದು ಸಹ ಫಸ್ಟ್ ನಾರ್ಮಲ್ ಫಾರ್ಮ್ ಹೇಳುತ್ತದೆ. |
03:23 | ಉದಾಹರಣೆಗೆ, ಪ್ರಕಾಶಕರೊಬ್ಬರು ಮೂರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ ಎಂದು ಭಾವಿಸೋಣ. |
03:29 | ಈಗ, ಪಬ್ಲಿಷರ್ಸ್ ಟೇಬಲ್ ರಚನೆಯು ಈ ಕೆಳಗಿನ ಕಾಲಂಗಳನ್ನು ಹೊಂದಿರುತ್ತದೆ: |
03:34 | ಪಬ್ಲಿಷರ್ Id, ಪಬ್ಲಿಷರ್, ಬುಕ್1, ಆಥರ್ 1, ಬುಕ್ 2, ಆಥರ್ 2, ಬುಕ್ 3, ಆಥರ್ 3. |
03:47 | ಇಲ್ಲಿ 'ಬುಕ್' ಮತ್ತು 'ಆಥರ್' ಗುಂಪುಗಳು ಮೂರು ಬಾರಿ ಪುನರಾವರ್ತನೆಯಾಗುವುದನ್ನು ಗಮನಿಸಿ. |
03:52 | ಹೀಗೆ, ಒಂದುವೇಳೆ ನಾವು ಇಂತಹ ಪುನರಾವರ್ತಿತ ಗುಂಪುಗಳನ್ನು ನೋಡಿದರೆ, ನಮ್ಮ ವಿನ್ಯಾಸವನ್ನು ನಾವು ಮರುಪರಿಶೀಲನೆಗೆ ಒಳಪಡಿಸಬೇಕು. |
03:58 | ಈಗ, ಒಂದುವೇಳೆ ಪ್ರಕಾಶಕರು ಇನ್ನೂ ಹತ್ತು ಪುಸ್ತಕಗಳನ್ನು ಪ್ರಕಟಿಸಿದರೆ, 20 ಕಾಲಂಗಳನ್ನು ಸೇರಿಸುವ ಮೂಲಕ ನಾವು ಟೇಬಲ್ ರಚನೆಯನ್ನು ಬದಲಾಯಿಸಬೇಕಾಗುತ್ತದೆ. |
04:08 | ಈ ರೀತಿ, ಡೇಟಾ ಬದಲಾದಂತೆ ಡೇಬಲ್ ವಿನ್ಯಾಸ ಒಂದೇ ರೀತಿ ಇರುವುದಿಲ್ಲ ಎಂಬುದನ್ನು ನಾವು ನೋಡಬಹುದು. |
04:14 | ಅಲ್ಲದೆ, ಪುಸ್ತಕ ಅಥವಾ ಲೇಖಕರ ಹೆಸರಿನ ಮೂಲಕ ಹುಡುಕುವುದು ಮತ್ತು ವರ್ಗೀಕರಿಸುವುದು ಸುದೀರ್ಘ ಕೆಲಸವೆನಿಸುತ್ತದೆ. |
04:23 | ಇದಕ್ಕಾಗಿ, ಟೇಬಲ್ ಅನ್ನು ಎರಡು ಅಥವಾ ಮೂರು ಟೇಬಲ್ ಗಳಾಗಿ ವಿಂಗಡಿಸಿ ನಾವು ಈ ನ್ಯೂನತೆಯನ್ನು ಸರಿಪಡಿಸಬಹುದು. |
04:30 | ನಮ್ಮ ಉದಾಹರಣೆಯಲ್ಲಿ, ಸ್ಕ್ರೀನ್ ನಲ್ಲಿರುವ ಚಿತ್ರದಲ್ಲಿ ತೋರಿಸಿರುವಂತೆ, ಮೇಲಿನ ಟೇಬಲ್ ಅನ್ನು ಪಬ್ಲಿಷರ್ಸ್, ಬುಕ್ಸ್ ಮತ್ತು ಆಥರ್ಸ್ ಆಗಿ ವಿಂಗಡಿಸುತ್ತೇವೆ. |
04:41 | ಈ ವಿನ್ಯಾಸವು ಟೇಬಲ್ ಅನ್ನು ಫಸ್ಟ್ ನಾರ್ಮಲ್ ಫಾರ್ಮ್ ಗೆ ತರುತ್ತದೆ. |
04:47 | ಮತ್ತು, ಪ್ರಕಾಶಕರು ಮತ್ತು ಪುಸ್ತಕಗಳ ಕುರಿತ ಡೇಟಾವು ಬದಲಾದಂತೆ ಟೇಬಲ್ ರಚನೆಗಳನ್ನು ಸ್ಥಿರವಾಗಿರಿಸುತ್ತದೆ. |
04:56 | ನಾವೀಗ ಸೆಕೆಂಡ್ ನಾರ್ಮಲ್ ಫಾರ್ಮ್ ಅನ್ನು ನೋಡೋಣ. |
05:00 | `ಟೇಬಲ್’ ಒಂದು 1NF ನಲ್ಲಿ ದ್ದರೆ, ಇದನ್ನು ಸೆಕೆಂಡ್ ನಾರ್ಮಲ್ ಫಾರ್ಮ್ ಅಥವಾ 2NF ಎಂದು ಕರೆಯಲಾಗುತ್ತದೆ. |
05:07 | ಹಾಗೂ ಪ್ರತಿ ನಾನ್-ಕೀ ಕಾಲಂ, ಇಡೀ ಪ್ರೈಮರಿ ಕೀಯನ್ನು ಅವಲಂಬಿಸಿರುತ್ತದೆ. |
05:14 | ಒಂದಕ್ಕಿಂತ ಹೆಚ್ಚು ಕಾಲಂ ಹೊಂದಿರುವ ಪ್ರೈಮರಿ ಕೀಯನ್ನು ನಾವು ಹೊಂದಿದ್ದಾಗ ಈ ನಿಯಮ ಅನ್ವಯವಾಗುತ್ತದೆ. |
05:22 | ಉದಾಹರಣೆಗೆ, ನಾವೀಗ ಈ ಕೆಳಗಿನ ಕಾಲಂಗಳ ಜೊತೆ BooksIssued ಕಾಲಂ ಅನ್ನು ಪರಿಗಣಿಸೋಣ. |
05:29 | BookId, MemberId, BookTitle ಮತ್ತು 'BookId' ಮತ್ತು 'MemberId' ಜೊತೆ IssueDate, ಟೇಬಲ್ ನಲ್ಲಿ ಪ್ರೈಮರಿ ಕೀ ರೂಪಿಸುತ್ತವೆ. |
05:42 | ಈಗ BookTitle ಕಾಲಂ ಅನ್ನು ಗಮನಿಸಿ. |
05:45 | ನಾವು Books ಟೇಬಲ್ ನಲ್ಲಿ `ಬುಕ್ ಐ.ಡಿ’ಯನ್ನು ಸುಧಾರಿಸಿ `ಬುಕ್ ಟೈಟಲ್’ ಪಡೆಯಬಹುದು. |
05:52 | ಅಂದರೆ, `ಬುಕ್ ಟೈಟಲ್,’ `ಬುಕ್ ಐ.ಡಿ’ಯನ್ನು ಅವಲಂಬಿಸಿದೆಯೇ ಹೊರತು, `ಮೆಂಬರ್ ಐ.ಡಿ’ಯನ್ನಲ್ಲ. |
06:00 | ಹೀಗೆ, ಇದು ಇಡೀ ಪ್ರೈಮರಿ ಕೀಯನ್ನು ಅವಲಂಬಿಸಿಲ್ಲ. |
06:06 | ಈ ಟೇಬಲ್ ಅನ್ನು ಸೆಕೆಂಡ್ ನಾರ್ಮಲ್ ಫಾರ್ಮ್ ಗೆ ತರಲು, ನಾವು ಈ ಟೇಬಲ್ ನಿಂದ `ಬುಕ್ ಟೈಟಲ್’ ತೆಗೆಯಬೇಕು. |
06:14 | ಮತ್ತು `ಪ್ರೈಮರಿ ಕೀ’ ಹಾಗೂ ಕಾಲಂಗಳನ್ನು ಸಂಪೂರ್ಣವಾಗಿ ಅವಲಂಬಿಸಿರುವ ಕಾಲಂಗಳನ್ನು ಮಾತ್ರ ಉಳಿಸಿಕೊಳ್ಳಬೇಕು. |
06:23 | IssueDate ಕಾಲಂ ಅನ್ನು ಇಲ್ಲಿ ಉಳಿಸಿಕೊಳ್ಳಲಾಗುತ್ತದೆ. ಏಕೆಂದರೆ ಇದು ಸಂಪೂರ್ಣವಾಗಿ ಎರಡೂ `ಪ್ರೈಮರಿ ಕೀ’ ಫೀಲ್ಡ್ ಗಳನ್ನು ಅವಲಂಬಿಸಿದೆ. |
06:31 | ಈಗ, Third Normal Form ಅಂದರೆ ಏನು ಎಂಬುದನ್ನು ನೋಡೋಣ. |
06:35 | ಟೇಬಲ್ ಒಂದು 2NF ನಲ್ಲಿ ಇದ್ದರೆ ಮತ್ತು ಎಲ್ಲಾ ನಾನ್-ಕೀ ಕಾಲಂಗಳು ಪರಸ್ಪರ ಮುಕ್ತವಾಗಿದ್ದರೆ |
06:42 | ಇದನ್ನು Third Normal Form (3NF) ಎಂದು ಕರೆಯಲಾಗುತ್ತದೆ. |
06:48 | ಉದಾಹರಣೆಗೆ, BooksIssued ಟೇಬಲ್ ಅನ್ನು BooksIssued (ಪ್ರೈಮರಿ ಕೀ ಆಗಿ ಕಾರ್ಯನಿರ್ವಹಿಸುವ), |
06:54 | BookTitle, Member, IssueDate ಮತ್ತು ReturnDate ಕಾಲಂಗಳ ಜೊತೆ ಪರಿಗಣಿಸೋಣ. |
07:03 | ಮತ್ತು ಲೈಬ್ರರಿಯ ವಾಪಸಾತಿ ದಿನಾಂಕದ ನೀತಿಯು ಬುಕ್ ಇಶ್ಯು ಡೇಟ್ ನ ನಂತರದ ಒಂದು ತಿಂಗಳು ಎಂದು ಭಾವಿಸೋಣ. |
07:11 | ಈಗ, ನಾನ್-ಕೀ ಕಾಲಂ ಆಗಿರುವ IssueDate ಕಾಲಂ ಅನ್ನು ಬಳಸಿ ReturnDate ಅನ್ನು ಬೇಸ್ ಲೆಕ್ಕ ಹಾಕುತ್ತದೆ. |
07:19 | ಅಂದರೆ, `ರಿಟರ್ನ್ ಡೇಟ್’ ನಿಜವಾಗಿಯೂ `ಇಶ್ಯು ಡೇಟ್’ ಅನ್ನು ಅವಲಂಬಿಸಿದೆಯೇ ಹೊರತು ಬೇರೆ ಯಾವುದೇ ಕಾಲಂಗಳನ್ನು ಅಲ್ಲ. |
07:26 | ಅಲ್ಲದೆ, `ರಿಟರ್ನ್ ಡೇಟ್’ ಫೀಲ್ಡ್ ನಲ್ಲಿ ನಾವು ಬೇರೆ ದಿನಾಂಕವನ್ನು ನಮೂದಿಸಿದರೆ, ಇದು ನಮ್ಮ ಲೈಬ್ರರಿಯ ನೀತಿಯನ್ನು ಉಲ್ಲಂಘಿಸುತ್ತದೆ. |
07:37 | ಹೀಗಾಗಿ, ಟೇಬಲ್ ಅನ್ನು `ಥರ್ಡ್ ನಾರ್ಮಲ್ ಫಾರ್ಮ್’ನಲ್ಲಿ ಇಡಲು, ನಾವು ಟೇಬಲ್ ನಿಂದ `ರಿಟರ್ನ್ ಡೇಟ್’ ಕಾಲಂ ಅನ್ನು ತೆಗೆದು ಬಿಡುತ್ತೇವೆ. |
07:44 | ಈಗ, ಮೊದಲು ಮೂರು ನಾರ್ಮಲ್ ಫಾರ್ಮ್ ಗಳನ್ನು ಹೇಗೆ ಅನ್ವಯಿಸಬಹುದು ಎಂಬುದು ನಮಗೆ ತಿಳಿದಿದೆ. |
07:49 | ಸಾಮಾನ್ಯವಾಗಿ ನಮ್ಮ ಡೇಟಾಬೇಸ್ ವಿನ್ಯಾಸವು 3NF ನಲ್ಲಿ ನಿಲ್ಲುತ್ತದೆ. |
07:55 | ನಾರ್ಮಲ್ ಫಾರ್ಮ್ ಗಳು ಮತ್ತು ಡೇಟಾಬೇಸ್ ಡಿಸೈನ್ ಕುರಿತ ಹೆಚ್ಚಿನ ಮಾಹಿತಿಗಾಗಿ ಸ್ಕ್ರೀನ್ ನಲ್ಲಿ ತೋರಿಸಿರುವ ವೆಬ್ಸೈಟ್ ಗಳಿಗೆ ಭೇಟಿ ನೀಡಿ. |
08:05 | ಅಂತಿಮವಾಗಿ, ನಾವು ಡೇಟಾಬೇಸ್ ವಿನ್ಯಾಸ ಪ್ರಕ್ರಿಯೆಯ ಕುರಿತು ಚರ್ಚಿಸಿರುವುದರಿಂದ ನಾವೀಗ ನಮ್ಮ ಡೇಟಾಬೇಸ್ ವಿನ್ಯಾಸವನ್ನು ಪರೀಕ್ಷಿಸೋಣ. |
08:12 | ನಾವು ಡೇಟಾಬೇಸ್ ರಚನೆಯನ್ನು ರಚಿಸಬಹುದು. |
08:16 | ಇಲ್ಲಿ ನಾವು ಟೇಬಲ್ ಗಳು, ರಿಲೇಶನ್ ಶಿಪ್ ಗಳು, ರೂಲ್ ಗಳು ಅಥವಾ ಕಂಸ್ಟ್ರೇನ್ಟ್ ಗಳು (ನಿರ್ಬಂಧ), ಫಾರ್ಮ್ ಗಳು, ಕ್ವೆರಿಗಳು ಮತ್ತು ರಿಪೋರ್ಟ್ ಗಳನ್ನು ರಚಿಸಬಹುದು. |
08:24 | ಮತ್ತು ನಾವು ಡೇಟಾಬೇಸ್ ಅನ್ನು ನೈಜ ಡೇಟಾ ಮತ್ತು ಬಳಕೆದಾರರೊಂದಿಗೆ ಪರೀಕ್ಷಿಸಬಹುದು. |
08:29 | ಡೇಟಾಬೇಸ್ ಗೆ ಡೇಟಾ ಸೇರಿಸಲು, ಅಪ್ಡೇಟ್ ಅಥವಾ ಡಿಲೀಟ್ ಮಾಡಲು ಫಾರ್ಮ್ ಗಳನ್ನು ಬಳಸಿ. |
08:36 | ರಿಪೋರ್ಟ್ ಫಲಿತಾಂಶಗಳು ಸರಿಯಾಗಿವೆಯೇ ಮತ್ತು ನಿಖರವಾಗಿವೆಯೇ ಎಂಬುದನ್ನು ನೋಡಲು ರಿಪೋರ್ಟ್ ಗಳನ್ನು ರನ್ ಮಾಡಿ. |
08:42 | ಬಳಕೆಗೆ ಡೇಟಾಬೇಸ್ ಸಿದ್ಧಗೊಂಡಂತೆ, ನಾವು ವೇಗಕ್ಕೆ ಸಂಬಂಧಿಸಿದಂತೆ ಕಾರ್ಯಕ್ಷಮತೆಯನ್ನು ಪರೀಕ್ಷಿಸಬಹುದು. |
08:50 | ಡೇಟಾವನ್ನು ವೇಗವಾಗಿ ಪಡೆಯಲು ನಾವು ಟೇಬಲ್ ಗಳಿಗೆ ಇಂಡೆಕ್ಸ್ ಗಳನ್ನು ಸೇರಿಸಬಹುದು. |
08:55 | ಮತ್ತು ನಮ್ಮ ಡೇಟಾಬೇಸ್ ಅಪ್ಲಿಕೇಶನ್ ಯಶಸ್ವಿಯಾಗಿ ಕೆಲಸ ಮಾಡಲು, ನಾವು ಆಗಾಗ ಡೇಟಾಬೇಸ್ ನಿರ್ವಹಣೆಯನ್ನು ಮಾಡಬೇಕು. |
09:03 | ಈಗ ನಾವು ಈ ಹಂತವನ್ನು ಮುಗಿಸಿರುವುದರಿಂದ, ಇಲ್ಲೊಂದು ಅಸೈನ್ ಮೆಂಟ್ ನೀಡಲಾಗಿದೆ: |
09:08 | Media ಎನ್ನುವ ಎಂಟಿಟಿಯನ್ನು ಲೈಬ್ರರಿ ಡೇಟಾಬೇಸ್ ಡಿಸೈನ್ ಗೆ ಸೇರಿಸಿ. |
09:14 | 'ಮೀಡಿಯಾ'ವು ಡಿ.ವಿ.ಡಿ ಗಳು ಮತ್ತು ಸಿ.ಡಿ ಗಳನ್ನು ಹೊಂದಿದ್ದು ಅವು ಧ್ವನಿ ಅಥವಾ ವೀಡಿಯೋ ರೂಪದಲ್ಲಿರಬಹುದು. |
09:21 | ಪುಸ್ತಕಗಳಂತೆಯೇ, ಡಿ.ವಿ.ಡಿ ಗಳು ಮತ್ತು ಸಿ.ಡಿ ಗಳನ್ನು ಲೈಬ್ರರಿ ಸದಸ್ಯರಿಗೆ ನೀಡಬಹುದು. |
09:28 | ಡೇಟಾಬೇಸ್ ಡಿಸೈನ್ ಪ್ರಕ್ರಿಯೆಯನ್ನು ಅನುಸರಿಸಿ. |
09:31 | ಮತ್ತು ಮೂರು ನಾರ್ಮಲ್ ಫಾರ್ಮ್ ಗಳನ್ನು ನಿಮ್ಮ ವಿನ್ಯಾಸಕ್ಕೆ ಅನ್ವಯಿಸಿ. |
09:37 | ಇದರೊಂದಿಗೆ ನಾವು ಲಿಬರ್ ಆಫಿಸ್ ಬೇಸ್ ನಲ್ಲಿ ಡೇಟಾಬೇಸ್ ಡಿಸೈನ್ ಕುರಿತ ಟ್ಯುಟೋರಿಯಲ್ ನ ಮೂರನೇ ಭಾಗದ ಕೊನೆಯ ಹಂತಕ್ಕೆ ಬಂದಿದ್ದೇವೆ. |
09:45 | ಸಂಕ್ಷಿಪ್ತವಾಗಿ ನಾವು, ಡೇಟಾಬೇಸ್ ಡಿಸೈನ್ ಕುರಿತು ಈ ಕೆಳಗಿನ ವಿಷಯಗಳನ್ನು ಕಲಿತೆವು: |
09:50 | ಡೇಟಾಬೇಸ್ ವಿನ್ಯಾಸವನ್ನು ಪರಿಷ್ಕರಿಸುವುದು, |
09:52 | ನಾರ್ಮಲೈಸೇಶನ್ ನಿಯಮಗಳನ್ನು ಅನ್ವಯಿಸುವುದು |
09:55 | ಮತ್ತು ಡೇಟಾಬೇಸ್ ವಿನ್ಯಾಸವನ್ನು ಪರೀಕ್ಷಿಸುವುದು. |
09:58 | ಸ್ಪೋಕನ್ ಟ್ಯುಟೋರಿಯಲ್ ಯೋಜನೆಯು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ. ಇದು ಭಾರತ ಸರ್ಕಾರದ MHRD, ICT ಮೂಲಕ ನ್ಯಾಷನಲ್ ಮಿಷನ್ ಆನ್ ಎಜುಕೇಶನ್ ನಿಂದ ನೆರವು ಪಡೆದಿದೆ. |
10:10 | ಈ ಯೋಜನೆಯನ್ನು ಸಂಯೋಜಿಸಿದವರು http://spoken-tutorial.org. |
10:15 | ಮುಂದಿನ ಲಿಂಕ್ ನಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ. |
10:20 | ಈ ಸ್ಕ್ರಿಪ್ಟ್ ನ ಅನುವಾದಕ ಮೆಲ್ವಿನ್, ಮಂಗಳೂರು ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |