LibreOffice-Suite-Base/C2/Build-a-complex-form-with-form-controls/Kannada

From Script | Spoken-Tutorial
Jump to: navigation, search
Time Narration
00:00 ಲಿಬ್ರೆ ಆಫೀಸ್ ಬೇಸ್-ನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:04 ಕಾಂಪ್ಲೆಕ್ಸ್ ಫಾರ್ಮ್ ಬಗೆಗಿನ ಈ ಟ್ಯುಟೋರಿಯಲ್ ನಲ್ಲಿ ನಾವು,
00:08 ಒಂದು ಕಾಂಪ್ಲೆಕ್ಸ್ ಫಾರ್ಮ್ ಅನ್ನು ತಯಾರಿಸುವುದು ಮತ್ತು ಫಾರ್ಮ್ ಅನ್ನು ಮಾರ್ಪಡಿಸುವುದರ ಬಗ್ಗೆ ಕಲಿಯಲಿದ್ದೇವೆ.
00:13 ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಫಾರ್ಮ್ ಅನ್ನು ಬಳಸಿ ಡೇಟಾ ಅನ್ನು ಹೇಗೆ ಎಂಟರ್ ಮಾಡುವುದು ಮತ್ತು ಲಿಬ್ರೆ ಆಫೀಸ್ ಬೇಸ್ ಅನ್ನು ಬಳಸಿ ಫಾರ್ಮ್ ಅನ್ನು ಹೇಗೆ ಮಾರ್ಪಡಿಸುವುದು ಎಂಬುದನ್ನು ಕಲಿತೆವು.
00:22 ಈ ಟ್ಯುಟೋರಿಯಲ್ ನಲ್ಲಿ ಒಂದು ಕಾಂಪ್ಲೆಕ್ಸ್ ಫಾರ್ಮ್ ಅನ್ನು ಹೇಗೆ ತಯಾರಿಸಬೇಕು ಎಂಬುದನ್ನು ಕಲಿಯೋಣ.
00:28 ಲಿಬ್ರೆ ಆಫೀಸ್ ಬೇಸ್ ಪ್ರೋಗ್ರಾಮ್ ಈಗಾಗಲೇ ತೆರೆದುಕೊಂಡಿರದಿದ್ದರೆ, ಮೊದಲು ಅದನ್ನು ತೆರೆಯೋಣ
00:44 ಮತ್ತು ನಮ್ಮ ಲೈಬ್ರರಿ ಡೇಟಾಬೇಸ್ ಅನ್ನು ತೆರೆಯೋಣ.
00:47 Base ಈಗಾಗಲೇ ತೆರ್ದುಕೊಂಡಿದ್ದರೆ, ನಾವು ಇಲ್ಲಿ File ಮೆನುವಿನ ಕೆಳಗೆ Open ಎಂಬಲ್ಲಿ ಕ್ಲಿಕ್ ಮಾಡಿ Library ಡೇಟಾಬೇಸ್ ಅನ್ನು ತೆರೆಯಬಹುದು.
00:57 ಅಥವಾ File ಮೆನುನ-ನ ಕೆಳಗೆ Recent Documents ಅನ್ನು ಕ್ಲಿಕ್ ಮಾಡಿ,
01:03 ಒಂದು ಹೊಸ ಫಾರ್ಮ್ ಅನ್ನು ಡಿಸೈನ್ ಮಾಡೋಣ. ಅದು Libraryಯ ಸದಸ್ಯರಿಗೆ ಕೊಟ್ಟ ಪುಸ್ತಕಗಳನ್ನು ಕಂಡುಹಿಡಿಯಲು ಸಹಕರಿಸುತ್ತದೆ.
01:12 ಪರದೆಯ ಚಿತ್ರದಲ್ಲಿ ತೋರಿಸಿರುವ ಹಾಗೆ ಈ ಫಾರ್ಮ್ ಅನ್ನು ನಾವು ಹೇಗೆ ಡಿಸೈನ್ ಮಾಡಬಹುದು ಎಂಬುದನ್ನು ನೋಡೋಣ.
01:18 LibreOffice Base ನ ಮುಖ್ಯ ವಿಂಡೋಗೆ ಹೋಗೋಣ, ಮತ್ತು ಎಡ ಪೆನಲ್ ನಲ್ಲಿ ಡೇಟಾಬೇಸ್ ನ ಸೂಚಿಯಲ್ಲಿ Forms ಐಕಾನ್ ಮೇಲೆ ಕ್ಲಿಕ್ ಮಾಡೋಣ.
01:29 ನಂತರ 'Use Wizard to create form' ನ ಮೇಲೆ ಕ್ಲಿಕ್ ಮಾಡೋಣ.
01:34 ಇದು Forms wizard ಎಂಬ ಸುಪರಿಚಿತವಾದ ವಿಂಡೋ ಅನ್ನು ತೆರೆಯುತ್ತದೆ.
01:41 ಈ wizard ಅನ್ನು ನಾವು ವಿಸ್ತಾರವಾಗಿ ತಿಳಿದಿರುವುದರಿಂದ, ನಾವು ಈಗ ಇದನ್ನು ವೇಗವಾಗಿ ಮುಂದುವರೆಸುತ್ತೇವೆ.
01:49 ಸ್ಟೆಪ್ 1ರಲ್ಲಿ Field Selection, Tables or queries ಎಂದು ತೋರಿಸುವ ಲೇಬಲ್ ನ ಕೆಳಗಿರುವ ಡ್ರಾಪ್ ಡೌನ್ ಬಾಕ್ಸ್ ನಿಂದ 'Tables:BooksIssued' ಅನ್ನು ಸೆಲೆಕ್ಟ್ ಮಾಡೋಣ.
02:02 ಡಬಲ್ ಬಾಣದ ಬಟನ್ ಅನ್ನು ಬಳಸಿ ನಾವು ಎಲ್ಲ ಫೀಲ್ಡ್-ಗಳನ್ನು ಎಡದಿಂದ ಬಲಕ್ಕೆ ತರೋಣ.
02:10 Next ನ ಮೇಲೆ ಕ್ಲಿಕ್ ಮಾಡೋಣ.
02:12 ಇದು ಸ್ಟೆಪ್ 2, ಆದರೆ ನಾವೀಗ ಈ ಸ್ಟೆಪ್ ಅನ್ನು ದಾಟಿ, ಕೆಳಗಿರುವ next ಬಟನ್ ಮೇಲೆ ಕ್ಲಿಕ್ ಮಾಡೋಣ.
02:20 ಈಗ ನಾವು step 5ರಲ್ಲಿ ಇದ್ದೇವೆ. ಮೊದಲ ಅರೇಂಜ್ಮೆಂಟ್ ಆದ 'Columnar – Labels Left' ಅನ್ನು ಆಯ್ಕೆ ಮಾಡೋಣ ಮತ್ತು Next ಬಟನ್ ಮೇಲೆ ಕ್ಲಿಕ್ ಮಾಡೋಣ.
02:30 Next ಬಟನ್ ಮೇಲೆ ಕ್ಲಿಕ್ ಮಾಡಿ Step 6 ಅನ್ನು ಸಹ ದಾಟಿ ಹೋಗೋಣ.
02:36 Step 7 ನಲ್ಲಿ Ice blue ಅನ್ನು ಆಯ್ಕೆ ಮಾಡೋಣ ಮತ್ತು, Next ಬಟನ್ ಮೇಲೆ ಕ್ಲಿಕ್ ಮಾಡೋಣ.
02:42 step 8 ರಲ್ಲಿ, ಫಾರ್ಮ್ ಅನ್ನು 'Books Issued to Members' ಎಂದು ಹೆಸರಿಸೋಣ.
02:53 ಮತ್ತು 'Modify the form' ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
02:57 ಅನಂತರ Finish ಬಟನ್ ಮೇಲೆ ಕ್ಲಿಕ್ ಮಾಡಿ.
03:00 wizard ಪಾಪ್ ಅಪ್ ವಿಂಡೋ ಹೋಗಿದೆ ಮತ್ತು ನಾವು ಫಾರ್ಮ್ ಡಿಸೈನ್ ವಿಂಡೋ ಅನ್ನು ನೋಡುತ್ತಿದ್ದೇವೆ ಎಂಬುದನ್ನು ಗಮನಿಸಿ.
03:07 ಇಲ್ಲಿ, ಫಾರ್ಮ್ ಅನ್ನು ಡೇಟಾ ಎಂಟ್ರಿಗಾಗಿ ಉಪಯೋಗಿಸುವುದಕ್ಕೆ ಮೊದಲು ಕೆಲವು ಮಾರ್ಪಾಡುಗಳನ್ನು ಮಾಡಲಿದ್ದೇವೆ.
03:15 ಮೊದಲು ನಾವು ಫಾರ್ಮ್ ನ ಮೇಲೆ ಕಾಣಿಸುತ್ತಿರುವ ಎಲ್ಲ ಎಲಿಮೆಂಟ್ಸ್ ಗಳನ್ನು ಬೇರ್ಪಡಿಸೋಣ.
03:22 ನಾವು ಹೀಗೆ ಮಾಡುವುದರಿಂದ ಫಾರ್ಮ್ ನ ಮೇಲಿರುವ ಇಂಡಿವಿಜ್ಯುಯಲ್ ಎಲಿಮೆಂಟ್ ಗಳನ್ನು ಸುಲಭವಾಗಿ ಎಡಿಟ್ ಮಾಡಲು ಸಾಧ್ಯ.
03:31 ಫಾರ್ಮ್ ನ ಎಲ್ಲ ಎಲಿಮೆಂಟ್ಸ್ ಗನ್ನು ಒಮ್ಮೆ ಬೇರ್ಪಡಿಸುವುದಕ್ಕಾಗಿ ನಾವು ಎಲ್ಲಕ್ಕಿಂತ ಮೊದಲು ಎಲ್ಲಾ ಫಾರ್ಮ್ ಎಲಿಮೆಂಟ್ಸ್ ಗಳನ್ನು ಆಯ್ಕೆ ಮಾಡಬೇಕಾಗುತ್ತದೆ.
03:40 ಇದನ್ನು ಮಾಡಲು, ಮೊದಲು Form Design ಟೂಲ್ ಬಾರ್ ಅನ್ನು ತೆರೆಯೋಣ.
03:46 ಮೇಲ್ಭಾಗದಲ್ಲಿ view ಮೆನು ನ ಮೇಲೆ ಕ್ಲಿಕ್ ಮಾಡಿ, ಪುನಃ Toolbars ನ ಮೇಲೆ ಕ್ಲಿಕ್ ಮಾಡಿ. ನಂತರ Form Design ಮೇಲೆ ಕ್ಲಿಕ್ ಮಾಡಿ.
03:56 ಈ ಟೂಲ್ ಬಾರ್ ನಲ್ಲಿ ,ಒಮ್ಮೆ ಮೌಸ್ ಪಾಯಿಂಟ್ ಐಕಾನ್ ನ ಮೇಲೆ ಕ್ಲಿಕ್ ಮಾಡೋಣ. ಅದು ಮೊದಲನೆಯ ಮತ್ತು ಎಲ್ಲಕ್ಕಿಂತ ಎಡಕ್ಕೆ ಇರುವ ಐಕಾನ್ ಆಗಿದೆ.
04:05 ನಾವು ಇನ್ನು ಮುಂದೆ ಇದನ್ನು Select ಐಕಾನ್ ಎನ್ನುತ್ತೇವೆ.
04:11 ಇದು, ಕ್ಲಿಕ್ ಮತ್ತು ಡ್ರ್ಯಾಗ್ ಮಾಡುವುದರ ಮೂಲಕ ಫಾರ್ಮ್ ಎಲಿಮೆಂಟ್ಸ್ ಗಳ ಆಯ್ಕೆಗಾಗಿ ಉಪಯೋಗಿಸಲ್ಪಡುತ್ತದೆ.
04:18 ಈಗ, ಫಾರ್ಮ್ ನ ಮೇಲ್ಭಾಗದಲ್ಲಿ ಎಡಕ್ಕೆ ಕ್ಲಿಕ್ ಮಾಡೋಣ. ಮತ್ತು ಅದನ್ನು ಕೆಳಭಾಗದಲ್ಲಿ ಓರೆಯಾಗಿ ಬಲಕ್ಕೆ ಎಳೆಯೋಣ.
04:26 ಈಗ ನೀವು ಪರ್ಯಾಯವಾಗಿ ಕಪ್ಪು ಮತ್ತು ಬಿಳಿಯ ಗೆರೆಗಳುಳ್ಳ ಒಂದು ಆಯತವನ್ನು ನೋಡುತ್ತೀರಿ.
04:32 ಎಲ್ಲ ಫಾರ್ಮ್ ಎಲಿಮೆಂಟ್ ಗಳು ಈ ಆಯತದಲ್ಲಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
04:38 ಫಾರ್ಮ್ ಎಲಿಮೆಂಟ್ ಗಳ ಸಮೂಹವನ್ನು ಆಯ್ಕೆ ಮಾಡಲು, ನಾವು ಇದನ್ನು ಪುನಃ ಪುನಃ ಬಳಸುತ್ತೇವೆ.
04:46 ಈಗ ಎಲ್ಲಾ ಎಲಿಮೆಂಟ್ ಗಳು ಸಣ್ಣ ಹಸಿರಿನ ಬಾಕ್ಸ್ ಗಳಲ್ಲಿ ಇರುವುದನ್ನು ನಾವು ನೋಡುತ್ತಿದ್ದೇವೆ.
04:53 ಈಗ ನಾವು ಇಲ್ಲಿ ಯಾವ ಕ್ರಿಯೆಯನ್ನು ಮಾಡುತ್ತೇವೆಯೋ, ಅದು ಈ ಕ್ಷೇತ್ರದ ಒಳಗೆ ಎಲ್ಲ ಎಲಿಮೆಂಟ್ ಗಳ ಮೇಲೆ ಸಮಾನವಾಗಿ ಪ್ರಭಾವ ಬೀರುತ್ತದೆ.
05:02 ಈಗ ಮೌಸ್ ಪಾಯಿಂಟರ್ ಅನ್ನು ಇಲ್ಲಿ ಯಾವ ಲೇಬಲ್ ಮೇಲಾದರೂ ಚಲಾಯಿಸೋಣ.
05:08 ಮೌಸ್ ಪಾಯಿಂಟರ್, ಲೇಬಲ್ಸ್ ಮತ್ತು ಟೆಕ್ಸ್ಟ್ ಬಾಕ್ಸ್ ಗಳ ಮೇಲೆ ಪ್ಲಸ್ (+) ಚಿಹ್ನೆಯ ರೂಪದಲ್ಲಿ ಕಾಣುತ್ತಿರುವುದನ್ನು ಗಮನಿಸಿ.
05:18 ಆದ್ದರಿಂದ, ಲೇಬಲ್ ನ ಮೇಲೆ ರೈಟ್ ಕ್ಲಿಕ್ ಮಾಡೋಣ. ಮತ್ತು ಕೆಳಭಾಗದಲ್ಲಿ Group ನ ಮೇಲೆ ಕ್ಲಿಕ್ ಮಾಡಿ ನಂತರ 'Ungroup' ನ ಮೇಲೆ ಕ್ಲಿಕ್ ಮಾಡೋಣ.
05:28 ಈಗ ಒಂದು ಶೀರ್ಷಕವನ್ನು ಬರೆಯೋಣ. ಅದು ಎಲ್ಲ ಎಲಿಮೆಂಟ್ ಗಳ ಮೇಲ್ಭಾಗದಲ್ಲಿ ಇರುತ್ತದೆ.
05:35 ಇದಕ್ಕಾಗಿ, ಫಾರ್ಮ್ ಎಲಿಮೆಂಟ್ ಗಳನ್ನು ಕೆಳಕ್ಕೆ ತಳ್ಳೋಣ. ನಂತರ ಅವುಗಳನ್ನು ಫಾರ್ಮ್ ನ ಒಳಗೆ ಮಧ್ಯದಲ್ಲಿ ಇರಿಸೋಣ.
05:43 ಹಾಗಾಗಿ, ಮೊದಲು ಡೌನ್ ಏರೋ ಬಟನ್ ಅನ್ನು ಸುಮಾರು ಏಳು ಬಾರಿ ಒತ್ತೋಣ.
05:50 ಆಮೇಲೆ ರೈಟ್ ಏರೋ ಬಟನ್ ಅನ್ನು ಸುಮಾರು 14 ಬಾರಿ ಒತ್ತೋಣ.
05:57 ಇದು ಎಲ್ಲ ಆಯ್ಕೆಯಾದ ಫಾರ್ಮ್ ಎಲಿಮೆಂಟ್ ಗಳನ್ನು ಬಲಕ್ಕೆ ಹಾಗೂ ಫಾರ್ಮ್ ನ ಮಧ್ಯಭಾಗಕ್ಕೆ ತರುತ್ತದೆ ಎಂಬುದನ್ನು ಗಮನಿಸಿ.
06:07 ಈಗ ಶೀರ್ಷಕವನ್ನು ಎಲ್ಲಿ ಬರೆಯಬೇಕಾಗಿದೆಯೋ, ಅಲ್ಲಿ ಕರ್ಸರ್ ಅನ್ನು ತರೋಣ.
06:14 ಇದನ್ನು ಮಾಡಲು, ಫಾರ್ಮ್ ವಿಂಡೋ ಕ್ಷೇತ್ರದ ಮೇಲೆ ಎಡಕ್ಕೆ ಕ್ಲಿಕ್ ಮಾಡೋಣ.
06:21 ಮತ್ತು enter ಬಟನ್ ಅನ್ನು ಎರಡು ಬಾರಿ ಒತ್ತೋಣ.
06:26 ಅನಂತರ tab ಬಟನ್ ಅನ್ನು ನಾಲ್ಕು ಬಾರಿ ಒತ್ತಿ. ಮತ್ತು 'Form to track Books Issued to Members' ಎಂದು ಟೈಪ್ ಮಾಡಿ.
06:38 ಈಗ ನಾವು ಲೇಬಲ್ಸ್ ಮತ್ತು ಟೆಕ್ಸ್ಟ್ ಬಾಕ್ಸ್ ಗಳ ಮೇಲೆ ಕ್ಲಿಕ್ ಮಾಡಿದಾಗ ಈ ಎಲಿಮೆಂಟ್ ಗಳು ವಿಶಿಷ್ಟರೀತಿಯಲ್ಲಿ ಆಯ್ಕೆಯಾಗುತ್ತವೆ ಅಥವಾ ಚಿಹ್ನಾಂಕಿತವಾಗುತ್ತವೆ.
06:52 ಸರಿ, ಮುಂದೆ ಫಾರ್ಮ್ ನ ಮೇಲೆ Book Id ಮತ್ತು Member Id ಲೇಬಲ್ ಗಳಿಗೆ ಪುನಃ ಹೆಸರಿಡೋಣ.
07:00 Book Id ಲೇಬಲ್ ಮೇಲೆ ಡಬಲ್ ಕ್ಲಿಕ್ ಮಾಡಿ ನಾವು ಇದನ್ನು ಮಾಡಬಹುದು. ಅದು ಒಂದು ಪರಿಚಿತವಾದ Properties ವಿಂಡೋ ಅನ್ನು ತೆರೆಯುತ್ತದೆ.
07:12 label ನ ಮುಂದೆ, Book Title ಎಂದು ಟೈಪ್ ಮಾಡಿ.
07:18 ಈಗ ಫಾರ್ಮ್ ನ ಮೇಲೆ Member Id ಲೇಬಲ್ ನ ಮೇಲೆ ಕ್ಲಿಕ್ ಮಾಡೋಣ.
07:25 ಇಲ್ಲಿ Properties ವಿಂಡೋ ರಿಫ್ರೆಶ್ ಆಗಿರುವುದನ್ನು ಗಮನಿಸಿ. ಮತ್ತು ನಾವು ಇಲ್ಲಿ Label ನ ಮುಂದೆ 'Member Name' ಅಂತ ಟೈಪ್ ಮಾಡೋಣ.
07:34 ನಾವು tab ಬಟನ್ ಅನ್ನು ಒತ್ತಿದಾಗ, ಫಾರ್ಮ್ ನ ಮೇಲೆ ಹೊಸ ಲೇಬಲ್ ಬದಲಾಗುವುದನ್ನು ನಾವು ಕಾಣುತ್ತೇವೆ.
07:43 ಈಗ ಈ ಎಲಿಮೆಂಟ್ ಗಳ ಫಾಂಟ್ ಗಾತ್ರವನ್ನು ಬದಲಿಸೋಣ.
07:49 ಪುನಃ ಎಲ್ಲ ಎಲಿಮೆಂಟ್ ಗಳನ್ನು ಆಯ್ಕೆ ಮಾಡೋಣ.
07:54 ನಾವು ಕ್ಲಿಕ್, ಡ್ರ್ಯಾಗ್ ಮತ್ತು ಡ್ರಾಪ್ ಪದ್ಧತಿಯನ್ನು ಅನುಸರಿಸೋಣ.
07:59 ಮತ್ತು ಈಗ, ನಾವು ಯಾವುದಾದರೂ ಲೇಬಲ್ ನ ಮೇಲೆ ಡಬಲ್ ಕ್ಲಿಕ್ ಮಾಡಿದಾಗ, ಅದು Properties ವಿಂಡೋ ಅನ್ನು ತೆರೆಯುತ್ತದೆ.
08:08 Font ಅನ್ನು ಕಂಡುಹಿಡಿಯಲು ಕೆಳಕ್ಕೆ ಸ್ಕ್ರೋಲ್ ಮಾಡೋಣ. ಮತ್ತು ಅದರ ಬಲಭಾಗದಲ್ಲಿ ಸ್ಕ್ವೆಯರ್ ಬಟನ್ ನ ಮೇಲೆ ಕ್ಲಿಕ್ ಮಾಡೋಣ.
08:18 ಹೊಸ ಪಾಪ್ ಅಪ್ ವಿಂಡೋದಲ್ಲಿ, Bold ಮೇಲೆ ಕ್ಲಿಕ್ ಮಾಡೋಣ. ಮತ್ತು ಸೈಜ್ 8 ರ ಮೇಲೆ ಕ್ಲಿಕ್ ಮಾಡೋಣ.
08:26 ಮತ್ತು Ok ಬಟನ್ ನ ಮೇಲೆ ಕ್ಲಿಕ್ ಮಾಡೋಣ.
08:29 ಈಗ ಫಾರ್ಮ್ ನಲ್ಲಿ ಫಾಂಟ್, ಬೋಲ್ಡ್ ( ದಪ್ಪಕ್ಷರ ) ಮತ್ತು ಸೈಜ್ 8 ಆಗಿ ಬದಲಾಗಿರುವುದನ್ನು ಗಮನಿಸಿ.
08:38 ಈಗ ಎಲ್ಲ ಫಾರ್ಮ್ ಎಲಿಮೆಂಟ್ ಗಳನ್ನು ವಿಂಡೋದ ಮಧ್ಯಭಾಗಕ್ಕೆ ಸ್ಥಾನಾಂತರಿಸೋಣ.
08:45 ಇದಕ್ಕಾಗಿ ನಾವು ಎಲ್ಲ ಎಲಿಮೆಂಟ್ ಗಳನ್ನು ಆಯ್ಕೆ ಮಾಡುತ್ತೇವೆ.
08:49 ಈಗ ಯಾವುದಾದರೂ ಲೇಬಲ್ ನ ಮೇಲೆ ಕ್ಲಿಕ್ ಮಾಡೋಣ. ಮತ್ತು ಅದನ್ನು ಫಾರ್ಮ್ ಡಿಸೈನ್ ವಿಂಡೋದ ಮಧ್ಯಭಾಗಕ್ಕೆ ಡ್ರ್ಯಾಗ್ ಮಾಡೋಣ. (ಎಳೆಯೋಣ)
09:00 ಈಗ ಫಾರ್ಮ್ ಅನ್ನು save ಮಾಡೋಣ.
09:03 ಮತ್ತು ಈ ವಿಂಡೋ ಅನ್ನು ಕ್ಲೋಸ್ ಮಾಡೋಣ. ಈಗ ನಮ್ಮ ಫಾರ್ಮ್ ಹೇಗೆ ಕಾಣುತ್ತಿದೆ ಎಂದು ನೋಡಲು,
09:10 ಬೇಸ್ ನ ಮುಖ್ಯ ವಿಂಡೋಗೆ ಹೋಗೋಣ. ಮತ್ತು ಬಲಭಾಗದ ಪೆನಲ್ ನ ಮೇಲೆ 'Books Issued to Members' ಫಾರ್ಮ್ ನ ಮೇಲೆ ಡಬಲ್ ಕ್ಲಿಕ್ ಮಾಡೋಣ.
09:20 ಇದು ಡೇಟಾ ಎಂಟ್ರಿ ಉಪಯೋಗಕ್ಕಾಗಿ ತಯಾರಾಗಿರುವ ಫಾರ್ಮ್ ಅನ್ನು ತೆರೆಯುತ್ತದೆ.
09:26 ಈಗ, ಈ ಫಾರ್ಮ್ ನಲ್ಲಿ, ನಾವು ಕೆಲವು ಮಾದರಿಯ ಡೇಟಾಗಳನ್ನು ನೋಡುತ್ತೇವೆ.
09:31 ಮತ್ತು book title ಮತ್ತು member name ನ ಎದುರು ನಾವು ಕೆಲವು ಸಂಖ್ಯೆಗಳನ್ನು ಕಾಣುತ್ತೇವೆ.
09:37 ಅವು ನಿಜವಾಗಿಯೂ Books ಮತ್ತು Members ಸೂಚಿಯಲ್ಲಿ ಪ್ರಾಥಮಿಕ ಸಂಖ್ಯೆಗಳಾಗಿವೆ. ಆದರೆ ಹೆಚ್ಚು ಅನುಕೂಲವಾದ ಸಂಖ್ಯೆಗಳಲ್ಲ.
09:46 ನಿಜವಾದ (ವಾಸ್ತವಿಕ) names ಮತ್ತು book titles ಅನ್ನು ನೀವು ನೋಡಲಿಚ್ಛಿಸುತ್ತೀರಾ ?
09:50 ಮತ್ತು, ಇದನ್ನು ನಾವು ಹೇಗೆ ಮಾಡಬಹುದು ?
09:53 ಒಂದು ಮಾರ್ಗವಿದೆ, ಅದೇನೆಂದರೆ ಫಾರ್ಮ್ ಕಂಟ್ರೋಲ್ ಹೆಸರಿನ List box ಅನ್ನು ಜೋಡಿಸಬೇಕು.
09:59 ಲಿಸ್ಟ್ ಬಾಕ್ಸ್ ಮತ್ತು ಬೇರೆ ಫಾರ್ಮ್ ಕಂಟ್ರೋಲ್ ಗಳನ್ನು ಹೇಗೆ ಜೋಡಿಸುವುದು ಮತ್ತು ಹೇಗೆ ಉಪಯೋಗಿಸುವುದು ಎಂಬುದನ್ನು ನಾವು ಮುಂದಿನ ಟ್ಯುಟೋರಿಯಲ್ ನಲ್ಲಿ ನೋಡಲಿದ್ದೇವೆ.
10:08 ಈಗ ನಾವು ಲಿಬ್ರೆ ಆಫೀಸ್ ಬೇಸ್ ನಲ್ಲಿ ಕಾಂಪ್ಲೆಕ್ಸ್ ಫಾರ್ಮ್ ಎಂಬ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
10:13 ಸಂಕ್ಷೇಪವಾಗಿ, ನಾವು:

ಒಂದು ಕಾಂಪ್ಲೆಕ್ಸ್ ಫಾರ್ಮ್ ಅನ್ನು ತಯಾರಿಸುವುದು ಮತ್ತು ಫಾರ್ಮ್ ಅನ್ನು ಮಾರ್ಪಡಿಸುವುದರ ಬಗ್ಗೆ ಕಲಿತಿದ್ದೇವೆ.

10:20 ಈ ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.

ಈ ಪ್ರೊಜೆಕ್ಟ್ http://spoken-tutorial.org ನ ಮೂಲಕ ಸಂಯೋಜಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನ ಲಿಂಕ್-ನಲ್ಲಿ ಸಿಗುತ್ತದೆ.

10:40 ಈ ಸ್ಕ್ರಿಪ್ಟ್ ದೇಸಿ ಕ್ರ್ಯು ಸಲ್ಯುಷನ್ ನ ಪ್ರಿಯಾ ಸುರೇಶ್ ಅವರ ಕೊಡುಗೆಯಾಗಿದೆ.ಈ ಟ್ಯುಟೋರಿಯಲ್ ನ ಅನುವಾದಕರು ಡಾ. ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟೀ ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

Pratik kamble, Vasudeva ahitanal