LibreOffice-Suite-Base/C2/Build-a-complex-form-with-form-controls/Kannada
From Script | Spoken-Tutorial
Time | Narration |
00:00 | ಲಿಬ್ರೆ ಆಫೀಸ್ ಬೇಸ್-ನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:04 | ಕಾಂಪ್ಲೆಕ್ಸ್ ಫಾರ್ಮ್ ಬಗೆಗಿನ ಈ ಟ್ಯುಟೋರಿಯಲ್ ನಲ್ಲಿ ನಾವು, |
00:08 | ಒಂದು ಕಾಂಪ್ಲೆಕ್ಸ್ ಫಾರ್ಮ್ ಅನ್ನು ತಯಾರಿಸುವುದು ಮತ್ತು ಫಾರ್ಮ್ ಅನ್ನು ಮಾರ್ಪಡಿಸುವುದರ ಬಗ್ಗೆ ಕಲಿಯಲಿದ್ದೇವೆ. |
00:13 | ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಫಾರ್ಮ್ ಅನ್ನು ಬಳಸಿ ಡೇಟಾ ಅನ್ನು ಹೇಗೆ ಎಂಟರ್ ಮಾಡುವುದು ಮತ್ತು ಲಿಬ್ರೆ ಆಫೀಸ್ ಬೇಸ್ ಅನ್ನು ಬಳಸಿ ಫಾರ್ಮ್ ಅನ್ನು ಹೇಗೆ ಮಾರ್ಪಡಿಸುವುದು ಎಂಬುದನ್ನು ಕಲಿತೆವು. |
00:22 | ಈ ಟ್ಯುಟೋರಿಯಲ್ ನಲ್ಲಿ ಒಂದು ಕಾಂಪ್ಲೆಕ್ಸ್ ಫಾರ್ಮ್ ಅನ್ನು ಹೇಗೆ ತಯಾರಿಸಬೇಕು ಎಂಬುದನ್ನು ಕಲಿಯೋಣ. |
00:28 | ಲಿಬ್ರೆ ಆಫೀಸ್ ಬೇಸ್ ಪ್ರೋಗ್ರಾಮ್ ಈಗಾಗಲೇ ತೆರೆದುಕೊಂಡಿರದಿದ್ದರೆ, ಮೊದಲು ಅದನ್ನು ತೆರೆಯೋಣ |
00:44 | ಮತ್ತು ನಮ್ಮ ಲೈಬ್ರರಿ ಡೇಟಾಬೇಸ್ ಅನ್ನು ತೆರೆಯೋಣ. |
00:47 | Base ಈಗಾಗಲೇ ತೆರ್ದುಕೊಂಡಿದ್ದರೆ, ನಾವು ಇಲ್ಲಿ File ಮೆನುವಿನ ಕೆಳಗೆ Open ಎಂಬಲ್ಲಿ ಕ್ಲಿಕ್ ಮಾಡಿ Library ಡೇಟಾಬೇಸ್ ಅನ್ನು ತೆರೆಯಬಹುದು. |
00:57 | ಅಥವಾ File ಮೆನುನ-ನ ಕೆಳಗೆ Recent Documents ಅನ್ನು ಕ್ಲಿಕ್ ಮಾಡಿ, |
01:03 | ಒಂದು ಹೊಸ ಫಾರ್ಮ್ ಅನ್ನು ಡಿಸೈನ್ ಮಾಡೋಣ. ಅದು Libraryಯ ಸದಸ್ಯರಿಗೆ ಕೊಟ್ಟ ಪುಸ್ತಕಗಳನ್ನು ಕಂಡುಹಿಡಿಯಲು ಸಹಕರಿಸುತ್ತದೆ. |
01:12 | ಪರದೆಯ ಚಿತ್ರದಲ್ಲಿ ತೋರಿಸಿರುವ ಹಾಗೆ ಈ ಫಾರ್ಮ್ ಅನ್ನು ನಾವು ಹೇಗೆ ಡಿಸೈನ್ ಮಾಡಬಹುದು ಎಂಬುದನ್ನು ನೋಡೋಣ. |
01:18 | LibreOffice Base ನ ಮುಖ್ಯ ವಿಂಡೋಗೆ ಹೋಗೋಣ, ಮತ್ತು ಎಡ ಪೆನಲ್ ನಲ್ಲಿ ಡೇಟಾಬೇಸ್ ನ ಸೂಚಿಯಲ್ಲಿ Forms ಐಕಾನ್ ಮೇಲೆ ಕ್ಲಿಕ್ ಮಾಡೋಣ. |
01:29 | ನಂತರ 'Use Wizard to create form' ನ ಮೇಲೆ ಕ್ಲಿಕ್ ಮಾಡೋಣ. |
01:34 | ಇದು Forms wizard ಎಂಬ ಸುಪರಿಚಿತವಾದ ವಿಂಡೋ ಅನ್ನು ತೆರೆಯುತ್ತದೆ. |
01:41 | ಈ wizard ಅನ್ನು ನಾವು ವಿಸ್ತಾರವಾಗಿ ತಿಳಿದಿರುವುದರಿಂದ, ನಾವು ಈಗ ಇದನ್ನು ವೇಗವಾಗಿ ಮುಂದುವರೆಸುತ್ತೇವೆ. |
01:49 | ಸ್ಟೆಪ್ 1ರಲ್ಲಿ Field Selection, Tables or queries ಎಂದು ತೋರಿಸುವ ಲೇಬಲ್ ನ ಕೆಳಗಿರುವ ಡ್ರಾಪ್ ಡೌನ್ ಬಾಕ್ಸ್ ನಿಂದ 'Tables:BooksIssued' ಅನ್ನು ಸೆಲೆಕ್ಟ್ ಮಾಡೋಣ. |
02:02 | ಡಬಲ್ ಬಾಣದ ಬಟನ್ ಅನ್ನು ಬಳಸಿ ನಾವು ಎಲ್ಲ ಫೀಲ್ಡ್-ಗಳನ್ನು ಎಡದಿಂದ ಬಲಕ್ಕೆ ತರೋಣ. |
02:10 | Next ನ ಮೇಲೆ ಕ್ಲಿಕ್ ಮಾಡೋಣ. |
02:12 | ಇದು ಸ್ಟೆಪ್ 2, ಆದರೆ ನಾವೀಗ ಈ ಸ್ಟೆಪ್ ಅನ್ನು ದಾಟಿ, ಕೆಳಗಿರುವ next ಬಟನ್ ಮೇಲೆ ಕ್ಲಿಕ್ ಮಾಡೋಣ. |
02:20 | ಈಗ ನಾವು step 5ರಲ್ಲಿ ಇದ್ದೇವೆ. ಮೊದಲ ಅರೇಂಜ್ಮೆಂಟ್ ಆದ 'Columnar – Labels Left' ಅನ್ನು ಆಯ್ಕೆ ಮಾಡೋಣ ಮತ್ತು Next ಬಟನ್ ಮೇಲೆ ಕ್ಲಿಕ್ ಮಾಡೋಣ. |
02:30 | Next ಬಟನ್ ಮೇಲೆ ಕ್ಲಿಕ್ ಮಾಡಿ Step 6 ಅನ್ನು ಸಹ ದಾಟಿ ಹೋಗೋಣ. |
02:36 | Step 7 ನಲ್ಲಿ Ice blue ಅನ್ನು ಆಯ್ಕೆ ಮಾಡೋಣ ಮತ್ತು, Next ಬಟನ್ ಮೇಲೆ ಕ್ಲಿಕ್ ಮಾಡೋಣ. |
02:42 | step 8 ರಲ್ಲಿ, ಫಾರ್ಮ್ ಅನ್ನು 'Books Issued to Members' ಎಂದು ಹೆಸರಿಸೋಣ. |
02:53 | ಮತ್ತು 'Modify the form' ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ. |
02:57 | ಅನಂತರ Finish ಬಟನ್ ಮೇಲೆ ಕ್ಲಿಕ್ ಮಾಡಿ. |
03:00 | wizard ಪಾಪ್ ಅಪ್ ವಿಂಡೋ ಹೋಗಿದೆ ಮತ್ತು ನಾವು ಫಾರ್ಮ್ ಡಿಸೈನ್ ವಿಂಡೋ ಅನ್ನು ನೋಡುತ್ತಿದ್ದೇವೆ ಎಂಬುದನ್ನು ಗಮನಿಸಿ. |
03:07 | ಇಲ್ಲಿ, ಫಾರ್ಮ್ ಅನ್ನು ಡೇಟಾ ಎಂಟ್ರಿಗಾಗಿ ಉಪಯೋಗಿಸುವುದಕ್ಕೆ ಮೊದಲು ಕೆಲವು ಮಾರ್ಪಾಡುಗಳನ್ನು ಮಾಡಲಿದ್ದೇವೆ. |
03:15 | ಮೊದಲು ನಾವು ಫಾರ್ಮ್ ನ ಮೇಲೆ ಕಾಣಿಸುತ್ತಿರುವ ಎಲ್ಲ ಎಲಿಮೆಂಟ್ಸ್ ಗಳನ್ನು ಬೇರ್ಪಡಿಸೋಣ. |
03:22 | ನಾವು ಹೀಗೆ ಮಾಡುವುದರಿಂದ ಫಾರ್ಮ್ ನ ಮೇಲಿರುವ ಇಂಡಿವಿಜ್ಯುಯಲ್ ಎಲಿಮೆಂಟ್ ಗಳನ್ನು ಸುಲಭವಾಗಿ ಎಡಿಟ್ ಮಾಡಲು ಸಾಧ್ಯ. |
03:31 | ಫಾರ್ಮ್ ನ ಎಲ್ಲ ಎಲಿಮೆಂಟ್ಸ್ ಗನ್ನು ಒಮ್ಮೆ ಬೇರ್ಪಡಿಸುವುದಕ್ಕಾಗಿ ನಾವು ಎಲ್ಲಕ್ಕಿಂತ ಮೊದಲು ಎಲ್ಲಾ ಫಾರ್ಮ್ ಎಲಿಮೆಂಟ್ಸ್ ಗಳನ್ನು ಆಯ್ಕೆ ಮಾಡಬೇಕಾಗುತ್ತದೆ. |
03:40 | ಇದನ್ನು ಮಾಡಲು, ಮೊದಲು Form Design ಟೂಲ್ ಬಾರ್ ಅನ್ನು ತೆರೆಯೋಣ. |
03:46 | ಮೇಲ್ಭಾಗದಲ್ಲಿ view ಮೆನು ನ ಮೇಲೆ ಕ್ಲಿಕ್ ಮಾಡಿ, ಪುನಃ Toolbars ನ ಮೇಲೆ ಕ್ಲಿಕ್ ಮಾಡಿ. ನಂತರ Form Design ಮೇಲೆ ಕ್ಲಿಕ್ ಮಾಡಿ. |
03:56 | ಈ ಟೂಲ್ ಬಾರ್ ನಲ್ಲಿ ,ಒಮ್ಮೆ ಮೌಸ್ ಪಾಯಿಂಟ್ ಐಕಾನ್ ನ ಮೇಲೆ ಕ್ಲಿಕ್ ಮಾಡೋಣ. ಅದು ಮೊದಲನೆಯ ಮತ್ತು ಎಲ್ಲಕ್ಕಿಂತ ಎಡಕ್ಕೆ ಇರುವ ಐಕಾನ್ ಆಗಿದೆ. |
04:05 | ನಾವು ಇನ್ನು ಮುಂದೆ ಇದನ್ನು Select ಐಕಾನ್ ಎನ್ನುತ್ತೇವೆ. |
04:11 | ಇದು, ಕ್ಲಿಕ್ ಮತ್ತು ಡ್ರ್ಯಾಗ್ ಮಾಡುವುದರ ಮೂಲಕ ಫಾರ್ಮ್ ಎಲಿಮೆಂಟ್ಸ್ ಗಳ ಆಯ್ಕೆಗಾಗಿ ಉಪಯೋಗಿಸಲ್ಪಡುತ್ತದೆ. |
04:18 | ಈಗ, ಫಾರ್ಮ್ ನ ಮೇಲ್ಭಾಗದಲ್ಲಿ ಎಡಕ್ಕೆ ಕ್ಲಿಕ್ ಮಾಡೋಣ. ಮತ್ತು ಅದನ್ನು ಕೆಳಭಾಗದಲ್ಲಿ ಓರೆಯಾಗಿ ಬಲಕ್ಕೆ ಎಳೆಯೋಣ. |
04:26 | ಈಗ ನೀವು ಪರ್ಯಾಯವಾಗಿ ಕಪ್ಪು ಮತ್ತು ಬಿಳಿಯ ಗೆರೆಗಳುಳ್ಳ ಒಂದು ಆಯತವನ್ನು ನೋಡುತ್ತೀರಿ. |
04:32 | ಎಲ್ಲ ಫಾರ್ಮ್ ಎಲಿಮೆಂಟ್ ಗಳು ಈ ಆಯತದಲ್ಲಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. |
04:38 | ಫಾರ್ಮ್ ಎಲಿಮೆಂಟ್ ಗಳ ಸಮೂಹವನ್ನು ಆಯ್ಕೆ ಮಾಡಲು, ನಾವು ಇದನ್ನು ಪುನಃ ಪುನಃ ಬಳಸುತ್ತೇವೆ. |
04:46 | ಈಗ ಎಲ್ಲಾ ಎಲಿಮೆಂಟ್ ಗಳು ಸಣ್ಣ ಹಸಿರಿನ ಬಾಕ್ಸ್ ಗಳಲ್ಲಿ ಇರುವುದನ್ನು ನಾವು ನೋಡುತ್ತಿದ್ದೇವೆ. |
04:53 | ಈಗ ನಾವು ಇಲ್ಲಿ ಯಾವ ಕ್ರಿಯೆಯನ್ನು ಮಾಡುತ್ತೇವೆಯೋ, ಅದು ಈ ಕ್ಷೇತ್ರದ ಒಳಗೆ ಎಲ್ಲ ಎಲಿಮೆಂಟ್ ಗಳ ಮೇಲೆ ಸಮಾನವಾಗಿ ಪ್ರಭಾವ ಬೀರುತ್ತದೆ. |
05:02 | ಈಗ ಮೌಸ್ ಪಾಯಿಂಟರ್ ಅನ್ನು ಇಲ್ಲಿ ಯಾವ ಲೇಬಲ್ ಮೇಲಾದರೂ ಚಲಾಯಿಸೋಣ. |
05:08 | ಮೌಸ್ ಪಾಯಿಂಟರ್, ಲೇಬಲ್ಸ್ ಮತ್ತು ಟೆಕ್ಸ್ಟ್ ಬಾಕ್ಸ್ ಗಳ ಮೇಲೆ ಪ್ಲಸ್ (+) ಚಿಹ್ನೆಯ ರೂಪದಲ್ಲಿ ಕಾಣುತ್ತಿರುವುದನ್ನು ಗಮನಿಸಿ. |
05:18 | ಆದ್ದರಿಂದ, ಲೇಬಲ್ ನ ಮೇಲೆ ರೈಟ್ ಕ್ಲಿಕ್ ಮಾಡೋಣ. ಮತ್ತು ಕೆಳಭಾಗದಲ್ಲಿ Group ನ ಮೇಲೆ ಕ್ಲಿಕ್ ಮಾಡಿ ನಂತರ 'Ungroup' ನ ಮೇಲೆ ಕ್ಲಿಕ್ ಮಾಡೋಣ. |
05:28 | ಈಗ ಒಂದು ಶೀರ್ಷಕವನ್ನು ಬರೆಯೋಣ. ಅದು ಎಲ್ಲ ಎಲಿಮೆಂಟ್ ಗಳ ಮೇಲ್ಭಾಗದಲ್ಲಿ ಇರುತ್ತದೆ. |
05:35 | ಇದಕ್ಕಾಗಿ, ಫಾರ್ಮ್ ಎಲಿಮೆಂಟ್ ಗಳನ್ನು ಕೆಳಕ್ಕೆ ತಳ್ಳೋಣ. ನಂತರ ಅವುಗಳನ್ನು ಫಾರ್ಮ್ ನ ಒಳಗೆ ಮಧ್ಯದಲ್ಲಿ ಇರಿಸೋಣ. |
05:43 | ಹಾಗಾಗಿ, ಮೊದಲು ಡೌನ್ ಏರೋ ಬಟನ್ ಅನ್ನು ಸುಮಾರು ಏಳು ಬಾರಿ ಒತ್ತೋಣ. |
05:50 | ಆಮೇಲೆ ರೈಟ್ ಏರೋ ಬಟನ್ ಅನ್ನು ಸುಮಾರು 14 ಬಾರಿ ಒತ್ತೋಣ. |
05:57 | ಇದು ಎಲ್ಲ ಆಯ್ಕೆಯಾದ ಫಾರ್ಮ್ ಎಲಿಮೆಂಟ್ ಗಳನ್ನು ಬಲಕ್ಕೆ ಹಾಗೂ ಫಾರ್ಮ್ ನ ಮಧ್ಯಭಾಗಕ್ಕೆ ತರುತ್ತದೆ ಎಂಬುದನ್ನು ಗಮನಿಸಿ. |
06:07 | ಈಗ ಶೀರ್ಷಕವನ್ನು ಎಲ್ಲಿ ಬರೆಯಬೇಕಾಗಿದೆಯೋ, ಅಲ್ಲಿ ಕರ್ಸರ್ ಅನ್ನು ತರೋಣ. |
06:14 | ಇದನ್ನು ಮಾಡಲು, ಫಾರ್ಮ್ ವಿಂಡೋ ಕ್ಷೇತ್ರದ ಮೇಲೆ ಎಡಕ್ಕೆ ಕ್ಲಿಕ್ ಮಾಡೋಣ. |
06:21 | ಮತ್ತು enter ಬಟನ್ ಅನ್ನು ಎರಡು ಬಾರಿ ಒತ್ತೋಣ. |
06:26 | ಅನಂತರ tab ಬಟನ್ ಅನ್ನು ನಾಲ್ಕು ಬಾರಿ ಒತ್ತಿ. ಮತ್ತು 'Form to track Books Issued to Members' ಎಂದು ಟೈಪ್ ಮಾಡಿ. |
06:38 | ಈಗ ನಾವು ಲೇಬಲ್ಸ್ ಮತ್ತು ಟೆಕ್ಸ್ಟ್ ಬಾಕ್ಸ್ ಗಳ ಮೇಲೆ ಕ್ಲಿಕ್ ಮಾಡಿದಾಗ ಈ ಎಲಿಮೆಂಟ್ ಗಳು ವಿಶಿಷ್ಟರೀತಿಯಲ್ಲಿ ಆಯ್ಕೆಯಾಗುತ್ತವೆ ಅಥವಾ ಚಿಹ್ನಾಂಕಿತವಾಗುತ್ತವೆ. |
06:52 | ಸರಿ, ಮುಂದೆ ಫಾರ್ಮ್ ನ ಮೇಲೆ Book Id ಮತ್ತು Member Id ಲೇಬಲ್ ಗಳಿಗೆ ಪುನಃ ಹೆಸರಿಡೋಣ. |
07:00 | Book Id ಲೇಬಲ್ ಮೇಲೆ ಡಬಲ್ ಕ್ಲಿಕ್ ಮಾಡಿ ನಾವು ಇದನ್ನು ಮಾಡಬಹುದು. ಅದು ಒಂದು ಪರಿಚಿತವಾದ Properties ವಿಂಡೋ ಅನ್ನು ತೆರೆಯುತ್ತದೆ. |
07:12 | label ನ ಮುಂದೆ, Book Title ಎಂದು ಟೈಪ್ ಮಾಡಿ. |
07:18 | ಈಗ ಫಾರ್ಮ್ ನ ಮೇಲೆ Member Id ಲೇಬಲ್ ನ ಮೇಲೆ ಕ್ಲಿಕ್ ಮಾಡೋಣ. |
07:25 | ಇಲ್ಲಿ Properties ವಿಂಡೋ ರಿಫ್ರೆಶ್ ಆಗಿರುವುದನ್ನು ಗಮನಿಸಿ. ಮತ್ತು ನಾವು ಇಲ್ಲಿ Label ನ ಮುಂದೆ 'Member Name' ಅಂತ ಟೈಪ್ ಮಾಡೋಣ. |
07:34 | ನಾವು tab ಬಟನ್ ಅನ್ನು ಒತ್ತಿದಾಗ, ಫಾರ್ಮ್ ನ ಮೇಲೆ ಹೊಸ ಲೇಬಲ್ ಬದಲಾಗುವುದನ್ನು ನಾವು ಕಾಣುತ್ತೇವೆ. |
07:43 | ಈಗ ಈ ಎಲಿಮೆಂಟ್ ಗಳ ಫಾಂಟ್ ಗಾತ್ರವನ್ನು ಬದಲಿಸೋಣ. |
07:49 | ಪುನಃ ಎಲ್ಲ ಎಲಿಮೆಂಟ್ ಗಳನ್ನು ಆಯ್ಕೆ ಮಾಡೋಣ. |
07:54 | ನಾವು ಕ್ಲಿಕ್, ಡ್ರ್ಯಾಗ್ ಮತ್ತು ಡ್ರಾಪ್ ಪದ್ಧತಿಯನ್ನು ಅನುಸರಿಸೋಣ. |
07:59 | ಮತ್ತು ಈಗ, ನಾವು ಯಾವುದಾದರೂ ಲೇಬಲ್ ನ ಮೇಲೆ ಡಬಲ್ ಕ್ಲಿಕ್ ಮಾಡಿದಾಗ, ಅದು Properties ವಿಂಡೋ ಅನ್ನು ತೆರೆಯುತ್ತದೆ. |
08:08 | Font ಅನ್ನು ಕಂಡುಹಿಡಿಯಲು ಕೆಳಕ್ಕೆ ಸ್ಕ್ರೋಲ್ ಮಾಡೋಣ. ಮತ್ತು ಅದರ ಬಲಭಾಗದಲ್ಲಿ ಸ್ಕ್ವೆಯರ್ ಬಟನ್ ನ ಮೇಲೆ ಕ್ಲಿಕ್ ಮಾಡೋಣ. |
08:18 | ಹೊಸ ಪಾಪ್ ಅಪ್ ವಿಂಡೋದಲ್ಲಿ, Bold ಮೇಲೆ ಕ್ಲಿಕ್ ಮಾಡೋಣ. ಮತ್ತು ಸೈಜ್ 8 ರ ಮೇಲೆ ಕ್ಲಿಕ್ ಮಾಡೋಣ. |
08:26 | ಮತ್ತು Ok ಬಟನ್ ನ ಮೇಲೆ ಕ್ಲಿಕ್ ಮಾಡೋಣ. |
08:29 | ಈಗ ಫಾರ್ಮ್ ನಲ್ಲಿ ಫಾಂಟ್, ಬೋಲ್ಡ್ ( ದಪ್ಪಕ್ಷರ ) ಮತ್ತು ಸೈಜ್ 8 ಆಗಿ ಬದಲಾಗಿರುವುದನ್ನು ಗಮನಿಸಿ. |
08:38 | ಈಗ ಎಲ್ಲ ಫಾರ್ಮ್ ಎಲಿಮೆಂಟ್ ಗಳನ್ನು ವಿಂಡೋದ ಮಧ್ಯಭಾಗಕ್ಕೆ ಸ್ಥಾನಾಂತರಿಸೋಣ. |
08:45 | ಇದಕ್ಕಾಗಿ ನಾವು ಎಲ್ಲ ಎಲಿಮೆಂಟ್ ಗಳನ್ನು ಆಯ್ಕೆ ಮಾಡುತ್ತೇವೆ. |
08:49 | ಈಗ ಯಾವುದಾದರೂ ಲೇಬಲ್ ನ ಮೇಲೆ ಕ್ಲಿಕ್ ಮಾಡೋಣ. ಮತ್ತು ಅದನ್ನು ಫಾರ್ಮ್ ಡಿಸೈನ್ ವಿಂಡೋದ ಮಧ್ಯಭಾಗಕ್ಕೆ ಡ್ರ್ಯಾಗ್ ಮಾಡೋಣ. (ಎಳೆಯೋಣ) |
09:00 | ಈಗ ಫಾರ್ಮ್ ಅನ್ನು save ಮಾಡೋಣ. |
09:03 | ಮತ್ತು ಈ ವಿಂಡೋ ಅನ್ನು ಕ್ಲೋಸ್ ಮಾಡೋಣ. ಈಗ ನಮ್ಮ ಫಾರ್ಮ್ ಹೇಗೆ ಕಾಣುತ್ತಿದೆ ಎಂದು ನೋಡಲು, |
09:10 | ಬೇಸ್ ನ ಮುಖ್ಯ ವಿಂಡೋಗೆ ಹೋಗೋಣ. ಮತ್ತು ಬಲಭಾಗದ ಪೆನಲ್ ನ ಮೇಲೆ 'Books Issued to Members' ಫಾರ್ಮ್ ನ ಮೇಲೆ ಡಬಲ್ ಕ್ಲಿಕ್ ಮಾಡೋಣ. |
09:20 | ಇದು ಡೇಟಾ ಎಂಟ್ರಿ ಉಪಯೋಗಕ್ಕಾಗಿ ತಯಾರಾಗಿರುವ ಫಾರ್ಮ್ ಅನ್ನು ತೆರೆಯುತ್ತದೆ. |
09:26 | ಈಗ, ಈ ಫಾರ್ಮ್ ನಲ್ಲಿ, ನಾವು ಕೆಲವು ಮಾದರಿಯ ಡೇಟಾಗಳನ್ನು ನೋಡುತ್ತೇವೆ. |
09:31 | ಮತ್ತು book title ಮತ್ತು member name ನ ಎದುರು ನಾವು ಕೆಲವು ಸಂಖ್ಯೆಗಳನ್ನು ಕಾಣುತ್ತೇವೆ. |
09:37 | ಅವು ನಿಜವಾಗಿಯೂ Books ಮತ್ತು Members ಸೂಚಿಯಲ್ಲಿ ಪ್ರಾಥಮಿಕ ಸಂಖ್ಯೆಗಳಾಗಿವೆ. ಆದರೆ ಹೆಚ್ಚು ಅನುಕೂಲವಾದ ಸಂಖ್ಯೆಗಳಲ್ಲ. |
09:46 | ನಿಜವಾದ (ವಾಸ್ತವಿಕ) names ಮತ್ತು book titles ಅನ್ನು ನೀವು ನೋಡಲಿಚ್ಛಿಸುತ್ತೀರಾ ? |
09:50 | ಮತ್ತು, ಇದನ್ನು ನಾವು ಹೇಗೆ ಮಾಡಬಹುದು ? |
09:53 | ಒಂದು ಮಾರ್ಗವಿದೆ, ಅದೇನೆಂದರೆ ಫಾರ್ಮ್ ಕಂಟ್ರೋಲ್ ಹೆಸರಿನ List box ಅನ್ನು ಜೋಡಿಸಬೇಕು. |
09:59 | ಲಿಸ್ಟ್ ಬಾಕ್ಸ್ ಮತ್ತು ಬೇರೆ ಫಾರ್ಮ್ ಕಂಟ್ರೋಲ್ ಗಳನ್ನು ಹೇಗೆ ಜೋಡಿಸುವುದು ಮತ್ತು ಹೇಗೆ ಉಪಯೋಗಿಸುವುದು ಎಂಬುದನ್ನು ನಾವು ಮುಂದಿನ ಟ್ಯುಟೋರಿಯಲ್ ನಲ್ಲಿ ನೋಡಲಿದ್ದೇವೆ. |
10:08 | ಈಗ ನಾವು ಲಿಬ್ರೆ ಆಫೀಸ್ ಬೇಸ್ ನಲ್ಲಿ ಕಾಂಪ್ಲೆಕ್ಸ್ ಫಾರ್ಮ್ ಎಂಬ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
10:13 | ಸಂಕ್ಷೇಪವಾಗಿ, ನಾವು:
ಒಂದು ಕಾಂಪ್ಲೆಕ್ಸ್ ಫಾರ್ಮ್ ಅನ್ನು ತಯಾರಿಸುವುದು ಮತ್ತು ಫಾರ್ಮ್ ಅನ್ನು ಮಾರ್ಪಡಿಸುವುದರ ಬಗ್ಗೆ ಕಲಿತಿದ್ದೇವೆ. |
10:20 | ಈ ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
ಈ ಪ್ರೊಜೆಕ್ಟ್ http://spoken-tutorial.org ನ ಮೂಲಕ ಸಂಯೋಜಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನ ಲಿಂಕ್-ನಲ್ಲಿ ಸಿಗುತ್ತದೆ. |
10:40 | ಈ ಸ್ಕ್ರಿಪ್ಟ್ ದೇಸಿ ಕ್ರ್ಯು ಸಲ್ಯುಷನ್ ನ ಪ್ರಿಯಾ ಸುರೇಶ್ ಅವರ ಕೊಡುಗೆಯಾಗಿದೆ.ಈ ಟ್ಯುಟೋರಿಯಲ್ ನ ಅನುವಾದಕರು ಡಾ. ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟೀ ಬಾಂಬೆಯಿಂದ ವಾಸುದೇವ.
ಧನ್ಯವಾದಗಳು. |