Inkscape/C4/Trace-bitmaps-in-Inkscape/Kannada
From Script | Spoken-Tutorial
Time | Narration |
00:02 | Inkscape ನಲ್ಲಿ “Trace bitmap ” ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು ರಾಸ್ಟರ್ ಮತ್ತು ವೆಕ್ಟರ್ ಇಮೇಜ್ ಗಳ ನಡುವಿನ ವ್ಯತ್ಯಾಸ, ಅನೇಕ ರಾಸ್ಟರ್ ಮತ್ತು ವೆಕ್ಟರ್ ಫಾರ್ಮ್ಯಾಟ್ ಗಳು, ಮತ್ತು ರಾಸ್ಟರ್ ಇಮೇಜ್ ಗಳನ್ನು ವೆಕ್ಟರ್ ಗೆ ಪರಿವರ್ತಿಸುವುದು ಇವುಗಳ ಕುರಿತು ಕಲಿಯುತ್ತೇವೆ. |
00:20 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು Ubuntu Linux 12.04 ಒ ಎಸ್ ಮತ್ತು , Inkscape ಆವೃತ್ತಿ 0.91 ಗಳನ್ನು ಉಪಯೋಗಿಸಿದ್ದೇನೆ. |
00:29 | ಈ ಟ್ಯುಟೋರಿಯಲ್ ನಲ್ಲಿ ಉದಾಹರಣೆಗಾಗಿ ಉಪಯೋಗಿಸಿದ ಇಮೇಜ್ ಗಳನ್ನು Code Files ಲಿಂಕ್ ನಲ್ಲಿ ಕೊಡಲಾಗಿದೆ. |
00:36 | ಟ್ಯುಟೋರಿಯಲ್ ಅನ್ನು ಇಲ್ಲಿಯೇ ನಿಲ್ಲಿಸಿಟ್ಟು ಆ ಇಮೇಜ್ ಗಳನ್ನು ನಿಮ್ಮ ಸಿಸ್ಟಮ್ ಗೆ ಡೌನ್ಲೋಡ್ ಮಾಡಿಕೊಳ್ಳಿ. |
00:42 | ಇಲ್ಲಿ ನನ್ನ desktop ನಲ್ಲಿ ಎರಡು ಇಮೇಜ್ ಗಳಿವೆ. |
00:45 | Linux.png ಇದು ರಾಸ್ಟರ್ ಇಮೇಜ್ ಮತ್ತು Linux.pdf ಇದು ವೆಕ್ಟರ್ ಇಮೇಜ್. |
00:51 | ನಾನು ಅವುಗಳನ್ನು ತೆರೆಯುತ್ತೇನೆ. |
00:53 | ಎರಡೂ ಒಂದೇ ರೀತಿಯಾಗಿ ಕಾಣಬಹುದು. ನಾವು ಇಮೇಜ್ ಗಳನ್ನು ಜೂಂ ಮಾಡಿ ಮಾತ್ರ ವ್ಯತ್ಯಾಸವನ್ನು ತಿಳಿಯಬಹುದು. ಈಗ ಅದನ್ನು ಮಾಡೋಣ. |
01:02 | ಈಗ ಮೊದಲನೆಯ ಇಮೇಜ್ ಪಿಕ್ಸಲೇಟೆಡ್ ಆದಂತೆ ಕಾಣಿಸುತ್ತದೆ ಏಕೆಂದರೆ ರಾಸ್ಟರ್ ಇಮೇಜ್ ಗಳು ಪಿಕ್ಸಲ್ ಗಳಿಂದ ಮಾಡಲ್ಪಟ್ಟಿರುತ್ತದೆ. |
01:09 | ಆದರೆ ಎರಡನೇ ಇಮೇಜ್ ಪಿಕ್ಸಲೇಟೆಡ್ ಆದಂತೆ ಕಾಣಿಸುವುದಿಲ್ಲ ಏಕೆಂದರೆ ವೆಕ್ಟರ್ ಇಮೇಜ್ ಗಳು ಪಾಥ್ ಗಳಿಂದ ಮಾಡಲ್ಪಟ್ಟಿರುತ್ತವೆ. |
01:15 | ಕೆಲವು ರಾಸ್ಟರ್ ಇಮೇಜ್ ಫಾರ್ಮ್ಯಾಟ್ ಗಳು : JPEG, PNG,TIFF,GIF, BMP ಮುಂತಾದವು. |
01:27 | ಕೆಲವು ವೆಕ್ಟರ್ ಇಮೇಜ್ ಫಾರ್ಮ್ಯಾಟ್ ಗಳು : SVG,AI, CGM ಮುಂತಾದವು. |
01:34 | ಕೆಲವು ಇಮೇಜ್ ಫಾರ್ಮ್ಯಾಟ್ ಗಳು ವೆಕ್ಟರ್ ಮತ್ತು ರಾಸ್ಟರ್ ಎರಡೂ ಆಗಿರುತ್ತವೆ. ಅವು :
PDF, EPS, SWF |
01:43 | ಈಗ ರಾಸ್ಟರ್ ಇಮೇಜ್ ಅನ್ನು ವೆಕ್ಟರ್ ಆಗಿ ಪರಿವರ್ತಿಸುವುದು ಹೇಗೆಂದು ಕಲಿಯೋಣ. |
01:47 | Inkscape ಅನ್ನು ತೆರೆಯಿರಿ. ನಾವು ರಾಸ್ಟರ್ ಇಮೇಜ್ ಅನ್ನು ಇಂಪೋರ್ಟ್ ಮಾಡಿಕೊಳ್ಳೋಣ. |
01:52 | File ಹೋಗಿ ಮತ್ತು Import ನ ಮೇಲೆ ಕ್ಲಿಕ್ ಮಾಡಿ. |
01:57 | ಈಗ Path menu ಗೆ ಹೋಗಿ Trace Bitmap ನ ಮೇಲೆ ಕ್ಲಿಕ್ ಮಾಡಿ. |
02:02 | ಒಂದು ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. Mode ಟ್ಯಾಬ್ ನಡಿಯಲ್ಲಿ ನಾವು ಅನೇಕ ಆಯ್ಕೆಗಳನ್ನು ನೋಡಬಹುದು. |
02:08 | ಈಮೇಜ್ ಸೆಲೆಕ್ಟ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಡಿಫಾಲ್ಟ್ ಆಗಿ Brightness cutoff ಆಯ್ಕೆಯು ಆರಿಸಿಕೊಳ್ಳಲ್ಪಟ್ಟಿರುತ್ತದೆ. |
02:14 | Preview ನಡಿಯಲ್ಲಿ Live Preview ಆಯ್ಕೆಯನ್ನು ಚೆಕ್ ಮಾಡಿ, ಬದಲಾವಣೆಯನ್ನು ಗಮನಿಸಿ. |
02:20 | Preview ವಿಂಡೋ ನಲ್ಲಿ Brightness cutoff ಪ್ರಕಾಶದಲ್ಲಿ ವ್ಯತ್ಯಾಸವನ್ನು ಕೊಡುತ್ತದೆ. |
02:26 | ಈಗ ಎರಡನೆಯ ಆಯ್ಕೆ ಅಂದರೆ Edge detection ನ ಮೇಲೆ ಕ್ಲಿಕ್ ಮಾಡಿ. |
02:31 | ಹೆಸರೇ ಹೇಳುವಂತೆ ಅದು ಅಂಚುಗಳನ್ನು ಗುರ್ತಿಸುತ್ತದೆ. |
02:35 | Color quantization ಇದು ಕಡಿಮೆಯಾದ ಬಣ್ಣಗಳ ಬೌಂಡರಿಗಳನ್ನು ಹುಡುಕುತ್ತದೆ. |
02:41 | Invert image ಇದು ಬಿಟ್ ಮ್ಯಾಪ್ ನ ಬಣ್ಣಗಳನ್ನು ಇನ್ವರ್ಟ್ ಮಾಡುತ್ತದೆ. ಚೆನ್ನಾಗಿ ಕಾಣಿಸುವುದಾದರೆ ನೀವು ಅದನ್ನು ಮಾಡಿಕೊಳ್ಳಬಹುದು. |
02:47 | ನಾನು ಇನ್ವರ್ಟ್ ಇಮೇಜ್ ಅನ್ನು ಅನ್ ಚೆಕ್ ಮಾಡುತ್ತೇನೆ. |
02:51 | ಅನೇಕ ಬಣ್ಣಗಳಿಗೆ Multiple scans ಇದು ಉತ್ತಮ |
02:54 | Brightness steps ಇದು ಪ್ರಕಾಶದಲ್ಲಿ ವ್ಯತ್ಯಾಸವನ್ನು ಹುಡುಕುತ್ತದೆ. |
02:58 | Colors ಇದು ನಿರ್ದಿಷ್ಟ ಬಣ್ಣದ ಮೊತ್ತವನ್ನು ಕೊಡುತ್ತದೆ. |
03:01 | Grays ಇದು Colors ನಂತೆಯೇ. ಆದರೆ ಕೇವಲ ಗ್ರೇಸ್ಕೇಲ್ ಬಣ್ಣಗಳನ್ನು ಗುರುತಿಸುತ್ತದೆ. Smooth ಆಯ್ಕೆಯನ್ನು ಅನ್ ಚೆಕ್ ಮಾಡಿ ಏಕೆಂದರೆ ಇದು ತುದಿಯಲ್ಲಿ ತುಂಬಾ ನಯವಾದ ರೇಖೆಗಳನ್ನು ರಚಿಸುತ್ತದೆ. |
03:13 | ನಾವು ಈಗ ಎಲ್ಲಾಟ್ರೇಸಿಂಗ್ ಆಯ್ಕೆಗಳನ್ನು ನೋಡಿದ್ದೇವೆ. ನಿಮ್ಮ ಅವಶ್ಯಕತೆಗೆ ತಕ್ಕಂತೆ ನೀವು ಬೇಕಾದವುಗಳನ್ನು ಆರಿಸಿಕೊಳ್ಳಬಹುದು. |
03:20 | ನಾನು Colors ಆಯ್ಕೆಯನ್ನು ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ಆರಿಸಿಕೊಳ್ಳುತ್ತೇನೆ. |
03:24 | ಈಗ OK ಯ ಮೇಲೆ ಕ್ಲಿಕ್ ಮಾಡಿ ಡಯಲಾಗ್ ಬಾಕ್ಸ್ ಅನ್ನು ಮುಚ್ಚಿ. |
03:28 | ಟ್ರೇಸ್ ಮಾಡಿದ ಇಮೇಜ್ ಅಸಲಿ ಇಮೇಜ್ ನ ಮೇಲ್ಭಾಗದಲ್ಲಿ ರಚನೆಯಾಗಿದೆ. |
03:33 | ಇಮೇಜ್ ಅನ್ನು ಕ್ಲಿಕ್ ಮಾಡಿ ಒಂದು ಕಡೆ ಸರಿಸಿಕೊಳ್ಳಿ ಹಾಗಾಗಿ ಎರಡೂ ಇಮೇಜ್ ಗಳನ್ನು ನೋಡಬಹುದು. |
03:38 | ಇಮೇಜ್ ಈಗ ವೆಕ್ಟರ್ ಆಗಿ ಪರಿವರ್ತನೆಯಾಗಿದೆ. ಇಮೇಜ್ ಗಳನ್ನು ಜೂಮ್ ಮಾಡಿ. |
03:43 | ಮೊದಲೇ ಹೇಳಿದಂತೆ ಮೊದಲ ಇಮೇಜ್ ಪಿಕ್ಸಲೇಟ್ ಆಗಿದೆ ಮತ್ತು ಎರಡನೆಯದು ಪಿಕ್ಸಲೇಟ್ ಆಗಿಲ್ಲ. |
03:50 | ಮತ್ತು ನಾವು ಪಾಥ್ ಗಳನ್ನು ಸ್ಪಷ್ಟವಾಗಿ ನೋಡಬಹುದು. |
03:56 | ಈಗ ಅಸಲಿ ಇಮೇಜ್ ಅನ್ನು ಡಿಲೀಟ್ ಮಾಡಿ. |
03:58 | ಇಮೇಜ್ ಅನ್ನು ಆಯ್ಕೆ ಮಾಡಿಕೊಳ್ಳಿ. Path ಗೆ ಹೋಗಿ Break Apart ನ ಮೇಲೆ ಕ್ಲಿಕ್ ಮಾಡಿ. |
04:03 | ಇಮೇಜ್ ನ ಮೇಲೆ ಕ್ಲಿಕ್ ಮಾಡಿ. ಇನ್ನೊಂದರ ಮೇಲೆ ಇಮೇಜ್ ಗಳ ಸ್ಟ್ಯಾಕ್ ರಚನೆಯಾಗುತ್ತದೆ. |
04:10 | ಅವುಗಳು ಕಾಣುವಂತೆ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ ಒಂದು ಕಡೆ ಡ್ರ್ಯಾಗ್ ಮಾಡಿಕೊಳ್ಳಿ. |
04:13 | ಈಗ ವೆಕ್ಟರ್ ಇಮೇಜ್ ಅನ್ನು ಹೇಗೆ ಎಡಿಟ್ ಮಾಡುವುದು ಎಂದು ನೋಡೋಣ. ನಾನು ಕಪ್ಪು ಇಮೇಜ್ ಅನ್ನು ಎಡಿಟ್ ಮಾಡುತ್ತೇನೆ. |
04:19 | ಹಾಗಾಗಿ ಉಳಿದ ಇಮೇಜ್ ಗಳನ್ನು ಡಿಲೀಟ್ ಮಾಡಿ. |
04:23 | ಇಮೇಜ್ ಆಯ್ಕೆಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. |
04:26 | Path ಗೆ ಹೋಗಿ Break Apart ನ ಮೇಲೆ ಕ್ಲಿಕ್ ಮಾಡಿ. |
04:29 | Fill and Stroke ನಡಿಯಲ್ಲಿ ಒಪಾಸಿಟಿಯನ್ನು 50 ಕ್ಕೆ ಇಳಿಸಿ. ಈಗ ನೀವು ಭಾಗಗಳನ್ನು ಸ್ಪಷ್ಟವಾಗಿ ನೋಡಬಹುದು. |
04:37 | ಈಗ ಇಮೇಜ್ ನ ಬಣ್ಣಗಳನ್ನು ಬದಲಿಸೋಣ. |
04:40 | ನಿಮ್ಮ ಕಲ್ಪನೆಗೆ ತಕ್ಕಂತೆ ಬಣ್ಣಗಳನ್ನು ಬದಲಿಸಬಹುದು. |
04:44 | ಈಗ ಎಲ್ಲಾ ಭಾಗಗಳನ್ನು ಆರಿಸಿಕೊಂಡು opacity ಯನ್ನು 100 ಕ್ಕೆ ಹೆಚ್ಚಿಸಿ. |
04:51 | ಎಲ್ಲವನ್ನು ಒಟ್ಟಿಗೆ ಗುಂಪು ಮಾಡಲು Ctrl + G ಯನ್ನು ಒತ್ತಿ. |
04:55 | ಈಗ ಕೆಲವು ಹೇರ್ ಸ್ಟೈಲ್ ಅನ್ನು ಸೇರಿಸೋಣ. ಅದನ್ನು ಮಾಡಲು ಇಮೇಜ್ ಅನ್ನು ಆಯ್ಕೆ ಮಾಡಿಕೊಂಡು Nodes ಟೂಲ್ ನ ಮೇಲೆ ಕ್ಲಿಕ್ ಮಾಡಿ. |
05:02 | ತಲೆಯ ಭಾಗಕ್ಕೆ ನೋಡ್ ಗಳನ್ನು ಸೇರಿಸಿ. ಈಗ ಇಲ್ಲಿ ತೋರಿಸಿರುವಂತೆ ನೋಡ್ ಗಳನ್ನು ಸ್ವಲ್ಪ ಮೇಲಕ್ಕೆ ಸರಿಸಿ. |
05:09 | ಇಮೇಜ್ ಅನ್ನು ರಾಸ್ಟರ್ ಮತ್ತು ವೆಕ್ಟರ್ ಎರಡೂ ಫಾರ್ಮ್ಯಾಟ್ ಗಳಲ್ಲೂ ಸೇವ್ ಮಾಡಿ. |
05:13 | ಮೊದಲು ಇದನ್ನು ರಾಸ್ಟರ್ ನಲ್ಲಿ ಸೇವ್ ಮಾಡೋಣ ಅಂದರೆ PNG ಫಾರ್ಮ್ಯಾಟ್ ನಲ್ಲಿ ಸೇವ್ ಮಾಡೋಣ. File ಗೆ ಹೋಗಿ ಮತ್ತು ನಂತರ Save As ನ ಮೇಲೆ ಕ್ಲಿಕ್ ಮಾಡಿ. |
05:21 | ಹೆಸರನ್ನು Image-raster ಎಂದು ಬದಲಿಸಿ Save ಮೇಲೆ ಕ್ಲಿಕ್ ಮಾಡಿ. |
05:29 | ಈಗ ಇಮೇಜ್ ಅನ್ನು ವೆಕ್ಟರ್ ಫಾರ್ಮ್ಯಾಟ್ ನಲ್ಲಿ ಅಂದರೆ PDF ಫಾರ್ಮ್ಯಾಟ್ ನಲ್ಲಿ ಸೇವ್ ಮಾಡೋಣ. |
05:34 | ಮತ್ತೊಮ್ಮೆ File ಗೆ ಹೋಗಿ Save As ನ ಮೇಲೆ ಕ್ಲಿಕ್ ಮಾಡಿ. |
05:39 | ಎಕ್ಸ್ಟೆನ್ಷನ್ ಅನ್ನು PDF ಗೆ ಬದಲಿಸಿ. ಹೆಸರನ್ನು Image-vector ಎಂದು ಬದಲಿಸಿ Save ಮೇಲೆ ಕ್ಲಿಕ್ ಮಾಡಿ. |
05:48 | ಈಗ ಡೆಸ್ಕ್ ಟಾಪ್ ಗೆ ಹೋಗಿ ಎರಡೂ ಇಮೇಜ್ ಗಳನ್ನು ಪರೀಕ್ಷಿಸೋಣ. |
05:53 | ನೀವು ಎರಡು ಇಮೇಜ್ ಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರ್ತಿಸಬಹುದು. |
05:58 | ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ. ಸಾರಾಂಶವನ್ನು ನೋಡೋಣ. |
06:01 | ಈ ಟ್ಯುಟೋರಿಯಲ್ ನಲ್ಲಿ ನಾವು ರಾಸ್ಟರ್ ಮತ್ತು ವೆಕ್ಟರ್ ಇಮೇಜ್ ಗಳ ನಡುವಿನ ವ್ಯತ್ಯಾಸ, ಅನೇಕ ರಾಸ್ಟರ್ ಮತ್ತು ವೆಕ್ಟರ್ ಫಾರ್ಮ್ಯಾಟ್ ಗಳು, ಮತ್ತು ರಾಸ್ಟರ್ ಇಮೇಜ್ ಗಳನ್ನು ವೆಕ್ಟರ್ ಗೆ ಪರಿವರ್ತಿಸುವುದು ಇವುಗಳ ಕುರಿತು ಕಲಿತಿದ್ದೇವೆ. |
06:12 | ಅಸೈನ್ ಮೆಂಟ್ ಗಾಗಿ , ನಿಮ್ಮ ಕೋಡ್ ಫೈಲ್ ಲಿಂಕ್ ನಲ್ಲಿ ಕೊಟ್ಟಿರುವ ಟ್ರೇನ್ ಇಮೇಜ್ ಅನ್ನು ತೆಗೆದು ಕೊಂಡು ಅದನ್ನು ಗ್ರೇ ನಲ್ಲಿ ವೆಕ್ಟರ್ ಇಮೇಜ್ ಗೆ ಪರಿವರ್ತಿಸಿ. |
06:20 | ನಿಮ್ಮ ಪೂರ್ಣಗೊಂಡ ಅಸೈನ್ ಮೆಂಟ್ ಈ ರೀತಿಯಾಗಿ ಕಾಣಿಸಬೇಕು. |
06:23 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ಹೆಚ್ಚಿನ ವಿಷಯವನ್ನು ತಿಳಿಯಲು ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ. |
06:30 | ಸ್ಪೋಕನ್ ಟ್ಯುಟೋರಿಯಲ್ ತಂಡವು :ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
06:38 | ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ.
|
06:41 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ.
ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ. ಇದರ ಕುರಿತು ಹೆಚ್ಚಿನ ವಿವರಗಳು ಈ ಲಿಂಕ್ ನಲ್ಲಿ ದೊರೆಯುತ್ತವೆ. |
06:51 | ಧ್ವನಿ ಮತ್ತು ಅನುವಾದ ನವೀನ್ ಭಟ್ಟ ಉಪ್ಪಿನ ಪಟ್ಟಣ. ಧನ್ಯವಾದಗಳು. |