Inkscape/C4/Mango-pattern-for-Textile-design/Kannada

From Script | Spoken-Tutorial
Jump to: navigation, search
Time
Narration
00:01 Inkscape ನಲ್ಲಿ “Mango Pattern for textile design” ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು ಮಾವಿನ ಕಾಯಿಯ ಪ್ಯಾಟರ್ನ್ ಅನ್ನು ರಚಿಸುವುದು, Pattern along Path ಅನ್ನು ಉಪಯೋಗಿಸಿ ವಿನ್ಯಾಸಗೊಳಿಸುವುದನ್ನು ಕಲಿಯುತ್ತೇವೆ.
00:17 ಈ ಟ್ಯುಟೋರಿಯಲ್ ನಲ್ಲಿ ನಾವು

Ubuntu Linux 12.04 ಒ ಎಸ್, Inkscape 0.91 ಆವೃತ್ತಿಯನ್ನು ಉಪಯೋಗಿಸಿದ್ದೇವೆ.

00:26 ಈಗ Inkscape ಅನ್ನು ತೆರೆಯೋಣ.
00:28 Bezier tool ಅನ್ನು ಆಯ್ಕೆ ಮಾಡಿಕೊಳ್ಳಿ. Tool Controls bar ನಲ್ಲಿ , Mode ಅನ್ನು Create Spiro path ಗೆ ಮತ್ತು Shape ಅನ್ನು Ellipse ಗೆ ಬದಲಿಸಿ.
00:38 ಈಗ ' ಕ್ಯಾನ್ವಾಸ್ ನ ಮೇಲೆ ಇಲ್ಲಿ ತೋರಿಸಿದಂತೆ ಮಾವಿನಕಾಯಿಯ ವಿನ್ಯಾಸವನ್ನು ಬರೆಯಿರಿ. ಇದು ಮಾವಿನಕಾಯಿಯ ವಿನ್ಯಾಸದಂತೆ ಕಾಣಬೇಕು.
00:47 ಈಗ Star tool ಅನ್ನು ಆರಿಸಿಕೊಳ್ಳಿ.
00:50 ಈಗ ಕ್ಯಾನ್ವಾಸ್ ನ ಮೇಲೆ ಒಂದು ನಕ್ಷತ್ರವನ್ನು ಬರೆಯಿರಿ ಮತ್ತು Selector tool ನ ಮೇಲೆ ಕ್ಲಿಕ್ ಮಾಡಿ.
00:55 Tool controls bar ನಲ್ಲಿ Width ಮತ್ತು Height ಅನ್ನು 30 ಎಂದು ಬದಲಿಸಿ.
01:00 ಕೆಂಪು ಬಣ್ಣಕ್ಕೆ ಬದಲಿಸಿ.
01:03 ಈಗ ನಾವು ನಕ್ಷತ್ರದ ರೋ ಪ್ಯಾಟರ್ನ್ ಅನ್ನು ರಚನೆ ಮಾಡಬೇಕು.
01:07 ಹಾಗೆ ಮಾಡಲು Edit menu ಗೆ ಹೋಗಿ, Clone ನ ಮೇಲೆ ಕ್ಲಿಕ್ ಮಾಡಿ ನಂತರ Create Tiled Clones ನ ಮೇಲೆ ಕ್ಲಿಕ್ ಮಾಡಿ.
01:16 Reset ನ ಮೇಲೆ ಕ್ಲಿಕ್ ಮಾಡಿ.
01:18 Rows ನ ಸಂಖ್ಯೆಯನ್ನು 1 ಎಂದು Columns ಸಂಖ್ಯೆಯನ್ನು 46 ಎಂದು ಬದಲಿಸಿ.
01:24 ಕಾಲಮ್ ಗಳ ಸಂಖ್ಯೆಯು ಮಾವಿನ ಕಾಯಿಯ ಆಕೃತಿಯ ಗಾತ್ರಕ್ಕನುಗುಣವಾಗಿ ಬದಲಾಗಬಹುದು.
01:28 Create ನ ಮೇಲೆ ಕ್ಲಿಕ್ ಮಾಡಿ. ಈಗ ರೋ ಪ್ಯಾಟರ್ನ್ ರಚನೆಯಾಗಿದೆ.
01:33 ಎಲ್ಲಾ ನಕ್ಷತ್ರಗಳನ್ನು ಆಯ್ಕೆ ಮಾಡಿಕೊಂಡು , ಅವುಗಳನ್ನು ಒಟ್ಟಿಗೆ ಸೇರಿಸಲು Ctrl + G ಯನ್ನು ಒತ್ತಿ.
01:38 ಈಗ ಮಾವಿನಕಾಯಿ ಮತ್ತು ನಕ್ಷತ್ರ ಎರಡೂ ಆಕೃತಿಗಳನ್ನೂ ಆಯ್ಕೆ ಮಾಡಿಕೊಳ್ಳಿ.
01:42 Extensions ಹೋಗಿ, Generate from Path ನ ಮೇಲೆ ಕ್ಲಿಕ್ ಮಾಡಿ ಮತ್ತು Pattern along Path ನ ಮೇಲೆ ಕ್ಲಿಕ್ ಮಾಡಿ.
01:49 Apply ನ ಮೇಲೆ ಕ್ಲಿಕ್ ಮಾಡಿ ಮತ್ತು ಡಯಲಾಗ್ ಬಾಕ್ಸ್ ಅನ್ನು ಮುಚ್ಚಿ.
01:53 ಆಕೃತಿಯ ಮೇಲೆ ನಕ್ಷತ್ರದ ಪ್ಯಾಟರ್ನ್ ಬಂದಿರುವುದನ್ನು ಗಮನಿಸಿ.
01:57 ಈಗ ಮಾವಿನ ಕಾಯಿಯ ಆಕೃತಿಯನ್ನು ಮತ್ತು ನಕ್ಷತ್ರದ ರೋ ವನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಡಿಲೀಟ್ ಮಾಡಿ.
02:01 ಈಗ ನಕ್ಷತ್ರದ ಪ್ಯಾಟರ್ನ್ ಅನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ಅವುಗಳನ್ನು ನಕಲು ಮಾಡಲು Ctrl + D ಯನ್ನು ಒತ್ತಿ.
02:07 ಈಗ ನಕಲು ಮಾಡಿದ ಪ್ಯಾಟರ್ನ್ ಅನ್ನು ಆಯ್ಕೆ ಮಾಡಿಕೊಂಡು, Ctrl key ಯನ್ನು ಒತ್ತಿಕೊಂಡು ಅದರ ಗಾತ್ರವನ್ನು ಬದಲಿಸಿ.
02:13 ಇದನ್ನು ಮೂಲ ಪ್ಯಾಟರ್ನ್ ನ ಮಧ್ಯ ಭಾಗದಲ್ಲಿಡಿ.
02:16 ಈಗ ಮಾವಿನ ಕಾಯಿಯ ಒಳಭಾಗದಲ್ಲಿರುವ ಖಾಲಿ ಜಾಗದಲ್ಲಿ ಬೇರೆ ವಿನ್ಯಾಸವನ್ನು ತುಂಬಿಸೋಣ.
02:21 Bezier tool ಆಯ್ಕೆ ಮಾಡಿಕೊಳ್ಳಿ. ಇಲ್ಲಿ ತೋರಿಸಿದ ವಿನ್ಯಾಸವನ್ನು ಬಿಡಿಸಿರಿ.
02:28 ಈಗ Path menu ಗೆ ಹೋಗಿ Path Effects ಅನ್ನು ಆಯ್ಕೆ ಮಾಡಿಕೊಳ್ಳಿ.
02:32 Pattern along Path ನಡಿಯಲ್ಲಿ ನಾವು ಅನೇಕ ಆಯ್ಕೆಗಳನ್ನು ನೋಡಬಹುದು.
02:37 Pattern source ನಲ್ಲಿ ಮೊದಲ ಆಯ್ಕೆ ಯ ಮೇಲೆ ಅಂದರೆ Edit on-canvas ನ ಮೇಲೆ ಕ್ಲಿಕ್ ಮಾಡಿ.
02:43 ಕ್ಯಾನ್ವಾಸ್ ನ ಮೇಲ್ಭಾಗದ ಎಡಭಾಗದಲ್ಲಿ 4 node' ಗಳು ರಚನೆಯಾಗಿರುವುದನ್ನು ಗಮನಿಸಬಹುದು.
02:48 ನೋಡ್ ಗಳನ್ನು ಸ್ಪಷ್ಟವಾಗಿ ಕಾಣುವಂತೆ ಮಾಡಲು ಜೂಮ್ ಮಾಡೋಣ. ಇದನ್ನು ಪ್ಯಾಟರ್ನ್ ನ ಹತ್ತಿರಕ್ಕೆ ಸರಿಸಿ.
02:54 ಈಗ nodes ನ ಮೇಲೆ ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ. ಈಗ ಆಕೃತಿಯಲ್ಲಾಗುವ ಬದಲಾವಣೆಯನ್ನು ಗಮನಿಸಿ.
03:00 Selector tool ನ ಮೇಲೆ ಕ್ಲಿಕ್ ಮಾಡಿ ಈಗ Path menu ಗೆ ಹೋಗಿ ಮತ್ತು Object to Path ನ ಮೇಲೆ ಕ್ಲಿಕ್ ಮಾಡಿ.
03:06 ಇದನ್ನು ಗಾತ್ರವನ್ನು ಬದಲಿಸುವಾಗ ಆಕೃತಿಯಲ್ಲಿ ಬದಲಾವಣೆಯಾಗುವುದನ್ನು ತಡೆಯಲು ಮಾಡಬೇಕು.
03:12 ಇಲ್ಲಿ ತೋರಿಸಿದಂತೆ ಪ್ಯಾಟರ್ನ್ ನ ಗಾತ್ರವನ್ನು ಬದಲಿಸಿ. ಅದನ್ನು ನಕಲು ಮಾಡಿ ಮಾವಿನಕಾಯಿ ಆಕೃತಿಯ ಒಳಗೆ ಇಡಿ.
03:20 ಈಗ ಚಿಕ್ಕ ಮಾವಿನಕಾಯಿ ಪ್ಯಾಟರ್ನ್ ನ ಒಳಗಡೆ ಖಾಲಿ ಜಾಗವನ್ನು ತುಂಬಿಸೋಣ.
03:25 Star tool ನ ಮೇಲೆ ಕ್ಲಿಕ್ ಮಾಡಿ ಮತ್ತು ನಕ್ಷತ್ರವನ್ನು ಬಿಡಿಸಿ.
03:28 ಒಳ ಹ್ಯಾಂಡಲ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಆಕೃತಿಯನ್ನು ಈ ರೀತಿಯಾಗಿ ಪುನಃ ರಚಿಸಿ. ಬಣ್ಣವನ್ನು ನೀಲಿಗೆ ಬದಲಿಸಿ.
03:34 Selector tool ನ ಮೇಲೆ ಕ್ಲಿಕ್ ಮಾಡಿ ಆಕೃತಿಯ ಗಾತ್ರವನ್ನು ಬದಲಿಸಿ.
03:38 ಈ ಆಕೃತಿಯನ್ನು ನಕಲು ಮಾಡಿ ಮತ್ತು ಚಿಕ್ಕ ಮಾವಿನಕಾಯಿಯ ಪ್ಯಾಟರ್ನ್ ನ ಒಳಭಾಗದಲ್ಲಿ ತುಂಬಿ.
03:47 ಎಲ್ಲಾ ಒಬ್ಜೆಕ್ಟ್ ಗಳನ್ನು ಆಯ್ಕೆ ಮಾಡಿಕೊಳ್ಳಲು Ctrl + A ಯನ್ನು ಒತ್ತಿ. ಮತ್ತು ಅವುಗಳನ್ನು ಒಟ್ಟಿಗೆ ಸೇರಿಸಲು Ctrl + G ಯನ್ನು ಒತ್ತಿ.
03:53 ಪ್ಯಾಟರ್ನ್ ನ ಗಾತ್ರವನ್ನು ಬದಲಿಸಿ ಕ್ಯಾನ್ವಾಸ್ ನ ಮೇಲ್ಭಾಗದ ಎಡ ಮೂಲೆಯಲ್ಲಿಡಿ.
03:58 ನಾವು ಈ ಪ್ಯಾಟರ್ನ್ ಅನ್ನು ಕ್ಲೋನಿಂಗ್ ಅನ್ನು ಉಪಯೋಗಿಸಿ ಪುನರಾವರ್ತಿಸಬಹುದು. Edit menu ಗೆ ಹೋಗಿ, Clone ನ ಮೇಲೆ ಕ್ಲಿಕ್ ಮಾಡಿ ಮತ್ತು Create Tiled clones ನ ಮೇಲೆ ಕ್ಲಿಕ್ ಮಾಡಿ.
04:07 Symmetry tab ನಡಿಯಲ್ಲಿ, ಮೋಡ್ Simple translation ಆಗಿರಲೇ ಬೇಕು.
04:12 ರೋ ಗಳ ಸಂಖ್ಯೆಯನ್ನು 8 ಎಂದೂ ಮತ್ತು ಕಾಲಮ್ ಗಳ ಸಂಖ್ಯೆಯನ್ನು 5 ಎಂದೂ ಬದಲಿಸಿ.
04:17 Shift tab ನ ಮೇಲೆ ಕ್ಲಿಕ್ ಮಾಡಿ ಮತ್ತುPer columnShift X ಬೆಲೆಯನ್ನು 30 ಎಂದು ಬದಲಿಸಿ.
04:24 Create ಬಟನ್ ನ ಮೇಲೆ ಕ್ಲಿಕ್ ಮಾಡಿ. ಈಗ ಕ್ಯಾನ್ವಾಸ್ ನ ಮೇಲೆ ನಕಲುಗಳು ರಚನೆಯಾಗಿವೆ.
04:32 ಈ ಪ್ಯಾಟರ್ನ್ ಕುರ್ತಾ ದ ಮೇಲೆ ಹೀಗೆ ಕಾಣಿಸುತ್ತದೆ.
04:35 ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ಮಾವಿನ ಕಾಯಿಯ ಪ್ಯಾಟರ್ನ್ ಅನ್ನುರಚಿಸುವುದು, Pattern along Path ಅನ್ನು ಉಪಯೋಗಿಸಿ ವಿನ್ಯಾಸಗೊಳಿಸುವುದನ್ನು ಕಲಿಯುತ್ತೇವೆ.
04:44 ಇಲ್ಲಿ ನಿಮಗಾಗಿ ಅಸೈನ್ ಮೆಂಟ್ ಇದೆ. ಎಲೆಯ ಪ್ಯಾಟರ್ನ್ ಅನ್ನು ರಚನೆ ಮಾಡಿ.
04:47 ಪೂರ್ಣಗೊಂಡ ಅಸೈನ್ ಮೆಂಟ್ ಈ ರೀತಿಯಾಗಿ ಕಾಣಬೇಕು.
04:52 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ಹೆಚ್ಚಿನ ವಿಷಯವನ್ನು ತಿಳಿಯಲು ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ.
04:58 ಸ್ಪೋಕನ್ ಟ್ಯುಟೋರಿಯಲ್ ತಂಡವು :ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ.
05:07 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ. ಇದರ ಕುರಿತು ಹೆಚ್ಚಿನ ವಿವರಗಳು ಈ ಲಿಂಕ್ ನಲ್ಲಿ ದೊರೆಯುತ್ತದೆ.
05:16 ಧ್ವನಿ ಮತ್ತು ಅನುವಾದ ನವೀನ್ ಭಟ್ಟ ಉಪ್ಪಿನ ಪಟ್ಟಣ. ಧನ್ಯವಾದಗಳು.

Contributors and Content Editors

NaveenBhat