Inkscape/C3/Create-a-3-fold-brochure/Kannada
From Script | Spoken-Tutorial
Time | Narration |
00:01 | Inkscape ನಲ್ಲಿ “Create a 3-fold brochure” ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು |
00.08 | guidelines ಗಳನ್ನು ಉಪಯೋಗಿಸುವುದು ಮತ್ತು ಅವುಗಳನ್ನುಸೆಟ್ ಮಾಡುವುದು, |
00:10 | 3-fold brochure ನ ಸೆಟ್ಟಿಂಗ್ ಗಳು, |
00:12 | 3-fold brochure ಅನ್ನು ವಿನ್ಯಾಸ ಗೊಳಿಸುವುದರ ಕುರಿತು ಕಲಿಯುತ್ತೇವೆ. |
00:15 | layer ಗಳ ಉಪಯುಕ್ತತೆಗಳನ್ನು ಕೂಡ ಕಲಿಯುತ್ತೇವೆ. |
00:18 | ಈ ಟ್ಯುಟೋರಿಯಲ್ ಗಾಗಿ ನಾನು |
00:21 | Ubuntu Linux 12.04 ಆಪರೇಟಿಂಗ್ ಸಿಸ್ಟಮ್ |
00:24 | Inkscape ಆವೃತ್ತಿ 0.48.4 ಗಳನ್ನು ಉಪಯೋಗಿಸುತ್ತೇನೆ |
00:28 | ಇದೊಂದು ಮಾದರಿ 3 fold brochure. ನಾವು ಅದನ್ನು ತೆರೆದ ತಕ್ಷಣ ನಾವು ಮೂರು ಮಡಿಕೆಗಳನ್ನು ಕಾಣುತ್ತೇವೆ. |
00:34 | ಹಾಗಾಗಿ ಎಲ್ಲವೂ ಸೇರಿ ಆರು ವಿಭಾಗಗಳಿವೆ. |
00:37 | 1, 5 ಮತ್ತು 6 ಇವು ಹೊರಗಿನ ವಿಭಾಗಗಳು. |
00:42 | ಬ್ರೌಶರ್ ನ ಒಳಭಾಗವು 2, 3 ಮತ್ತು 4 ನೇ ವಿಭಾಗಗಳನ್ನು ಹೊಂದಿರುತ್ತದೆ. |
00:46 | ಈಗ ಈ ರೀತಿಯ brochure ಅನ್ನು ವಿನ್ಯಾಸಗೊಳಿಸುವುದು ಹೇಗೆಂದು ಕಲಿಯೋಣ. |
00:51 | Inkscape ಅನ್ನು ತೆರೆಯಿರಿ. |
00:53 | File ಮೇಲೆ ಕ್ಲಿಕ್ ಮಾಡಿ Document Properties ಗೆ ಹೋಗಿ. |
00:56 | ಮೊದಲಿಗೆ ಕೆಲವು ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳೋಣ. |
00:59 | ಅಂದರೆ, Default units ಅನ್ನು mm ಗೆ, |
01.03 | Page Size ಅನ್ನು A4 ಗೆ |
01.05 | Orientation ಅನ್ನು Landscape ಗೆ |
01.07 | Custom Size Units ಅನ್ನು mmಗೆ ಬದಲಿಸಿ. |
01.11 | ನಾವು ಕ್ಯಾನ್ವಾಸ್ ಅನ್ನು ಮೂರು ಮಡಿಕೆಗಳಾಗಿ ವಿಭಜಿಸಿಕೊಳ್ಳಬೇಕು. |
01.14 | ಕ್ಯಾನ್ವಾಸ್ ನ ಅಗಲವು 297 ಇರುವುದನ್ನು ಗಮನಿಸಿ. |
01.18 | ಹಾಗಾಗಿ ನಾವು 297 ಅನ್ನು ಮೂರು ಭಾಗಗಳಾಗಿ ಅಂದರೆ ಪ್ರತಿಯೊಂದು ವಿಭಾಗವೂ 99 ಬರುವಂತೆ ವಿಭಜಿಸಬೇಕು. |
01.27 | ಈಗ Document Properties ಡೈಲಾಗ್ ಬಾಕ್ಸ್ ಅನ್ನು ಮುಚ್ಚಿರಿ. |
01.30 | ಕ್ಯಾನ್ವಾಸ್ ನ ಮೇಲೆ guideline ಮೇಲೆ ಕ್ಲಿಕ್ ಮಾಡಿ ಎಡಭಾಗದಿಂದ ಎಳೆಯಿರಿ. |
01.35 | ಈ guideline ನ ಮೇಲೆ ಡಬಲ್ ಕ್ಲಿಕ್ ಮಾಡಿ. |
01.37 | ಒಂದು ಡೈಲಾಗ್ ಬಾಕ್ಸ್ ತೆರೆದು ಕೊಳ್ಳುತ್ತದೆ. |
01.41 | 'X' ನ ಬೆಲೆಯನ್ನು 99 ಕ್ಕೆ ಬದಲಿಸಿ OK ಮೇಲೆ ಕ್ಲಿಕ್ ಮಾಡಿ. |
01.45 | ಕ್ಯಾನ್ವಾಸ್ ನ ಮೇಲೆ ಇನ್ನೊಂದು guideline ಮೇಲೆ ಕ್ಲಿಕ್ ಮಾಡಿ ಎಡಭಾಗದಿಂದ ಎಳೆಯಿರಿ. |
01.50 | ಡೈಲಾಗ್ ಬಾಕ್ಸ್ ಅನ್ನು ತೆರೆಯಲು ಅದರ ಮೇಲೆ ಡಬಲ್ ಕ್ಲಿಕ್ ಮಾಡಿ. |
01.53 | ಇಲ್ಲಿ 'X' ನ ಬೆಲೆಯನ್ನು198 ಕ್ಕೆ ಬದಲಿಸಿ. |
01.56 | ಈಗ ನಮ್ಮ ಕ್ಯಾನ್ವಾಸ್ ಮೂರು ಸಮ ಭಾಗಗಳಾಗಿ ವಿಭಜನೆಯಾಗಿದೆ. |
02.01 | ಈ ಗೈಡ್ ಲೈನ್ ಗಳು ಪ್ರತಿ ಮಡಿಕೆ ಯ ಪ್ರಾರಂಭ ಮತ್ತು ಕೊನೆಯನ್ನು ತೋರಿಸುತ್ತದೆ. |
02.06 | ಈ ಫೈಲ್ ಅನ್ನು ಎರಡು ಬಾರಿ ಸೇವ್ ಮಾಡೋಣ. |
02.08 | ಒಂದು ಬ್ರೌಶರ್ ನ ಒಳಭಾಗಕ್ಕಾಗಿ |
02.11 | ಮತ್ತು ಇನ್ನೊಂದು ಹೊರಭಾಗಕ್ಕಾಗಿ. |
02.13 | File ಹೋಗಿ Save as ಮೇಲೆ ಕ್ಲಿಕ್ ಮಾಡಿ. |
02.16 | ನಾನು ನನ್ನ ಫೈಲ್ ಅನ್ನು Desktop ನಲ್ಲಿ Brochure-OUT.svg ಹೆಸರಿನಲ್ಲಿ ಸೇವ್ ಮಾಡುತ್ತೇನೆ. |
02.22 | ಮತ್ತೊಮ್ಮೆ File ಹೋಗಿ Save as ಮೇಲೆ ಕ್ಲಿಕ್ ಮಾಡಿ. |
02.26 | ಈ ಬಾರಿ Brochure-IN.svg ಎಂದು ಹೆಸರಿಸಿ Save ಮೇಲೆ ಕ್ಲಿಕ್ ಮಾಡುತ್ತೇನೆ. |
02.33 | ಹಾಗಾಗಿ ನಾವು ಬ್ರೌಶರ್ ನ ಒಳಭಾಗಕ್ಕಾಗಿ ಒಂದು ಮತ್ತು ಹೊರಭಾಗಕ್ಕಾಗಿ ಒಂದು ಫೈಲ್ ಅನ್ನು ಹೊಂದಿದ್ದೇವೆ. |
02.39 | Brochure-IN.svg ಇಂದ ಪ್ರಾರಂಭಿಸೋಣ. |
02.43 | ನಾವು ಬ್ರೌಶರ್ ಅನ್ನು ವಿನ್ಯಾಸ ಗೊಳಿಸುವಾಗ ನಾವು ಬೇರೆ ಬೇರೆ element ಗಳಿಗೆ ಬೇರೆ ಬೇರೆ layer ಗಳನ್ನು ಉಪಯೋಗಿಸುವುದು ಅವಶ್ಯಕ. |
02.50 | ಹೀಗೆ ಮಾಡುವುದರ ಉಪಯೋಗವನ್ನು ಈ ಟ್ಯುಟೋರಿಯಲ್ ನ ಕೊನೆಯ ಹೊತ್ತಿಗೆ ನೋಡುತ್ತೇವೆ. |
02.54 | ಈಗ ಮೊದಲಿಗೆ ಬ್ರೌಶರ್ ನ ಒಳಭಾಗವನ್ನು ವಿನ್ಯಾಸ ಮಾಡೋಣ. ಅಂದರೆ 2, 3 ಮತ್ತು 4 ನೇ ವಿಭಾಗಗಳು. |
03.00 | Bezier tool ಅನ್ನು ಉಪಯೋಗಿಸಿ ಕ್ಯಾನ್ವಾಸ್ ನ ಮಧ್ಯಭಾಗದಲ್ಲಿ ಒಂದು ಚಿತ್ರವನ್ನು ಬರೆಯಿರಿ ಮತ್ತು ಅದಕ್ಕೆ ನೀಲಿ ಬಣ್ಣವನ್ನು ಕೊಡಿ. |
03.09 | stroke ಅನ್ನು ತೆಗೆದು ಹಾಕಿ. |
03.14 | ಹೊಸ layer ಅನ್ನು ರಚನೆ ಮಾಡಿ ನಿಮಗೆ ಬೇಕಾದ ಹೆಸರು ಕೊಡಿ. |
03.19 | 150X150 pixels ನ ಒಂದು ವೃತ್ತವನ್ನು ಚಿತ್ರಿಸಿ. |
03.26 | ಇದಕ್ಕೆ ಹಸಿರು ಬಣ್ಣವನ್ನು ಕೊಡಿ. |
03.28 | ಆ ವೃತ್ತವನ್ನು ನಕಲು ಮಾಡಿ ಮತ್ತು ಬೇರೆ ಬೇರೆ ಗಾತ್ರದ ಐದು ವೃತ್ತಗಳನ್ನು ರಚನೆ ಮಾಡಿ. |
03.36 | ಇಲ್ಲಿ ತೋರಿಸಿದಂತೆ ಅವುಗಳನ್ನು ಚಿತ್ರದ ಸುತ್ತ ಇಡಿ. |
03.40 | ಈ ವೃತ್ತಗಳ ಒಳಗೆ ನಾವು ಕೆಲವು image ಗಳನ್ನು ಇಡುತ್ತೇವೆ. |
03.44 | ನಾನು ಈಗಾಗಲೆ ಇಮೇಜ್ ಗಳನ್ನು ವೃತ್ತಾಕಾರದಲ್ಲಿ ಎಡಿಟ್ ಮಾಡಿ ,ಅವುಗಳನ್ನು Documents ಫೋಲ್ಡರ್ ನಲ್ಲಿ ಸೇವ್ ಮಾಡಿಟ್ಟಿದ್ದೇನೆ. |
03.50 | ನಿಮ್ಮ ಅನುಕೂಲಕ್ಕಾಗಿ ಈ ಇಮೇಜ್ ಗಳನ್ನು Code files ಲಿಂಕ್ ನಲ್ಲಿ ಕೊಟ್ಟಿದ್ದೇವೆ. |
03.56 | ಟ್ಯುಟೋರಿಯಲ್ ಗೆ ವಿರಾಮ ಕೊಟ್ಟು, ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದಲ್ಲಿ ಈ ಇಮೇಜ್ ಗಳನ್ನು ಸೇವ್ ಮಾಡಿಕೊಳ್ಳಿ. |
04.02 | ಇದಾದ ನಂತರ ಟ್ಯುಟೋರಿಯಲ್ ಅನ್ನು ಪುನರಾರಂಭಿಸಿ. |
04.04 | File ಗೆ ಹೋಗಿ Import ಮೇಲೆ ಕ್ಲಿಕ್ ಮಾಡಿ Image1 ಮೇಲೆ ಕ್ಲಿಕ್ ಮಾಡಿ. |
04.09 | ಇದನ್ನು ಮೊದಲ ವೃತ್ತದ ಮೇಲೆ ಇಡಿ. |
04.12 | ಇದೇ ರೀತಿಯಲ್ಲಿ ಉಳಿದ ಐದು ಇಮೇಜ್ ಗಳಿಗೂ ಈ ಹಂತಗಳನ್ನು ಪುನರಾವರ್ತಿಸಿ. |
04.17 | Align and Distribute ಆಯ್ಕೆಯನ್ನು ಉಪಯೋಗಿಸಿ ಅವುಗಳನ್ನು ಅಲೈನ್ ಮಾಡಿ. |
04.20 | ಈಗ ನಿಮ್ಮ ಕ್ಯಾನ್ವಾಸ್ ಈ ರೀತಿಯಾಗಿ ಕಾಣಬೇಕು. |
04.25 | ನಂತರ ಇನ್ನೊಂದು layer ಅನ್ನು ರಚನೆ ಮಾಡಿ. |
04.28 | Bezier tool ಅನ್ನುಉಪಯೋಗಿಸಿ ಒಂದು ಬಾಣವನ್ನು ಚಿತ್ರಿಸಿ. |
04.34 | ಅದಕ್ಕೆ ಬೂದು ಬಣ್ಣವನ್ನುಕೊಡಿ. |
04.38 | stroke ಅನ್ನು ತೆಗೆದು ಹಾಕಿ. |
04.41 | Filters ಮೆನ್ಯುಗೆ ಹೋಗಿ Shadows and Glows ಆಯ್ಕೆ ಮಾಡಿಕೊಳ್ಳಿ ಮತ್ತು Drop Shadow ಮೇಲೆ ಕ್ಲಿಕ್ ಮಾಡಿ. |
04.47 | Preview ಬಾಕ್ಸ್ ಮೇಲೆ ಚೆಕ್ ಮಾಡಿ ಪರಿಣಾಮವನ್ನು ಗಮನಿಸಿ. |
04.50 | Apply ಕ್ಲಿಕ್ ಮಾಡಿ ಡೈಲಾಗ್ ಬಾಕ್ಸ್ ಅನ್ನು ಮುಚ್ಚಿರಿ. |
04.55 | ಇದನ್ನು ಇಲ್ಲಿ ತೋರಿಸಿರುವಂತೆ ಮೊದಲನೆಯ ವೃತ್ತದ ಮೇಲೆ ಇಡಿ. |
05.01 | ಈ ಬಾಣವನ್ನು ನಕಲು ಮಾಡಿ ಇನ್ನೆರಡು ಬಾಣಗಳನ್ನು ಚಿತ್ರಿಸಿ. |
05.05 | ಅವುಗಳನ್ನು ಎರಡನೇ ಮತ್ತು ಮೂರನೇ ವೃತ್ತಗಳ ಮೇಲೆ ಇಡಿ. |
05.10 | ಈ ಎಲ್ಲ ಚಿತ್ರಗಳು ಸಿದ್ಧವಾಗಿವೆ. |
05.13 | ಈಗ ನಾವು ಸಂಬಂಧಿತ ಪಠ್ಯವನ್ನು ಸೇರಿಸಬೇಕು. |
05.15 | ಹೊಸ ಲೇಯರ್ ನಲ್ಲಿ ಮೊದಲ ಬಾಣದ ಮೇಲೆ “Introduction” ಎಂದು ಟೈಪ್ ಮಾಡಿ |
05.20 | ಎರಡನೇ ಬಾಣದ ಮೇಲೆ “Features” ಎಂದು ಟೈಪ್ ಮಾಡಿ |
05.24 | ಮೂರನೇ ಬಾಣದ ಮೇಲೆ “Usage” ಎಂದು ಟೈಪ್ ಮಾಡಿ |
05.28 | ಈಗ ಪ್ರತಿಯೊಂದು ವಿಭಾಗದಡಿಯಲ್ಲು ಸಂಬಂಧಿತ ಪಠ್ಯವನ್ನು ಸೇರಿಸಬೇಕು. |
05.33 | ನಾನು ಈಗಾಗಲೇ LibreOffice Writer ನಲ್ಲಿ ಸೇವ್ ಮಾಡಿರುವ ಫೈಲ್ ನಿಂದ ಪಠ್ಯವನ್ನು copy ಮಾಡಿ ಇಲ್ಲಿ paste ಮಾಡುತ್ತೇನೆ. |
05.40 | ನೀವು ಸೇವ್ ಮಾಡಿದ ಫೋಲ್ಡರ್ ನಲ್ಲಿ ಈ ಫೈಲ್ ಇದೆ. |
05.43 | ದಯವಿಟ್ಟು ಅದರಿಂದ ನೀವು ಪಠ್ಯವನ್ನು ನಕಲು ಮಾಡಿಕೊಳ್ಳಿ. |
05.47 | ನಂತರ ಹೊಸ ಲೇಯರ್ ನಲ್ಲಿ ಇಲ್ಲಿ ತೋರಿಸಿದಂತೆ paste ಮಾಡಿ. |
05.50 | ಫಾಂಟ್ ಸೈಜ್ ಅನ್ನು 15 ಕ್ಕೆ ಇಳಿಸಿ ಮತ್ತು Text and Font ಆಯ್ಕೆಯನ್ನು ಉಪಯೋಗಿಸಿ ಅಲೈನ್ ಮಾಡಿಕೊಳ್ಳಿ. |
05.55 | ellipse ಟೂಲ್ ಅನ್ನು ಉಪಯೋಗಿಸಿ ಹಸಿರು ಬಣ್ಣದ bullet ಅನ್ನು ತಯಾರಿಸಿಕೊಳ್ಳಿ. |
05.59 | ಅದನ್ನು ಮೊದಲ ವಾಕ್ಯದ ಬಲಭಾಗದಲ್ಲಿಡಿ. |
06.02 | ಎಲ್ಲಾ ವಾಕ್ಯಗಳಿಗೂ ಇದನ್ನುಪುನರಾವರ್ತಿಸಿ. |
06.05 | ಈಗ brochure ನ ಒಳಭಾಗವು ಸಿದ್ಧವಾಗಿದೆ. |
06.08 | SVG ಫೈಲ್ ಅನ್ನು ಸೇವ್ ಮಾಡಲು CTRL S ಅನ್ನು ಒತ್ತಿ. |
06.12 | ಈಗ ಬ್ರೌಶರ್ ನಲ್ಲಿ ಬೇಕಾದ ಲೇಯರ್ ಗಳನ್ನು ಅಡಗಿಸಬಹುದು ಅಥವಾ ತೋರಿಸಬಹುದು. |
06.18 | ಈಗ ಇದೇ ಫೈಲ್ ಅನ್ನು PDF ನಲ್ಲಿ ಸೇವ್ ಮಾಡೋಣ. |
06.21 | File ಗೆ ಹೋಗಿ Save As ಮೇಲೆ ಕ್ಲಿಕ್ ಮಾಡಿ |
06.24 | ಫೈಲ್ ಎಕ್ಸ್ಟೆನ್ಷನ್ ಅನ್ನುPDF ಗೆ ಬದಲಾಯಿಸಿ. |
06.29 | Save ಮೇಲೆ ಕ್ಲಿಕ್ ಮಾಡಿ. |
06.31 | ಒಂದು ಹೊಸ dialog boxಗೋಚರಿಸುತ್ತದೆ. |
06.34 | ಪ್ರಿಂಟ್ ಮಾಡಲು ರೆಸೊಲ್ಯುಷನ್ 300 ಆಗಿರಬೇಕು. |
06.37 | ಅಂತರ್ಜಾಲಕ್ಕಾದರೆ 72 ಆಗಬಹುದು. |
06.40 | ನಾನು ಇದನ್ನು 300 ಆಗಿಯೇ ಇಡುತ್ತೇನೆ. |
06.42 | ಈಗ OK ಮೇಲೆ ಕ್ಲಿಕ್ ಮಾಡಿ |
06.44 | ಈಗ ಬಾಣಗಳ opacity ಯನ್ನು ಬದಲಿಸೋಣ. |
06.47 | Arrow ಲೇಯರ್ ಗೆ ಹೋಗಿ ಮತ್ತು ಆ ಲೇಯರ್ ನ ಒಪಾಸಿಟಿಯನ್ನು 70 ಕ್ಕೆ ಬದಲಿಸಿ. |
06.52 | ನಾನು ink-blotಗಳೊಂದಿಗೆ ಹೊಸ layer ಅನ್ನು ಸೇರಿಸುತ್ತೇನೆ. |
06.58 | ಫೈಲ್ ಅನ್ನು SVG ಮತ್ತು PDF ಫಾರ್ಮ್ಯಾಟ್ ಗಳೆರಡರಲ್ಲೂ ಸೇವ್ ಮಾಡಿ. |
07.04 | ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಎರಡೂ 'pdf' ಫೈಲ್ ಗಳನ್ನು ಹೋಲಿಸಿ. |
07.08 | ಈಗ ಬ್ರೌಶರ್ ನ ಹೊರಭಾಗವನ್ನು ವಿನ್ಯಾಸಗೊಳಿಸೋಣ. |
07.12 | File ಗೆ ಹೋಗಿ Open ಮೇಲೆ ಕ್ಲಿಕ್ ಮಾಡಿ. |
07.14 | Brochure-OUT.svg. ಆಯ್ಕೆ ಮಾಡಿ. |
07.18 | ಈಗ ನಾವು 1ನೇ, 4ನೇ ಮತ್ತು 5ನೇ ವಿಭಾಗಗಳನ್ನು ವಿನ್ಯಾಸಗೊಳಿಸೋಣ. |
07.22 | ಇನ್ನೊಮ್ಮೆ ನೆನಪಿಡಿ ನಾವು ಬೇರೆ ಬೇರೆ element ಗಳಿಗೆ ಬೇರೆ ಬೇರೆ layer ಗಳನ್ನು ರಚನೆ ಮಾಡಿಕೊಳ್ಳುತ್ತೇವೆ. |
07.28 | Bezier tool ಅನ್ನುಉಪಯೋಗಿಸಿ ಇಲ್ಲಿ ತೋರಿಸಿದಂತೆ ಮೇಲ್ಭಾಗದ ಎಡಗಡೆಯಲ್ಲಿ ಒಂದು ಚಿತ್ರವನ್ನು ರಚಿಸಿ. |
07.33 | ನೀಲಿ ಬಣ್ಣವನ್ನುಕೊಡಿ. stroke ಅನ್ನು ತೆಗೆದು ಹಾಕಿ. |
07.36 | ನಿಮ್ಮ ಫೋಲ್ಡರ್ ನಲ್ಲಿರುವ Spoken Tutorial ಲೋಗೋವನ್ನು ಇಂಪೋರ್ಟ್ ಮಾಡಿ. |
07.40 | ಗಾತ್ರವನ್ನು ಕುಗ್ಗಿಸಿ ಮತ್ತು ಇದನ್ನು ಮೊದಲನೇ ವಿಭಾಗದ ಮೇಲ್ಭಾಗದ ಎಡ ಮೂಲೆಯಲ್ಲಿ ಇಡಿ. |
07.46 | “Spoken Tutorial” ಎಂದು ಟೈಪ್ ಮಾಡಿ ಮತ್ತು ಲೋಗೋದ ಬಲಭಾಗದಲ್ಲಿ ಅಲೈನ್ ಮಾಡಿ. |
07.51 | ಫಾಂಟ್ ಸೈಜ್ ಅನ್ನು 25 ಕ್ಕೆ ಬದಲಿಸಿ. |
07.54 | ಇದರ ಕೆಳಗೆ ಒಂದು ವೃತ್ತವನ್ನು ಚಿತ್ರಿಸಿ ಹಳದಿ ಬಣ್ಣವನ್ನು ಹಚ್ಚಿ. |
07.58 | 'Inkscape' ಲೋಗೋವನ್ನು Import ಮಾಡಿ. |
08.00 | ಇದನ್ನು ಹಳದಿ ವೃತ್ತದ ಮೇಲೆ ಇಡಿ. |
08.03 | ಲೋಗೋ ದ ಕೆಳಗೆ “Inkscape” ಎಂದು ಟೈಪ್ ಮಾಡಿ. ಫಾಂಟ್ ಸೈಜ್ ಅನ್ನು 45 ಕ್ಕೆ ಬದಲಿಸಿ. |
08.09 | ನಾನು Spoken Tutorial ನ ಕುರಿತು ವಿವರಗಳನ್ನು ಸೇರಿಸಿದ್ದೇನೆ ಮತ್ತು ಸಂಬಂಧಿತ ಲೋಗೋಗಳನ್ನು ಕೂಡ ಸೇರಿಸಿದ್ದೇನೆ. |
08.15 | ದಯವಿಟ್ಟು ನೀವೂ ಹಾಗೇ ಮಾಡಿ. |
08.17 | ನಾನು ಎಲ್ಲಾ ಎಲಿಮೆಂಟ್ ಗಳನ್ನು |
08.19 | Text and font |
08.21 | ಮತ್ತು Align and Distribute ಆಯ್ಕೆಗಳನ್ನು ಉಪಯೋಗಿಸಿ ಅಲೈನ್ ಮಾಡಿದ್ದೇನೆ. |
08.24 | ಈಗ ಬ್ರೌಶರ್ ನ ಹೊರಭಾಗವು ಸಿದ್ಧವಾಗಿದೆ. |
08.28 | File ಗೆ ಹೋಗಿ. Save As ಮೇಲೆ ಕ್ಲಿಕ್ ಮಾಡಿ. |
08.31 | ಫಾರ್ಮ್ಯಾಟ್ ಅನ್ನು SVG ಗೆ ಬದಲಿಸಿ ಮತ್ತು Save ಮೇಲೆ ಕ್ಲಿಕ್ ಮಾಡಿ. |
08.37 | ಈ ಕ್ರಿಯೆಯನ್ನು ಪುನರಾವರ್ತಿಸಿ. |
08.39 | ಎಕ್ಸ್ಟೆನ್ಷನ್ ಅನ್ನು PDF ಗೆ ಬದಲಿಸಿ. |
08.41 | Save ಮೇಲೆ ಕ್ಲಿಕ್ ಮಾಡಿ. |
08.43 | ಇದು ನಾವು ಸಿದ್ಧಗೊಳಿಸಿದ ಬ್ರೌಶರ್. |
08.46 | ನೀವು ಬೇರೆ ಬೇರೆ ಎಲಿಮೆಂಟ್ ಗಳಿಗೆ ಬೇರೆ ಬೇರೆ ಲೇಯರ್ ಗಳನ್ನು ಉಪಯೋಗಿಸಿದರೆ ನಾವು ಅದರ ಬಣ್ಣ ಮತ್ತುopacity ಯನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದು. |
08.54 | ಇವೆರಡು ನಾನು ಇದೇ ಬ್ರೌಶರ್ ಗೆ ಮಾಡಿದ ಬೇರೆ ಬೇರೆ ವರ್ಣವಿನ್ಯಾಸಗಳು. |
09.00 | ಸಾರಾಂಶವನ್ನು ನೋಡೋಣ. |
09.02 | ಈ ಟ್ಯುಟೋರಿಯಲ್ ನಲ್ಲಿ ನಾವು |
09.04 | guidelines ಗಳನ್ನು ಉಪಯೋಗಿಸುವುದು ಮತ್ತು ಅವುಗಳನ್ನುಸೆಟ್ ಮಾಡುವುದು, |
09.07 | 3-fold brochure ನ ಸೆಟ್ಟಿಂಗ್ ಗಳು, |
09.09 | 3-fold brochure ಅನ್ನು ವಿನ್ಯಾಸ ಗೊಳಿಸುವುದರ ಕುರಿತು ಕಲಿತಿದ್ದೇವೆ. |
09.11 | ನಾವು, layer ಗಳ ಉಪಯುಕ್ತತೆಗಳನ್ನು ಕೂಡ ಕಲಿತಿದ್ದೇವೆ |
09.14 | ಮತ್ತು ಒಂದು ಬ್ರೌಶರ್ ಅನ್ನು ಬೇರೆ ಬೇರೆ ಬಣ್ಣದ ವಿನ್ಯಾಸಗಳಲ್ಲಿ ಪಡೆಯುವುದನ್ನೂ ಕೂಡ ಕಲಿತಿದ್ದೇವೆ. |
09.18 | ಸ್ವಂತ ಅಭ್ಯಾಸಕ್ಕಾಗಿ- |
09.20 | Spoken Tutorial ಪ್ರಾಜೆಕ್ಟ್ ಗೆ ಒಂದು 3-fold brochure ಅನ್ನು ವಿನ್ಯಾಸಗೊಳಿಸಿ. |
09.24 | ಮುಗಿಸಿದ ನಂತರ ನಿಮ್ಮ ಅಸೈನ್ ಮೆಂಟ್ ಈ ರೀತಿಯಾಗಿರಬೇಕು. |
09.29 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಕುರಿತು ತಿಳಿಸುತ್ತದೆ. ದಯವಿಟ್ಟು ನೋಡಿ. |
09.35 | Spoken Tutorial Project Team ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ |
09.42 | ಹೆಚ್ಚಿನ ವಿವರಗಳಿಗಾಗಿ ನಮಗೆ ಬರೆಯಿರಿ. |
09.45 | Spoken Tutorial Project ಇದು ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ |
09.50 | ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ದೊರೆಯುತ್ತದೆ |
09.54 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
09.57 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು. |