Inkscape/C2/Basics-of-Bezier-Tool/Kannada
From Script | Spoken-Tutorial
Time | Narration |
00:00 | Inkscape ನಲ್ಲಿ“Basics of Bezier tool” ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು |
00:08 | ಸರಳರೇಖೆ ಮತ್ತು ಮುಚ್ಚಿದ ಆಕೃತಿಗಳನ್ನು ಚಿತ್ರಿಸಲು, |
00:11 | ವಕ್ರರೇಖೆಯನ್ನು ಚಿತ್ರಿಸಲು |
00:13 | ಮತ್ತು ನೋಡ್ ಗಳನ್ನು ಸೇರಿಸುವುದು, ಎಡಿಟ್ ಮಾಡುವುದು ಮತ್ತು ಅಳಿಸುವುದನ್ನು ಕಲಿಯುತ್ತೇವೆ. |
00:15 | ಈ ಟ್ಯುಟೋರಿಯಲ್ ಗಾಗಿ ನಾನು |
00:18 | Ubuntu Linux 12.04 ಆಪರೇಟಿಂಗ್ ಸಿಸ್ಟಮ್ |
00:21 | Inkscape ಆವೃತ್ತಿ 0.48.4 ಗಳನ್ನು ಉಪಯೋಗಿಸುತ್ತೇನೆ. |
00:24 | ನಾನು ಈ ಟ್ಯುಟೋರಿಯಲ್ ಅನ್ನು ಗರಿಷ್ಠ ರೆಸೊಲ್ಯುಷನ್ ಮೋಡ್ ನಲ್ಲಿ ರೆಕಾರ್ಡ್ ಮಾಡುತ್ತೇನೆ. |
00:28 | ಏಕೆಂದರೆ ಇದು ಟೂಲ್ಸ್ ಗಳನ್ನು ತೋರಿಸಲು ಅವಕಾಶ ಕಲ್ಪಿಸಿಕೊಡುತ್ತದೆ. |
00:32 | Inkscape ಅನ್ನು ತೆರೆಯೋಣ. |
00:35 | ಮೊದಲು Bezier tool ಅನ್ನು ಉಪಯೋಗಿಸಿ ಒಂದು ಸರಳರೇಖೆಯನ್ನು ಚಿತ್ರಿಸೋಣ. |
00:39 | Bezier tool ಇದು Pencil tool ನ ಕೆಳಗಡೆ ಇರುತ್ತದೆ. |
00:42 | ಅದರ ಮೇಲೆ ಕ್ಲಿಕ್ ಮಾಡೋಣ. |
00:44 | ಮೇಲ್ಗಡೆ ಎಡಭಾಗದಲ್ಲಿರುವ Tool controls bar ನಲ್ಲಿರುವ 4 ಆಯ್ಕೆಗಳನ್ನು ಗಮನಿಸಿ. |
00:48 | Bezier curve ಚಿತ್ರಿಸಲು ನಾಲ್ಕು ವಿಧಾನಗಳಿವೆ. |
00:51 | Create regular Bezier path ಆಯ್ಕೆಯು ಡಿಫಾಲ್ಟ್ ಆಗಿ ಸಕ್ರಿಯವಾಗಿರುತ್ತದೆ. |
00:57 | canvas ಮೇಲೆ ಒಮ್ಮೆ ಕ್ಲಿಕ್ ಮಾಡಿ ಮತ್ತು ಕರ್ಸರ್ ಅನ್ನು ಇನ್ನೊಂದು ತುದಿಗೆ ಚಲಿಸಿ. |
01:01 | ಇನ್ನೊಮ್ಮೆ ಕ್ಲಿಕ್ ಮಾಡಿ. ಗಮನಿಸಿ ಚಿತ್ರಿಸಿದ ರೇಖೆಯು ಹಸಿರು ಬಣ್ಣದಿಂದ ಗುರ್ತಿಸಲ್ಪಟ್ಟಿದೆ. |
01:07 | ರೇಖೆಯನ್ನು ಪೂರ್ಣಗೊಳಿಸಲು right-click ಮಾಡಿ. |
01:11 | ರೇಖೆಯ ಎರಡು ಕೊನೆಯ ಬಿಂದುಗಳನ್ನು nodes ಎಂದು ಕರೆಯುತ್ತಾರೆ. ಇದರ ಕುರಿತು ಮುಂದೆ ತಿಳಿಯೋಣ. |
00:17 | ಈಗ ನಾವು ಒಂದು ತ್ರಿಭುಜವನ್ನು ರಚಿಸೋಣ. |
01:21 | ಮೊದಲು, ಒಂದು ವಾಲಿರುವ ರೇಖೆಯನ್ನು ಎಳೆಯಿರಿ, ಒಮ್ಮೆ ಕ್ಲಿಕ್ ಮಾಡಿ ಕೋನವಾಗುವಂತೆ ಇನ್ನೊಂದು ರೇಖೆಯನ್ನು ರಚಿಸಿ. |
01:27 | ಈಗ ತ್ರಿಕೋನವನ್ನು ಪೂರ್ಣಗೊಳಿಸಲು ಇನ್ನೊಮ್ಮೆ ಕ್ಲಿಕ್ ಮಾಡಿ ಮೂರನೇ ರೇಖೆಯನ್ನು ಎಳೆದು ಪ್ರಾರಂಭದ node ಗೆ ಸೇರಿಸಿ. |
01:34 | ನಂತರ ನಾವು Bezier tool ಅನ್ನು ಉಪಯೋಗಿಸಿ ವಕ್ರ ರೇಖೆಯನ್ನು ರಚಿಸೋಣ. |
01:38 | ಕ್ಯಾನ್ವಾಸ್ ಮೇಲೆ ಕ್ಲಿಕ್ ಮಾಡಿ ಸರಳರೇಖೆಯನ್ನು ರಚಿಸಿ. ವಕ್ರ ರೇಖೆಯನ್ನಾಗಿಸಲು ಇನ್ನೊಮ್ಮೆ ಕ್ಲಿಕ್ ಮಾಡಿ ಮತ್ತು ಮೌಸ್ ಗುಂಡಿಯನ್ನು ಒತ್ತಿ ಹಿಡಿದು ಎಳೆಯಿರಿ. |
01:46 | ತಿರುವನ್ನು ಮುಗಿಸಲು ರೈಟ್ ಕ್ಲಿಕ್ ಮಾಡಿ. |
01:48 | ಇದೇ ರೀತಿಯಲ್ಲಿ ಇನ್ನು ಕೆಲವು ತಿರುವುಳ್ಳ ಆಕೃತಿಗಳನ್ನು ಕ್ಯಾನ್ವಾಸ್ ಮೇಲೆ ಚಿತ್ರಿಸಿ. |
01:55 | ಈ ಹಂತಗಳನ್ನು ನೆನಪಿಡಿ- 1. ಕ್ಲಿಕ್ ಮಾಡಿ ಸರಳ ರೇಖೆಯನ್ನು ಚಿತ್ರಿಸುವುದು, |
01:59 | 2. ಇನ್ನೊಮ್ಮೆ ಕ್ಲಿಕ್ ಮಾಡಿ , ಮತ್ತು ಮೌಸ್ ಗುಂಡಿಯನ್ನು ಒತ್ತಿಕೊಂಡು ಎಳೆದು ವಕ್ರ ರೇಖೆಯನ್ನು ರಚಿಸುವುದು. |
02:03 | 3. ತಿರುವನ್ನು ಮುಗಿಸಲು ರೈಟ್ ಕ್ಲಿಕ್ ಮಾಡುವುದು. |
02:06 | ಮುಂದುವರೆಯುವ ಮೊದಲು ಕ್ಯಾನ್ ವಾಸ್ ಅನ್ನು ಖಾಲಿ ಮಾಡಲು Ctrl A ಯನ್ನು ಒತ್ತಿ. |
02:11 | ಈಗ ನಾವು ಮುಚ್ಚಿದ ವಕ್ರಪಥವನ್ನು ಚಿತ್ರಿಸಲು ಕಲಿಯೋಣ. |
02:15 | ಮೊದಲು ಕ್ಯಾನ್ವಾಸ್ ಮೇಲೆ ಒಂದು ವಕ್ರರೇಖೆಯನ್ನು ಚಿತ್ರಿಸಿ. |
02:18 | ನಂತರ mouse ಬಿಡಿ ಮತ್ತು ಕರ್ಸರ್ ಅನ್ನು ವಕ್ರರೇಖೆಯ ಕೊನೆಯ ನೋಡ್ ನಿಂದ ದೂರ ಸರಿಸಿ. |
02:23 | ನಾವು ವಕ್ರಪಥವನ್ನು ಕೆಂಪು ಬಣ್ಣದಲ್ಲಿ ಕಾಣುತ್ತೇವೆ. |
02:27 | ಇನ್ನೊಮ್ಮೆ ಕ್ಲಿಕ್ ಮಾಡಿ ಕರ್ಸರ್ ಅನ್ನು ಚಲಿಸಿದರೆ ನೇರವಾದ ಪಥವನ್ನು ಕೆಂಪು ಬಣ್ಣದಲ್ಲಿ ಕಾಣುತ್ತೇವೆ. ಇದನ್ನು ವಕ್ರಗೊಳಿಸಲು ಕ್ಲಿಕ್ ಮಾಡಿ ಎಳೆಯಿರಿ. |
02:36 | ಮತ್ತೆ ಕೊನೆಯ ನೋಡ್ ನಲ್ಲಿ ನಾವು ಕರ್ಸರ್ ಅನ್ನು ಚಲಿಸಿದಂತೆ ರೇಖೆಯು ತಿರುಗಿಕೊಳ್ಳುತ್ತದೆ. |
02:41 | ಮತ್ತೆ ಕ್ಲಿಕ್ ಮಾಡಿ; ನಾವು ನೇರವಾದ ಪಥವನ್ನು ಕೆಂಪು ಬಣ್ಣದಲ್ಲಿ ಕಾಣುತ್ತೇವೆ. ಇದನ್ನು ವಕ್ರಗೊಳಿಸಲು ಕ್ಲಿಕ್ ಮಾಡಿ ಎಳೆಯಿರಿ. |
02:50 | ಮತ್ತೆ ಕೊನೆಯ ನೋಡ್ ನಲ್ಲಿ ನಾವು ಕರ್ಸರ್ ಅನ್ನು ಚಲಿಸಿದಂತೆ ರೇಖೆಯು ತಿರುಗಿಕೊಳ್ಳುತ್ತದೆ. ಕರ್ಸರ್ ಅನ್ನು ಪ್ರಾರಂಭದ ನೋಡ್ ಗೆ ತೆಗೆದುಕೊಂಡು ಹೋಗಿ ಪಥವನ್ನು ಮುಚ್ಚಿ. |
02:59 | Tool controls bar ಗೆ ಹೋಗಿ. ಮೋಡ್ ನ ಎರಡನೇ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
03:08 | ಕೆಲವು ಅನಿಯಮಿತ ತಿರುವುಗಳನ್ನು ಚಿತ್ರಿಸಿ ಪಥವನ್ನು ಪೂರ್ಣಗೊಳಿಸಿ. |
03:15 | ಗಮನಿಸಿ ಇದು ಸಮೀಪದ ಸುರುಳಿ ಆಕಾರಕ್ಕೆ ರೂಪಾಂತರಗೊಳ್ಳುತ್ತದೆ.ಈಗ ಕ್ಯಾನ್ವಾಸ್ ಅನ್ನು ಖಾಲಿ ಮಾಡೋಣ. |
03:22 | ಮೂರನೇ ಐಕಾನ್ ಕೇವಲ ಸರಳ ರೇಖೆಯನ್ನು ಮಾತ್ರ ಚಿತ್ರಿಸುತ್ತದೆ.ಅದರ ಮೇಲೆ ಕ್ಲಿಕ್ ಮಾಡಿ ಕ್ಯಾನ್ವಾಸ್ ನ ಮೇಲೆ ರೇಖೆಗಳನ್ನು ಚಿತ್ರಿಸಿ. |
03:29 | ಗಮನಿಸಿ ಈ ರೀತಿಯಲ್ಲಿ ವಕ್ರರೇಖೆಯನ್ನು ರಚಿಸಲು ಸಾಧ್ಯವಿಲ್ಲ. |
03:32 | ನಾವು ನೇರ ಬಾಹುಗಳಿರುವ ತ್ರಿಭುಜ ಅಥವಾ ಬಹುಭುಜಾಕೃತಿಗಳನ್ನು ಚಿತ್ರಿಸಬಹುದು. |
03:40 | ಕೊನೆಯ ಐಕಾನ್ ಮೇಲೆ ಕ್ಲಿಕ್ ಮಾಡಿ ಕ್ಯಾನ್ವಾಸ್ ಮೇಲೆ ಚಿತ್ರಿಸಿ. |
03:44 | ಇದರಲ್ಲಿ ನಾವು ಕೇವಲ ಸಮಾಂತರ ಮತ್ತು ಲಂಬ ರೇಖೆಗಳನ್ನು ಮಾತ್ರ ಚಿತ್ರಿಸಬಹುದು.ಅಂದರೆ ಅಡ್ಡಗೆರೆ ಅಥವಾ ಲಂಬರೇಖೆ. |
03:52 | ಹಾಗಾಗಿ ನಾವು ಈ ಮೋಡ್ ನಲ್ಲಿ ಚೌಕ ಮತ್ತು ಆಯತಾಕಾರಗಳನ್ನು ಚಿತ್ರಿಸ ಬಹುದು. |
03:58 | ಈಗ ಬಿಡಿಸಿರುವ ಎಲ್ಲಾ ಆಕೃತಿಗಳನ್ನು ಅಳಿಸೋಣ. |
04:02 | Shape ಆಯ್ಕೆಯು ರೇಖೆ ಅಥವಾ ತಿರುವುಗಳನ್ನು ಉಪಯೋಗಿಸಿ ನಿರ್ದಿಷ್ಟವಾದ ಆಕೃತಿಯನ್ನು ರಚಿಸಲು ಸಹಾಯ ಮಾಡುತ್ತದೆ. |
04:07 | ಡ್ರಾಪ್ ಡೌನ್ ಬಟ್ಟನ್ ಮೇಲೆ ಕ್ಲಿಕ್ ಮಾಡಿ. |
04:09 | ಇಲ್ಲಿ 5 ಆಯ್ಕೆಗಳಿವೆ- None, Triangle in, Triangle out, Ellipse, From clipboard. |
04:18 | ಮೊದಲ ಆಯ್ಕೆ None ಇದು ಯಾವ ಪರಿಣಾಮವನ್ನೂ ಕೊಡುವುದಿಲ್ಲ.ಹಾಗಾಗಿ Triangle in ಆಯ್ಕೆಗೆ ಹೋಗೋಣ. |
04:25 | ಅದರ ಮೇಲೆ ಕ್ಲಿಕ್ ಮಾಡಿ ಕ್ಯಾನ್ವಾಸ್ ಮೇಲೆ ರೇಖೆಯನ್ನು ಚಿತ್ರಿಸಿ. |
04:28 | ರೇಖೆಯು ಒಳಮುಖವಾಗಿ ತ್ರಿಭುಜಾಕೃತಿಗೆ ರೂಪಾಂತರ ಗೊಳ್ಳುತ್ತದೆ. |
04:34 | ನಂತರ Triangle out ಮೇಲೆ ಕ್ಲಿಕ್ ಮಾಡಿ ಕ್ಯಾನ್ವಾಸ್ ಮೇಲೆ ರೇಖೆಯನ್ನು ಚಿತ್ರಿಸಿ. |
04:39 | ಈಗ ತ್ರಿಭುಜಾಕೃತಿಯು ಹೊರಮುಖವಾಗಿ ರೂಪುಗೊಂಡಿದೆ. |
04:43 | Ellipse ಮೇಲೆ ಕ್ಲಿಕ್ ಮಾಡಿ ಕ್ಯಾನ್ವಾಸ್ ಮೇಲೆ ರೇಖೆಯನ್ನು ಚಿತ್ರಿಸಿ. |
04:47 | ಗಮನಿಸಿ ರೇಖೆಯು ಅಂಡಾಕೃತಿಯಲ್ಲಿದೆ. |
04:50 | ನಾವು ಕೊನೆಯ ಆಯ್ಕೆ From clipboard ನ ಕುರಿತು ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯೋಣ. |
04:56 | ಈಗ node ಗಳನ್ನು ಸೇರಿಸುವುದು, ಅಳಿಸುವುದು ಮತ್ತು ಬದಲಾಯಿಸುವುದು ಹೇಗೆಂದು ನೋಡೋಣ. |
05:00 | ಇದನ್ನು Node tool ಅನ್ನು ಉಪಯೋಗಿಸಿ ಮಾಡಬಹುದು. |
05:03 | ಕ್ಯಾನ್ವಾಸ್ ನಲ್ಲಿರುವ ರೇಖೆಗಳನ್ನು ಅಳಿಸಿ. |
05:06 | Tool controls bar ಹೋಗಿ Mode ಅನ್ನು regular path ಎಂದೂ ಮತ್ತು Shape ಅನ್ನು None. ಎಂದೂ ಬದಲಿಸಿ. |
05:13 | ಕ್ಯಾನ್ವಾಸ್ ಗೆ ಹಿಂದಿರುಗಿ ಮತ್ತು ಮನುಷ್ಯರ ಹಸ್ತವನ್ನು ಬರೆಯಿರಿ. |
05:23 | ಈಗ Node ಮೇಲೆ ಕ್ಲಿಕ್ ಮಾಡಿ. |
05:26 | ಗಮನಿಸಿ ಈ ಚಿತ್ರದಲ್ಲಿರುವ ಎಲ್ಲಾ ನೋಡ್ ಗಳು ಗೋಚರಿಸುತ್ತಿವೆ. |
05:30 | Tool Controls bar ನ ಕಡೆ ನಿಮ್ಮ ಗಮನವನ್ನು ಹರಿಸಿ. |
05:33 | ಇಲ್ಲಿ ಮೊದಲ ಆರು ಐಕಾನ್ ಗಳು nodeಗಳು ಮತ್ತು path ಗಳನ್ನು ಸೇರಿಸಲು ಮತ್ತು ಅಳಿಸಲು ಸಹಾಯ ಮಾಡುತ್ತವೆ. |
05:38 | ಇದರ ಕುರಿತು ತಿಳಿಯಲು ಟೂಲ್ ಟಿಪ್ ಅನ್ನು ನೋಡಿ. |
05:41 | ಯಾವುದೇ ಒಂದು ಭಾಗದ ಮೇಲೆ ಕ್ಲಿಕ್ ಮಾಡಿ. ಆ ಭಾಗದ ಎರಡೂ ನೋಡ್ ಗಳು ನೀಲಿಯಾಗುವುದನ್ನು ಗಮನಿಸಿ. |
05:48 | ನಂತರ Add node ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
05:52 | ಆಯ್ಕೆ ಮಾಡಿದ ಭಾಗದ ಎರಡು ನೋಡ್ ಗಳ ಮಧ್ಯದಲ್ಲಿ ಇನ್ನೊಂದು ನೋಡ್ ಅನ್ನು ಸೇರಿಸಿರುವುದನ್ನು ಗಮನಿಸಿ. |
05:58 | ಈಗ ಚಿಕ್ಕ ಭಾಗವನ್ನು ಆಯ್ಕೆಮಾಡಿಕೊಂಡು ಮೇಲಿನ ಹಂತಗಳನ್ನು ಪುನರಾವರ್ತಿಸಿ. |
06:04 | ಚಿಕ್ಕ ಭಾಗದ ಮಧ್ಯ ಬಿಂದುವಿನಲ್ಲಿ ಹೊಸ ನೋಡ್ ಅನ್ನು ಸೇರಿಸಿರುವುದನ್ನು ನೀವು ನೋಡಬಹುದು. |
06:10 | ಈಗ ಹೊಸದಾಗಿ ಸೇರಿಸಿದ ನೋಡನ್ನು ಆಯ್ಕೆ ಮಾಡಿಕೊಳ್ಳಿ. |
06:13 | Delete node ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈಗ ಆ ನೋಡ್ ಅಳಿಸಿ ಹೋಗಿದೆ. |
06:18 | ಹಸ್ತದ ಮೇಲಿರುವ ಯಾವುದಾದರೂ ಒಂದು node ನ ಮೇಲೆ ಕ್ಲಿಕ್ ಮಾಡಿ. |
06:21 | Bezier handles ಗೋಚರಿಸುವಂತೆ ಮಾಡಲು Tool controls bar ನ ಕೊನೆಯದಕ್ಕೂ ಮುಂಚಿನ ಐಕಾನ್ ಅನ್ನು ಕ್ಲಿಕ್ ಮಾಡಿ. |
06:27 | ಈಗ ಆಯ್ಕೆ ಮಾಡಿದ ಭಾಗಕ್ಕೆ Bezier handles ಗೋಚರವಾಗುತ್ತದೆ. |
06:32 | ಇಲ್ಲವಾದಲ್ಲಿ ಆ ಭಾಗದ ಮೇಲೆ ಒಮ್ಮೆ ಕ್ಲಿಕ್ ಮಾಡಿ ಮೌಸ್ ಅನ್ನು ಬಿಡದೇ ಒಂದು ಚೂರು ಸರಿಸಿ. |
06:37 | ಆ ಭಾಗವು ತಿರುಗುತ್ತದೆ ಮತ್ತು Bezier handles ಗೋಚರಿಸುತ್ತದೆ. |
06:41 | ಆಯ್ಕೆ ಮಾಡಿದ node ನ ಗಾತ್ರ ಬದಲಿಸಲು ಮತ್ತು ತಿರುಗಿಸಲು handles ನ ಮೇಲೆ ಕ್ಲಿಕ್ ಮಾಡಿ. |
06:45 | ಇದೇ ರೀತಿಯಲ್ಲಿ ಉಳಿದ ನೋಡ್ ಗಳನ್ನೂ ಮಾರ್ಪಡಿಸಿ. |
07:04 | ಮುಂದಿನ ಐಕಾನ್ node ಗಳನ್ನು ಸಂಯೋಜಿಸಲು ಸಹಾಯ ಮಾಡುತ್ತದೆ. |
07:07 | ತೋರ್ಬೆರಳಿನ ಮೇಲೆ ಒಂದು ಹೆಚ್ಚಿನ node ಇರುವುದನ್ನು ಗಮನಿಸಿ. |
07:11 | ಆ ಮಧ್ಯದ node ಮತ್ತು ಮೇಲಿನ node ಗಳನ್ನುShift ಕೀಲಿಯನ್ನು ಒತ್ತಿ ಆಯ್ಕೆ ಮಾಡಿಕೊಳ್ಳಿ |
07:18 | ಈಗ Join node ಐಕಾನ್ ನ ಮೇಲೆ ಕ್ಲಿಕ್ ಮಾಡಿ. ಎರಡೂ ನೋಡ್ ಗಳೂ ಸೇರಿರುವದನ್ನು ಗಮನಿಸಿ. |
07:25 | ಮುಂದಿನ ಐಕಾನ್ ಆಯ್ಕೆ ಮಾಡಿಕೊಂಡ ನೋಡ್ ಗಳ ಪಥವನ್ನು ಮುರಿಯಲು ಸಹಾಯ ಮಾಡುತ್ತದೆ. |
07:29 | ಈಗ ನಾನು ಹೆಬ್ಬೆರಳು ಮತ್ತು ತೋರ್ಬೆರಳುಗಳ ಸಂಪರ್ಕವನ್ನುಕಡಿದು ಹಾಕುತ್ತೇನೆ. |
07:33 | ಹಾಗಾಗಿ ಇವನ್ನು ಸೇರಿಸುವ node ಅನ್ನು ಆಯ್ಕೆ ಮಾಡಿಕೊಳ್ಳಿ ಮತ್ತು Break path ಐಕಾನ್ ಮೇಲೆ ಕ್ಲಿಕ್ ಮಾಡಿ. |
07:40 | ನೋಡ್ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ಒಂದು ಚೂರು ಸರಿಸಿ. |
07:46 | ನೀವು ಪಥವು ಮುರಿದಿರುವುದನ್ನು ಮತ್ತು ಆ ನೋಡ್ ಎರಡು ಬೇರೆ ಬೇರೆ ನೋಡ್ ಗಳಾಗಿ ವಿಂಗಡನೆಯಾಗಿರುವುದನ್ನು ನೋಡಬಹುದು. |
07:53 | ಅವನ್ನು ಒಂದುಗೂಡಿಸಲು ಆ ಎರಡು ನೋಡ್ ಗಳನ್ನು ಆಯ್ಕೆ ಮಾಡಿಕೊಂಡು Tool controls bar ನಲ್ಲಿ Join selected end-nodes ಐಕಾನ್ ಮೇಲೆ ಕ್ಲಿಕ್ ಮಾಡಿ. |
08:03 | ಈ ಎರಡು ನೋಡ್ ಗಳ ನಡುವೆ ಎರಡು ಹೊಸ ಪಥಗಳು ರಚನೆಯಾಗಿರುವುದನ್ನು ಗಮನಿಸಿ. |
08:08 | ಒಂದು ಭಾಗವನ್ನು ಅಥವಾ ಪಥವನ್ನು ಅಳಿಸಲು ಮುಂದಿನ ಐಕಾನ್ ಅಂದರೆ Delete segment ಐಕಾನ್ ಮೇಲೆ ಕ್ಲಿಕ್ ಮಾಡಿ. ಈಗ ಪಥವು ಅಳಿಸಿ ಹೋಗಿದೆ. |
08:17 | ಈ ಕ್ರಿಯೆಯನ್ನು undoಮಾಡಲು Ctrl Z ಅನ್ನು ಒತ್ತಿ. |
08:20 | ಈ ಹಸ್ತವನ್ನು ಬಿಟ್ಟು, ಇನ್ನೊಮ್ಮೆ Node tool ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ. |
08:26 | ಈಗ Tool controls bar ನ ಮುಂದಿನ ನಾಲ್ಕು ಐಕಾನ್ ಗಳನ್ನು ಹೇಗೆ ಉಪಯೋಗಿಸುವುದೆಂದು ನೋಡೋಣ. |
08:30 | ಈ ಐಕಾನ್ ಗಳು ಆಯ್ಕೆ ಮಾಡಿದ ನೋಡ್ ಗಳನ್ನು ಎಡಿಟ್ ಮಾಡಲು ಸಹಾಯ ಮಾಡುತ್ತವೆ. |
08:34 | Bezier tool ಅನ್ನು ಉಪಯೋಗಿಸಿ ತಿರುಗಿದ U ಆಕೃತಿಯನ್ನು ಚಿತ್ರಿಸಿ. Node ಟೂಲ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಮೂರು ನೋಡ್ ಗಳಿರುವುದನ್ನು ಗಮನಿಸಿ. |
08:49 | ಮೇಲಿನ ನೋಡ್ ಅನ್ನು ಆಯ್ಕೆ ಮಾಡಿ ಮತ್ತು Tool controls bar ನಲ್ಲಿ Make selected nodes corner ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
08:55 | ಇದು ಇದನ್ನು ಮೂಲೆಯ ನೋಡ್ ಅನ್ನಾಗಿ ಮಾಡುತ್ತದೆ. |
08:58 | Bezier handless ಮೇಲೆ ಕ್ಲಿಕ್ ಮಾಡಿ ಮತ್ತು ಮೇಲಕ್ಕೂ ಕೆಳಕ್ಕೂ ಸರಿಸಿ ಬದಲಾವಣೆಯನ್ನು ನೋಡಿ. |
09:03 | node ಅನ್ನು ಸಪಾಟಾಗಿರುವಂತೆ ಮಾಡಲು ಮುಂದಿನ ಐಕಾನ್ ಮೇಲೆ ಕ್ಲಿಕ್ ಮಾಡಿ.ಆಕೃತಿಯಲ್ಲಿ ಬದಲಾವಣೆಯನ್ನು ನೋಡಿ. |
09:11 | ನೋಡ್ ಗಳನ್ನು ಸಿಮೆಟ್ರಿಕ್ ಮಾಡಲು ಮುಂದಿನ ಐಕಾನ್ ಅನ್ನು ಕ್ಲಿಕ್ ಮಾಡಿ. |
09:16 | ನೋಡ್ ಅನ್ನು ಆಟೋ ಸ್ಮೂಥ್ ಮಾಡಲು ಮುಂದಿನ ಐಕಾನ್ ಮೇಲೆ ಕ್ಲಿಕ್ ಮಾಡಿ. |
09:20 | ಮುಂದಿನ ಎರಡು ಐಕಾನ್ ಗಳು ಕೇವಲ ಆಕೃತಿಯ ಒಂದು ಭಾಗದ ಮೇಲೆ ಮಾತ್ರ ಕೆಲಸ ಮಾಡುತ್ತದೆ. ಹಾಗಾಗಿ U ಆಕೃತಿಯ ಎಡ ಭಾಗವನ್ನು ಆಯ್ಕೆ ಮಾಡಿ ಮತ್ತು ಮೊದಲನೆ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
09:30 | ಟೂಲ್ ಟಿಪ್ ನಲ್ಲಿ ಹೇಳಿದಂತೆ ಆ ಭಾಗವು ಈಗ ಸರಳರೇಖೆಯಾಗಿ ಮಾರ್ಪಟ್ಟಿದೆ. |
09:35 | Bezier handles ಮೇಲೆ ಕ್ಲಿಕ್ ಮಾಡಿ ಮತ್ತು ಸರಿಸಲು ಪ್ರಯತ್ನಿಸಿ. ಅದನ್ನು ತಿರುಗಿಸಲು ಸಾಧ್ಯವಿಲ್ಲ ಎನ್ನುವುದನ್ನು ನೀವು ನೋಡಬಹುದು. |
09:44 | ಅದನ್ನು ಪುನಃ ವಕ್ರ ರೇಖೆಯನ್ನಾಗಿಸಲು ಮುಂದಿನ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
09:49 | ಈಗ Bezier handles ಅನ್ನು ಸರಿಸಿ ಮತ್ತು ನೀವು ಅದನ್ನು ವಕ್ರಗೊಳಿಸಲು ಸಾಧ್ಯ. |
09:54 | ಆಯ್ಕೆಮಾಡಿದ ವಸ್ತುವನ್ನು ಪಥವನ್ನಾಗಿ ಬದಲಿಸಲು ಮುಂದಿನ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
09:58 | stroke ಅನ್ನು ಪಥವನ್ನಾಗಿ ಬದಲಿಸಲು ಮುಂದಿನ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
10:02 | stroke ಗಳು ಗೋಚರಿಸುವಂತೆ ಮಾಡಲು ನೋಡ್ ಅನ್ನು ಕ್ಲಿಕ್ ಮಾಡಿ ಎಳೆಯಿರಿ. |
10:08 | ಆಯ್ಕೆ ಮಾಡಿದ ನೋಡಗಳನ್ನು X ಮತ್ತು Y ಅಕ್ಷದಲ್ಲಿ ಚಲಿಸುವಂತೆ ಮಾಡಲು ಕ್ರಮವಾಗಿ ಮುಂದಿನ ಎರಡು ಐಕಾನ್ ಗಳು ಸಹಾಯ ಮಾಡುತ್ತವೆ. |
10:15 | ಅಪ್ ಎರೋ ಮತ್ತು ಡೌನ್ ಎರೋ ದ ಮೇಲೆ ಕ್ಲಿಕ್ ಮಾಡಿ ಬದಲಾವಣೆಯನ್ನು ಗಮನಿಸಿ. |
10:24 | ಪಥವು ಕ್ಲಿಪಿಂಗ್ ಮತ್ತು ಮಾಸ್ಕಿಂಗ್ ಎಫೆಕ್ಟ್ ಅನ್ನು ಹೊಂದಿದ್ದಲ್ಲಿ ಮುಂದಿನ ಎರಡು ಐಕಾನ್ ಗಳು ಸಹಾಯ ಮಾಡುತ್ತವೆ. |
10:29 | ಈ ಆಯ್ಕೆಗಳನ್ನು ನೀವೇ ಅಭ್ಯಸಿಸಬಹುದು. |
10:33 | ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು, |
10:37 | ಸರಳ ರೇಖೆ ಮತ್ತು ಮುಚ್ಚಿದ ಆಕೃತಿಯನ್ನು ಚಿತ್ರಿಸುವುದು, |
10:39 | ವಕ್ರರೇಖೆಯನ್ನು ಚಿತ್ರಿಸುವುದು |
10:41 | ಮತ್ತು ನೋಡ್ ಗಳನ್ನು ಸೇರಿಸುವುದು, ಎಡಿಟ್ ಮಾಡುವುದು ಮತ್ತು ಅಳಿಸುವುದನ್ನು ಕಲಿತಿದ್ದೇವೆ. |
10:43 | ನಿಮಗಾಗಿ ಅಸೈನ್ ಮೆಂಟ್- |
10:46 | Bezier tool ಅನ್ನು ಉಪಯೋಗಿಸಿ ಐದು ದಳಗಳು ಒಂದು ಕೊಂಬೆ ಮತ್ತು ಎರಡು ಎಲೆಗಳಿರುವ ಒಂದು ಹೂವನ್ನು ಚಿತ್ರಿಸಿ. |
10:52 | ದಳಗಳಿಗೆ ಗುಲಾಬಿ ಬಣ್ಣವನ್ನೂ, |
10:54 | ಕೊಂಬೆ ಮತ್ತುಎಲೆಗಳಿಗೆ ಹಸಿರು ಬಣ್ಣವನ್ನೂ ತುಂಬಿ. |
10:57 | ಮುಗಿಸಿದ ನಂತರ ನಿಮ್ಮ ಅಸೈನ್ ಮೆಂಟ್ ಈ ರೀತಿಯಾಗಿರಬೇಕು. |
11:00 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಕುರಿತು ತಿಳಿಸುತ್ತದೆ. ದಯವಿಟ್ಟು ನೋಡಿ. |
11:05 | Spoken Tutorial Project Team ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ |
11:12 | ಹೆಚ್ಚಿನ ವಿವರಗಳಿಗಾಗಿ ನಮಗೆ ಬರೆಯಿರಿ. |
11:14 | Spoken Tutorial Project ಇದು ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ |
11:20 | ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ದೊರೆಯುತ್ತದೆ. |
11:24 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
11:26 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು. |