Health-and-Nutrition/C2/Importance-of-Folate/Kannada
From Script | Spoken-Tutorial
|
|
00:00 | ಫೋಲೇಟ್ನ ಪ್ರಾಮುಖ್ಯತೆಯ ಕುರಿತು ಸ್ಪೋಕನ್ ಟ್ಯುಟೋರಿಯಲ್ ಗೆ ಸುಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು ಇವುಗಳ ಬಗ್ಗೆ ಕಲಿಯುತ್ತೇವೆ: |
00:09 | ದೇಹದಲ್ಲಿ ಫೋಲೇಟ್ ಪಾತ್ರ. |
00:12 | ಫೋಲೇಟ್ ನ ಕೊರತೆಯ ಪರಿಣಾಮಗಳು. |
00:15 | ವಿವಿಧ ವಯೋಮಾನದವರಿಗೆ ಫೋಲೇಟ್ನ ಅವಶ್ಯಕತೆಗಳು. |
00:20 | ವಿಟಮಿನ್ ಬಿ 9 ಒಂದು ಪ್ರಮುಖ ನೀರಿನಲ್ಲಿ ಕರಗಬಲ್ಲ ಬಿ ವಿಟಮಿನ್ ಆಗಿದೆ. |
00:25 | ಇದು ಎರಡು ರೂಪಗಳನ್ನು ಹೊಂದಿದೆ: ಫೋಲೇಟ್ ಮತ್ತು ಫೋಲಿಕ್ ಆಮ್ಲ. |
00:30 | ಫೋಲೇಟ್ ಇದು ನೈಸರ್ಗಿಕ ರೂಪವಾಗಿದೆ ಮತ್ತು ಆಹಾರಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ. |
00:35 | ಫೋಲೇಟ್ ನಮ್ಮ ಕರುಳಿನಲ್ಲಿರುವ ಬ್ಯಾಕ್ಟೀರಿಯಾದಿಂದಲೂ ಉತ್ಪತ್ತಿಯಾಗುತ್ತದೆ. |
00:41 | ಆದರೆ, ಫೋಲಿಕ್ ಆಮ್ಲ ಎಂಬುದು ಸಂಶ್ಲೇಷಿತ ರೂಪವಾಗಿದೆ. |
00:45 | ಇದು ರಾಸಾಯನಿಕವಾಗಿ ಪುಷ್ಟೀಕರಿಸಿದ ಆಹಾರಗಳು ಅಥವಾ ಪೂರಕಗಳಲ್ಲಿ ಕಂಡುಬರುತ್ತದೆ. |
00:51 | ಫೋಲಿಕ್ ಆಮ್ಲಕ್ಕೆ ಹೋಲಿಸಿದರೆ ಫೋಲೇಟ್ ನಮ್ಮ ದೇಹದಲ್ಲಿ ಸುಲಭವಾಗಿ ಹೀರಲ್ಪಡುತ್ತದೆ. |
00:58 | ನಾವು ಈಗ ನಮ್ಮ ದೇಹದಲ್ಲಿ ಫೋಲೇಟ್ ಪಾತ್ರವನ್ನು ಮತ್ತು |
01:02 | ಅದರ ಕೊರತೆಯ ಪರಿಣಾಮವನ್ನು ನೋಡುತ್ತೇವೆ. |
01:05 | ನಮ್ಮ ದೇಹದ ವಿವಿಧ ಕಾರ್ಯಗಳಿಗೆ ಫೋಲೇಟ್ ಅವಶ್ಯಕ. |
01:09 | ಹೊಸ ಕೋಶಗಳ ಬೆಳವಣಿಗೆ, ದುರಸ್ತಿ, ವಿಭಜನೆ ಮತ್ತು ಉತ್ಪಾದನೆಗೆ ನಮ್ಮ ದೇಹಕ್ಕೆ ಇದು ಅಗತ್ಯವಾಗಿರುತ್ತದೆ. |
01:18 | homocysteine ಮಟ್ಟವನ್ನು ಕಡಿಮೆ ಮಾಡಲು ಫೋಲೇಟ್' 'ಸಹಾಯ ಮಾಡುತ್ತದೆ. |
01:23 | ಹೋಮೋಸಿಸ್ಟೈನ್ ಪ್ರೋಟೀನ್ ತಯಾರಿಸಲು ಬಳಸುವ ಒಂದು ರೀತಿಯ ಅಮೈನೊ ಆಮ್ಲವಾಗಿದೆ. |
01:29 | ಹೆಚ್ಚಿನ ಹೋಮೋಸಿಸ್ಟೈನ್ ಮಟ್ಟಗಳು ಅರಿವಿನ ಕಾರ್ಯವನ್ನು ಕುಂಠಿತಗೊಳಿಸುತ್ತದೆ. |
01:34 | ಇದು ಹೃದಯದ ರಕ್ತನಾಳಗಳನ್ನು ಸಹ ಹಾನಿಗೊಳಿಸುತ್ತದೆ. |
01:39 | ಇದು ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. |
01:43 | ಹೀಗಾಗಿ, ಹೃದಯ ಮತ್ತು ಅರಿವಿನ ಕಾರ್ಯವನ್ನು ಕಾಪಾಡಿಕೊಳ್ಳಲು ಫೋಲೇಟ್ ಸಹಾಯ ಮಾಡುತ್ತದೆ. |
01:48 | ಆರೋಗ್ಯಕರ ಗರ್ಭಧಾರಣೆಗೆ, |
01:51 | ಮತ್ತು ನ್ಯೂರಲ್ ಟ್ಯೂಬ್ ಮುಚ್ಚಲು ಸಹ ಇದು ಅಗತ್ಯವಾಗಿರುತ್ತದೆ. |
01:55 | ಮಗುವಿನ ಮೆದುಳು ಮತ್ತು ಬೆನ್ನುಹುರಿಗೆ, ನ್ಯೂರಲ್ ಟ್ಯೂಬ್ ಬೆಳೆಯುತ್ತದೆ. |
02:01 | ನ್ಯೂರಲ್ ಟ್ಯೂಬ್ ಗಳನ್ನು ಮುಚ್ಚುವಲ್ಲಿ ವಿಫಲವಾದರೆ, ಅದು ನ್ಯೂರಲ್ ಟ್ಯೂಬ್ ದೋಷಗಳಿಗೆ ಕಾರಣವಾಗಬಹುದು. |
02:07 | ನ್ಯೂರಲ್ ಟ್ಯೂಬ್ ದೋಷಗಳು ಮೆದುಳು ಮತ್ತು ಬೆನ್ನುಹುರಿಯ ಜನ್ಮ ದೋಷಗಳಾಗಿವೆ. |
02:13 | ಎರಡು ಸಾಮಾನ್ಯ ನ್ಯೂರಲ್ ಟ್ಯೂಬ್ ದೋಷಗಳು ಎಂದರೆ anencephaly ಮತ್ತು spina bifida ಆಗಿವೆ. |
02:20 | anencephaly ಯಲ್ಲಿ, ಮಗುವಿನ ಮೆದುಳು ಮತ್ತು ತಲೆಬುರುಡೆಯ ಭಾಗಗಳು ಸರಿಯಾಗಿ ರೂಪುಗೊಳ್ಳುವುದಿಲ್ಲ. |
02:27 | spina bifidaದಲ್ಲಿ, ಮಗುವಿನ ಬೆನ್ನುಮೂಳೆಯು ಸರಿಯಾಗಿ ಬೆಳವಣಿಗೆಯಾಗುವುದಿಲ್ಲ. |
02:33 | ಹೀಗಾಗಿ, ಮಗುವಿಗೆ ದೈಹಿಕ ವಿಕಲಾಂಗತೆ ಉಂಟಾಗುತ್ತದೆ. |
02:38 | ಅದರ ಕಾಲುಗಳ ಸ್ನಾಯು ದೌರ್ಬಲ್ಯ ಮತ್ತು ಪಾರ್ಶ್ವವಾಯು ಉಂಟಾಗಬಹುದು. |
02:43 | ಬಾಗಿದ ಬೆನ್ನು ಮತ್ತು ಮೂತ್ರಕೋಶ ನಿಯಂತ್ರಣದ ನಷ್ಟವು ಇತರ ಲಕ್ಷಣಗಳಾಗಿವೆ. |
02:49 | ತಿನ್ನುವುದು ಮತ್ತು ನುಂಗಲು ತೊಂದರೆ ಕೂಡ ಸಾಮಾನ್ಯವಾಗಿದೆ. |
02:55 | ಕಲಿಯಲು ಮತ್ತು ಗಮನ ಕೊಡಲು ಅವರಿಗೆ ಕಷ್ಟವಾಗಬಹುದು. |
03:00 | ಗರ್ಭಧಾರಣೆಯ 28 ದಿನಗಳಲ್ಲಿ ನ್ಯೂರಲ್ ಟ್ಯೂಬ್ ಮುಚ್ಚುವಿಕೆ ನಡೆಯುತ್ತದೆ. |
03:06 | ಈ ಸಮಯದವರೆಗೆ, ಮಹಿಳೆ ಗರ್ಭಿಣಿ ಎಂದು ಸಹ ತಿಳಿದಿಲ್ಲದಿರಬಹುದು. |
03:12 | ಅವಳು ತಿಳಿದಿರುವ ಹೊತ್ತಿಗೆ, ಈ ದೋಷಗಳನ್ನು ತಡೆಯಲು ತಡವಾಗಿರಬಹುದು. |
03:18 | ಎಲ್ಲಾ ಮಹಿಳೆಯರು, ವಿಶೇಷವಾಗಿ ಸಂತಾನೋತ್ಪತ್ತಿ ವಯಸ್ಸಿನವರು ಸಾಕಷ್ಟು ಫೋಲೇಟ್ ಸಮೃದ್ಧ ಆಹಾರವನ್ನು ತೆಗೆದುಕೊಳ್ಳಬೇಕು. |
03:25 | ಫೋಲೇಟ್ ಜೊತೆಗೆ, ನ್ಯೂರಾಲ್ ಟ್ಯೂಬ್ ದೋಷಗಳನ್ನು ತಡೆಗಟ್ಟಲು ಇತರ ಪೋಷಕಾಂಶಗಳು ಮುಖ್ಯವಾಗಿವೆ. |
03:32 | ಉದಾಹರಣೆಗೆ: ವಿಟಮಿನ್ ಬಿ 12 ಮತ್ತು ಕೋಲೀನ್. |
03:39 | ಗರ್ಭಾವಸ್ಥೆಯಲ್ಲಿ, ಫೋಲೇಟ್ ನ ಅವಶ್ಯಕತೆಗಳು ಹೆಚ್ಚಾಗುತ್ತವೆ. |
03:45 | ಈ ಸಮಯದಲ್ಲಿ ಅಸಮರ್ಪಕ ಸೇವನೆಯು ಫೋಲೇಟ್ ಕೊರತೆಗೆ ಕಾರಣವಾಗಬಹುದು. |
03:51 | ದೇಹವು ಫೋಲೇಟ್ ಅನ್ನು ಸರಿಯಾಗಿ ಹೀರಿಕೊಳ್ಳದೇ ಇರುವದರಿಂದ ಕೊರತೆ ಉಂಟಾಗುತ್ತದೆ. |
03:58 | ಅಧಿಕ ಆಲ್ಕೊಹಾಲ್ ಸೇವನೆಯು ಕೂಡಾ ಇದಕ್ಕೆ ಕಾರಣ. |
04:03 | ವಿಟಮಿನ್ ಬಿ 12 ಕೊರತೆಯು ಪರೋಕ್ಷವಾಗಿ ಫೋಲೇಟ್ ಕೊರತೆಗೆ ಕಾರಣವಾಗಬಹುದು. |
04:09 | ನಮ್ಮ ದೇಹದಲ್ಲಿ ಫೋಲೇಟ್ ಇದ್ದರೂ, ಅದರ ಕಾರ್ಯವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. |
04:16 | ಏಕೆಂದರೆ ಫೋಲೇಟ್ ಅನ್ನು ಅದರ ಸಕ್ರಿಯ ರೂಪಕ್ಕೆ ಪರಿವರ್ತಿಸಲು ವಿಟಮಿನ್ ಬಿ 12 ನ ಅಗತ್ಯವಿದೆ. |
04:24 | ಆದ್ದರಿಂದ, ವಿಟಮಿನ್ ಬಿ 12 ಜೊತೆಗೆ, ಸಾಕಷ್ಟು ಫೋಲೇಟ್ ನ ಸೇವನೆ ಮುಖ್ಯವಾಗಿದೆ. |
04:31 | ಮೊಟ್ಟೆ, ಕೋಳಿ, ಮಾಂಸ ಮತ್ತು ಹಾಲಿನ ಉತ್ಪನ್ನಗಳು ವಿಟಮಿನ್ ಬಿ 12 ನ ಉತ್ತಮ ಮೂಲಗಳಾಗಿವೆ. |
04:39 | ಚಿಪ್ಪುಮೀನು, ಯಕೃತ್ತು, ಹೃದಯ, ಮೂತ್ರಪಿಂಡಗಳು, ಮೆದುಳು ಇತರ ಉದಾಹರಣೆಗಳಾಗಿವೆ. |
04:47 | ಜೆನೆಟಿಕ್ ರಕ್ತಹೀನತೆ ಹೊಂದಿರುವ ವ್ಯಕ್ತಿಗಳು ಫೋಲೇಟ್ ನ ಕೊರತೆಯ ಅಪಾಯವನ್ನು ಹೊಂದಿರುತ್ತಾರೆ. |
04:54 | ಆನುವಂಶಿಕ ರಕ್ತಹೀನತೆಯ ಉದಾಹರಣೆಗಳೆಂದರೆ sickle cell ರಕ್ತಹೀನತೆ |
04:58 | ಮತ್ತು thalassemia. |
05:01 | ಈ ಪರಿಸ್ಥಿತಿಗಳಲ್ಲಿ, ಕೆಂಪು ರಕ್ತ ಕಣಗಳು ಸೃಷ್ಟಿಯಾಗುವುದಕ್ಕಿಂತ ವೇಗವಾಗಿ ನಾಶವಾಗುತ್ತವೆ. |
05:08 | ಆದ್ದರಿಂದ, ಈ ಪರಿಸ್ಥಿತಿಗಳಲ್ಲಿ ಫೋಲೇಟ್ ಅನ್ನು ಸಾಕಷ್ಟು ಸೇವಿಸಲು ಶಿಫಾರಸು ಮಾಡಲಾಗಿದೆ. |
05:14 | ಯಾವುದೇ ಪೂರಕ ಆಹಾರವನ್ನು ತೆಗೆದುಕೊಳ್ಳುವ ಮೊದಲು ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ. |
05:19 | ಮುಂದೆ, ಫೋಲೇಟ್ ಕೊರತೆಯ ಲಕ್ಷಣಗಳನ್ನು ನೋಡೋಣ. |
05:24 | ಈ ರೋಗಲಕ್ಷಣಗಳನ್ನು ಪುರುಷರು ಮತ್ತು ಮಹಿಳೆಯರಲ್ಲಿ ಕಾಣಬಹುದು. |
05:29 | ಆರಂಭಿಕ ಚಿಹ್ನೆಗಳಲ್ಲಿ ಕೆಲವು- ನಾಲಿಗೆ ಮತ್ತು ತುಟಿಗಳ ನೋವು ಮತ್ತು ಕೆಂಪಾಗುವಿಕೆ. |
05:35 | ಇತರ ಲಕ್ಷಣಗಳು ಆಯಾಸ, |
05:38 | ಕಿರಿಕಿರಿ,
ನಿದ್ರಾ ಭಂಗ |
05:41 | ಮತ್ತು ಖಿನ್ನತೆ. |
05:43 | ಬಾಯಿ ಅಥವಾ ಹೊಟ್ಟೆಯಲ್ಲಿ ಹುಣ್ಣು ಕೂಡ ಕಾಣಿಸಿಕೊಳ್ಳಬಹುದು. |
05:47 | ದೀರ್ಘಾವಧಿಯ ಕೊರತೆಯು ಸ್ಮರಣೆ ಮತ್ತು ಗಮನವನ್ನು ಕಡಿಮೆ ಮಾಡುತ್ತದೆ. |
05:53 | ಗರ್ಭಿಣಿ ಮಹಿಳೆಯರಲ್ಲಿ ಫೋಲೇಟ್ ಕೊರತೆಯು ಶಿಶುಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು. |
05:59 | ಉದಾಹರಣೆಗೆ: ನ್ಯೂರಲ್ ಟ್ಯೂಬ್ ದೋಷಗಳು ಮತ್ತು |
06:03 | ಶಿಶುಗಳಲ್ಲಿ ಸೀಳು ತುಟಿ ಮತ್ತು ಅಂಗುಳ. |
06:07 | ಒಂದು ಸೀಳು ಎನ್ನುವುದು ತುಟಿ ಅಥವಾ ಬಾಯಿಯ ಮೇಲಿನ ಛಾವಣಿಯಲ್ಲಿ ಅಂತರ ಅಥವಾ ವಿಭಜನೆ. |
06:13 | ಗರ್ಭಾಶಯದ ಬೆಳವಣಿಗೆಯ ಸಮಯದಲ್ಲಿ ಅಂಗಾಂಶಗಳು ಒಟ್ಟಿಗೆ ಬೆಸೆಯದಿದ್ದಾಗ ಇದು ಸಂಭವಿಸುತ್ತದೆ. |
06:20 | ಫೋಲೇಟ್ ಅಥವಾ ವಿಟಮಿನ್ ಬಿ 12 ಕೊರತೆಯು ಮ್ಯಾಕ್ರೋಸೈಟಿಕ್ ರಕ್ತಹೀನತೆಗೆ ಕಾರಣವಾಗುತ್ತದೆ. |
06:27 | ಇದು ಹೇಗೆ ಸಂಭವಿಸುತ್ತದೆ ಎಂಬುದನ್ನು ನಾನು ನಿಮಗೆ ವಿವರಿಸುತ್ತೇನೆ. |
06:30 | ಕೋಶಗಳ ಸಾಮಾನ್ಯ ಬೆಳವಣಿಗೆ ಮತ್ತು ವಿಭಜನೆಗೆ ಈ ಎರಡೂ ಪೋಷಕಾಂಶಗಳು ಬೇಕಾಗುತ್ತವೆ. |
06:36 | ಅವುಗಳ ಕೊರತೆಯ ಸಂದರ್ಭದಲ್ಲಿ, ಕೆಂಪು ರಕ್ತ ಕಣಗಳು ಪ್ರಬುದ್ಧವಾಗುವುದಿಲ್ಲ ಅಥವಾ ಸರಿಯಾಗಿ ವಿಭಜನೆ ಆಗುವದಿಲ್ಲ. |
06:43 | ಪರಿಣಾಮವಾಗಿ, ದೊಡ್ಡ ಅಪಕ್ವವಾದ ಕೆಂಪು ರಕ್ತ ಕಣಗಳು ರೂಪುಗೊಳ್ಳುತ್ತವೆ, ಅವುಗಳು ಸಂಖ್ಯೆಯಲ್ಲಿ ಕಡಿಮೆ. |
06:51 | ಇವುಗಳಲ್ಲಿ ಹಿಮೋಗ್ಲೋಬಿನ್ ಕಡಿಮೆ ಇದೆ ಮತ್ತು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. |
06:59 | ಹಿಮೋಗ್ಲೋಬಿನ್ ಆಮ್ಲಜನಕವನ್ನು ಇತರ ಅಂಗಾಂಶಗಳು ಮತ್ತು ಕೋಶಗಳಿಗೆ ಸಾಗಿಸಲು ಸಹಾಯ ಮಾಡುತ್ತದೆ. |
07:06 | ಹೀಗಾಗಿ, ಕಡಿಮೆ ಹಿಮೋಗ್ಲೋಬಿನ್ ಮಟ್ಟವು ರಕ್ತಹೀನತೆಗೆ ಕಾರಣವಾಗಬಹುದು. |
07:11 | ವಿವಿಧ ವಯೋಮಾನದವರಿಗೆ ದಿನಕ್ಕೆ ಫೋಲೇಟ್ ನ ಶಿಫಾರಸುಗಳನ್ನು ನೋಡೋಣ. |
07:18 | 1 ರಿಂದ 3 ವರ್ಷದ ಮಕ್ಕಳಿಗೆ 90 ಮೈಕ್ರೊಗ್ರಾಂ ಅಗತ್ಯವಿದೆ. |
07:24 | 4 ರಿಂದ 9 ವರ್ಷದ ಮಕ್ಕಳಿಗೆ ಇದು 110 ರಿಂದ 142 ಮೈಕ್ರೋಗ್ರಾಮ್ ಆಗಿದೆ. |
07:32 | 10 ರಿಂದ 15 ವರ್ಷ ವಯಸ್ಸಿನ ಹದಿಹರೆಯದವರಿಗೆ ಇದು 180 ರಿಂದ 204 ಮೈಕ್ರೋಗ್ರಾಮ್ ಆಗಿದೆ. |
07:42 | 16 ವರ್ಷಕ್ಕಿಂತ ಮೇಲ್ಪಟ್ಟ ಹದಿಹರೆಯದವರಿಗೆ ದಿನಕ್ಕೆ 200 ಕ್ಕಿಂತ ಹೆಚ್ಚು ಮೈಕ್ರೋಗ್ರಾಮ್ಗಳನ್ನು ಶಿಫಾರಸು ಮಾಡಲಾಗಿದೆ. |
07:50 | ವಯಸ್ಕ ಹೆಣ್ಣು ಮತ್ತು ಪುರುಷರಿಗೆ ಇದು 200 ರಿಂದ 250 ಮೈಕ್ರೋಗ್ರಾಮ್ ಆಗಿದೆ. |
07:58 | ಗರ್ಭಿಣಿ ಮಹಿಳೆಯರಲ್ಲಿ ಸುಮಾರು 500 ಮೈಕ್ರೋಗ್ರಾಮ್ ಇರಬೇಕು. |
08:02 | ಸ್ತನ್ಯಪಾನ ಮಾಡಿಸುವ ತಾಯಂದಿರಿಗೆ, ಇದು 300 ಮೈಕ್ರೋಗ್ರಾಮ್ ಆಗಿದೆ. |
08:07 | ಜನ್ಮ ದೋಷಗಳ ಇತಿಹಾಸ ಹೊಂದಿರುವ ಮಹಿಳೆಯರಿಗೆ ಫೋಲೇಟ್‌ನ ಅವಶ್ಯಕತೆಗಳು ಹೆಚ್ಚು. |
08:15 | ಅವರು ಗರ್ಭಧಾರಣೆಯ ಮೊದಲು ಮತ್ತು ಗರ್ಭಧಾರಣೆಯ ಉದ್ದಕ್ಕೂ 500 ಮೈಕ್ರೊಗ್ರಾಮ್ ತೆಗೆದುಕೊಳ್ಳಬೇಕು. |
08:22 | ಗರ್ಭಧಾರಣೆಯನ್ನು ಯೋಜಿಸುತ್ತಿರುವ ಮಹಿಳೆಯರಿಗೆ ಸಾಕಷ್ಟು ಫೋಲೇಟ್ ಸೇವನೆಯನ್ನು ಸಹ ಶಿಫಾರಸು ಮಾಡಲಾಗಿದೆ. |
08:29 | ಫೋಲೇಟ್ ನ ಅವಶ್ಯಕತೆಗಳನ್ನು ಆಹಾರದ ಮೂಲಕ ಪೂರೈಸಬಹುದು. |
08:33 | ಬೀನ್ಸ್ ಫೋಲೇಟ್ ನ ಅತ್ಯುತ್ತಮ ಮೂಲವಾಗಿದೆ. |
08:36 | 30 ಗ್ರಾಂ ಅಥವಾ ½ ಕಪ್ ಬೇಯಿಸದ ಬೀನ್ಸ್ ಸುಮಾರು 80 ರಿಂದ 120 ಮೈಕ್ರೊಗ್ರಾಂ ಫೋಲೇಟ್ ಅನ್ನು ನೀಡುತ್ತದೆ. |
08:46 | ಕೌಪಿಯಾ, ಕಿಡ್ನಿ ಬೀನ್ಸ್, ಮೊತ್ ಬೀನ್ಸ್, ಸೋಯಾಬೀನ್ ಕೆಲವು ಉದಾಹರಣೆಗಳಾಗಿವೆ. |
08:53 | ಕಡಲೆ, ಫೀಲ್ಡ್ ಬೀನ್ಸ್, ಹುರುಳಿ, ಒಣ ಬಟಾಣಿ ಕೂಡ ಉತ್ತಮ ಮೂಲಗಳಾಗಿವೆ. |
09:00 | ಹಸಿರು ಎಲೆಗಳ ತರಕಾರಿಗಳು ಸಹ ಫೋಲೇಟ್ ನಿಂದ ಸಮೃದ್ಧವಾಗಿವೆ. |
09:04 | ಉದಾಹರಣೆಗೆ: ಪಾಲಕ, ಅಮರಂಥ್ ಎಲೆಗಳು, ಕೊಲೊಕಾಸಿಯಾ ಎಲೆಗಳು, ಅಗತಿ ಎಲೆಗಳು. |
09:11 | 50 ಗ್ರಾಂ ಅಥವಾ 1 ಕಪ್ ಬೇಯಿಸದ ಪಾಲಕ ಸುಮಾರು 70 ಮೈಕ್ರೊಗ್ರಾಂ ಫೋಲೇಟ್ ನೀಡುತ್ತದೆ. |
09:19 | 1 ಟೀಸ್ಪೂನ್ ಪುಡಿ ಮಾಡಿದ ನುಗ್ಗೆ ಎಲೆಗಳು ಸುಮಾರು 10 ಮೈಕ್ರೊಗ್ರಾಂ ಫೋಲೇಟ್ ಅನ್ನು ನೀಡುತ್ತದೆ. |
09:27 | ಟೆಂಡರ್ ಫೀಲ್ಡ್ ಬೀನ್ಸ್, ಫ್ರೆಂಚ್ ಬೀನ್ಸ್ ಮತ್ತು ಬೀಟ್ರೂಟ್ ಇವು "ಫೋಲೇಟ್" ನಲ್ಲಿ ಸಮೃದ್ಧವಾಗಿರುವ ಇತರ ತರಕಾರಿಗಳು. |
09:35 | ಹೂಕೋಸು, ಬೆಂಡೆ ಕಾಯಿ ಮತ್ತು ನುಗ್ಗೆ ಕಾಯಿಗಳು ಸಹ ಮಧ್ಯಮ ಪ್ರಮಾಣದಲ್ಲಿ ಫೋಲೇಟ್ ಅನ್ನು ಹೊಂದಿರುತ್ತವೆ. |
09:43 | ಸೂರ್ಯಕಾಂತಿ ಬೀಜಗಳು, ಸಾಸಿವೆ ಮತ್ತು ನೈಗರ್ ಬೀಜಗಳು ಕಡಿಮೆ ಪ್ರಮಾಣದಲ್ಲಿ ಫೋಲೇಟ್ ಅನ್ನು ಹೊಂದಿರುತ್ತವೆ. |
09:50 | 1 ಚಮಚ ಈ ಪುಡಿ ಬೀಜಗಳಲ್ಲಿ ಸುಮಾರು 15 ರಿಂದ 20 ಮೈಕ್ರೊಗ್ರಾಂ ಫೋಲೇಟ್ ಅನ್ನು ಹೊಂದಿರುತ್ತದೆ. |
09:59 | ಮಾಂಸಾಹಾರಿ ಆಹಾರಗಳಲ್ಲಿ ಕೋಳಿ ಯಕೃತ್ತು ಮತ್ತು ಎಲ್ಲಾ ಸಮುದ್ರ ಆಹಾರಗಳು ಅತ್ಯುತ್ತಮ ಮೂಲಗಳಾಗಿವೆ. |
10:06 | 60 ಗ್ರಾಂನ 1 ಕೋಳಿ ಯಕೃತ್ತು ಸುಮಾರು 600 ಮೈಕ್ರೊಗ್ರಾಂ ಫೋಲೇಟ್ ಅನ್ನು ನೀಡುತ್ತದೆ. |
10:13 | ಯಾವುದೇ ಸಮುದ್ರಾಹಾರದ 100 ಗ್ರಾಂ 700 ಕ್ಕಿಂತ ಹೆಚ್ಚು ಮೈಕ್ರೊಗ್ರಾಂಗಳನ್ನು ನೀಡುತ್ತದೆ. |
10:20 | ಅತಿಯಾದ ಶಾಖ ಮತ್ತು ನೀರು ಫೋಲೇಟ್ ಅಂಶವನ್ನು ಕಡಿಮೆ ಮಾಡುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. |
10:26 | ಆದ್ದರಿಂದ, ಅತಿಯಾಗಿ ಬೇಯಿಸುವುದು ಮತ್ತು ಆಹಾರವನ್ನು ಪುನರಾವರ್ತಿಸುವುದನ್ನು ತಪ್ಪಿಸಿ. |
10:33 | ತರಕಾರಿಗಳನ್ನು ಕುದಿಯುವ ಬದಲು ಬೇಯಿಸಿ ಅಥವಾ ಆವಿಯಲ್ಲಿ ಬೇಯಿಸಬಹುದು. |
10:38 | ಬೇಳೆಕಾಳುಗಳನ್ನು ಯಾವಾಗಲೂ ಅಡುಗೆ ಮಾಡುವ ಮೊದಲು ರಾತ್ರಿಯಿಡೀ ನೆನೆಸಿಡಬೇಕು. |
10:43 | ಇಡೀ ಬೀನ್ಸ್ ಮೊಳಕೆ ಮತ್ತು ಅಡುಗೆ ಅದರ ಪೋಷಕಾಂಶವನ್ನು ಹೆಚ್ಚಿಸುತ್ತದೆ. |
10:49 | ಹುದುಗುವಿಕೆ ಮತ್ತು ಹುರಿಯುವಿಕೆಯು ಫೋಲೇಟ್ ಹೀರಿಕೊಳ್ಳುವಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. |
10:56 | ನಮ್ಮ ಉತ್ತಮ ಆರೋಗ್ಯಕ್ಕೆ ಸಾಕಷ್ಟು ಫೋಲೇಟ್ ಸೇವನೆ ಬಹಳ ಮುಖ್ಯ. |
11:01 | ನಾವು ಪಾಠದ ಕೊನೆಗೆ ಬಂದಿದ್ದೇವೆ.
ಅನುವಾದ ಮತ್ತು ಧ್ವನಿ ಶ್ರೀಮತಿ ನಯನಾ ಭಟ್. ಧನ್ಯವಾದಗಳು. |