GIMP/C2/Adjusting-Colours-with-Curves-Tool/Kannada

From Script | Spoken-Tutorial
Jump to: navigation, search
Time Narration
00:24 Meet the GIMP (ಮೀಟ್ ದ ಗಿಂಪ್) ಗೆ ನಿಮಗೆ ಸ್ವಾಗತ.
00:26 ಇವತ್ತಿನ ಟ್ಯುಟೋರಿಯಲ್, ‘ರಾ ಕನ್ವರ್ಟಿಂಗ್’ ಬಗ್ಗೆ ಇಲ್ಲ. ಆದರೆ ನಿಜವಾದ ‘ಶೋ’ ಮಾಡುವಾಗಿನ ಹೊಸ ಕೋಡಿಂಗ್ ಬಗ್ಗೆ ಮತ್ತು ಕಳೆದ ಟ್ಯುಟೋರಿಯಲ್’ನ ಕೆಲವು ತಪ್ಪುಗಳನ್ನು ಸರಿಪಡಿಸಲು ಆಗಿದೆ.
00:40 ನಾನು, ಈ ‘ಇಮೇಜ್’ನ ಬಗ್ಗೆ ನಿಮಗೆ ಏನನ್ನೋ ಹೇಳಬೇಕೆಂದಿದ್ದೇನೆ.
00:44 ‘ಶೋ’ಅನ್ನು ರೆಕಾರ್ಡ್ ಮಾಡುವಾಗ ನಾನು ಕೆಲವು ಹೆಚ್ಚಿನ ಬದಲಾವಣೆಗಳನ್ನು ಮಾಡಿದ್ದೇನೆ.
00:50 ನೀವು ನೋಡುವಂತೆ, ಸಮುದ್ರವು ಸ್ವಲ್ಪ ಮಂಕಾಗಿದೆ, ಅದು ಸಾಕಷ್ಟು ಲಕ್ಷಣವನ್ನು ಹೊಂದಿರದೆ ಕೇವಲ ಬೂದುಬಣ್ಣದ್ದಾಗಿದೆ. ನಾನು ಇಲ್ಲಿ Sea ಲೇಯರ್ ಹಾಗೂ ಇನ್ನುಳಿದ ‘ಲೇಯರ್’ಗಳನ್ನು ಸ್ವಿಚ್-ಆಫ್ ಮಾಡಿದಾಗ, ನೀವು ಈ ಸಮುದ್ರದಲ್ಲಿ ಸ್ವಲ್ಪ ಲಕ್ಷಣವಿರುವದನ್ನು ನೋಡಬಹುದು.
01:17 Layer Mask ಅನ್ನು ನೋಡಿದಾಗ, ನನಗೆ ತೋರಿಸಬೇಕಾದ ಜಾಗಕ್ಕಾಗಿ ನಾನು ಬಹುಮಟ್ಟಿಗೆ ಬೂದುಬಣ್ಣದ ಲೇಯರ್ ಮಾಸ್ಕನ್ನು ಬಳಸಿದ್ದೇನೆಂದು ನೀವು ನೋಡಬಹುದು.
01:30 ಆದ್ದರಿಂದ ಈ ‘ಸ್ಟೆಪ್’ಅನ್ನು ಪುನಃ ಮಾಡೋಣ.
01:37 ನಾನು Sea ಲೇಯರನ್ನು ತೆಗೆದುಹಾಕಿದ್ದೇನೆ ಹಾಗೂ Background ಲೇಯರ್’ನ ‘ಕಾಪಿ’ಯನ್ನು ಮಾಡಿದ್ದೇನೆ.
01:44 ಈ ಲೇಯರನ್ನು Sea ಎಂದು ಹೆಸರಿಸಿ, ಅದನ್ನು Sky ದ ಕೆಳಗೆ ಹಾಗೂ Land ನ ಮೇಲೆ ಇಡುತ್ತೇನೆ.
01:57 ನಾನು, ನನ್ನ ಹತ್ತಿರವಿದ್ದ ‘ಲೇಯರ್’ನ ಜೊತೆಗೆ ಕೆಲಸ ಮಾಡಬಹುದಿತ್ತು ಆದರೆ ನನಗೆ ಒಳ್ಳೆಯ ಪರಿಣಾಮವು ಸಿಗುತ್ತಿರಲಿಲ್ಲ. ಏಕೆಂದರೆ, ಸಮುದ್ರವನ್ನು ಸ್ವಲ್ಪ ಗಾಢವಾಗಿ ಪಡೆಯಲು ನಾನು ಕರ್ವ್ಸ್ ಟೂಲನ್ನು ಬಳಸಿದ್ದೆ.
02:10 ಮತ್ತು ಅದರೊಂದಿಗೆ, ಆ ಲೇಯರ್’ನಲ್ಲಿದ್ದ ಬಹಳಷ್ಟು ಬಣ್ಣದ ಮಾಹಿತಿಯನ್ನು ನಾನು ನಾಶಗೊಳಿಸಿದ್ದೇನೆ. ಇಲ್ಲಿ, ಈ ರೀತಿಯಲ್ಲಿ, ನಾನು ಉತ್ತಮವಾದ ಫಲಿತಾಂಶವನ್ನು ಪಡೆಯುವೆನು.
02:24 ಈಗ, ಮತ್ತೆ Sea ‘ಲೇಯರ್’ಗೆ ಒಂದು ಲೇಯರ್ ಮಾಸ್ಕನ್ನು ಸೇರಿಸುತ್ತೇನೆ. Gray scale copy of layer ಅನ್ನು ಬಳಸಿ, ಅದಕ್ಕೆ ಸೇರಿಸುತ್ತೇನೆ.
02:35 Show Layer Mask ಎನ್ನುವುದರ ಮೇಲೆ ಕ್ಲಿಕ್ ಮಾಡಿ, ಲೇಯರ್ ಮಾಸ್ಕನ್ನು ಎಡಿಟ್ ಮಾಡುತ್ತೇನೆ.
02:41 ನಾನು ಕರ್ವ್ಸ್ ಟೂಲನ್ನು ಬಳಸುವೆನು ಮತ್ತು ಇದನ್ನು ಕೆಳಗೆ ಎಳೆದು ಇದೇ ವಿಧಾನವನ್ನು ಪುನರಾವರ್ತಿಸುತ್ತೇನೆ. ಆದರೆ ಈ ಸಲ ನಾನು ಈ ಮೇಲಿನ ‘ಕರ್ವ್’ಅನ್ನು ಮೇಲೆ ಎಳೆಯುತ್ತೇನೆ.
03:01 ಈಗ ನನ್ನ ಹತ್ತಿರ, ಸಮುದ್ರದ ಹಾಗೂ ಮುಗಿಲಿನ ಜಾಗಕ್ಕಾಗಿ ಹೆಚ್ಚೂಕಡಿಮೆ ಬಿಳಿಯ ಮತ್ತು ನೆಲಕ್ಕಾಗಿ ಕಪ್ಪುಬಣ್ಣದ ಲೇಯರ್ ಮಾಸ್ಕ್ ಇದೆ.
03:12 ಕಾಣೆಯಾದ ಕೆಲವು ರಚನೆಗಳನ್ನು ಸರಿಪಡಿಸಲು ಇಲ್ಲಿ ನಾನು ಬ್ರಶ್ ಟೂಲನ್ನು ಆಯ್ಕೆಮಾಡಿ, ಇಲ್ಲಿ ದೊಡ್ಡ ‘ಬ್ರಶ್’ಅನ್ನು ಆರಿಸಿಕೊಳ್ಳುತ್ತೇನೆ ಮತ್ತು ನೆಲದ ಭಾಗವನ್ನು ಕಪ್ಪುಬಣ್ಣದಿಂದ ಪೇಂಟ್ ಮಾಡಲು ಆರಂಭಿಸುತ್ತೇನೆ.
03:30 ನನಗೆ Sea ‘ಲೇಯರ್’ಅನ್ನು ಕಪ್ಪುಬಣ್ಣದಿಂದ ಪೇಂಟ್ ಮಾಡುವುದು ಬೇಕಾಗಿಲ್ಲ. ಹೀಗಾಗಿ, ನಾನು ಫೋರ್ಗ್ರೌಂಡ್ ಮತ್ತು ಬ್ಯಾಕ್ಗ್ರೌಂಡ್ ಗಳ ಬಣ್ಣವನ್ನು ಅದಲುಬದಲು ಮಾಡುತ್ತೇನೆ.
03:39 ಸಮುದ್ರದ ಭಾಗಕ್ಕೆ ಹೋಗಿ ಬಿಳಿಬಣ್ಣದಿಂದ ಪೇಂಟ್ ಮಾಡಲು ಆರಂಭಿಸುತ್ತೇನೆ. ಇದನ್ನು ನಾನು ಸ್ವಲ್ಪ ನಯವಾಗಿ ಮಾಡಬೇಕು.
03:56 ಇಲ್ಲಿ, ಈ ಜಾಗವು ಸಾಕಷ್ಟು ಚೆನ್ನಾಗಿತ್ತು ಆದರೆ ನೀವು ಅದನ್ನು ಆಮೇಲೆ ಸರಿಪಡಿಸಬಹುದು.
04:04 ನಾವು ನಯವಾದ ‘ಬ್ರಶ್’ಅನ್ನು ಆರಿಸಿ, ಇಲ್ಲಿಯ ಈ ಅಂಚು ಚೊಕ್ಕವಾಗಿರುವಂತೆ ನೋಡಿಕೊಳ್ಳೋಣ.
04:21 Show Layer Mask ಅನ್ನು ನಿಷ್ಕ್ರಿಯಗೊಳಿಸಿದಾಗ, ಇಲ್ಲಿ, ನೆಲ ಹಾಗೂ ಸಮುದ್ರಗಳ ನಡುವಿನ ಅಂಚಿನ ಮೇಲೆ ಹರಡಿದ ದೃಶ್ಯವನ್ನು ನಾವು ನೋಡಬಹುದು.
04:32 ನಾವು ಇಮೇಜ್ನಲ್ಲಿ ಝೂಮ್ ಮಾಡೋಣ. ಲೇಯರ್ ಮಾಸ್ಕ್ ಹಾಗೂ ಲೇಯರ್ ಒಟ್ಟಿಗೇ ಕೆಲಸ ಮಾಡದೇ ಇರುವ ಸ್ಥಳದಲ್ಲಿ ಒಂದು ಹ್ಯಾಲೋ ಇರುವದನ್ನು ನೀವು ನೋಡಬಹುದು. ಅದರ ಮೇಲೆ ನಾವು ಆಮೇಲೆ ಕೆಲಸ ಮಾಡೋಣ.
04:50 shift + ctrl + E ಯೊಂದಿಗೆ ನಾನು ಈಗ ಪೂರ್ತಿ ಇಮೇಜ್’ಗೆ ಮರಳಿ ಹೋಗುತ್ತೇನೆ.
04:58 ನಾನು Curves Tool ಅನ್ನು ಆಯ್ಕೆಮಾಡಿ, ಲೇಯರ್ ಮಾಸ್ಕ್ ಆಯ್ಕೆಯಾಗಿರುವ ಬಗ್ಗೆ ಪರಿಶೀಲಿಸುತ್ತೇನೆ. ಪೂರ್ತಿ ಚಿತ್ರವನ್ನು ನೋಡಲು Sky ‘ಲೇಯರ್’ಅನ್ನು ಸೇರಿಸುತ್ತೆನೆ. ಈಗ ಇಮೇಜ್ನಲ್ಲಿ ಕ್ಲಿಕ್ ಮಾಡಿ, ಕರ್ವ್ಸ್ ಗಳೊಂದಿಗೆ ಆಡುತ್ತೇನೆ.
05:28 ಈಗ ಸಮುದ್ರ ಮತ್ತು ನೆಲದ ನಡುವಿನ ಹ್ಯಾಲೋ ಮಾಯವಾಗುತ್ತದೆ ಎಂದು ನೀವು ನೋಡಬಹುದು. ಆದರೆ ಸಮುದ್ರವು ಮತ್ತೆ ಸ್ವಲ್ಪ ಮಂಕಾಗಿದೆ.
05:40 ಆದರೆ ನಾನು ಇಲ್ಲಿ ಕರ್ವನ್ನು ಮೇಲೆ ಎಳೆಯಬಹುದು ಹಾಗೂ ನನಗೆ ನಿಚ್ಚಳವಾದ ಸಮುದ್ರವು ಸಿಗುತ್ತದೆ.
05:52 ನಾನು ಹೆಚ್ಚಾಗಿ ಮಾಡಬಾರದು ಎಂದು ನನಗೆನಿಸುತ್ತಿದೆ.
06:07 ಸಮುದ್ರದ ಮೇಲೆ ಸೂರ್ಯನು ಬೆಳಗುವುದನ್ನು, ಮೋಡಗಳ ನೆರಳನ್ನು, ಅಲೆಗಳ ವಿವಿಧ ರಚನೆಗಳನ್ನು ಮತ್ತು ಸಮುದ್ರದ ಮೇಲೆ ಇರಬೇಕಾದಂತಹ ಸ್ವಲ್ಪ ನೀಲಿಬಣ್ಣವನ್ನು ನಾನು ನೋಡಬಹುದು.
06:22 ಮುಗಿಲಿನ ಅಂಚಿನಲ್ಲಿರುವ, ಹೊಳಪುಳ್ಳ ವಿಷಯದ ಬಗ್ಗೆ ಇಲ್ಲಿ ಸ್ವಲ್ಪ ಸಮಸ್ಯೆ ಆಗಿದೆ. ಏಕೆಂದರೆ, ಮುಗಿಲು ತುಂಬಾ ಬೆಳಗಿಸಲ್ಪಟ್ಟಿದೆ. ಆ ಸಮಸ್ಯೆಯನ್ನು ನಂತರದ ‘ಸ್ಟೆಪ್’ಗಳಲ್ಲಿ ನಾನು ಬಗೆಹರಿಸಬಹುದು.
06:41 ಸರಿ, ನಾನು ‘ಕರ್ವ್ಸ್ ಟೂಲ್’ನ ಪರಿಣಾಮವನ್ನು ‘ಓಪ್ಯಾಸಿಟೀ ಸ್ಲೈಡರ್’ನೊಂದಿಗೆ ಹೊಂದಿಸಬಹುದು. ಒಳ್ಳೆಯ ಪರಿಣಾಮಕ್ಕಾಗಿ ನಾನು ಅದನ್ನು ಸ್ವಲ್ಪ ಕಡಿಮೆ ಮಾಡಬೇಕು.
06:58 ಜಾನ್ ಅರ್ನಾಲ್ಡ್ ಅವರ ಪ್ರಸಾರದ ಒಂದು ಸಲಹೆಯಂತೆ ನಾವು, ಸಾಧ್ಯವಿರುವ ಪೂರ್ತಿ ಪ್ರಮಾಣಕ್ಕೆ ಹೋಗಬೇಕು, ಆನಂತರ ಸ್ಲೈಡರ್’ನಲ್ಲಿ ಕೆಳಗೆ ಹೋಗಬೇಕು. ಏಕೆಂದರೆ, ಕೆಳಗೆ ಹೋಗುವಾಗ ಪರಿಣಾಮವನ್ನು ನೋಡುವುದು ತುಂಬಾ ಸುಲಭವಾಗಿದೆ.
07:17 ಮತ್ತು ಸರಿಯಾದ ಪ್ರಮಾಣವನ್ನು ನಾವು ಸುಲಭವಾಗಿ ನಿರ್ಧರಿಸಬಹುದು.
07:22 ನಾನು ಈ ಭಾಗದೊಂದಿಗೆ ಬಹಳ ಹೆಚ್ಚಾಗಿ ಮಾಡಿದ್ದೇನೆ ಎಂದು ನನಗೆನಿಸುತ್ತಿದೆ. ಆದ್ದರಿಂದ ಸ್ಲೈಡರನ್ನು ಕೆಳಗೆ ಜಾರಿಸುತ್ತೇನೆ. ಇದು ಸರಿಯಾಗಿದೆ.
07:36 ದಿಗಂತದ ಮೇಲೆ ಈ ಹೊಳಪಿನ ವಸ್ತು ಎಲ್ಲಿಂದ ಬರುತ್ತದೆ?
07:40 ನಾನು Sky ಲೇಯರನ್ನು ಡೀ-ಸೆಲೆಕ್ಟ್ ಮಾಡಿ ಪರಿಶೀಲಿಸುತ್ತೇನೆ. ಆದರೆ ಇದು ಆ ಕಾರಣದಿಂದ ಆಗಿಲ್ಲ.
07:46 ಹೀಗಾಗಿ, ನಾನು Sea ಲೇಯರನ್ನು ಡೀ-ಸೆಲೆಕ್ಟ್ ಮಾಡುತ್ತೇನೆ ಮತ್ತು ಅದು Sea ‘ಲೇಯರ್’ನ ಕಾರಣದಿಂದಾಗಿದೆ.
07:52 ನನಗೆ ಇಲ್ಲಿ, ಈ ಭಾಗವನ್ನು ಗಾಢಗೊಳಿಸಬೇಕಾಗಿದೆ.
07:55 ಅದನ್ನು ಮಾಡಲು Gradient Tool ಅನ್ನು ಬಳಸುತ್ತೇನೆ.
07:59 ನಾನು Layer Mask ಅನ್ನು ಆಯ್ಕೆಮಾಡಿ, ಈಗ ‘ಟೂಲ್ ಬಾಕ್ಸ್’ನಿಂದ Gradient Tool ಅನ್ನು ಆಯ್ಕೆಮಾಡುತ್ತೇನೆ. ನನಗೆ ನೆಲದ ಭಾಗವು ಬಿಳಿ ಹಾಗೂ ಮುಗಿಲಿನ ಭಾಗವು ಕಪ್ಪುಬಣ್ಣದ್ದಾಗಿ ಬೇಕಾಗಿದೆ. ಅಂಚು ನನಗೆ ಇಲ್ಲಿ ಬೇಕಾಗಿದೆ.
08:21 ಗ್ರೇಡಿಯೆಂಟ್, ಪೂರ್ತಿ ಬಿಳಿಯಿಂದ ಆರಂಭವಾಗಿ ಕಪ್ಪಿನೊಂದಿಗೆ ಕೊನೆಗೊಳ್ಳುತ್ತದೆ.
08:29 ನಾನು ಈ ಭಾಗದಲ್ಲಿ ಝೂಮ್ ಮಾಡುತ್ತೇನೆ. Gradient Tool ಅನ್ನು ಆಯ್ಕೆಮಾಡುತ್ತೇನೆ. ಇಲ್ಲಿಂದ ಆರಂಭಿಸುತ್ತೇನೆ.
08:38 ಈ ಗೆರೆಯನ್ನು ಮಾಡುವಾಗ, ಸರಳ ರೇಖೆಯನ್ನು ಪಡೆಯಲು ನಾನು ctrl ಕೀ ಹಾಗೂ ಮೌಸ್’ನ ಎಡ ಬಟನ್ ಒತ್ತಿ, ಎಳೆಯುತ್ತಿದ್ದೇನೆ. ಇಲ್ಲಿ ಬಟನ್’ಅನ್ನು ಬಿಡುತ್ತೇನೆ.
08:53 ನೀವು ನೋಡಿ, ಇದು ಕೆಲಸ ಮಾಡಿದೆ. ದಿಗಂತದ ಮೇಲಿನ ಹೊಳಪು ಹೋಗಿದೆ ಹಾಗೂ Land ನ ಲೇಯರ್ ಮಾಸ್ಕ್ ಕೂಡ ಹೋಗಿದೆ ಎಂದು ನೀವು ನೋಡಬಹುದು.
09:06 ನಾವು ಪೂರ್ತಿ ಇಮೇಜ್’ನೆಡೆಗೆ ನೋಡೋಣ. ನಮ್ಮ ಎಲ್ಲ ಎಡಿಟ್’ಗಳು ಹೋಗಿವೆ ಎಂದು ನೀವು ನೋಡಬಹುದು.
09:18 ಆದ್ದರಿಂದ ದಿಗಂತದ ಜೊತೆಗೆ ವ್ಯವಹರಿಸಲು ಇದು ಉತ್ತಮವಾದ ವಿಧಾನವಾಗಿರಲಿಲ್ಲ. ಹೀಗಾಗಿ ಇಲ್ಲಿ,ಈ ‘ಸ್ಟೆಪ್’ಅನ್ನು ‘ಅನ್-ಡು’ ಮಾಡುತ್ತೇನೆ.
09:27 ಈಗ ಮೊದಲು Rectangle ಅನ್ನು ಆಯ್ಕೆಮಾಡುತ್ತೇನೆ. ಲೇಯರ್ ಮಾಸ್ಕ್ ಆಯ್ಕೆಯಾಗಿರುವ ಬಗ್ಗೆ ಪರಿಶೀಲಿಸುತ್ತೇನೆ. ಮುಗಿಲಿನ ಭಾಗದಲ್ಲಿ ಆಯತವನ್ನು ಡ್ರಾ ಮಾಡುತ್ತೇನೆ.
09:41 ಈಗ, ಆಯತವನ್ನು ಡ್ರಾ ಮಾಡಿದಾಗ, ನಾನು ಅದರಲ್ಲಿ ಎಡಿಟ್ ಕೆಲಸವನ್ನು ಮಾಡಬಹುದು ಮತ್ತು ‘ಲೇಯರ್ ಮಾಸ್ಕ್’ನ ಉಳಿದ ಭಾಗದ ಮೇಲೆ ಪರಿಣಾಮವಾಗುವುದಿಲ್ಲ.
09:54 ಈಗ ನಾನು ಅದೇ ವಿಧಾನವನ್ನು ಮತ್ತೆ ಮಾಡುತ್ತೇನೆ.
10:00 ಇಲ್ಲಿ, ಹೊಳಪಿನ ಭಾಗದಲ್ಲಿ ಝೂಮ್ ಮಾಡಿ, ಲೇಯರ್ ಮಾಸ್ಕನ್ನು ಆಯ್ಕೆಮಾಡಿ.
10:07 ನನಗೆ ಕಪ್ಪುಬಣ್ಣ ಮೇಲೆ ಹಾಗೂ ಬಿಳಿ ಕೆಳಗೆ ಬೇಕಾಗಿದೆ. ಆದ್ದರಿಂದ ನಾನು ಇಲ್ಲಿಂದ ಆರಂಭಿಸಿ, ನೇರವಾಗಿ ಮೇಲೆ ದಿಗಂತದವರೆಗೆ ಹೋಗುತ್ತೇನೆ. ಈಗ ಸಮುದ್ರವು ಮಾತ್ರ ಬಿಳಿಯಿದ್ದು ನೆಲ ಹಾಗೂ ಮುಗಿಲುಗಳು ಕಪ್ಪಾಗಿವೆ ಎಂದು ನೀವು ನೋಡಬಹುದು.
10:33 Shift + ctrl + A, ಎಲ್ಲ ‘ಸೆಲೆಕ್ಶನ್’ಗಳನ್ನು ನಿಷ್ಕ್ರಿಯಗೊಳಿಸುತ್ತದೆ. shift +ctrl + E, ಪೂರ್ತಿ ‘ಇಮೇಜ್’ಗೆ ಮರಳಿ ಹೋಗುತ್ತದೆ ಮತ್ತು ಈಗ ಬಹಳ ಉತ್ತಮವಾಗಿದೆ.
10:52 Land ಲೇಯರ್’ಗೆ ಮಾಡಿದ ರೀತಿಯಲ್ಲಿಯೇ ನನಗೆ Sky ಲೇಯರನ್ನು ಎಡಿಟ್ ಮಾಡಬೇಕಾಗಿದೆ.
11:01 Sky ಲೇಯರನ್ನು ಎರಡು ಸಲ ಮಾಡಿ ಹಾಗೂ Overlay ಮೋಡ್ ಗೆ ಬದಲಾಯಿಸಿ.
11:08 ಇದು ತುಂಬಾ ಹೆಚ್ಚಾಯಿತು. ಆದ್ದರಿಂದ ನಾನು ಓಪ್ಯಾಸಿಟೀ ಸ್ಲೈಡರನ್ನು ಸ್ವಲ್ಪ ಕೆಳಗೆ ಎಳೆಯುತ್ತೇನೆ. ನಮಗೆ ಮುಗಿಲಿನಲ್ಲಿ ಸ್ವಲ್ಪ ಹೆಚ್ಚು ಕಾಂಟ್ರಾಸ್ಟ್ ಸಿಕ್ಕಿದೆ.
11:22 ಈಗ ಇಮೇಜ್, ಒಂದು ವಿಷಯದ ಹೊರತಾಗಿ, ಹೆಚ್ಚೂಕಡಿಮೆ ತಯಾರಾಗಿದೆ.
11:29 ಮನೆಯ ಈ ಗೋಡೆಯು, ಇಲ್ಲಿ ತುಂಬಾ ಹೆಚ್ಚು ಗಾಢವಾಗಿದೆ.
11:33 ಈ ಸಂದರ್ಭವು ‘ಡಾಡ್ಜಿಂಗ್ ಆಂಡ್ ಬರ್ನಿಂಗ್’ಗಾಗಿ ಆಗಿದೆ.
11:38 ‘ಡಾಡ್ಜಿಂಗ್ ಆಂಡ್ ಬರ್ನಿಂಗ್’ ಎನ್ನುವುದು ‘ಡಾರ್ಕ್ ರೂಮ್’ ನ ಕಾಲದ ಒಂದು ಪದವಾಗಿದೆ. ‘ಎನ್ಲಾರ್ಜರ್’ನ ಮತ್ತು ‘ಫೋಟೋಗ್ರಾಫಿಕ್ ಪೇಪರ್’ನ ನಡುವೆ, ನಿಮ್ಮ ಕೈ ಅಥವಾ ಕಾಗದ ಅಥವಾ ಮತ್ತೇನನ್ನೋ ‘ಎನ್ಲಾರ್ಜರ್’ನ ಬೆಳಕಿನ ಕಿರಣದಲ್ಲಿ ಇಡುವುದರಿಂದ ನೀವು ಒಂದು ಚಿತ್ರವನ್ನು ಡಾಡ್ಜ್ ಮಾಡಬಹುದು. ಬರ್ನಿಂಗ್ ಎನ್ನುವುದು ಇದರ ವಿರುದ್ಧವಾಗಿದೆ.
12:02 ಅಲ್ಲಿ, ನೀವು ಒಂದು ಕಾಗದವನ್ನು ತೆಗೆದುಕೊಂಡು, ಅದರಲ್ಲಿ ನಿರ್ದಿಷ್ಟ ರೂಪದಲ್ಲಿ ಒಂದು ರಂಧ್ರವನ್ನು ಮಾಡಿ. ಹಾಗಾಗಿ ಸ್ವಲ್ಪ ಬೆಳಕನ್ನು ಬೇರೆ ಕೆಲವು ಭಾಗಗಳಿಗೆ ಹೊರಸೂಸುತ್ತದೆ.
12:15 ಯಾವಾಗ ಯಾವ ‘ಸ್ಟೆಪ್’ಅನ್ನು ಮಾಡಬೇಕು ಎಂದು ಕಂಡುಹಿಡಿಯುವುದು ಬಹಳ ಬೇಸರದ ಕಾರ್ಯವಿಧಾನವಾಗಿದೆ. ಅದಕ್ಕಾಗಿ ನಿಮಗೆ ಬಹಳಷ್ಟು ಕಾಗದದ ಅಗತ್ಯವಿದೆ. ನಿಮಗೆ ಇಂತಹ ಪ್ರಕ್ರಿಯೆಯನ್ನು ನೋಡಬೇಕಾದಾಗ ನಾನು ನಿಮಗೆ ‘ವೆಲ್ ಫೋಟೋಗ್ರಾಫರ್’ ಎನ್ನುವ ಚಲನಚಿತ್ರವನ್ನು ನೋಡಲು ಶಿಫಾರಸು ಮಾಡುತ್ತೇನೆ.
12:36 ಅದು ಜೇಮ್ಸ್ ಅವರ ಬಗ್ಗೆ ಚಲನಚಿತ್ರವಾಗಿದೆ ಮತ್ತು ಅದು ಒಂದು ಸೊಗಸಾದ ಚಲನಚಿತ್ರವಾಗಿದೆ. ಇದು ಇಲ್ಲದೆಯೇ, ‘ಡಾರ್ಕ್ ಚೇಂಬರ್’ ಕಾಣಿಸಿಕೊಂಡಿದೆ.
12:45 ನಾನು ನಿಮಗೆ ನಿಜವಾಗಿಯೂ ಆ ಚಲನಚಿತ್ರವನ್ನು ಶಿಫಾರಸು ಮಾಡುತ್ತೇನೆ.
12:49 ಈಗ ನಾವು ‘ಡಾಡ್ಜಿಂಗ್ ಆಂಡ್ ಬರ್ನಿಂಗ್’ ಪ್ರಕ್ರಿಯೆಯನ್ನು ನೋಡೋಣ.
12:52 ಟೂಲ್ ಬಾಕ್ಸ್ ನಲ್ಲಿ, ಇಲ್ಲಿ Dodge / Burn Tool ಇರುತ್ತದೆ. ಆದರೆ ನಾನು ಮತ್ತೆ ‘ಲೇಯರ್’ನ ಜೊತೆಗೆ ಕೆಲಸ ಮಾಡಬಯಸುತ್ತೇನೆ
13:02 I ನಾನು ಇನ್ನೊಂದು ಲೇಯರನ್ನು ಸೇರಿಸುತ್ತೇನೆ. ನನಗೆ ಇದನ್ನು ಬಿಳಿಬಣ್ಣದಿಂದ ತುಂಬಬೇಕಾಗಿದೆ.
13:09 ನಾನು ಕಲರ್ ‘ಚಾನೆಲ್’ಗೆ ಹೋಗಿ, ಬೂದುಬಣ್ಣಕ್ಕಾಗಿ 50% (ಐವತ್ತು ಪ್ರತಿಶತ) ಮತ್ತು ಬೇರೆ ‘ಚಾನೆಲ್’ನಲ್ಲಿ 128% (ನೂರಿಪ್ಪತ್ತೆಂಟು ಪ್ರತಿಶತ) ಎಂದು ಇಡುತ್ತೇನೆ.
13:21 ಈ ಬೂದುಬಣ್ಣವು 50% (ಐವತ್ತು ಪ್ರತಿಶತ) ಬೂದುಬಣ್ಣವಾಗಿದೆ. Layer Mode ಅನ್ನು Overlay ಗೆ ಬದಲಾಯಿಸುತ್ತೇನೆ. ಏನೂ ಆಗಿಲ್ಲವೆಂದು ನೀವು ನೋಡಬಹುದು.
13:35 ಈಗ ನಾನು ಕಲರ್ಸ್ ಅನ್ನು Black and White ಗೆ ಬದಲಾಯಿಸುತ್ತೇನೆ ಹಾಗೂ ಒಂದು ಬ್ರಶ್’ಅನ್ನು ಆಯ್ಕೆಮಾಡುತ್ತೇನೆ.
13:45 ಈ ‘ಬ್ರಶ್’ನ ಸೈಜ್ ಸರಿಇದ್ದಂತಿದೆ. ಆದರೆ ನಾನು ಓಪ್ಯಾಸಿಟೀ ಟೂಲನ್ನು 30% (ಮೂವತ್ತು ಪ್ರತಿಶತ) ರಷ್ಟು ಕಡಿಮೆಮಾಡುತ್ತೇನೆ.
13:55 ಹೊಸ ಲೇಯರ್ ಆಯ್ಕೆಯಾಗಿದೆ ಎಂದು ನಾನು ಖಚಿತಪಡಿಸಿಕೊಳ್ಳುತ್ತೇನೆ. ‘ಫೋರ್ಗ್ರೌಂಡ್ ಕಲರ್’ಅನ್ನು ಬಿಳಿ ಹಾಗೂ ‘ಬ್ಯಾಕ್ಗ್ರೌಂಡ್ ಕಲರ್’ಅನ್ನು ಕಪ್ಪುಬಣ್ಣಕ್ಕೆ ಬದಲಾಯಿಸಿ, ಇಲ್ಲಿ ಗೋಡೆಯನ್ನು ಪೇಂಟ್ ಮಾಡಲು ಆರಂಭಿಸುತ್ತೇನೆ.
14:19 ಕಂಪ್ರೆಷನ್, ತನ್ನ ಕೆಲಸವನ್ನು ಮಾಡಿದೆ ಹಾಗೂ ಗೋಡೆಯ ಬದಿಯು ಪ್ರಕಾಶಮಾನವಾಗಿದೆ ಎನ್ನುವುದನ್ನು ಬಹುಶಃ ನೀವು ನೋಡಬಹುದು.
14:36 ಈ ಪ್ರಕ್ರಿಯೆಯು ‘ಡಾಡ್ಜಿಂಗ್’ ಎಂದು ಕರೆಯಲ್ಪಡುತ್ತದೆ ಏಕೆಂದರೆ ನಾನು ಬೆಳಕನ್ನು ‘ಫೋಟೋಗ್ರಾಫಿಕ್ ಪೇಪರ್’ನ ಮೇಲೆ ಇಡುತ್ತಿದ್ದೇನೆ. ಹೀಗಾಗಿ ಗೋಡೆಯು ಹೆಚ್ಚು ಹೊಳೆಯುತ್ತದೆ.
14:49 ನಾವು ಇಲ್ಲಿಯ ಲೇಯರನ್ನು ನೋಡಿದಾಗ, ಇಲ್ಲಿ ನನ್ನ ಹತ್ತಿರ ಹೆಚ್ಚು ಬಿಳಿಯಾದ ಜಾಗ ಇದೆ ಮತ್ತು ಅಲ್ಲಿ ಸ್ವಲ್ಪ ಲಘುವಾಗಿ ಇರಬಹುದಾದ ‘ಇಮೇಜ್’ನ ಬೇರೆ ಕೆಲವು ಭಾಗಗಳು ಇವೆ ಎಂದು ನೀವು ನೋಡಬಹುದು.
15:03 ಉದಾಹರಣೆಗೆ, ದಡದ ಹತ್ತಿರವಿರುವ ಬಂಡೆಗಲ್ಲುಗಳು.
15:09 ಇಮೇಜ್ನಲ್ಲಿ ಝೂಮ್ ಮಾಡುವುದು ಅತ್ಯುತ್ತಮ ವಿಧಾನವಾಗಿದೆ. ಈಗ ನಾನು ಗೋಡೆಯನ್ನು ಹೆಚ್ಚು ಹೊಳಪಾಗಿಸಿದ್ದೇನೆ ಮತ್ತು ‘JPEG (ಜೇಪೆಗ್) ಕಂಪ್ರೆಷನ್’ನಿಂದಾಗಿ ವಿನ್ಯಾಸವು ಹೆಚ್ಚೂಕಮ್ಮಿ ಹೋಗಿಬಿಟ್ಟಿದೆ ಎಂದು ನಾನು ನೋಡಬಹುದು.
15:25 ಆದರೆ ಬಣ್ಣವನ್ನು ಬದಲಾಯಿಸುವದರಿಂದ ನಾನು ಅದನ್ನು ಸರಿಪಡಿಸಬಹುದು. ಇದನ್ನು ಮಾಡಲು, ‘X’, ಶಾರ್ಟ್ಕಟ್ ಕೀ ಆಗಿದೆ. ಇಲ್ಲಿ ಇದನ್ನು ಸ್ವಲ್ಪ ಗಾಢಗೊಳಿಸುತ್ತೇನೆ.
15:44 ನಾನು ಓಪ್ಯಾಸಿಟೀ ಸ್ಲೈಡರನ್ನು ಸ್ವಲ್ಪ ಕೆಳಗೆ ಎಳೆಯಬೇಕು. ಇದು ಸರಿಯಾಗಿದೆ.
15:54 ನನಗೆನಿಸುವಂತೆ ದಿಗಂತವು ತುಂಬಾ ಹೊಳಪಾಗಿದೆ. ಹೀಗಾಗಿ, ಆ ಭಾಗವನ್ನು ಪೇಂಟ್ ಮಾಡಲು ‘ಬ್ರಶ್’ನ ‘ಸರ್ಕಲ್ ಸೈಜ್’ಅನ್ನು ಹೊಂದಿಸುತ್ತೇನೆ ಹಾಗೂ ‘ಇಮೇಜ್’ನ ಆ ಭಾಗವನ್ನು ಗಾಢಗೊಳಿಸಲು ಕಪ್ಪು ಬಣ್ಣವನ್ನು ಬಳಸುತ್ತೇನೆ.
16:34 ‘x’ ಕೀಯಿಂದ ಬಣ್ಣವನ್ನು ಬದಲಾಯಿಸಿ, ನಾನು ಇಮೇಜ್’ನ ಮೇಲೆ ಕೆಲಸ ಮಾಡಬಹುದು ಹಾಗೂ ಅದನ್ನು ಸ್ವಲ್ಪ ಗಾಢಗೊಳಿಸಬಹುದು.
16:53 ಅದು ಬಹಳ ಹೆಚ್ಚಾಗಿತ್ತು. ನಾನು ಅಲ್ಲಿ ಏನು ಮಾಡುತ್ತಿದ್ದೇನೆಂದು ನನಗೆ ಅಷ್ಟು ಖಚಿತವಾಗಿ ತಿಳಿದಿಲ್ಲ.
17:00 ಆದ್ದರಿಂದ ಈ ‘ಸ್ಟೆಪ್’ಅನ್ನು ‘ಅನ್-ಡು’ ಮಾಡುತ್ತೇನೆ.
17:03 ನಾನು ಒಂದು ಲೇಯರನ್ನು ಮಾಡಿ, ಅದನ್ನು ಮಧ್ಯಮ ಬೂದುಬಣ್ಣವನ್ನು ಮಾಡಿ ಮತ್ತು ಪ್ರತಿಯೊಂದು ‘ಚಾನೆಲ್’ಗಾಗಿ 128% (ನೂರಿಪ್ಪತ್ತೆಂಟು ಪ್ರತಿಶತ) ಹಾಗೂ Layer Mode ಅನ್ನು Overlay ಗೆ ಬದಲಾಯಿಸಿರುವ ತಂತ್ರವನ್ನು ನೀವು ನೋಡಬಹುದು.
17:17 ಮಧ್ಯಮ ಬೂದುಬಣ್ಣ ಹಾಗೂ Overlay ಮೋಡ್’ಗಳು ಏನನ್ನೂ ಮಾಡುವುದಿಲ್ಲ. ನೀವು ಇಮೇಜ್ನಲ್ಲಿ, ಬಿಳಿ ಅಥವಾ ಕಪ್ಪುಬಣ್ಣದಿಂದ ಪೇಂಟ್ ಮಾಡಬಹುದು.
17:26 ಬಿಳಿಬಣ್ಣದಿಂದ ಪೇಂಟ್ ಮಾಡುವಾಗ ನೀವು ಇಮೇಜನ್ನು ಸ್ವಲ್ಪ ಹೊಳಪಾಗಿಸುತ್ತೀರಿ, ಕಪ್ಪುಬಣ್ಣದಿಂದ ಅದನ್ನು ನೀವು ಗಾಢಗೊಳಿಸುತ್ತೀರಿ.
17:36 ನನಗೆನಿಸುವಂತೆ ಈ ‘ಇಮೇಜ್’ನ ಎಡಿಟಿಂಗ್, ಈಗ ನಿಜವಾಗಿಯೂ ಪೂರ್ತಿಯಾಗಿದೆ.
17:42 ನಾನು ಇವತ್ತು ಮಾಡಿದ ‘ಎಡಿಟ್’ನಲ್ಲಿ, ನಿಮ್ಮಲ್ಲಿ ಯಾರಾದರೂ ತಪ್ಪು ಹುಡುಕಿದ ಹೊರತು ನಾನು ಇದರ ಮೇಲೆ ಇನ್ನೊಮ್ಮೆ ಕೆಲಸ ಮಾಡುವುದಿಲ್ಲ.
17:53 ನಾನು ಅದನ್ನು ಮಾಡಿಲ್ಲ ಎಂದು ಆಶಿಸುತ್ತೇನೆ ಮತ್ತು ಲೇಯರನ್ನು Dodge and Burn (ಡಾಡ್ಜ್ ಆಂಡ್ ಬರ್ನ್) ಎಂದು ಹೆಸರಿಸುತ್ತೇನೆ.
18:10 ಇದು ಈದಿನಕ್ಕೆ ಆಗಿತ್ತು.
18:13 ನಿಮ್ಮ ಅಭಿಪ್ರಾಯವನ್ನು ತಿಳಿಸಲು ದಯವಿಟ್ಟು ಈ ಲಿಂಕ್’ಗೆ ಬರೆಯಿರಿ. info@meetthegimp.org ಮತ್ತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ‘ಲಿಂಕ್’ಗೆ ಹೋಗಿ. http://meetthegimp.org
18:33 ನಿಮಗೆ ಏನು ಇಷ್ಟವಾಯಿತು, ನಾನು ಏನನ್ನು ಉತ್ತಮಗೊಳಿಸಬಹುದಿತ್ತು, ನಿಮಗೆ ಮುಂದೆ ಏನು ನೋಡಬೇಕಾಗಿದೆ ಎನ್ನುವುದನ್ನು ಹೇಳಿ. ನಾನು ನಿಮ್ಮಿಂದ ಕೇಳಲು ಬಯಸುತ್ತೇನೆ.
18:46 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಮತ್ತು ಪ್ರವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ಧನ್ಯವಾದ.

Contributors and Content Editors

NaveenBhat, Sandhya.np14